ಗೋವಿಂದ ಗೋಪಾಲ ಗೋಪಿಕಾ / Govinda gopala gopika

ರಚನೆ : ಶ್ರಿ ವಾದಿರಾಜರು

ಗೋವಿಂದ ಗೋಪಾಲ ಗೋಪಿಕಾ ವಲ್ಲಭ
ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ ||

ನಾರಾಯಣ ಅಚ್ಯುತ ನರ ಮೃಗ ರೂಪಾ,
ಶ್ರೀಪತಿ ಶೌರಿ ಹರಿ |
ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ,
ಪುರಮರ್ಧನ ಮಿತ್ರ ಪರಮ ಪವಿತ್ರ ||ಗೋವಿಂದ ಗೋಪಾಲ ||


ಗರುಡಗಮನ ತುರಗ ಕಲ್ಯಾಣ |
ಗುಣಗಣ ನಿರುಪಮಾ ಲಾವಣ್ಯ ನಿರ್ಮಲ
ಶರಣ್ಯ ಪರಮ ಮುನಿವರೆಣ್ಯ
ಭಕ್ತಲೋಕ ಕಾರುಣ್ಯ || ಗೋವಿಂದ ಗೋಪಾಲ ||

ಇನಾ ಶಶಿ ಲೋಚನಾ ಇಂದೂ ನಿಭಾನಾ
ನಿರುತಾ ಕುಂಡಲ ನಾಥನ
ಕನಕಮಯ ವಸನ ಘನ ಪಾಪ ನಾಶನ
ನಿರುತಾ ಕುಂಡಲ ನಾಥ ವೇಣುನಾಥ ಹಯವದನ ||

Lyrics in English

Composer : Sri Vadirajaru

Govinda gopala gopika vallabha
govardhanodharaka govardhanodharaka ||


Narayana achyuta nara mruga roopa |
sripati shouri hari
varijodhbhava vandya vandita charitra
puramardhana mitra parama pavitra || govinda gopala ||

Garudagamana turaga kalyana
guna gana nirupama lavanya nirmala
sharanya parama munivarenya
bhaktaloka karunya || govinda gopala


Ina shashilochana indu nibhana
nirutha kundala nathana
kanakamaya vasana ghana papa nashana
nirutha kundaladhari hayavadana || govinda gopala ||


ನಂಜುಂಡ ನಂಜುಂಡ ನಮ್ಮ ಗುರು / Nanjunda namma guru nanjunda

ನಂಜುಂಡ
ನಂಜುಂಡ ನಮ್ಮ ಗುರು ನಂಜುಂಡ|
ನಂಜುಂಡ ನತಜನ ಪಾಲ
ಭವಭಂಜನ ಕರುಣಾಲವಾಲ|
ಆಂಜನೇಯನ ಪ್ರಿಯ ಅಂಜಲಿ ಮುಗಿವೆನು
ಕಂಜನಾಭನ ಪಾದ‌ಕಂಜವ ತೋರಿಸು|
||ನಂಜುಂಡ||

ವಿಷಕಂದರನೆ ಭೀತಭಯನೆ
ವರ ವ್ರಷಕೇತು ವೈಷ್ಣವೋತ್ತಮನೆ |
ನಮ್ಮ ಶಶಿಮುಖಿ ಗೌರಿ ನಾಯಕನೆ
ನಿನಗೆ ನಮಿಸುವೆ ಕರುಣಾಳು ಶಿವನೇ |
ಹಸಿತಭೂಸಿತವಾದ ಶಶಿ ಸನ್ನಿಭಾಂಗನೆ
ನಸು ನಗೆಯ ಮುಖವ ತೋರಿಸೋ ಶಂಕರನೆ ||
||ನಂಜುಂಡ||

ಮನಸ್ಸಿನ ಚಾಪಲ್ಯ ಬಿಡಿಸೋ
ಮಧ್ವಮುನಿ ಕ್ರಪಾ ಕವಚವ ತೊಡಿಸೋ |
ಕ್ಷಣ ಕ್ಷಣದಲ್ಲಿ ಹರಿನಾಮ ನುಡಿಸೋ
ದಿವ್ಯ ಘನ ವೈರಾಗ್ಯ ಭಾಗ್ಯ ಉಣಿಸೋ |
ಕನಸ್ಸು ಮನಸ್ಸಿನಲ್ಲಿ ಹರಿ ರೂಪ ಗುಣಕ್ರಿಯೆ
ನೆನವಿತ್ತು ಸಂತೈಸು ಗಣಪ ಷಣ್ಮುಖರಾಯ ||
||ನಂಜುಂಡ||

