ತನು ನಿನ್ನದು ಜೀವನ / Tanu ninnadu jeevana

ತನು ನಿನ್ನದು ಜೀವನ ನಿನ್ನದು
ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ


ಸವಿನುಡಿ ವೇದ ಪುರಾಣ ಶಾಸ್ತ್ರಂಗಳ
ಕಿವಿಗೊಟ್ಟು ಕೇಳುವ ಕಥೆ ನಿನ್ನದು
ನವಮೋಹನಾಂಗಿಯರ ರೂಪವನು
ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1||


ಒಡಗೂಡಿ ಗಂಧಕಸ್ತೂರಿ ಪರಿಮಳಂಗಳ
ಬಿಡದೆ ಲೇಪಿಸಿಕೊಂಬುವುದು
ನಿನ್ನದುಷಡುರಸದನ್ನಕ್ಕೆ ನಲಿದಾಡುವ
ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ ||2||


ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವ
ಕಾಯ ಪಂಚೇಂದ್ರಿಯಂಗಳು ನಿನ್ನವು
ಕಾಯಜಪಿತ ಕಾಗಿನೆಲೆಯಾದಿಕೇಶವರಾಯ
ನೀನಲ್ಲದೆ ನರರು ಸ್ವತಂತ್ರರೆ ||3||

Lyrics in English

Composer : Sri Kanakadasaru

Tanu ninnadu jeevana ninnadu ||p||

anudinadali baaho sukha dukha ninnadayya ||a.pa||

Savi nudi veda puraana shaastragala
Kivigottu keluva kathe ninnadu
Nava mohanaangera roopava kannali
Eve ikkade noduva nota ninnadayya ||1||

Vadagoodi gandha kasturi parimalangala
Bidade lepisikombuvadu ninnadu
Shadu rasadannakke nalidaaduva jivhe
Kadu ruchigondare aa ruchi ninnadayya ||2||

maaya paashada baleyolage silukiruvantha
Kaaya pancendriyangalu ninnavu
Kaaya japita kaagi neleyaadi keshava
Raaya neenallade nararu swatantrare ||3||


Sung by Sri Putturu Narasimha Nayak


ಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu

ಹರಿದಾಸರಿಗೆ ಭಗವಂತನನ್ನು ಎಷ್ಟು ಪರಿಪರಿಯಾಗಿ ಬಣ್ಣಿಸಿದರೂ ಸಾಲದು.ಅದರಲ್ಲೂ ಕೃಷ್ಣನ ಬಾಲ್ಯದ ಆಟೋಟ,ತುಂಟಾಟ, ರಂಪಾಟಗಳನ್ನು ಸಾವಿರಾರು ಕೃತಿ ಕೀರ್ತನೆಗಳಲ್ಲಿ ಬಣ್ಣಿಸಿದ್ದಾರೆ.ಅಂತಹ ಪುರಂದರದಾಸರ ಸುಪ್ರಸಿದ್ದ ರಚನೆ…
“ಗುಮ್ಮನ ಕರೆಯದಿರೆ|ಅಮ್ಮ ನೀನು ಗುಮ್ಮನ ಕರೆಯದಿರೆ…..”.


ಗುಮ್ಮನ ಕರೆಯದಿರೆ| ಅಮ್ಮ ನೀನು
ಗುಮ್ಮನ ಕರೆಯದಿರೆ ||ಪ||

ಸುಮ್ಮನೆ ಇದ್ದೇನು| ಅಮ್ಮಿಯ ಬೇಡೆನು|
ಮಮ್ಮು ಉಣುತೇನೆ ಅಮ್ಮ ಅಳುವುದಿಲ್ಲ ||ಅ||

ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ
ಕಣ್ಣು ಮುಚ್ಚುವುದಿಲ್ಲವೆ|
ಚಿಣ್ಣರ ಬಡಿಯೆನು|
ಅಣ್ಣನ ಬೈಯೆನು ಬೆಣ್ಣೆಯ ಬೇಡೆನು|
ಮಣ್ಣು ತಿನ್ನುವುದಿಲ್ಲ ||೧||

