ಕುರುಡು ನಾಯಿ ಸಂತೆಗೆ /Kurudu nayi santege

ಕುರುಡು ನಾಯಿ ಸಂತೆಗೆ ಬಂತಂತೆ||2||
ಅದು ಯಾಕೆ ಬಂತೋ ||ಕುರುಡು||

ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ||ಖಂಡ||
ಹೆಂಡಿರ ಮಕ್ಕಳ ನೆಚ್ಚಿತಂತೆ||2||
ಕೊಂಡು ಹೋಗುವಾಗ ಯಾರಿಲ್ಲವಂತೆ
||ಕುರುಡು||

ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ||ಭರದಿ||
ಮರೆತರಿನ್ನು ವ್ಯರ್ಥವಂತೆ||2||
ನರಕದೊಳಗೆ ಬಿದ್ದಿತಂತೆ ||ಕುರುಡು||

ವೇದಶಾಸ್ತ್ರವನೋದಿತಂತೆ
ಗಾದೆಯ ಮಾಡಿ ಬಿಟ್ಟಿತಂತೆ||ವೇದ||
ಹಾದಿ ತಪ್ಪಿ ನಡೆದು ಯಮನ||2||
ಬಾಧೆಗೆ ತಾ ಗುರಿಯಾಯಿತಂತೆ ||ಕುರುಡು||

ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ||ನಾನಾ||
ಕಾನನಕಾನನ ತಿರುಗಿತಂತೆ||2||
ತಾನು ತನ್ನನೆ ಮರೆಯಿತಂತೆ ||ಕುರುಡು||

ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ||ಮಂಗನ||
ರಂಗ ಪುರಂದರವಿಠಲನ ಮರೆತು||2||
ಭಂಗ ಬಹಳ ಪಟ್ಟಿತಂತೆ ||ಕುರುಡು||

Lyrics in English

Kurudu nayi santege bantante adu ake banto||

Kanda sakkare hitavillavante khanda elubu kadiditante
hendira makkala necchitante kondu hoguvaga yarillavante ||

Bharadi angadi hokkitante tiruvi donneyali ikkidarante
maretarinnu vyarttavante narakadolage bidditante ||

Veda vedashastragalanoditante gaadeya madi bittitante
hadi tappi nadedu yamana badhege ta guriyayitante ||

Nana janmavanettitante manavanagi huttitante
kanana kanana tirugitante tanu tannane mareyitante ||

Mangala kaiya manikyavante hango hingo kaleditante
ranga purandara vittalana maretu bhanga bahala pattitante||


ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ /Ane bantane bantane

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ
ದಾನವ ಕದಳಿಯ ಕಾನನ ಮುರಿಯುತ

ಗುಂಗುರುಗುರುಳ ನೀಲಾಂಗ ಚೆಲ್ವಾನೆ
ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ
ಬಂಗಾರದಣುಗಂಟೆ ಶೃಂಗಾರದಾನೆ
ಮಂಗಳ ತಿಲಕದ ರಂಗನೆಂಬಾನೆ

ಕೆಳದಿ ಗೋಪಿಯರೊಳು ಗೆಳೆತನದಾನೆ
ಸುಲಭದಿಂದಲಿಯುವ ಎಳೆಮರಿ ಆನೆ
ಘಲಿರುಘಲಿರುರವದಿ ನಲಿದಾಡೋ ಆನೆ
ಮಲೆತವರೆದೆಮ್ಯಾಲೆ ತುಳಿದಾಡೋ ಆನೆ

ನಳಿನಜಭವರಿಗೆ ಸಿಲುಕದ ಆನೆ
ಒಲವಿಂದ ಭಕುತರ ಸಲಹುವ ಆನೆ
ಹಲವು ಕವಿಗಳೀಗೆ ನಿಲುಕದ ಆನೆ
ಬಲ ಪ್ರಸನ್ನ ವೆಂಕಟ ನಿಲಯನೆಂಬಾನೆ

