ಯಾದವ ನೀ ಬಾ ಯದುಕುಲ/ yaadava nee baa yadukula

ಯಾದವ  ನಿ  ಬಾ ಯದುಕುಲ  ನಂದನ
ಮಾಧವ  ಮಧುಸೂದನ  ಬಾರೋ  || pa||

ಸೋದರ  ಮಾವನ  ಮದುರಲಿ   ಮಡುಹಿದ
ಯಶೋದ  ಕಂದ ನೀ  ಬಾರೋ ||apa||

ಶಂಖ  ಚಕ್ರವು  ಕೈಯೇಲಿ  ಹೊಳೆಯುತ
ಬಿಂಕದ  ಕೋವಲ  ನಿ ಬಾರೋ
ಅಕಳಂಕ  ಮಹಿಮನೆ ಆದಿ ನಾರಾಯಣ
ಬೇಕೆಂಬ  ಭಕ್ತರಿಗೊಲಿ  ಬಾರೋ  ||1||

ಕಣ  ಕಲಂದಿಗೆ  ಘಲು  ಘಲುರೆನುತಲಿ
ಝುನು ಝುನು ವೇಣು ನಾದದಲಿ
ಚಿನ್ನಿಕೊಲು ಚೆಂಡು  ಬುಗರಿಯ
ನಾಡುತ  ಸಣ್ಣ  ಸಣ್ಣ  ಗೋವಳರೋದಗುಡಿ  ||2||

ಖಗ ವಾಹನನೆ  ಬಗೆ  ಬಗೆ  ರೂಪನೆ
ನಗೆಮೊಗದರಸನೆ  ನಿ  ಬಾರೋ
ಜಗದೊಳು  ನಿನ್ನಯ  ಮಹಿಮೆಯ  ಪೋಗಲುವೆ
ಪುರಂದರ  ವಿಠಲ  ನಿ  ಬಾರೋ ||3||

Lyrics in English

Composer : Sri Purandara dasaru

Yadava ni ba yadukula nandana
madhava madhusudana baro ||

Sodara mavana madhureli maduhida
yashode kandane ni baro |

Shankha chakravu kayyali holeyuta
binkada govala ni baro
akalanka mahimane adi narayana
bekemba bhaktarigoli baro ||

Kanakalanduge gejje ghulu ghulurenutali
jhana jhana venu nadadali |
chinikola chendu bugariyanaduta
sanna sanna govalarodagudi ||

Khaga vahanane bage bage rupane
nagumogadarasane ni baro
jagadolu ninnaya mahimeya pogaluve
purandara vittala ni baro ||

By Sri.Bhimsen Joshi

ಕೋಲು ಕೃಷ್ಣ ಸಾಗರ ಶಯನ / kolu Krishna sagara shayana

ಕೋಲು ಕೃಷ್ಣ ಸಾಗರ ಶಯನ
ಕೋಲಣ್ಣ ಕೋಲ
ಸಾಲಿಗ್ರಾಮಕೆ ಹಾಲಭಿಷೇಕ
ಕೋಲಣ್ಣ ಕೋಲ, ಕೋಲಣ್ಣ ಕೋಲ
||ಕೋಲು||

ಅಟ್ಟದ ಮೇಲಿನ ನೆಲವಲ್ಲಾಡಿಸಿ
ಸಕ್ಕರೆಗಳ ಸವಿದಾ
ಕೃಷ್ಣಾ ಕೃಷ್ಣೆಂದರೆ ನಾನಲ್ಲ ಬೆಕ್ಕೇನೊ ಎಂದಾ

ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದ
ಮಕ್ಕಳು ಮಲಗ್ಯಾರೆಬ್ಬಿಸಬೇಡೆನೆ
ಬಟ್ಟಲು ಬಾರಿಸಿದಾ||2|| ||ಕೋಲು||

