ರಂಗ ನಮ್ಮನೆಗೆ ಬಂದ ಮತ್ತೇನು / Ranga nammanege banda mattenu

ಕೀರ್ತನಕಾರರು : ಗಲಗಲಿ ಅವ್ವನವರು

ರಂಗ ನಮ್ಮನೆಗೆ ಬಂದ ಮತ್ತೇನು ತಂದ                                     ।।ಪ॥ 

ಜಗದೋದ್ಧಾರನ ಸಭೆಗೆ ಬಂದ ನಗುವ ಪರಿಯ ಹೇಳಿದ್ದು ತಂದ
ಬಗೆ ಬಗೆ ವಸ್ತ್ರಕೊಳ್ಳಿರೆಂದ ಪಗಡಿ ಧರ್ಮಗೆ ತರಲಿಲ್ಲೆಂದ                 ।।೧।।

ವಾಣಿ ಮಾವ ಮನೆಗೆ ಬಂದ ಜಾಣತನವ ಹೇಳಿದ್ದು ತಂದ 
ಮಾಣಿಕ ಮುತ್ತುಕೊಳ್ಳಿರೆಂದ ಕ್ವಾಣವ ಧರ್ಮಗೆ ತರಲಿಲ್ಲಂದ            ।।೨।।

ಕೃಷ್ಣರಾಯ ಸಭೆಗೆ ಬಂದ ಎಷ್ಟು ಜಂಬ ಹೇಳಿದ್ದು ತಂದ 
ಪಟ್ಟಾವಳಿ ಕೊಳ್ಳಿರೆಂದ ಹುಟ್ಟು ಭೀಮಗೆ ತರಲಿಲ್ಲೆಂದ                     ।।೩।।

ನಳಿನಾಕ್ಷಸಭೆಯೊಳು ಬಂದ ಹೊಳೆವೊ ಎಷ್ಟು ಹೇಳಿದ್ದು ತಂದ 
ಝಳಿಸೋ ವಸ್ತ್ರಕೊಳ್ಳಿರೆಂದ ಬಳೆ ಪಾರ್ಥಗೆ ತರಲಿಲ್ಲೆಂದ               ।।೪।।

ರಾಜ್ಯ ಲಕ್ಷ್ಮಣನಿಗಿಲ್ಲೆಂದ ಮಾಜುದಾ ಕುಲ ಧರ್ಮ ಕುಂದ 
ತೇಜ ಮುಂದೆ ಓಡಿದ್ದು ಚೆಂದ ಸೋಜಿಗವಲ್ಲ ನಕುಲನೆಂದ              ।।೫।।

ಸುಮನಸರು ನಗುವೊರೆಂದ ಭ್ರಮೆಯ ಕಳೆದ್ಯೋ ಸಹದೇವ ಎಂದ 
ಅಮಿತದನವ ಕಾಯ್ವೋಛಂದ  ರಮಿಯರಸು ನಗುವನೆಂದ            ।।೬।।

ಅಂದ ಮಾತಿಗೆ ಬಲರಾಮ ಹೀಗೆಂದ ಚಂದವಾಯಿತು ಕುಶಲವೆಂದ 
ನಿಂದ್ಯವ ನೀ ಮಾಡಿಕೊ ಎಂದ ಇಂದಿರೇಶಗೆ ತಿಳಿಸಿರೆಂದ              ।।೭।।

Lyrics in English

Ranga nammanege banda mattenu tanda ||pa||

Jagadoddharana sabhege banda naguva pariya heliddu tanda | bage bage vatsra kollirenda pagadi dharmage tarallillenda ||1||

Vani mava manege banda janatanava heliddu tanda | manika muttukollirenda kwanava dharmage tarallilenda ||2||

Krishnaraya sabhege banda eshtu jamba heliddu tanda | pattaavali kollirenda huttu bhimage tarallilenda ||3||

Nalinaksha sabhege banda holevo eshtu helliddu tanda | jaliso vatsra kollirenda bale parthage tarallilenda ||4||

