ಎಲ್ಲಿ ಬೆಣ್ಣೆಯ ಬಚ್ಚಿಡಲಿ /Elli benneya bacchidali

ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ।
ಕಳ್ಳ ಕೃಷ್ಣನ ಹಾವಳಿ ಘನವಾಯಿತು ॥ ಪ ॥

ನೆಲುವು ನಿಲುಕದೆಂದಿಡುವೆನೆ ಈ ।
ಬೆಳಿಯಾಲಾಜಾಂಡ ವಾಡಿಯೊಳಿಲ್ಲ ॥
ತಿಳಿಯದೆ ಕೆಳದಲ್ಲಿರಿಸುವೆನೆ ಈ ।
ಬೆಳಕುಗಳೆಲ್ಲ ಇವನ ಕಂಗಳಾಧಳಾ ॥ 1 ॥

ಎವೆ ಇಡದಲ್ಲಿ ಕಾದಿರುವೆನೆ ನೋಡೆ ।
ದಿವಿಜರೆಲ್ಲ ಇವನ ಮಾಯ ॥
ಅವನೀಶ್ವರಗೆ ಮೊರೆಯಿಡುವೆ ಅಕ್ಕಾ ।
ಅವನಿಟ್ಟ ಬಂಟರು ಇಂದ್ರಾದಿಗಳೆಲ್ಲರು ॥ 2 ॥

ಈಗಲೆ ಇನಿತು ಮಾಳ್ಪವನೆಂತೊ ಮುಂದೆ ।
ಆಗಲಿಸುವಾಗ ತನುವನು ॥ 
ಕೂಗಿ ಹೇಳಲು ಮತ್ತೆ ಕೇಡಮ್ಮ , ಮುಂದೆ ।
ಹೇಗೆ ಪುರಂದರವಿಠಲ ನಟ್ಟುಳಿಗೆ ॥ 3 ॥

Lyrics in English

Elli benneya bacchidali na kalla krishana havali ghanavayitu ||

Neluvu nilukadendiduvene i beliyalajanda vadiyolilla |
tiliyade keladallirisuvene i belakugalella ivana gangaladhala||

Eve idadalli kadiruvene node divijagalella ivana maya |
avanishvarage moreyiduve akka avanitta pandarindradigalellaru||

Igale inidu malvavanento munde agalisuvaga tanuvanu |
kugi helalu matte ketamma munde hege purandara vittalanattulige||


ಎಂದಿಗಾದರು ನಿನ್ನ ಪಾದಾರವಿಂದವೆ / Endigadaro ninna padaravindave

ಎಂದಿಗಾದರು ನಿನ್ನ ಪಾದಾರ-
ವಿಂದವೆ ಗತಿಯೆಂದು ನಂಬಿದೆನೊ ||

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆಪನ್ನರಕ್ಷಕನೆ ಪರಿಪಾಲಿಸು
ಇನ್ನು ಪನ್ನಂಗಶಯನ ಶ್ರೀ ಪುರಂದರವಿಠಲನೆ ||೨||

ಬಂಧುಬಳಗವ ಬಿಟ್ಟು ಬಂದೆ ನಿನ್ನ ಮನೆಗಿಂದು ,
ಮಂದರಧರ ಗೋವಿಂದ ಪುರಂದರವಿಠಲನೆ ನೀ ಬಂಧು ||೧||

ಬಾರಿಬಾರಿಗೆ ನಿನ್ನ ಚರಣಕ್ಕೆ ಶರಣೆಂದೆ ಭಾರತಿರಮಣನೆ ಬಾರೊ ಮನೆಗಿಂದು
ತಂದೆ ಶ್ರೀಪುರಂದರವಿಠಲರಾಯನೆ ಎಂದೆಂದಿಗು ನೀನೆ ಜಗಕೆ ಬಂಧು ||೩||

Lyrics in English

Endigadaro ninna padaravindave gatiyendu nambideno ||

Bandubalagava bittu bande ninna manegindu, mandaradhara govinda purandaravithalane nee bandhu ||1||

Anyarobbara kaane mannisuvarenna apannarakshakane paripalisu ennu pannagashayana sri purandaravithalane ||2||

Baaribarige ninna charanakke sharanende bharatiramanane baro manegindu tande sri purandaravithalarayane endendigu neene jagake bandhu||3||


