ಆರೇನು ಮಾಡುವರು ಅವನಿಯೊಳಗೆ/ Arenu maduvaru avaniyolage

ಆರೇನು ಮಾಡುವರು ಅವನಿಯೊಳಗೆ ||pa||

ಪೂರ್ವಜನ್ಮದ ಕರ್ಮ ಹಣೆಯಲ್ಲಿ ಬರೆದುದಕೆ ||a.pa||

ಮಾಡಿದಡುಗೆಯು ಕೆಡಲು ಮನೆಯ ಗಂಡನು ಬಿಡಲು
ಕೂಡಿದ್ದ ಸತಿ ತಾನು ಕುಣಿಸ್ಯಾಡಲು
ಗೋಡೆಗೆ ಬರೆದ ಹುಲಿ ಘುಡಿಘುಡಿಸಿ ತಿನಬರಲು
ಆಡದಾ ಮಾತುಗಳ ಅಖಿಳರೂ ನಿಜವೆನಲು ||1||

ಹೊಲ ಬೇಲಿ ಮೆದ್ದರೆ ಮೊಲವೆದ್ದು ಇರಿದರೆ
ತಲೆಗೆ ತನ್ ಕೈಪೆಟ್ಟು ತಾಕಿದರೆ
ಹೆಳಲು ಹಾವಾದರೆ ಗೆಳೆಯ ರಿಪುವಾದರೆ
ಕಲಸಿಟ್ಟ ಅವಲಕ್ಕಿ ಕಲಪರಟಿ ನುಂಗಿದರೆ ||2||

ಹೆತ್ತಾಯಿ ಮಕ್ಕಳಿಗೆ ಹಿಡಿದು ವಿಷ ಹಾಕಿದರೆ
ಮತ್ತೆ ತಂದೆಯು ಹೊರಗೆ ಮಾರಿದರೆ
ತೊತ್ತು ಅರಸಿಗೆ ಪ್ರತಿ ಉತ್ತರವನಾಡಿದರೆ
ಕತ್ತಲೆಯು ಬೆನ್ನಟ್ಟಿ ಕರಡ್ಯಾಗಿ ಕಚ್ಚಿದರೆ ||3||

ಕಣ್ಣಿನೊಳಗಿನ ಬೊಂಬೆ ಕಚ್ಚಾಡ ಬಂದರೆ
ಹೆಣ್ಣಿನ ಹೋರಾಟ ಹೆಚ್ಚಾದರೆ
ಅನ್ನ ಉಣ್ಣದೆ ಬಹಳ ಅಜೀರ್ಣವಾದರೆ
ಪುಣ್ಯ ತೀರ್ಥಗಳಲ್ಲಿ ಪಾಪ ಘಟಿಸಿದರೆ ||4||

ಏರಿ ಕುಳಿತ ಕೊಂಬೆ ಎರಡಾಗಿ ಮುರಿದರೆ
ಮೇರೆ ತಪ್ಪಿ ಉದಧಿ ಮೆರೆದರೆ
ಆರಿದ್ದ ಇದ್ದಲಿಯು ಅಗ್ನಿಯಾಗುರಿದರೆ
ಧೀರ ಪುರಂದರವಿಠಲ ನಿನ್ನ ದಯ ತಪ್ಪಿದರೆ ||5||

Lyrics in English


Arenu maduvaru avaniyolage ||pa||

Purvajanmada karma haneyalli baredudake ||a.pa||

Madidadugeyu kedalu maneya gandanu bidalu
kudidda sati tanu kunisyadalu
godege bareda huli gudigudisi tinabaralu
adada matugala akilaru nijavenalu ||1||

Hola beli meddare molaveddu iridare
talege tan kaipettu takidare
helalu havadare geleya ripuvadare
kalasitta avalakki kalaparati nungidare ||2||

Hettayi makkalige hididu visha hakidarem matte tandeyu horage maridare
tottu arasige prati uttaravanadidare
kattaleyu bennatti karadyagi kaccidare||3||

Kanninolagina bombe kaccada bandare
hennina horata heccadare
anna unnade bahala ajirnavadare
punya tirthagalalli papa gatisidare||4||

Eri kulita kombe eradagi muridare
mere tappi udadhi meredare
aridda iddaliyu agniyaguridare
dhira purandaravithala ninna daya tappidare||5||


ಬಂದನೇನೇ ಸುಂದರ ಶ್ರೀರಾಮಚಂದಿರ / Bandanene sundara sri ramachandira

ಬಂದನೇನೇ ಸುಂದರ ಶ್ರೀರಾಮಚಂದಿರ ಬಂದನೇನೇ.