Lyrics in English

Ane bantane bantane bantamma |
Danava kadaliya kanana muriyuta ||

Gungurugurula nilanga chelvane
Kangalige holeva vyagranguli ane |
Bangaradanugunte shrungaradane
Mangalatilakada ranganembane ||1||

Keladigopiyorolu geletanadane
Sulabadindoliyuva ele mari ane |
Galirugaliru ravadi nalidado ane
Maretavaredemyale nalidado ane ||2||

Nalinajabhavarige silukada ane
Olavinda bhakutara salahuva ane |
Halavu kavigalige silukada ane
Bala prasannavenkatanilaya nembane ||3||


https://youtu.be/nSV0h_gQnFE

ಇಟ್ಟಿಗೆ ಮೇಲೆ ನಿಂತ ನಮ್ಮ /Ittige mele ninta namma

ಇಟ್ಟಿಗೆ ಮೇಲೆ ನಿಂತ ನಮ್ಮ ಇಟ್ಟಿಗೆ ಮೇಲೆ ನಿಂತ ನಮ್ಮ ವಿಠ್ಠಲ ತಾನು
ಪುಟ್ಟಪಾದ ಊರಿನಿಂತ ದಿಟ್ಟ ತಾನು      ||ಪ||

ಪುಟ್ಟ ಪಾದ ಊರಿ ನಿಂತ ಗಟ್ಟಿಯಾಗಿ ನಿಂತಾನಮ್ಮ
ಟೊಂಕದ ಮೇಲೆ ಕೈಯಕಟ್ಟಿ ಭಕ್ತರು ಬರುವುದ ನೋಡುವನಮ್ಮ ||ಅ ಪ||

ಪಂಢರಪುರದಲ್ಲಿರುವನಂತೆ ಪಾಂಡುರಂಗ ಎಂಬುವನಂತೆ| ಚಂದ್ರಭಾಗ ಪಿತ ಇವನಂತೇ
ಚಂದ್ರಭಾಗ ಪತಿ ಇವನಂತೇ ಅರಸಿರುಕ್ಮಿಣಿ ಪತಿ ಇವನಂತೇ ||೧||

ಕನಕದಾಸೆ ಇವಗಿಲ್ಲವಮ್ಮ ಹಣದ ಆಸೆ ಬೇಕಿಲ್ಲವಮ್ಮ|| ನಾದಬ್ರಹ್ಮ ಎಂಬುವ ನಮ್ಮ
ನಾದಬ್ರಹ್ಮ ಎಂಬುವ ನಮ್ಮ ಭಕುತರ ವಚನಕೆ ಕಾದಿಹನಮ್ಮ ||೨||

ಕರಿಯಕಂಬಳಿ ಹೊದ್ದಿಹನಮ್ಮ ಹಣೆಗೆ ನಾಮ ಹಚ್ಚಿಹನಮ್ಮ||
ತುಳಸಿಮಾಲೆ ಹಾಕ್ಯನಮ್ಮ  ಪುರಂದರವಿಠ್ಠಲನೊಲಿದನಮ್ಮ ||೩||

Lyrics in English

Ittige mele ninta namma vittala tanu
Putta pada oori ninta ditta tanu

Putta paada oori ninta gattiyaagu nintaanamma | tonkada mele kaiya katti bhaktaru baruvuda noduvanamma ||

Pandara puradali iruvanante panduranga embuvanante
Chandra baga pita ivanante angane rukmini arasanante||1||

Kanakadase ivagillante hanada Ase bekillante
Nadabrahma embuvanamma bhakutara karege kaadihanante||2||

Kariya kambali hoddiyanante haneyali nama hacchihanante
Tulasimale hakyanante purandara vittalanolidanamma||3||


