ಬ್ರಾಹ್ಮ ಮುಹೂರ್ತದಲಿ ಶರಣಮಂತ್ರಗಳ ಬ್ರಹ್ಮೋಪಾಸನೆ ಮಾಡಿ ತಾರಕ ಬ್ರಹ್ಮೋಪಾಸನೆ ಮಾಡಿ | ಒರುಕುಳಿ ತೀರ್ಥದಿ ಮಿಂದು ಶ್ರೀನಾಮಗಳ ಬಿಡದೆಲೆ ಸ್ಮರಿಸುತ ಮಿಂದೆ ಕಣ್ತೆರೇ… ಭಗವಾನ್ ಕಣ್ತೆರೆ ಬೇಗ ಉದಯದಿ ಪ್ರಭೆಯಾಗಿ ನನ್ನ ಹ್ರದಯದ ಪ್ರಭೆಯಾಗಿ ||ಹರಿವರಾಸನ||
ಸರಸ್ವತಿ ಯಾಮದಲಿ ಸನ್ನಿಧಿಗೆ ಬಂದು ಸಗುಣೋಪಾಸನೆ ಮಾಡಿ ದಾಸನು ಸಗುಣೋಪಾಸನೆ ಮಾಡಿ | ಸಹಸ್ರ ಕಿರಣಗಳು ಒಳಬರುವ ಮುನ್ನ ಸಹಸ್ರಾರ್ಚನೆಗೆ ಬಂದಿಹೆನು ಕಣ್ತೆರೇ ಭಗವಾನ್ ಕಣ್ತೆರೆ ಬೇಗ ಉದಯದ ಪ್ರಭೆಯಾಗಿ ನನ್ನ ಹ್ರದಯದ ಪ್ರಭೆಯಾಗಿ ||ಹರಿವರಾಸನ||
Lyrics in English
Harivarasana Keli malagida harihara putra kantere | dasana kanneeru panneeragisi abhishekadallidalu ninna ya dasanu bandiruve || harivarasana||
ನಿನ್ನ ದಿವ್ಯ ಮೂರುತಿಯ ಕಣ್ಣು ದಣಿಯೆ ನೋಡಿ ಧನ್ಯನಾದೆನೋ ಧರೆಯೊಳು ||ನಿನ್ನ ದಿವ್ಯ||
ಇನ್ನು ಈ ಭವ ಭಯಕೆ ಅಂಜಲೇತಕೊ ನಾನು| ಚೆನ್ನ ಶ್ರೀ ವೆಂಕಟೇಶ ಶ್ರೀಶ ||ನಿನ್ನ ದಿವ್ಯ||
ಏಸು ಜನ್ಮದ ಪುಣ್ಯ ಬಂದೊದಗಿತೋ ಶ್ರೀಸ್ವಾಮಿ ಪುಷ್ಕರಿಣಿಯೊಳು ನಾನಾ ಜಪ ತಪ ಮಾಡಿ ವರಹ ದೇವರ ನೋಡಿ ಶ್ರೀಸ್ವಾಮಿ ಮಹಾದ್ವಾರಕೆ ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ ಲೇಶದಿಂ ಪೊಗಳುತಲೀ…. ಆ ಸುವರ್ಣದ ಗರುಡ ಕಂಭವನೆ ನೋಡಿ ಸಂತೋಷದಿಂ ಕೊಂಡಾಡಿದೆ ಬಿಡದೆ ||ನಿನ್ನ ದಿವ್ಯ||
ನೆಟ್ಟನೆರಡನೆ ದ್ವಾರವನೆ ದಾಂಟಿ ಪೋಗುತಲಿ ದಟ್ಟನಿಯು ಬಹುವಾಗಿ ಜನದಲಿ ಗಟ್ಟಿ ಮನದಲಿ ತಲೆಯ ಚೆಟ್ಟಿಡುತ ನೆಟ್ಟನೆ ಕಟ್ಟಾಂಜನಕೆ ತಾ ಬರುತಲಿ ಕೃಷ್ಣಾಂಜಿನಾದವರ ಪೆಟ್ಟುಗಳ ತಾಳುತಲಿ ಕಂಗೆಟ್ಟು ಹರಿಹರಿ ಎನುತಲಿ ಬೆಟ್ಟದಧಿಪತಿ ನಿನ್ನ ದ್ರಷ್ಠಿಯಿಂದಾ ಕಾಣುತಲಿ ಸುಟ್ಟಿತೆನ್ನಯ ದುರಿತವು ಸರ್ವವೂ ||ನಿನ್ನ ದಿವ್ಯ||