ವ್ರಂದಾವನ ನೋಡಿರೋ ಗುರುಗಳ / Vrundava nodiro gurugala

ವ್ರಂದಾವನ ನೋಡಿರೋ
ಗುರುಗಳಾ ಯತಿಗಳಾ ರಾಘವೇಂದ್ರರ
ವ್ರಂದಾವನ ನೋಡಿರೋ…..

ವ್ರಂದಾವನ ನೋಡಿರೋ ಗುರುಗಳ, ಯತಿಗಳಾ, ಮುನಿಗಳಾ
ರಾಘವೇಂದ್ರರ ವ್ರಂದಾವನ ನೋಡಿರೋ ||ವ್ರಂದಾವನ||

ವ್ರಂದಾವನ ನೋಡಿ ಆನಂದ ಮದವೇರಿ
ಚೆಂದದಿ ದ್ವಾದಶ ಪುಂಡ್ರಾಕಿಂತಗೊಂಬ ವ್ರಂದಾವನ ನೋಡಿರೋ

ತುಂಗಾಭದ್ರಾ ನದಿಯ ತೀರದಿ ಇದ್ದ ತುಂಗಮಂಟಪ ಮಧ್ಯದಿ |
ಶ್ರಂಗಾರ ತುಳಸಿ ಪದುಮಾಕ್ಷ ಸರಗಳಿಂದ ||
ಮಂಗಳಕರವಾದ ಮಹಿಮೆಯಿಂದೊಪ್ಪುವ
||ವ್ರಂದಾವನ||

ದೇಶದೇಶದಿ ತಿರುಗುತಾ ಇಲ್ಲಿಗೆ ಬಂದು ವಾಸವಾಗಿ ಸೇವಿಪಾ |
ಭಾಷೆಕೊಟ್ಟಂದದಿ ಬಹುವಿಧ ವರಗಳ||
ಸೂಸುವ ಕರ ಮಹಾಮಹಿಮೆಯಿಂದೊಪ್ಪುವ
||ವ್ರಂದಾವನ||

ನಿತ್ಯ ಸನ್ನಿಧಿ ಸೇವಿಪಾ ಭಕ್ತರಿಗೆಲ್ಲ ಮತ್ತಭೀಷ್ಟ ತರುವ |
ಸತ್ಯಾದಿ ಗುಣಸಿಂಧು ವೆಂಕಟ ವಿಠ್ಠಲನಾ ವೆಂಕಟ ವಿಠ್ಠಲನಾ…ಆ…|| ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ
||ವ್ರಂದಾವನ||

Lyrics in English

Vrundavana nodiro gurugalaa yatigalaa raghavendrara vrundava nodiro …..

Vrundavana nodiro gurugala, yatigala, munigala raghavendrara vrundava nodiro || vrundava ||

Vrundavana nodi ananda madaveri | chandadi dwadasha pundraankitagomba vrundava nodiro ||

Tungabhadra nadiya teeradi edda tungamantapa madhyadi | shrungara tulasi padumaksha saragalinda | mangalakaravada mahimeyindoppuva || vrundava ||

Deshadeshadi tiruguta ellige bandu vasavagi sevipa | bhashekottandadi bahuvidha varagala | soosuva kara mahamahimeyindoppuva || vrundava ||

Nitya sannidhi sevipa bhaktarigella mattabhishta taruva | satyadi gunasindhu venkata vittalana venkata vittalana … aa…… | nitya sannidhiyinda niruta pujeyagomba || vrundava ||


ಕಪ್ಪು ಎನ್ನಲು ಬೇಡವೋ / Kappu enalu bedavo sri hariyannu

ಕಪ್ಪು ಎನ್ನಲು ಬೇಡವೋ ಶ್ರೀ ಹರಿಯನ್ನು
ಕಪ್ಪು ಎನ್ನಲು ಬೇಡವೋ ||ಪ||

ಹರಿಯ ಮಧ್ಯದಿ ಕಪ್ಪು ಹಾಲಾಹಲವು ಕಪ್ಪು, ಪರಮ ಅಶ್ವವೆ ಕಪ್ಪು | ಪಾರಿಜಾತವೆ ಕಪ್ಪು, ಕರಿಗಳೆಲ್ಲವು ಕಪ್ಪು, ಸುಲಲಿತವರನೆ ಕಪ್ಪು, | ಸನ್ನುತವಾದ ಹರಿಹಯ ನೀಲಿಕಪ್ಪು, ಅಂಗನೆ ಕೇಳು | ಜಗದೊಳಗೆ ಗುಲಗಂಜಿ ಶಿರಗಳೆಲ್ಲವು ಕಪ್ಪು ||