Rajya lakshmannigillenda majuda kula dharma kunda | teja munde odiddu chenda sojigavalla nakulanenda ||5||

Sumanasaru naguvarenda bhrameya kaledyo sahadeva enda | amitadanava kayvo chenda rameyarasa naguvanenda ||6||

Anda maatige balarama higenda chandavayitu kushalavenda | nindyava nee madiko enda indireshage tilisirenda || 7||


ಏನೆ ಮನವಿತ್ತೆ ಲಲಿತಾಂಗಿ / Ene manavitte lalitangi

ಏನೆ ಮನವಿತ್ತೆ ಲಲಿತಾಂಗಿ
ಅಸ-ಮಾನ ಗೋವಳ ಕುಲವಿಲ್ಲದವನೊಳು ||pa||

ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ ||1||

ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯಲು ಕೊಂದ ಕುಲಗೇಡಿ ಗೋವಳ ||2||

ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚೆನ್ನ ಆದಿಕೇಶವನೊಳು||3||

Lyrics in English

Ene manavitte lalitangi | asamaana govala kulavilladavanolu || pa ||

Magage maidunanaada magalige patiyada | magaligaliyanaada aliyagaliyanaada ||1 ||

Magala magage maidunanaagi mavana | jagavariyalu konda kulagedi govala ||2||

Attege vallabhanaada bhrtyarigaalaada | chitta olidu adikeshavanolu ||3||


ಹೇಳುವೆ ಕಥೆ ಹೇಳುವೆ / Heluve kathe heluve keliri kathe heluve |

ಹೇಳುವೆ ಕಥೆ ಹೇಳುವೆ ಕೇಳಿರಿ ಕಥೆ ಹೇಳುವೆ
ಗೌರಿ ಪುತ್ರ ವಿನಾಯಕನಿಗೆ ಆನೆ ಮುಖವು ಬಂದ ಕಥೆಯ
||ಹೇಳುವೆ||

ಒಂದು ದಿನಾ ಪಾರ್ವತಿಯು ಸ್ನಾನ ಗ್ರಹಕೆ ಹೊರಟಲು
ಮಣ್ಣಿನಿಂದ ಮೂರ್ತಿಯ ಮಾಡಿ ಜೀವ ಅದಕ್ಕೆ ಇತ್ತಳು |
ಅಮ್ಮಾ ನಿನ್ನ ಆಜ್ಞೆಯೇನು ಎಂದು ಕೇಳಿ ಗಣಪನು |
ಕಾವಳಿರು ಎಂದಳು ಗೌರಿ ಒಲವಿಂದ ||
||ಹೇಳುವೆ||

ಕಂದ ಕಾವಲಿರುವ ವೇಳೆ ಶಿವನು ಅಲ್ಲಿ ಬಂದ
ಶಿವನು ಯಾರೆಂದರಿಯದೆ ನಿಲ್ಲಿಸಿದನು ಕಂದಾ
ಒಳಗೆ ಬಿಡೆನು ಇಲ್ಲೆ ನಿಲ್ಲಿ ಕಂದ ಎನಲು
ಹರಗೆ ಉಕ್ಕಿ ಬಂತು ಆಗ ಕೋಪದ ಹೊನಲು
ಕೋಪದಾ…..ಹೊನಲೂ…….

ಕೋಪದಿಂದ ಶೂಲ ತೆಗೆದು ನಿಂತನು ತ್ರಿಪುರಾರಿ
ಕಂದನ ತಲೆ ಕತ್ತರಿಸಿದ ,ಕಾಮ ಸಂಹಾರಿ
ಶಬ್ದ ಕೇಳಿ ಒಳಗಿನಿಂದ ಓಡಿ ಬಂದಳು ಗೌರಿ
ಸತ್ತ ಮಗನ ಕಂಡು
ಅತ್ತು ಗೋಳಾಡಿದಳು ನಾರೀ||ಸತ್ತ||

