ಕಮಲ ಕೋಮಲ ಕರತಲ ಲಾಲಿತ /Kamala komala karatala

ಕಮಲ ಕೋಮಲ ಕರತಲ ಲಾಲಿತ ಪಾದ ಪಲ್ಲವ ನೀನಾರೈ ಕೃಷ್ಣ|
ಕಾಮಿನಿ ಭಾಮಿನಿ ರೂಪದ ಚಂದವ ನೋಡಬಂದೆನೆ ಭಾಮೆ ನಾನು ||1||

ನಂದ ನಂದನ ಯದುಕುಲ ವಂದ್ಯನ ಇಂದು ವದನ ನೀನಾರೈ ಕೃಷ್ಣ|
ಮಂಜುಳ ಭಾಷಿಣಿ ಕುರವಗ ಗಂಧಿನಿ ಕಂಜನಾಭನೆ ಬಾಲೇ ನಾನು ||2||

ಉದಧಿಶಯನ ನೀ ನವನೀತ ಕದ್ದವ ಜಾರ ಚೋರ ನೀನಾರೈ ಕೃಷ್ಣ|
ಕಾಮಿನಿ ಸುಂದರಿ ನೀರಜ ಲೋಚನೆ ಚೋರನಲ್ಲವೆ ಬಾಲೇ ನಾನು ||3||

ಮಂದರಧರನೆ ಪರಿಮಳ ಚೆನ್ನನೆ ಕಂಬುಕಂಧರ ನೀನಾರೈ ಕೃಷ್ಣ|
ಚಂಚಲ ಲೋಚನೆ ಕುಟಿಲ ಕುಂತಳೆ ಕೋಮಲಾಂಗನೆ ಭಾಮೆ ನಾನು ||4||

ಕಮಲರಾಮನ ಕಲುಶ ನಿವಾರಣ ನಿಷ್ಕಾಭರಣ ನೀನಾರೈ ಕೃಷ್ಣ | ಕಾಮುಕ ಕಾಮಿನಿ ಚಂಪಕ ಗಂಧಿನಿ ಪುರಂದರ ವಿಠ್ಠಲನೆ ಬಾಲೆ ನಾನು ||5||

Lyrics in English

Kamala komala karatala lalita pada pallava ninarai krishna|
kamini bhamini rupada chandava nodabandene bhame nanu||1||

Nanda nandana yadukula vandyana indu vadana ninarai krishna|
manjula bhasini kuravaga gandhini kanjanabhane bale nanu||2||

Udadishayana ni navanita kaddava jara chora ninarai krishna|
kamini sundari niraja lochana choranallave bale nanu||3||

Mandaradharane parimala chennane kambukandhara ninarai krishna|
chanchala lochane kutila kuntale komalangane bhame nanu||4||

Kamalaramana kalusa nivarana nishkabharana ninarai krishna|
kamuka kamini champaka gandhini purandara vittalane bale nanu||5||


ಸತತ ಗಣನಾಥ ಸಿದ್ಧಿಯ ನೀವ /Satata gananatha siddhiya

ಸತತ ಗಣನಾಥ ಸಿದ್ಧಿಯ ನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿ ದೇವಿಯು ।।ಪ||

ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು
ಭಕುತಿ ದಾಯಕಳು ಶ್ರೀ ಭಾರತಿದೇವಿ ।।೧।।

ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಇತ್ತು ಮತಿ
ಪಾಲಿಸುವ ನಮ್ಮ ಪವಮಾನನು ।।೨।।

ಚಿತ್ತದಲ್ಲಿ ಆನಂದ ಸುಖವ ನೀವಳು ರಮಾ
ಮುಕುತಿ ಪ್ರದಾಯಕ ಶ್ರೀ ಪುರಂದರ ವಿಠಲನು
ಸತತ ಇವರಲ್ಲಿ ನಿಂತು ಈ ಕೃತಿಯ ನಡೆಸುವನು ।।೩।।

Lyrics in English

Satata gananatha siddhiya niva karyadali|| mati prerisuvalu parvati deviyu।। pa||

Mukuti pathake manaviva maharudra devaru | bhakuti dayakalu sri bharatidevi ।।1।।

Yukuti sastragallali vanajasambhavanarasi|satkarmagala nadesi sujnana ittu mati | palisuva namma pavamsnanu।।2।।