ಸಿರಿವತ್ಸಧಾರನು ಶ್ರಿತಜನೋದ್ಧಾರನು, ಮಾರಸುಂದರನು ಮಾಮನೋಹರನು

ಕೋಮಲ ಗಾತ್ರನು ಕಮಲ ಕಳತ್ರನು      ಕಮಲಾಪ್ತ ತೇಜನು ವಿಮಲ ಸತ್ಪಾತ್ರನು.

ಸಾಸಿರನಾಮನು ಭಾಸುರ ವದನನು,                ಈಶ ವಂದಿತನು ಶೇಷ ವಿಠಲನು ||

Lyrics in English

Bandanene sundara sri ramachandira bandanene ||

Sirivatsadharanu sritajanodhaaranu maarasundaranu maamanoharanu ||

Komalagaatranu kamala kalatranu kamalaapta tejanu vimala satpaatranu ||

Saasiranaamanu bhasura vadananu esha vanditanu shesha vittalanu ||


ಪಾಂಚಜನ್ಯದ ಜೊತೆಗೆ ಕೈಯಲ್ಲಿ/Paanchajanyada jotege

ಪಾಂಚಜನ್ಯದ ಜೊತೆಗೆ ಕೈಯಲ್ಲಿ ಸುದರ್ಶನಂ |ಗಧೆಯ ಕಮಲವ ಶಾಜ್ಞ ನಂದಕಗಳ0 ಧರಿಸಿ| ಸತತವು ಜಗವನ್ನು ಪಾಲಿಸುವ ತಂದೆಯನು| ಶ್ರೀವಾಸುದೇವನನ್ನು ಸರ್ವದಾ ನಮಿಪೇಂ|1|

ಜಗದೆಲ್ಲೆಡೆನಿಂತಿರುವ, ಎಲ್ಲೆಡೆಯು ತುಂಬಿರುವ | ಸಚ್ಚಿದಾನಂದಗಳೇ ಮೈವೆತ್ತಾ ಮೂರುತಿಯಾ| ತನ್ನೊಳಂತರವಿರದ ದೋಷಗಳ ದೂರನಾದ | ಒಬ್ಬನೇ ಒಬ್ಬನನ್ನು ನಾನು ನಪಿಪೇಂ||2||

ಬಹು ರೂಪಗಳ ಧರಿಸಿ ಎಲ್ಲ ರೂಪಗಳನ್ನು| ಏಕರೂಪದಿಂದ ಮೆರೆವಂತ ರೂಪಂ | ತಿಳಿಯಾದ ಬಗೆಯಾಳದ ಅರಿವಿಗೆಟಗುವ ತತ್ವಂ | ಮೊದಲಿರದ ತುದಿಯಿರದ ನಿತ್ಯನಮ್ ನಮಿಪೇಂ ||3||

ಕುಂದದೊಳು ಸುಂದರಂ, ಚೆಂದದಲಿ ಚಂದಿರಮ್| ಅಮೃತ ದದ್ಯವದಂತೆ, ತಂಪು ಮೈ ಬಣ್ಣ | ಜ್ಞಾನಪುಸ್ತಕ ಚಕ್ರ ಶಂಖ ಜಪ ಸರವಂತೆ| ಆಯುಧಗಳಂ ಹಿಡಿವ ರಿಪುವನು ನಮಿಪೇಂ||4||

ಎಣೆಯಿರದ ಕಾಂತಿಯವನ, ಎಲ್ಲರಂತರ್ಯಾಮಿ, ಸಾವಿರದ ಮುಪ್ಪಿರದ ಸುಖ ರೂಪನ ಸ್ವಾಮಿ| ವಾಯುದೇವನ ತಂದೆ ಎಲ್ಲೆಡೆಯು ತುಂಬಿರುವ | ಜಗದೊಡೆಯನನು ಸದಾ ನಮಿಸುತ್ತಿರುವೆಂ ||5||