ಹಪ್ಪಳ ಸಂಡಿಗೆ ಹರವಿದ ಮನೆಯಲಿ
ತಪ್ಪದೆ ತಾ ಪೋದ
ಮುಚ್ಚಿಡಬ್ಯಾಡಿ ಮುಟ್ಟುವನಲ್ಲ ಅಪ್ಪಂತವನಲ್ಲ

ಸಾರಿದ ಮನೆಯಲಿ ಸುಣ್ಣವ ಚೆಲ್ಲಿ
ಧೂಳನು ಹರವಿದಾ
ಕಾಲಲಿ ರಂಗೋಲಿ ಹಾಕಿದೆ ಯಶೋದೆ
ನೋಡು ಬಾ ಎಂದು ಕರೆದಾ ||2|| ||ಕೋಲು||

ಅಭಿಷೇಕಕೆಂದು ಅಘ್ರ್ಯೋದಕ ತಂದರೆ
ಅಚಮನ ಮಾಡಿದಾ
ಪ್ರೀತಿಯಿಂದ ಗಂಧಾಕ್ಷತೆ ಇಟ್ಟರೆ
ಶ್ರೀತುಳಸಿಯ ತಾ ಮುಡಿದ

ನೈವೇದ್ಯಕೆಂದು ಅಮ್ರತಾನ್ನ‌ಮಾಡಲು
ಬಾಯ್ತೆರೆದೆ ಎಂದಾ
ನೈವೇದ್ಯಕೆಲ್ಲಣಿಯಾಗಿದೆ ಯಶೋದೆ
ನೋಡು ಬಾ ಎಂದು ಕರೆದ||2|| ||ಕೋಲು||

ಕಜ್ಜಾಯ ಮಾಡುವ ಅಲ್ಲಿಗೆ ಹೋಗಿ
ಒಬ್ಬಂತೆ ತಾ ನಿಂತ
ಜಜ್ಜಿಡೆರೆ ತಿಂದು ದೂರ ಹೋಗಿ ನಿಂತು
ಹಬ್ಬವು ಏನೆಂದ

ಒಬ್ಬನೆ ತಿಂದು ಒಳಗಿದ್ದವರಿಗೆ
ಜಿಬ್ಬನು ತೋರಿಸಿದ
ಮಜ್ಜಿಗೆ ಕಳ್ಳನು ಹಿಡಿಹಿಡಿ ಎಂದರೆ
ಅಜ್ಜನ ಮಗನೆಂದಾ||2|| ||ಕೋಲು||

ಉಪ್ಪು ಸಾಕು ಸಾಲದು ನೋಡೆನೆ
ಅಪ್ಪಟವನೆ ಮೆದ್ದ
ತುಪ್ಪದ ಕಳ್ಳನ ಹಿಡಿಹಿಡಿ ಎಂದರೆ
ನಿಮ್ಮಪ್ಪನ ಮಗನೆಂದಾ

ಧಿಮಿ ಧಿಮಿ ಮಳ್ಳಿಗೆ ,ಧಿಮಾಕು ಜಾಜಿಗೆ
ಕೋಲಣ್ಣಾ ಕೋಲ
ರಾಮನ‌ ನೆಂಟ ಭೀಮೇಶ ಕ್ರಷ್ಣ
ಕೋಲಣ್ಣ ಕೋಲ ಕೋಲಣ್ಣ ಕೋಲ ‌ ||ಕೋಲು||

Lyrics in English

Composer : Harapanahalli Bhimavva

Kolu Krishna saagara shayana kolanna kola |
saaligramake haalabhisheka kolanna kola kollanna kola || kolu ||

Attada melina nelavallaadisi sakkaregala savida |
krishna krishna nanendare bekkeno endaa

Bekkendoduta orolagidda hakkigalodisida,
makkalu malagyarebisabedene battalu baarisida ||kolu||

Happala sandige haravida maneyali tappade taa poda |
muchidabyadi muttuvanalla appantavanalla ||

Saarida maneyali sunnava chelli dhulanu haravida |
kaalali rangoli haakide yashode not nodu baa endu kareda ||kolu ||