ಸತ್ತ ಹುಡುಗ ತನ್ನ ಮಗನು ಎಂದು ಅರಿತ ನೊಂದ ಶಿವನು
ಒಂದು ತಲೆಯ ಅರಸಿ ತನ್ನಿ ಎಂದು ಆಜ್ಞೆ ತಂದನು
ಅರಸಿ ಹೊರಟರು ಗಣಗಳು, ಧಿಕ್ಕು ಧಿಕ್ಕಿಗೆ
ಆನೆಯೊಂದು ಮಲಗಿತ್ತು ಉತ್ತರ ಧಿಕ್ಕಿಗೆ

ಆನೆ ತಲೆಯ ಕತ್ತರಿಸಿ ಶಿವನ ಬಳಿಗೆ ತಂದರು
ಅದನ್ನು ಮಗನ ದೇಹಕಿಟ್ಟು ಜೀವ ತಂದನು ದೇವನು
ಜೀವ ತುಂಬಿದ ಕಂದ ತಂದೆಗೆ ವಂದನೆ ಗೈದನು ,
ಸಂತಸದಿ ಮಗನ ತಬ್ಬಿ ,ಅವಗೆ ವರವ ಇತ್ತನು||2||

ಇಂದಿನಿಂದ ಮೊದಲ ಪೂಜೆ ಎಂದು ನಿನಗೆ ಎಂದನು
ಗಣಗಳಿಗೆ ನಾಯಕನು ಎಂದು ಶಿವನು ನುಡಿದನು
ಅಂದಿನಿಂದ ಕಂದನಾದ ದೈವಗಳ ನಾಯಕ
ಭಕ್ತರ ವಿಘ್ನಗಳನು ಹರಿಸುವ ವಿನಾಯಕ||3||

Lyrics in English

Heluve kathe heluve keliri kathe heluve |
gouri putra vinayakanige ane mukhavu banda katheya || heluve||

Ondu dina parvatiyu snana grahake horatalu
mannininda moortiya madi jeeva adake ettalu |
amma ninna ajne enu andu keli ganapanu
kavaliru endalu gouri olavinda || heluve||

Kanda kavaliruva vele shivanu alli ban
shivanu yarendariyade nillisidanu kanda
olage bidenu elle nilli kanda enalu
harage ukki bantu kopada honalu ||
kopada …. honalu ….

Kopadinda shoola tegedu nintanu tripurari
kandana tale kattarisida kama samhari
shabda keli olagininda odi bandalu gouri
satta magana kandu
attu goladidalu naari ||

Satta huduga tanna maganu endu arita nonda shivanu
ondu taleya arasi tanni endu ajne tandanu
arasi horataru ganagalu dhikku dhikkige
aneyondu malagittu uttara dikkige

Ane taleya kattarisi shivana balige tandaru
adannu magana dehakittu jeeva tandanu devanu
jeeva tumbida kanda tandege vandane gaidanu
santasadi magana tabbi avage varava ettanu ||

Indininda modalu pooje endu ninage endanu
ganagalige nayakanu endu shivanu nudidanu
andininda kandanada daivagala nayaka
bhaktara vighnagalanu harisuva vinayaka ||


ಬೆಳಗಾಯಿತು ಏಳು ಹೆ ಮುದ್ದು ಬೆನಕ / Belagaytu elu he muddu benaka

ಬೆನಕ ಬೆನಕ ಏಕದಂತ… ಪಚ್ಚೆ ಕಲ್ಲು ಪಾಣಿಪೀಠ
ಮುತ್ತಿನುಂಡೆ, ಹೊನ್ನ ಘಂಟೆ ಒಪ್ಪುವ ಗುಡ್ಡ ಬೆಟ್ಟದಲಿ , ತಂಬಿಟ್ಟು ಮುಕ್ಕುವ
ಪುಟ್ಟ ವಿಘ್ನೇಶ್ವರ ದೇವರಿಗೆ ಇಪ್ಪತ್ತೊಂದು ನಮಸ್ಕಾರಗಳು