ಅಷ್ಟಗಣಪತಿಯ ಆರಾಧನೆ /Ashtaganapatiya aaradhane

ಅಷ್ಟಗಣಪತಿಯ ಆರಾಧನೆ
ವಿಶಿಷ್ಟ ರೀತಿಯಲಿ ಔಪಾಸನೆ ॥
ಶಿಷ್ಟ ರಕ್ಷಕನೇ ದುಷ್ಟ ಶಿಕ್ಷಕನೇ
ಅಭೀಷ್ಟ ನೀಡೆಂದು ನಾ ಬೇಡುವೆ ॥

ನವರಾತ್ರಿಯಲಿ ವಿವಿಧ ಪೂಜೆಯ
ಸ್ವೀಕರಿಸುವನೆ ಸಿದ್ಧಿ ಗಣಪತಿ ॥
ಕಾರ್ಯಾರಂಬದಿ ಭಕ್ತರು ನೀಡೋ
ಪೂಜೆಯ ಪಡೆವ ಪ್ರಸನ್ನ ಗಣಪತಿ ॥

ಲಕ್ಷ್ಮೀದೇವಿ ವರಪಡೆದ ಶುಭ
ಲಕ್ಷಣಮೂರ್ತಿ ಲಕ್ಷ್ಮೀಗಣಪತಿ ॥
ಕೃಷ್ಣ ನೀಡಿದ ಹಾರವ ಧರಿಸಿ
ಶೋಭಿಸುವಂತ ಚಿಂತಾಮಣಿ ಗಣಪತಿ ॥

ಅಕ್ಷರ ಬರೆದನು ಆನಂದ ಗಣಪತಿ
ಮುಕ್ತಿ ಕೊಡುವ ಶಕ್ತಿ ಗಣಪತಿ ॥
ಕಷ್ಟ ನಿವಾರಕ ಉಚ್ಚಿಷ್ಟ ಗಣಪತಿ
ಬುದ್ಧಿ ದಾಯಕ ಕುಮಾರ ಗಣಪತಿ ॥

Lyrics in English

Ashtaganapatiya aaradhane vishishta reetiyali awpaasane || shishta rakshakane dushta shikshakane abheeshta needendu naa beduve ||

Navaraatriyali vividha poojeya sweekarisuvavane siddhi ganapati || kaaryarambhadi bhaktaru needo poojeya padeva prasanna ganapati||

LakshmiDevi vara padeda shubha lakshana murthi laksmiganapati || krishna needida haarava dharisi shobhisuvanta chintaamani ganapathi ||

Akshra baredanu ananda ganapati mukti koduva shakti ganapati kashta nivaaraka uchishta ganapati buddhidaayaka kumaara ganapati ||


ಜಗನ್ಮೋಹನನೇ ಕೃಷ್ಣ /Jaganmohanane krishna

ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ    ॥ಪ॥

ಒಬ್ಬಳ ಬಸುರಿಂದಲಿ ಬಂದೆ ಮ
ತ್ತೊಬ್ಬಳ ಕೈಯಲಿ ನೀ ಬೆಳೆದೆ
ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ
ತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ             ॥೧॥

ಲೋಕದೊಳಗೆ ನೀ ಶಿಶುವಾಗಿ ಮೂ
ರ್ಲೋಕವನೆಲ್ಲ ಬಾಯಲಿ ತೋರಿದೆ
ಆಕಳ ಕಾಯುವ ಚಿಣ್ಣನೆಂದೆನಿಸಿದೆ
ಈ ಕುಟಿಲವನೆಲ್ಲಿ ಕಲಿತೆಯೊ ರಂಗ             ॥೨॥

ಮಗುವಾಗಿ ಪೂತನಿಯ ಮೊಲೆಯನುಂಡೆ ಅವಳು
ಜಗದಗಲಕೆ ಬೀಳಲು ಕೆಡಹಿ
ನಗುತ ನಗುತ ಗೋಪಿ ಮೊಲೆಯುಂಡೆ ಇಂಥ
ತಗಿಬಿಗಿಯಾಟಗಳೆಲ್ಲಿ ಕಲಿತೆಯೊ ರಂಗ  ॥೩॥

ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ
ಮೃಡಸುರಪಾದ್ಯರು ಪೊಗಳುತಿರೆ
ಹೆಡೆಯ ಮೇಲೆ ಕುಣಿದಾಡುತ ಆಡುತ
ಕಡೆ ಸಾರೆಂಬುದನೆಲ್ಲಿ ಕಲಿತೆಯೊ ರಂಗ   ॥೪॥

ಒಂದು ಪಾದವ ಭೂಮಿಯಲೂರಿ ಮ-
ತ್ತೊಂದು ಪಾದವ ಗಗನವನಳೆದು
ಒಂದು ಪಾದವ ಬಲಿ ಶಿರದಲಿಟ್ಟೆ ಇಂತ
ಚೆಂದದ ವಿದ್ಯೆಯನೆಲ್ಲಿ ಕಲಿತೆಯೊ ರಂಗ   ॥೫॥

ನಂಬಿದ ಪ್ರಹ್ಲಾದನು ಸ್ತುತಿಸೆ ನೀ
ಕಂಭವನೊಡೆದು ಬಂದಾಕ್ಷಣದಿ
ದೊಂಬಿಲಿ ದೈತ್ಯನ ಒಡಲ ಸೀಳಿದೆ ಇಂಥ
ಡಂಬರಾಟವನೆಲ್ಲಿ ಕಲಿತೆಯೊ ರಂಗ  ॥೬॥

ಅಂಬರೀಷ ದ್ವಾದಶಿ ಸಾಧಿಸುತಿರೆ ಅಗ
ಬಂದು ದುರ್ವಾಸರು ಶಾಪ ಕೊಡಲು
ಮುಂದಕೆ ಸಾಧನವಹುದೆಂದು ಚಕ್ರವ
ಹಿಂದಟ್ಟಿಸುವುದನೆಲ್ಲಿ ಕಲಿತೆಯೊ ರಂಗ  ॥೭॥

ವರಬಲದಿಂದಲಿ ಭಸ್ಮಾಸುರನು
ಹರಣ ಶಿರಡಿ ಕರವಿಡೆ ಬರಲು
ತರುಣಿಯ ರೂಪವ ತಾಳಿ ಆ ದೈತ್ಯನ
ಹರಣವನಳಿದುದನೆಲ್ಲಿ ಕಲಿತೆಯೊ ರಂಗ ॥೮॥

ವೇದಗಳರಸಿ ಕಾಣದ ಪರಬ್ರಹ್ಮ ನೀ
ಮೋದದಿಂದ ವಿದುರನ ಮನೆಯೈದಿ
ಆದರದಿ ಪಾಲ ಕುಡಿದುಳಿದುದ ನೀ
ಮೇದಿನಿಗಿಳಿಸುವುದೆಲ್ಲಿ ಕಲಿತೆಯೊ ರಂಗ  ॥೯

ದುರ್ಯೋಧನ ತನ್ನೊಡ್ಡೋಲಗದೊಳು
ಹರಿಯನು ಕರೆಸೆಂದರುಹಲು ಬಂದು
ಧರಣಿಯುಂಗುಷ್ಟದೊಲೊತ್ತುತ ಅವನನು
ಉರುಳಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೦॥

ಆ ಸಭೆಯಲ್ಲಿ ಖಳ ದುರ್ಯೋಧನನಾಗ
ಮೋಸದಿ ಕೃಷ್ಣನ ಕಟ್ಟೆನಲು
ಸಾಸಿರರೂಪಿನ ಕೃಷ್ಣನೆಂದೆನಿಸಿದ
ವೇಷವನೆಲ್ಲಿ ಕಲಿತೆಯೊ ರಂಗ   ॥೧೧॥

ಸರ್ಪಬಾಣ ಮೊರೆಯುತ ಬರಲು ಕಂ-
ದರ್ಪ ಪಿತನೆ ಕರುಣದಿ ನೀನು
ಒಪ್ಪುವ ಪಾರ್ಥನ ರಥವ ನೆಲಕೆ ಒತ್ತಿ
ತಪ್ಪಿಸಿದಾಟವನೆಲ್ಲಿ ಕಲಿತೆಯೊ ರಂಗ  ॥೧೨॥