ಬರೆವ ಕಂಟವೆ ಕಪ್ಪು, ಭಾರದ್ವಾಜವೆ ಕಪ್ಪು, ವರರಾಘವನ್ನ
ಪಾವನಾಂಗವೆ ಕಪ್ಪು, ಎರೆವ ಭೂಮಿಯು ಕಪ್ಪು, ಎಸೆವ ಕಸ್ತೂರಿ ಕಪ್ಪು | ಸುಲಲಿತವರನೆ ಕಪ್ಪು, ಅಂಗನೆ ಕೇಳು
ಮೂರುಲೋಕದಿ ನಮ್ಮ ಮುದ್ದುಕೃಷ್ಣನೆ ಕಪ್ಪು ||

ಶಾಲಿಗ್ರಾಮವೆ ಕಪ್ಪು, ಸರಸಿಜೋದ್ಭವ ಕಪ್ಪು, ಲೋಲಂಬಗಳು ಕಪ್ಪು | ರುಚಿತ ಕೋಗಿಲೆ ಕಪ್ಪು, ಮಾಲವುತ್ವವೆ ಕಪ್ಪು, ನಿರ್ಮಲಚಿತ್ತವೆ ಕಪ್ಪು | ಕಾಲಿಂದೀ ನದಿಯೆ ಕಪ್ಪು, ಕಾಮಿನಿಯರ ಕರಿಮಣಿಸರವೆ ಕಪ್ಪು, ಅಂಗನೆ ಕೇಳು
ಮೂರುಲೋಕದಿ ನಮ್ಮ ಪುರಂದರವಿಠಲ ಮೂರುತಿ ಕಪ್ಪು ||

Lyrics in English

Kappu ennalu bedavo sri hariyannu | kappu ennalu bedavo || pa ||

Hariya madhyadi kappu, haalahalavu kappu, parama ashwave kappu | parijatave kappu, karigallelllavu kappu, sulalitavarane kappu | sannutavada harihaya neelikappu, angane kelu | jagadolage gulaganji shiragallellavu kappu ||

Bareva kantave kappu, bharadwajave kappu, vara raghavanna pavanaangave kappu, ereva bhumiyu kappu, eseva kasturi kappu | sulalitavarane kappu, angane kelu moorulokadi namma muddukrishnane kappu ||

Shaligramave kappu, sarasijodhbhava kappu, lolambagalu kappu | ruchita kogile kappu, malavutvave kappu, nirmalachittave kappu | kaalindi nadiye kappu, kaminiyara karimani sarave kappu, angane kelu moorulokadi namma purandaravittala mooruti kappu ||


ಎಲ್ಲೆಲ್ಲು ನಿನ್ನನೆ ಕಾಣುವೆ ಎಲ್ಲರಮ್ಮ / Ellellu ninnane kanuve ellaramma

ಎಲ್ಲೆಲ್ಲು ನಿನ್ನನೆ ಕಾಣುವೆ ಎಲ್ಲರಮ್ಮ ಎಲ್ಲಮ್ಮಾ…|
ಬಲ್ಲಿದರಿಗೆ ಭಾಗ್ಯದೇವಿ ಪುಲ್ಲನಯನೆ ಕಾಯಮ್ಮ||
||ಎಲ್ಲೆಲ್ಲು||

ಚರಣಾಶ್ರಿತ ಜನ ರಕ್ಷಕಿಯೆ ನಿರುಪಮ ಮಹಿಮಾನ್ವಿತಳೆ|
ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ ||
ಸುರಜನರಿಂ ವಂದಿತಳೇ ವರವ ನೀಡಿ ಪೊರೆಯೆ ತಾಯಿ |
ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ ||
||ಎಲ್ಲೆಲ್ಲು||