ದಯವಿರಲಿ ದಯವಿರಲಿ ದಾಮೋದರ/ Dayavirali dayavirali damodara

ದಯವಿರಲಿ ದಯವಿರಲಿ ದಾಮೋದರ ।।ಪ॥
ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ ।।ಅ.ಪ॥

ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲ
ಸಾಗುವವನಲ್ಲನಾ ನಿನ್ನ ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದು
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ।।೧।।

ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ನಾ ಬಂದವನಲ್ಲ
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ ।।೨।।

ಸತತ ಇದ್ದಲ್ಲೆ ಎನ್ನ ಸಲಹೊ ಅವರೊಳಗಾಗಿ
ಅತಿಶಯವು ಉಂಟು ವಿಭೂತಿಯಲ್ಲಿ
ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ
ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ ।।೩।।

ನೋಡಿದೆನೆ ನಾ ನಿನ್ನ ನೋಡದೆ ಎಂದೆಂದು
ಪಾಡಿದೆನೆ ಆರಾರು ಪಾಡದೊಂದು
ಮಾಡಿದೆನೆ ಅರ್ಚನೆಯ ಮೀಸಲಾದುದು ಒಂದು
ಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು ।।೪।।

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-
ದಿಂದ ನಿನ್ನ ಬಳಿಗೆ ಇಂದಿರೇಶ
ಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆ
ಬಂಧನ ಬಡಿವ ಭಕುತಿಯು ಜ್ಞಾನ ನೀಡುವುದು ।।೫।।

ಬಿನ್ನಪವ ಕೇಳು ಸ್ವಾಮಿ ಎನ್ನನೋಬ್ಬನ್ನೆ ಅಲ್ಲ
ಎನ್ನ ಹೊಂದಿ ನಡೆವ ವೈಷ್ಣವರನ
ಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿ
ಘನಗತಿಗೈದಿಸುವ ಭಕುತಿ ಕೊಡು ಕರುನಾಡಿ ।।೬।।

ರಾಜರಾಜೇಶ್ವರ ರಾಜೀವದಳನಯನ
ಮೂಜಗದೊಡೆಯ ಮುಕುಂದಾನಂದ
ಈ ಜೀವಕೀ ದೇಹ ಬಂದದ್ದಕ್ಕು ಎನಗತಿ ನಿ
ರ್ವ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ ।।೭।।

ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರು
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ
ಚಿನುಮಯ ಮೂರುತಿ ಗೋಪಾಲವಿಠಲ
ಘನಕರುಣಿ ಮಧ್ವಮುನಿ ಮನಮಂದಿರನಿವಾಸ ।।೮।।

Lyrics in English

Dayavirali dayavirali damodara ||pa||

Sayavagi bidadenna sakuva srikrashna ||a.pa||

Hogi baruvenayya hoda hangella
saguvavanallana ninna bittu
toogi tottilu konege sthaladalle nilluvudu
hyage ni nadedante hage na nadakombe ||1||

Iddalle ennanuddharipa Shakti a-
Sadhya ninagendu na bandavanalla
Nadyadi kshetramurtigalallli nija jnaana
Vruddha janara huduki ninna tiliyalu bande ||2||

Satata iddalle enna salaho avarolagagi
atisayavu untu vibutiyalli
gatiyu sadhanake abivyakta sandarsanadi
smrutige visesha marutiramana ninna ||3||

Nodidene na ninna nodade endendu
padidene araru padadondu
madidene archaneya misaladudu ondu
mudhamatiyali munde ninde kaimugidu ||4||

Bandeno nanilli bahujanmada sukruta-
dinda ninna balige indiresha
ondu matravu ittu sakalavu arpiside
bandhana badiva Bakutiyu jnana niduvudu ||5||

Binnapava kelu svami ennanobbanne alla
enna hondi nadeva vaishnavarana
innavarige baho dushkarmagala kedisi
ganagatigaidisuva Bakuti kodu karunadi ||6||

Rajarajeshvara rajivadalanayana
mujagadodeya mukundananda
i jivaki deha bandaddakku enagati ni
rvyajadi suragange snanavanu madiso ||7||

Enage avudu olle ellelli podaru
kshana bidade ninna nolpa jnanava kodo
Chinmaya muruti gopalavithala
ganakaruni madhvamuni manamandiranivasa ||8||


ಕರುಣಾಕರ ನೀನೆಂಬುವದೇತಕೋ / Karunaakara nee nembuvadetako

ಕರುಣಾಕರ ನೀನೆಂಬುವದೇತಕೋ
ಭರವಸೆಯಿಲ್ಲೆನಗೆ ||ಪ||
ಪರಿಪರಿಯಲಿ ಈ ಜನ್ಮವನಿತ್ತು
ತಿರುಗಿ ತಿರುಗಿ ಮನ ಕರಗಿಸುವುದ ಕಂಡು ||

