ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ ॥ಪ॥
ಒಬ್ಬಳ ಬಸುರಿಂದಲಿ ಬಂದೆ ಮ ತ್ತೊಬ್ಬಳ ಕೈಯಲಿ ನೀ ಬೆಳೆದೆ ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ ತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ ॥೧॥
ಲೋಕದೊಳಗೆ ನೀ ಶಿಶುವಾಗಿ ಮೂ ರ್ಲೋಕವನೆಲ್ಲ ಬಾಯಲಿ ತೋರಿದೆ ಆಕಳ ಕಾಯುವ ಚಿಣ್ಣನೆಂದೆನಿಸಿದೆ ಈ ಕುಟಿಲವನೆಲ್ಲಿ ಕಲಿತೆಯೊ ರಂಗ ॥೨॥
ಮಗುವಾಗಿ ಪೂತನಿಯ ಮೊಲೆಯನುಂಡೆ ಅವಳು ಜಗದಗಲಕೆ ಬೀಳಲು ಕೆಡಹಿ ನಗುತ ನಗುತ ಗೋಪಿ ಮೊಲೆಯುಂಡೆ ಇಂಥ ತಗಿಬಿಗಿಯಾಟಗಳೆಲ್ಲಿ ಕಲಿತೆಯೊ ರಂಗ ॥೩॥
ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ ಮೃಡಸುರಪಾದ್ಯರು ಪೊಗಳುತಿರೆ ಹೆಡೆಯ ಮೇಲೆ ಕುಣಿದಾಡುತ ಆಡುತ ಕಡೆ ಸಾರೆಂಬುದನೆಲ್ಲಿ ಕಲಿತೆಯೊ ರಂಗ ॥೪॥
ಒಂದು ಪಾದವ ಭೂಮಿಯಲೂರಿ ಮ- ತ್ತೊಂದು ಪಾದವ ಗಗನವನಳೆದು ಒಂದು ಪಾದವ ಬಲಿ ಶಿರದಲಿಟ್ಟೆ ಇಂತ ಚೆಂದದ ವಿದ್ಯೆಯನೆಲ್ಲಿ ಕಲಿತೆಯೊ ರಂಗ ॥೫॥
ನಂಬಿದ ಪ್ರಹ್ಲಾದನು ಸ್ತುತಿಸೆ ನೀ ಕಂಭವನೊಡೆದು ಬಂದಾಕ್ಷಣದಿ ದೊಂಬಿಲಿ ದೈತ್ಯನ ಒಡಲ ಸೀಳಿದೆ ಇಂಥ ಡಂಬರಾಟವನೆಲ್ಲಿ ಕಲಿತೆಯೊ ರಂಗ ॥೬॥
ಅಂಬರೀಷ ದ್ವಾದಶಿ ಸಾಧಿಸುತಿರೆ ಅಗ ಬಂದು ದುರ್ವಾಸರು ಶಾಪ ಕೊಡಲು ಮುಂದಕೆ ಸಾಧನವಹುದೆಂದು ಚಕ್ರವ ಹಿಂದಟ್ಟಿಸುವುದನೆಲ್ಲಿ ಕಲಿತೆಯೊ ರಂಗ ॥೭॥
ವರಬಲದಿಂದಲಿ ಭಸ್ಮಾಸುರನು ಹರಣ ಶಿರಡಿ ಕರವಿಡೆ ಬರಲು ತರುಣಿಯ ರೂಪವ ತಾಳಿ ಆ ದೈತ್ಯನ ಹರಣವನಳಿದುದನೆಲ್ಲಿ ಕಲಿತೆಯೊ ರಂಗ ॥೮॥
ವೇದಗಳರಸಿ ಕಾಣದ ಪರಬ್ರಹ್ಮ ನೀ ಮೋದದಿಂದ ವಿದುರನ ಮನೆಯೈದಿ ಆದರದಿ ಪಾಲ ಕುಡಿದುಳಿದುದ ನೀ ಮೇದಿನಿಗಿಳಿಸುವುದೆಲ್ಲಿ ಕಲಿತೆಯೊ ರಂಗ ॥೯
ದುರ್ಯೋಧನ ತನ್ನೊಡ್ಡೋಲಗದೊಳು ಹರಿಯನು ಕರೆಸೆಂದರುಹಲು ಬಂದು ಧರಣಿಯುಂಗುಷ್ಟದೊಲೊತ್ತುತ ಅವನನು ಉರುಳಿಸಿದಾಟವನೆಲ್ಲಿ ಕಲಿತೆಯೊ ರಂಗ ॥೧೦॥
ಆ ಸಭೆಯಲ್ಲಿ ಖಳ ದುರ್ಯೋಧನನಾಗ ಮೋಸದಿ ಕೃಷ್ಣನ ಕಟ್ಟೆನಲು ಸಾಸಿರರೂಪಿನ ಕೃಷ್ಣನೆಂದೆನಿಸಿದ ವೇಷವನೆಲ್ಲಿ ಕಲಿತೆಯೊ ರಂಗ ॥೧೧॥
ಸರ್ಪಬಾಣ ಮೊರೆಯುತ ಬರಲು ಕಂ- ದರ್ಪ ಪಿತನೆ ಕರುಣದಿ ನೀನು ಒಪ್ಪುವ ಪಾರ್ಥನ ರಥವ ನೆಲಕೆ ಒತ್ತಿ ತಪ್ಪಿಸಿದಾಟವನೆಲ್ಲಿ ಕಲಿತೆಯೊ ರಂಗ ॥೧೨॥
ದ್ರೋಣನ ಸಂಗ್ರಾಮದಿ ಹರಿಚಕ್ರವ ಮಾಣದೆ ಸೂರ್ಯಗೆ ಮರೆಮಾಡಿ ಕಾಣಿಸಿ ಸೈಂಧವನನು ಕೊಲಿಸಲಾದೆ ಇಂಥ ಜಾಣತನವ ನೀನೆಲ್ಲಿ ಕಲಿತೆಯೊ ರಂಗ ॥೧೩॥
ಆ ಶಿರವಾತನ ತಂದೆಯು ಕರದಲಿ ಸೂಸುತ ರಕುತವು ಬೀಳಲು ಅದನು ಬೀಸಿ ಬಿಸಾಡಲು ಅವನ ಶಿರವನಾಗ ಸಾಸಿರ ಮಾಡಿದುದೆಲ್ಲಿ ಕಲಿತೆಯೊ ರಂಗ ॥೧೪॥
ಆದಿ ಮೂಲನೆ ಎಂದು ಕರಿರಾಜ ಕರೆಯಲು ಯಾದವರಾಯ ನೀ ನಗುತಲಿ ಬಂದು ಆದರದಿಂದ ಗಜೇಂದ್ರನ ಸಲಹಿದೆ ಆ ದಿವ್ಯಾಟಗಳೆಲ್ಲಿ ಕಲಿತೆಯೊ ರಂಗ ॥೧೫॥
ಎಂದೆಂದಿಗು ನಿಮ್ಮ ಗುಣಗಳ ಪೊಗಳಲು ಇಂದ್ರಾದಿಗಳಿಗೆ ಅಳವಲ್ಲ ಮಂದರಧರ ಶ್ರೀ ಪುರಂದರವಿಠಲನೆ ಒಂದೊಂದಾಟವನೆಲ್ಲಿ ಕಲಿತೆಯೋ ರಂಗ ॥೧೬॥
Lyrics in English
Jaganmohanane krishna jagavam palipane ||pa||
Obbala basurindali bande ma ttobbala kaiyali ni belede kobbida daityara odala silide intha tabbibbatavanelli kaliteyo ranga ||1||
