ಓಂ ಶಿವೋಹಂ..ಓಂ  ಶಿವೋಹಂ/ Om shivoham …. Om shivoham …….

ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್
ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್ ||

ಓಂ  ಭೈರವ ರುದ್ರಾಯ ಮಹಾ ರುದ್ರಾಯ
ಕಾಲ ರುದ್ರಾಯ ಕಲ್ಪಾಂತ ರುದ್ರಾಯ
ವೀರ ರುದ್ರಾಯ ರುದ್ರ ರುದ್ರಾಯ
ಘೋರ ರುದ್ರಾಯ ಅಘೋರ ರುದ್ರಾಯ
ಮಾರ್ತಾಂಡ ರುದ್ರಾಯ, ಅಂಡ ರುದ್ರಾಯ
ಬ್ರಹ್ಮಾಂಡ ರುದ್ರಾಯ ಚಂಡ ರುದ್ರಾಯ
ಪ್ರಚಂಡ ರುದ್ರಾಯ ದಂಡ ರುದ್ರಾಯ
ಶೂಲ ರುದ್ರಾಯ ವೀರ ರುದ್ರಾಯ
ಭವ ರುದ್ರಾಯ, ಭೀಮ ರುದ್ರಾಯ
ಅತಳ ರುದ್ರಾಯ, ವಿತಳ ರುದ್ರಾಯ
ಸುತಳ ರುದ್ರಾಯ , ಮಹಾತಳ ರುದ್ರಾಯ
ರಸಾತಳ ರುದ್ರಾಯ, ತಳಾತಳ ರುದ್ರಾಯ
ಪಾತಾಳ ರುದ್ರಾಯ, ನಮೋ ನಮಃ ||

ಓಂ  ಶಿವೋಹಂ…..ಓಂ ಶಿವೋಹಂ…
ರುದ್ರ ನಾಮಂ ಭಜೇಹಂ||ಓಂ||

ವೀರ ಭದ್ರಾಯ ಅಗ್ನಿ ನೇತ್ರಾಯ
ಘೋರ ಸಂಹಾರಕಾ
ಸಕಲ ಲೋಕಾಯ , ಸರ್ವ ಭೂತಾಯ
ಸತ್ಯ ಸಾಕ್ಷಾತ್ಕಾರಾ
ಶಂಭೋ ಶಂಭೋ ಶಂಕರಾ…..

ಓಂ ಶಿವೋಹಂ…..ಓಂ ಶಿವೋಹಂ…
ರುದ್ರ ನಾಮಂ ಭಜೇಹಂ ಭಜೇಹಂ||ಓಂ||

ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್

ಓಂ ನಮಃ ಸೋಮಾಯಚ, ರುದ್ರಾಯಚ
ನಮಸ್ತಾಮ್ರಾಯಚ , ಅರುಣಾಯಚ
ನಮಃ ಶಾಂಗಾಯಚ, ಪಶುಪತಯೇಚ
ನಮಃ ಉಗ್ರಾಯಚ , ಭೀಮಾಯಚ
ನಮೋ ಅಗ್ರೇ ವದಾಯಚ ದೂರೇ
ವದಾಯಚ ನಮೋ ಹಂತ್ರೇಚ
ಸಹಾನಿಯಾಚೆ ,ಸಹಮೋ ವ್ರಕ್ಷೇ
ಭ್ಯೋ ಹರಿಕೇಶೇ ,ಭ್ಯೋ ನಮಃ ಸ್ಕರಾಯ,
ನಮಸ್ ಸಂಭವೇಚಮಯೋ ಭವೇಚ
ನಮಃ ಶಂಕರಾಯಚ ಮಯಸ್ಕರಾಯಚ
ನಮಃ ಶಿವಾಯಚ, ಶಿವಕರಾಯಚಾ….

