ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ|
ಸ್ವಾಮಿ ಶರಣಂ ಅಯ್ಯಪ್ಪ ಶರಣಂ|
ಸ್ವಾಮಿಯೇ ಶರಣಂ ಅಯ್ಯಪ್ಪ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||ಸ್ವಾಮಿ ಅಯ್ಯಪ್ಪ||

ತಲೆ ಮೇಲೆ ನಿನ್ನಾ ಇರುಮುಡಿಯು ಇರಲು
ಮನದಲ್ಲಿ ನೂರು ಆಸೆ ತುಂಬಿರಲು
ಸ್ವಾಮಿ ಅಯ್ಯಪ್ಪ ಶರಣು ಎನುತಲಿರಲು
ಕಲ್ಲು ಮುಳ್ಳೆಲ್ಲಾ ಕಾಲ್ಗೆ ಹೂವುಗಳು

ಎರಿಮೇಲಿಯಲ್ಲಿ ಕುಣಿಯುವರು ಎಲ್ಲಾ
ಆನಂದದಿಂದ ಹಾಡದವರಿಲ್ಲ
ಸ್ವಾಮಿ ಧೀಂತಕ ತೋಂ ಅಯ್ಯಪ್ಪ ಧೀಂತಕ ತೋಂ
ಅಯ್ಯಪ್ಪ ಧೀಂತಕ ತೋಂ ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ ತೋಂ
ಸ್ವಾಮಿ ಧೀಂತಕ ತೋಂ ತೋಂ

ಎರಿಮೇಲಿಯಲ್ಲಿ ಕುಣಿಯುವರು ಎಲ್ಲಾ
ಆನಂದದಿಂದ ಹಾಡದವರಿಲ್ಲ
ಎಂದೆಂದು ಅಲ್ಲಿ ಜಾತಿ ಮಾತಿಲ್ಲ
ಸ್ವಾಮಿ ಎದುರಲ್ಲಿ ಒಂದೇ ಜನರೆಲ್ಲ ||ಸ್ವಾಮಿ ಅಯ್ಯಪ್ಪ||

ಕಂಡಾಗ ಅಳುದಾ ನದಿಯನ್ನು ಕಣ್ಣು
ನೀರಲ್ಲಿ ಇಡಲು ಈ ಕಾಲ್ಗಲನ್ನು
ನೋವೆಲ್ಲ ಮರೆತು ಸಂತೋಷವೇನು
ಶರಣೆಂಬ ಕೂಗೆ ಇಲ್ಲ ಬೇರೇನು
ಕರಿಮಲೆಯ ಮೇಲೆ ನಡೆವಾಗ ನೀನು
ಎಲ್ಲೆಲ್ಲು ಬೀಸೊ ತಂಗಾಳಿ ಏನು
ಬಲು ಕಠಿನವಾದ ಆ ಬೆಟ್ಟವನ್ನು
ಏರಿ ಇಳಿವಾಗ ಆ ತ್ರಪ್ತಿ ಏನು ||ಸ್ವಾಮಿ ಅಯ್ಯಪ್ಪ||

ಪಂಪೆಯಲಿ ಸ್ನಾನ ದೇವರ ಧ್ಯಾನ|
ನೀಗುವುದು ಎಲ್ಲಾ ಆಯಾಸವನ್ನ
ನದಿಯಲ್ಲಿ ಬಿಡುವ ಹಣತೆಗಳ ಸಾಲು
ನೊಡುವುದೆ ಭಾಗ್ಯ ತೇಲಾಡುತಿರಲು
ಮೊದಲ ಸಲ ಗಿರಿಗೆ ಬರುವ ಜನರೆಲ್ಲಾ
ಶಬರಿಪೀಠಕೆ ನಮಿಸಿ ನಡೆಯುವರೆಲ್ಲಾ
ಶರಣ್ಗುತ್ತಿಆಲಿಲ್ ಅಂಬನ್ನು ಎಸೆದು
ನಡೆಯುವರು ಮುಂದೆ ಸ್ವಾಮಿಯ ನೆನೆದು
||ಸ್ವಾಮಿ ಅಯ್ಯಪ್ಪ||

