ಅಮ್ಮಾ ಲಕುಮಿದೇವಿ / Amma lakumidevi nimmarasana

ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ
ಸುಮ್ಮನೆ ಬಿಡುವದು ಸಮ್ಮತವೇ ನಿನಗೆ ||ಪ||

ಹೆತ್ತ ಬಾಲರು ಮಂದಮತಿಗಳಾದರೆ ತಾಯಿ
ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ || 1 ||

ನಿಮ್ಮ ಮಾತಿಗೆ ಹರಿ ಸಮ್ಮತನಾಗುವ
ಕುಮತಿಗಳೆಣಿಸದೆ ರಾಮ ಮೂರುತಿ ತೋರೆ || 2 ||

ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ
ನಂದ ಕಂದನ ಪಾದ ಪೊಂದಿರುವಂತೆ ಮಾಡೆ || 3 ||

ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ
ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ || 4 ||

ಎನ್ನಲಿರುವ ಹೀನರೋಡಿಸಿ ಬೇಗ
ಪನ್ನಗಾಚಲವಾಸ ಶ್ರೀ ನರಹರಿ ತೋರೆ || 5 ||

Lyrics in English

Amma lakumidevi nimmarasana tore summane
Biduvadu sammatave ninage ||pa||

Hetta baalaru mandamatigaladare tayi
Sattu hogali endu ettade biduvole ||1||

Nimma maatige hari sammatanaguva
Kumatigalenisade rama muruti tore ||2||

Sindhutanaye enna bandha bidisi bega
Nanda kandana pada pondiruvante made ||3||

Tatvesarellaru nityadhinaru nimage
Brutyage nija hari Bhakti koduvante pele ||4||

Ennaliruva hinarodisi bega
Pannagaachalavasa sri narahari tore ||5||


ಬೂಚಿ ಬಂದಿದೆ ರಂಗ /Buchi bandide ranga

ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ||

ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||

ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||

ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||

ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||

ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||

ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ ||

Lyrics in English

Buchi bandide, ranga buchi bandide ||pa||

Chachi kudidu summane ni pachikollo krishnayya ||a||

Nalku mukada buchiyondu
Gokulakke odi bandu
Lokarannu eledukondu
Kaku madi oyyuvudake ||1||

Muru kannina buchiyondu
Urura sutti bandu
Dvaradalli nintide nodo
Porarannu oyyuvudake ||2||

Angavella kangalulla
Shrungara mukada buchi
Bangaradantha makkalanella
Kangedisi oyyuvudake ||3||

Aru mukada buchiyondu
Iraru kangaladake
Varu varu aluva makkala
Doora seledu oyyuvudake ||4||

Marada mele iruvudondu
Karaala mukada buchi
Taralarannu eledukondu
Purandara vithala goppisalike ||5||


ಡಂಗುರವ ಸಾರಿ ಹರಿಯ / Dangurava saari hariya

ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ
ಮಂಡಲಕ್ಕೆ ಪಾಂಡುರಂಗವಿಠಲನೆ ಪರದೈವವೆಂದು ।।ಪ।।

ಹರಿಯು ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ   ।।೧।।

ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ  ।।೨।।

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀ ಪುರಂದರವಿಠಲ ಪರದೈವವೆಂದು।।೩।।

Lyrics in English

Dangurava saari hariya Dingarigarellaru
Mandalakke panduranga vithala paradaivavemdu |pa|

Hariyu mudida huvu harivanadolittukondu
Harushadindadi padi kunidu cappalikkuta ||1||

Odala jagateya madi nudiva naligeya pididu
Bidade dhanar- dhanar endu badidu cappalikkuta |2|

Intu sakala lokake lakshmikantanilladillavendu
Santatam Bajisuta meccida purandara vithalanendu |3|


https://youtu.be/jMNKxL_znLM

ಈ ಮುದ್ದು ಕೃಷ್ಣನ ಕ್ಷಣದ /I muddu krishnana

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು
ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ||

ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ
ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ|
ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣ
ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು||

ಕಿರುಗೆಜ್ಜೆ ಕಡಿಪೆಂಡೆ ಘಂಟಾಕಟಿಸೂತ್ರ
ವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ|
ಗುರುಮುದ್ರೆ ಕಂಕಣಾಂಗದ ಕುಂಡಲ ಪ್ರಭಾ
ಸಿರಿನಾಮ ಮುಕುಟ ನಾಸಿಕದ ವರಮಣಿಯ||

ಸಕಲ ದೇವೊತ್ತಮನೆ ಸರ್ವಗುಣ ಸಂಪೂರ್ಣ
ಅಖಿಳಾಗಮಸ್ತುತನೆ ಅಪ್ರಾಕೃತನೆ|
ಅಖಿಲ ಜೀವರ ಭಿನ್ನನೆನಿಪ ಹಯವದನನ
ಮುಕುರ ಕಡೆಗೋಲು ನೇಣು ಸಹಿತ ಪಿಡಿದಿಹ ಸ್ವಾಮಿ||

Lyrics in English

I muddu krishnana kshanada sukhave saku shri madhva muniya mane daiva udupina krishna||pa||

Cheluva charana dvandva janghe janurukati vali pankhti jathara vaksha kambu kandarada
nali tolu muddu mukha nayana nasika karna suli gurula mastakada nalinanaabhana sobagu||1||

Kiru gejje kadipende gantaakatisutra varahaara padaka shrivatsa kaustubha ratna |
gurumudre kankanangada kundala prabhe siri naama makuta nasikada varamaniya||2||

Sakala devottamana sarva guna sampurna akhilagama stutana aprartritana
akhila jivara bhinnanenipa hayavadanana mukhara kadegolu nenu sahita bpididiha swami||3||

https://youtu.be/Ixy54V2LV8M