ಬೆಳಗಾಯಿತು ಏಳು ಹೆ ಮುದ್ದು ಬೆನಕ
ಭುವಿಎಲ್ಲ ರಂಗಾಯಿತು ನೀ ಏಳು ಬೆನಕ ||
ಅಂಬಾಪ್ರಿಯ ತನಯ, ಆದಿ ಪೂಜಿತನೆ
ಮೂಡನದೆ ರವಿ ಎದ್ದ ನಿ ಏಳು ಬೆನಕ
||ಬೆಳಗಾಯಿತು||

ಮಾಮರದಿ ಕೋಗಿಲೆಯು ಪಚ್ಚವರ್ಣದಿ ಗಿಳಿಯು
ಸುಪ್ರಭಾತವ ನಿನಗೆ ಹಾಡುತಿವೆ ಬೆನಕ ||
ಆ ನಿನ್ನ ಸುಂಡಿಲಿಯು ನಿನ್ನ ಬರುವನು ಕಾದು
ಕಾಳುಗಳ ತಿನ್ನುತಲಿ ಕುಳಿತಿಹುದು ಬೆನಕ
||ಬೆಳಗಾಯಿತು||

ಹುಲ್ಲುಗರಿಕೆಯು ಧೂರ್ವೆಯಾಗಿ ಕಾದಿಹುದು ಪೂಜೆಯಲಿ
ನಿನ್ನ ಅಲಂಕರಿಸಲೆಂದು ನಾಗಲಿಂಗದ ಪುಷ್ಪ ||
ಕಮಲಗಳು ಕಾದಿಹವು
ಗಣಪತಿಯ ಅರ್ಚನೆಗೆ ಸಿಧ್ಧವಾಗಿಹೆವೆಂದು
||ಬೆಳಗಾಯಿತು||

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ
ಕಾಯುತಿವೆ ನಿನ್ನ ಸ್ವೀಕಾರಕಾಗಿ ||
ನಿನ್ನ ಪೂಜೆಯ ಮಾಡೆ ಭಕ್ತ ಜನ ವ್ರಂದ
ಕಾದಿಹುದು ನಿನ್ನ ವರಭಿಕ್ಷೆಗಾಗಿ
||ಬೆಳಗಾಯಿತು||

Lyrics in English

Benaka benaka ekadanta … pacche kallu panipeeta
muttinunde honna ghante oppuva gudda bettadali, tambittu mukkuva
putta vighneshwara devarige eppatondu namaskaragalu

Belagaytu elu he muddu benaka
bhuviyella rangaytu nee elu benaka ||
ambapriya tanaya adi poojitane
moodanadi ravi edda nee elu benaka || belagaytu ||

Mamaradi kogileyu pacchavarnadi giliyu
suprabhatava ninage hadutive benaka ||
aa ninna sundiliyu ninna baruvanu kadu
kalugala tinnutali kulitihudu benaka || belagaytu ||

Hullugarikeyu dhurveyagi kadihudu poojeyali
ninna alankarisalendu nagalingada pushpa ||
kamalagalu kadihavu
ganapatiya archanege siddavagihevendu || belagaytu||

Ninagagi maditta tambittu chakkuli
kayutive ninna sweekarkagi ||
ninna poojeya made bhakta jana vrunda
kadihudu ninna varabhikshegagi ||belagaytu||


ಕೊಳಲಾ ಊದುವ ಚತುರ / Kolalaa uduva chatura

ಕೊಳಲಾ…ಊದುವ ಚತುರ ಯಾರೆ ಪೇಳಮ್ಮಯ್ಯ|
ತಳಿರಂದದಿ ತಾ ಪೊಳೆವ ಕರದಿ ಪಿಡಿದು ||ಕೊಳಲಾ||

ನಾದದಿ ತುಂಬಿತು ಗೋವರ್ಧನಗಿರಿ | ಯಾದವ ಕುಲಗಣ ಪೊರೆದಿತು ಖಗಕುಲ |
ಸಾಧಿಸಿ ನೋಡಲು ಕೃಷ್ಣನು ಈಗಲು | ಸಾಧ್ಯವೇನೆ ವ್ರಂದಾವನದೊಲು
||ಕೊಳಲಾ||