ಕಡಲಲೆಯ ಹಾಗೆ ಬರುತಿರುವ ಜನರು
ಭಕ್ತಿಯೇ ಅಲ್ಲಿ ಎಲ್ಲರಾ ಉಸಿರು
ಹದಿನೆಂಟು ಮೆಟ್ಟಿಲಾ ಏರುತ್ತಲಿರಲು
ಎಲ್ಲರೆದೆಯಲ್ಲಿ ಹರುಷದಾ ಹೊನಲು
ತುಪ್ಪದಭಿಷೇಕಾ… , ಗಂಧದಭಿಷೇಕಾ…
ಧರ್ಮಶಾಸ್ತನಿಗೆ ಹಲವು ಅಭಿಷೇಕಾ..
ಕೋಟಿ ಕಣ್ಗಲಿಗೆ ಅದು ದೇವಲೋಕಾ
ನಿಜವಾಗಿ ಅಂದೇ ಬದುಕಿದ್ದು ಸಾರ್ಥಕ
||ಸ್ವಾಮಿ ಅಯ್ಯಪ್ಪ||

ಓಂ ಓಂ ಅಯ್ಯಪ್ಪ ಓಂ ಗುರುನಾಥ ಅಯ್ಯಪ್ಪ||3||

ವರುಷಕ್ಕೆ ಒಮ್ಮೆ ದೇವರಿಗೆ ಇಡುವ
ಒಡವೆಗಳು ಇರುವ ಪೆಟ್ಟಿಗೆಯು ಬರುವ
ಅ ದ್ರಶ್ಯವನ್ನು ಕಾಣುವುದೆ ಭಾಗ್ಯ
ನೂರು ಜನುಮಗಳು ತಂದಿರುವ ಪುಣ್ಯ
ಅಲಂಕಾರವೆಲ್ಲ ಮುಗಿದಾದ ಮೇಲೆ
ಕರ್ಪೂರದಿಂದ ಬೆಳಗುವ ವೇಳೆ
ಬಾನಲ್ಲಿ ಮೂಡಿ ಬಂತು ಜ್ಯೋತಿ
ಬೆಳಗುವುದು ಬೆಳಗುವುದು ಆನಂದ ಜ್ಯೋತಿ||2||
ಸ್ವಾಮಿಯೇ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ||5||


https://youtu.be/uuIozqjv1cI

ಈ ಕಾಡಿಗೇಕೆ ನೀ ಬಂದೆ ಸ್ವಾಮಿ / Ee kaadigeke nee bande swami

ಈ ಕಾಡಿಗೇಕೆ ನೀ ಬಂದೆ ಸ್ವಾಮಿ
ಈ ದಾರಿಯಲಿ ಹೇಗೆ ನಡೆದೆ ಸ್ವಾಮಿ
||ಈ ಕಾಡಿಗೇಕೆ||

ಈ ಕಲ್ಲು ಈ ಮುಳ್ಳು ಈ ಹಳ್ಳ
ಈ ದಿಣ್ಣೆ ಆಯಾಸ ನಾ ತಾಳೆನಲ್ಲ
||ಈ ಕಲ್ಲು||

ತಂಪಾದ ಗಾಳಿಯಲು
ಮೈ ಬೆವರುತಿದೆಯಲ್ಲ
ಅಯ್ಯಪ್ಪ ಸಾಕಾಯಿತಲ್ಲ|
ಸ್ವಾಮಿ ಅಯ್ಯಪ್ಪ ಸಾಕಾಯಿತಲ್ಲ
||ಈ ಕಾಡಿಗೇಕೆ||

ಆನೆಗಳು ಇಲ್ಲೆಲ್ಲ ಓಡಾಡುತಿವೆಯಲ್ಲ
ದೂರದಲಿ ಹುಲಿ ಕೂಗಿತಲ್ಲ |
ಗಂಡೆದೆಯ ಗುಂಡಿಗೆಯು ಕ್ಷಣಕಾಲ ತತ್ತರಿಸಿ
ಕಣ್ಣೆಲ್ಲ ಮಂಜಾಯಿತಲ್ಲ ||
ನನ್ನ ಕಣ್ಣೆಲ್ಲ ಮಂಜಾಯಿತಲ್ಲ
||ಈ ಕಾಡಿಗೇಕೆ||

ನನ್ನಲ್ಲಿ ನಿನ್ನನ್ನು ಕಾಣುವಾಸೆಯ ತಂದು
ನೀ ಕಾಣದಾಗಿ ಎಲ್ಲಿರುವೆ |
ಕೂಗಲು ಉಸಿರಿಲ್ಲ ಅಳುವ ಶಕ್ತಿಯು ಇಲ್ಲ
ದಾರಿ ತೋರೊ ಬೇಗ ಪ್ರಭುವೆ||
ನನಗೆ ದಾರಿ ತೋರೊ ಬೇಗ ಪ್ರಭುವೆ
||ಈ ಕಾಡಿಗೇಕೆ||