ತಾನು ತಾನೇ ಆಗಿ ತುಂಬಿ ತುಳುಕಾಡುತಿರುವ |ಸಂತಸದ ಸೆಲೆಯಿಂದ ಮೂಜಗಕೆ ಸುಖಕರಮ್|ಅಣುವಿಗಿಂತನುತರಂ ನೀರಲಿ ಪವಡಿಸಿದ |ನಿತ್ಯ ಮೂರುತಿಯಾದ ದೇವನಂ ನಮಿಪೇಂ||6||

ಸೂರ್ಯಮಂಡಲದಲ್ಲಿ ನಡುವೆ ನೆಲೆ ನಿಂತವಗೆ| ವರವನು ಅಭಯವನು ಕೈಗಳಿಂದೀವಗೆ| ಸೂರ್ಯದೇವನ ಬಗೆಗೂ ನಿಲುಕದದಿ ತೇಜನಿಗೆ| ಪಾಪ ಪರಿಹಾರ ನಾರಾಯಣಗೆ ನಮಿಪೇಂ||7||

ಎಲ್ಲೆಡೆಯು ತುಂಬಿಹನ ಎಲ್ಲದರ ಕಾರಣನ | ಈ ಎಲ್ಲಾ ಲೋಕಗಳ ಅಜ್ಜ, ಮುತ್ತಜ್ಜನ | ಬಹುರೂಪವುಳ್ಳವನ, ಹುಟ್ಟು ಸಾವಿರದವನ|  ವಿಶ್ವರೂಪನ ಜಗದ ನಾಯಕನ ನಮಿಪೇಂ||8||

ಫಾಲದೇಶಕಾಶ ಪವಮಾನ ಮುಂತಾದ | ನಿತ್ಯ ತತ್ವಗಳನ್ನು ಸಂಹರಿಪ ಶಕ್ತಿ | ಪೃಕೃತಿ ದೇವಿಯೊಳಿದ್ದು ಜಗವ ನಡೆಸುವ ಪುರುಷ | ಬೃಹ್ಮ ದೇವಗೂ ತಂದೆ ಆದವಗೆ ನಮಿಪೇಂ ||9||

ಜಗವನು ಸೃಷ್ಟಿಸಿದ ಬ್ರಹ್ಮದೇವಗೂ ತಂದೆ | ಜಗವನು ಸಂಹರಿಪ ಶಂಕರನಿಗೂ ಅಜ್ಜ, | ಅಮರರಿಗೆ ಮುತ್ತಜ್ಜ, ರಮೆಯ ಕೈ ಹಿಡಿದಾತ | ಹುಟ್ಟು ಸಾವುಗಳಿರದ ದೇವನಿಗೆ ನಮಿಪೇಂ||10||

ಈ ಜಗದ ಒಂದೊಂದೂ ಕಣದಲ್ಲೂ ತುಂಬಿರುವ| ದೋಷದೂರಂ ನಿತ್ಯಂ ಅಮೃತಸ್ವರೂಪಮ್ | ಶಂಖ ಚಕ್ರಗಳನ್ನು ಅಭಯವರ ಮುದ್ರೆಗಳ | ಕೈಗಳಲಿ ಒತ್ತಿರುವ ಹರಿಯ ನಮಿಪೇಂ||11||

ತನ್ನೊಳವಿತಿರುವಂಥ ಅಮಿತ ಪ್ರತಾಪದಿಂ | ಎಲ್ಲಾ ದೋಷಗಳನ್ನು ಪರಿಹರಿಸಿ ಕೊಂಡವಗೆ | ಅರಿಗಳನು ತರಿದವಗೆ ಭಕ್ತರನು ಕರುಣಿಸುವ |  ಪರಮ ಪ್ರಸನ್ನನಿಗೆ ನಾನು ನಮಿಪೇಂ||12||

ಹುಟ್ಟು ಸಾವುಗಳಿರದ ತಿಳಿವಿಗೆ ಎಟುಕದ ತತ್ವ| ಎಲ್ಲೆಡೆಯು ತುಂಬಿರುವ ಪರಮನಮೃತಾತ್ಮ| ಎಲ್ಲ ಲೋಕಗಳಲ್ಲೂ ಅನವರತ ನೆಲೆಸಿರುವ | ಜಗದ ಅಧಿನಾಯಕಗೆ ನಾನು ನಮಿಪೇಂ ||13||