ಕರಿಧ್ರುವ ಬಲಿ ಪಾಂಚಾಲಿ ಅಹಲ್ಯೆಯ
ಪೊರೆದವ ನೀನಂತೆ
ಅರಿತು ವಿಚಾರಿಸಿ ನೋಡಲದೆಲ್ಲವು
ಪರಿಪರಿ ಕಂತೆಗಳಂತಿದೆ ಕೃಷ್ಣ ||

ಕರುಣಾಕರ ನೀನಾದರೆ ಈಗಲೆ
ಕರಪಿಡಿದೆನ್ನನು ಹರಿ ಕಾಯೊ
ಸರಸಿಜಾಕ್ಷನೆ ಸರಸ ನೀನಾದರೆ
ದುರಿತಗಳೆನ್ನನು ಪೀಡಿಪುದುಂಟೆ ||

ಮರಣಕಾಲದಲಿ ಅಜಮಿಳಗೊಲಿದೆ
ಗರುಡಧ್ವಜನೆಂಬ ಬಿರುದಿನಿಂದ
ವರಬಿರುದುಗಳು ಉಳಿಯಬೇಕಾದರೆ
ತ್ವರಿತದಿ ಕಾಯೋ ಪುರಂದರವಿಠಲ ||

lyrics in English

Karunaakara nee nembuvadetako bharavase illenage || pa ||

Paripariyali ee nara janmanittu tirugi tirugi mana karaguvadanu kandu || a.pa ||

Kari Dhruva Bali Paanchaali Ahalyeya poredava neenante
aritu vichaarisi nodaladellavu paripari kante galantive krishna || 1 ||

Karunaakara neenaadare eegale karapididennanu nee salaho
sarasijaakshane arasu neenaadare duritagalennanu pidipuvudunte || 2 ||

Marana kaaladalj ajamilagolide garudadhwajanembo birudininda
vara birudugalu ninagirabekaadare tvaritadi kaayo Purandara Vittala || 3 ||


ತಾರಮ್ಮಯ್ಯ ಯದುಕುಲ ವಾರಿಧಿ / Tarammayya yadukula

ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ || ಪಲ್ಲವಿ ||
ಮಾರಜನಕನ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು || ಅನು ಪಲ್ಲವಿ ||

ಬಿಲ್ಲ ಹಬ್ಬಗಳಂತೆ, ಅಲ್ಲಿ ಬೀದಿ ಶೃಂಗಾರವಂತೆ
ಮಲ್ಲರ ಕಾಳಗ ಮದ್ದಾನೆಯಂತೆ
ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ || ೧ ||

ಮಧುರಾಪುರಿಯಂತೆ, ಅಲ್ಲಿ ಮಾವ ಕಂಸನಂತೆ
ಒದಗಿದ ಮದಗಜ ತುರಗ ಸಾಲಿನಲಿ
ಮದಮೋಹನ ಕೃಷ್ಣ ಮಧುರೆಗೆ ತೆರಳಿದ || ೨ ||

ಅತ್ತೆ ಮಾವನ ಬಿಟ್ಟು, ಬಂದೆವು ಹಿತ್ತಲ ಬಾಗಿಲಿಂದ
ಭಕ್ತವತ್ಸಲನ ಬಹು ನಂಬಿದ್ದೆವು
ಉತ್ಸಾಹ ಭಂಗ ಮಾಡಿದನಮ್ಮ || ೩ ||

ರಂಗನ ಸೆರೆ ನಂಬಿ ಬಂದೆವು ಸಂಗ ಸುಖವ ಬಯಸಿ
ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ
ಮಂಗಳಮೂರುತಿ ಮದನಗೋಪಾಲನು || ೪ ||

ಶೇಷಗಿರಿಯ ಮೇಲೆ, ಹರಿ ತಾ ವಾಸವಾಗಿಹ ಕಾಣೆ
ಸಾಸಿರನಾಮದ ಒಡೆಯನೆಂದನಿಸಿದ
ಶ್ರೀಶ ಪುರಂದರವಿಠ್ಠಲರಾಯನ || ೫ ||