ಮುನಿವೇಷವನು ತಾಳಿ ನೃಪಗೆ
ಶ್ರೀ ವಿಷ್ಣುವಿನ ಕಥೆ ಅರುಹಿದೆ ಸದ್ಗತಿಗೆ |
ಮಾರ್ಗವನೆ ಮಾಡಿ ಸಲಹಿದೆ ಕೊನೆಗೆ
ಕರುಣಿಗಳೊಲು ಎಣೆ ಯಾರೋ ನಿನಗೆ |
ಗುಣನಿಧಿ ಬಾಧರಾಯನವಿಠ್ಠಲನ ಧ್ಯಾನ
ನೆನವಿತ್ತು ಸಂತೈಸು ಗಣಪ ಷಣ್ಮುಖರಾಯ ||
||ನಂಜುಂಡ||

Lyrics in English

Nanjunda namma guru nanjunda |
nanjunda natajana pala |
bhavabhanjana karunalavala |
anjaneyane Priya Anjali mugivenu |
kanjanabhana padakanjava torisu ||


Vishakandarane bhitabhayane
Vara vrushaketu vaishnavottamane |
namma shashimukhi gowri nayakane
ninage namisuve karunalu shivane |
hasitabhusitavada Shashi sannibhangane |
nasunageya mukhava toriso shankarane ||

Manssina chapalya bidiso
madhwamuni krupa kavachava todiso |
kshanakshanadalli harinama nudiso
divya ghana vairagya bhagya uniso |
kanassu manassinalli hari roopa gunakriye
nenevittu santaisu ganapa shanmukharaya ||

Muniveshavanu tali nrupage
sri vishnuvina kathe aruhide sadgatige |
margavane madi salahide konege
karunegalolu ene yaro ninage
gunanidhi badarayanavittalana dhayana
nenavittu santaisu ganapa shanmukharaya ||

Song by sri Mysore Ramachandrachar and Sri Vidyabhushanaru

ಅವತಾರಿ ನೀನಯ್ಯ ಭವದಿ / Olitu kedukugala madhye

ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇರಾಮ ಹರೇರಾಮ ರಾಮ ರಾಮ ಹರೇ ಹರೇ|| ಹರೇ||

ಅವತಾರಿ ನೀನಯ್ಯ ಭವದಿ ಬಂದೆ ನಾನು
ಭುವಿ ನಿನ್ನ ಸೃಷ್ಠಿಯ ಲೀಲೆ
ಸವಿ ಆದರ ನಾನು ಬಲ್ಲೆ |
ಕಷ್ಟ ಕಾರ್ಪಣ್ಯಗಳೇ ಬರಲಿ ದಿನ …. ದಿನಾ….
ಇಷ್ಟದಿ ನೆನೆವೆ ಹರಿನಾಮ ಅನುದಿನ |
ಹರಿನಿನ್ನ ಕೃಪೆಯಿಂದ ಸಾರ್ಥಕವಾಯಿತಿ ಜನ್ಮ
||ಅವತಾರಿ||

ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇರಾಮ ಹರೇರಾಮ ರಾಮ ರಾಮ ಹರೇ ಹರೇ

ಒಳಿತು ಕೆಡುಕುಗಳ ಮಧ್ಯೆ
ಮೂರು ದಿನದ ಬಾಳು |
ಇರುಳು ಹಗಲ ಸಂಕೋಲೆ ಕೊನೆಯಲ್ಲಿ ಹೇಳು
ದುಃಖ ದುಮಾನಗಳೇ ಬರಲಿ ದಿನ…ದಿನಾ …
ಇಷ್ಟದಿ ನೆನೆವೆ ಹರಿನಾಮ ಅನುದಿನಾ |
ಹರಿನಿನ್ನ ಕೃಪೆಯಿಂದ ಸಾರ್ಥಕವಾಯಿತಿ ಜನುಮ
|| ಅವತಾರಿ||

ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇರಾಮ ಹರೇರಾಮ ರಾಮ ರಾಮ ಹರೇ ಹರೇ

ಪಾಪ ಪುಣ್ಯದ ಕಂತೆ
ಬದುಕು ಅದರ ಸಂತೆ |
ನೀ ನಮ್ಮ ಜೊತೆಯಿರಲು ನಮಗ್ಯಾಕೆ ಚಿಂತೆ
ಹಸಿವು ದಾರಿದ್ರ್ಯವೇ ಇರಲಿ ದಿನ …ದಿನಾ…
ಇಷ್ಟದಿ ನೆನೆವೆ ಹರಿನಾಮ ಅನುದಿನಾ |
ಹರಿ ನಿನ್ನ ಕೃಪೆಯಿಂದ
ಸಾರ್ಥಕವಾಯಿತಿ ಜನುಮ …. ಪ್ರಭುವೇ
|| ಅವತಾರಿ ||

Lyrics in English

Hare Krishna hare Krishna Krishna Krishna hare hare|
hare rama hare rama rama rama hare hare||

Olitu kedukugala madhye mooru dinada baalu |
erulu hagala sankole koneyalli helu |
dukha dumanagale barali dina …. dinaa….
Eshtadi neneve harinama anudina |
hari ninna krupeyinda sartakavayiti janma ||Avatari||

Hare Krishna hare Krishna Krishna Krishna hare hare|
hare rama hare rama rama rama hare hare||

Avatari ninayya bhavadi bande nanu |
bhuvi ninna srushtiya leele | savi adara nanu balle |
kashta karpanyagale barali dina ….. dinaa …
Eshtadi neneve harinama anudina |
hari ninna krupeyinda sartakavayiti janma ||Avatari||

Hare Krishna hare Krishna Krishna Krishna hare hare|
hare rama hare rama rama rama hare hare||

Papa punyada kante baduku adara Sante |
nee namma joteyiralu namagyake chinte |
hasivu daridryave erali dina ….. dinaa …..
Eshtadi neneve harinama anudina |
hari ninna krupeyinda sartakavayiti janma ||Avatari||

Hare Krishna hare Krishna Krishna Krishna hare hare|
hare rama hare rama rama rama hare hare||


ಎಲ್ಲಿರುವೆ ತಂದೆ ಬಾರೋ ಹೇ / Elliruve tande baro he

ಎಲ್ಲಿರುವೆ ತಂದೆ ಬಾರೋ ಹೇ ಮಾರುತಿ….
ಎಲ್ಲಿರುವೆ ತಂದೆ ಬಾರೋ….
ಎಲ್ಲೆಲ್ಲಿ ನೋಡಿದರು ಅಲ್ಲಿ ನಿನ್ನ ಕೀರುತಿ |
ಅಲ್ಲಲ್ಲಿ ನೀನಿರುತೀ ಮಾರುತಿ |
‌‌ ||ಎಲ್ಲಿರುವೆ||

ಅಂದು ರಘುನಂದನಗೆ
ವಂದಿಸುತ ಇಂದಿರೆಯ |
ಕಂಡು ಕೊಂಡಾಡಿದೆಲೋ ಮಾರುತಿ |
||ಎಲ್ಲಿರುವೆ||

ರಂಗನ ಅರ್ಧಾಂಗಿಗೆ ನೀ
ಉಂಗುರವನಿತ್ತು |
ವನಭಂಗವಗೈದೆಯಲ್ಲೋ |
||ಎಲ್ಲಿರುವೆ||

ಶೇಷಗಿರಿವಾಸಗೆ ನೀ ದಾಸನೆಂದು
ನಂಬಿದ ಈ |
ದಾಸಗೆ ದಯ ಮಾಡೋ ಮಾರುತಿ |
||ಎಲ್ಲಿರುವೆ||

Lyrics in English

Elliruve tande bārō hē māruti….
Elliruve tande bārō….
Ellelli nōḍidaru alli ninna kīruti |
allalli nīnirutī māruti |
‌‌ ||elliruve||

andu raghunandanage
vandisuta indireya |
kaṇḍu koṇḍāḍidelō māruti |
||elliruve||

raṅgana ardhāṅgige nī
uṅguravanittu |
vanabhaṅgavagaideyallō |
||elliruve||

śhēṣhagirivāsage nī dāsanendu
nambida ī |
dāsage daya māḍō māruti |
||elliruve||

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ / Nille nille kolhaapuradevi