ತುಂಬು ಸಂತಸದವಗೆ ನಾಶವೇ ಇರದಂತ | ಶುದ್ಧನಿಗೆ ಶಾಂತನಿಗೆ ದೋಷದೂರನಿಗೆ| ಲೋಕ ಆಲೋಕಗಳ ಹಿತವ ಬಯಸುವಗೆ | ರಮೆಯ ಕೈಹಿಡಿದವಗೆ ನಾನು ನಮಿಪೇಂ ||14||

ತಟ್ಟೈಸಿಕೊಂಡಿರುವ ಸಂತಸದ ಸೆಲೆಯಿಂದ | ತುಂಬಿರುವ ಪರದೈವಂ ಇಂದ್ರಾನುಜಾತಂ | ನಿತ್ಯನಿರ್ಮಲರೂಪಮ್ ಎಲ್ಲರಿಂದುತ್ತಮಮ್| ವಾದ ಭೂಮಿಗೆ ಸಿಗದ ನಿತ್ಯತತ್ವಂ | ಲೋಕಬಲ ಲೋಕವನು ಕಾಪಾಡುತಿರುವಂತ | ನೀಲಾಮಯಂ ರಮೆಯ ರಮಣನಮ್ ನಮಿಪೇಂ ||15||

Lyrics in English

Paanchajanyada jotege kaiyalli sudarshanam| gadheya kamalava shanjna nandakagalam dharisi| satatavu jagavannu paalisuva tandeyanu | sri vasudevanannu sarvadaa namipem||1||

Jagadellede nintiruva, elledeyu tumbiruva | sacchidaanandagale maivetta moorutiya| tannolantaravirada doshagala dooranaada | obbane obbanannu naanu namipem||2||

Bahu roopagala dharisi ella roopagalannu | ekaroopadinda merevanta roopam| tiliyaada bageyaalada arivigetaguva tatvam| modalirada tudiyirada nityanam namipem||3||

Kundadolu sundaram, chendadali chandiram| amruta dadyavadante tampu mai banna| jnaana pustaka chakra shankha japa saravante| ayudhagalam hidiva ripuvanu namipem||4||

Eneyirada kaantiyavana, ellarantaryaami, saavirada muppirada sukharoopana swami| vaayudevana tande elledeyu tumbiruva| jagadodeyana sadaa namisutiruvem||5||

Taanu taane aagi tumbi tulukaadutiruva| santasada seleyinda moojagake sukhakaram| anuvigintanutaram neerali pavadisida | nitya moorutiyada devanam namipem||6||

Sooryamandaladalli naduve nele nintavage| varavanu abhayavanu kaigalindeevage | sooryadevana bagegu nilukadadi tejanige| paapa parihara narayanage namipem||7||

Elledeyu tumbihana elladara kaaranana| e lokagala ajja, muttajjana| bahuroopavullavana huttu saaviradavana| vishwaroopana jagada nayakana namipem||8||

Phaladeshakasha pavamaana muntaada| nitya tatvagalannu samharipa shakti| prukruti deviyoliddu jagava nadesuva purusha| brahmadevagu aadava tandege namipem||9||

Jagavanu srushtisida brahmadevagu tande| jagavanu samharipa shankaranigu ajja, amararige muttajja, rameya kai hididaata| huttu savugalirada devanige naMipem||10||

E jagada ondondu kanadallu tumbiruva| doshadooram nityam amrutaswaroopam| shankha chakragalannu abhayavara mudregala | kaigalali ottiruva hariya namipem||11||

Tannolavitiruvantha amita prataapadim | ellaa doshagalannu pariharisi kondavage| arigalanu taridavage bhaktaranu karunisuva | parama prasannanige naanu namipem||12||

Huttu saavugalirada tilivige etukada tatva| elledeyu tumbiruva paramanamrutaatma| ella lokagallu anavarata nelesiruva | jagada adhinayakage naanu namipem||13||

Tumbu santasadavage naashave eradanta| shuddhanige shantanige doshadooranige| loka aalokagala hitava bayasuvage| rameya kaihididavage naanu namipem||14||

Tattaisikondiruva santasada seleyinda tumbiruva paradaivam indranujatam|nityanirmalaroopam ellarinduttamam| vaada bhumige sigada nityatatvam| lokabala lokavanu kaapaadutiruvanta| neelaamayam rameya ramananam namipem||15||