Lyrics in English

Ee kaadigeke nee bande Swami | ee dariyali hege nadede Swami ||


Ee kallu e mullu e halla | e dinne aayasa naa talenalla || Ee kaadigeke ||

Tampada galiyalu mai bevarutideyalla | ayyappa saakayitalla | swami ayyappa saakayitalla || Ee kadigeke ||


Aanegallu ellella odadutiveyalla dooradali huli koogitalla | gandedeya gundigeyu kshana kaala tattarisi kannella manjayitalla || Ee kadigeke ||


Nannalli ninnannu kanuvaseya tandu ni kanaagi elliruve || kooglu usirilla aluva shaktiyu ella dari toro bega prabhuve || nanage dari toro bega prabhuve || Ee kadigeke ||


ಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ / Sada poojegagi neenu satyanusatya

ಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ
||ಸದಾ||

ಎಂದಿಗು ಒಂದೇ ಶ್ರೀ ಮಣಿಕಂಠ
ನೀನೆಂದಿಗು ಒಂದೇ ಶ್ರೀ ಮಣಿಕಂಠ
ಅದಾ ನಂಬಿ ಭಕ್ತ ಬಂದಾಗ ಸೂಕ್ತ ||
ಸನ್ಮಾರ್ಗ ತೋರಿಸುವೆ ಕಾರುಣ್ಯ ಮೂರ್ತಿ ||ಸದಾ||

ಸಮಸ್ಯೆಯ ಶಿಶುವಾಗಿ ನಾ ಸಾಯುವಾಗ
ಮನಸ್ಸಿನ ಬೇಗುದಿಗೆ ನಾ ಬೇಯುವಾಗ |
ತಲೆಯಲ್ಲಿ ತಾಮಸವು ತಾ ತುಂಬಿದಾಗ ಬರುವೆ ಪೊರೆವೆ ||
ಚಿದಾನಂದ ಮೂರ್ತಿ ಬರುವೆ ಪೊರೆವೆ ಚಿದಾನಂದಮೂರ್ತಿ
||ಸದಾ||

ಅನುದಿನವು ಪ್ರಭು ನಾ ಕುಂತಲ್ಲಿ ನಿಂತಲ್ಲಿ
ನಮಿಸುವೆ ಸ್ಮರಿಸುವೆ ನನ್ನಾತ್ಮದಲ್ಲೆ |
ನರನಾಡಿ ತಂತಿಯೊಳ್ ನಾ ಶ್ರತಿ ಮಾಡಿ
ಮೀಟುವೆ ದಾಟುವೆ ಪಾಪದ ಕೋಡಿ ||ಸದಾ||


Lyrics in English

Sada poojegagi neenu satyanusatya || sada ||


Endigu onde sri manikanta | neenendigu onde sri manikanta | adaa nambi bhakta bandaga sookta | sanmarga torisuve karunya moorti || sada ||

Samasyeya shishuvagi naa sayuvaga | manassina begudige naa beyuvaga | taleyalli tamasavu taa tumbidaga baruve poreve | chidananda moorti baruve poreve chidanandamoorti || sada ||

Anudinavu prabhu naa kuntalli nintalli | namisuve smarisuve nannatmadalle | naranadi tantiyol naa shruti madi meetuve datuve papada kodi || sada ||


ಸ್ವಾಮಿ ಸಂಗೀತದಿಂದೊಲಿಸೆ / Swami sangeetadindolise

ಸ್ವಾಮಿ ಸಂಗೀತದಿಂದೊಲಿಸೆ ಗಾನ ಗಂಧರ್ವನಲ್ಲವು ನಾನು|
ಜಪಮಾಲೆಯಂತೆ ಕೈಯಲಿ ಮಂತ್ರ ಶ್ರತಿಮಾಡೊ ತಂಬುರನಂತೆ…. |ಸ್ವಾಮಿ|
ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ…