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ
ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ||

ಕರುಣಸಾಗರ ಹರಿತರುಣಿಯೆ ನೀ ಕೋಟಿ
ತರುಣ ಕಿರಣ ರತ್ನಾಭರಣನಿಟ್ಟು
ಮಣಿಕೌಂಸ್ತುಭ ವಕ್ಷ ಸ್ಥಳದಲ್ಲಿದ್ದೊ ್ಹಳೆಯುವ
ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ||1||

ಪಂಕಜಾಕ್ಷಿ ಪಂಕಜೋದ್ಭವನ ಜನನಿ
ಪಂಕಜಮುಖಿ ಪಾಲಿಸೆ ಎನ್ನ
ಪಂಕಜನಾಭನ ಅಂಕದಲ್ಲೊಪ್ಪುವ
ಪಂಕಜೆ ನಿನ್ನ ಪಾದಪಂಕಜಕೆರಗುವೆ ||2||

ಮುಗುಳುನಗೆಯ ಮುತ್ತುಗಳು ಜಡಿತ ಕ-
ರ್ಣಗಲ ವಾಲೆಯು ಕದಪಿನಲ್ಲೊ ್ಹಳೆಯೆ
ಬಗೆ ಬಗೆ ಸರ ಬಂಗಾರವನಿಟ್ಟು ಮೂ-
ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ||3||

ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ
ಬ್ಯಾಗ ನೋಡಿ ಪರಮೋತ್ಸವದಿ
ನಾಗಶಯನ ನಾಗಾರಿವಾಹನನ-
ರ್ಧಾಂಗಿ ಎನಿಸಿದಾನಂತ ಮಹಿಮಳೆ ||4||

ಶೇಷಗಿರಿಯ ಶ್ರೀನಿವಾಸನ ಎದೆಯಲ್ಲ್ಯಾ
ವಾಸವಾಗಿರಲ್ಯತಿ ಪ್ರೇಮದಲಿ
ಈಶ ನಾರದ ಬ್ರಹ್ಮಾಸುರರೊಡೆಯ ಭೀ-
ಮೇಶಕೃಷ್ಣ
ನ ನಿಜ ದಾಸರಿಗ್ವರನೀಹೊ ||5||

Lyrics in English

Nille nille kolhaapuradevi | ille baare gejje Gillenutaa || pa ||


Karunaa saagara hari taruniye nee koti taruna kirana
Ratnaabharanavittu |
Mani koustubha vakshasthaladalholeyuta |
Suparnavaahana lakshmi sharana vanditale || 1 ||


Pankajaakshi pankajodbhava jananee |
Pankaja mukhi paalise enna |
Pankajanaabhana ankadalloppuva |
Pankaje ninna paada pankajakkeraguve || 2 ||

Mugulu nageya muttugaludurisuta |
Karnagala vaale kadapinalholeye |
Bage bage sara bamgaaravanittu |
Moor jagava mohisuva jagadaadhipana raani || 3 ||

Saagaradolaguhutti aaga shreenaathana |
Byaaga nodi paramotsavadi |
Naagashayana naagaari vaahanana |
Ardhaangi enisidananta mahimale || 4 ||

Shesha giriya shreenivaasana edeyali |
Vaasavaagiralati premadali |
Eesha naarada brahmaasurarodeya |
Bheemesha krushnana nija daasarigvaraveeye || 5 ||


ಕೂಗಿದರು ಧ್ವನಿ ಕೇಳದೆ ಶಿರ / koogidaru dhwani kelade

ಕೂಗಿದರು ಧ್ವನಿ ಕೇಳದೆ ಶಿರ |
ಬಾಗಿದರು ದಯ ಬಾರದೆ
ಭೋಗಿಶಯನ ಭುವನಾಧಿಪತೇ ನಿನ್ನ |
ಆಗಮನವೆಂದಿಗೆ ಆಗುವುದು ಪ್ರಭೊ