ಈ ದಿವ್ಯ ಶ್ರೀ ಕ್ಷೇತ್ರ ಕೊಲ್ಲೂರ /E divya sri kshetra kollura ambe

ಈ ದಿವ್ಯ ಶ್ರೀ ಕ್ಷೇತ್ರ ಕೊಲ್ಲೂರ ಅಂಬೆ | ಎಂದೆಂದು ಶ್ರೀ ಚರಣ ರಕ್ಷೇ ನೀಡಂಬೆ || ಜಗದಂಬೆ ಶ್ರೀ ಮಾತೇ ಶ್ರೀ ಲಕ್ಷ್ಮಿ ನೀನೇ | ಸದಾನಂದ ಸೌಭಾಗ್ಯ ತರುವಂಥ ಮಾನ್ಯೆ ||೧||

ಸೌಪರ್ಣಿಕಾ ನದಿಯ ಶ್ರೀ ತೀರ್ಥದಿಂದ| ನಿತ್ಯ ನಿರ್ಮಲೆ ನಿನ್ನ ಅಭಿಷೇಕ ಚೆಂದ | ಕೊಡಚಾದ್ರಿ ಬುಡ ನಿನ್ನ ಗುಡಿಯಂತೆ ಮಾಯೆ | ಅಮೃತಧಾರೆಯ ನೋಟ ನೀ ತೋರು ತಾಯೆ ||೨||

ಶ್ರೀ ಕಾಳಿ ಶ್ರೀ ಲಕ್ಷ್ಮಿ ಶ್ರೀ ವಾಣಿ ರೂಪ | ಏಕೈಕ ಶಕ್ತಿಯೇ ನಿನ್ನ ಪ್ರತಿರೂಪ | ಮೂಲೋಕ ವಂದಿಸುವ ಮಂಗಲ ದೀಪ | ಕಲ್ಯಾಣಿ ನೀಡೆಮಗೆ ಶೌರ್ಯ ಪ್ರತಾಪ ||೩||

ನೀ ಧನ್ಯ ನೀ ಮಾನ್ಯ ಕಾರುಣ್ಯ ಪೂರ್ಣೆ | ನಿನ್ನಿಂದ ರವಿಚಂದ್ರ ಉದಯಾಸ್ತ ತಾನೇ | ನೀ ಮುನಿಯೇ ಪ್ರಳಯವೇ ಬಳಿ ಬಂದ ಹಾಗೆ | ಈ ಜೀವ ಕೋಟಿಗೆ ತಾರದಿರು ಬೇಗೆ ||||೪||

Lyrics in English

E divya sri kshetra kollura ambe | endendu sri charana rakshe needambe | jagadambe sri mate sri lakshmi neene | sadananda soubhagya taruvanta manye ||1||

Souparnika nadiya sri teerthadinda nitya nirmale ninna abhisheka chenda | kodachadri buda ninna gudiyante maye | amrutadhareya nota nee toru taaye ||2||

Sri kali sri lakshmi sri vani roopa | ekaika shaktiye ninna pratiroopa| mooloka vandisuva mangala deepa| kalyani needemage shourya pratapa ||3||

Nee dhanya nee manya karunya poorne| ninninda ravichandra udayasta taane | nee muniye pralayave bali banda haage| e jeeva kotige taaradiru bege||4||


This beautiful song by Dr.Rajkunar on Sri Mookambike “E divya sri kshetra kollura ambe” is third song in the album.

ಆಡಿದನೋಕುಳಿಯ ನಮ್ಮ /Adidanokuliya namma

ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ ||ಪ||

ರಂಬಿಸಿ ಕರೆದು ಚುಂಬಿಸಿ ಒಗೆದನು ರಂಭೇರಿಗೋಕುಳಿಯ ||

ಕದಂಬ ಕಸ್ತೂರಿಯ ಅಳಿ ಗಂಧದ ಓಕುಳಿಯ ಬಂದರು ಹೊರಗಿನ ನರೇರಾಡುತ ಚೆಂದದಿ ಓಕುಳಿಯ||

ಪಟ್ಟೆ ಮಂಚದ ಮೇಲೆ ನಮ್ಮ ರಂಗ ಇಟ್ಟ ಮುತ್ತಿನ ಹಾರ ಬಟ್ಟ ಕುಚಕ್ಕೆ ಕಣ್ಣಿಟ್ಟು ಒಗೆದನು ಕುಟ್ಟಿದನೋಕುಳಿಯ||