Chittadalli ananda sukhava nivalu rama|mukuti pradayaka sri purandara vithalanu| satata ivaralli nintu i krtiya nadesuvanu।।3।।


ಆತನ ಪಾಡುವೆ ಅನವರತ /Atana paduve anavarata

ಆತನ ಪಾಡುವೆ ಅನವರತ
ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ||ಪ.||

ಆವಾತನ ಕೀರ್ತಿ ಪರೀಕ್ಷಿತ ಕೇಳಿ ಪಾವನನಾದನು ಮೂಜಗವರಿಯ
ಭಾವ ಶುದ್ಧಿಯಲಿ ಶುಕನ್ಯಾರ ಪೊಗಳುವ ಆವಾಗ ಪ್ರಹ್ಲಾದನ್ಯಾರ ನೆನೆವನಯ್ಯ ||1||

ಶಿಲೆಯ ಬಾಲೆಯ ಮಾಡಿದ ಪಾದವ್ಯಾರದು ನಳಿನ ಸಂಭವನ ಪೆತ್ತವನ್ಯಾರು
ಕಲಿಯುಗದಿ ಜನರಿಗೆ ಯಾರ ನಾಮವೆ ಗತಿ ಇಳೆಯ ಭಾರವನಿಳುಹಿ ಸಲಹಿದನ್ಯಾರಯ್ಯ ||2||

ದ್ರುಪದನ ಸುತೆಯಭಿಮಾನ ರಕ್ಷಕನ್ಯಾರು ನೃಪ ಧರ್ಮಜಗೆ ರಕ್ಷಕನ್ಯಾರು
ಕೃಪೆಯಿಂದ ವಿದುರನ ಮನೆಯಲುಂಡವನ್ಯಾರು ಆಪತ್ಕಾಲದಿ ಗಜನ ಸಲಹಿದನ್ಯಾರಯ್ಯ ||3||

ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ ರಥವನೇರಿ ನಡೆಯಿಸಿದವನ್ಯಾರು
ಪೃಥ್ವಿಯೆಲ್ಲವ ಬಲಿ ಯಾರಿಗೊಪ್ಪಿಸಿದನು ಮತಿವಂತ ಧ್ರುವನ ರಕ್ಷಕನ್ಯಾರು ಪೇಳಯ್ಯ ||4||

ಸಗರನ ಮಗಳಿಗು ಯಾರ ನಾಮವೆ ಗತಿ ಯೋಗದಿ ನಾರದನು ಯಾರ ಭಜಿಪನು
ರಾಗರಹಿತ ಹನುಮಂತನೊಡೆಯನ್ಯಾರು ಭಾಗವತರ ಪ್ರಿಯ ಪುರಂದರ ವಿಠ್ಠಲ ||5||

Lyrics in English

Atana paduve anavarata
pritiyindali tanna bhakutara salahuva ||pa.||

Avaatana kirti parikshita keli pavananadanu mujagavariya|
bhava shuddhiyali shukanyara pogaluva avaga prahladanyara nenevanayya ||1||

Shileya baleya madida padavyaradu nalina sambhavana pettavanyaru|
kaliyugadi janarige yara namave gati ileya bharavaniluhi salahidanyarayya ||2||

Drupadana suteyabhimana rakshakanyaru nrupa dharmajage rakshakanyaru|
krupeyinda vidurana maneyalundavanyaru apatkaladi gajana salahidanyarayya ||3||

Atishayadinda arjunage sarathiyagi rathavaneri nadeyisidavanyaru|
pruthviyellava bali yarigoppisidanu mativanta dhruvana rakshakanyaru pelayya ||4||

Sagarana magaligu yara namave gati yogadi naradanu yara bhajipanu|
ragarahita hanumantanodeyanyaru bhagavatara priya purandara vittala ||5||


ಬಿಡುವೇನೇನಯ್ಯ ಹನುಮ /Biduvenenayya hanuma

ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ||ಪ.||

ಬಿಡುವೆನೇನು ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಜ್ಞಾನ ಭಕ್ತಿ ವೈರಾಗ್ಯವನು ಕೊಡುವ ತನಕ ಸುಮ್ಮನೇ ನಾನು||ಅ.ಪ.||