ದ್ರೋಣನ ಸಂಗ್ರಾಮದಿ ಹರಿಚಕ್ರವ
ಮಾಣದೆ ಸೂರ್ಯಗೆ ಮರೆಮಾಡಿ
ಕಾಣಿಸಿ ಸೈಂಧವನನು ಕೊಲಿಸಲಾದೆ ಇಂಥ
ಜಾಣತನವ ನೀನೆಲ್ಲಿ ಕಲಿತೆಯೊ ರಂಗ  ॥೧೩॥

ಆ ಶಿರವಾತನ ತಂದೆಯು ಕರದಲಿ
ಸೂಸುತ ರಕುತವು ಬೀಳಲು ಅದನು
ಬೀಸಿ ಬಿಸಾಡಲು ಅವನ ಶಿರವನಾಗ
ಸಾಸಿರ ಮಾಡಿದುದೆಲ್ಲಿ ಕಲಿತೆಯೊ ರಂಗ  ॥೧೪॥

ಆದಿ ಮೂಲನೆ ಎಂದು ಕರಿರಾಜ ಕರೆಯಲು
ಯಾದವರಾಯ ನೀ ನಗುತಲಿ ಬಂದು
ಆದರದಿಂದ ಗಜೇಂದ್ರನ ಸಲಹಿದೆ
ಆ ದಿವ್ಯಾಟಗಳೆಲ್ಲಿ ಕಲಿತೆಯೊ ರಂಗ   ॥೧೫॥

ಎಂದೆಂದಿಗು ನಿಮ್ಮ ಗುಣಗಳ ಪೊಗಳಲು
ಇಂದ್ರಾದಿಗಳಿಗೆ ಅಳವಲ್ಲ
ಮಂದರಧರ ಶ್ರೀ ಪುರಂದರವಿಠಲನೆ
ಒಂದೊಂದಾಟವನೆಲ್ಲಿ ಕಲಿತೆಯೋ ರಂಗ  ॥೧೬॥

Lyrics in English

Jaganmohanane krishna jagavam palipane ||pa||

Obbala basurindali bande ma
ttobbala kaiyali ni belede
kobbida daityara odala silide intha
tabbibbatavanelli kaliteyo ranga ||1||

Lokadolage ni shisuvagi mu
rlokavanella bayali toride
akala kayuva chinnanendeniside
I kutilavanelli kaliteyo ranga ||2||

Maguvagi putaniya moleyanunde avalu
jagadagalake bilalu kedahi
naguta naguta gopi moleyunde intha
tagibigiyatagalelli kaliteyo ranga ||3||

Maduva dhumuki kalingana shiradali
mrudasurapadyaru pogalutire
hedeya mele kunidaduta aduta
kade sarembudanelli kaliteyo ranga ||4||

Ondu padava bumiyaluri ma-
ttondu padava gaganavanaledu
ondu padava bali shiradalitte inta
chendada vidyeyanelli kaliteyo ranga ||5||

Nambida prahladanu stutise ni
kambavanodedu bandakshanadi
dombili daityana odala silide intha
dambaratavanelli kaliteyo ranga ||6||

Ambarisha dvadasi sadhisutire aga
bandu durvasaru shapa kodalu
mundake sadhanavahudendu chakrava
hindattisuvudanelli kaliteyo ranga ||7||

Varabaladindali basmasuranu
harana shiradi karavide baralu
taruniya rupava tali aa daityana
haranavanalidudanelli kaliteyo ranga ||8||

Vedagalarasi kanada parabrahma ni
modadinda vidurana maneyaidi
adaradi pala kudiduliduda ni
medinigilisuvudelli kaliteyo ranga ||9||

