ನಗುವರಲೋ ರಂಗಯ್ಯ /Naguvarella rangayya ninnatava

ನಗುವರಲೋ ರಂಗಯ್ಯ ನಿನ್ನಾಟವ ಕಂಡು ||

ಹಗರಣವಾಗಿದೆ ಎನಗೆ ನಿಗಮಗೋಚರನೆ||

ನಿಗಮವನ್ನು ತರಲು ಮತ್ಸ್ಯಾಕೃತಿಯ ತಾಳಿದೆ ನಗವನೆತ್ತಿ ಕೂರ್ಮನೆಂಬ ಹೆಸರ ಧರಿಸಿದೆ | ಜಗತಿಯನ್ನು ತರಲು ವರಾಹ ಮೂರ್ತಿಯೆನಿಸಿದೆ| ಮಗುವಿಗಾಗಿ ಘೋರಾಕೃತಿ ನರ ಮೃಗನೇಣಿಸಿದೆ||

ಹೆಡೆಮುರಿ ಕಟ್ಟಿ ದಾನವ ಕೊಟ್ಟ ಬಲಿಯ ಭಂಗಿಸಿದೆ ಪಡೆದ ತಾಯಿಯ ಶಿರವ ಕಡಿದು ನ್ಯಾಯವೆನಿಸಿದೆ | ಮಡದಿಗಾಗಿ  ಮರ್ಕಟರ ಹಿಂಡು ಕೂಡಿಸಿದೆ,  ಕಡಲ ಕಟ್ಟಿ ಕಪಿಗಳಿಂದ  ಪುರವ ಜಯಿಸಿದೆ  ||

ಅಷ್ಟಮಿಯೊಳರ್ಧರಾತ್ರಿ ಜನಿಸಿದೆ, ದುಷ್ಟ ಕಂಸನು ಹಾಕಿದ ಬಾಗಿಲ ತೆಗೆಸಿದೆ | ತಟ್ಟನೆ ಗೋಕುಲದಲ್ಲಿ ಬಂದು ನೆಲೆಸಿದೆ ಸೃಷ್ಟಿಸಿ ಚಂಡಿಕೆಯ ಖಳನ ಮುಂದೆ ನಿಲಿಸಿದೆ ||

ನಂದಗೋಪ ತನಗೆ ಕಂದನಾದನು ಎಂದು ಮಿಂದು ಕಾಲಿಂದಿಯೊಳು ಮಂದಿರಕೆ ಬಂದು ಚಂದದಿಂದ ಜಾತಕರ್ಮ ಮಾಡಿಸಿಕೊಂಡು ಬಂದ ಬ್ರಾಹ್ಮಣರಿಗೆ ದಕ್ಷಿಣಿ ಕೊಟ್ಟನು ಅಂದು ||

ಬಣ್ಣಿಸಿ ಮಕ್ಕಳ ಕರೆದು ಬೆಣ್ಣೆಯುಣಿಸಿದೆ ಚಿನ್ನಿಕೋಲು ಚೆಂಡು ಬುಗರಿ ಗಂಜುಗವಾಡಿದೆ || ಕಣ್ಣು ಸನ್ನೆ ಮಾಡಿ ಅವರ ಕಾಕು ಮಾಡಿದೆ, ಮಣ್ಣು ತಿಂದ ಬಾಯೊಳು ಬ್ರಹ್ಮಾಂಡ ತೋರಿದೆ ||

ಗೊಲ್ಲರ ಮನೆಗೆ ನೀನು ಮೆಲ್ಲನೆ ಪೋಗಿ ಚೆಲ್ಲಿ ಪಾಲು ಮೊಸರು ಬೆಣ್ಣೆ ಸೂರೆ ಮಾಡಿದೆ | ವಲ್ಲಭಯರ ಕೂಡೆ, ನೀನು ಸರಸವಾಡಿದೆ ಮುಲ್ಲೇ ಮಲ್ಲಿಗೆಯ ಅರಳ ಮುಡಿಗೆ ಮುಡಿಸಿದೆ ||