ಹಸ್ತವ ಎತ್ತಿದರೇನು ಹಾರಗಾಲ ಹಾಕಲೇನು
ಭೃತ್ಯನೋ ನಿನ್ನವನು ನಾನು ಹಸ್ತಿವರದನ ತೋರುವ ತನಕ||೧||

ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು|
ಫುಲ್ಲನಾಭನಲ್ಲಿ ಮನಸು ನಿಲ್ಲಿಸೊ ತನಕ ಸುಮ್ಮನೆ ನಾನು ||೨||

ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ|
ಕಿಂಕರ ನಿನ್ನಗೆ ಕಿಂಕರ ನಾನು ಪುರಂಧರ ವಿಠಲನ ತೋರುವ ತನಕ||೩||

Lyrics in English

Biduvenenayya hanuma, summane biduvenenayya||pa.||

Biduvenenu hanuma ninna adigalige shirava baagi |
jnana bhakti vairagyavanu koduva tanaka summane naanu||a.pa.||

Hastava ettidarenu haragala hakalenu
brutyano ninnavanu nanu hastivaradana toruva tanaka||1||

Hallumudiya kacchidarenu anjuveneno ninage nanu|
Pullanabhanalli manasu nilliso tanaka summane naanu ||2||

Donku more balava tiddi hunkarisidare anjuvanalla|
kinkara ninnage kinkara nanu purandhara vithalana toruva tanaka||3||


ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ /Shri mahalakshmiya alankarisi

ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||

ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ
ನಾರಾಯಣ ನಿಮ್ಮ ನಾಮ ತಾಳಿ ಪದಕವು
ಮಾಧ್ವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||

ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು
ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು
ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||

ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು
ದಾಮೋದರ ನಿಮ್ಮ ನಾಮ ರತ್ನದ ಪದಕವು ||೩||

ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು
ವಾಸುದೇವ ನಿಮ್ಮ ನಾಮ ಒಲಿದ ತೋಡೆ
ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||

ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||

ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||

ಸರಸಿಜಾಕ್ಷ ನಿಮ್ಮ ನಾಮ ಅರಸಿನ ಎಣ್ಣೆ ಹಚ್ಚಿ
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು
ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು
ನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭||

Lyrics in English

Shri mahalakshmiya alankarisi karedaru||

Keshava nimma nama mangalyasutra tali
narayana nimma nama tali padakavu|
madhva nimma nama surage sampige moggu
govinda nimma nama godhiya saravu ||1||

Vishnuve nimma nama ratna kundalagalu
madhusudana nimma nama manikyada haralu|
trivikrama nimma nama vanki nagamurugiyu
vamana nimma nama ole ekavaliyu ||2||

Shridhara nimma nama olle muttina hara
hrushikesha nimma nama kadaga gejjeyu|
padmanabha nimma nama muttinaddikeyu
damodara nimma nama ratnada padakavu ||3||

Sankarshana nimma nama vanki tolayitu
vasudeva nimma nama olida tode|
pradyumna nimma nama hastakankana bale
aniruddha nimma nama mukura bulaku ||4||

Purushottama nimma nama hosa muttina muguti
adhokshaja nimma nama chandra surya|
narasimha nimma nama chouri ragati gondya
achyuta nimma nama muttina bottu ||5||

Janardana nimma nama jariya pitambara
upendra nimma nama kadaga gejjeyu|
shrihari nimma nama kanchu ankiya tulasi
shrikrushna nimma nama naduvinodyanavu ||6||

Sarasijaksha nimma nama arasina enne hachchi
pankajaksha nimma nama kunkuma kadigeyu|
purandara vithala nimma nama sarvabharanavu
niluvugannadiyali lalaneya torisuta ||7||


ಸುಮ್ಮನೆ ದೊರಕುವದೆ ಶ್ರೀರಾಮನ/Summane dorakuvade shriraamana

ಸುಮ್ಮನೆ ದೊರಕುವದೆ ಶ್ರೀರಾಮನ ದಿವ್ಯನಾಮವು
ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ||

ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು
ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ ||

ಭಕ್ತಿ ರಸದಲ್ಲಿ ತನ್ನು ಚಿತ್ತ ಪರವಶನಾಗಿ
ಅಚ್ಯುತನ ನಾಮವನು ಬಚ್ಚಿಟ್ಟುಕೊಂಡವಗಲ್ಲದೆ ||

ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ
ಆನಂದಪೂರ್ಣ ಪುರಂದರ ವಿಠಲನ ನೋಡಿದಗಲ್ಲದೆ||

Lyrics in English

Summane dorakuvade shriraamana divyanaamavu|
janmajanmaantarada dushkarma hodavagallade||