ಅಂಡ ಬ್ರಹ್ಮಾಂಡ ಕೋಟಿ ಅಖಿಲ ಪರಿಪಾಲನ
ಪೂರಣ ಜಗತ್ ಕಾರಣ ಸತ್ಯ ದೇವ ದೇವ ಪ್ರಿಯ

ವೇದ ವೇದಾರ್ಥ ಸಾರ ಯಘ್ನ ಯಘ್ನೋಮಯ
ನಿಶ್ಚಲ ದುಷ್ಟ ನಿಗ್ರಹ , ಸಪ್ತ ಲೋಕ ಸಂರಕ್ಷಣಾ

ಸೋಮ ಸೂರ್ಯ ಅಗ್ನಿ ಲೋಚನ
ಶ್ವೇತ ವ್ರಷಭ ವಾಹನ
ಶೂಲಪಾಣಿ ಭುಜಂಗ ಭೂಷಣ
ತ್ರಿಪುರ ನಾಶ ನರ್ತನ

ವ್ಯೋಮಕೇಶ ಮಹಾಸೇನ ಜನಕ
ಪಂಚವಕ್ರ ಪರಶು ಹಸ್ತ ನಮಃ

ಓಂ ಶಿವೋಹಂ…ಓಂ ಶಿವೋಹಂ…
ರುದ್ರ ನಾಮಂ ಭಜೇಹಂ….ಭಜೇಹಂ…||ಓಂ||

ಕಾಲ ತ್ರಿಕಾಲ ,ನೇತ್ರ ತ್ರಿನೇತ್ರ
ಶೂಲ ತ್ರಿಶೂಲ ಧಾತ್ರಂ…
ಸತ್ಯ ಪ್ರಭಾವ ದಿವ್ಯ ಪ್ರಕಾಶ
ಮಂತ್ರ ಸ್ವರೂಪ ಮಾತ್ರಂ…

ನಿಶ್ ಪ್ರಪಂಚಾಧಿ ನಿಷ್ಕಳಂಕೋಹಂ
ನಿಜ ಪೂರ್ಣ ಭೋಧ ಹಂ ಹಂ
ಸತ್ಯ ಗಾತ್ಮಾಗಂ , ನಿತ್ಯ ಬ್ರಹ್ಮೋಹಂ
ಸ್ವಪ್ರಕಾಶೋಹಂ ಹಂ ಹಂ

ಸಚ್ಛಿತ್ ಪ್ರಮಾಣಂ ಓಂ ಓಂ
ಮೂಲ ಪ್ರಮೇಯಂ ಓಂ ಓಂ
ಅಯಂ ಬ್ರಹ್ಮಾಸ್ಮಿ ಓಂ ಓಂ
ಅಹಂ ಬ್ರಹ್ಮಾಸ್ಮಿ ಓಂ ಓಂ

ಗಣ ಗಣ ಗಣ ಗಣ ಗಣ ಗಣ
ಗಣ ಗಣ ಸಹಸ್ರ ಕಂಠ ಸಪ್ತ ವಿಹರಕಿ
ಡಮ ಡಮ ಡಮ ಡಮ
ಡುಮ ಡುಮ ಡುಮ ಡುಮ
ಶಿವಡಮರುಗನಾದ ವಿಹರಕಿ

ಓ೦ ಶಿವೋಹಂ…..ಓ೦ ಶಿವೋಹಂ…
ರುದ್ರ ನಾಮಂ ಭಜೇಹಂ ಭಜೇಹಂ

ವೀರ ಭದ್ರಾಯ ಅಗ್ನಿ ನೇತ್ರಾಯ
ಘೋರ ಸಂಹಾರಕಾ
ಸಕಲ ಲೋಕಾಯ , ಸರ್ವ ಭೂತಾಯ
ಸತ್ಯ ಸಾಕ್ಷಾತ್ಕಾರಾ
ಶಂಭೋ ಶಂಭೋ ಶಂಕರಾ…..

ಓ೦ ಶಿವೋಹಂ…ಓ೦ ಶಿವೋಹಂ…
ರುದ್ರ ನಾಮಂ ಭಜೇಹಂ….ಭಜೇಹಂ…||ಓಂ||

Lyrics in English

Om shivoham … Om shivoham …….. Rudra naamam bhajeham ||om||

Hara hara hara hara hara hara  | hara hara mahadev | Hara hara hara hara hara hara  | hara hara mahadev ||

Om bhairava rudraya, maha rudraya, kaala rudraya, kalpaanta rudraya, veera rudraya, rudra rudraya, ghora rudraya, aghora rudraya, martanda rudraya, anda rudraya, brahmanda rudraya, chanda rudraya, prachanda rudraya,  danda rudraya, shoola rudraya, veera rudraya, bhava rudraya, bheema rudraya, atala rudraya, vitala rudraya, sutala rudraya, mahatala rudraya, rasatala rudraya, talaatala rudraya, patala rudraya, namo namah ||

Om shivoham … Om shivoham …….. Rudra naamam bhajeham ||om||

Veera bhadraya agni netraya ghora samharaka, sakala lokaya, sarva bhutaya satya saakshatkara | shambho shambho shankara …..

