ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ / Yaake bagila hakiruve kokileshwari

ರಚನೆ : ಶ್ರೀ ವಾದಿರಾಜರು
ಅಂಕಿತ : ಹಯವದನ
ಹಾಡು : ಯಾಕೆ ಬಾಗಿಲ ಹಾಕಿರುವೆ

ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ || ಪ. ||
ಆರು ನಾನರಿಯೆ ನೀ ಸರಿರಾತ್ರಿಯಲಿ ಬಂದೀ || ಅ.ಪ. ||

ನೀರೊಳು ಮುಳುಗಿ ನಿಗಮಚೋರನ ಕೊಂದ ನೀರಜಾಕ್ಷನೆ ಭಾಮೆ ನಾನು
ನಾರುವ ಮೈಯ್ಯ ಎನ್ನೊಳು ತೋರದೆ ಸಾರಿ ದೂರ ನೀ ಪೋಗೋ ರಂಗ ||೧||

ಮಂದರಗಿರಿಯನು ಬೆನ್ನೊಳಗಿಟ್ಟ೦ತ ಸುಂದರವದನನೇ ಭಾಮೆ ನಾನು
ಇಂದು ನಿನಗೆ ತಕ್ಕ ಭಾರಂಗಳಿಲ್ಲವಯ್ಯ ಸಿಂಧುವಿನೊಳಗೆ ಪೋಗೋ ರಂಗ || ೨ ||

ಧರಣಿಗೆ ಸುಖವನು ನೀಡಿದ ಸೂಕರ ಪರಮಪುರುಷನೇ ಭಾಮೆ ನಾನು
ವರಾಹರೂಪವು ನಿನ್ನ ಘುರುಘುರು ಶಬ್ದವು ಅರಿವೆ ನೀನಿಲ್ಲಿಂದ ಪೋಗೋ ರಂಗ || ೩ ||

ಬಾಲನ ತಾಪವ ಲೀಲೆಯಿಂದರಿತನ ನಾರಸಿಂಹನೆ ಭಾಮೆ ನಾನು
ಮೇಲಿದ್ದ ವಸನವು ಕ್ರೂರ ಕಾರ್ಯಾಂಗಳಲ್ಲ ಕಂಡ೦ಜುವವಳಲ್ಲ ಪೋಗೋ ರಂಗ ||೪||ghhhhnb

ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾನು
ಕೂಸಿನ ರೂಪದಿ ಮೋಸ ಮಾಡಿದವಗೆ ದಾಸಿ ಇನ್ನೊಬ್ಬಳು ಏಕೋ ರಂಗ||೫||

ತಾತನ ಮಾತಿಗೆ ಮಾತೆಯ ತರಿದಂತ ಖ್ಯಾತಭಾರ್ಗವನು ನಾನೇ
ಮಾತೆಯ ತರಿದ ಪಾತಕಿ ನಿನಗಿನ್ನು ದೂತಿ ಇನ್ನೊಬ್ಬಳು ಏಕೋ ರಂಗ ||೬||

ದಶರಥನಂದನ ದಶಮುಖ ಭಂಜನ ಪಶುಪತಿವಂದ್ಯನೆ ಭಾಮೆ ನಾನು
ಹಸನಾದ ಏಕಪತ್ನಿವ್ರತದೊಳಿರುವ ನಿನಗೆ ಹೊಸಕನ್ನಿಕೆಯರು ಏಕೋ ರಂಗ ||೭||

ಹದಿನಾರು ಸಾಸಿರ ನೂರೆಂಟು ಸುದತಿಯರ ಬದಿಯಲ್ಲಿದ್ದವನೆ ಭಾಮೆ ನಾನು
ಕದನಕ್ಕೆ ಬೇರಿನ್ನು ಮಾರ್ಗಂಗಳಿಲ್ಲವಯ್ಯ ವದನ ಮುಚ್ಚಿಕೊಂಡು ಪೋಗೋ ರಂಗ ||೮||