Abhishekakenda arghyodaka tandare aachamana maadida |
preetiyinda mantraakshyate ettare, shri tulasiya taa mudida |

Nyvedhyakendu amritanna msadalu baayterede endaa,
nyvedhyakellaniyaagide yashode nodu baa endu karedaa || kolu||

Kajjaya maaduva allige hogi obbante taa ninta |
jajjirede tindu doora hogi nintu habbavu enenda ||

Obbane tindu olagiddavari jibbanu torisida |
majjige kallana hidi hidi endare ajjana maganenda || kolu||

Uppu saaku saaladu nodene appatavane medda |
tuppada kallana hiding hidi endare, nimappana maganendaa |

Dhimi dhimi mallige, dhimaaku jaajige kolanna kola |
ramana nenta bhimesha krishnana kolanna kola kolanna kola || kolu ||

Click the link to listen the song by Ramakrishna katukukke

ಮಧುಕರ ವೃತ್ತಿ ಎನ್ನದು / Madukara vrutti ennadu

ಸಾಹಿತ್ಯ : ಪುರಂದರದಾಸರು

ಮಧುಕರ ವ್ರತ್ತಿ ಎನ್ನದು
ಮಧುಕರ ವ್ರತ್ತಿ ಎನ್ನದು ,ಬಲು ಚೆನ್ನದು||2||

ಪದುಮನಾಭನ ಪಾದ||3||
ಪದುಮ ಮಧುಪವೆಂಬ ||ಮಧುಕರ||

ಕಾಲಿಗೆ ಗೆಜ್ಜೆ ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟಿ, ನೀಲವರ್ಣನ ಗುಣ||2||
ಆಲಾಪಿಸುತ ಬಲು ಓಲಗ ಮಾಡುವಂತ||2|| ||ಮಧುಕರ||

ರಂಗನಾಥನ ಗುಣ
ರಂಗನಾಥನ ಗುಣ, ಇಂಗದೆ ಪಾಡುತ್ತ||2||
ಶ್ರಂಗಾರ ನೋಡುತ, ಕಂಗಳ ಆನಂದವೆಂಬ||2|| ||ಮಧುಕರ||

ಇಂದಿರಾಪತಿ ,ಪುರಂದರ ವಿಠ್ಠಲನಲ್ಲಿ||2||
ಇಂದಿರಾಪತಿ, ಪುರಂದರವಿಠ್ಠಲನಲಿ
ಚೆಂದದ ಭಕ್ತಿಯಿಂದ ಆನಂದ ಪಡುವಂತ||2||
||ಮಧುಕರ||

Composer : Purandaradaasaru


Madhukara vrtti ennadu adu balu chennadu || madhukara ||

Padumanabhana pada
paduma madhupavemba  ||madhukara |

Kalige gejje katti nilavarnana gunaa
alaapisutta balu oolaga maduvantha || madhukara |

Ranganathana guna hingade padutta
shrngara nodutta kangalananda vemba || madhukara ||

Indira pati purandara vithalana
chendada bhakti yindanan dava paduvantha ||madhukara ||

Click here to listen the song by Vidyabhushana theertha swamiji

ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ / Hannu taa benne taa gopemma

ಸಾಹಿತ್ಯ : ಪುರಂದರದಾಸರು
ಸಂಗೀತ : ಹೆಚ್ ಹನುಮಂತಾಚಾರ್
ಗಾಯನ : ಎಸ್ ಜಾನಕಿ

||ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ||
||ಅಡವಿಯೊಳಗೆ ಅಸುರನ ಕೊಂದ ಕೈಗೆ
ಮಡುವಿನೊಳಗೆ ಮಕರನ ಸೀಳ್ದ ಕೈಗೆ||
||ಪೊಡವಿಯೊಳಗೆ ಚಂದ್ರನಾಡಿದ ಕೈಗೆ||
ಕಡುಬೇಗದಿಂದಲಿ ಬೇಡಿದ ಕೈಗೆ
||ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ||