Om shivoham … Om shivoham …….. Rudra naamam bhajeham ||om||

Hara hara hara hara hara hara  hara hara mahadev ||

Om somayacha, rudrayacha, namastamrayacha, arunayacha, namah shaangayacha, pashupatayecha, namah ugrayacha, bhimayacha, namo agrevadayacha doore vadayacha namo hantrecha, sahaaniyache, sahamo vrukshebhyo harikesgebhyo, namaskaraya, namas sambhavecha mayo bhavecha, namah shankarayacha, mayaskarayacha, namah shivayacha, shivakarayacha…….

Anda brahmanda koti akhila paripalana |poorana jagat kaarana satya deva deva priya

Veda vedaarta saara yajna yajnomaya nishchala dushta nigraha, sapta loka samrakshanaa ..

Soma soorya agni lochana | shwetha vrushabha vaahana | shoolapaani bhujanga bhushana |tripura naasha nartana ||

Vyomakesha mahaasena janaka panchavaka parashu hasta namah

Om shivoham … Om shivoham …….. Rudra naamam bhajeham ||om||

Kaala trikaala, netra trinetra, shoola trishoola dhaatram………satya prabhava divya prakash mantra swaroopa matram ||

Nish prapanchadi nishkalamkoham | nija poorna bhodha ham ham | gatya gaatmaagam, nitya brahmoham, swaprakaashoham ham ham ||

Sacchit pramaanam om om | moola prameyam om om | ayam brahmaasmi om om | aham brahmaasmi om om ||

Gana gana gana gana gana gana gana gana gana sahasra kanta sapta viharaki | dama dama dama dama duma duma duma duma | shiva damaruganaada viharaki ||

Om shivoham … Om shivoham …….. Rudra naamam bhajeham ||om||

Veera bhadraya agni netraya ghora samharaka, sakala lokaya, sarva bhutaya satya saakshatkara | shambho shambho shankara …..

Om shivoham … Om shivoham …….. Rudra naamam bhajeham ||om||


ರಂಗ ಪುರವಿಹಾರ /Rangapura vihara jaya

ರಂಗಪುರ ವಿಹಾರ ಜಯ ಕೋದಂಡ ರಾಮಾವತಾರ ರಘುವರ ಶ್ರೀ ||

ಅಂಗಜ ಜನಕದೇವ ಬೃಂದಾವನ ಸಾರಂಗೇಂದ್ರ ವರದ ರಮಾಂತ ರಂಗ | ಶ್ಯಾಮಲಾಂಗ ವಿಹಂಗ ತುರಂಗ ಸದಯಪಾಂಗ ಸತ್ಸಂಗ ||

ಪಂಕಜಾಪ್ತಕುಲ ಜಲನಿಧಿ ಸೋಮ ವರ ಪಂಕಜ ಮುಖ ಪಟ್ಟಾಭಿರಾಮ ಪಂಕಜ ಜಿತಕಾಮಾ | ರಘುರಾಮ ವಾಮಾಂಕ ಗತ ಸೀತಾವರ ವೇಷ ಶಾಂಕ ಶಯನ ಭಕ್ತ ಸಂತೋಷ ಏನಾಂಕರವಿನಯ| ಮೃದುತರ ಭಾಷಾ ಕಳಂಕ ದರ್ಪಣ ಕಪೋಲ ವಿಶೇಷ ಮುನಿ ಸಂಕಟ ಹರಣ | ಗೋವಿಂದ ವೇಂಕಟರಮಣ ಮುಕುಂದ ಸಂಕರ್ಷಣ ಮೂಲಕಂದ ಶಂಕರ ಗುರುಗುಹಾನಂದ ||


Lyrics in English

Composer: Muttuswaami Dikshitar

Rangapura vihara jaya kodandaramavatara raghuvira shri||

Angaja janaka deva brndavana sarangendra varada ramantaranga shyamalanga vihanga turanga sadayapanga satsanga ||a.pa||

Pankajaptakula jalanidhi soma vara pankaja mukha pattabhirama|
padapankaja jitakama raghurama vamanka gata sitavara Vesha | sheshanka shayana bhakta santosha enankaravi nayana mrudutarabhashakalanka darpana kapola vishesha munisankata
harana govinda venkata ramana mukunda sankarshana moola kanda shankaraguruguhananda ||