ಅರವತ್ತು ಸಾವಿರ ಗೋಪ ಸ್ತ್ರೀಯರೆಲ್ಲರ ಕೂಡೆ ಮಾರನಯ್ಯ ಶ್ರೀ ಪುರಂದರವಿಠಲ ಹರಿಸಿ ಓಕುಳಿಯ ||

Lyrics in English

Adidanokuliya namma ranga adidanokuliya ||

Rambisi karedu kambisi ogedanu rambheri gikuliya ||a.pa||

Kadamba kasturiya ali gandhada okuliya
bandaru horagina nareraduta chendadi okuliya ||

Patte manchada mele namma ranga itta muttina hara |
batta kuchakke kannittu ogedanu kuttidanokuliya ||

Arvattu savira gopa striyarellara kude
maranayya shri purandara vittala harisi oguliya ||


ಅರವಿಂದಾಲಯೇ ತಾಯೇ / Aravindaalaye taaye

ಅರವಿಂದಾಲಯೇ ತಾಯೇ ಶರಣು ಹೊಕ್ಕೆನು ಕಾಯೇ
ಸಿರಿ ರಮಣನ ಪ್ರಿಯೇ ಜಗನ್ಮಾತೇ ||ಪ||

ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲ ಶೋಭಿತೇ
ಕಮನೀಯ ಹಸ್ತಪಾದ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು(ಶ್ರೀ ಲಕುಮಿಯೇ) ||1||

ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ
ಅಜಭಾವಾದಿಗಳ ಪ್ರಸನ್ನೇ ಕಾಯೇ ಎನ್ನನು(ಶ್ರೀ ಲಕುಮಿಯೇ) ||2||

ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಕರುವದಿ ಮರೆಯದಿರೆ
ನಿರತ ನಿನ್ನಯ ಮುದ್ದು ಪುರಂದರವಿಟ್ಟಲನ ಚರಣಕಮಲವ ತೋರಿಸೆ(ಶ್ರೀ ಲಕುಮಿಯೇ) ||3||

Lyrics in English

Aravindaalaye taaye sharanu hokkenu kaaye siri ramanana priye jaganmaate ||pa||

kamala sugandhiye kamaladala netreye kamalavimala shobhite | kamaneeya hastapaada kamalaviraajite kanale kaaye sri lakumiye ||1||

Ninna karuna vikshnadindali tanumanagalanitte dhanya viraajite | ajabhaavaadigala prasanne kaaye sri lakumiye ||

Hari ninna uradalli dharisidanembanta karuvadi mareyadire | nirata ninnaya muddu purandara vittalana charanakamalava torise sri lakumiye ||


ಜೋ ಜೋ ಯಶೋದೆಯ /Jo jo yashodeya

ಜೋ ಜೋ ಯಶೋದೆಯ ನಂದ ಮುಕುಂದನೆ ಜೋ ಜೋ ಕಂಸ ಕುಠಾರಿ
ಜೋ ಜೋ ಮುನಿಗಳ ಹೃದಯಮಂದಿರ ಜೋ ಜೋ ಲಕುಮಿಯ ರಮಣ |ಪ.|

ಹೊಕ್ಕಳ ಹೂವಿನ ತಾವರೆಗಣ್ಣಿನ ಇಕ್ಕಿದ್ದ ಮಕರಕುಂಡಲದ
ಜಕ್ಕರಿಸುವ ಕದಪಿನ ಸುಳಿಗುರುಳಿನ ಚಿಕ್ಕ ಬಾಯಿ ಮುದ್ದು ಮೊಗದ
ಸೊಕ್ಕಿದ ಮದಕರಿಯಂದದಿ ನೊಸಲಲಿ ಇಕ್ಕಿದ ಕಸ್ತೂರಿ ತಿಲಕ
ರಕ್ಕಸರೆದೆದಲ್ಲಣ ಮುರವೈರಿಯೆ ಮಕ್ಕಳ ಮಾಣಿಕ ಜೋ ಜೋ || ೧||