ಬಾಲಕರ ಕೂಡೆ ಮೊಸರ ಭಾಂಡ ಒಡೆಸಿದೆ ಹಾಲು ಮೊಸರು ಬೆಣ್ಣೆ ಕದ್ದು ಕಳ್ಳನೆನಿಸಿದೆ | ಬಾಲೆಯರ ವಸ್ತ್ರವ ಕೊಂಡು ಮರವನೇರಿದೆ ಮಾನಿನಿಯರೊಡಕೂಡಿ ರಮಿಸಿದೆ ||

ತರುಣಿಯರ ವ್ರತವ ಕೆಡಿಸಿ ಬತ್ತಲೆ ನಿಲ್ಲಿಸಿದೆ ತುರಗವೇರಿ ಕಲ್ಕಿಯಾಗಿ ಖಡ್ಗವ ಧರಿಸಿದೆ | ಗುರು ಮಧ್ವರಾಯರಿಗೊಲಿದು ಉಡುಪಿಲಿ ನೆಲಸಿದೆ, ವರದ ಪುರಂದರ ವಿಠ್ಠಲನೆ ನಮಗೆ ಗತಿಯಾದೆ ||

Lyrics in English

Naguvarella rangayya ninnatava kandu||

Hagaranavagide enage nigamagocharane||

Nigamavannu taralu matsyakrtiya talide nagavanetti kurmanemba hesara dhariside |
jagatiyannu taralu varaha murtiyeniside maguvigagi ghorakrti nara mruganeniside||

Hedemudi katti danava kotta baliya bhangiside padeda tata shirava kadidu nyayaveniside |
madadigsgi markatara hindu kudiside kadala katti kapigalinda dhurava jayiside||

Ashtamiyolardha ratriyalli janiside dushta kamsanu hakida bagila tegeside |
tattane gokuladalli bandu nelaside shrushtisi chandikeya khalana munde niliside ||

Nandagopa tanage kandanadanu endu mindu kalindiyolu mandirake bandu |
chandadinda jatakarma madisi kondu banda brahmanarige dakshine kottanu andu ||

Bannisi makkala karedu benneyuniside chinnikolu chendu bugari ganjugavadide|
kannu sanne madi avara kaku madide mannu tinda bayolu brahmanda toride ||

Gollara manege ninu mellane pogi chelli palu mosaru benne sure madide |
vallabhayara kude ninu sarasavadide mulle malligeye arala mudige mudiside ||

Balakara kude mosara bhanda odeside halu mosaru benne kaddu kallaneniside |
baleyara vastrava kondu maravaneride maaniniyaroda kudi ramiside ||

Taruniyara vratava keisi battale niliside turagaveri kalkiyagi khadgava dhariside |
guru madhvarayarigolidu udupili nelaside varada purandara vittalane namage gatiyade ||


ಎಣೆಯಾರೊ ನಿನಗೆ ಹನುಮಂತರಾಯ / Ene yaro ninage hanumantaraya

ಎಣೆಯಾರೊ ನಿನಗೆ ಹನುಮಂತರಾಯ ||

ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲ ಪ್ರಣತಜನ ಮಂದಾರ ಪವನಸುಕುಮಾರ ||

ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ
ನಡೆನಡೆದು ಮುದ್ರಿಕೆಯ ಪಡೆದು ಮುದದಿ
ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ
ಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ||

ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ
ಚರಚರನೆ ಸೀಳಿ ಸಂಭ್ರಮದಿಂದ
ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು
ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ ||

ಫಳಫಳನೆ ಆರ್ಭಟದಿಂದ ರಾವಣನ
ನಳನಳನೆ ಬೆಳೆದ ನಂದನವ
ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ
ಬಂದೆ ಭಳಿಭಳಿರೆ ಹಯವದನ ದಾಸ ನಿಸ್ಸೀಮ ||

Lyrics in English

Ene yaro ninage hanumantaraya ||pa ||

Ene yaro ninage tribuvanadolagella |
Punata jana mandara pavana sukumara || a. Pa ||

Adigadige ramara padambujake vandisuta |
Nada nadedu mudrikeyagondu mudadi ||
Dhadadhadane ambudhiya dati sitege guru ta |
Koda kodutta kustarisidanta hanumanta || 1 ||