Video link :

by Smt.M.S.Subbalakshmi

by Sooryagayathri

ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮಾ /Hannu ta benne ta

ಹಣ್ಣು ತಾ ಬೆಣ್ಣೆ ತಾ, ಗೋಪಮ್ಮ
ಹಣ್ಣು ತಾ ಬೆಣ್ಣೆ ತಾ ||ಪ||

ಅಡವಿಯೊಳಗೆ ಅಸುರನ ಕೊಂದ ಕೈಗೆ
ಮಡುವಿನೊಳಗೆ ಮಕರನ ಸೀಳ್ದ ಕೈಗೆ
ಪೊಡವಿಯೊಳಗೆ ಚೆಂಡನಾಡಿದ ಕೈಗೆ
ಕಡುಬೇಗದಿಂದಲಿ ಬೇಡಿದ ಕೈಗೆ ||

ಶಂಖಚಕ್ರಗಳನು ಪಿಡಿದಂಥ ಕೈಗೆ
ಶಂಕೆಯಿಲ್ಲದೆ ಮಾವನ ಕೊಂದ ಕೈಗೆ
ಬಿಂಕದಿಂದಲಿ ಕೊಳಲೂದುವ ಕೈಗೆ
ಪಂಕಜ ಮುಖಿಯರ ಕುಣಿಸುವ ಕೈಗೆ ||

ದಿಟ್ಟತನದಿ ಬೆಟ್ಟವೆತ್ತಿದ ಕೈಗೆ
ಸೃಷ್ಟಿಯ ದಾನವ ಬೇಡಿದ ಕೈಗೆ
ದುಷ್ಟ ಭೂಪರನೆಲ್ಲ ಮಡುಹಿದ ಕೈಗೆ
ಕೆಟ್ಟ ದಾನವರನ್ನು ಬಡಿದಂಥ ಕೈಗೆ ||

ಕಾಳಿಯ ಮಡುವನು ಕಲಕಿದ ಕೈಗೆ
ಸೋಳ ಸಾಸಿರ ಗೋಪಿಯರಾಳಿದ ಕೈಗೆ
ಮೇಳದ ಭಕ್ತರುದ್ಧರಿಸುವ ಕೈಗೆ
ಏಳು ಗೂಳಿಯ ಗೆದ್ದ ಯದುಪತಿ ಕೈಗೆ ||

ಬಿಲ್ಲು ಬಾಣಗಳನ್ನು ಪಿಡಿದಂಥ ಕೈಗೆ
ಮಲ್ಲರ ಸಾಧನ ಮಾಡಿದ ಕೈಗೆ
ಎಲ್ಲ ದೇವರ ದೇವ ರಂಗನ ಕೈಗೆ
ಬಲ್ಲಿದ ಪುರಂದರವಿಠಲನ ಕೈಗೆ ||

Lyrics in English

Hannu ta benne ta gopamma hannu ta benne ta||pa||

Adaviyolage asurana konda kaige maduvinolage makarana silda kaige
podaviyolage chendanadida kaige kadu bhekadindali bedida kaige||



Shankha chakragalanu pididanta kaige shankeyillade mavana konda kaige
binkadindali kolaluduva kaige pankaja mukhiyara kunisuva kaige||



Dittatanadi bettavettida kaige shrushtiya danava bedida kaige
dushta bhuparanella maduhida kaige ketta danavarannu badidanda kaige||



Kaliya maduvanu kalakida kaige sola sasira gopiyaralida kaige
melada bhaktaruddharisuva kaige Elu guliya gedda yadupati kaige||



