ಶರಣು ಶರಣು ಜಯ ದುರ್ಗೆ / Sharanu sharanu jaya durge

ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ ಶರಣು ಶರಣು ಶಿವೆ ಗೌರಿ ರಕ್ಷಿಸೆಮ್ಮ ಸುಖದಾತೆ ||

ಮಂಗಳವಾರ ಸುಮಂಗಲಿಯರು ನಿನ್ನಯ ನಾಮವ ಭಜಿಸುವರು | ಒಂಭತ್ತು ವಾರ ವೃತವಿರಲು ದೊರಕುವುದು ಇಷ್ಟಾರ್ಥಗಳು ||

ರಕ್ಷಿಸುವವಳು ನೀನೇ ಶಿಕ್ಷಿಸುವವಳು ನೀನೇ. ಅಣು ಅಣುವೆಲ್ಲಾ ತುಂಬಿಹೆ ನೀನೇ ಕೋರಿಕೆ ಕರುಣಿಸು ಕಾಮಧೇನು ||

ಜಯ ಶಿವೆ ಶಂಕರಿ ಜಯ ಅಭಯಂಕರಿ ಜಯ ಜಯ ಶಕ್ತಿ ಜಯ ಪ್ರಳಯಂಕರಿ | ಜಯ ಶಿವೆ ಶಾಂಭವಿ ಜಯ ನಟ ಭೈರವಿ | ಜಯ ಕಾದಂಬರಿ ಜಯ ಶ್ವೇತಾಂಬರಿ ||

ಜಯ ಮಾತಾಂಗಿನಿ ಆನಂದದಾಯಿನಿ | ಜಯ ಜಗದಂಬೆ ಪುಣ್ಯ ಸ್ವರೂಪಿಣಿ | ಓಂ ಜಗಜನನಿ ಮಾತಾಭವಾನಿ | ಓಂಕಾರೇಶ್ವರಿ ಚಿತ್ತ ನಿವಾಸಿನಿ ||

Lyrics in English

Sharanu sharanu jaya durge sarva shakti jaganmaate | sharanu sharanu shive gowri rakshisemma sukhadaate ||sharanu ||

Mangalavaara sumangaliyaru ninnaya naamava bhajisuvaru | ombattu vaara vrutaviraly dorakuvudu eshtaarthagalu ||

Rakshisuvavalu eene shikshisuvavalu neene | anu anuvella tumbihe neene korike karunisu kaamadhenu ||

Jaya shive shankari jays abhayankari jaya jaya shakti jaya pralayankari jaya shive shambhavi jaya nata bhairavi jaya kadambari jaya shwetambari ||

Jaya mataangini anandadayini | jaya jagadambe punya swaroopini | om jagajanani maatabhavani | omkareshwari chitta nivasini ||

Click here to listen song

ವರವ ಕೊಡು ಎನಗೆ ವಾಗ್ದೇವಿ / Varava kodu enage vaagdevi

ರಚನೆ : ಕನಕ ದಾಸರು

ವರವ ಕೊಡು ಎನಗೆ ವಾಗ್ದೇವಿ ನಿನ್ನ 
ಚರಣ ಕಮಲಂಗಳ ದಯಮಾಡು ದೇವಿ ||ಪಲ್ಲವಿ ||

ಶಶಿ ಮುಖದ ನಸು ನಗೆಯ ಬಾಲೆ 
ಎಸೆವ ಕರ್ಣದ ಮುತ್ತಿನ ಓಲೆ 
ನಸುವ ಸುಪಲ್ಲ ಗುಣಶೀಲೇ ದೇವಿ 
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು || ೧ ||

ಇಂಪು ಸೊಂಪಿನ ಚಂದ್ರ ಬಿಂಬೆ
ಕೆಂಪು ತುಟಿ ನಾಸಿಕದ ರಂಭೆ
ಜೋಂಪು ಮದನನ ಪೂರ್ಣ ಶಕ್ತಿ ಗೊಂಬೆ
ಸಂಪಿಗೆಯ ಮುಡಿದಿಟ್ಟ ವಿದ್ಯಾ || ೨ ||

ರವಿ ಕೋಟಿ ತೇಜ ಪ್ರಕಾಶೇ ಮಹಾ 
ಕವಿಜನ ಹ್ರಿತ್ಕಮಲ ವಾಸೇ 
ಅವಿರಳ ಪುರಿ ಕಾಗಿನೆಲೆಯಾದಿ 
ಕೇಶವನ
 ಸುತನಿಗೆ ಸನ್ನುತ ರಾಣಿವಾಸೆ || ೩ || 

