ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ॥ ರಾಮ ರಾಮ ಹರೇ ಕೃಷ್ಣ ಕೃಷ್ಣ ಹರೆ ||
ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ ಕಂಸಾದ್ಯಸುರರ ಧ್ವಂಸಗ್ರೈದ ಯದು ವಂಶೋದ್ಭವ ಶ್ರೀ ಕೃಷ್ಣ ಹರೇ ||೧||
ಮುನಿಮಖರಕ್ಷಕ ದನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನ ಪಿತ ಕೃಷ್ಣ ಹರೇ ||೨||
ತಾಟಕಿ ಖರಮಧುಕೈಟಭಾರಿ ಪಾಪಾಟವಿ ಸುರಮುಖ ರಾಮ ಹರೇ ಆಟದಿ ಫಣಿ ಮ್ಯಾಲ್ ನಾಟ್ಯವನಾಡಿದ ಖೇಟವಾಹ ಶ್ರೀ ಕೃಷ್ಣ ಹರೇ || ೩||
ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಮಹಿಮ ಶ್ರೀ ರಾಮ ಹರೇ ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ ||೪||
ಹರ ಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀ ರಾಮ ಹರೇ ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಕರುಣಾಕರ ಶ್ರೀ ಕೃಷ್ಣ ಹರೇ ||೫||
ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ಣ ಹರೇ ||೬||
ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ಶ್ರೀ ರಾಮ ಹರೇ ವಿದುರನ ಕ್ಷೀರಕೆ ಒದಗಿ ಪೋದ ಪದುಮನಾಭ ಶ್ರೀ ಕೃಷ್ಣ ಹರೇ ||೭||
ಸೇವಿತ ಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಶ್ರೀ ಕೃಷ್ಣ ಹರೇ ||೮||
ಧರೆಯೊಳಗಜ್ಞ ಜನರ ಮೋಹಿಪುದಕೆ ಹರನ ಪೂಜಿಸಿದ ಶ್ರೀ ರಾಮ ಹರೇ ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಧವು ಕೃಷ್ಣ ಹರೇ ||೯||
ಗಿರಿಗಳಿಂದವರ ಶರಧಿಯ ಬಂಧಿಸಿದ ಪರಮ ಸಮರ್ಥ ಶ್ರೀ ರಾಮ ಹರೇ ಗಿರಿಯನು ತನ್ನ ಕಿರಿ ಬೆರಳಲೆತ್ತಿ ಗೋಪರನ ಕಾಯ್ದ ಶ್ರೀ ಕೃಷ್ಣ ಹರೇ ಖಂಡಿಸಿ ದಶಶಿರ ಚೆಂಡಾಡಿದ ಕೋದಂಡಪಾಣಿ ಶ್ರೀ ರಾಮ ಹರೇ ಪಾಂಡು ತನಯರಿಂ ಚಂಡ ಕೌರವರ ದಿಂಡು ಗೆಡಹಿದ ಕೃಷ್ಣ ಹರೇ ||೧0 ||
ತವಕದಲ್ ಅಯೋಧ್ಯಾಪುರಕೈದಿದ ತನ್ನ ಯುವತಿಯೊಡನೆ ಶ್ರೀ ರಾಮಹರೇ ರವಿಸುತ ತನಯಗೆ ಪಟ್ಟವ ಕಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ ||೧೧||
ಭರತನು ಪ್ರಾರ್ಥಿಸಲರ ಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ ವರಧರ್ಮಾದ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ ||೧೨||
ಅತುಳ ಮಹಿಮ ಸದ್ ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ || ೧೩||
ರಾಮರಾಮ ಎಂದು ನೇಮದಿ ಭಜಿಪರ ಕಾಮಿತ ಫಲದ ಶ್ರೀ ರಾಮ ಹರೇ ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠಲ ಶ್ರೀ ಕೃಷ್ಣ ಹರೇ ||೧೪||
Lyrics in English
Name : Sri swamyrayaru Ankita : Sri varadesha vittala
Jai jai rama hare jai jai krishna hare |rama rama hare krishna krishna hare ||
Kousalyaja vara vamshodbhava sura samsevita pada rama hare kamsadyasurara dhwamsagaida yadu vamshodbhava sri krishana hare ||1||
Munimakharakshaka danujara shikshaka phanidhara sannuta rama hare ghanavarnaanga sumanasarodeya sri vanajasana pita krishna hare ||2||
Tataki kharamadhukaitabhari papatavi sura mukha rama hare aatadi phani myale natyavanadida khetavaha sri krishna hare ||3||
Shileya padarajadali stree madida sulalita mahima sri rama hare balu vakragidda abaleya kshanadali cheluveya madida krishna hare ||4||
Hara dhanu bhangisi harushadi janaki karava pidida sri rama hare siri rukminiyanu twaradali varisida karunakara sri krishna hare ||5||
Janaka pele lakshmana seeta saha vanake teralida rama hare vanake pogi tannanugarodane govanu palipa sri krishna hare ||6||
Chature shabariyitta badariya phalavanu mudadi sevisida sri rama hare vidurana ksheerake odagipoda padumanabha sri krishna hare ||7||
Sevita hanuma sugreevana sakha jagatpavana paratara rama hare devaki vasudevara sere bidisida deva deva sri krishna hare ||8||
Dhareyolagajna janara mohipudake harana poojisida sri rama hare harana prarthisi varavanu padeda charite agadhavu krishna hare ||9||
Girigalindavara sharadhiya bandhisida parama samartha sri rama hare giriyanu tanna kiri beralaletti goparana kayda sri krishna hare khandisi dasha shira chendadida kodandapani sri rama hare pandu tanayarim chanda kouravara dindu gedahida krishna hare ||10||
Tavakadal ayodhyapurakaidida tanna yuvatiyodane sri rama hare ramisuta tanayage pattava kattida bhavataraka sri krishna hare ||11||
Bharatanu prarthisalarasatvava sweekarisida twaradali rama hare varadharmadyara dhareyolu meresida krupakara krishna hare ||12||
Atula mahima sad yatigala hrudayadi satata virajipa rama hare sitavahana sarathiyenisida suratati poojita pada krishna hare ||13||
Ramarama yendu nemadi bhajipara kamita phalada sri rama hare premadi bhaktara palipa sri varadesha vittala sri krishna hare ||14||
ಬೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ|ಪ| ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ |ಅ.ಪ|
ತುಳಸಿಯ ವನದಲಿ ಹರಿ ಇಹನೆಂಬುದ ಶೃತಿ ಸಾರುತಿದೆ ಕೇಳಿ ತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿ ತುಳಸಿ ಸ್ಪರ್ಶವ ಮಾಡೇ, ದೇಹಪಾವನವೆಂದು ತಿಳಿದುದಿಲ್ಲವೇ ಕೇಳಿ ತುಳಸಿ ಸ್ಮರಣೆ ಮಾಡಿ ಸಕಲ ಇಷ್ಟವ ಪಡೆದು ಸುಖದಲಿ ನೀವು ಬಾಳಿ ||೧||
ಮೂಲ ಮೃತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕ ವಶವಹುದು ಮಾಲೆ ಕೊರಳಲಿಟ್ಟ ಮನುಜಗೆ ಮುಕುತಿಯ ಮಾರ್ಗವು ತೋರುವುದು ಕಾಲ ಕಾಲಗಳಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟು ಪೋಗುವುದು ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು ||೨