ತನು ಬತ್ತಲೆ ನೀನೊಲ್ಲೆ ಮನ ಬೆತ್ತಲೆಗೊಲಿವೆ ನೀನು|
ಅನುದಿನವು ನಿನಗಾಗಿ ತನು ಮನ ಧನ ಎನ್ನುವೆ ನಾನು ||
ಕನಸ್ಸು ಮನಸ್ಸಿನಲ್ಲಿ ಎಂದು ನೆನೆಯುತಿರುವೆ ನಿನ್ನ ಮಹಿಮೆ|
ಅನುದಿನವು ನಿನಗಾಗಿ ತನು ಮನ ಧನ ಎನ್ನುವೆ ನಾನು ||
||ಎಲ್ಲೆಲ್ಲು||

ಮಾಧವ ಹರಿ ವೇದವ್ಯಾಸನ ದಾಸನ ನೀ ಕಾಯುವುದಮ್ಮ |
ಸಾಧು ಸಂತರನು ನೀ ಮೋದದಲಿ ಪೊರೆಯುವುದಮ್ಮ ||
ಆದರದಲಿ ಧ್ಯಾನ ಭಕುತಿ ನೀ ದಯದಲಿ ನೀಡಮ್ಮ|
ಸಾಧು ಸಂತರನು ನೀ ಮೋದದಲಿ ಪೊರೆಯುವುದಮ್ಮ ||
||ಎಲ್ಲೆಲ್ಲು||

Lyrics in Englisha

Ellellu ninnane kanuve ellaramma ellamma …. | ballidarige bhagyadevi pullanayane kayamma || ellellu||

Charanashrita jana rakshakiye nirupama mahimanvitale | more iduve kara mugive paripalisu nee baa baa | surajanarim vanditale varava needi poreye taaye | more eduva kara mugive paripalisu nee baa baa ||ellellu||

Tanu battale neenolle mana battalegolive neenu | anudinavu ninagagi tanu mana dhana ennuve naanu |kannassu manasinali endu neneyutiruve ninna mahime | anudinavu ninagagi tanu mana dhana ennuve nanu || ellelllu ||

Madhava hari vedavyasana dasana nee kayuvadamma | sadhu santaranu nee modadali poreyuvadamma | adaradali dhyana bhakuti nee dayadali needamma | sadhu santaranu nee modadali poreyuvudamma || ellellu||


ಜನುಮಾ ತಾಳಿದ ಗಣಪಾ / Januma talida ganapa

ಜನುಮಾ ತಾಳಿದ ಗಣಪಾ| ಗೌರಿ ಕುಂಡದಿ ತೀರದಿ ಮೆರೆವ
ಶ್ರೀವಿನಾಯಕ ಭಾರತಿ ಸ್ವಾಮಿ | ಜನುಮಾ ತಾಳಿದ
||ಜನುಮಾ||

ತಾಯಿ ಪಾರ್ವತಿ ದೇವಿ ಶಕ್ತಿಯ ಲೋಕಗಳಿಗೆ ಸಾರಲು|
ತಂದೆ ಶಿವನ ದಿವ್ಯ ಶಕ್ತಿಯ ಭಕ್ತ ಜನಕೆ ಹರಸಲು ||
ಪ್ರಣವ ಮಂತ್ರದಿ ಅಕ್ಷರಗಳ ರೂಪವನ್ನು ತಾನು ಧರಿಸಿ |
ವಿಘ್ನನಾಶವ ಮಾಡಿದ ಭಕ್ತರ ಕಾರ್ಯಗಳಿಗೆ ಸಿಧ್ಧಿಯ ತೋರಲು
ಜನುಮಾ ತಾಳಿದ ಗಣಪಾ ||ಜನುಮಾ||