ಕಣ್ಣ ಬೆಳಗು ಪಸರಿಸಿ ನೋಡುತ ಅರೆಗಣ್ಣ ಮುಚ್ಚಿ ನಸುನಗುತ
ಸಣ್ಣ ಬೆರಳು ಬಾಯೊಳು ಢವಳಿಸುತ ಪನ್ನಗಶಯನ ನಾಟಕದಿ
ನಿನ್ನ ಮಗನ ಮುದ್ದು ನೋಡೆನುತ ಗೋಪಿ ತನ್ನ ಪತಿಗೆ ತೋರಿದಳು
ಚಿನ್ನತನದ ಸೊಬಗಿನ ಖಣಿಯೇ ಹೊಸ ರನ್ನ ಮುತ್ತಿನ ಬೊಂಬೆ ಜೋ ಜೋ ||೨||

ನಿಡಿತೋಳ್ಗಳ ಪಸರಿಸುತಲಿ ಗೋಪಿಯ ತೊಡೆ ಮೇಲ್ ಮಲಗಿ ಬಾಯ ತೆರೆಯೆ
ಒಡಲೊಳು ಚತುರ್ದಶ ಭುವನವಿರಲು ಕಂಡು ನಡುನಡುಗಿ ಕಣ್ಣ ಮುಚ್ಚಿದಳು
ತಡೆಯದೆ ಅಡಿಗಳನಿಡುತಲಿ ಬಂದು ಮದದೇರ ಮುಖವ ನೋಡುತ ನಿಂದು
ಕಡು ದಯಾಸಾಗರ ಪುರಂದರ ವಿಠಲ ಬಿಡದೆ ರಕ್ಷಿಸು ಎನ್ನ ಸಲಹಬೇಕೆಂದು ಜೋ ಜೋ ||೩||

Lyrics in English

Jo jo yashodeya nanda mukundane jo jo kamsa kuthari
jo jo munigala hrudayamandira jo jo lakumiya ramana |pa.|

Hokkala huvina taavaregannina ikkidda makarakundalada
jakkarisuva kadapina suligurulina chikka bayi muddu mogada
sokkida madakariyandadi nosalali ikkida kasturi tilaka
rakkasarededallana muravairiye makkala manika jo jo || 1||

Kanna belagu pasarisi noduta areganna mucchi nasunaguta
sanna beralu bayolu Dhavalisuta pannagashayana natakadi
ninna magana muddu nodenuta gopi tanna patige toridalu
chinnatanada sobagina khaniye hosa ranna muttina bombe jo jo ||2||

Niditolgala pasarisutali gopiya tode mel malagi baya tereye
odalolu chaturdasha bhuvanaviralu kandu nadunadugi kanna mucchidalu
tadeyade adigalanidutali bandu madadera mukhava niduta nindu
kadu dayasagara purandara vithala bidade rakshisu enna salahabekendu jO jO ||3||


ಶರವು ಮಹಾ ಗಣಪತಿ /Sharavu maha ganapati

ಗಜಾನನಂ ಭೂತಗಣಾದಿ ಸೇವಿತಂ |ಕಪಿತ್ಥ ಜಂಬೂ ಫಲಸಾರ ಭಕ್ಷಿತಮ್ | ಉಮಾಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ

ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ | ಅನುದಿನವು ಭಕ್ತರು ನಿನ್ನ ನಂಬಿ ಇರುವರು || ಗಜಮುಖದ ದೇವನೆ ನಿನಗೆ ವಂದನೆ | ಭಕ್ತಿಯ ಸೇವೆಯಲಿ ಆರಾಧನೆ | ಕಷ್ಟ ಪರಿಹಾರಕೆ ಮಾರ್ಗದರ್ಶಕ ಕಾಪಾಡು ಕರುಣಾಳು ವಿಘ್ನನಾಶಕ ||ಶರವು ಮಹಾ ಗಣಪತಿ||

ಶರವು ಶಿವಾಲಯದ ತೆಂಕು ದಿಕ್ಕಿನಲ್ಲಿ ದಿವ್ಯ ಮಹಾ ಗಣೇಶ ಅವತರಿಸಿದನಿಲ್ಲಿ | ನಿತ್ಯವೂ ಎಡೆಬಿಡದೆ ನಾವು ವಂದಿಸೆ | ಸಕಲ ಇಷ್ಟಾರ್ಥವ ಪರಿ ಪಾಲಿಸೋ ||ಶರವು ಮಹಾ ಗಣಪತಿ||