||ಶಂಖ ಚಕ್ರಗಳನು ಹಿಡಿದಂತ ಕೈಗೆ
ಶಂಕೆಯಿಲ್ಲದೆ ಮಾವನ ಕೊಂದ ಕೈಗೆ||
||ಬಿಂಕದಿಂದಲಿ ಕೊಳಲು ಊದುವ ಕೈಗೆ||
ಪಂಕಜ ಮುಖಿಯರ ಕುಣಿಸುವ ಕೈಗೆ
||ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ||

||ದಿಟ್ಟತನದಿ ಬೆಟ್ಟವ ಎತ್ತಿದ ಕೈಗೆ
ಸೃಷ್ಟಿಯ ದಾನವ ಬೇಡಿದ ಕೈಗೆ||
||ದುಷ್ಟ ಭೂಪರನ್ನೆಲ್ಲಾ ಮಡುಹಿದ ಕೈಗೆ||
ಕೆಟ್ಟ ದಾನವರನ್ನು ಬಡಿದಂತ ಕೈಗೆ
||ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ||

||ಕಾಳಿಯ ಮಡುವನು ಕಲಕಿದ ಕೈಗೆ
ಸೋಳ ಸಾಸಿರ ಗೋಪಿಯರ ಆಳಿದ ಕೈಗೆ||
||ಮೇಳದ ಭಕ್ತರ ಉದ್ಘರಿಸುವ ಕೈಗೆ||
ಏಳು ಗೂಳಿಯ ಗೆದ್ದ ಯಧುಪತಿಗೆ
||ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ||

||ಬಿಲ್ಲು ಬಾಣಗಳನ್ನು ಪಿಡಿದಂತ ಕೈಗೆ
ಮಲ್ಲರ ಸಾಧನ ಮಾಡಿದ ಕೈಗೆ||
||ಎಲ್ಲ ದೇವರ ದೇವ ರಂಗನ ಕೈಗೆ||
ಬಲ್ಲಿದ ಪುರಂದರ ವಿಠಲನ ಕೈಗೆ
|||ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ|||

Lyrics in English

Composer : Sri Purandara dasaru

Hannu ta benne ta gopamma hannu ta benne ta

adaviyolage asurana konda kaige maduvinolage makarana silda kaige 
podaviyolage chendanadida kaige kadu bhekadindali bedida kaige |1|

shankha chakragalanu pididanda kaige shankeyillade mavana konda kaige 
binkadindali kolaluduva kaige pankaja mukhiyara kunisuva kaige ||2||

dittatanadi bettavettida kaige shrstiya danava bedida kaige 
dusta bhuparanella maduhida kaige ketta danavarannu badidanda kaige ||3||

kaliya maduvanu kalakida kaige sola sasira gopiyaralida kaige 
melada bhaktaruddharisuva kaige Elu guliya gedda yadupati kaige ||4||

billu banagalannu pididanta kaige mallara sadhana madida kaige 
ella devara deva rangana kaige ballida purandara vittalana kaige ||5||


ದಾಸರೆಂದರೆ ಪುರಂದರ ದಾಸರಯ್ಯ / Dasarendare purandara daasarayya

ಸಾಹಿತ್ಯ : ಶ್ರೀ ವ್ಯಾಸರಾಯರು

ವಾಸುದೇವ ಕ್ರಷ್ಣನಾ…..||2||
ಸೂಸಿ ಪೂಜಿಸುವಂತಾ…

ದಾಸರೆಂದರೆ ಪುರಂದರ ದಾಸರಯ್ಯ|
ವಾಸುದೇವ ಕ್ರಷ್ಣನ
ಸೂಸಿ ಪೂಜಿಸುವಂತ ||ವಾಸುದೇವ||
||ದಾಸರೆಂದರೆ||