ಬೌದ್ಧರ ಕುಲದಲ್ಲಿ ಹುಟ್ಟಿ ದಾನವರ ಮುಗ್ಧರ ಮಾಡಿದೆ ಭಾಮೆ ನಾನು
ಬುದ್ಧ ವಚನಂಗಳು ಎನ್ನಲಿ ಪೇಳಲು ವೃದ್ಧನಾರಿ ನಾನಲ್ಲ ಪೋಗೋ ರಂಗ ||೯||

ವರತುರಗವನೇರಿ ಧರೆಯನು ಚರಿಸಿದ ದೊರೆವೀರ ನೋಡೆ ಭಾಮೆ ನಾನು
ಕುದುರೆಯ ಚಾಕರಿಯೊಳಿರುವವಗೆ ಇನ್ನು ಯುವತಿಯ ಸುಖವಿನ್ನೆಂತೋ ರಂಗ ||೧೦||

ಸರ್ವಪ್ರಾಣಿಗಳನ್ನು ಉದರದಲ್ಲಿಟ್ಟುಕೊಂಡು ಶರಧಿಯೊಳ್ ಮಲಗಿದೆ ಭಾಮೆ ನಾನು
ದೊರೆ ಹಯವದನನ ಚರಣಕೆ ಎರಗುತ ತೆಗೆದಳು ಬಾಗಿಲ ಭಾಮೆ ಆಗ ತೆಗೆದಳು ಬಾಗಿಲ ಭಾಮೆ ||೧೧||

Lyrics in English

Yake bagila hakiruve kokileshwari vani ||pa||
aru naanariye nee sariratriyali bandi ||a.pa||

Neerolu mulugisu nigamachorana konda neerajakshane bhame Nanu |
baruva maiyya ennolu torade sari doors nee pogo Ranga ||1||

Madarangiyanu bennolagittanta bhame Nanu
indu ninage takka bharangalillavayya sindhuvinolage pogo Ranga ||2||

Dharanige sukhavanu needida sookara paramapurushane bhame Nanu
varaharoopavu Ninna ghurughuru shabdhavu Arive neenillinda pogo Ranga ||3||

Balana tapavu leeleyindaritana narasimhane bhame nanu
melidda vasanavu kroora karyangalalla kandanjuvavalalla pogo Ranga ||4||

Vasavananujane vamanaroopane nasharahitane bhame Nanu |
koosina roopadi mosa madidavage dasi innobbalu eko ranga ||5||

Tatana matige mateya taridanta khyatanu bhargavanu name |
mateya tarida Pataki ninaginnu dooti innobbalu eko ranga ||6||

Dashrathanandana dashamukha bhanjana pashupativandyane bhame Nanu |
hasanada ekapatnivrutadoliruva ninage hosakannikeyaru eko ranga ||7||

Hadinaru sasira noorentu sudatiyara badiyalliddavane bhame Nanu |
kadanakke berinnu margangalillavayya vadana mucchikondu pogo Ranga ||8||

Bouddhara kuladalli hutti danavara mugdhara madise bhame |
Buddha vachanangalu ennali pelalu vrudhanari nanalla pogo Ranga ||9||

Varaturagavaneri dharyanu charisida doreveera node bhame Nanu |
kudureya chakariyoliruvavage innu yuvatiya sukhavinnento Ranga ||10||

Sarva pranigalannu pranigalannu udaradalittukondu sharadhiyol malagide bhame Nanu |
dore hayavadana charanakke eraguta tegedalu bagila bhame aaga tegedalu bagila bhame ||11||

ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವ / Sharaṇu Ninna Charana kamalagalige


ದಾಸರು : ಶ್ರೀ ಪ್ರಾಣೇಶ ದಾಸರು….
ಅಂಕಿತ : ಪ್ರಾಣೇಶ ವಿಠ್ಠಲ.

ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವ |
ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವಶಿವ ||ಪ||

ದಂತಿ ಚರ್ಮ ಹೊದ್ದ ಭಸ್ಮಭೂಷ ಶಿವಶಿವ |
ಚಿಂತಿರಹಿತ ಲಯಕೆ ಕರ್ತೃನಾದ ಶಿವಶಿವ ||
ಸಂತರಿಂದ ಸತತ ಸೇವೆಗೊಂಬ ಶಿವಶಿವ |
ಕಂತುಪಿತನ ಪೂರ್ಣ ಪ್ರೀತಿಪಾತ್ರ ಶಿವಶಿವ ||೧||

ಮಂದಮತಿಯ ತಪ್ಪನೆಣಿಸಬ್ಯಾಡ ಶಿವಶಿವ |
ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವಶಿವ ||
ಮಂದಗಮನೆ ನಿನ್ನ ಮನದೊಳಿಲ್ಲೆ ಶಿವಶಿವ |
ತಂದುಕೊಂಡ ದಕ್ಷ ವೃಥಾ ಕುವಾರ್ತಿ ಶಿವಶಿವ ||೨||

ಹೀನರಂತೆ ನಿನಗೆ ಕೋಪ ಸಲ್ಲ ಶಿವಶಿವ |
ಮಾಣು ಯಜ್ಞ ಸಹಯನಾಗು ದಯದಿ ಶಿವಶಿವ ||
ಏನುಪಾಯ ಇದಕೆ ಚಿಂತಿಸುವದು ಶಿವಶಿವ |
ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವಶಿವ ||೩||

Lyrics in English

Sharaṇu Ninna Charana kamalagalige shivashiva
karyava pididu sumatiyittu poreye shivashiva ||pa||

Danti charma hodda bhasmabhusha shivashiva |
chintirahita layake kartrunada shivashiva |
santarinda Satata sevegomba shivashiva |
kantupitana poorna preetipatra shivashiva ||

Mandamatiye tappanenisabyada shivashiva |
kundu ninage endigendigilla shivashiva |
mandagamane Ninna manadolille shivashiva |
tandukonda daksha vrutha kuvarti shivashiva ||

Heenarante ninage kopa salla shivashiva |
maanu yajna sahayanagu dayadi shivashiva |
enupaya idake chintisuvudu shivashiva |
pranesha vittala Ninna vashadolihanu shivashiva ||


ಸೋಜುಗದ ಸೂಜಿ ಮಲ್ಲಿಗೆ / Sojugada sooju mallige

ಸೋಜುಗದ ಸೂಜಿ ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ ||ಸೋಜುಗಾದ ||

ಅಂದಾವರೆ ಮುಂದಾವರೆ
ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ,ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿದಳವ
ಮಾದಪ್ಪ ಪೂಜೆಗೆ ಬಂದು, ಮಾದೇವ ನಿಮ್ಮ    ||ಸೋಜುಗಾದ||

ತಪ್ಪಾಳೆ ಬೆಳಗಿವ್ನಿ ತುಪ್ಪವ ಕಾಯ್ಸಿವ್ನಿ
ಕಿತ್ತಾಳೆ ಹಣ್ಣ ತಂದಿವ್ನಿ, ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದಿವ್ನಿ ಮಾದಪ್ಪ
ಕಿತ್ತಡಿ ಬರುವ ಪರಸೆಗೆ ಮಾದೇವ ನಿಮ್ಮ    ||ಸೋಜುಗಾದ ||

ಬೆಟ್ಟ್ಹತ್ಕೋಂಡ್  ಹೋಗೋರ್ಗೆ
ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿಯೆಂದು
ಮಾದೇವ ನೀವೆ  ||೩||  ||ಬೆಟ್ಟ್ಹತ್ಕೋಂಡ್||
ಬೆಟ್ಟದ್ಮಾದೇವ ಗತಿಯೆಂದು ಅವರಿಂದು
ಹಟ್ಟಿ ಹಂಬಲವ ಮರೆತಾರೋ
ಮಾದೇವ ನಿಮ್ಮ     ||ಸೋಜುಗಾದ ||