Duryodhana tannoddolagadolu
hariyanu karesendaruhalu bandu
dharaniyungushtadolottuta avananu
urulisidatavanelli kaliteyo ranga ||10||

A sabeyalli kala duryodhananaga
mosadi krishnana kattenalu
Sasirarupina krishnanendenisida
veshavanelli kaliteyo ranga ||11||

Sarpabana moreyuta baralu kan-
darpa pitane karunadi ninu
oppuva parthana rathava nelake otti
tappisidatavanelli kaliteyo ranga ||12||

Dronana sangramadi harichakrava
manade suryage maremadi
kaanisi saindhavananu kolisalade intha
Janatanava ninelli kaliteyo ranga ||13||

A shiravatana tandeyu karadali
susuta rakutavu bilalu adanu
bisi bisadalu avana siravanaga
sasira madidudelli kaliteyo ranga ||14||

Adi mulane endu kariraja kareyalu
yadavaraya ni nagutali bandu
adaradinda gajendrana salahide
A divyatagalelli kaliteyo ranga ||15||

Endendigu nimma gunagala pogalalu
indradigalige alavalla
mandaradhara sri purandara vithalane
ondondatavanelli kaliteyo ranga ||16||


ಬಾರೋ ನಮ್ಮ ಮನೆಗೆ /Baro namma manege

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ ।ಪ ।
ಬಾರೋ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವರು ।।ಬಾರೋ ॥

ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀ ನರಹರಿ ಕಾಲರೂಪನ ತೋರ್ವ ।।ಬಾರೋ ।।

ವ್ಯಾಸ ನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದಿ ಓದಿ ಮೆರೆವ ವ್ಯಾಸಮುನಿಯೇ ।।ಬಾರೋ ।।

ಮಂತ್ರ ಗೃಹದಲಿ ನಿಂತ ಸುಯತಿವರ್ಯ
ಅಂತ ತಿಳಿಯದೋ ನೀ ಅಂತರದೊಳು ।
ಭೂತಪ್ರೇತಗಳ ಘಾತಿಸಿ ಬಿಡುವಂತ
ಖ್ಯಾತಿಯುತ ಶ್ರೀನಾಥನ ಸ್ತುತಿಸುವೆ।।ಬಾರೋ ।।

ಕುಷ್ಟರೋಗಾದಿಗಳ ನಷ್ಟ ಮಾಡುವಂತ
ಅಷ್ಟ ಮಹಿಮೆಯುತ ಶ್ರೇಷ್ಠ ಮುನಿಯೇ ।
ಕರೆದರೆ ಬರುವೆಂಬ ಕೀರುತಿ ಕೇಳಿ ನಾ
ಕರೆದನೋ ಕರುಣದಿ ಕರವ ಪಿಡಿಯೋ ।।ಬಾರೋ ।।