Lyrics in English

Tarammayya yadukula vaaridhi chandramana ||pa||

Maarajanakana mohanaagana seri sukhisalu haaraisi bandevu |a.pa|


Billa habbagalante alli beedi shrungaaravante | mallara kaalaga maddaaneyante pullaakshanu taanallige teralida ||1||

Madhuraapuriyante alli kamsanante | odagida madagaja turaga saalinante madamohana krishna madhurege teralida||2||

Atte maavana bittu bandevu hittala baagilinda bhaktavatsalana bahu nambiddevu utsaaha bhanga maadidanamma ||3||

Rangana sere nambi bandevu sanga sukhava bayasi | bhangisi nammanu hyaange podanamma mangalamuruti madanagopaalanu ||4||

Sheshagiriya mele hari taa vaasavaagiha kaane | saasiranaamada odeyanendenisida srisha purandaravittalaraayana ||5||


ಕಂಗಳ ತೆರೆಯೆ ಮಂಗಳೆ /Kangala tereye mangale

ಕಂಗಳ ತೆರೆಯೆ ಮಂಗಳೆ ತಾಯೆ
ಮಾತಾನ್ನ ಪೂರ್ಣೆ ನಿನ್ನಾ…
||ಕಂಗಳ||
ಗಾಡಾಂಧಕಾರದಿ ಮುಳುಗಿಹ ಇಳೆಯ||2||
ಬೆಳಗಲು ಹೊಂಗಣ್ಣ ತೋರೇ…||2||
||ಕಂಗಳ||

ಭಂಗುರ ಭವದೀ ,ಬೆಂದಿಹ ಭಕ್ತರ
ಭಂಗವ ತೊಡೆಯುವ ಅಮ್ಮಾ ಭವಾನಿ
||ಭಂಗುರ||
ನಂಬಿದ ಭಕ್ತರ ಕಡೆಗೊಮ್ಮೆ ನೋಡಿ||2||
ಮಂದಹಾಸವ ಬೀರು ಅನ್ನಪೂರ್ಣೆ||2||
||ಕಂಗಳ||

ಮಿತಿ ಮೊದಲಿಲ್ಲದ ಮೋಹದ ಬಲೆಗೆ
ಅತಿಯಾಸೆಯಿಂದ ಸಿಲುಕಿದ ಜನಕೆ
‌ ||ಮಿತಿ||
ಗತಿ ತೋರಿ ನಡೆಸಮ್ಮ
ಮಮತೆಯ ಬೀರಿ ||ಗತಿ||
ಮತಿ ನೀಡಿ‌ ಸಲಹಮ್ಮ ಅನ್ನಪೂರ್ಣೆ||2||
||ಕಂಗಳ||

ನದಿಗಳು ಓಡುತ ಹರಿವಂತೆ ಕಡಲಿಗೆ
ಹಾತೊರೆವುದು ಜಗ ನಿನ್ನಯ ಮಡಿಲಿಗೆ
||ನದಿಗಳು||
ತಡಮಾಡದೆ ನೀ ಬಿಡದೆ ಕಾಪಾಡಮ್ಮ||2||
ಜಗದೊಡೆಯಳೇ ಮಾತೆ ಅನ್ನಪೂರ್ಣೆ||2||
||ಕಂಗಳ||

Lyrics in English

Kangala tereye mangale taaye | matanna poorne ninnaa ..||kangala|| gaadandhakaaradi mulugiha eleya ||2||belagalu honganna tore ||kangala||

Bhangura bhavadi, bendiha bhaktara bhangava todeyuva ammaa bhavani ||bhangura|| nambida bhaktara kadegomme nodi||2||mandahasava beeru annapurne||2||kangala||

Miti modalillada mohada balege atiyaaseyinda silukida janake||miti||gati tori nadesamma mamateya beeri||gati|| mati needi salahamma annapurne||2||kangala||

Nadigalu oduta harivante kadalige hatorevudu jaga ninnaya madilige||nadigalu|| tadamadade nee bidade kapadamma||2|| jagadodeyale mate annapurne||kangala||


ದಾಸನಾಗಬೇಕು ಸದಾಶಿವನ /Dasanagabeku sadashivana

ದಾಸನಾಗಬೇಕು ಸದಾಶಿವನ ದಾಸನಾಗಬೇಕು.  ||ಪ||

ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ||

ಮನದ ಕಲ್ಮಷ ಕಳೆದು – ಮಹಾದೇ-ವನ ಮಹಿಮೆಯ ತಿಳಿದು ಇನಿತು ಈ ಜಗವೆಲ್ಲ ಈಶ್ವರಮಯವೆಂದು ಘನವಾದ ಮೋಹದ ಗಡಿಯನು ದಾಟುತ ||1||