ಪ್ರಮಥ ಗಣಕೆ ನಾಥನಾಗಿ ಪ್ರಥಮ ಪೂಜೆಯ ಪಡೆಯಲು|
ಸುಂದರನೆಂದು ಮೆರೆವ ಚಂದ್ರನ ಗರ್ವವನ್ನು ಅಳಿಸಲು ||
ಮೂಷಿಕಾಸುರನ ಗರ್ವ ಮುರಿದು ವಾಹನವಾಗಿ ತಾನು ಪಡೆಯಲು | ಪಾಂಡವರಿಂದ ಪೂಜೆ ಪಡೆದು ಮರಳಿ ರಾಜ್ಯವ ತಾನು ಪಡೆಯಲು
ಜನುಮಾ ತಾಳಿದ ಗಣಪಾ ||ಜನುಮಾ||

Lyrics in English

Januma talida ganapa | gowri kundadi teeradi mereva sri vinayaka bharati swami | januma talida || januma ||

Taayi parvati devi shaktiya lokagalige saralu | tande shivana divya shaktiya bhakta janake harasalu | pranava mantradi aksharagala rupavannu tanu dharisi | vighna nashava madida bhaktara karyagalige siddhiya toralu | januma talida ganapa || januma ||

Pramatha ganake nathanagi prathama pujeya padeyalu | sundaranendu mereva chandrana garvavannu alisalu | mushikasurana garva muridu vahanavagi tanu padeyalu | pandavarinda puje padedu marali rajyava tanu padeyalu | januma talida ganapa || januma ||


ಗಜಚರ್ಮಾಂಭರ ಗೌರಿ ಮಹೇಶಗೆ / Gajacharmaambhara gowri maheshage

ಗಜಚರ್ಮಾಂಭರ ಗೌರಿಮಹೇಶಗೆ
ಬೆಳಗುವೆ ಮಂಗಳದಾರತಿಯ |
ಗಣಪತಿ ಪಿತ ಸತಿ, ಪಾರ್ವತಿ ಪತಿಗೆ |
ಬೆಳಗುವೆ ಮಂಗಳದಾರತಿಯಾ…..
||ಗಜಚರ್ಮಾಂಭರ||

ಶಿವಶಂಕರ ಹರ ವರ ಗಂಗಾಧರ
ನಟವರ ಈಶ್ವರಗೆ |
ರುದ್ರಭಯಂಕರ ಶಿವಅಭಯಂಕರ |
ಗಿರಿಜಾ ವಲ್ಲಭಗೇ……
||ಗಜಚರ್ಮಾಂಭರ||

ದುಷ್ಟರ ಗೆಲಿದು ,ಶಿಷ್ಟರಿಗೊಲಿದು
ತಾಂಡವಗೈದವಗೆ |
ಢಮರುತ್ರಿಶೂಲ ,ಉರಗವಧರಿಸಿದ |
ನಂಜುಡೇಶನಿಗೇ….
||ಗಜಚರ್ಮಾಂಭರ||

Lyrics in English

Gajacharmambhara gowri maheshage belaguve mangaladaratiya | ganapati pita sati, parvati patige | belaguve mangaladaratiya ….. || gajacharmambhara ||

Shivashankara hara vara gangadhara natavara eshwarage | rudra bhayankara shiva abhayankara | girija allabhage …. || gajacharmambhara ||

Dushtara gelidu shishtarigolidu tandavagaidavage | dhamaru trishula, uragava dharisida | nanjundeshanige ….. || gajacharmambhara ||


ಬಂದು ನಿಂದಾ ಕಣ್ಣ ಮುಂದೆ / Bandu ninda kanna munde

ಬಂದು ನಿಂದಾ ಕಣ್ಣ ಮುಂದೆ
ಕಂದರ್ಪಜನಕ ದೇವಾ ||
ಬಂದು ನಿಂದಾ ಭಾಗವತರ ಪ್ರಿಯಾ
ಇಂದಿರಾರಮಣ ಗೋವಿಂದ ಮುಕುಂದ ||ಬಂದು||