ಭಕ್ತರಿಗೊಲಿದವ ನೀನು ಖರೆ ಎ|
ನ್ನತ್ತ ನೋಡುವುದು ದೊರೆ ||
ಚಿತ್ತವಧಾನ ಪರಾಕು ಮಹಾಪ್ರಭು |
ಎತ್ತಣ ರಥವನು ಎತ್ತಿ ಬಾ ನೀಡು ದೊರೆ||1||

ಸಿಂಧುಶಯನ ಶೇಷಾದ್ರಿ ವರ ಸಿರಿ |
ಮಂದಿರ ಭಕ್ತ ಕುಟುಂಬಧರ ||
ಸುಂದರ ಮೂರುತಿ ಒಂದಿನ ಸ್ವಪ್ನದಿ |
ಬಂದು ಪದದ್ವಯ ಚಂದದಿ ತೋರಿಸೊ||2||

ಕರುಣಾ ಶರಧಿಯು ನೀನಲ್ಲವೇ ಕೃಷ್ಣ |
ಶರಣಾಗತರಿಗೆ ದೊರೆಯಲ್ಲವೆ ||
ಮೊರೆಹೊಕ್ಕವರಿಗೆ ಮರೆಯಾಗುವರೆ |
ಸರಿಯೆ ಜಗದೊಳು ವಿಜಯವಿಠ್ಠಲರೇಯಾ ||3||

Lyrics in English

Kūgidaru dhvani kēḷade śhira |
bāgidaru daya bārade
bhōgiśhayana bhuvanādhipatē ninna |
āgamanavendige āguvudu prabho

bhaktarigolidava nīnu khare e|
nnatta nōḍuvudu dore ||
chittavadhāna parāku mahāprabhu |
ettaṇa rathavanu etti bā neeḍu dore||1||

sindhuśhayana śhēṣhādri vara siri |
mandira bhakta kuṭumbadhara ||
sundara mūruti ondina svapnadi |
bandu padadvaya chandadi tōriso||2||

karuṇā śaradhiyu nīnallavē krishna |
śharaṇāgatarige doreyallave ||
morehokkavarige mareyāguvare |
sariye jagadoḷu vijayaviṭhṭhalarēyā ||3||

ನಲಿದಾಡೆ ಎನ್ನ ನಾಲಿಗೆ ಮೇಲೆ / Nalidade enna nalage myale

ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ ||
ಕುಣಿದಾಡೆ ಎನ್ನ ನಾಲಗೆ ಮ್ಯಾಲೆ | ಸರಸ್ವತಿ ದೇವಿ||

ಘಿಲು ಘಿಲು ಘಿಲು ಗೆಜ್ಜೆಯ ನಾದ |
ಹೊಳೆವ ಅಂದುಗೆ ರುಳಿ ಪೈಂಜಣವಿಟ್ಟ ಪುಟ್ಟ ಪಾದ |
ಸುರವರನುತ ಪಾದ ಸರಸಿಜೋದ್ಭವನ ವದನ ನಿಲಯಳೆ|
ಕರುಣದಿಂದ ಪರಿಪಾಲಿಸು ಮಾತೆ ||೧||

ನಸುನಗೆ ಮುಖವು ನಾಸಾಭರಣ |
ಎಸೆವ ಕಪೋಲ ಹೊಸ ಮುತ್ತಿನ ಚಳ ತುಂಬಿಟ್ಟ ಶ್ರವಣ |
ತಿಲಕವು ಹಸನ ಶಶಿ ಸೂರ್ಯರ ಆಭರಣ ಶೋಭಿತಳೆ |
ಕುಸುಮ ಮುಡಿದ ಮೂರ್ಧ್ವಜವುಳ್ಳವಳೆ ||೨||

ಶೃಂಗಾರವಾದ ಜಡೆ ಬಂಗಾರ |
ರಾಗುಟಿ ಶೌರಿ ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ ರಂಗು ಮನೋಹರ |
ಮಂದಗಮನೆ ಅರವಿಂದ ನಯನ ಸಿರಿ |
ರಂಗ ವಿಟ್ಟಲನ ತೋರೇ ಶುಭಾಂಗಿ ||೩||