Kantupitana moorutiya tannantarangadolittu|
chinte ella bittu nishchintanaadavagallade||

Bhakti rasadalli tannu chitta paravashanaagi|
achyutana naamavanu bacchittukondavagallade||

Tannolage idda moorutiya kannolage tandare|
aanandapoorna purandara vithalana nodidagallade||


ಡೋಲಾಯಾಮ್  ಛಲ / Dolayam chala dolayam

ಡೋಲಾಯಾಮ್  ಛಲ ಡೋಲಾಯಾಮ್  ಹರೇ ಡೋಲಾಯಾಮ್ ।।ಪ।।

ಮೀನ ಕೂರ್ಮ  ವರಾಹ ಮೃಗಪತಿ  ಅವತಾರ ।ದಾನವರೇ ಗುಣಸೌರೇ  ಧರಣಿಧರ  ಮರುಜನಕ ।।

ವಾಮನ ರಾಮ ರಾಮ ವರಕೃಷ್ಣ ಅವತಾರ ।ಶ್ಯಾಮಲಾಂಗ ರಂಗ ರಂಗ ಸಾಮಜವರದ ಮುರಹರನ ।।

ದಾರುಣ ಬುದ್ಧ ಕಲ್ಕೀ  ದಶವಿಧ ಅವತಾರ ।ಶೀರಪಾಣೇ ಗೋಸಮಾಣೇ  ಶ್ರೀ ವೆಂಕಟಗಿರಿ ಕೂಟನಿಲಯ।।

Lyrics in English

Dolayam chala dolayam hare dolayam ||

Meena kurma varaha mrugapati avtaara | daanavare gunasaure dharanidhara marujanaka ||

Vamana rama rama varakrishna avataara | shyaamalaanga ranga ranga saamajavarada muraharana ||

Daaruna buddha kalki dashavidha avataara | shirapaane gosamaane sri venkatagiri kootanilaya ||


ಕುಸುಮ ಮಾಲೆಯ ತನ್ನಿರೇ /Kusuma maaleya tannire

ಕುಸುಮ ಮಾಲೆಯ ತನ್ನಿರೇ ಶ್ರೀ ದೇವಿ ವಿಜಯಲಕ್ಷ್ಮೀಗೆ ।ಪ।

ಕುಂಕುಮಾರ್ಚನೆ  ಮಾಡಿರೇ  ಶ್ರೀ ಕ್ಷೀರಸಾಗರ  ತನಯಗೆ ।।ಅ . ಪ।।

ಆರಂಗ ರಂಜನಿ ವಿಷ್ಣು ಮೋಹಿನಿ ಚಕ್ರಿಣಿ ಶುಭದಾಯಿನಿ …|ಗರುಡವಾಹನ  ಹರಿಯರಾಣಿಯೇ ಮಂದಗಾಮಿನಿ ಮಾನಿನಿ। ಕಲ್ಪವೃಕ್ಷದ ಜೊತೆಗೆ ಹುಟ್ಟಿದ ಕಮಲಿನಿ ಕಮಲಾಸಿನಿ | ಚಂದ್ರವದನೇ  ಚಂದ್ರಕಾಂತಿಯ ಚಂದಿರನ ನಿಜ ಸೋದರಿ ।।೧।।    ।।ಕುಸುಮ।।

ನದಿಯ  ಆಡಿ  ಬರುವ ಮಂದಮಾರುತ ಹೂನಗೆ ….
ಕಮಲನಾಭನ  ಕೈಯ  ಹಿಡಿದ ಕರುಣೆ ಕಮಲೆ ಕೋಮಲೆ । ಮಿಂಚುಬಳ್ಳಿಯ  ವೇಗದಿಂದಲಿ ನೋಟ ಬದಲಿಸೋ ಚಂಚಲೆ | ಎಂದು ನಮ್ಮನು ಮಕ್ಕಳಂದದಿ  ಪೊರೆಯೆ  ಮಾತೆಯೇ ಮಂಗಳೇ ।।೨।।    ।।ಕುಸುಮ।।