ಪುಣ್ಯ ಪ್ರಸಾದವೇ ಪಂಚಕಜ್ಜಾಯ ಮುಕ್ತಿಯನ್ನು ನೀಡುವ ಭಕ್ತ ಜನಪ್ರಿಯ |ಸತ್ಯ ಧರ್ಮದಿ ತೋರೋ …. ನಿನ್ನ ಮಾಯೆಯ | ಶಾಸ್ತ್ರಿ ಸುಪೂಜಿತ ಸಿದ್ಧಿ ವಿನಾಯಕ ||ಶರವು ಮಹಾ ಗಣಪತಿ ||

Lyrics in English

Gajaananam bhutaganadi sevitam kapittha jambuphala saara bhakshitam | umaasutam shoka vinaasha kaaranam namaamu vighneshwara paada pankajam ||

Sharavu mahaa ganapati namage ninnade stuti | anudinavu bhaktaru ninna nambi eruvaru|| gajamukhada devane ninage vandane | bhaktiya seveyali araadhane |kashta parihaarake maargadarshaka kaapadu karunaalu vighnanaashaka ||sharavu mahaa ganapati||

Sharavu shivaalayada tenku dikkinalli divya naha ganesha avatarisidanilli || nityavu edebidade naavu vandise | sakala eshtaarthava paripaaliso ||sharavu maha ganapati ||

Punya prasadave panchakajjaaya muktiyannu needuva bhakta janapriya | satya dharmadi toro … Ninna maayeya | shaastri supoojita siddhi vinayaka ||sharavu maha ganapati ||


ಕುಲ ಕುಲ ಕುಲವೆಂದು /Kula kula kulavendu

ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರು ಬಲ್ಲಿರ || ಪ ||

ಹುಟ್ಟಿದ ಯೋನಿಗಳಿಲ್ಲ ಮೆಟ್ಟಿದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ || ೧ ||

ಜಲವೆ ಸಕಲ ಕುಲಕೆ ತಾಯಲ್ಲವೆ ಜಲದ ಕುಲವನೇನಾದರು ಬಲ್ಲಿರ ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ ನೆಲೆಯನರಿತು ನೀ ನೆನೆಕಂಡ್ಯ ಮನುಜ || ೨ ||

ಹರಿಯೆ ಸರ್ವೋತ್ತಮ ಹರಿಯೇ ಸರ್ವೇಶ್ವರ ಹರಿಮಯವೆಲ್ಲವೆನುತ ತಿಳಿದುಸಿರಿ ಕಾಗಿನೆಲೆಯಾದಿ ಕೇಶವರಾಯನ ಚರಣಕಮಲವ ಕೀರ್ತಿಸುವನೆ ಕುಲಜ || ೩ ||

Lyrics in English

Kula kula kulavendu hodedadiri nimma kulada nelayanenadaru ballira ||pa||

Huttida yonigalilla mettada bhumigalilla attu unnada vastugalilla
guttu kanisi bantu hiridenu kiridenu nettane sarvajnana nene kano manuja ||

Jalave sakala kulake tayiyallave a jalada kulavanenadru ballira | jalada
bobbuliyante sthiravalla i deha neleyanaritu ni hariya nene manuja||

Hariye sarvottama hariye sarveshavara harimayavellavenuta tilidu |
siri kageneleyadi keshavarayana charana kamalavanu kirtisuvane kulaja ||


ಆದದ್ದೆಲ್ಲ ಒಳಿತೇ ಆಯಿತು /Adaddella olite Ayitu

ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು   ||ಪ||

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮುಂದೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರ ವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ                 ||೧||

ಗೋಪಾಲ ಬುಟ್ಟಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಲ ಬುಟ್ಟಿ ಹಿಡಿಸಿದಳಯ್ಯ          ||೨||

ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಶ್ರೀ ಪುರಂದರ ವಿಠಲನು
ತುಳಸಿಮಾಲೆ ಹಾಕಿದನಯ್ಯ                ||೩||

Lyrics in English

Adaddella olite Ayitu namma
Sridharana sevege sadhana sampattayitu ||pa||

Dandige betta hidiyuvudakke
Munde bagi nachutalidde
Hendati santati savira vagali
Dandige betta hidisidalayya ||1||

Gopala butti hidiyuvudakke
Bupati endu garvisuttidde
A patnikula saviravagali
Gopala butti hidisidalayya ||2||

Tulasi male hakuvudakke
Arasanendu tirugutalidde
Sarasijaksha sri purandara vithalanu
Tulasimale hakidanayya ||3||