ಘ್ರಾಸಕಿಲ್ಲದೆ ಪೋಗಿ
ಪರರ ಮನೆಗಳ ಪೊಕ್ಕು |
ದಾಸನೆಂದು ತುಳಸಿ ಮಾಲೆ ಧರಿಸಿ |
ಬೇಸರಿಲ್ಲದೆ ಅವರ ಕಾಡಿ ಬಳಲಿಸುತ |
ಕಾಸುಗಳಿಸುವ ಪುರುಷ ಹರಿದಾಸರೆ
||ದಾಸರೆಂದರೆ||

ಢಂಭಕದಿ ಹರಿ ಸ್ಮರಣೆ
ಮಾಡಿ ಜನರ ಮುಂದೆ |
ಸಂಭ್ರಮದಿ ತಾನುಂಬ ಊಟ ಬಯಸಿ |
ಅಂಬುಜೋಧ್ಭವಪಿತನ ಆಗಮಗಳರಿಯದೆ |
ತಂಬೂರಿ ಮೀಟಲವ ಹರಿದಾಸನೇ
||ದಾಸರೆಂದರೆ||

ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ |
ಪ್ರೀಯದಲಿ ತಾನುಂಡು ಕೊಡದ ಲೋಭಿ |
ಮಾಯ ಸಂಸಾರದಲ್ಲಿ ಮಮತೆ ಹೆಚ್ಚಾಗಿಟ್ಟು |
ಗಾಯನವ ಮಾಡಲವ ಹರಿದಾಸನೇ
|| ದಾಸರೆಂದರೆ||

ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ |
ವಾತಸುತನಲ್ಲಿಹನ ವರ್ಣಿಸುತಲಿ |
ಗೀತ ನರ್ತನದಿಂದ ಕೃಷ್ಣನ ಪೂಜಿಸುವ |
ಪೂತಾತ್ಮ ಪುರಂದರ ದಾಸರಿವರಯ್ಯ
||ದಾಸರೆಂದರೆ||

Lyrics in English

Composer : shri Vyasarayaru

Dasarendare purandara dasarayya
vasudeva krishnanna susi pujisuvantha ||pallavi||

Grasakillade pogi parara manegala pokku |
dasanendu tulasi male dharisi |
besarillade avara kadi balalisuta |
kasu galisuva purusha haridasane || 1||

Dhabhakadi hari smarane, maadi janara munde |2|
sambhramadi taanumba uta bayasi
|ambujodbhavapitana aagamagalariyade |
tamboori meetidava haridaasane || 2||

yayi varava madi viprarige mrshtanna |
priyadali tanondu kodada lobhi |
maya samsaradalli mamate hecchagittu |
gayanava madalava haridasan || 3||

nitiyellava maretu nigamavedyana nitya |
vatasutanallihana varnisutali
gita nartanadinda krishnanna pujisuva |
putatma purandara dasarivarayya ! ||4||


ಭಕುತಿ ಸುಖವೋ ರಂಗ / Bhakuti sukhavo ranga

ರಚನೆ : ವಿಜಯದಾಸರು

ಭಕುತಿ ಸುಖವೊ ರಂಗ ಮುಕುತಿ ಸುಖವೊ|ಭ
ಕುತಿ ಸುಖವೊ ಮುಕುತಿ ಸುಖವೊ ಯುಕುತಿವಂತರೆಲ್ಲ ಹೇಳಿ||

ಭಕುತಿ ಮಾಡಿದ ಪ್ರಹ್ಲಾದ ಮುಕುತಿಯನ್ನು ಪಡೆದುಕೊಂಡ|
ಮುಕುತಿ ಬೇಡಿದ ಧ್ರುವರಾಯ ಯುಕುತಿಯಿಂದ ಹರಿಯ ಕಂಡ|

ಭಕುತಿ ಮಾಡಿದ ಅಜಮಿಳನು ಅಂತ್ಯದಲಿ ಹರಿಯ ಕಂಡ |
ಮುಕುತಿ ಬೇಡಿದ ಕರಿರಾಜ ದುರಿತಗಳನು ಕಳೆದುಕೊಂಡ||