Lyrics in English

Nalidade enna nalage myale |
sharada Devi ||
kunidade enna nalage myale | Saraswati Devi ||

Ghilu ghilu ghilu gejjeya nada |
holeva anduge ruli painjanavitta putta pada |
suravaranuta pada sarasijodbhava vadana nilayale |
karunadinda paripalisu mate ||1||

Nasunage mukha u nasabharana |
eseva kapola hosa muttina chala tumbitta shravana |
tilakavu hasana Shashi suryara abharana shobhitale |
kusuma mudida murdheajavullavale ||2||

Shrungaravada jade bangara |
raguti shouri hongyadige gonde muttinahara rangu manohara |
mandagamane aravinda Nayana Siri |
ranga vittalana tore Shubhangi ||3||


ರುಕ್ಮಿಣಿ ರಾಧ ಪೂಜಿತ ತುಳಸಿ / Rukmini radha poojita tulasi

ರುಕ್ಮಿಣಿ ರಾಧ ಪೂಜಿತ ತುಳಸಿ
ವ್ರಂದಾವನ ಸಂಚಾರಿಣಿ ತುಳಸಿ
ಪ್ರಿಯ ಜನ ಪಾಲಿನಿ ಪೋಷಿಣಿ ತುಳಸಿ
ತ್ವಾಂ ಪ್ರಣಮಾಮಿ ಹರಿಪ್ರಿಯ ತುಳಸಿ||2||

ಮಂಜುಳ ಭಾಷಿಣಿ ಸುಮಧುರ ತುಳಸಿ
ಸಂಚಿತ ಪಾಪ ವಿನಾಶಿನಿ ತುಳಸಿ
ಮಾನಸ ಪೂಜಾ ತೋಷಿಣಿ ತುಳಸಿ
ತ್ವಾಂ ಪ್ರಣಮಾಮಿ ಹರಿಪ್ರಿಯ ತುಳಸಿ||2||

ಪ್ರಿಯ ಹರಿನಾಮ ಸಂಕೀರ್ತನ ತುಳಸಿ
ಹರಿಚರಣಾರ್ಪಿತ ಮಾರ್ಧವ ತುಳಸಿ
ರಣಋಣ ಸಂಕಟವಾರಿಣಿ ತುಳಸಿ
ತ್ವಾಂ ಪ್ರಣಮಾಮಿ ಹರಿಪ್ರಿಯ ತುಳಸಿ||2||

ಕುಂಕುಮ ಚಂದನ ಲೇಪಿತ ತುಳಸಿ
ಮಂಗಳ ಭೂಷಣ ಭೂಷಿತ ತುಳಸಿ
ಪಂಕಜ ಲೋಚನ ಕಾಮಿಣಿ ತುಳಸಿ
ತ್ವಾಂ ಪ್ರಣಮಾಮಿ ಹರಿಪ್ರಿಯ ತುಳಸಿ||2||

ಮುನಿಗಣ ಮಂಡಲ ಪೂಜಿತ ತುಳಸಿ
ಸನ್ಮಣ ಮಂಗಳ ಕಾರಿಣಿ ತುಳಸಿ
ಶ್ರೀ ಮುರಳೀಧರ ದೇವನ ತುಳಸಿ
ತ್ವಾಂ ಪ್ರಣಮಾಮಿ ಹರಿಪ್ರಿಯ ತುಳಸಿ||4||
ಹರಿಪ್ರಿಯ ತುಳಸಿ||8||

Lyrics in English

Rukmini radha poojita tulasi
vrundavana sancharini tulasi
priya jana palini poshini tulasi
twaam pranamami haripriya tulasi ||


Manjula bhashini sumadhura tulasi
sanchita paapa vinashini tulasi
manasa pooja toshini tulasi
twaam prnamami haripriya tulasi ||


Priya harinama sankeerthana tulasi
haricharanarpita madhava tulasi
hariruna sankatavarini tulasi
twaam prnamami haripriya tulasi ||


Kunkuma chandana lepita tulasi
mangala bhushana bhushita tulasi
pankaja lochana kamini tulasi
twaam pranamami haripriya tulasi ||