Billu banagalannu pididanta kaige mallara sadhana madida kaige
ella devara deva rangana kaige ballida purandara vittalana kaige||

~~~~~~~~~~~~~~~~~~~~~~~~~~~

Youtube link : https://youtu.be/XGhhmbKDFnk by S.Janaki

ಮಂದಗಮನೆ ಇವನಾರೆ /Mandagamane ivanyare

ಮಂದಗಮನೆ ಇವನಾರೆ ಪೇಳಮ್ಮ
ಮಂದರಧರೆ ಗೋವಿಂದ ಕಾಣಮ್ಮ

ಕೆಂದಳಿರು ನಖ ಶಶಿಬಿಂಬ ಪದಪದ್ಮ
ಅಂದುಗೆ ಇಟ್ಟವನಾರೆ ಪೇಳಮ್ಮ
ಅಂದು ಕಾಳಿಂಗನ ಹೆಡೆಯ ತುಳಿದ ದಿಟ್ಟ
ನಂದನ ಕಂದ ಮುಕುಂದ ಕಾಣಮ್ಮ

ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ
ಕಡಗ ಕಂಕಣವಿಟ್ಟವನಾರಮ್ಮ
ಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-
ಳೊಡನೆ ತೋರಿದ ಜಗದೊಡೆಯ ಕಾಣಮ್ಮ

ನೀರದ ನೀಲದಂತೆಸೆವ ವಕ್ಷದಿ ಕೇ-
ಯೂರ ಹಾರನಿಟ್ಟವನಾರಮ್ಮ
ನೀರೆ ಕೇಳು ನಿರ್ಜರರಾದವರಿಗೆ
ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ

ಶಂಖ ಚಕ್ರವು ಗದೆ ಪದ್ಮ ಕೈಯೊಳಗಿಟ್ಟ
ಲಂಕರಿಸುವನೀತನಾರಮ್ಮ
ಪಂಕಜಮುಖಿ ಶ್ರೀ ಭೂದೇವಿಯರಸನು
ಶಂಕೆಯಿಲ್ಲದೆ ಗೋಪಿತನಯ ಕಾಣಮ್ಮ

ಕಂಬುಕಂಧರ ಕರ್ಣಾಲಂಬಿತಕುಂಡಲ
ಅಂಬುಜ ಮುಖದವನಾರೆ ಪೇಳಮ್ಮ
ರಂಭೆ ಕೇಳೀತ ಪುರಂದರವಿಟ್ಠಲ
ನಂಬಿದ ಭಕ್ತಕುಟುಂಬಿ ಕಾಣಮ್ಮ

Lyrics in English

Mandagamane ivanyare pelamma mandaradhara govinda kanamma||

Kendaliru nakha shashibimba pada padma anduge ittavanyare pelamma|
andu kalingana peeeya tulida ditta nandana kanda mukunda kanamma||1||


Uduge pitambara naduge honnududara kadaga kankana vittavanyaramma
madadi kel sakala lokangala kuksiyolodane torida jagadodeya kanamma||2||


Nirada niladantesava vaksadi keyurava haravanittavan yaramma
nire kelu nirjararadavarige presiri balavittudari kanamma||3||


Shankha chakravu gade padma kaiyolagittalankarisuvanitanyarama
pankaja mukhi shri bhudeviyara rasanu shankeyillade gopi tanaya kanamma||4||


Kambu kandhara karnalambida kundala ambuja mukhadavan yare helamma|
rambhe kelita purandara vittala nambida bhaktara kutumbi kanamma||5||


ಆದಿ ಲಕ್ಷ್ಮಿ ದೇವಿಗೆ/ Adi lakshmi devige

ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||ಆ||
ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||ಧಾ||
ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||ಕ || ಆದಿಲಕ್ಷ್ಮೀ…

ಬಲದ ಕಾಲು ಮುಂದೇ ಇಟ್ಟು ಹೊಸಿಲು ದಾಟಿ ಬಾರಮ್ಮ |
ಭಾಗ್ಯದಾಯಿ ಮಾಂಗಲ್ಯಾ ಸೌಭಾಗ್ಯವ ನೀಡಮ್ಮ||ಬ||
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ |
ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ||ಧ||ಆದಿಲಕ್ಷ್ಮೀ….

ಕ್ಷೀರಭ್ಧಿತನಯೇ ಆನಂದನಿಲಯೇ ವಿಷ್ಣುಪ್ರಿಯೆ ಬಾರೆ |
ಕಮಲನಯನೇ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ || ಕ್ಷೀ||
ಪುಷ್ಪಸುಗಂಧಿನಿ ಹರಿಣ ವಿಲೋಚನಿ ಕರುಣೆಯನ್ನು ತೋರೆ ||ಪು||
ಅನಂತ ರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ||ಆದಿಲಕ್ಷ್ಮೀ ||

Lyrics in English

Adi lakshmi devige aratiya ettire, arashina kunkuma hachi hoomale hakire |
dhanya lakshmige neevu dhoopa deepa hachire |
kanaka lakshmige neevu naivedyava tannire || adi lakshmi ||


Balada kaalu munde ittu hosilu daati baaramma |
bhagyadaayi mangalya soubhagyava needamma |
haalu tuppa hole harisi harusha sukhava taramma |
dhana dhanyava kottu santaana karunisamma || adi lakshmi ||


Kshirabdhi tanaye ananda nilaye vishnu priye baare |