ಬಾವಿಗೆ ಹೋಗೆ ಕಾಣೆ| ಅಮ್ಮ ನಾನು ಹಾವಿನೊಳಾಡೆ ಕಾಣೆ|ಆವಿನ
ಮೊಲೆಯೂಡೆ| ಕರುಗಳ ಬಿಡೆ ನೋಡೆ|
ದೇವರಂತೆ ಒಂದು ಠಾವಿಗೆ ಕೂಡುವೆ ||೨||

ಮಗನ ಮಾತನು ಕೇಳುತ ಗೋಪೀದೇವಿ|
ಮುಗುಳುನಗೆಯ ನಗುತ ಜಗದೊಡೆಯ
ಶ್ರೀ ಪುರಂದರವಿಠಲನ ಬಿಗಿದಪ್ಪಿಕೊಂಡಳು ಮೋಹದಿಂದಾಗ ||೩|

Lyrics in English

Composer : Purandaradasaru

Gummana kareyadhire amma ninu
gummana kareyadhire
gummana kareyadhire amma ninu
gummana kareyadhire

summane idhenu ammiya bedenu
mammu unuthene amma aluvudhilla
gummana kareyadhire amma ninu
gummana kareyadhire

henugaliruvallige hogi
avara kanu muchuvudhillave
henugaliruvallige hogi
avara kannu muchuvudhillave
chinara badiyenu anana baiyenu
beneya bedenu manu thinnuvudhilla
gummana kareyadhire amma ninu
gummana kareyadhire

baavige hoge kaane amma naanu
haavinolade kaane
baavige hoge kaane amma naanu
haavinolade kaane
Avina moleyude karugala bide node
dhevaramthe ondhu taavige kuruve
gummana kareyadhire amma ninu
gummana kareyadhire

magana maathanu  kelutha gopidhevi
mugulu naguvu naguthaa
jagadhodeya shri puramdharavitalana
jagadhodeya shri puramdharavitalana
bigidhappikomdalu mohadhidhaaga
gummana kareyadhire amma ninu
gummana kareyadhire

*********************

Sung By Smt. S. Janaki and Sri Vidyabhushanaru

ಬಾರೋ ಕೃಷ್ಣಯ್ಯ ನಿನ್ನ ಭಕ್ತರ/ Baaro krishnayya ninna bhaktara

ರಚನೆ : ಕನಕದಾಸರು

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ. ||
ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ. ||

ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ
ಧಿಮಿ ಧಿಮಿ ಧಿಮಿರೆನುತ ಪೊಂಗೊಳಲನೂದುತ ಬಾರಯ್ಯ || ೧ ||

ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿರೆನುತ
ಪೊಂಗೊಳಲೂದುತ ಬಾರಯ್ಯ ಬಾರೋ ಕ್ರಿಷ್ಣಯ್ಯ || ೨ ||

ವಾಸ ಉಡುಪಿಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ
ದಾಸ ನಿನ್ನ ಪದ ದಾಸ ನಿನ್ನ ಪದ ದಾಸ ಸಲಹಲು ಬಾರಯ್ಯ || ೩ ||

Lyrics in English

Composer: Kanakadaasaru

Baaro krushnayya ninna bhaktara manegiga krushnayya || pa. ||
baro ninna mukha toro ninna sari yaro jagadhara shilane || a.pa. ||

anduge padagavu kalamduge kiru gejje dhim dhimi
dhimi dhimi dhimirenuta pongolalanuduta baarayya || 1 ||

kankana karadalli ponnumgura holeyuta kimkini kini kini kinirenuta
pongolaluduta barayya baro krishnayya || 2 ||

vasa udupili neleyadi keshavane dasa ninna pada dasa
dasa ninna pada dasa ninna pada dasa salahalu barayya || 3 ||