Garagarane halgiridu kalusha daityaranella |
Caracarane sili sambramadindali ||
Biribirine kanbiduta binkadali lankeyanu |
Surasurane baladali sutta rana dhitta || 2 ||

Galagalane arbatisi bapure ravanana
Belebeleda nandanavanava kitti ||
Kalakalane naguta dasakamdharana guddideyo |
Balibalire hayavadanana dasa nirdosha || 3 ||


ಆರಿಗಾರೋ ಕೃಷ್ಣ ಶೂರಕುಮಾರನೆ / Arigaaro krishna surakumaarane

ಆರಿಗಾರೋ ಕೃಷ್ಣ ಶೂರಕುಮಾರನೆ ||ಪ||

ಆರಿಗಾರೋ ನಿನ್ನ ಹೊರತು ಪೊರೆವರೆನ್ನಶೂರ ಮಾರಜನಕ ಅಕ್ರೂರವರದ ದೊರೆಯೆ ||ಅಪ||

ಸತಿ ಸುತರು ಹಿತರೇನೊ ಮತಿಭ್ರಾಂತಿ ಬಡಿಸುವರು ಗತಿ ಯಾರೊ ಮುಂದೆ ಗರುಡವಾಹನ ದೇವ  ||೧||

ಆಶಪಾಶದಿ ಸಿಲುಕಿ ಘಾಸಿಪಟ್ಟೆನೊ ಬಹಳ ವಾಸುದೇವನೆ ನಿನ್ನ ದಾಸನೆಂದೆನಿಸಯ್ಯ  ||೨||

ಮಾಯಮಡುವಿನೊಳ್ಮುಳುಗಿ ಗಾಯವಾಯಿತೊ ಕಾಯ ಉಪಾಯ ಯಾವುದೊ ಮುಂದೆ ರಾಯ ಹಯವದನ ||೩||

Lyrics in English

Arigaaro krishna surakumaarane ||pa||

Arigaaro ninna horatu porevarennasura maarajanaka akruravarada doreye ||apa||

Sati sutaru hitareno matibhraanti badisuvaru gati yaaro munde garudavaahana deva  ||1|

Ashapaashadi siluki ghaasipatteno bahalavaasudevane ninna daasanebdenisayya  ||2||

Maayamaduvinolmulugi gaayavaayito kaaya upaaya yaavudo munde raaya hayavadana ||3||


ಸ್ಮರಿಸಿ ಬದುಕಿರೋ ದಿವ್ಯಚರಣ / Smarisi badukiro divya charana

ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||

ದಾಸರಾಯನ ದಯವ ಸೂಸಿಪಡೆದನ
ದೋಷರಹಿತನ ಸಂತೋಷಭರಿತನ || ೧ ||

ಜ್ಞಾನವಂತನ ಬಲುನಿಧಾನಿ ಶಾಂತನ
ಮಾನವಂತನ ಬಲುವದಾನ್ಯ ದಾಂತನ || ೨ ||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ ||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದಮರೆತನ || ೪ ||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು || ೫ ||

ಪಾಪಕೋಟಿಯ ರಾಶಿ ಲೇಪವಾಗದೊ
ತಾಪಕಳೆವನೋ ಬಲುದಯಾಪಯೋನಿಧಿ || ೬ ||

ಕವನರೂಪದಿ ಹರಿಯ ಸ್ತವನಮಾಡಿದ
ಭುವನ ಬೇಡಿದ ಮಾಧವನ ನೋಡಿದ || ೭ ||

ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || ೮ ||

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನ ಉಲ್ಲಾಸತನದಲಿ || ೯ ||

ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ
ಶಾಂತ ಗುರುಗಳ ಪಾದವಂತು ನಂಬಿರೋ || ೧೦ ||

ಖೇದವಾಗದೊ ನಿಮಗೆ ಮೋದವಾಹುದೊ
ಆದಿದೇವನ ಸುಪ್ರಸಾದವಾಹುದೊ || ೧೧ ||

ತಾಪ ತಡೆವನೊ ಬಂದ ಪಾಪ ಕಡಿವನೊ
ಶ್ರೀಪತಿಯಪಾದ ಸಮೀಪವಿಡುವನೋ || ೧೨ ||

ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ
ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ ||