kamala nayane nija kamala vadane kamalaaksha vallabhe baare |
pushpa sugandhini harina vilochani karuneyannu tore |
ananta roopini chira sukha daayini ishtarthava nee taare || adi lakshmi ||

ವಾರ ಬಂತಮ್ಮ ಗುರುವಾರ / Vaara bantamma guruvaara

ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ ||ವಾರ ಬಂತಮ್ಮ||

ಮನವ ತೊಳೆಯಿರಮ್ಮ ಭಕ್ತಿಯ ಮನೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು ಒಳಗಣ ಬೆರೆವನಮ್ಮ ||ವಾರ ಬಂತಮ್ಮ||

ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ
ಪ್ರೀತಿ ಮಾತಿಗೆ ಸೋತು ಬರುವ ಮಗುವಂಥೆ ಕಾಣಿರಮ್ಮ ||ವಾರ ಬಂತಮ್ಮ||

ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ ||ವಾರ ಬಂತಮ್ಮ||

Lyrics in English

|Poojyaya Raaghavendraaya
Sathya Dharma Rathayacha
Bhajathaam Kalpavrukshyaa
Namatham Kaamadhenave |

Guruvaara Banthamma Guru Raayara Neneyamma
Guruvaara Banthamma Guru Raayara Neneyamma
Smarane Mathradali Klesha Kaledu Sadgathiya Koduvanamma
Vaara Banthamma Guruvara Banthamma

Yogi Baruvanamma Shubhayoga Baruvudamma
Yogi Baruvanamma Shubhayoga Baruvudamma
Raghavendra Gururaaya Bandu Bhavaroga Kalevanamma
Vaara Banthamma Guruvara Banthamma

Manava Tholeyiramma Bhakthiya Maneya Haakiramma
Manava Tholeyiramma Bhakthiya Maneya Haakiramma
Dhyanadinda Karedaaga Bandu Olaganna Berevanamma
Vaara Banthamma Guruvara Banthamma

Kopa Ariyanamma Yaranu Doora Thallanamma
Kopa Ariyanamma Yaranu Doora Thallanamma
Prethi Maathige Sothu Baruva Maguvanthe Kaaniramma
Vaara Banthamma Guruvara Banthamma

Hinde Baruvanamma Raayara Neralinanthe Hanuma
Hanumaniddede Raamaniddu Nija Mukthi Koduvanamma
Vaara Banthamma Guruvara Banthamma

Guruvaara Banthamma Guru Raayara Neneyamma
Guruvaara Banthamma Guru Raayara Neneyamma
Smarane Mathradali Klesha Kaledu Sadgathiya Koduvanamma
Vaara Banthamma Guruvara Banthamma ….

Click the link to listen song

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು / Alli nodalu rama elli nodalu

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ

ಎಲ್ಲೆಲ್ಲಿ ನೋಡಿದರ ಅಲ್ಲಿ ಶ್ರೀರಾಮ || ಪ ||


ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೆ ಬೆದರಿ ಓಡಿದವು |
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ ||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳ್ ಈಪರಿ ರೂಪವುಂಟೆ
ಲವಮಾತ್ರದಿ ಅಸುರ ದುರುಳರೆಲ್ಲರು
ಅವರವರ್ ಹೊಡೆದಾಡಿ ಹತರಾಗಿ ಪೋದರು || ೨ ||


ಹನುಮದಾದಿ ಸಾಧುಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ || ೩ ||

Lyrics in English:

Sri Purandara dasaru has composed this song


Alli nodalu rama illi nodalu rama
ellelli nodidara alli Srirama || pa ||

ravanana mulabala kandu kapisene
Avagale bedari odidavu
Ee vele naranagi irabaradendenisi
deva ramachandra jagavella tanada || 1 ||

avanige iva rama ivanige ava rama
avaniyol ipari rupavunte
lavamatradi asura durularellaru
avaravar hodedadi hataragi podaru || 2 ||

hanumadsdi sadhujanaru appikondu
kunikunidadidaru harushadinda
kshanadali purandara vithalarayanu
konegodeyanu tanobbanagi ninta || 3 ||