Sung by Sri Vidyabhushanaru and Master Rahul vellal

ಆವ ಕುಲವೋ ರಂಗ/ Ava kulavo ranga


ಆವ ಕುಲವೊ ರಂಗ ಅರಿಯಬಾರದು ||ಪ.||

ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆ
ಪಾರಿಜಾತದ ವೃಕ್ಷವ ಸತ್ಯಭಾಮೆಗೆ ತಂದಿತ್ತನಂತೆ ||ಅ.ಪ.||

ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆ
ತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ ||1||

ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆ
ಕಾಳಿಂಗನ ಹೆಡೆಯ ತುಳಿದು ಬಾಲೇರಿಗೊಲಿದ ದೇವನಂತೆ ||2||

ಗೊಲ್ಲತೇರ ಮನೆಗಳಲ್ಲಿ ಕಳ್ಳತನವ ಮಾಡಿದನಂತೆ
ಮೆಲ್ಲನೆ ಪೂತನಿ ಅಸುವ ಹೀರಿ ಬಲ್ಲಿದ ಕಂಸನ ಕೊಂದನಂತೆ ||3||

ಸರ್ಪ ತನ್ನ ಹಾಸಿಗೆಯಂತೆ ಪಕ್ಷಿ ತನ್ನ ವಾಹನವಂತೆ
ಸರ್ಪಭೂಷಣ ಮೊಮ್ಮಗನಂತೆ ಮುದ್ದುಮುಖದ ದೇವನಂತೆ ||4||

ತರಳತನದಿ ಒರಳನೆಳೆದು ಮರನ ಕೆಡಹಿ ಮತ್ತವರ
ಸಲಹಿದುರುಳ ರಕ್ಕಸರನು ಕೊಂದ ಚೆಲುವ ಹಯವದನನಂತೆ ||5|

Lyrics in English

Composed by Sri Vadirajaru

Āva kulavo raṅga ariyabāradu ||pa.||

Āva kulavendariyabāradu gōvukāva gollanante
pārijātada vr̥kṣava satyabhāmege tandittanante ||a.Pa.||

Gōkuladalli puṭṭidanante gōvaḷaroḍane āḍidanantetā
koḷalanūdi mr̥gapakṣṣigaḷa maruḷumāḍida dēvanante ||1||

kālalli śakaṭana oddanante gūḷiya komba kittanante
kāḷiṅgana heḍeya tuḷidu bālērigolida dēvanante ||2||

gollatēra manegaḷalli kaḷḷatanava māḍidanante
mellane pūtani asuva hīri ballida kansana kondanante ||3||

sarpa tanna hāsigeyante pakṣi tanna vāhanavante
sarpabhūṣaṇa mom’maganante muddu mukhada dēvanante ||4||

taraḷatanadi oraḷaneḷedu marana keḍahi mattavara
salahiduruḷa rakkasaranu konda celuva hayavadananante ||5||


Sung by Sri Anantraj mistry and Sri Vidyabhushanaru

ದುರ್ಗಾ ದೇವಿ ದುರಿತ ನಿವಾರಿಣಿ/ Durgadevi Durita nivarini

ದುರ್ಗಾ ದೇವಿ ದುರಿತ ನಿವಾರಿನಿ ದುಷ್ಟವಿಮರ್ದಿನಿ ಹೇ ಜನನಿ || 2 ||
ದೀನರ ಪೊರೆವ ದಯಾನಿಧಿ ದೇವಿ || 2 ||
ನಿನ್ನನೇ ನಂಬಿದೆ ನಾರಾಯಣಿ || 2 ||
|| ದುರ್ಗಾ ದೇವಿ ದುರಿತ ನಿವಾರಿನಿ ||

ಕಟೀಲು ಕ್ಷೇತ್ರದಿ ನಿಂತಿಹ ತಾಯೇ, ಕರುಣಾ ಸಿಂಧು ಕಾರ್ತ್ಯಾಯನೀ || 2 ||
ಕಾಮ ಸಂಹಾರಿಯ ಹೃದಯ ವಿಹಾರಿನಿ,
ಕಾಪಾಡು ದುರ್ಗಾ ಪರಮೇಶ್ವರಿ || 2 ||
|| ದುರ್ಗಾ ದೇವಿ ದುರಿತ ನಿವಾರಿನಿ ||