ವೇದ ಓದಲು ಬರಿದೆ ವಾದಮಾಡಲು
ಹಾದಿಯಾಗದೊ ಬುಧರ ಪಾದ ನಂಬದೆ || ೧೪ ||

ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು
ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ ||

ದಾನ ಮಾಡಲು ದಿವ್ಯಗಾನಪಾಡಲು
ಜ್ಞಾನ ದೊರೆಯದೊ ಇವರ ಅಧೀನವಾಗದೆ || ೧೬ ||

ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||

ಪೂಜೆ ಮಾಡಲು ಕಂಡ ಗೋಜುಬೀಳಲು
ಬೀಜಮಾತಿನ ಫಲಸಹಜ ದೊರೆಯದು || ೧೮ ||

ಸುರಸು ಎಲ್ಲರು ಇವರ ಕರವ ಪಿಡಿವರೊ
ತರಳರಂದದಿ ಹಿಂದೆ ತಿರುಗುತಿಪ್ಪರೊ || ೧೯ ||

ಗ್ರಹಗಳೆಲ್ಲವು ಇವರ್ಗೆ ಸಹಾಯ ಮಾಡುತ
ಅಹೋರಾತ್ರಿಲಿ ಸುಖದ ನಿವಹ ಕೊಡುವವೊ || ೨೦ ||

ವ್ಯಾಧಿ ಬಾರದೊ ದೇಹ ಬಾಧೆ ತಟ್ಟದೊ
ಆದಿದೇವನ ಸುಪ್ರಸಾದವಾಹುದೊ || ೨೧ ||

ಪತಿತಪಾಮರ ಮಂದಮತಿಯು ನಾ ಬಲು
ತುತಿಸಲಾಪೆನೆ ಇವರ ಅತಿಶಯಂಗಳ || ೨೨ ||

ಕರುಣದಿಂದಲಿ ಎಮ್ಮ ಪೊರೆವನಲ್ಲದೆ
ದುರಿತಕೋಟಿಯ ಬ್ಯಾಗ ತರಿವ ದಯದಲಿ || ೨೩ ||

ಮಂದಮತಿಗಳು ಇವರ ಚೆಂದವರಿಯದೆ
ನಿಂದೆ ಮಾಡಲು ಭವದಬಂಧ ತಪ್ಪದೊ || ೨೪ ||

ಇಂದಿರಾಪತಿ ಇವರ ಮುಂದೆ ಕುಣಿವನೊ
ಅಂದವಚನವ ನಿಜಕೆ ತಂದು ಕೊಡುವನೊ || ೨೫ ||

ಉದಯ ಕಾಲದಿ ಈ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ || ೨೬ ||

ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೊ
ಪಠಿಸಬಹುದಿದು ಕೇಳಿ ಕುಟಿಲರಹಿತರು || ೨೭ ||

Lyrics in English

Smarisi badukiro divya charanakeragiro
durita taridu poreva vijaya gurugalembara ||

Dasarayana dayava susi padedana
dosharahitana santoshabharitana ||1||

Jnanavamtana balu nidhani shantana
manyavantana bahu dhanyadatana ||2||

Hariya bhajisuva narahariya yajisuva
durita tyajisuva janake harusha surisuva ||3||