ಮೇವು ಮರೆತವು ಗೋವುಗಳೆಲ್ಲವು | ಸಾವಧಾನದಿಂದ ಹರಿದಳು ಯಮುನೆ |
ಆವು ಕಾವುತಲಿ ಗೋವಳರೆಲ್ಲರ | ಹಾವಭಾವದಲಿ ವ್ರಂದಾವನದೊಳು
||ಕೊಳಲಾ||

ಸುರರುಸುರಿದರಾಕಾಶದಿ ಸುಮಗಳ | ಸವಿದುಪೋಗಿ ನೋಡೆ ವ್ರಂದಾವನದೊಳು |
ಸಾರಿಸಾರಿ ಶ್ರೀಕ್ರಷ್ಣನು ಈಗಲು | ತುರುಗಳ ತಾ ಕಾಯ್ವ ಕದಂಬ ವನದೊಳು
||ಕೊಳಲಾ||

Lyrics in English

Kolalaa …. uduva chatura yaare pelammayya | talirandadi taa poleva karadi pididu || kolalaa ||

Naadadi tumbitu govardhanagiri yadhava kulagana poreditu khagakula | sadhisi nodalu krishnanu eegalu | saadhyavene vrundavanadolu || kolalaa||

Mevu maretavu govugalellavu | savadhanadinda haridalu yamune || avu kaavutali govalarellara | havabhavadali vrundavanadolu || kolalaa ||

Surarusuridaraakaashadi sumagala savidupogi node vrundavanadolu | sari sari srikrishnanu eegalu | turugala taa kayva kadamba vanadolu || kolalaa ||


ಹುಚ್ಚು ಹಿಡಿಯಿತು ಎನಗೆ ಹುಚ್ಚು /Hucchu hidiyitu enage hucchu

ಹುಚ್ಚು ಹಿಡಿಯಿತು ಎನಗೆ ಹುಚ್ಚು ಹಿಡಿಯಿತು||
ಅಚ್ಯುತನ ಧ್ಯಾನವೆಂಬ ಮೆಚ್ಚು ಮದ್ದು ತಲೆಗೆ ಏರಿ||
||ಹುಚ್ಚು ಹಿಡಿಯಿತು||

ವಾಸುದೇವನೆಂಬ ನಾಮ ವದನದಲ್ಲಿ ವದರುವೆ |
ಮಾಯ ಪಾಶವೆಂಬ ಅಂಗಿಯನ್ನು ಹರಿದು ಹರಿದು ಹಾಕುವೆ ||
ಕೇಶವನ ಹೂವ ಮುಡಿದು ಕುಣಿದು ಕುಣಿದು ಹಾಡುವೆ |
ಕೆಟ್ಟ ದೋಷವೆಂಬ ಗೋಡೆಯನ್ನು ಕೆದರಿ ಕೆದರಿ ಹಾರುವಂಥ
||ಹುಚ್ಚು ಹಿಡಿಯಿತು||

ಕ್ರಷ್ಣನಅಂಘ್ರಿ ಕಮಲದಲ್ಲಿ ಸೊರಗಿ ಸೊರಗಿ ಬೀಳುವೆ |
ಭವಕಷ್ಟವೆಂಬ ಕುಂಭವನ್ನು ಒಡೆದು ಒಡೆದು ಹಾಕುವೆ ||
ನಿಷ್ಠರನ್ನು ಕಂಡು ಅವರ ಹಿಂದೆ ಹಿಂದೆ ಹೋಗುವೆ|
ಕಡು ದುಷ್ಟರನ್ನು ಕಂಡು ನಾನು ಕಲ್ಲು ಕಲ್ಲು ಬೀರುವಂಥ ||
||ಹುಚ್ಚು ಹಿಡಿಯಿತು||