Lyrics in English

Varava kodu enage vagdevi ninna
charana kamalangala dayamadu devi

shashi mukhada nasu nageya bale
eseva karnada muttina ole
nasuva supalla gunashile devi
bisajakshi enna hridayadouu nindu |

Impu sompina chandra bimbe kempu tuti naasikada rambhe jompu madanana purna shakti gombe sampigeya mudiditta vidyaa

Ravi koti teja prakashr maha
kavijana hritkamala vase
avirala puri kagineleyadi
keshavana
sutanige sannuta ranivase ||2||

Click the link to listen song. The song is rendered by Sri Ramakrishna Kaatukukke

ಕಂಡೆನಾ ಗೋವಿಂದನ / Kandenaa govindana

image from pinterest

ರಚನೆ : ಪುರಂದರದಾಸರು

ಕಂಡೆನಾ ಗೋವಿಂದನ ಗೋವಿಂದನ
ಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ || ಪ ||

ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ |
ಸಾಸಿರ ನಾಮದ ಶ್ರೀ ಹೃಷಿಕೇಶನ
ಶೇಷಶಯನ ನಮ್ಮ ವಸುದೇವ ಸುತನ || 1 ||

ಮಾಧವ ಮಧುಸೂದನ ಶ್ರೀ ಕೃಷ್ಣನ
ಯಾದವ ಕುಲ ಉದ್ಧಾರಕನ |
ವೇದಾಂತ ವೇದ್ಯನ ಇಂದಿರಾ ರಮಣನ
ಆದಿಮೂರುತಿ ಪ್ರಹ್ಲಾದ ವರದನಾ || 2 ||

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ಜನ ರಕ್ಷಕನ |
ಕರುಣಾಕರ ನಮ್ಮ ಪುರಂದರ ವಿಠಲ
ನೆರೆ ನಂಬಿ ದೆನು ಬೇಲೂರ ಚೆನ್ನಿಗನ || 3 ||

Lyrics in English

Kandenaa govindana govindana
pundarikaksha paandava paksha krishnanaa ||

Keshava naarayana sri krishnana
vaasudeva achuta anantana |
saasira naamada sri hrishikeshana
sheshashayana namma vasudeva sutana ||

Maadhava madhusoodana srikrishana |
yadhava kula udharakana |
vedanta vedyana indira ramanana |
adi muruti prahlada varadana ||

Purushottama narahari sri krishana
sharanaagata jana rakshakana
karunaakara namma purandara vittalana |
nere nambidenu belura chennigana ||

You can listen to the song here

ಧೂಪಾರತಿಯ ನೋಡುವ / Dhooparatiya noduva

ರಚನೆ : ಪುರಂದರದಾಸರು

ಧೂಪಾರತಿಯ ನೋಡುವ ಬನ್ನಿರೈ
ನಮ್ಮ ಗೋಪಾಲಕೃಷ್ಣ ದೇವರ ಪೂಜೆಯ || ಪ ||

ಅಗರು ಚಂದನ ಗಂಧ ಗುಗ್ಗುಳ ಸಾಂಬ್ರಾಣಿ
ಘಮಘಮಿಸುವ ಧೂಪಾರತಿಯ |
ಮಂದರಧಾರಗೆ ಇಂದಿರೆ ಪತಿ ನಮ್ಮ
ಕಂದರ್ಪ ಜನಕ ಮುಕುಂದನಿಗೆ || 1 ||

ಭೇರಿ ತಮಟೆ ತಾಳ ಮದ್ದಳೆ ಜಾಗಟೆ
ನಾನಾ ಪರಿಯ ವಾದ್ಯ ಘೋಷಂಗಳು |
ತೋರುವ ಧವಳ ಶಂಖ ತಾಳ ಕಹಳೆಗಳಿಂದ
ಮಾಧವ ಕೃಷ್ಣ ದೇವರ ಪೂಜೆಯ || 2 ||

ಪರತರ ಪರತತ್ವ ಪರಮಪಾವನಗೆ
ಪರಮ ಮಂಗಳ ಶುಭದಾಯಕಗೆ
ಪರಿಪೂರ್ಣ ಪರಬ್ರಹ್ಮ ಇಂದು ಶ್ರೀರಂಗಗೆ
ಪುರಂದರ ವಿಠಲ ದೇವರ ಪೂಜೆಯ || 3 ||

Lyrics in English.

