
ನೂರೆಂಟು ನಾಮದ ಗಣಪತಿರಾಯ
ನೂರಾರು ಭಕುತರ
ನೂರೆಂಟು ನಮನಗಳು ||ನೂರೆಂಟು||
ಶಾಲೆಯ ಮಕ್ಕಳ
ಬಾಲ ಬಾಲೆಯರ ||ಶಾಲೆಯ ||
ಲೀಲೆಯ ಗುಂಜಿಗಳು
ಗುಂಗಿಯ ನಮನಗಳು ||ನೂರೆಂಟು||
ಸಿಧ್ಧರು ಸಾಧ್ಯರು ವಿದ್ಯಾಧರರು
ಸಿದ್ಧಿವಿನಾಯಕ ಬಧ್ಧರು ನಿನಗೆ ||ಸಿಧ್ಧರು||
ಶುಭಕಾರ್ಯಗಳನು ಮಾಡುವ ಮೊದಲೆ ||
ವಿಭವದ ನಿನ್ನಯ ಪೂಜೆಯು ಗಜಮುಖನೆ ||ನೂರೆಂಟು ||
ಅವರಿವರೇತಕೆ ಅಮರಾಧಿಪನೆ
ದಿವಾಕರ ನಿನ್ನನು ಪೂಜಿಸಿ ಮೆರೆದ ||ಅವರಿವರೇತಕೆ ||
ನಿನ್ನನೆ ನಂಬಿದ ಧನಿಕರ ಬಡವರ||೨||
ಬಿನ್ನಪ ಲಾಲಿಸೋ ಪನ್ನಗ ಭೂಷಣನೆ ||ನೂರೆಂಟು ||
Lyrics in English
Noorentu namada ganapatiraya
nooraru bhakutara
noorentu namanagalu || noorentu nama ||
Shaleya makkala bala baleyara |
leeleya gunjigalu gungiya namanagalu || noorentu ||
Siddharu sadhyaru vidyadhararu
siddhivinayaka baddharu ninage |
shubhakaryagalanu maduva nodale
vibhavada ninnaya poojeyo gajamukhane || noorentu ||
Avarivaretake amaradhipane
divakara ninnane poojisi mereda ||
ninnane nambida dhanikara badavara
binnapa lalisi pannaga bhushanane || noorentu ||