ಭಕ್ತವತ್ಸಲನೆಂಬ ಬಿರಿದಿಂದಾದರೆ
ಭಕ್ತನ ಮೊರೆ ಕೇಳೋ ಮಧ್ವೇಶ ವಿಠಲದಾಸ ।।ಬಾರೋ ।।

Lyrics in English

Baro namma manege shri raghavendra ||pa||

Baro durgapahara baro duritahara baro sanmarga dari toruva guru ||a.pa||

Bala prahladanagi koola kashyapuvige lola sri narahari kala rupava toridi||

Vyasa nirmitakrantha madhva krita bhashyava besarisade poreva vyasa muniye ||

Mantra gruhadalli ninta yativaryara anta tiliyado ni antaradolu||

Bhuta pretagalanu bhitisi biduvanta khyatiyuta mati nathanr stutisuve

Kusta rogadigalanista maduvanta ashta mahimeyuta shreshta muniye|

Karedare baruvarembo kirti keli na karedeno karunadi kara pidiyo||

Bhaktavatsanembo birudu nindadare bhaktanna morekeli madhvesha vithaladasa ||


ಜಗಪತಿಯ ತೋರಮ್ಮ /Jagapatiya toramma

ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ||pa||

ಅಘಗಳ ಕಳೆವ ಅಮೋಘದೇವನ
ಭಕುತರ ಕಾವನ ಎನ್ನಯ ಜೀವನ ||a.pa||

ಮೃಗಲಾಂಛನ ವದನೆ ಮೃದು ಸರಸಿಜ ಸದನೆ
ಹಗಲು ಇರುಳು ನಿನ್ನ ಸಂಯೋಗನ್ನ ಅನಂತ ಭೋಗನ್ನ ಕಿರೀಟಿಯ ಬೀಗನ್ನ||1||

ಭ್ರಮರ ಕುಂತಳೆ ಜಾಣೆ ಸುಮನ ಕೋಕಿಲಗಾನೆ
ಕಮಲ ತುಳಸಿ ಮಣಿಹಾರನ್ನ ಜಗದಾಧಾರನ್ನ
ದಶಾವತಾರನ್ನ ||2||

ಅಜರಾಮರಣ ಸಿಧ್ದಿ ತ್ರಿಜಗದೋಳ್ ಪ್ರಸಿದ್ಧಿ
ವಿಜಯವಿಠ್ಠಲ ಶ್ರೀನಿವಾಸನ ತಿರುವೆಂಕಟೇಶನ
ಜಗವ ಪೋಷನ ||3||

Lyrics in English

Jagapatiya toramma enage karunava madamma ||pa||

Agagala kaleva amogadevana
Bakutara kavana ennaya jivana ||a.pa||

Mrugalanchana vadane mrudu sarasija sadane
Hagalu irulu ninna samyoganna ananta boganna
Kiritiya biganna||1||

Bramara kumtale jane sumana kokilagane
Kamala tulasi maniharanna jagadadharanna
Dashavataranna ||2||

Ajaramarana sidhdi trijagadol prasiddhi
Vijayaviththala srinivasana tiruvenkateshana
Jagavaà poshana ||3||


ಜಾಲಿಯ ಮರದಂತೆ /Jaliya maradante

ಜಾಲಿಯ ಮರದಂತೆ ಧರೆಯೊಳು ದುರ್ಜನರು |ಪ|
ಮೂಲಾಗ್ರ ಪರಿಯಂತೆ ಮುಳ್ಳು ಕೂಡಿಪ್ಪಂತೆ||ಆ.ಪ||

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ||1||

ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ ದುರ್ಗಂಧ ಬಿಡಬಲ್ಲುದೆ
ಘೋರಪಾಪಿಗೆ ತತ್ವಜ್ಞಾನವ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ||2||

ತನ್ನಿಂದ ಉಪಕಾರ ತೊಟಕಾದರು ಇಲ್ಲ
ಬಿನ್ನಾಣದ ಮಾತಿಗೆ ಕೊನೆಯಿಲ್ಲ
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಠಲ||3|

Lyrics in English

Jaliya maradante dhareyolu durjanaru||pa||

Mulagra pariyante mullu kudippante||a.pa||

Bisilalli balali bandavarige neralilla
Hasidu bandavarige hannu illa
Kusuma vasaneyilla kudalu sthalavilla
Rasadalli svadavu vishadante irutiha||1||

Ura handige shadrasannavanikkalu
Naruva durgandha bidaballude
gorapapige tatva jnanava pelalu
krura karmava bittu sujananaguvane||2||

Tanninda upakara totakadaru illa
binnanada matige koneyilla
annakke serida kunni manavarante
innivara karyavu purandaravithala||3||


ಹರಿ ನಾರಾಯಣ ಹರಿ /Hari naaraayana hari

ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಏನು ಮನವೇ |ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||

ತರಳ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕಾಯಿತು |
ಧರಣೀಶ ರುಕ್ಮಾಂಗದನಿಂದ ಚಿಗುರಿತು ಗುರು ಪಿತಾಮಹಾನಿಂದ ಹೂವಾಯ್ತು ||