ಮಂದಮತಿಗಳನ್ನು ಕಂಡು ಮೂಕನಾಗಿ ಇರುವೆ |
ಹರಿಯ ನಿಂದೆ ಮಾಡಿದವನ ಮೇಲೆ ಮಣ್ಣು ಮಣ್ಣು ಚೆಲ್ಲುವೆ||
ಬಂಧುಬಳಗದವರೊಳು ಉದಾಸೀನನಾಗಿ ಬಾಳುವೆ|
ಎನ್ನ ತಂದೆ ಪುರಂದರವಿಠ್ಠಲನ ನೆನೆದು ಕುಣಿದು ಪಾಡುವಂತ |
||ಹುಚ್ಚು ಹಿಡಿಯಿತು||

Lyrics in English

Hucchu hidiyitu enage hucchu hidiyitu| achyutana dhyaanavemba mecchu maddu talege eri|| hucchu hidiyitu||

Vasudevanemba naama vadanadalli vadaruve maaya pashavemba angiyannu haridu haridu hakuve|| keshavana hoova mudidu kunidu kunidu haduve|ketta doshavemba godeyannu kedari kedari haruvantha||hucchu hidiyitu||

Krishnananghri kamaladalli soragi soragi beeluve| bhavakashtavemba kumbhavannu odedu odedu hakuve|| nishtarannu kandu avara hinde hende hoguve|kadu dushtarannu kandu nanu kallu kallu ಬೀರುವಂತಹ||hucchu hidiyitu||

Mandamatigalannu kandu mookanaagi eruve|hariya ninde madidavana mele mannu mannu chelluve|| bandhu balagadavarolu udaasinanaagi baaluve| enna tande purandaravittalana nenedu kunidu paduvantha||hucchu hidiyitu||


ಹರಿಯೇ ಇದು ಸರಿಯೇ / Hariye edu sariye

ಹರಿಯೇ| ಇದು| ಸರಿಯೇ|
ಚರಣ ಸೇವಕನಲ್ಲಿ |ಕರುಣ ಬಾರದ್ಯಾಕೆ

ಪತಿತನೆಂದು ಶ್ರೀಪತಿ ರಕ್ಷಿಸದಿರೆ|
ವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ||

ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ|
ಭಕ್ತವತ್ಸಲನಾಮ ವ್ಯರ್ಥವಾಗದೆ|

ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆ|
ನಗಧರ ಎನ್ನ ಬಿಡುವ ಬಗೆ ಏನಿದು|

ಹೇಯ ಅಜಾಮಿಳನ ಕಾಯಲಿಲ್ಲೆ
ಸ್ವ| ಕೀಯನೆ, ನಾ ಪರಕೀಯನೆ ನಿನಗೆ|

ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದು|
ನಂಟನೆ ನಿನಗ ಭಂಟ ನಾನಲ್ಲವೇ?

ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದೆ |
ಕೊಟ್ಟಳು ಅವಳೇನ ಬಿಟ್ಟದ್ದು ನಾನೇನ|

ದೊರೆ ನಿನ್ನ ಮನಸಿಗೆ ಸರಿಬಂದಂತೆ 
ಮಾಡು| ಮೊರೆ ಹೊಕ್ಕೆನು ನಾ 

Lyrics in English

Hariye edu sariye| charana sevakanalli karuna baaradyaake ||

Patitanendu sripati rakshisadire| vitatavahude ninna patita pavana keerti ||

Shakta neenagiddu bhaktanupekshise | bhaktavatsalanama vyarthavaagade |

Digilillade odda bhruguva paaliside |nagadhara enna biduva bage enidu |

Heya ajaamilana kayalillave | swakeeyane naa parakeeyane ninage

Untu hirnyakana kantaka bidisiddu | nantane ninage bhanta naanallave ?