ತನುವು ಅಸ್ಥಿರವೆನುತ – ತಿಳಿದು ಶಂಕರನ ಹೃದಯವ ಕಾಣುತ ಘನವಾದ ಇಂದ್ರಜಾಲವ ಮಾಯೆಯೆನುತ ಬಿನುಗು ಸಂಸಾರದ ಮಮತೆಯ ಬಿಡುತ ||2||

ಆರು ಚಕ್ರದಿ ಮೆರೆವ – ಅಖಂಡನ ಮೂರು ಗುಣವ ತಿಳಿದು ಆರು ಮೂರು ಹದಿನಾರು ತತ್ತ್ವವ ಮೀರಿ. ತೋರುವ ಕಾಗಿನೆಲೆಯಾದಿಕೇಶವನಡಿ.     ||3||

Lyrics in English

Dasanagabeku sadashivana dasanagabeku ||pa||

Dasanagabeku kleshapanchakavalidu aseyalli mana soosade sarvadaa||a.pa||

Manada kalmasha kaledu mahadevana mahimeya tilidu enitue jagavella eshwaramayavendu ghanavaada mohada gadiyanu datuta ||1||

Tanuvu astiravenuta tilidu shankarana hrudayava kaanuta ghanavada indrajalava mayeyenutabinugu samsarada mamateya biduta ||2||

Aru chakradi mereva akhandana mooru gunava tilidu aru mooru hadinaru tatvava meeri toruva kagineleyadi keshavanadi ||3||


ಊಟಕ್ಕೆ ಬಂದೆವು ನಾವು /Ootake bandevu naavu

ಊಟಕ್ಕೆ ಬಂದೆವು ನಾವು ನಿನ್ನ -ಕೋಟಲೆಗಳ ಬಿಟ್ಟು ಅಡಿಗೆ ಮಾಡಮ್ಮ ||ಪ||

ಕತ್ತಲಕ್ಕುತಲಿವೆ ಕಣ್ಣು – ಬಲು -ಬತ್ತಿ ಬರುತಲಿವೆ ಕೈಕಾಲ ಜುಮ್ಮ ||ಹೊತ್ತು ಹೋಗಿಸಬೇಡವಮ್ಮ – ಒಂದು -ತುತ್ತನಾದರು ಮಾಡಿ ಇಕ್ಕುವುದು ಧರ್ಮ ||1||

ಒಡಲೊಳಗುಸಿರಿಲ್ಲವಮ್ಮ – ಗಳಿಗೆ -ತಡವಾದರೀ ಪ್ರಾಣ ಉಳಿವುದಿಲ್ಲಮ್ಮ ||ನುಡಿಯು ಚಿತ್ತಕೆ ಬರಲಮ್ಮ – ಒಂದು -ಪಿಡಿ ಅಕ್ಕಿ ಅನ್ನದಿ ಕೀರ್ತಿ ಪಡೆಯಮ್ಮ || 2||

ಹೊನ್ನರಾಶಿಗಳನು ಸುರಿಯೆ – ಕೋಟಿ -ಕನ್ನೆ ಧರಿತಿಯ ಧಾರೆಯನೆರೆಯೆ ||ಅನ್ನದಾನಕೆ ಇನ್ನು ಸರಿಯೆ – ನಮ್ಮ -ಚೆನ್ನ ಪುರಂದರವಿಠಲನೊಳ್ ಬೆರೆಯೆ||3||

Lyrics in English

Ootake bandevu naavu ninna- kotalegala bittu adige maadamma ||pa||

Kattalikkutalive kannu balu batti barutalive kaikala Jumma | hottu hogisabedavamma – ondu tuttanadaru ekkuvudu dharma ||1||

Odalolagusirillavamma galige tavaadaree prana ulivudillamma|| nudiyu chittake baralamma – ondu pidi akki annadi keeeti padeyamma ||2||

Honnarashigalanu suriye koti kanne dharitiya dhareyanereye || annadaanake ennu sariye namma chenna purandara vittalanol bereye ||3||


ಬಾರೆ ಗೌರಿ ಪೂಜಿಸುವೆನು/Bare gowri poojisuvenu

ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ
ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ||pa||

ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ
ಚಂದದಿ ಸಮರ್ಪಿಸುವೆನು ಪುಷ್ಪಫಲಗಳ||