The song is composed by Sri Purandaradaasaru

Dhooparatiya noduva bannirai
namma Gopalakrishna devara poojeya || pa ||

Agaru chandana gandha guggula saambraani
ghamaghamisuva dhooparatiya |
Mandaradhaarage Indire pati namma
kandarpa janaka Mukundanige || 1 ||

Bheri tamate taala maddale jaagate
naanaa pariya vaadya ghoshangalu |
Toruva dhavala shankha taala kahale galinda
Maadhava Krishna devara poojeya || 2 ||

Paratara paratatva parama paavanage
parama mangala shubha daayakage |
Paripoorna Parabrahma indu ShreeRangage
Purandara Vittala devara poojeya || 3 ||

Click the below link

ಈತನೀಗ ವಾಸುದೇವ / Eetaneega vasudeva

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ || ಅ.ಪ ||

ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ ಕತ್ತರಿಸುತಾ |
ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನ
ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ || 1 ||

ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ
ವೀರನೆಚ್ಚ ಎಸುಗೆ ಒಪ್ಪುದನ್ನು ಈಕ್ಷಿಸಿ |
ಧಾರುಣಿಯ ಪದದೊಳೌಕಿ ಚರಣ ಭಜಕ ನರನ ಕಾಯ್ದ
ಭಾರಕರ್ತನಾದ ದೇವ ಈತ ನೋಡಿರೋ || 2 ||

ವ್ಯೋಮಕೇಶನಿಪ್ಪದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ |
ಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿ ಕೇಶವನ್ನ ನೋಡಿರೋ || 3 ||

Lyrics in English

Song composed by sri Kanaka dasru

Eetaneega Vaasudevanu lokadodeya || pa ||

Eetaneega Vaasudeva ee samasta lokadodeya
daasagolidu teraneri teji pididu nadesidaata || a.pa ||

Danujeyaaldanannanayyana pitana munde kauravendrana
anujeyaalidavana shirava kattarisutaa |
Anujeyaalidavana benki muttadante kaayda Rukmana
anujeyaalidavana moortiyannu nodiro || 1 ||

Krooranaada Phanipa baana taranijanu nireekshisi aaga
veeraneccha esuge oppudannu eekshisi |
Dhaaruniya padadolauki charana bhajaka narana kaayda
bhaarakartanaada deva eeta nodiro || 2 ||

Vyomakeshanippadeseya aa mahaamahimeyulla
saamajavanu yeri baruva shaktiyaneekshisi |
Premadinda uravanoddi dingarigana kaayda
saarvabhouma badadaadi Keshavanna nodiro || 3 ||

You can listen the song in youtube link here. Its rendered by Putturu Narasimha Nayak. The song is composed by Kanakadaasaru.

ಎನ್ನಂಥ ಭಕ್ತರು ಅನಂತ / Enanta bhaktaru anantha

ಎನ್ನಂಥ ಭಕ್ತರು ಅನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲ
ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ ಭಿನ್ನೈಪೆ ನಿನ್ನ ಸಲಹೆಂದು || ಪ ||

ಪತಿತ ನಾನಾದರೂ ಪತಿತ ಪಾವನ ನೀನು ರತಿನಾಥ ಜನಕ ನಗಪಾಣಿ
ರತಿನಾಥ ಜನಕ ನಗಪಾಣಿ ನೀನಿರಲು ಇತರ ಚಿಂತ್ಯಾಕೊ ಎನಗಿನ್ನು || 1 ||

ಮನಗೊಳಗೆ ನೀನಿದ್ದು ಮನವೆಂದೆನಿಸಿಕೊಂಡು ಮನದ ವೃತಿಗಳನ್ನ ಸೃಜಿಸುವಿ
ಮನದ ವೃತ್ತಿಗಳನ್ನ ಸೃಜಿಸುವಿ ಸಂಕರ್ಷಣನೆ ನಿನ್ನ ಕರುಣಕ್ಕೆ ಎಣೆಗಾಣೆ || 2 ||

ನಾನಾ ಪದಾರ್ಥದೊಳು ನಾನಾ ಪ್ರಕಾರದಲ್ಲಿ ನೀನಿದ್ದು ಜಗವ ನಡೆಸುವಿ
ನೀನಿದ್ದು ಜಗವ ನಡೆಸುವಿ ಹರಿ ನೀನೆ ನಾನೆಂಬೋ ನನಗೆ ಗತಿಯುಂಟೆ || 3 ||