Ketta ahalyeya ditta paliside | kottalu avalena bittaddu naanena

Dore ninna manasige saribandante | maadu more hokkenu naa


ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ /Bantu bantu bhadrapada

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ ||ಬಂತು||

ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ||2||
ಮಂಗಳವ ತರುತಲಿರುವ ಶುಭದ ಚತುರ್ಥಿ ||ಬಂತು||

ಮಣ್ಣಿನಿಂದ ಮಾಡಿದ ಮೂರ್ತಿಯ ತಂದು
ಮಂಟಪದಿ ಕೂರಿಸಿ ಭಕುತಿಯಲಿಂದು||
ಮಾವಿನೆಲೆಯ ಕಟ್ಟಿ ಮನೆಯ ಸಿಂಗರಿಸಿ|
ರಂಗೋಲಿಯ ಹಾಕಿರಿ ಹಬ್ಬವಾಚರಿಸಿ ||ಬಂತು||

ಮಂತ್ರವ ಹೇಳಿ ಪ್ರಾಣಪ್ರತಿಷ್ಠೆಯ ಮಾಡಿ
ಅರಸಿನ ಕುಂಕುಮವ ಅದಕೆ ಇರಿಸಿ
ಬಗೆಬಗೆಯ ಹೂಗಳಿಂದ ಅರ್ಚನೆಯಗೈದು
ದೂರ್ವೆಯಿಂದ ಪೂಜಿಸಿ ದೈವ ಗಣಪಗೆ
||ಬಂತು||

ಧೂಪದೀಪದಿಂದ ಅವನ ಉಪಾಸನೆ
ಮೋದಕ ಕಡುಬು‌ ನೈವೇದ್ಯದಾರಾಧನೆ ||
ಕರ್ಪೂರದಾರತಿಯ ಎತ್ತಿರಿ ಗಣಪತಿಗೆ|
ಕರುಣಾಮಯ ವರನೀಡು ಎನ್ನಿರಿ ನಮಗೆ ||ಬಂತು||

Lyrics in English

Bantu bantu bhadrapada shukla chaturthi | badava dhanika acharisuva punya chaturthi || bantu ||
Bhaktiyinda maduva ganesha chaturthi ||2|| mangalava tarutaliruva shubhada chaturthi ||bantu||

Mannininda maadida murtiya tandu |mantapadi koorisi bhakutiyalindu|| maavineleya katti maneya singarisi| rangoliya haakiri habbavaacharisi ||Bantu||

Mantrava heli pranapratishteya maadi | arasina kumkumava adake erisi| bagebageya hoogalinda archaneyagaidu| doorveyinda poojisi daiva ganapage|| bantu ||

Dhoopadinda avana upaasane | modaka kadubu naivedyadaaradhane||karpooradaaratiya ettiri ganapatige| karunamaya varaneedu enniri namage||bantu||


ಪೊಂದಿ ಬದುಕಿರೊ ರಾಘವೇಂದ್ರ  ರಾಯರ / Pondi badukiro raghavendra rayara

ಪೊಂದಿ ಬದುಕಿರೊ ರಾಘವೇಂದ್ರ ರಾಯರ        || ಪ ||
ಕುಂದದೆಮ್ಮನು ಕರುಣದಿಂದ ಪೊರೆವರ        || ಅ ||