Modabharitana panchabhedavaritana
sadhucharitana manavishada maretana ||4||

Ivara nambida janake bhavavidembudu
havanavagado nammavara matavidu ||5||

Papakotiya rashi lepavagado
tapa kalevanu balu dayapayonidhi ||6||

Kavanarupadi hariya stavana madida
bhuvana bedida madhavana nodida ||7||

Ranganendana bhavavu hingitendana
mangalangana antarangavaritana ||8||

Kashinagaradallidda vyasadevana
dayava susi padedana ullasatanadali ||9||

Chinte byadiro nishchintaragiro
shantagurugala padavantu nambiro ||10||

Khedavagado nimage modavahudo
adidevana suprasadavahudo ||11||

Tapa tadevano banda papa kadivano
shripatiya paadada samipaviduvano ||12||

Veda odalu baride vada madalu
hadi doreyadu budhara pada nambade ||13||

Gange mimdare malavu himgitallade
ranganoliyano bhaktara samga dorakade ||14||

Lekkavillada desha sutti bamdaru
duhkhavallade lesha bhakti dorakadu ||15||

Dana madalu divyagana padalu
jnana doreyado ivaradhinavagade ||16||

Ishti yatake kanda kashtavyatake
ditta gurugala pada mutti bhajisiro ||17||

Puje madalu kanda goju bilalu
bijamatina phala sahaja dorakado ||18||

Suraru ellaru ivara karava pidivaro
taralarandadi himde tirugutipparo ||19||

Grahagalellavu ivarge sahaya maduta
ahoratrili sukhada nivaha koduvavu ||20||

Vyadhi barado dehabadhe tattado
adidevana suprasadavahudo ||21||

Patitapamara mandamatiyu na balu
tutisalapene ivara atishayangala ||22||

Karunadindali emma porevanallade
duritakotiya bega tariva dayadali ||23||

Mandamatigalu ivara chandavariyade
ninde madalu bhavada bandha tappado ||24||

Indirapati ivara munde kunivano
anda vachanava nijake tandu koduvano ||25||

Udayakaladi ee padava pathisalu
madadanadaru jnana udayavahudo||26||

Sateyidallavo vyasavithala ballanu
pathisabahudido keli kutilarahitaru ||27||


ಮುಂಜಾನೆಯೆದ್ದು ಗೋವಿಂದ ಎನ್ನಿ / Munjaane eddu govindanenni

ಮುಂಜಾನೆಯೆದ್ದು ಗೋವಿಂದ ಎನ್ನಿ ||ಪ||
ನಮ್ಮನಂಜಿಪ ದುರಿತವು ದೂರವೆನ್ನಿ ||ಅ||

ಅಸುರಸಂಹಾರಿಯೆನ್ನಿ ದಶಶಿರವೈರಿಯೆನ್ನಿ
ಶಿಶುವು ಮೊರೆಯಿಡಲು ರಕ್ಷಿಸಿದನೆನ್ನಿ
ಅಸುರನರಣ್ಯದೊಳ್ ಭಸ್ಮವ ಮಾಡಲು
ವಸುಧೆಯೊಳ್ ನಾಟ್ಯವನಾಡಿದನೆನ್ನಿ ||

ಬಲಿಯ ಬೇಡಿದನೆನ್ನಿ ಚೆಲುವ ವಾಮನನೆನ್ನಿ
ಲಲನೆಯ ಅಭಿಮಾನ ಕಾಯ್ದನೆನ್ನಿ
ಕಲಿಯುಗದಲಿ ಬಂದ ಕೃಷ್ಣಾವತಾರನೆನ್ನಿ
ಸಲೆ ಪಾಂಡುಸುತರನ್ನು ಪಾಲಿಸಿದನೆನ್ನಿ ||

ಕರುಣಾಕರನೆನ್ನಿ ಕಪಟನಾಟಕನೆನ್ನಿ
ಕರಿರಾಜನನು ಕಾಯ್ದ ಕೃಷ್ಣನೆನ್ನಿ
ಪರಿಪರಿಯಿಂದಲಿ ಭಕ್ತರ ಸಲಹುವ
ವರದ ಪುರಂದರವಿಠಲನೆನ್ನಿ ||

Lyrics in English

Munjaane eddu govinda enni ||pa|| nammananjipa duritavu dooravenni ||a.pa||

Asurasamhariyenni dashashira vairiyenni | shishuvu moreyidalu rakshisidanenni | asuranaranyadol bhasmava madalu vasudeyol natyavanadidanenni ||

Baliya bedidanenni cheluva vamananenni | lalaneya abhimana kaydanenni | kaliyugadali banda krushnavataaranenni | sale pandusutarannu palisidanenni ||

Karunakaranenni kapatanatakanenni | karirajanannu kayda krishnanenni | paripariyindali bhaktara salahuva varada purandara vittalanenni ||