ಆದಿ ಶಕ್ತಿಯೇ ಆನಂದ ಭೈರವಿ, ಆದಿ ಅಂತ್ಯವು ನಿನಗಿಲ್ಲ ಶಾಂಭವಿ || 2 ||
ಮಾಯೆಯ ಮುಸುಕಲಿ ತೊಳಲುವ ನನಗೆ,
ಮುಕ್ತಿ ತೋರಿಸೆ ದುರ್ಗಾ ಪರಮೇಶ್ವರಿ || 2 ||
|| ದುರ್ಗಾ ದೇವಿ ದುರಿತ ನಿವಾರಿನಿ ||

ಕತ್ತಲು ಕವಿದಿಹ ಬಾಳಿಗೆ ರವಿ ನೀ, ಧರ್ಮವ ಪೊರೆವ ದಾಕ್ಷಾಯನಿ || 2 ||
ದಾರಿಯ ಕಾಣದೆ ಅಲೆದಿಹೆನಮ್ಮ,
ಕೈ ಹಿಡಿದು ನಡೆಸೆ ದುರ್ಗಾ ಪರಮೇಶ್ವರಿ || 2 ||
|| ದುರ್ಗಾ ದೇವಿ ದುರಿತ ನಿವಾರಿನಿ ||

Lyrics in English

Durgadevi durita nivarini dushta vimardhini he janani ||2||
dinara poreva dayanidhi devi ||2 ||
ninnane nambide narayani ||2|| durga||

Kateelu kshetradi nintiha taaye, karunaasindhu kaatyani ||2||
kaama samhaariya hrudaya nivarini, kaapadu durga parameshwari||2||

Aadi shaktiye ananda bhairavi, aadi antyavu ninagilla shambhavi||2||
maayeya musukali tolaluva nanage, mukti torise durga parameshwari||2||

Kattalu kavidiha baalige ravi nee, dharmava poreva daakshayani||2||
daariya kaanade aledihenamma,
kai hididu nadese durga parameshwari||2||


Sung by S.P. Balasubramanyam

ಕೈಲಾಸವಾಸ ಗೌರೀಶ ಈಶ / Kailaasavasa gowrisha

ರಚನೆ : ವಿಜಯ ದಾಸರು

ಕೈಲಾಸ ವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ||ಪ||

ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ|೧|

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ|೨|

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನುಕೊಡು ಶಂಭೋ|೩|

Composed by Vijaya dasaru.

Kailasavasa gaurisha isha
tailadhareyante manasu kodo hariyalli || pa ||

Ahoratriyali nanu anujaragraniyagi
mahiyolage charisideno mahadevane
ahibhudhanane enna avagunagala enisadale
vihita dharmadi vishnu bhakutiyanu kodo shambho || 1 ||

Manasu karanavalla papapunyakkella
analaksha ninna prerane yillade
danuja gajamada vairi danda pranama malpe
maniso I shirava sajjana charana kamaladali || 2 ||

Bhagirathidharane bhayava pariharisayya lesagi ni salaho satata sarvadeva
bhagavatajana priya vijaya vithalanghri
jagu madade bhajipa bhagyavanu kodo shambho || 3 ||


Sung by Pt.Bhimsen joshi

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ / Nammamma sharade uma maheshwari

ರಚನೆ : ಕನಕದಾಸರು

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ||ಪ||

ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮಯ ಗಣನಾಥನೆ ಅಮ್ಮಯ್ಯ ||ಅ.ಪ.||

ಮೋರೆ ಕಪ್ಪಿನ ಭಾವ ಮೊರದಗಲ ಕಿವಿ ಕೋರೆ ದಾಡೆಯವನ್ಯಾರಮ್ಮ
ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ಅಮ್ಮಯ್ಯ ||1||