ನಂಬಿ ಸ್ತುತಿಸುವ ಜನಕದಂಬಕಿಷ್ಟವ
ತುಂಬಿ ಕೊಡುವನು ಅನ್ಯರ್ಹ೦ಬಲೀಯನು    || ೧ ||

ಅಲವಬೋಧರ ಸುಮತ ಜಲಧಿಚ೦ದಿರ
ಒಲಿದು ಭಕ್ತರ ಕಾಯ್ವ ಸುಲಭಸುಂದರ        || ೨ ||

ಗುರುಸುಧಿಂದ್ರದರ ವಿಮಲ ಕರಜನೆನಿಪರ
ಸ್ಮರಿಸಿ ಸುರುಚಿರ ವಿಮಲಚರಣಪುಷ್ಕರ    || ೩ ||

ಫಾಲಲೋಚನ ವಿನುತ ಮೂಲರಾಮನ
ಲೀಲೆಯನುದಿನ ತುತಿಪ ಶೀಲ ಸದ್ಗುಣ        || ೪ ||

ಭೂತಭಾವನ ಜಗನ್ನಾಥ ವಿಠ್ಠಲನ
ಪ್ರೀತಿಪಾತ್ರನ ನಂಬಿರೀತನನುದಿನ        || ೫ |

Lyrics in English

Pondi badukiro raghavendra rayara || pa ||

Kundademmanu karunadinda porevara || a ||

Nambi tutisuva janakadanbakishtava | Tumbi koduvanu anyarhanbaliyanu || 1 ||

Alavabodhara sumata jaladhichandira | Olidu Baktara kayva sulabasundara || 2 ||

Gurusudhindrara vimala karajanenipara | Smarisi surucira vimalacharanapushkara || 3 ||

Phalalochana vinuta moola ramana | leeleyanudina stutipasheela sadguna ||4||

Bhutabhavana jagannaatha vittalana | preetipatrana nambireetananudina ||5||


ರಾಯರೇ ಗತಿಯು ನಮಗೆ / Rayare gatiyu namage

ರಾಯರೇ ಗತಿಯು ನಮಗೆ । ವಾಯುಸುಮತೋದ್ಧಾರ ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।

ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ । ಯುಕುತಮಾಗಿಹ ಚೂತ ಸುಕುಜ ಗತಿಯೋ । ಮುಕುತಿಗೆ ಸುಜ್ಞಾನ ಭಕುತಿ ವಿರುಕುತಿ ಗತಿಯು । ಅಕಳಂಕ ಶ್ರೀಮಂತ ಮಂದಿರದಿ ನೆಲಸಿಪ್ಪ ।। ಚರಣ ।।

ಋಷಿಗಳಿಗೆ ಪ್ರಣವವೇ ಗತಿ ಝಷಗಳಿಗೆ ಜಲವೇ ಗತಿ । ಸಸಿಗಳಭಿವೃದ್ಧಿಗೆ ಶಶಿಯೇ ಗತಿಯು । ಶಿಶುಗಳಿಗೆ ಜಲವೆ ಗತಿ ಪಶುಗಳಿಗೆ ತೃಣವೆ ಗತಿ । ಈಸು ಮಹಿಮೆಲಿ ಮೆರೆವ ಮಿಸುನಿ ಶಯ್ಯಜರಾದ ।। ಚರಣ ।।

ಕಾಮಿನೀ ಮಣಿಯರಿಗೆ ಕೈಪಿಡಿದ ಕಾಂತ ಗತಿ । ಭೂಮಿ ವಿಬುಧರಿಗೆ ಮಧ್ವ ಶಾಸ್ತ್ರ ಗತಿಯೋ । ತಾಮರಸ ಸಖ ಸುತನ ಭಯ ಪೋಪುವುದಕೆ । ಶ್ರೀ । ಶ್ಯಾಮಸುಂದರ ವಿಠ್ಠಲ ಸ್ವಾಮಿ ನಾಮವೇ ಗತಿಯೋ ।। ಚರಣ ।।

Lyrics in English

Raayare gatiyu namage | vaayusumatoddaara sri raghavendra guru ||pa||

Shuka pika modalaada vikulakke madhura phala | yukutamaagiha choota sukuja gatiyo | mukutige sujnaana bhakuti virukuti gatiyu | akalanka srimanta mandiradi nelesippa || 1 ||

Rushigalige pranavave gati rushagalige jalave gati | sasigalabhivruddhige shashiye gatiyu | shishugalige jalave gati pashugalige tranave gati | eesu mahimeli mereva misuni shayyajaraada || 2||

Kaamini maniyarige kaipidida kaanta gati | bhoomi vibhudarige madhwa shastra gatiyo | tamarasa sakha sutana bhaya popuvudake | sri shyamasundara vittala swami namave gatiyo ||3||