Lokadolage ni shisuvagi mu rlokavanella bayali toride akala kayuva chinnanendeniside I kutilavanelli kaliteyo ranga ||2||
Maguvagi putaniya moleyanunde avalu jagadagalake bilalu kedahi naguta naguta gopi moleyunde intha tagibigiyatagalelli kaliteyo ranga ||3||
Maduva dhumuki kalingana shiradali mrudasurapadyaru pogalutire hedeya mele kunidaduta aduta kade sarembudanelli kaliteyo ranga ||4||
Ondu padava bumiyaluri ma- ttondu padava gaganavanaledu ondu padava bali shiradalitte inta chendada vidyeyanelli kaliteyo ranga ||5||
Nambida prahladanu stutise ni kambavanodedu bandakshanadi dombili daityana odala silide intha dambaratavanelli kaliteyo ranga ||6||
Ambarisha dvadasi sadhisutire aga bandu durvasaru shapa kodalu mundake sadhanavahudendu chakrava hindattisuvudanelli kaliteyo ranga ||7||
Varabaladindali basmasuranu harana shiradi karavide baralu taruniya rupava tali aa daityana haranavanalidudanelli kaliteyo ranga ||8||
Vedagalarasi kanada parabrahma ni modadinda vidurana maneyaidi adaradi pala kudiduliduda ni medinigilisuvudelli kaliteyo ranga ||9||
Duryodhana tannoddolagadolu hariyanu karesendaruhalu bandu dharaniyungushtadolottuta avananu urulisidatavanelli kaliteyo ranga ||10||
A sabeyalli kala duryodhananaga mosadi krishnana kattenalu Sasirarupina krishnanendenisida veshavanelli kaliteyo ranga ||11||
Sarpabana moreyuta baralu kan- darpa pitane karunadi ninu oppuva parthana rathava nelake otti tappisidatavanelli kaliteyo ranga ||12||
Dronana sangramadi harichakrava manade suryage maremadi kaanisi saindhavananu kolisalade intha Janatanava ninelli kaliteyo ranga ||13||
A shiravatana tandeyu karadali susuta rakutavu bilalu adanu bisi bisadalu avana siravanaga sasira madidudelli kaliteyo ranga ||14||
Adi mulane endu kariraja kareyalu yadavaraya ni nagutali bandu adaradinda gajendrana salahide A divyatagalelli kaliteyo ranga ||15||
Endendigu nimma gunagala pogalalu indradigalige alavalla mandaradhara sri purandara vithalane ondondatavanelli kaliteyo ranga ||16||
VIDEO