ಎನ್ನಪ್ಪ ಎನ್ನಮ್ಮ ಎನ್ನಯ್ಯ ಎನ್ನಣ್ಣ ಎನ್ನರಸ ಎನ್ನ ಕುಲದೈವ
ಎನ್ನರಸ ಎನ್ನ ಕುಲದೈವ ಇಹಪರದಿ ಎನ್ನ ಬಿಟ್ಟಗಲದೇ ಇರು ಕಂಡ್ಯ || 4 ||

ಏಸೇಸು ಜನ್ಮದಲಿ ದಾಸನಾ ನಿನಗಯ್ಯ ಈಶ ನೀನೆಂಬೋ ನುಡಿಸಿದ್ಧ
ಈಶ ನೀನೆಂಬೋ ನುಡಿಸಿದ್ಧ ವಾಗಿರಲುದಾಸೀನ ಮಾಡಲುಚಿತಲ್ಲ || 5 ||

ಆಶೆಯೊಂದುಂಟು ಸರ್ವೇಶಾ ವಿಜ್ಞಾಪಿಸುವೆ ವಿಶ್ವಂಭರಾಭಾಗ್ಯ ಸತಿಮೋಹ
ವಿಶ್ವಂಭರಾಭಾಗ್ಯ ಸತಿಮೋಹ ತಪ್ಪಿಸಿ ನೀ ಸಲಹಬೇಕೋ ದಯದಿಂದ || 6 ||

ಅನಾಥ ಬಂಧು ಜಗನ್ನಾಥ ವಿಠ್ಠಲ ಪ್ರಪನ್ನ ಪರಿಪಾಲ ಮಾಲೋಲ
ಪ್ರಪನ್ನ ಪರಿಪಾಲ ಮಾಲೋಲ ಅರಿ ಪಾಂಚಜನ್ಯ ಧೃತಪಾಣಿ ಸಲಹೆಮ್ಮ || 7 ||

Lyrics in English,

composed by Jagannatha daasaru

Ennantha bhaktaru ananta ninagiharu ninna swaami enagilla
ninnantha swaami enagilla adarinda bhinnaipe ninna salahendu || pa ||

Patita naanaadaru patita paavana neenu ratinaatha janaka nagapaani
Ratinaatha janaka nagapaani neeniralu itara chintyaako enaginnu || 1 ||

Manadolage neeniddu manavendenisikondu manada vruttigalanna srujisuvi
Manada vruttigalanna srujisuvi Sankarshanane ninna karunakke enegaane || 2 ||

Naanaa padaarthadolu naanaa prakadalli neenidu jagava nadesuvi
Neeniddu jagava nadesuvi Hari neene naanembo nanage gatiyunte || 3 ||

Ennappa ennamma ennayya ennanna ennarasa enna kuladaiva
Ennarasa enna kuladaiva ihaparadi enna bittagalade iru kandya || 4 ||

Yesesu janmadali daasanaa ninagayya eesha neenembo nudisiddha
Eesha neenembo nudisiddha vaagiraludaaseena maadaluchitalla || 5 ||

Aasheyonduntu sarveshaa vijnaapisuve vishwambharaabhaagya satimoha
Vishwambharaabhaagya satimoha tappisi nee salahabeko dayadinda || 6 ||

Anaatha bandhu Jagannatha Vittala prapanna paripaala maalola
Prapanna paripaala maalola ari paanchajanya dhrutapaani salahemma || 7 ||

You can listen to the song here

ಗುರುವಿನ ಗುಲಾಮನಾಗುವ ತನಕ/ Guruvina gulaamanaaguva tanaka

ರಚನೆ : ಪುರಂದರದಾಸರು

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ |
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ ||

ಆರು ಶಾಸ್ತ್ರವನೋದಿದರಿಲ್ಲ
ನೂರಾರು ಪುರಾಣವ ಮುಗಿಸಿದರಿಲ್ಲ
ಸಾರನ್ಯಾಯಕಥೆ ಕೇಳಿದರಿಲ್ಲ
ಧೀರನಾಗಿ ತಾ ಬೇಡಿದರಿಲ್ಲ ||

ನಾರಿಯ ಭೋಗ ಅಳಿಸಿದರಿಲ್ಲ
ಶರೀರಕೆ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರವಿಠಲ
ಸೇರಿಕೊಂಡು ತಾ ಬೆಳೆಯುವ ತನಕ ||