ಕುಟಿಲ ಕುಂತಲ ದೇವ
ವಟು ವೇಷಧರಿಸುವ ||
ನಟನೆ ಮಾಡುತ
ದಿವ್ಯ ಪಟುತರದಲಿ ತಾನು ||ಬಂದು||

ಕೊಳಲನೂದುತ್ತ ತಾನು
ಮರುಳುಗೊಳಿಸಿ ಜನರ ||
ಕೊರಳ ಪದಕಹಾರ ಕೌಸ್ತುಭ ಹೊಳೆಯುತ ||ಬಂದು||

ಸುಜನರ ಪೊರೆಯುವ
ಕುಜನರ ತರಿಯುವ ||ಸುಜನರ||
ವಿಜಯ ಸಾರಥಿ ದಿವ್ಯ ವಿಜಯವಿಠಲರೇಯಾ ||ಬಂದು||

Lyrics in English

Bandu ninda kanna munde kandarpajanaka deva | bandu ninda bhagavatara priya indiraramana govinda mukunda || bandu ||

Kutila kuntala deva vatu veshadharisuva | natane maduta divya patutaradali taanu || bandu ||

Kolalanoodutta tanu marulugolisi janara | korala padakahara janara kowstubha holeyuta ||

Sujanara poreyuva kujanara tariyuva | vijaya sarathi divya vijayavittalaraya || bandu ||

……………..

ಮಂಗಳ ಮಾರಮಣಗೆ, ಮಂಗಳ ಭೂರಮಣಗೆ / Mangala maramanage mangala bhuramanage

ಮಂಗಳ ಮಾರಮಣಗೆ, ಮಂಗಳ ಭೂರಮಣಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ ||2||
||ಮಂಗಳ ಮಾ||

ಮುಕುಟಕೆ ಮಂಗಳ ಮತ್ಸ್ಯಾವಾತಾರಗೆ
ಮುಖಕೆ ಮಂಗಳ ಮುದ್ದು ಕೂರ್ಮನಿಗೆ |
ಸುಕಂಠಕೆ ಮಂಗಳ ಸೂಕರ ರೂಪಗೆ |
ನಖಕೆ ಮಂಗಳ ಮುದ್ದು ನರಸಿಂಹಗೆ
||ಮಂಗಳ ಮಾ||

ವಕ್ಷಕೆ ಮಂಗಳ ವಟು ವಾಮನನಿಗೆ
ಪಕ್ಷಕೆ ಮಂಗಳ ಭಾರ್ಗವಗೆ ||
ಕಕ್ಷಕೆ ಮಂಗಳ ಕಾಕುತ್ಸ್ಥರಾಮನಿಗೆ |
ಕುಕ್ಷಿಗೆ ಮಂಗಳ ಶ್ರೀ ಕೃಷ್ಣಗೆ
||ಮಂಗಳ ಮಾ||

ಊರುಗಳಿಗೆ ಮಂಗಳ ಉತ್ತಮ ಬುದ್ಧಗೆ
ಚರಣಕ್ಕೆ ಮಂಗಳ ಚೆಲ್ವ ಕಲ್ಕಿಗೆ ||
ಪರಿಪರಿ ರೂಪಗೆ ಪರಮ ಮಂಗಳ |
ಪುರಂದರವಿಠಲಗೆ ಶುಭಮಂಗಳ
||ಮಂಗಳ ಮಾ||

Lyrics in English

Mangala maramanage, mangala bhuramanage | jaya mangalam nitya shubha mangalam || mangala ma ||

Mukutake mangala matsyavatarage | mukhake mangala muddu koormanige | sukantake mangala sookara rupage | nakhake mangala muddu narasimhage || mangala ma||

Vakshake mangala vatu vamananige | pakshake mangala bhargavage | kakshake mangala kakutsaramanige | kukshige mangala sri krishnnage || mangala ma ||

Oorugalige mangala uttama buddage | charanake mangala chelva kalkige | paripari rupage parama mangala | purandaravittalage shubhamangala || mangala ma ||


ನಮೋ ಪಾರ್ವತಿ ಪತಿನುತ ಜನಪರ / Namo parvati patinuta janapara

ನಮೋ ಪಾರ್ವತಿ ಪತಿನುತ ಜನಪರ ನಮೋ ವಿರೂಪಾಕ್ಷ
ನಮೋ ನಮೋ ವಿರೂಪಾಕ್ಷ ||
ರಮಾರಮಣನಲಿ ಅಮರಭಕುತಿ ಕೊಡು
ನಮೋ ವಿಶಾಲಾಕ್ಷ ||ನಮೋ ಪಾರ್ವತಿ||

