ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ ||pa||
ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ ||a.pa||
ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ ||1||
ಜಾಂಬೂನಾದಾಂಬರ ಸಾಂಬಜನಕ ನೀಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿಡಂಬನ ತೋರಿದ ಮಹಿಮ ಕಾಂಬುವೆ ನಿನ್ನ ಚರಣಾಂಬುಜ ಮನದೊಳು ಜಾಂಬುವಂತನ ಪರಿಪಾಲಾ ವಿಶ್ವಂಭರಂಬರಗ್ಗಣಿಯ ಪಡೆದ ವೃತ್ತುಂಬರೇಶಾಂಬುಧಿ ಶಾಯಿ ||2||
ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ ಕಾಳೆ ಹೆಗ್ಗಾಳೆ ತಮ್ಮಟಿ – ನಿಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ ಕಂಬುಡಿಕ್ಕಿ ವಾದ್ಯ ಸೂಳೈಸುತಲಿರೆ ಭಾಗವತರು ಸಂಮೇಳದಿ ಕುಣಿದೊಲಿದಾಡೆ ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜಢಾಲುಗಳು ಒಪ್ಪಿರಲು||3||
ಹಂಸವಾಹನ ಕ್ರತುಧ್ವಂಸಿ ಸುಮನಸೋತ್ತಂಸ ಕೃಶಾನು ಪಾಪಿಗಳ ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ ಕೌಂಶಿಕಾಪತಿಯು ಧನವ ಅಂಶಮಾಲಿ ಸೋಮಕಂಶಿಕಮುನಿ ಪರಮಹಂಸರು ಅಲ್ಲಲ್ಲಿ ನಿಂದು ಸಂಶಯ ಮಾಡದೆ ಸಮ್ಮೊಗರಾಗಿಹರು ಕಂಸಾರಿ ತ್ರಿಗುಣಾತೀಶ ||4||
ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು ||5||
ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು ಬಂದು ಕೆಣಕೆ ನಗುತ ಮಹಾಲೀಲೆಯಿಂದಲಿ ನೀನಾ ಖಳನ ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ ಇಂದು ನಿನಗೆ ಈ ರಥವ ನಡೆಸುವುದು ಅಂದವಾಗಿಹುದೇನೊ ದೇವ||6||
ಬಂಗಾರ ರಥದೊಳು ಶೃಂಗಾರವಾದ ಶ್ರೀಮಂಗಳಾಂಗ ಕಳಿಂಗ ಭಂಗ ನರಸಿಂಗÀ ಅಂಗಜ ಜನಕ ಸಾರಂಗ ರಥಾಂಗ ಪಾಣಿ ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲವಂಗ ನಾಯಕ ಪರಿಪಾಲ ಸಂಗೀತ ಲೋಲ ಗೋಪಾಂಗನೆಯರ ಅಂತರಂಗ ಸಂತಾಪ ವಿದೂರ ||7||
ತಡಮಾಡಲಾಗದೊ ಪೊಡವೀಶ ನೀನಿಂದು ತಡೆಯದಲೆ ಪೊರಟರೆ ತಡೆವರಿನ್ನಾರೈಯ ವಡೆಯ ವೇದವೇದ್ಯ ಕಡೆಗಣ್ಣಿನಿಂದ ನೋಡಿದಲೆ ನಡೆವುದು ನುಡಿವುದು ಅಡಿಗಡಿಗೆ ನೀನುಬಿಡದೆ ಒಳಗೆ ಹೊರಗಿದ್ದು ಸಡಗರ ದೈವವೆ ನುಡಿಯ ಲಾಲಿಸುವುದು ವಡನೊಡನೆ ಪಾಲಿಸುತ್ತ||8||
ಹತ್ತವತಾರದ ಹರಿಯೆ ಘನಸಿರಿಯೆ ಮತ್ತೊಬ್ಬರನು ಹೀಗೆ ಕರೆಯೆ ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎನ್ಹತ್ತಿಲಿ ಆಡುವ ಮರಿಯೆ ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ ಎತ್ತನೋಡಲು ನಿನಗೆ ಸರಿಯೆ ಅತ್ತಿತ್ತ ಪೋಗದೆ ಇತ್ತ ಬಾರೈಯ ಎನ್ಹತ್ತಿಲಿ ವೆಂಕಟದೊರೆಯ ||9||
Lyrics in English
Baba Bakutara hrudayamandira | baba jagadoddhara | baba venkatachalavihara | babanekavatara | pa |
Daksha kamalaksha rakshasakulasiksha Lakshmanagraja lakshmivaksha Pakshivahana purnalakshana sarvesa Mokshadayaka pandavapaksha | Akshayavanta sukshmambaravasa- Dhyaksha pratyakshadidaiva Akshatanarera tikshanadali tanda Aksharapurusha govinda | 1 |
Jambunadambara sambajanaka nilambudavarna suvarna Sambavinuta gunambudhe nanavidambana torida mahima Kambeno ninna charanambuja manadolu Jambavantara paripalavi- Svambara ambaramaniya padedaru – Tumbara sambarasayi | 2 |
Bangara rathadolu srungaravada sri- Mangalanga kalinga- Brunga narasinganamgajanaka- Rathanga sangapani | Sanga nissanga vihanga matanga | Ranganayaka paripala Sangitalola gopanganeyara Antaranga santapavidura | 3 |
Tala jagate maddale dumdubi ri | Kale heggale tammate ni- Ssale panava tamburi pataka kam- Sale tammati kambu dakkavadya | Solaisuttalire bagavatara sa- Mmelavu kunidolidade | Salu pancina gumpu Chatra chamara Dvajadalugalavaroppiharo| 4 |
Charunamangalu dharisida dasaru | Viramarutiya matavanu | Saruta santata bommadigalanna | Taratamyadinda tilidu Bari bari ninna haraisi Ananda- Varidhiyolu magnaragi | Uradevategala tararu manasige Sara hrudaya nindiharo | 5 |
Hinde balindranu Bakutili ire Mandamatiravananu | Bandu kenakalu naguta mahalile- Yinda nine A kalana Andu tadamadade baluyojanavire | Hindakke beralalli ogade | Indu ninage I ratha tadavuvadu | Andavagihadeno hariye | 6 |
Tadamadalagadu podavisa ninagi- Tade edure poratare Tadevarinnarayya odeya vedantasidda Kadegannimda nodadale Nadivadu nudivadu adigadige nine Bidade horagolagiddu Sadagarada daivave nudipalisuvadu Adigadige lalisuta | 7 |
Hamsavahana kratudhvamsi sumanaso- Ttamsa krusanu papigala Himse badisuva pumsa rakkasagasi Hamsavahana vayu dhanapa | Amsumali soma Hamsamuni allallenimdu | Samsevya madutta sammovagiharu | Kamsari trigunatita | 8 |
Hattavatarada hariye ganasiriye | Mattobbaranu hige kareye | Brutyara sangada tiruguva mariye enna Hattili aduva doreye | Cittadollaba namma vijayavithalareya | Etta nodalu ninage sariye | Attitta pogade sagibaruvado enettili venkata doreye | 9 |
VIDEO