ಮಂಗಳೆಂದು ಪಾಡುತ ಬೆಳಗುವೆನು ಆರುತಿ
ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ

ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ
ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ ||

ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ
ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ

ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ
ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ||

ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ
ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ ||

ಶರಣು ಜನರ ಪೊರೆವ ಕಾರ್ಪರ ನಾರಸಿಂಹನ
ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ ||

Lyrics in English

Bare gowri poojisuvenu saarasambaki saruve samsaradi sukhadore vidhumukhi ||pa||

kunda mallige jaji kusuma gandha parimala chandadi samarpisuvenu pushpaphalagala ||

Mangalendu paduta belaguvenu aruti mangalagowriye kodu soubhagyava santati ||

Mangalapradate girisambhute suranute mangalangi kuru karunamayi namostute ||

Patyantargata hariyaseve nitya mdise putra poutradi sampadavittu rakshise ||

Ratiya patiya pitage sadapratimeyenisuva atithigalanu sevisuva sumatiya kodu java||

Sadagaradi nimmadiya seve bidade maduve mrudana rani koduvaragala odane beduve||

Sharanu janara poreva karpara narasimhana charana kamalayugadi bhakuti erali anudina ||


ಶರಣು ಶರಣು ಹೇ ಗಣಪನೆ /Sharanu sharanu he ganapane

ರತ್ನಗರ್ಭ ಗಣಪತಿಂ
ಸಮಾಶ್ರಯಾಮಿ ಸತತಂ…..
ರತ್ನವಚನಗೀಯ ಮಾನ
ನಿಜಚರಿತ್ರ ವೈಭವಂ….
ತುಮುಲಏಶ ಶೇಖರಂ
ಪ್ರಣವಮಯ ಸ್ವರೂಪಿಣಂ..ಶಿವಸುತಂ
ಭವದಮಖಿಲಭುವನ ಮಂಗಳಪ್ರದಂ

ಶರಣು ಶರಣು ಹೇ ಗಣಪನೆ
ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
||ಶರಣು ಶರಣು||
ಶರಣು ಶರಣು ಹೇ ಗಣಪನೆ
ಶರಣು ಬೆನಕನೇ……

ಸಿಧ್ಧಿ ಬುದ್ಧಿ ಗೆದ್ದ ಲಂಭೋಧರನೇ
ವಿದ್ಯೆಗೆ ಅಧಿಪತಿ ನೀನೆ ಹೇ ಗಜಮುಖನೆ
||ಸಿಧ್ಧಿ ಬುಧ್ಧಿ||
ತುಂಬುರು ನಾರದ ವಂದಿತ ವಿಘ್ನನಾಶನೆ||2||
ಹೇರಂಭ ಗಣಪತಿಯೆ ನಿನಗೆ ವಂದನೆ||2||
||ಶರಣು ಶರಣು||

ಸೂಕ್ಷ್ಮನೇತ್ರ, ಏಕದಂತ , ಶೂರ್ಪಕರ್ಣನೇ…
ಢಮರುಗ ಹಸ್ತ ಸುಪುತ್ರ ಮುಕ್ತಿದಾತನೆ
||ಸೂಕ್ಷ್ಮನೇತ್ರ||
ಕಶ್ಯಪಾದಿ ಮೌನಿ ಹೃದಯ ಕಮಲವಾಸನೆ||2||
ಆನಂದ ಗಣಪತಿಯೆ ನಿನಗೆ ವಂದನೆ||2||
||ಶರಣು ಶರಣು||

Lyrics in English

Ratnagarbha ganapatim | samaashrayaami satatam …… Ratnavachanageeya maana nijacharitra vaibhavam …………… tumulaesha shekharam pranavamaya swaroopinam…. shivasutam bhavadamakhilabhuvana mangalapradam ||

Sharanu sharanu he ganapane sharanu benakane | Sharanu parvati tanayane ninage vandane ||sharanu sharanu||sharanu sharanu he ganapane sharanu benakane …..

Siddhi buddhi gedda lambhodharane | vidyege adhipati neene he gajamukhane ||siddhi buddhi||tumburu narada vandita vighna nashane ||2|| herambha ganapatiye ninage vandane ||2|| sharanu||

Sookshmanetra, ekadanta, shurpakarnane…. dhamaruga hasta suputra muktidatane ||sukshmanetra|| kashyapadi mouni hrudaya kamalavasane ||2|| ananda ganapatiye ninage vandane||2|| sharanu sharanu ||