ನೀಲಕಂಠ ತ್ರಿಶೂಲಢಮರು ಹಸ್ತಾಲಂಕ್ರತ ರಕ್ಷಾ
ಪಾಲನೇತ್ರ ಕಪಾಲರುಂಡ ಮಣಿಮಾಲ ಧ್ರತವಕ್ಷ ||
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲಸುರಾಧ್ಯಕ್ಷ
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷಾ
||ನಮೋ ಪಾರ್ವತಿ||

ವಾಸವನುತ ಹರಿದಾಸ ಈಶ ಕೈಲಾಸ ವಾಸದೇವ
ದಾಸರಥಿಯ ಔಪಾಶಕ ಸುಜನರ ಪೋಷಿಪ ಪ್ರಭಾವ ||
ಭಾಧಿಸುತಿಹುದ ಶೇಷಜೀವರಿಗೆ ಈಶನೆಂಬ ಭಾವ
ಶ್ರೀಶನಲ್ಲಿ ಇರಿಸು ಮನವ ಗಿರಿಜೇಶ ಮಹಾದೇವಾ
||ನಮೋ ಪಾರ್ವತಿ||

ಮ್ರತ್ಯುಂಜಯ ನಿನ್ನುತ್ತಮ ಪದಯುಗ ಭ್ರತ್ಯಾನುಸರ್ವತ್ರ
ಹತ್ತಿರ ಕರೆದು ಅಪತ್ಯನಂದದಿ ಪೊರೆಯುತ್ತಿರೊ ತ್ರಿನೇತ್ರ ||
ಹೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ
ಕತ್ರ್ ಉಡುಪಿ ಸರ್ವೋತ್ತಮ ಕ್ರಷ್ಣನ ಪೌತ್ರಕ್ರಪ ಪಾತ್ರ
||ನಮೋ ಪಾರ್ವತಿ||

Lyrics in English

Namo patvati patinuta janapara namo virupaksha | namo namo virupaksha || ramaramananali amarabhakuti kodu namo vishalaksha || namo parvati ||

Neelakanta trishuladhamaru hastaalankrita raksha | palanetra kapalarunda manimala drutavaksha | sheelaramya vishala suguna salleelasuradhyaksha | srilakumeeshana olaisuva bhaktavaligala paksha || namo parvati ||

VAsavanuta haridasa eesha kailasa vasadeva | dasharathiya oupasaka sujanara poshipa prabhava || bhadisutihuda sheshajeevarigeeeshanemba bhava | srishanalli erisu manava girijesha mahadeva || namo parvati ||

Mrutyunjaya ninnuttama padayuga bhrutyanu sarvarta | hattira karedu apatyanandadi poreyuttiro trinetra | hettiganante kayuttihe baanana satyadi sucharitra | katra udupi sarvottama krishnana poutrakripa paatra || namo parvati ||


ರಾ ಎಂದ ಮಾತ್ರದೊಳು / Raa enda matradolu rakta

ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಾ
ಆಯಸ್ತವಾದ ಅತಿ ಪಾಪವನೂ ಮಾಯ ಮಾಡಿ, ಮತ್ತೆ ಮಾ ಎಂದೆನಲು
ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೇ…ಏ…
ಕವಾಟವಾಗಿ ಕಾಯ್ವ ಮಂತ್ರಾ…..ಆ…

ಶ್ರೀ ರಾಮ ಜಯ ರಾಮ ರಮಣೀಯ ನಾಮ ರಘುರಾಮ ||2||
ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ ||
ರಘುಕುಲತಿಲಕನ ಚರಣಕ್ಕೆರಗಿ ಪುನೀತರಾಗೋಣ