ಭಕುತಿ ಮುಕುತಿದಾತ ನಮ್ಮ ಲಕುಮಿಯ ಅರಸ ವಿಜಯವಿಠ್ಠಲ |
ಶಕುತನೆಂದು ತಿಳಿದು ನಿತ್ಯ ಭಕುತಿಯಿಂದ ಭಜನೆ ಮಾಡಿರೊ||

Lyrics in English

Bhakuti sukhavo ranga, mukuti sukhavo |
bhakuti sukhavo mukuti sukhavo yukutivantarella heli ||

Bhakuti maadida Prahalada mukutiyannu padedukonda |
mukuti bedida dhruvaraaya yukutiyinda hariya kanda ||

Bhakuti maadida Ajamilanu antyadali hariya kanda |
mukuti bedida kariraaja duritagalanu kaledukonda |

Bhakuti mukutidaata namma lakumiya arasa vijayavittala |
shakutanendu tilidu nitya bhakutiyinda bhajane maadiro ||


ತನು ನಿನ್ನದು ಜೀವನ / Tanu ninnadu jeevana

ತನು ನಿನ್ನದು ಜೀವನ ನಿನ್ನದು
ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ


ಸವಿನುಡಿ ವೇದ ಪುರಾಣ ಶಾಸ್ತ್ರಂಗಳ
ಕಿವಿಗೊಟ್ಟು ಕೇಳುವ ಕಥೆ ನಿನ್ನದು
ನವಮೋಹನಾಂಗಿಯರ ರೂಪವನು
ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1||


ಒಡಗೂಡಿ ಗಂಧಕಸ್ತೂರಿ ಪರಿಮಳಂಗಳ
ಬಿಡದೆ ಲೇಪಿಸಿಕೊಂಬುವುದು
ನಿನ್ನದುಷಡುರಸದನ್ನಕ್ಕೆ ನಲಿದಾಡುವ
ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ ||2||


ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವ
ಕಾಯ ಪಂಚೇಂದ್ರಿಯಂಗಳು ನಿನ್ನವು
ಕಾಯಜಪಿತ ಕಾಗಿನೆಲೆಯಾದಿಕೇಶವರಾಯ
ನೀನಲ್ಲದೆ ನರರು ಸ್ವತಂತ್ರರೆ ||3||

Lyrics in English

Composer : Sri Kanakadasaru

Tanu ninnadu jeevana ninnadu ||p||

anudinadali baaho sukha dukha ninnadayya ||a.pa||

Savi nudi veda puraana shaastragala
Kivigottu keluva kathe ninnadu
Nava mohanaangera roopava kannali
Eve ikkade noduva nota ninnadayya ||1||

Vadagoodi gandha kasturi parimalangala
Bidade lepisikombuvadu ninnadu
Shadu rasadannakke nalidaaduva jivhe
Kadu ruchigondare aa ruchi ninnadayya ||2||

maaya paashada baleyolage silukiruvantha
Kaaya pancendriyangalu ninnavu
Kaaya japita kaagi neleyaadi keshava
Raaya neenallade nararu swatantrare ||3||


Sung by Sri Putturu Narasimha Nayak


ಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu

ಹರಿದಾಸರಿಗೆ ಭಗವಂತನನ್ನು ಎಷ್ಟು ಪರಿಪರಿಯಾಗಿ ಬಣ್ಣಿಸಿದರೂ ಸಾಲದು.ಅದರಲ್ಲೂ ಕೃಷ್ಣನ ಬಾಲ್ಯದ ಆಟೋಟ,ತುಂಟಾಟ, ರಂಪಾಟಗಳನ್ನು ಸಾವಿರಾರು ಕೃತಿ ಕೀರ್ತನೆಗಳಲ್ಲಿ ಬಣ್ಣಿಸಿದ್ದಾರೆ.ಅಂತಹ ಪುರಂದರದಾಸರ ಸುಪ್ರಸಿದ್ದ ರಚನೆ…
“ಗುಮ್ಮನ ಕರೆಯದಿರೆ|ಅಮ್ಮ ನೀನು ಗುಮ್ಮನ ಕರೆಯದಿರೆ…..”.


