ಶುಕ್ರವಾರ ಬಂದಾಗ ಶುಭದ/Shukravara Bandaaga

ಶುಕ್ರವಾರ ಬಂದಾಗ ಶುಭದ ಶಕುನ ತಂದಾಗ | ಶುಭ್ರ ಮನದಿ ಪೂಜಿಸಿದಾಗ ಒಲಿವಳಮ್ಮ ಭಾಗ್ಯಲಕ್ಷ್ಮೀ ||

ಮನೆಯ ತುಂಬಾ ಮಕ್ಕಳು ಬೇಕೇ | ಕೊಡುವಳಮ್ಮ ಸಂತಾನ ಲಕ್ಷ್ಮಿ |ದಾರಿದ್ರ್ಯವೂ ನೀಗಬೇಕು | ಧಾನ್ಯ ಕೊಡುವಳು ಧಾನ್ಯಲಕ್ಷ್ಮೀ ||1||

ಜ್ಞಾನ ಜ್ಯೋತಿ ಬೆಳಗಲು ಬೇಕೇ| ವಿದ್ಯೆ ತರುವ ವಿದ್ಯಾಲಕ್ಷ್ಮಿ| ತೊಟ್ಟ ಕೆಲಸ ಕೈಗೂಡಬೇಕೆ | ಜಯ ತರುವಳು ವಿಜಯಲಕ್ಷ್ಮಿ ||2||

ಮನೆಯ ಕಣಜ ತುಂಬಬೇಕೇ ಕೊಡುವಳಮ್ಮ ಧಾನ್ಯಲಕ್ಷ್ಮೀ| ಇಟ್ಟ ಹೆಜ್ಜೆ ಮುಂದಿಡಬೇಕೇ ಧೈರ್ಯ ಕೊಡುವಳಮ್ಮ ಧೈರ್ಯ ಲಕ್ಶಮು||3||

ಅರಿಶಿನ ಕುಂಕುಮವನು ಬೆಳೆಸಿ ನಲಿವಳಮ್ಮ ಆದಿಲಕ್ಷ್ಮೀ | ಮಂಗಳೆಯರ ಮನಸಿಗೆ ಹರುಷ ತರುವ ಮಹಾಲಕ್ಷ್ಮಿ ||4||

Lyrics in English

Shukravara Bandaaga
Shubhada Shakuna Tandaaga
Shubhra Manadi Poojisidaaga
Olivalamma Bhagyalaksmi

Maneya Thumba Makkalu Beke
Koduvalamma Santhaana Lakshmi
Daaridryavu Neegabeke
Dhana Koduvalu Dhanalakshmi ||1||

Jnana Jyothi Belegalu Beke
Vidye Tharuva Vidyalakshmi
Thotta Kelasa Kaigoodabeke
Jaya Tharuvalu Vijayalakshmi ||2||

Maneya Kanaja Thumbabeke
Koduvalamma Dhanya Lakshmi
Itta Hejje Mundidabeke
Dhairya Koduvalamma Dhairya Lakshmi||3||

Arishina Kunkumavanu Belesi
Nalivalamma Aadilakshmi
Mangaleyara Manasige
Harusha Tharuva Mahalakshmi||4||


ಪವಮಾನ ನಮ್ಮ ಗುರು ಪವಮಾನ / Pavamaana namma guru pavamana

ಪವಮಾನ ನಮ್ಮ ಗುರು ಪವಮಾನ |
ಪವಮಾನ ಪಾವನ ಚರಿತ ಪದ್ಮಭವನ
ಪದಾರ್ಹನೆ ನಿರುತ ಆಹಾ ಶ್ರವಣವಿಮೊದಲಾದ ನವವಿಧ
ಭಕುತಿ ಜ್ಞಾನವ ನಿತ್ತು ಸಲಹೋ ಮೂರವತಾರಾತ್ಮಕ ದೇವಾ || ಪವಮಾನ ||

ಮೂರು ಕೋಟಿ ರೂಪ ಧರನೆ ಲೋಕಧಾರಕ ಲಾವಣ್ಯಕರನೆ |
ಸರ್ವ ಪ್ರೇರಕ ಭಾರತಿ ವರನೆ ತ್ರಿಪುರಾರಿಗೆ ವಜ್ರಪಂಜರನೆ
ಆಹಾ ನೀರಜ ಜಾಂಡದಿ ಮೂರೇಳು ಸಾವಿರದಾರು ನೂರು ಜಪ
ಬೇರೆ ಬೇರೆ ಮಾಳ್ಪ ||ಪವಮಾನ||