ಅಗಣಿತ ಗುಣ ಗಣ ಶ್ರೀ ರಾಮ ಆಶ್ರೀತ ವತ್ಸಲ ಶ್ರೀ ರಾಮ
ದೀನದಯಾಳು ಶ್ರೀ ರಾಮ ಹರಿ ಸರ್ವೋತ್ತಮ ಶ್ರೀ ರಾಮ
ದಶಮುಖ ಮರ್ದನ, ದಶರಥ ರಾಮ ಮಾರುತಿ ಸೇವಿತ ಶ್ರೀ ರಾಮ
ರಾಮಚಂದ್ರ ಪ್ರಭು ‌ ||ರಾಮ ಮಂತ್ರವ||

ಜಾನಕಿ ಮನೋಹರ ಜ್ಞಾನಧಾತ ಕರುಣಾಸಾಗರ ಕೋದಂಡರಾಮಾ..
ಭಕ್ತಿಪ್ರಿಯನಿಧಿ ,ಮುಕ್ತಿದಾಯಕ ಭಕ್ತಜನ ಶ್ರೀ ಮಂದಾರನೇ
ರಾಮ ಎಂಬುವ ಎರಡು ಅಕ್ಷರದ ಮಹಿಮೆಯ |
ಪಾಮರರು ನಾವು ಬಲ್ಲೆವೇನು ||


ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮಚಂದ್ರ ಪ್ರಭು ||ರಾಮ ಮಂತ್ರವ||

ಧರೆಯೊಲಿ ನಾಮಕೆ ಸರಿಸಾಟಿ ಇಲ್ಲವೆಂದು
ಪರಮ ವೇದಗಳೆಲ್ಲ ಪೊಗಳುತಿವೆ
ಚಿತ್ತ ಕಾಯಗಳ ಪವಿತ್ರ ಪಾದೋದಕವ ಭಕ್ತವರ ಹನುಮಂತನೊಬ್ಬ ತಾ ಬಲ್ಲ
ರಾಮ ಗೋವಿಂದ ಹರೇ ಕ್ರಷ್ಣ ಗೋವಿಂದ
ರಾಮ ಗೋವಿಂದ ಹರೇ ಕ್ರಷ್ಣ ಗೋವಿಂದ
ಶಂಖಚಕ್ರ ಧರಾ ವಿಷ್ಣು ಮುಕುಂದ ||


ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮಚಂದ್ರ ಪ್ರಭು ||ರಾಮ ಮಂತ್ರವ||

Lyrics in English

Raa enda matradolu rakta mamsadoliddaa
ayastavada ati papavanoo maya madi, matte maa endenalu
hobidda paapagalu otti ola pogadante …
kavaatavagi kayva mantra …….

Sri rama jaya rama ramaneeya nama raghurama
rama mantrava japisi paapava kaleyona ||
raghukulatilakana charanakkeragi puneetaragona

Aganita gunagana sri rama ashrita vatsala sri rama
deenadayalu sri rama hari sarvottama sri rama
dashamukha mardhana, dasharatha rama maruti sevita sri rama
ramachandra prabhu || rama mantrava ||

Janaki manohara jnanadaata karunasagara kodandarama
bhaktipriyanidhi muktidayaka bhaktajana sri mandarane
rama embuva eradu aksharada mahimeya|
pamararu navu ballevenu ||


Rama rama rama rama rama rama rama
rama rama rama rama rama rama rama
rama rama rama rama rama rama rama
ramachandra prabhu || rama mantrava ||

Dhareyoli namake sarisati illavendu
parama vedagalella pogalutive
chitta kayagala pavitra paadodakava
bhaktavara hanumantanobba taa balla
rama govinda hare krishna govinda hare
rama govinda hare krishna govinda hare
shankhachakradhara vishnu mukunda ||

Rama rama rama rama rama rama rama
rama rama rama rama rama rama rama
rama rama rama rama rama rama rama
ramachandra prabhu || rama mantrava ||

**********************

ಭೂಮಿಗೆ ಬಂದ ದೇವಕಿ ಕಂದ/ Bhumige banda devaki kanda na bedalu

ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನ ಕಾಪಾಡಲು |
ಈ ಪಾದವೂ ಮೈ ಸೋಕಲು ನನ್ನಲ್ಲಿ ಎಂಥಾ ಆನಂದವು ||
||ಭೂಮಿಗೆ||