ಗುರುರಾಯರ ನಂಬಿರೋ /Gururayara nambiro

ಗುರುರಾಯರ ನಂಬಿರೋ | ರಾಘವೇಂದ್ರ
ಗುರುರಾಯರ ನಂಬಿರೋ || ಪ ||

ಗುರುರಾಯರ ನಂಬಿ | ದುರಿತ ದುಷ್ಕೃತ ಹರಿಸಿ
ಪುರುಷಾರ್ಥ ಪರಮವ ಕರಗತ ಕೈಗೊಳ್ಳಿ || ಅಪ||

ಪರಿಮಳೇತ್ಯಾದಿ ಸಂದ್ಗ್ರಂಥ | ವಿರಚಿಸಿ
ಪರಮೋಚ್ಚಪ್ರದವೆನಿಸುವಂಥ |
ಎರಡೆರಡ್ಹತ್ತು ಮತ್ತೆ | ಎರಡೈದು ಗ್ರಂಥವ
ಧರಣಿ ಸುರರಿಗಿತ್ತು | ಕರುಣವ ತೋರಿದ || 1 ||

ರಾಮಕೃಷ್ಣ ನರಹರೀ | ವೇದವ್ಯಾಸ
ಮಾಮನೋಹರ ವೃಂದಾವನದಿ
ವಾಮಾಂಗ ಎನಿಸೀಹ | ಶ್ರೀಮಹಿಳೆ ಸಹಿತಾಗಿ
ಕಾಮಿತಾರ್ಥದ ಹರಿ | ನೇಮದಿ ನೆಲಸೀಹ || 2 ||

ಕೂಸೆರಡರ ದಯದೀ | ಮಂತ್ರಾಲಯ
ದೇಶಕೆ ಪೋಗಿ ಮುದದೀ |
ಲೇಸು ಸೇವೆಯ ಗೈಯ್ಯೆ | ಕಾಸರೋಗವನೀಗಿ
ಮೇಶ ಗುರುಗೋವಿಂದ | ದಾಸನ್ನಾಗಿಸಿದ || 3 ||

Lyrics in English

Gururayara nambiro | raghavendragururayara nambiro ||

Padurita dushkrata harisipurushartha paramava karagata kaigolli || a.pa.||

Parimaletyadi sandgrantha | virachisivaramoksha pradavenisuvantha |
Eraderadhattu matte | eradaidu granthavadharani surarigittu | karunava torida ||1||

Ramakrishna narahari | vedavyasamamanohara vrundavanadivamanga enisiha | sri mahile sahitagi kamitarthada hari | nemadi nelasiha ||21||

Kooseradara vayadi | mantralayadeshake pogi mudadi |
Esu seveya gaiyye | kasarogavanigi mesha gurugovinda | dasannagisida ||3||


ವಾಣಿ ಪರಮ ಕಲ್ಯಾಣಿ ನಮೋ / Vaani parama kalyaani namo

ವಾಣಿ ಪರಮ ಕಲ್ಯಾಣಿ ನಮೋ ನಮೋ ।
ಅಜನ ರಾಣಿ ಪಂಕಜಪಾಣಿ ।। ವಾಣಿ ।।

ಫಳಿರೆ  ಫಳಿರೆಯೆಂಬೆ  ಭಕ್ತಜನ ಸುಖದಾಂಬೆ
ಸುಳಿದಾಡು ಶುಭಾನಿತಂಬೆ  ಅಂಬೇ ….. ।
ಹೊಳೆ ಹೊಳೆವ ಮುಖ ಮುಕುರಬಿಂಬೆ
ಇಳೆಯೊಳಗೆ ಸರಿಗಾಣೆ  ಶಾರದಾಂಬೆ ಪುತ್ಥಳಿಗೊಂಬೆ ।।ವಾಣಿ ।।

ಶರಣು ಶರಣಲೇ  ದೇವಿ ಸ್ಮರಣೆಮಾತ್ರದಿ ಕಾಯ್ವೆ
ಚರಣದಂದುಗೆ  ಕೀವಿ ಮೆರೆವೆ ವಾಗ್ದೇವಿ ।
ನಲಿನಲಿವಾಭರಣಗಳ  ಧರಿಸಿ ನಟಿಸುವಿ ದೇವಿ
ಇಳೆಯೊಳಗೆ ಹರಿಣಾಕ್ಷಿ  ಸಲಹು ಕಾಮಾಕ್ಷಿ ।।ವಾಣಿ ।।