ಮೂಲೇಶನಂಘ್ರಿ ಸರೋಜ ಭೃಂಗ ಏಳೇಳು ಲೋಕಾಧಿರಾಜಾ |
ಇಪ್ಪತ್ತೇಳು ರೂಪನೇ ರವಿತೇಜಾ ಲೋಕಪಾಲಕರಾಳ್ದವ ಮಹೌಜಾ
ಆಹಾ ಕಾಳಿ ರಮಣ ನಿನ್ನ ಕಾಲಿಗೆರಗುವೆ ಕೃಪಾಳು ಭಕ್ತಿಜ್ಞಾನ
ವಾಲಯ ಕರುಣಿಸು || ಪವಮಾನ ||

ಮಾತರಿಶ್ವ ಮಹಾಮಹಿಮಾ ಸರ್ವ ಚೇತನ ಹೃದ್ಗತ ಹನುಮಾ|
ಭೀಮ ಭೂತಳದೊಳು ಮಧ್ವನಾಮದಿಂದ
ಜಾತನಾಗಿ ಜಿತಕಾಮ | ಆಹಾ ಆದಿಪ್ಪಣಾದಿ ವಿಖ್ಯಾತ
ಮಾಯಗಳ ಗೆದ್ದಾ ಪವಮಾನ | ಸೀತಾರಮಣ ಜಗನ್ನಾಥವಿಠ್ಠಲ ದೂತ || ಪವಮಾನ ||

Lyrics in English

Composer : Sri Jagannatha dasru

Pavamaana namma guru pavamaana ||2||
pavamaana paavana charita padmabhavana |
padaarhane niruta ahaa shrvanavimodalaada navavidha bhakuti jnaanavanittu salaho |
mooravataaraatmaka devaa ||pavamaana||

Mooru koti roopadharane | lokadhaaraka laavanyakarane |
sarva preraka bhaarativarane |tripuraarige vajrapanjarane |
ahaa neeraja jaandadi moorelu |
saaviradaaru nooru japa bere bere maalpa||pavamaana||

Mooleshnanghri saroja | bhrunga elelu lokaadhiraajaa ||
eppattelu roopane raviteja | lokapaalakaraaldava mahoujaa |
aha kali ramana ninna |
kaaligeraguve krupaalu bhaktijnaana | vaalaya karunisu ||

Maatarishwa mahamahima sarva chetana hrudgata hanuma |
bhima bhutaladolu madhwanamadinda jaatanagi jitakama |
aha adippanaadi vikhyaata | mayagala gedda pavamana |
seetaramana janannatha vittala doota || pavamana ||


ಕೆರೆಯನು ದಾಟಲು ಅರಿಯದ / kereyanu daatalu ariyada

ಕೆರೆಯನು ದಾಟಲು ಅರಿಯದ ಜನ ಭವ ಶರಧಿಯ ದಾಟುವರೆ ಶ್ರೀನರಹರಿ ||
ಶರಧಿಯ ದಾಟುವರೇ….

ಹರುಷದಿಂದ ನೀ ಕರವ ಪಿಡಿಯದಿರೆ ತೊರೆಯದಾಟಲಳವೇ | ಈ ಧರೆಯೊಳು || ಕೆರೆಯನು ||

ಹಲವು ಜನ್ಮಗಳಲಿ ಗಳಿಸಿದ ಅಘಗಳ | ಅಲೆಗಳೊಳಗೆ ಸಿಲುಕಿ ಸಂತ| ಮುಳುಗಿ ಮುಳುಗಿ ಕಟು ಜನಗಳ ತುಡಿಯುತ| ನಳಿನನಾಭ ನಿನ್ನೊಲುಮೆಯಿಂದಲ್ಲದೆ || ಕೆರೆಯನು ||

ಚೂರ್ಣಗಳಾದುವು ವಿವಿಧ ನಾವೆಗಳು ಈ ಅರ್ಣವದಲಿ ಸಿಲುಕಿ ಸುಲಭದೀ
ಪೂರ್ಣಪ್ರಮತಿಗಳ ಮತವನರಿತು ನಿನ್ನಾ…ಆ….ಆ…|
ನಿನ್ನ ಪೂರ್ಣ ಪ್ರಸನ್ನತೆ ನಾವೆಯಿಂದಲ್ಲದೆ || ಕೆರೆಯನು ||

Lyrics in English

Kereyanu datalu ariyada jana bhava sharadhiya datuvare sri narahari || sharadhiya datuvare ……….

Harushadinda nee karava pidiyadire toreyadatalalave | e dhareyolu || kereyanu ||

Halavu janmagalali galisida aghagala | aleyolage siluki siluki santa | mulugi mulugi katu janagala tudiyuta | nalinanaabha ninnolumeyindallade || kereyanu ||

Churnagalaaduvu vividha naavegalu e arnavadali siluki sulabhadi | poornapramatigala matavanaritu ninnaa …. a …. | ninna poorna prasannate naaveyindallade || kereyanu ||