ವಿಜಯನ ಸ್ತುತಿಯಿಂದ ಕಾಯಾಯಿತು ಅದು ಗಜರಾಜನಿಂದ ದೊರೆ ಹಣ್ಣಾಯ್ತು |
ಧೃಡ ಶುಕಮುನಿಯಿಂದ ಪರಿಪಕ್ವವಾಯಿತು ಅಜಮಿಳ ತಾನುಂಡು ರಸವ ಸವಿದ ||

ಕಾಮಿತ ಫಲವೀವ ನಾಮವೊಂದಿರಲಿಕ್ಕೆ ಹೋಮ ನೇಮ ಜಪ ತಪವೇಕೆ
ಸ್ವಾಮಿ ಶ್ರೀ ಪುರಂದರ ವಿಟ್ಟಲ ನಾಮವ ನೇಮದಿಂದ ನೆನೆ ಮನವೇ ||

Lyrics in English

Hari naaraayana hari naaraayana |
Harinaaraayana ene manave ||naarayananemba naamada beejava |
Naarada bittida dhareyolage ||

Tarala druvaninda ankurisitu adu |
Vara pralhaadaninda molakaaytu |
Dharaneesha rukumaangadaninda chiguritu |
Kuru pitaamahaninda hoovaaytu || 1 ||

Vijayana stutiyinda kaayaayitu adu |
Gajaraajaninda dore hannaaytu |
Dhrudha shukamuniyinda paripakvavaayitu |
Ajaamila taanundu rasava savidaa || 2 ||

Kaamita phalaveeva naamavondiralikke |
Homa nema japa tapaveke |
Swaami shreepurandaravittalana |
Naamava nemadinda nee nene manave || 3 ||


ಹೆಂಡತಿ, ಪ್ರಾಣ ಹಿಂಡುತಿ /Hendati prana hinduti

ಹೆಂಡತಿ ಪ್ರಾಣ ಹಿಂಡುತಿ ||ಪ||
ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ||

ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ
ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ
ಉತ್ತಮ ಗುರುಹಿರಿಯರ ಮಾತು ಮೀರುತ್ತಿ
ಮೃತ್ಯು ದೇವತೆಯಂತೆ ಮನೆಯೊಳಗಿರುತ್ತಿ ||

ಇಲ್ಲದ್ದು ಬೇಡುತ್ತಿ ಸುಳ್ಳು ಮಾತಾಡುತ್ತಿ
ಒಳ್ಳೆ ಊಟವನುಂಡು ಕುಳಿತಿರ್ಪೆನೆಂತಿ
ಎಳ್ಳಿನಷ್ಟು ಕೆಲಸ ಮಾಡಲಾರೆನೆಂತಿ
ಎಲ್ಲೆಲ್ಲಿ ತಲೆಯೆತ್ತದ್ಹಾಂಗೆ ಮಾಡುತ್ತಿ ||

ಹಿರಿತನಕ್ಹೋಗುತ್ತಿ ಗರುವಿಕೆ ಮಾಡುತ್ತಿ
ನೆರೆಹೊರೆಯರ ಕೂಡ ಬಡಿದಾಡುತ್ತಿ
ದೊರೆ ಸಿರಿಪುರಂದರವಿಠಲನ ಸ್ಮರಿಸದೆ
ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ ||

Lyrics in English

Hendati prana hinduti ||pa||
Dodda konda kotiyante kunikunisutti ||a||

Hottare elutti horage tirugadutti
Hottu hoyitu Batya tarennutti
Uttama guruhiriyara matu mirutti
Mrutyu devateyante maneyolagirutti ||

Illaddu bedutti sullu matadutti
Olle utavanundu kulitirpenenti
Ellinashtu kelasa madalarenenti
Ellelli taleyettad~hange madutti ||

Hiritanaka hogutti garuvike madutti
Nerehoreyara kuda badidadutti
Dore siripurandaravithalana smarisade
Duritakke guriyagi ni nillutti ||