Lyrics in English

Guruvina gulamanaguva tanaka doreyadanna mukuti

paripari shastravanodidarenu vyarthavayitu bhakuti ||

Aru shastravanodidarilla |
nuraru puranava mugisidarilla |
saranyayakathe kelidarilla |
dhiranagi ta bedidarilla ||1||

Nariya bhoga alisidarilla |
sharirake sukhava bidisidarilla |
naradavarada purandaravithalana
serikomdu ta beleyuva tanaka ||2||

song by Vidyabhushana Theertha Swamiji

ದೇವ ಬಂದ ನಮ್ಮ ಸ್ವಾಮಿ / Deva banda namma swami

ದೇವ ಬಂದ ನಮ್ಮ ಸ್ವಾಮಿ ಬಂದನೊ
ದೇವರ ದೇವ ಶಿಖಾಮಣಿ ಬಂದನೊ ||ಪ||

ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದನೊ ||ಅ.ಪ||

ಮಂದರೋದ್ದರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೊ ||1||

ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದನೊ||2||

ಪಕ್ಷಿವಾಹನ ಬಂದ ಲಕ್ಷ್ಮೀರಮಣ ಬಂದ
ಅಕ್ಷಯ ಫಲದ ಲಕ್ಷ್ಮಣಾಗ್ರಜ ಬಂದನೊ ||3||

ನಿಗಮಗೋಚರ ಬಂದ ನಿತ್ಯತೃಪ್ತನು ಬಂದ
ನಗೆಮುಖ ಪುರಂದರವಿಠಲ ಬಂದನೊ||4||

Lyrics in English

Composer : Sri Purandara dasaru

Deva banda namma swaami bandano
devara deva shikaamani bandano

uraga shayana banda garuda gamana banda
nara golidava banda naaraayana banda |1|

mandarodhara banda garuda gamana banda
brindavana pathi govinda bandano |2|

nakraharanu banda chakradharanu banda
aakruragolida tivikrama bandano |3|

pakshivaahana banda lakshmanagraja banda
akshaya phala da Sree lakshmiramana bandano |4|

nigama gochara banda nitya truptanu banda
nagemukha purandara vithala bandano |5|

Click the link to listen song by Upendra bhat

ಶ್ರೀ ಗಣೇಶ ಪಂಚರತ್ನ ಸ್ತೋತ್ರಂ / Shri Ganesh pancharatna stotram

ರಚನೆ : ಶ್ರೀ ಶಂಕರಾಚಾರ್ಯರು

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್ |
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ |
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್ |
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ ||೧||

ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಮ್ |
ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್ |
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಮ್ |
ಮಹೇಶ್ವರಂ ತಮಾಶ್ರಯೆ ಪರಾತ್ಪರಂ ನಿರಂತರಮ್ ||೨||

ಸಮಸ್ತ ಲೋಕ ಶಂಕರಂ ನಿರಸ್ತ ದೈತ್ಯ ಕುಂಜರಮ್ |
ದರೇತರೋದರಂ ವರಂ ವರೇಭ ವಕ್ತ್ರಮಕ್ಷರಮ್ |
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಮ್ |
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ||೩||

ಅಕಿಂಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಮ್ |
ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಮ್ |
ಪ್ರಪಂಚನಾಶ ಭೀಷಣಂ ಧನಂಜಯಾದಿ ಭೂಷಣಮ್ |
ಕಪೋಲ ದಾನವಾರಣಂ ಭಜೇ ಪುರಾಣ ವಾರಣಮ್ ||೪||

ನಿತಾಂತಕಾಂತ ದಂತಕಾಂತಿಮಂತಕಾಂತಕಾತ್ಮಜಮ್ |
ಅಚಿಂತ್ಯ ರೂಪಮಂತಹೀನ ಮಂತರಾಯ ಕೃಂತನಮ್ |
ಹೃದಂತರೆ ನಿರಂತರಂ ವಸಂತಮೇವ ಯೋಗಿನಾಮ್ |
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ ||೫||

ಮಹಾಗಣೇಶ ಪಂಚರತ್ನಮಾದರೇಣ ಯೋನ್ವಹಮ್ |
ಪ್ರಜಲ್ಪತಿ ಪ್ರಭಾತಕೆ ಹೃದಿ ಸ್ಮರನ್ ಗಣೇಶ್ವರಮ್ |
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಮ್ |
ಸಮಾಹಿತಾಯು ರಷ್ಟಭೂತಿಮಭ್ಯುಪೈತಿ ಸೋಚಿರಾತ್ ||