ಬ್ರಹ್ಮಯಾಮದಲಿ ಪೂಜ ಕ್ಷೇತ್ರದಲಿ ಸನ್ನಿಧಿಯಲ್ಲಿ ನಾನಿರುವೇ
ರತ್ನಗಿರಿನಾಥ ಅಯ್ಯಪ್ಪ ನಿನ್ನ ಪುಣ್ಯಾಕ್ಷರ ಮಂತ್ರ ಹಾಡಿ |
ಏನೋ ಸಂತಸದ ಮೋಡೀ….. ||ಸ್ವಾಮಿ||
ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ…

ಮನುಷ್ಯನು ಆದ ನನ್ನಕಾಯೋ ಮಣಿಕಂಠ ಸ್ವಾಮಿ ದಯೆ ತೋರಿ | ಮದ ಮಾತ್ಸರ್ಯಗಳ, ದೂರ ಮಾಡುವ ಮಹದೋಪದೇಶವ ನಿ ಸಾರಿ ||ಮದ||
ಮಹದೋಪದೇಶವ ನಿ ಸಾರಿ…|ಸ್ವಾಮಿ|
ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ…

ಸಾರೋಪದೇಶಗಳ ನಿನ್ನಯ ನಾಮದ ಮೊದಲಕ್ಷರವಾಗಿ ಹಾಡುವೆ | ಈ ವಿಶ್ವದಾದ್ಯಂತ ಹಾಡಿ ಭಗವಂತ ನಿನ್ನ ತೇಜಸ್ವರೂಪವ ಸಾರುವೆ | ಮನದಂತರಾಳದಿ ನಾ ಪೂಜಿಸುವೆ
||ಸ್ವಾಮಿ|| ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ…

Lyrics in English

Swami sangeetadindolise gaanagandharvanallavu naanu |swami| japamaaleyante kaiyali mantra shruti maado tamburanante…. |swami| swami ayyappa swami, shabarimale swami …..

Brahmayaamadali pooja kshetradali sannidhiyali naaniruve ……||brahma|| ratnagirinaatha ayyappa ninna punyakshara mantra haadi ||ratna|| eno santasada modi…… ||swami|| swami ayyappa swami, shabarimale swami …….

Manushyanu aada nanna kaayo manikanta swaami daya tori | mada maatsaryagala doora maaduva mahadopadeshava nee saari ||mada|| mahadopadeshava nee saari…. ||swami|| swami ayyappa swami, shabarimale swami …….

Saaropadeshagala ninnaya naamada modalaksharavaagi haaduve ||saaropa|| e vishvadaadyanta haadi bhagavanta ninna teja swaroopava saaruve ||e vishwa|| manadantaraaladi naa poojisuve ||swami|| swami ayyappa swami, shabarimale swami …..


ಬಾಲಕನಿವನು ಅಲ್ಲಪ್ಪ /Baalakanivanu allappa

ಬಾಲಕನಿವನು ಅಲ್ಲಪ್ಪ | ಹುಲಿಯೇರಿದ ವೀರ ಅಯ್ಯಪ್ಪ
ಕರುಣಾಸಾಗರ ಇವನಪ್ಪ | ಇವನೊಲಿದರೆ ಭಯವೆ ಇಲ್ಲಪ್ಪ
||ಬಾಲಕನಿವನು||
ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ||ಶರಣಂ||

ಭಕುತರ ಬೇಡಿಕೆ ಸಲ್ಲಿಸಲು, ಹರಿಹರರಿಬ್ಬರು ಶಕ್ತಿಗಳು
ಒಂದೆಡೆ ಸೇರುತ ಶಿಶುವಾಯಿತು
ಅ ಶಿಶುವೆ ಲೋಕದ ಬೆಳಕಾಯಿತು ||

ಗಣಪನು ಇವನಿಗೆ ಅಣ್ಣಯ್ಯ | ಇವ ಪಳನಿ ಸುಬ್ಬನಿಗೆ ತಮ್ಮಯ್ಯ | ಸುಲಭದಲಿ ಇವ ಸಿಗನಯ್ಯ
ಶರಣಾದ ಮೇಲೆ ಕೈ ಬಿಡನಯ್ಯ ||ಬಾಲಕನಿವನು||

ಪಂದಳರಾಜನು ಕಾಡಿನಲಿ, ಬರುತಿರೆ ಪಂಪಾ ತೀರದಲಿ
ಕಂಡ ಕಂದನೆ ಇವನಯ್ಯ ಈ ಭಾಗ್ಯವು ಯಾರಿಗೆ ಉಂಟಯ್ಯ

ಹಾಲನು ಕುಡಿಸದ ಅಮ್ಮನಿಗೆ | ಹುಲಿ ಹಾಲಿನ ಬಯಕೆಯ ತೀರಿಸಿದ | ಸಿರಿಯನು ಕಂಡು ತೃಣ ಎಂದ
ವೈರಾಗ್ಯವ ವರಿಸಿದ ಮುದದಿಂದ ||ಬಾಲಕನಿವನು||