ಮನದೇ  ಧೈರ್ಯವ ತುಂಬಿಸಿ ಮುನ್ನಡೆವಲು  ನೀ ಕರುಣಿಸೇ | ಬಿಡದೆ ಸಾಹಸ ಹಿಡಿದ ಕಾರ್ಯಾವ ಸಾಧಿಸೋ ಛಲ ತುಂಬಿಸೇ । ಜಯದ ಮಾಲೆಯ ಕೊರಳಿಗೆಂದು  ನೀಡಿ ನೀ ಪರಿಪಾಲಿಸೇ
ವಿಜಯಲಕ್ಷ್ಮಿಯೇ  ನಿನ್ನ ಪಾದದೇ  ಬೇಡುವೆ ಪಥ ತೋರಿಸೇ ।।೩।।

Lyrics in English

Kusuma maaleya tannire sri devi vijayalakshmige|pa|

Kumkumaarchane maadire sri ksheerasagara tanayage||a.pa||

Aranga ranjani vishnu mohini chakrini shubhadaayini…| garudavaahana hariya raaniye mandagaamini maanini| kalpavrukshada jotege huttida kamalini kamalaasini| chandravadane chandrakaantiya chandirana nija sodari||1||

Nadiya aadi baruva mandamaaruta hoonage …. kamalanaabhana kaiya hidida karune Kamale Komale | minchuballiya vegadindali nota badaliso chanchale| endu nammanu makkalandadi poreye maateye mangale||2||

Manade dhairyava tumbisi munnadevalu nee karunise | bidade saahasa hidida kaaryava saadhiso chala tumbise| jayada maaleya koraligendu needi nee paripaalise vijayalakshmiye ninna paadade beduve patha torise||3||


ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ /Kshira varidhi kannike

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ
ಈರೇಳು ಲೋಕನಾಯಿಕೆ |pa||

ವಾರವಾರಕೆ ಆರಾಧಿಪುದಕೆ ಚಾರುಮತಿಯ ಕೊಡು
ದೂರ ನೋಡದಲೆ ||ಅ.ಪ||

ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿ
ವೇದವತಿಯೆ ರುಕ್ಮಿಣಿ |
ವೇದ ವೇದಾಂತದಭಿಮಾನಿ ವಾರಿಜ ಪಾಣಿ
ಆದಿ ಮಧ್ಯಾಂತ ಗುಣಮಣಿ |
ಸಾಧು ಜನರ ಹೃನ್ಮಂದಿರ ವಾಸಿನಿ
ಭೇದಗೊಳಿಪ ಕಾಮಕ್ರೋಧಗಳೋಡಿಸಿ|
ನೀ ದಯದಿಂದಲೆ ಮುಂದೆ ಗತಿಗೆ ಪಂಚ
ಭೇದಮತಿಯ ಕೊಡು ಮಾಧವ ಪ್ರಿಯಳೆ ||1||

ಶ್ರೀ ಮಾಯಾ ಜಯಾ ಕೃತಿ ಶಾಂತಿದೇವಿ ಜಯಂತೆ
ನಾಮದೊಳಪ್ಪ ಗುಣವಂತೆ |
ಕೋಮಲವಾದ ವೈಜಯಂತೆ ಧರಿಸಿದ ಶಾಂತೆ
ಸೋಮಾರ್ಕ ಕೋಟಿ ಮಿಗೆ ಕಾಂತೆ |
ತಾಮರಸಾಂಬಕೆ ರಮೆ ಲಕುಮಿ ಸತ್ಯ
ಭಾಮೆ ಭವಾರಣ್ಯ ಧೂಮಕೇತಳೆ |
ಯಾಮ ಯಾಮಕೆ ಹರಿ
ನಾಮವ ನುಡಿಸಿ ಉತ್ತಮರೊಡನೆ ಪರಿ
ಣಾಮವನೀಯುತ ||2||

ಅನೇಕಾಭರಣ ಭೂಷಿತೆ ಧರಣಿಜಾತೆ
ಸುಜ್ಞಾನಿ ಗಳ ಮನೋಪ್ರೀತೆ |
ಆನಂದಲೀಲೆ ವಿಖ್ಯಾತೆ ಆದಿದೇವತೆ
ಗಾನವಿಲೋಲೆ ಸುರನುತೆ ನೀನೇ ಗತಿ ಎನಗಾರನ |
ಕಾಣೆನೆ ದಾನಿ ಇಂದಿರಾದೇವಿ
ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯ ಧ್ಯಾನದೊಳಿಡುವಂಥ ಸುಜ್ಞಾನ ಭಕುತಿ ಕೊಡು||3||