Lyrics in English

Sojugada sooju mallige
madeva nimma mande myale
dundu mallige || Sojugada ||

Andavare mundavare
matte tavare pushpa
chandakki male bilpatre madeva nimge
chandakki male bilpatre tulasidalava
madappa poojege bandu, madeva nimma || Sojugada ||

Tappale belagivni tuppava kaysivni
kittale Hanna tandivni, madeva nimge
kittale Hanna tandivni madappa
kittadi baruva parasege madeva nimma || Sojugada ||

Betthatkond hogorge
hatti hambalavyaka
bettadmadeva gatiyendu
madeva Neene ||
bettadmadeva gatiyendu varindu
hatti hambalava maretaro
madeva nimma || Sojugada ||


ಯಾರಿಗೆ ದೂರುವೆನೊ ಹೇ ಶ್ರೀನಿವಾಸ / Yarige dooruveyo he shrinivasa

ಯಾರಿಗೆ ದೂರುವೆನೊ ಹೇ ಶ್ರೀನಿವಾಸ
ಯಾರೆನ್ನ ಸಲಹುವರೋ||ಯಾರಿಗೆ||
ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ||2||
ವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ||ಯಾರಿಗೆ||

ಕಷ್ಟ ಜನ್ಮಕೆ ಬಂದೆನೊ, ಧಾರುಣಿಯೊಳು
ದುಷ್ಟರಿಂದಲಿ ನೊಂದೆನೋ…||ಕಷ್ಟ||
ನಿಷ್ಠುರ ಬೇಡವೋ ನಿನ್ನ ನಂಬಿದ ಮೇಲೆ||2||
ಸ್ರಷ್ಠಿಗೊಡೆಯ ಎನ್ನ ಬಿಟ್ಟು ಕಳೆಯಬೇಡ   ||ಯಾರಿಗೆ||

ಹಿಂದೆ ಮಾಡಿದ ಕರ್ಮವು ಇ ಭವದೊಳು
ಮುಂದಾಗಿ ತೋರುತಿದೆ||ಹಿಂದೆ||
ಇನ್ನೇನು ಗತಿಯದರಿಂದ ನೊಂದೆನು ನಾನು||2||
ಮಂದರಧರ ಗೋವಿಂದ ನೀನಲ್ಲದೆ ||ಯಾರಿಗೆ||

ಹಲವು ಪರಿಯ ಕಷ್ಟವ ,ನಿನ್ನಯ ಪಾದ
ಜಲಜದ ಕರುಣದಲೀ…||ಹಲವು||
ಸುಲಿಗೆಕೊಟ್ಟೆನೊ ನಾನು ಸೂರೆಗಾರರಿಗೆಲ್ಲ||2||
ಒಲವಾಗು ಎನ್ನೊಳು ಪುರಂದರವಿಠ್ಠಲ
                                       ||ಯಾರಿಗೆ||

Lyrics in english

Yarige dooruveyo he shrinivasa
yarenna salahuvaro ||
sarida Bhakta samsara ninnaya pada
varijavanu toro karunyake Nidhi bega || yarige ||

Kashta janmakke bandeno dharuniyolu
dushtarindali nondeno …..||
nishtura bedavo bedavo Ninna nambida mele
srushtigodeya Enna bittu kaleyabeda || yarige ||

Hinde maḍida karmavu e bhavadolu
mundagi torutide ||
innenu gatiyadarinda nondeno nanu
mandaradhara Govinda neenallade || yarige ||

Halavu pariya kashtavu ninnaya pada
jalajada karunadali …… ||
sulige kotteno Nanu sooregararigella
olavagu ennolu Purandara vittala || yarige ||