ಗುಮ್ಮನ ಕರೆಯದಿರೆ| ಅಮ್ಮ ನೀನು
ಗುಮ್ಮನ ಕರೆಯದಿರೆ ||ಪ||

ಸುಮ್ಮನೆ ಇದ್ದೇನು| ಅಮ್ಮಿಯ ಬೇಡೆನು|
ಮಮ್ಮು ಉಣುತೇನೆ ಅಮ್ಮ ಅಳುವುದಿಲ್ಲ ||ಅ||

ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ
ಕಣ್ಣು ಮುಚ್ಚುವುದಿಲ್ಲವೆ|
ಚಿಣ್ಣರ ಬಡಿಯೆನು|
ಅಣ್ಣನ ಬೈಯೆನು ಬೆಣ್ಣೆಯ ಬೇಡೆನು|
ಮಣ್ಣು ತಿನ್ನುವುದಿಲ್ಲ ||೧||

ಬಾವಿಗೆ ಹೋಗೆ ಕಾಣೆ| ಅಮ್ಮ ನಾನು ಹಾವಿನೊಳಾಡೆ ಕಾಣೆ|ಆವಿನ
ಮೊಲೆಯೂಡೆ| ಕರುಗಳ ಬಿಡೆ ನೋಡೆ|
ದೇವರಂತೆ ಒಂದು ಠಾವಿಗೆ ಕೂಡುವೆ ||೨||

ಮಗನ ಮಾತನು ಕೇಳುತ ಗೋಪೀದೇವಿ|
ಮುಗುಳುನಗೆಯ ನಗುತ ಜಗದೊಡೆಯ
ಶ್ರೀ ಪುರಂದರವಿಠಲನ ಬಿಗಿದಪ್ಪಿಕೊಂಡಳು ಮೋಹದಿಂದಾಗ ||೩|

Lyrics in English

Composer : Purandaradasaru

Gummana kareyadhire amma ninu
gummana kareyadhire
gummana kareyadhire amma ninu
gummana kareyadhire

summane idhenu ammiya bedenu
mammu unuthene amma aluvudhilla
gummana kareyadhire amma ninu
gummana kareyadhire

henugaliruvallige hogi
avara kanu muchuvudhillave
henugaliruvallige hogi
avara kannu muchuvudhillave
chinara badiyenu anana baiyenu
beneya bedenu manu thinnuvudhilla
gummana kareyadhire amma ninu
gummana kareyadhire

baavige hoge kaane amma naanu
haavinolade kaane
baavige hoge kaane amma naanu
haavinolade kaane
Avina moleyude karugala bide node
dhevaramthe ondhu taavige kuruve
gummana kareyadhire amma ninu
gummana kareyadhire

magana maathanu  kelutha gopidhevi
mugulu naguvu naguthaa
jagadhodeya shri puramdharavitalana
jagadhodeya shri puramdharavitalana
bigidhappikomdalu mohadhidhaaga
gummana kareyadhire amma ninu
gummana kareyadhire

*********************

Sung By Smt. S. Janaki and Sri Vidyabhushanaru

ಬಾರೋ ಕೃಷ್ಣಯ್ಯ ನಿನ್ನ ಭಕ್ತರ/ Baaro krishnayya ninna bhaktara

ರಚನೆ : ಕನಕದಾಸರು

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ. ||
ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ. ||

ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ
ಧಿಮಿ ಧಿಮಿ ಧಿಮಿರೆನುತ ಪೊಂಗೊಳಲನೂದುತ ಬಾರಯ್ಯ || ೧ ||

ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿರೆನುತ
ಪೊಂಗೊಳಲೂದುತ ಬಾರಯ್ಯ ಬಾರೋ ಕ್ರಿಷ್ಣಯ್ಯ || ೨ ||