ಎಲ್ಲಾ ದುಃಖವ ನೀಗಿಬಿಡು / Ella dukhava neegibidu

ಎಲ್ಲಾ ದುಃಖವ ನೀಗಿಬಿಡು ನನ್ನಯ್ಯ ಶಬರಿವಾಸ ‌ |
ಎಲ್ಲಾ ದೋಷವ ಅಟ್ಟಿಬಿಡು ನನ್ನಯ್ಯ ಅನುಗ್ರಹಿಸು
ದೇವಾ ನನ್ನನು ಅನುಗ್ರಹಿಸು ||ಎಲ್ಲಾ ದುಃಖವ||

ಒಂದು ದಿನವು ಮರೆತಿಲ್ಲಾ ನಿನ್ನನು ಸ್ಮರಿಸದ ಕ್ಷಣವಿಲ್ಲಾ|
ಮಾಯಮಯವೀ ಜೀವನದಲ್ಲಿ ಮದಮಾತ್ಸರ್ಯಗಳ ಓಡಿಸೆಯಾ |
ಪ್ರೇಮವ ಹುಡುಕಿ ,ಅಲೆದು ಅಲೆದು
ಕ್ಷಣದ ಸುಖವನು ತ್ಯಜಿಸಿರುವೆ. ||ಎಲ್ಲಾ ದುಃಖವ||

ಕರಚರಣಗಳು ಸುಸ್ತಾಗಿ ಮನಸ್ಸು ಎಲ್ಲೋ ಅಲೆಯುತಿದೆ|
ಅಖಿಲಾಂಡೇಶ್ವರ ಅಭಯವ ನೀಡದೆ
ಇನ್ನು ನನಗೆ ಬದುಕಿಲ್ಲ|
ಸ್ವಾಮಿ ಶರಣು ಅಯ್ಯಪ್ಪ ಶರಣು ಶರಣು ಅಯ್ಯಪ್ಪ ||ಎಲ್ಲಾ ದುಃಖವ||

Lyrics in English

Ella dukhava neegibidu nannayya shabarivasa
ella doshava attibidu nannayya anugrahisu
deva nannanu anugrahisu || ella dukhava ||

Ondu dinavu maretilla ninnanu smarisada kshanavilla
mayamayvi jeevanadalli mada matsaryagala odiseya
premava huduki aledu aledu
kshnada sukhavanu tyajisiruve || ella dukhava ||

Karacharanagalu sustagi manassu ello aleyutide
akhilandeshwari abhayava needade
innu nanage badukilla
swami sharanm ayyappa sharanu sharanu ayyappa || ella dukhava ||


ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕಿಂತ/Ajnaanigala koode adika

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು ।।ಪ।।

ಉಂಬುಡುವುದಕ್ಕಿಲ್ಲದರಸಿ ನೋಲಗಕ್ಕಿಂತ
ತುಂಬಿದೂರೊಳಗೆ ತಿರಿದುಂಬುವುದೇ ಲೇಸು
ಹಂಬಲಿಸಿ ಹಾಳ್ ಹರಟೆ ಹೊಡೆವುದಕ್ಕಿಂತ ಹರಿ
ಯೆಂಬ ದಾಸರ ಕೂಡೆ ಸಂಭಾಷಣೆಯೇ ಲೇಸು ।।೧।।

ಒಡನೆ ಹಂಗಿಸುವನೋಗರವನುಂಬುವುದಕ್ಕಿಂತ
ಕುಡಿನೀರು ಕುಡಿದುಕೊಂಡಿರುವುದೇ ಲೇಸು
ಬಿಡದೆ ಬಾಂಧವರೊಡನೆ ಕಡಿದಾಡುವುದಕ್ಕಿಂತ
ಅಡವಿಯೊಳಜ್ಞಾತವಾಸವೇ ಲೇಸು ।।೨।।

ಮಸೆಯುತಿಹ ಮತ್ಸರದ ನೆರೆಯೊಳಿರುವುದಕ್ಕಿಂತ
ಹಸನಿಲ್ಲದ ಹಾಳುಗುಡಿಯೆ ಲೇಸು
ಬಿಸಜಾಕ್ಷ ಕಾಗಿನೆಲೆಯಾದಿ ಕೇಶವರಾಯ
ವಸುಮತಿಯೊಳು ನಿನ್ನ ದಾಸತ್ವವೇ ಲೇಸು ।।೩।।

Lyrics in English

Ajnaanigala koode adika snehakinta |Sujnaanigala koode jagalave lesu ||pa||

Umbuduvudakilladarasi nolagakinta |Tumbidoorolage tiridumbuvude lesu |hambalisi haalharate hodevudakinta | hariyemba dasara koode sambaashaneye lesu ||1||

Odane hangisuvanogaravanumbuvudakinta |kudineeru kudidukondiruvude lesu |bidade baandavarodane kadidaaduvudakinta |adaviyolajnaathavaasave lesu ||2||

Maseyutiha matsarada nereyoliruvudakinta |hasanillada haalugudiye lesu |bisajaaksha kaagineleyadi keshavaraaya |vasumatiyolu ninna dasatvave lesu ||3||