ಉಟ್ಟ ದಟ್ಟಿಯು ಮತ್ತೆ ಬಿಗಿದುಟ್ಟ ಚಲ್ಲಣದ ದಿಟ್ಟ ತಾನಿವನ್ಯಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನೆ ಹೊಟ್ಟೆಯ ಗಣನಾಥನೆ ಅಮ್ಮಯ್ಯ||2||

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ
ಲೇಸಾಗಿ ಸುಜನರ ಸಲಹುವ ನೆಲೆಯಾದಿ ಕೇಶವನ ದಾಸ ಕಾಣೆ ಅಮ್ಮಯ್ಯ ||3||

Lyrics in English

This beautiful song composed by Sri Kanakadaasaru

Nammamma sharade uma maheshwari nimmolagihanyaramma||pa||

Kammagolana vairi suthanaada sondila hemmeya gananaathane||anu.pa||

Morekappina bhava moradagalada kivi koredadeyanyaramma||
Muru kannina sutha muriditta chandrana dhiratha gananaathane ammaiyya ||1||

Utta dattiyu bigidutta challanada dittathanivanyaramma||
Pattada raani parvathiya kumaranu hotteya gananaathane ammaiyya|2|

Raashi vidhyeya balla ramani hambalanolla bhashiganivanyaramma||
Lesaagi sujanara salahuva neleyaadi keshava dasa kane ammaiyya||3||


ವಿಶ್ವ ವಂದ್ಯ ಗಣಪತಿ/Vishwavandya Ganapathi

ವಿಶ್ವವಂದ್ಯ ವಿನಾಯಕನು ಪ್ರತಿಯೊಂದು ಕಾರ್ಯಸಾಧನೆಗೆ ಬೇಕಾಗುವ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳ ಮೂಲಾಧಾರವಾಗಿದ್ದಾನೆ. ಶ್ರೀ ಗಣೇಶನಿಗೆ ನಮಿಸುತ್ತಾ ನನ್ನ ಮೊದಲ ಲೇಖನವನ್ನು ಪ್ರಾರಂಭಿಸುತ್ತಿದ್ದೇನೆ

ಮೊದಲೊಂದಿಪೇ ನಿನಗೆ ಗಣನಾಥ / Modalondipe ninage gananatha

ಈ ಹಾಡು ಗಣೇಶನ ಅತ್ಯಂತ ಜನಪ್ರಿಯ ಭಕ್ತಿ ಗೀತೆ , ರಚನೆ ಶ್ರೀ ಲಕ್ಷ್ಮೀನಾರಾಯಣ ತೀರ್ಥರು

[ಅಂಕಿತ:ರಂಗವಿಠಲ]

ಮೊದಲೊಂದಿಪೆ ನಿನಗೆ ಗಣನಾಥ
ಬಂದ ವಿಘ್ನ ಕಳೆಯೋ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ ।।ಪ।।

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ
ಸಂದ ರಣದಲ್ಲಿ ಗಣನಾಥ ।।೧।।

ಮಾಧವನ ಆಜ್ಞೆಯಿಂದ ಧರ್ಮರಾಯ ಪೂಜಿಸಲು
ಸಾಧಿಸಿದ ರಾಜ್ಜ ಗಣನಾಥ ।।೨।।

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಪಾಲಿಸೊ ಗಣನಾಥ ।।೩।।

Ganesha is widely revered as the remover of obstacles, the patron of arts and sciences and the deva of intellect and wisdom. As the god of beginnings, he is honoured at the start of rites and ceremonies.  Ganesha is also invoked as patron of letters and learning during writing sessions.

This song is one of the popular devotional songs dedicated to Lord Ganesha – Author: Lakshminarayana Teertha 

Modaondipe ninage gananatha
banda vigna kaleyo gananatha
modal vandipe ninage gananatha ||pa||

hinde ravananu madadinda ninna pujisade
sanda ranadalli gananatha ||1||

madhavana agneyinda dharmaraya poojisalu
sadhisida raajya gananatha ||2||

mangala muruti guru ranga vithalana pada
hingade paliso gananatha ||3||

Singer : Putturu Narasimha Nayak