Click tge link to listen song by mambalam sisters

ರಾಮ ಮಂತ್ರವ ಜಪಿಸೋ / Rama mantrava japiso

ರಾಮ ಮಂತ್ರವ ಜಪಿಸೋ – ರಾಗ :  ಮಧ್ಯಮವತಿ.  ಆದಿ ತಾಳ. ಪುರಂದರದಾಸರು

ರಾಮ ಮಂತ್ರವ ಜಪಿಸೋ ಹೇ ಮನುಜ|| ಪ ||

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ|| ಅ.ಪ ||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ |
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ || ೧ ||

ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ |
ಹೀನ ಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ೨ ||

ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೆ ಮೂಲ ಮಂತ್ರ |
ಭಕುತಿ ರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖ ನಿಧಿ ಪುರಂದರ ವಿಠಲನ ಮಂತ್ರ|| ೩ ||

Lyrics in English

Rama mantrava japiso composed by Purandaradasa.

Rama mantrava japiso he manuja
A mantra ee mantra nechi ni kedabeda
somashekhara tanna bhamegelida mantra

kula hinanadarau kugi japisuva mantra
sale bidiyolu ucharipa mantra
halavu papangala hadagedisuva mantra
sulabhadindali svarga sure kombuva mantra||1||

Snaana mounangalige saadhanada mantra
jnaanigalu manadi dhyaanipa mantra |
heena gunangala hingisuva mantra,
enembe vibhishanage pattagattida mantra ||2||

Sakala vedangalige saaravenipa mantra
mukuti maargake ede moola mantra |
bhakuti rasake batte omme toruva mantra,
sukha nidhi purandara vittalana mantra ||3||

Click the link to listen song

ಯಾಕೆ ಮೂಕನಾದೆ ಗುರುವೇ / Yaake mookanade guruve

ರಚನೆ : ಜಗನಾಥದಾಸರು

ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।
ಯಾಕೆ ಮೂಕನಾದೆ ಲೋಕಪಾಲಕ ಎನ್ನ ।
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।
ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ।
ಕಾಕುಜನರೊಳೆನ್ನ ನೂಕಿಬಿಟ್ಟು ನೀನು (/ನೀ) ॥ ೨ ॥

ಈಗ ಪಾಲಿಸದಿರೆ ಯೋಗಿಕುಲವರ್ಯ ।
ರಾಘವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ ॥ ೩ ॥

ನಿನ್ನಂಥ ಕರುಣಿಯಿಲ್ಲ ಎನ್ನಂಥ ಕೃಪಣಿಯಿಲ್ಲ ।
ಘನ್ನಮಹಿಮ ನೀ ಎನ್ನನು ಬಿಟ್ಟೀಗ ॥ ೪ ॥

ಜನನಿಯು ನೀ ಎನ್ನ ಜನಕನಯ್ಯ ।
ಮನ್ನಿಸೊ ನೀ ನಿತ್ಯಾನನ್ಯ ಶರಣನೆ (/ಶರಣ್ಯ) ॥ ೫ ॥

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೋ ।
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೋ ॥ ೬ ॥

ನಾಥನು ನೀ ಅನಾಥನು ನಾನಯ್ಯ ।
ಪಾತಕರರಿ ಜಗನ್ನಾಥವಿಠ್ಠಲದೂತ (/ಜಗನ್ನಾಥವಿಠ್ಠಲದಾಸ) ॥ ೭

Lyrics in English

Composer : Jagannatha daasaru

Yaake mookanaadyo guruve nee yaakemookanaadyo ||
yaake mookanaade lokapaalaka enna
saakuvaraaryayya srikara raghavendra || yaake ||

Hindakke nee enna munde sulidaadidi |
mandiyolage nee enna mandanna maadidyallo ||

Bekaagadiddarinyake kaiyannu pidide |
kaakujanarolenna nooki bittu neenu ||

Eega palisadire yogikulavarya |
raghavendrane bhava saaguvadyangahayya ||

Ninnatha karuniyilla ennantha krupaniyilla |
ghannamahima nee ennanu bitteega ||

Jananiyu nee enna janakanayya |
manniso neenityanana sharanane ||

Endigaadaro nee pondikondavanallo |
endu nee kai bittarenna munde kaayuvaryaaro ||

Naathanu nee anaathanu naanayya |
paatakarari jaganaathavittaladaasa ||

Click the link to listen the beautiful song by pt. Bhimsen joshi