**************************

Shri Ganesha Pancharatna Stotra written by Shree Adi Shankaracharya and sung by M.S. Subbalaxmi

Mudakaratta modakam sada vimukti sadhakam |
kaladharavatamsakam vilasiloka rakshakam |
anayakaika nayakam vinasiteba daityakam |
natasubasu nasakam namami tam vinyakam ||1||

Natetarati bikaram navoditarka basvaram |
namatsurari nirjaram natadhikapaduddharam |
suresvaram nidhisvaram gajesvaram ganesvaram |
mahesvaram tamasraye paratparam nirantaram ||2||

Samasta loka Shakaram nirasta daitya kunjaram |
daretarodaram varam vareba vaktramakSharam |
krupakaram kshamakaram mudakaram yashaskaram |
manaskaram namaskrutam namaskaromi bssvaram ||3||

akinchanarti marjanam chirantanokti bajanam |
purari purva nandanam surari garva charvanam |
prapanchanasha bishanam dhananjayadi bushamam |
kapola danavaranam Baje purana varanam ||4||

nitantakanta dantakantimantakantakatmajam |
achintya rupamantahina mantaraya kruntanam |
hrudantare nirantaram vasantameva yoginam |
tamekadantameva tam vichintayami santatam ||5||

Mahaganesha pancharatnamadarena yonvaham |
prajalpati prabatake hrudi smaran ganesvaram |
arogatamadoshatam susahitim suputratam |
samahitayu rashtabutimabyupaiti sochirat ||

Click the link to listen song by M.S.Subbalaxmi

ಯಾಕೆ ಮೂಕನಾದೆ ಗುರುವೇ / Yaake mookanade guruve

ರಚನೆ : ಜಗನಾಥದಾಸರು

ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।
ಯಾಕೆ ಮೂಕನಾದೆ ಲೋಕಪಾಲಕ ಎನ್ನ ।
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।
ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ।
ಕಾಕುಜನರೊಳೆನ್ನ ನೂಕಿಬಿಟ್ಟು ನೀನು (/ನೀ) ॥ ೨ ॥

ಈಗ ಪಾಲಿಸದಿರೆ ಯೋಗಿಕುಲವರ್ಯ ।
ರಾಘವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ ॥ ೩ ॥

ನಿನ್ನಂಥ ಕರುಣಿಯಿಲ್ಲ ಎನ್ನಂಥ ಕೃಪಣಿಯಿಲ್ಲ ।
ಘನ್ನಮಹಿಮ ನೀ ಎನ್ನನು ಬಿಟ್ಟೀಗ ॥ ೪ ॥

ಜನನಿಯು ನೀ ಎನ್ನ ಜನಕನಯ್ಯ ।
ಮನ್ನಿಸೊ ನೀ ನಿತ್ಯಾನನ್ಯ ಶರಣನೆ (/ಶರಣ್ಯ) ॥ ೫ ॥

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೋ ।
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೋ ॥ ೬ ॥

ನಾಥನು ನೀ ಅನಾಥನು ನಾನಯ್ಯ ।
ಪಾತಕರರಿ ಜಗನ್ನಾಥವಿಠ್ಠಲದೂತ (/ಜಗನ್ನಾಥವಿಠ್ಠಲದಾಸ) ॥ ೭

Lyrics in English

Composer : Jagannatha daasaru

Yaake mookanaadyo guruve nee yaakemookanaadyo ||
yaake mookanaade lokapaalaka enna
saakuvaraaryayya srikara raghavendra || yaake ||

Hindakke nee enna munde sulidaadidi |
mandiyolage nee enna mandanna maadidyallo ||

Bekaagadiddarinyake kaiyannu pidide |
kaakujanarolenna nooki bittu neenu ||

Eega palisadire yogikulavarya |
raghavendrane bhava saaguvadyangahayya ||

Ninnatha karuniyilla ennantha krupaniyilla |
ghannamahima nee ennanu bitteega ||

Jananiyu nee enna janakanayya |
manniso neenityanana sharanane ||

Endigaadaro nee pondikondavanallo |
endu nee kai bittarenna munde kaayuvaryaaro ||

Naathanu nee anaathanu naanayya |
paatakarari jaganaathavittaladaasa ||

Click the link to listen the beautiful song by pt. Bhimsen joshi