Munigana mandala poojitha tulasi
sanmana mangala karini tulasi
sri muralidhara devana tulasi
twaam pranamami haripriya tulasi
haripriya tulasi ||


ಯಮನೆಲ್ಲೋ ಕಾಣನೆಂದು / Yamanello kananendu helabeda

ಯಮನೆಲ್ಲೋ ಕಾಣನೆಂದು ಹೇಳಬೇಡ|
ಯಮನೆ ಶ್ರೀರಾಮನು ಸಂದೇಹ ಬೇಡ|
||ಯಮನೆಲ್ಲೋ||

ನಂಬಿದ ವಿಭೀಷಣಗೆ ರಾಮನಾದ
ನಂಬದಿದ್ದ ರಾವಣಗೆ ಯಮನೆ ಆದ |
ನಂಬಿದ ಅರ್ಜುನಗೆ ಭಂಟನಾದ
ನಂಬದಿದ್ದ ಕೌರವಗೆ ಕಂಟಕನಾದ
ನಂಬಿದ ಉಗ್ರಸೇನಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ
||ಯಮನೆಲ್ಲೋ||

ನಂಬಿದ ಬಾಲಕಗೆ ಹರಿಯಾದ
ನಂಬದಿದ್ದ ಅವನ ಪಿತಗೆ ಅರಿಯಾದ |
ನಂಬಿದವರ ಸಲಹುವ ನಮ್ಮ ದೊರೆಯು
ಅಂಬುಜಾಕ್ಷ ಪುರಂದರವಿಠಲರಾಯ
||ಯಮನೆಲ್ಲೋ||

Lyrics in English

Yamanello kananendu helabeda |
yamane sriramanu sandeha beda ||yamanello||

Nambida vibhishanage ramanada |
nambadidda ravanage yamane Ada |
Nambida arjunage bhantanada
nambadidda kouravage kantakanada
Nambida ugrasenage mitranada
nambadidda kamsanige shatruvada ||yamanello||

Nambida balakage hariyada
nambadidda avana pitage ariyada |
nambidavara salahuva namma doreyu
ambujaksha purandara vittalaraya ||yamanello||


ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ / Hyange bàredittu prachinadalli

ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ
||ಹ್ಯಾಂಗೆ||

ಪಕ್ಷಿ ಅಂಗಳದಲ್ಲಿ ಬಂದು ಕುಂತಂತೆ
ಆ ಕ್ಷಣದಲ್ಲಿ ಹಾರಿಹೋದಂತೆ |
||ಹ್ಯಾಂಗೆ||

ನಾನಾ ಪರಿಯಲ್ಲಿ ಸಂತೆ ನೆರೆದಂತೆ
ನಾನಾ ಪಂಥವ ಹಿಡಿದು ಹೋದಂತೆ
||ಹ್ಯಾಂಗೆ||

ಮಕ್ಕಳಾಡಿ ಮನೆ ಕಟ್ಟಿದಂತೆ
ಆಟ ಸಾಕೆಂದು ಅಳಿಸಿಪೋದಂತೆ |
||ಹ್ಯಾಂಗೆ||

ವಸತಿಕಾರನು ವಸತಿ ಕಂಡಂತೆ
ಹೊತ್ತಾರೆದ್ದು ಹೊರಟು ಹೋದಂತೆ |
||ಹ್ಯಾಂಗೆ||

ಸಂಸಾರ ಪಾಶವ ನೀನೆ ಬಿಡಿಸಿಯ್ಯ
ಕಂಸಅರಿ ಪುರಂದರವಿಠ್ಠಲರಾಯ |
||ಹ್ಯಾಂಗೆ||

Lyrics in English

Hyange bàredittu prachinadalli |
haange irabeku samsaradalli ||hyange||

Pakshi angaladalli bandu kuntante |
a kshanadalli harihodante || hyaange||

Nana pariyalli Sante neredante |
Nana panthava hididu hodante ||hyaange||

Makkaladi Mane kattidante |
aata sakendu alisipodante ||hyaange||

Vasatikaranu vasati kandante |
hottareddu horatu hodante ||hyaange||

Samsara pashava neene bidisayya |
kamsaari purandaravittalaraya ||hyaange||