
ತುಂಗಾತೀರದಿ ಕಂಗೊಳಿಸುವ ಮುನಿ
ಪುಂಗವ ರಾಯರ ನಯನದಿ ನೋಡೆ ||ತುಂಗಾ||
ಮನದಿ ಕೊಂಡಾಡೆ ವರಗಳ ಬೇಡೆ
ಆದಿಯುಗದಿ ಪ್ರಹ್ಲಾದನೆನಿಸಿ
ಕಯಾದುವಿನುದರದಿ ಜನಿಸುತಲಿ ||ಆದಿ||
ವಾದಿಸಿ ಪಿತನೊಲು ಮಾಧವ ಪರನೆಂದು
ಮೋದದಿ ಸ್ತಂಭದಿ ತೋರಿದ ಧೀರನೆ ||ತುಂಗಾ||
ಅದ್ವೈತಾಟದಿ ದಧ್ವಕ್ರತಾನಲ
ಮಧ್ವಮತದ್ವಿಜ ಭೀಷಣನನೆಂದೆನಿಸಿ ||ಅದ್ವೈತ||
ಸದ್ವೈಷ್ಣವರುಧ್ಧಾರಕನಾದ ಪ್ರಸಿದ್ಧ
ವ್ಯಾಸ ಕರ್ಮಂದ್ರಿಕುಲೇಂದ್ರನ ||ತುಂಗಾ||
ಧರಣಿತಲದಿ ರಾಘವೇ೦ದ್ರ ಸುನಾಮದಿ
ಮರಳಿ ಜನಿಸಿ ದಿವ್ಯಪರಿಮಳ ರಚಿಸಿ ||ಧರಣಿ||
ಕರುಣದಿ ದ್ವಿಜರಿಗೆ ಎರೆದ ಪೊರೆದಗುರು
ಮರುತಾವೇಷದ ದೇವ ಸ್ವಭಾವಣೆ ||ತುಂಗಾ||
ಸ್ವಾಂತದಿ ಭಜಿಪರ ಚಿಂತಿಯ ಕಲೆಯಲು
ಚಿಂತಾಮಣಿಯಂತೆ ಸಂತತ ಸಖಿಯೆ ||ಸ್ವಾಂತದಿ||
ಮಂತ್ರನಿಕೇತನ ಕ್ಷೇತ್ರದಿ ಸ್ಥಿರವಾಗಿ
ನಿಂತ ಪರಮ ಸುಶಾಂತ ಮೂರುತಿ ||ತುಂಗಾ||
ವಂದಿಸಿ ತಪಿಸುವ ವಂದಾಂದಕರಿಗೆ
ಕಂದಾರಕ್ಷಿಗಳು ಕರುಣಿಸುತಿಹರೆ ||ವಂದಿಸಿ||
ಇಂದುಧರಾಮರ ಸನ್ನುತಶ್ಯಾಮ
ಸುಂದರ ವಿಠ್ಠಲನ ದಾಸೋತ್ತಮರೆ ||ತುಂಗಾ||
Lyrics in English
Tungateeradi kangolisuva muni
punyava rayana nayanadi node || Tunga ||
manadi kondade varagala bede
Adiyugadi prahladaneniside
kayaaduvinudaradi janisutali ||
vaadisi pitanolu madhava paranendu
modadi stambhadi torida dhirane || Tunga ||
Advaitatadi dadhvakrataanala
madhwa matadwija bhishananendenisi ||
sadvaishnavaruddharakanada prasiddhi
Vyasa karmendrikulendrana || Tunga ||
Dharanitaladi Raghavendra sunamadi
marali janisi divya parimala rachisi ||
Karunadi dwijarige ereda poredu guru
maruta veshada deva swabhavane || Tunga ||
Swaantadi bhajipara chinteya kaleyalu
chintamaniyante santata sankhye ||
mantra niketana kshetradi stiravagi
ninta parama sushanta muruti || Tunga ||
Vandisi tapisuva vandandakarige
kandararakshigalu karunisutihare ||
indudharamara sannuta shyama
sundara vittalana dasottamare || Tunga ||