ವಾಸ ಉಡುಪಿಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ
ದಾಸ ನಿನ್ನ ಪದ ದಾಸ ನಿನ್ನ ಪದ ದಾಸ ಸಲಹಲು ಬಾರಯ್ಯ || ೩ ||

Lyrics in English

Composer: Kanakadaasaru

Baaro krushnayya ninna bhaktara manegiga krushnayya || pa. ||
baro ninna mukha toro ninna sari yaro jagadhara shilane || a.pa. ||

anduge padagavu kalamduge kiru gejje dhim dhimi
dhimi dhimi dhimirenuta pongolalanuduta baarayya || 1 ||

kankana karadalli ponnumgura holeyuta kimkini kini kini kinirenuta
pongolaluduta barayya baro krishnayya || 2 ||

vasa udupili neleyadi keshavane dasa ninna pada dasa
dasa ninna pada dasa ninna pada dasa salahalu barayya || 3 ||


Sung by Sri Vidyabhushanaru and Master Rahul vellal

ಆವ ಕುಲವೋ ರಂಗ/ Ava kulavo ranga


ಆವ ಕುಲವೊ ರಂಗ ಅರಿಯಬಾರದು ||ಪ.||

ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆ
ಪಾರಿಜಾತದ ವೃಕ್ಷವ ಸತ್ಯಭಾಮೆಗೆ ತಂದಿತ್ತನಂತೆ ||ಅ.ಪ.||

ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆ
ತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ ||1||

ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆ
ಕಾಳಿಂಗನ ಹೆಡೆಯ ತುಳಿದು ಬಾಲೇರಿಗೊಲಿದ ದೇವನಂತೆ ||2||

ಗೊಲ್ಲತೇರ ಮನೆಗಳಲ್ಲಿ ಕಳ್ಳತನವ ಮಾಡಿದನಂತೆ
ಮೆಲ್ಲನೆ ಪೂತನಿ ಅಸುವ ಹೀರಿ ಬಲ್ಲಿದ ಕಂಸನ ಕೊಂದನಂತೆ ||3||

ಸರ್ಪ ತನ್ನ ಹಾಸಿಗೆಯಂತೆ ಪಕ್ಷಿ ತನ್ನ ವಾಹನವಂತೆ
ಸರ್ಪಭೂಷಣ ಮೊಮ್ಮಗನಂತೆ ಮುದ್ದುಮುಖದ ದೇವನಂತೆ ||4||

ತರಳತನದಿ ಒರಳನೆಳೆದು ಮರನ ಕೆಡಹಿ ಮತ್ತವರ
ಸಲಹಿದುರುಳ ರಕ್ಕಸರನು ಕೊಂದ ಚೆಲುವ ಹಯವದನನಂತೆ ||5|

Lyrics in English

Composed by Sri Vadirajaru

Āva kulavo raṅga ariyabāradu ||pa.||

Āva kulavendariyabāradu gōvukāva gollanante
pārijātada vr̥kṣava satyabhāmege tandittanante ||a.Pa.||

Gōkuladalli puṭṭidanante gōvaḷaroḍane āḍidanantetā
koḷalanūdi mr̥gapakṣṣigaḷa maruḷumāḍida dēvanante ||1||

kālalli śakaṭana oddanante gūḷiya komba kittanante
kāḷiṅgana heḍeya tuḷidu bālērigolida dēvanante ||2||

gollatēra manegaḷalli kaḷḷatanava māḍidanante
mellane pūtani asuva hīri ballida kansana kondanante ||3||

sarpa tanna hāsigeyante pakṣi tanna vāhanavante
sarpabhūṣaṇa mom’maganante muddu mukhada dēvanante ||4||

taraḷatanadi oraḷaneḷedu marana keḍahi mattavara
salahiduruḷa rakkasaranu konda celuva hayavadananante ||5||


Sung by Sri Anantraj mistry and Sri Vidyabhushanaru