ಏಕೆ ಬೃಂದಾವನದಿ ನೆಲೆಸಿರುವೆ / Eke brundavanadi nelesiruve guruve

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ | ನಾಕವಿಲಸಿತಗೀತೆ ಲಾವಣ್ಯಮೂರ್ತೆ | ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು | ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||

ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ | ಮುಂದೆ ನ೦ದನ ಕಂದ ನಿನ್ನೆದುರು ಕುಣಿದ || ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ | ಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧||

ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು |ಶ್ರೇಷ್ಠ ನೀ ಬಹು ಆಯಾಸಗೊಂಡೆಯಾ || ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ | ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ ||೨||

ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ | ವರವಿತ್ತು ಸಾಕಾಯ್ತೆ ಕಮಲೇಶ ದಾಸ || ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ | ಚರಣ ದಾಸರು ನಿನ್ನ ಬಿಡುವರೇನಯ್ಯಾ ||೩||

Lyrics in English

Eke brundavanadi nelesiruve guruve | naakavilasitageete lavanyamurte | srikantanolisidudu saakagalillendu | ekaanta bayasideyaa sri raghavendra ||

Hinde ninagagi narahariyu kambadi banda | munde nandana kanda ninneduru kunida | ondu kshana bittirade hariyu naliyutire | enyaara olisalendu tapagaiyutiruve ||1||

Eshtavillada rajyavali bahu varshagalu | shreshta nee bahu ayaasagondeya | dushtavadigala vagyuddadali jayisutali | shreshta granthava baredu baredu saakayte ||2||

pari pari abhishtagala needendu jana kaade | varavittu sakayte kamalesha dasa | dharege mareyagi brundavana seridode | charana dasaru ninna biduvarenayya ||3||


ನಮಿಸಿ ಬೇಡುವೆ ವರಗಳ ನಿನ್ನ / Namisi beduve varagala ninna

ನಮಿಸಿ ಬೇಡುವೆ ವರಗಳ ನಿನ್ನ
ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ        || ಪ ||

ವಿಮಲ ಸುಮತಿ ಜನರತಿಪ್ರೀಯಾ – ಪಾದ
ಕಮಲಗಳಿಗೆರಗುವೆನೊ ಜೀಯಾ
ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ
ಅಮಿತ ಕರುಣದಿ ಪಿಡಿಯೋ ಕೈಯ್ಯ        || ೧ ||

ಕ೦ಡಕ೦ಡವರನು ಬೇಡಿ ನೊ೦ದೆ ಕ
ಮ೦ಡಲು ದ೦ಡಧಾರಿ ನೀ ಗತಿಯೆ೦ದೆ
ಪ೦ಡಿತಾಗ್ರಗಣ್ಯ ಇನ್ಯಾರು ಮು೦ದೆ ಕೋ
ದ೦ಡಪಾಣಿಯ ಪಾದ ತೋರಿಸು ತ೦ದೆ        || ೨ ||

ಶ್ರೀ ಸುಧೀ೦ದ್ರ ಯತಿಕರಕ೦ಜಜಾತ ತು೦
ಗಾಸುನದಿನಿಲಯಾ ಅಘಾ೦ಬುಧಿ ಪೋತ
ವಾಸುಕಿಶಯನ ಜಗನ್ನಾಥ ವಿಠ್ಠಲ
ದಾಸರ ಪೋಷಕ ಲಾಲಿಸಿ ಪೋತಾ        || ೩ ||

Lyrics in English

Namisi beduve varagala ninna
Sanyami kulottama ragavendra ranna || pa ||

Vimala sumati janaratipriya – pada
Kamalagaligeraguveno jiya
Samala margadali ni niyadiro matiya
Amita karunadi pidiyo kaiyya || 1 ||

Kandakandavaranu bedi nonde ka
Mandalu dandadhari ni gatiyende
Panditagraganya inyaru munde ko
Dandapaniya pada torisu tande || 2 ||

Sri sudhindra yatikarakanjajata tun
Gasunadinilaya aganbudhi pota
Vasukisayana jagannatha viththala
Dasara poshaka lalisi pota || 3 ||


ಕೈ ಮೀರಿ ಹೋದ ಮಾತಿಗೆ / Kai meeri hoda matige

ಕೈ ಮೀರಿ ಹೋದ ಮಾತಿಗೆ ಮರುಗಬಾರದು | ಮೈ ಮೇಲೆ ಎಚ್ಚರಿಲ್ಲದೆಲೆ ತಿರುಗಬಾರದು   ||ಕೈ ಮೀರಿ||

ತಂದೆ ತಾಯಿ ಮಾತು ಕೇಳದ ,ಮಕ್ಕಳಿರಲೆ ಬಾರದು | ಬಂಧು ಬಳಗದಲ್ಲಿ ಜಗಳವಾಡಬಾರದು |ನಡತೆ ಹೀನಳಾಗಿ ಹೆಣ್ಣು ಬಾಳಬಾರದು || ಕಡು ವೈರತ್ವ ಮಾಡುವವನ ಮಾತು ಕೇಳಬಾರದು | ಮಾತು ಕೇಳಬಾರದು || ಕೈ ಮೀರಿ||