ಆಕಾಶದಲ್ಲಿ ಬೆಳಕಾಗಿ ಬಂದೆ ಈ ಭೂಮಿಯಲ್ಲಿ ಹಸಿರಾಗಿ ನಿಂತೆ
ಹೂವಿನಲಿ ಕಂಪು , ಗಾಳಿಯಲಿ ತಂಪು ಸಂಗೀತದಲ್ಲಿ ಇಂಪಾದೆ ನೀನು
ಎಲ್ಲೆಲ್ಲಿಯು ನಿನ್ನಾಟವೇ ಕಣ್ಣ್ತುಂಬ ಇಂದು ನಾ ಕಂಡೆನು
||ಭೂಮಿಗೆ||

ಎಲ್ಲಿದ್ದೆ ನಾನು, ಹೇಗಿದ್ದೆ ನಾನು ನೀ ಬಂದ ಮೇಲೆ ಏನಾದೆ ನಾನು
ಕಲ್ಲಾದರೇನು ಮುಳ್ಳಾದರೇನು ನೀ ಸೋಕಿದಾಗ ಹಿಡಿ ಮಣ್ಣು ಹೊಣ್ಣು
ನೀ ಹೀಗೆಯೇ ಜೊತೆಯಾಗಿರೆ ನಾ ನಿಂತ ತಾಣ ವೈಕುಂಠವು
ಈ ಪಾದವು ಮೈ ಸೋಕಲು ನನ್ನಲ್ಲಿ ಎಂಥಾ ಆನಂದವು
||ಭೂಮಿಗೆ||

ಹಗಲಲ್ಲಿ ಇರುಳಲ್ಲಿ ಎಲ್ಲ ಕಾಲಗಳಲ್ಲಿ ಭಕ್ತನ ಬಳಿಯಲ್ಲಿ ಭಕ್ತಿಯ ಸುಳಿಯಲ್ಲಿ
ನೆನೆದವರ ಮನದಲ್ಲಿ ಕರೆದವರ ಎದುರಲ್ಲಿ ಸ್ನೇಹದಲಿ, ಪ್ರೇಮದಲಿ ಎಲ್ಲೆಲ್ಲು ನಾನಿರುವೆ
ನಾನಿಲ್ಲದ ಎಡೆಯಿಲ್ಲ,, ನಾನಿಲ್ಲದೆ ಏನಿಲ್ಲಾ ನಾನು ನಾನೆಂಬ ಅಜ್ಞಾನಿಗೆ ನಾನಿಲ್ಲಾ…ನಾನಿಲ್ಲಾ..

ಈ ಮಾತಿಗೆ , ಈ ಗೀತೆಗೆ ಶರಣಾಯಿತು ಜೀವಾ ನಿನ್ನ ಪಾದಕೆ
ಈ ಪಾದವು ಮೈ ಸೋಕಲು ನನ್ನಲ್ಲಿ ಎಂಥಾ ಆನಂದವು
||ಭೂಮಿಗೆ||

Lyrics in English

Bhumige banda devaki kanda na bedalu nanna kapadalu
ee padavu mai sokalu nannalli entha anandavu || bhumige banda ||

Akashadalli belakagi bande e bhumiyalli hasiragi ninte
hoovinali kampu, galiyali tampu sangeetadalli impada neenu
ellelliyu ninnatave kantumba indu na kandenu || bhumige banda ||

Ellidde nanu, hegidde nanu nee banda mele enade nanu
kalladarenu mulladarenu nee sokidaga hidi mannu honnu
nee higeye joteyagire naa ninta tana vaikuntavu
ee padavu mai sokalu nannalli entha anandavu || bhumige banda ||

Hagalalli erulalli ella kalagalalli bhaktana baliyalli, bhaktiya suliyalli
nenedavara manadalli, karedavara eduralli snehadali premadali ellellu naniruve
nanirade edeyilla nanillade enilla nanu nanemba ajnanige nanilla.. nanilla …

Ee matige ee geetege sharanayitu jeeva ninna padake
ee padavu mai sokalu nannalli entha anandavu
||bhumige banda||