ತುಂಗಾತೀರದಿ ಕಂಗೊಳಿಸುವ ಮುನಿ / Tungateeradi kangolisuva muni

ತುಂಗಾತೀರದಿ ಕಂಗೊಳಿಸುವ ಮುನಿ
ಪುಂಗವ ರಾಯರ ನಯನದಿ ನೋಡೆ ||ತುಂಗಾ||
ಮನದಿ ಕೊಂಡಾಡೆ ವರಗಳ ಬೇಡೆ

ಆದಿಯುಗದಿ ಪ್ರಹ್ಲಾದನೆನಿಸಿ
ಕಯಾದುವಿನುದರದಿ ಜನಿಸುತಲಿ ||ಆದಿ||
ವಾದಿಸಿ ಪಿತನೊಲು ಮಾಧವ ಪರನೆಂದು
ಮೋದದಿ ಸ್ತಂಭದಿ ತೋರಿದ ಧೀರನೆ  ||ತುಂಗಾ||

ಅದ್ವೈತಾಟದಿ ದಧ್ವಕ್ರತಾನಲ
ಮಧ್ವಮತದ್ವಿಜ ಭೀಷಣನನೆಂದೆನಿಸಿ  ||ಅದ್ವೈತ||
ಸದ್ವೈಷ್ಣವರುಧ್ಧಾರಕನಾದ ಪ್ರಸಿದ್ಧ
ವ್ಯಾಸ ಕರ್ಮಂದ್ರಿಕುಲೇಂದ್ರನ     ||ತುಂಗಾ||

ಧರಣಿತಲದಿ ರಾಘವೇ೦ದ್ರ ಸುನಾಮದಿ
ಮರಳಿ ಜನಿಸಿ ದಿವ್ಯಪರಿಮಳ ರಚಿಸಿ   ||ಧರಣಿ||
ಕರುಣದಿ ದ್ವಿಜರಿಗೆ ಎರೆದ ಪೊರೆದಗುರು
ಮರುತಾವೇಷದ ದೇವ ಸ್ವಭಾವಣೆ ||ತುಂಗಾ||

ಸ್ವಾಂತದಿ ಭಜಿಪರ ಚಿಂತಿಯ ಕಲೆಯಲು
ಚಿಂತಾಮಣಿಯಂತೆ ಸಂತತ ಸಖಿಯೆ ||ಸ್ವಾಂತದಿ||
ಮಂತ್ರನಿಕೇತನ ಕ್ಷೇತ್ರದಿ ಸ್ಥಿರವಾಗಿ
ನಿಂತ ಪರಮ ಸುಶಾಂತ ಮೂರುತಿ ||ತುಂಗಾ||

ವಂದಿಸಿ ತಪಿಸುವ ವಂದಾಂದಕರಿಗೆ
ಕಂದಾರಕ್ಷಿಗಳು ಕರುಣಿಸುತಿಹರೆ ||ವಂದಿಸಿ||
ಇಂದುಧರಾಮರ ಸನ್ನುತಶ್ಯಾಮ
ಸುಂದರ ವಿಠ್ಠಲ
ನ ದಾಸೋತ್ತಮರೆ  ||ತುಂಗಾ||

Lyrics in English

Tungateeradi kangolisuva muni
punyava rayana nayanadi node || Tunga ||
manadi kondade varagala bede

Adiyugadi prahladaneniside
kayaaduvinudaradi janisutali ||
vaadisi pitanolu madhava paranendu
modadi stambhadi torida dhirane || Tunga ||

Advaitatadi dadhvakrataanala
madhwa matadwija bhishananendenisi ||
sadvaishnavaruddharakanada prasiddhi
Vyasa karmendrikulendrana || Tunga ||

Dharanitaladi Raghavendra sunamadi
marali janisi divya parimala rachisi ||
Karunadi dwijarige ereda poredu guru
maruta veshada deva swabhavane || Tunga ||

Swaantadi bhajipara chinteya kaleyalu
chintamaniyante santata sankhye ||
mantra niketana kshetradi stiravagi
ninta parama sushanta muruti || Tunga ||

Vandisi tapisuva vandandakarige
kandararakshigalu karunisutihare ||
indudharamara sannuta shyama
sundara vittala
na dasottamare || Tunga ||