Lyrics in English

Kshira varidhi kannike marajanake
Irelu lokanayike |pa||

Vaaravarake aradhipudake charumatiya kodu | doora nodadale ||a.pa||

Sridhara durgi ambrani nitya kalyani
vedavatiye rukmini|
Veda vedantadabimaani varija paani
Adi madhyanta gunamani|
Sadhu janara hrunmandira vaasini
Bedagolipa kamakrodhagalodisi|
Ni dayadindale munde gatige pancha
Bedamatiya kodu madhava priyale ||1||

Sri maya jaya kruti shantidevi jayante
Namadolappa gunavante|
Komalavaada vaijayante dharisida shante
Somarka koti mige kante|
Tamarasambake rame lakumi satyabhame bavaranya dhumaketale|
Yaama yaamake hari
namava nudisi uttamarodane pari
naamavaniyuta ||2||

Anekabharana bushite dharanijate
Sujnanigala manoprite|
Anandalile vikyate adidevate
gaanavilole suranute nine gati enagarana|
kaanene daani indiradevi
naana pariyali srinidhi vijayaviththalana muruti |yadhyanadoliduvantha sujnana Bakuti kodu||3||


ಶಿವನೇ ಶಿವನೇ ಹರನೆ ಹರನೆ /Shivane Shivane Harane

ಓಂ ನಮೋ ಮುರುಡೇಶ ಲಿಂಗಾಯ| ಪರಂಜ್ಯೋತಿ ಸ್ವರೂಪನೆ | ಸಚ್ಚಿದಾನಂದ ಮೂರ್ತಯೇ | ಮಾತೋಬಾರ ಶ್ರೀ ಮುರುಡೇಶ್ವರ ದೇವ, ನಮಃ ಕೈಲಾಸವಾಸಯ ||

ಶಿವನೇ ಶಿವನೇ ಹರನೆ ಹರನೆ ಸದಾಶಿವನೇ, ಈಶ್ವರನೇ …. ಶಿವನೂ ನೀನೇ ಹರನೂ ನೀನೇ, ಮುರುಡೇಶ್ವರನು ನೀನೇ ತಾನೇ ||ಶಿವನೇ ಶಿವನೇ ||

ವೇದಾಂತ ಗೋಚರನೆ ಚಂದ್ರಕಲೆಯ ಶಿರದಲ್ಲಿ ಧರಿಸಿದವನೆ | ಭಸ್ಮವೆ ಅಂಗಲೇಪನವಾದವನೆ ಜಗವನ್ನು ಕಾಯುವ ಜಗದೇವನೆ ||

ಸಂಸಾರ ಪೋಷಕನೆ …. ರವಿಯನ್ನು ಬಾನಿನಲ್ಲಿ ಬೆಳಗಿಸುವವನೆ | ಪಾರ್ವತಿ ಗಣಪತಿ ಸಂತಸಹಿತನೆ ಲಿಂಗ ರೂಪನೆ ….. ದೇವದೇವನೆ ||2||

ರಾವಣಗೊಲಿದವನೆ …. ಕ್ಷಣದಲ್ಲಿ ಪ್ರಾಣಲಿಂಗ ನೀಡಿದವನೆ | ಗೋಕರ್ಣ ಕ್ಷೇತ್ರದ ಮಹಾಬಲೇಶ್ವರನ ವಸ್ತ್ರ ಭೂತನೆ ಮುರುಡೇಶ್ವರನೆ ||3||

Lyrics in English

Om namo Murdesha lingaaya
Paramjyothi swaroopane
Sacchidanada moorthaye
Maathobaara Sri Murudeshwara deva
Nama Kailaasavaasaaya|3|

Shivane Shivane Harane Harane
Sadashivane.. Eshwarane..||2||
Shivanu Neene Haranu Neene||2||
Murudeshwaranu Neene Thaane
Shivane Shivane Harane Harane
Sadashivane Eshwarane||

Vedantha Gocharane
Chandrakaleya Shiradalli Dharisidavane
Bhasmave Angalepanavaadavane
Jagavanu Kaayuva Jagadevane||1||

Samsara Poshakane..
Raviyannu Baaninalli Belagisuvavane
Parvathi Ganapathi Santhasahithane
Linga Roopane.. Devadevane..||2||

Ravanagolidavane.. kshandalli Praanalinga Needidavane |
Ghokarna Kshetrada Mahabaleshwarana
Vastra Bhoothane Murudeshwarane||3||