ರಾಜ್ಯವ ಬಿಟ್ಟು ದೂರಾದ | ಬಲು ಭೀಕರ ಕಾಡಲಿ ಮುನ್ನಡೆದ
ಶಬರಿಯ ಗಿರಿಯ ಮನೆಮಾಡಿ ಅಯ್ಯಪ್ಪನು ಅಲ್ಲೆ ಸ್ಥಿರನಾದ||
||ಶರಣಂ||

Lyrics in English

Baalakanivanu allappa | huliyerida veera ayyappa | karunaasagara evanappa | evanolidare bhayave ellappa ||baalakanivanu|| sharanam sharanam ayyappa |swami sharanam ayyappa||sharanam||

Bhakutara bedike sallisalu, harihararibbara shaktigalu | ondede seruta shishuvaayitu | a shishuve lokada belakaayitu ||

Ganapanu evanige annayya | eva palani subbanige tammayya | sulabhadali eva siganayya| sharanaada mele kai bidanayya||balakanivanu||

Pandalaraajanu kadinali, barutire pampaa teeradali| kanda kandane evanayya e bhagyavu yaarige untayya||

Haalanu kudisada ammanige | huli haalina bayakeya teerisida| siriyanu kandu truna enda vairaagyava varisida mudadinda||baalakanivanu||

Raajyava bittu doorada| balu bhikara kaadali munnadeda| shabariya giriya manemaadi ayyappanu alle stiranaada||sharanam||


https://youtu.be/U0ON0kWtiCU

ಎಲ್ಲಾ ದುಃಖವ ನೀಗಿಬಿಡು / Ella dukhava neegibidu

ಎಲ್ಲಾ ದುಃಖವ ನೀಗಿಬಿಡು ನನ್ನಯ್ಯ ಶಬರಿವಾಸ ‌ |
ಎಲ್ಲಾ ದೋಷವ ಅಟ್ಟಿಬಿಡು ನನ್ನಯ್ಯ ಅನುಗ್ರಹಿಸು
ದೇವಾ ನನ್ನನು ಅನುಗ್ರಹಿಸು ||ಎಲ್ಲಾ ದುಃಖವ||

ಒಂದು ದಿನವು ಮರೆತಿಲ್ಲಾ ನಿನ್ನನು ಸ್ಮರಿಸದ ಕ್ಷಣವಿಲ್ಲಾ|
ಮಾಯಮಯವೀ ಜೀವನದಲ್ಲಿ ಮದಮಾತ್ಸರ್ಯಗಳ ಓಡಿಸೆಯಾ |
ಪ್ರೇಮವ ಹುಡುಕಿ ,ಅಲೆದು ಅಲೆದು
ಕ್ಷಣದ ಸುಖವನು ತ್ಯಜಿಸಿರುವೆ. ||ಎಲ್ಲಾ ದುಃಖವ||

ಕರಚರಣಗಳು ಸುಸ್ತಾಗಿ ಮನಸ್ಸು ಎಲ್ಲೋ ಅಲೆಯುತಿದೆ|
ಅಖಿಲಾಂಡೇಶ್ವರ ಅಭಯವ ನೀಡದೆ
ಇನ್ನು ನನಗೆ ಬದುಕಿಲ್ಲ|
ಸ್ವಾಮಿ ಶರಣು ಅಯ್ಯಪ್ಪ ಶರಣು ಶರಣು ಅಯ್ಯಪ್ಪ ||ಎಲ್ಲಾ ದುಃಖವ||

Lyrics in English

Ella dukhava neegibidu nannayya shabarivasa
ella doshava attibidu nannayya anugrahisu
deva nannanu anugrahisu || ella dukhava ||

Ondu dinavu maretilla ninnanu smarisada kshanavilla
mayamayvi jeevanadalli mada matsaryagala odiseya
premava huduki aledu aledu
kshnada sukhavanu tyajisiruve || ella dukhava ||

Karacharanagalu sustagi manassu ello aleyutide
akhilandeshwari abhayava needade
innu nanage badukilla
swami sharanm ayyappa sharanu sharanu ayyappa || ella dukhava ||