ಸತಿ ಸುತರಿಗೆ ಪುರುಷ ವಂಚನೆ ಮಾಡಬಾರದು | ಅತಿ ಉನ್ಮತ್ತನಾಗಿ ಧರ್ಮ ಹಳಿಯಬಾರದು || ಆಚಾರವಿಲ್ಲದವರ ಮನೆಯ ಊಟಮಾಡಬಾರದು | ವಿಚಾರವಿಲ್ಲದ ಸಭೆಯಲಿ ಕೂಡಬಾರದು || ಕೈ ಮೀರಿ||

ಪಂಕ್ತಿಯೊಳಗೆ ಭೇಧಮಾಡಿ ಬಡಿಸಬಾರದು | ಬಿಂಕದಿಂದ ಪರರ ಮನಸ್ಸು ನೋಯಿಸಬಾರದು || ಸಾವುನೋವುಗಳು ಇಲ್ಲವೆಂದು ತಿಳಿಯಬಾರದು | ಪರರ ಸಂಪತ್ತು ನೋಡಿ ಮನದಿ ಕೊರಗಬಾರದು || ಗುರು ಪುರಂದರವಿಠ್ಠಲರಾಯನ ಕೊಂಡಾಡದೇ ಇರಲೆಬಾರದು…ಇರಲೆಬಾರದು | ದೇವನೊಬ್ಬ ಇರುವನೆಂದು ಮರೆಯಬಾರದು ||ಕೈ ಮೀರಿ||

Lyrics in English

Kai meeri hoda matige marugabaradu | mai mele eccharilladele tirugabaradu ||kai meeri ||

Tande taayi matu kelada makkalirale baradu | bandhu balagadalli jagalavaadabaradu || nadate heenalagi hennu baalabaradu | kadu vairatwa maaduvavana matu kelabaradu || kai meeri ||

Satisutarige purusha vanchane madabaradu | ati unmattanaagi dharma haliyabaradu | achaaravilladavara maneya oota madabaradu | vichaaravillada sabheyalli koodabaradu || kai meeri ||

panktiyolage bhedamadi badisabaradu | binkadinda parara manassu noyisabaradu | savu novugalu ellavendu tiliyabaradu | parara sampattu nodi manadi koragabaradu | guru purandaravittalaraayana kondadade eralebaradu …. eralebaradu | devanobba eruvanendu mareyabaradu || kai meeri ||


ಇಲ್ಲಿರಲಾರೆ ಅಲ್ಲಿ ಹೋಗಲಾರೆ / Elliralaare alli hogalare

ಇಲ್ಲಿರಲಾರೆ ಅಲ್ಲಿ ಹೋಗಲಾರೆ
ಪುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ ||ಇಲ್ಲಿರಲಾರೆ||
ಇಲ್ಲಿರಲಾರೆ ಅಲ್ಲಿ ಹೋಗಲಾರೆ

ಮರಣವನೊಲ್ಲೆ ಜನನವನೊಲ್ಲೆ
ದುರಿತ ಸಂಸಾರ ಕೋಠಲೆಯ ನಾನೊಲ್ಲೆ |
ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ |
ಚರಣ ಕಮಲದ ಸ್ಮರಣೆಯೊಲಿರಿಸೆನ್ನ ||
||ಇಲ್ಲಿರಲಾರೆ||

ಬೆಂದ ಸಂಸಾರವೆಂಬೊ ಬೇನೆ ಮಧ್ಯದಲ್ಲಿ |
ನೊಂದೆನು ನಾ ಬಹಳ ಕರೆಕರೆಯಲ್ಲಿ |
ನಂದ ಗೋಪನ ಕಂದ ವ್ರದಾವನ ಪ್ರಿಯ |
ಎಂದೆಂದೂ ನಿನ್ನ ಸ್ಮರಣೆಯೊಲಿರಿಸೆನ್ನ ||
||ಇಲ್ಲಿರಲಾರೆ||

ಪುತ್ರ ಮಿತ್ರ ಕಳತ್ರ ಬಂಧುಗಳೆಂಬಾ….ಆ.. |
ಕತ್ತಲೆಯೊಲು ಸಿಲುಕಿ ಕಡು ನೊಂದೆನಲ್ಲಾ |
ಮುಕ್ತಿದಾಯಕ ಉಡುಪಿ ಶ್ರೀ ಕ್ರಷ್ಣರಾಯ |
ಭಕ್ತ ವತ್ಸಲ ಶ್ರೀ ಪುರಂದರವಿಠ್ಠಲರಾಯ ||
||ಇಲ್ಲಿರಲಾರೆ||

Lyrics in English

Elliralare alli hogalare | pullanabha neeniddalli serisenna | elliralaare alli hogalaare ||pa||

Maravanolle jananavanolle | durita samsaara kotaleya naanolle | karunadi karugala kaayda govala ninna | charana kamalada smaraneyolirisenna ||1||

Benda samsaaravembo bene madhyadali | nondenu naa bahala karekareyalli | nanda gopana kanda vrundavana priya | endendu ninna smaranayolirisenna ||2||

putra mitra kalatra bandhugalembaa | kattaleyolu siluki kadu nondenallaa | muktidayaka udupi sri krishnaraya | bhaktavatsala sri purandaravittalaraya ||3||

…………………………………