ಜಯ ಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆ
ದಯಮಾಡುದವಳಗೀತೆ  ಮಾತೇ ….. ।
ನಿನ್ನಿಂದ ವಿದ್ಯೆ ಬುದ್ಧಿ ಅರಿಯೊಲುವೇ  ಅಮ್ಮ
ನಿನ್ನ ನಂಬಿದೆ ತಾಯೇ  ನೀ  ಬಂದು ಕಾಯೇ ।
ಸತತ ಶ್ರೀ ಹಯವದನ  ಪದ ಸೇವಕ ಪ್ರೀತೆ
ಕ್ಷಿತಿಯೊಳಗೆ ಲಯದಿಂದ ತೆಳಿಸೆನ್ನ  ವಿಧಿಜಾತೆ ।।ವಾಣಿ ।।

Lyrics in English

Vaani parama kalyaani namo namo | ajana raani pankajapaani ||vaani||


Ghalire ghaliremba bhaktajana sukhadaambe sulidaadu shubhaanitambe ambe …..| hole holeva mukha mukarabimbe eleyolage sarigaane shaaradaambe puthaligombe || vaani ||

Sharanu sharanale devi smarane maatradi kaayve charanadanduge keevi mereve vaagdevi | nali nalivaabharanagala dharisi natisuva devi eleyolage harinaakshi salahu kaamakshi || vaani ||

Jaya jayatu jaganmaate jagadolage prakhyaate dayamaadudavala geete maate … | ninninda vidye buddhi ariyoluve amma ninna nambide taaye nee bandu kaaye | satata sri hayavadana pada sevaka preete kshitiyolage layadinda telisenna vidhijaate || vaani ||


ನೀ ಕರುಣಿಸೋ ವಿಠಲ ನಮ್ಮ / Nee karuniso vithala namma

ನೀ ಕರುಣಿಸೋ ವಿಠಲ ನಮ್ಮ ಸಾಕೊ ಪಂಡರಿ ವಿಠಲ || pa||

ವಿಠಲ ವಿಠಲ ಪಾಂಡುರಂಗ ಜೈ ಜೈ ವಿಠಲ ಪಾಂಡುರಂಗ|ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠಲ | ಸಾಸಿವೆಯಷ್ಟು ಭಕುತಿಯನರಿಯೇನೋ ಶೇಷ ಶಯನ ಹರಿ ವಿಠಲ ||1||

ಭವಸಾಗರದೊಳು ಮುಳುಗುವೆ ಸುಮ್ಮನೆ ಅವಲೋಕಿಸುವರೇ ವಿಠಲ |ನವ ನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೋ ವಿಠಲ ||2||

ನಿಶಿದಿನ ಅಶನ ವಸನಕೆ ಹೆಣಗುವೆ ಹುಸಿ ಸಂಗ್ರಹಿಸಿದೆ ವಿಠಲ | ನಿಷೇಧ ಮಾಯಾ ಇಲ್ಲವೋ ನರಕದ ಗಸಣೆಗೆ ಅಂಜುವೆ ವಿಠಲ ||3||

ಜಾವಕೇ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುಧಿ ವಿಠಲ | ಶ್ರೀವರ ಪ್ರಸನ್ನ ವೆಂಕಟ ವಿಠಲ ಜೀವಕೆ ಹೊಣೆ ನೀ ವಿಠಲ ||4||

Lyrics in English

Nee karuniso vithala namma saako pandari vithala ||pa||

vithala vithala panduranga jai jai vithala panduranga ||


Doshigalolage hiriyanu naa nirdoshigalarasane vithala |
saasiveyashtu bhakutiyanariyeno shesha shayana hari vithala ||1||

Bhavasaagaradolu muluguve summane avalokisuvare vithala |nava nava vishayake higgutaliha manadavasara kaayo vithala ||2||

Nishidina ashana vasanake henaguve husi sangrahiside vithala | nishedha maayaa illavo narakada gasanege anjuve vithala ||3||

Jaavake maaduve saavira tappanu kaayo dayambudhi vithala | shreevara prasanna venkata vithala jeevake hone nee vithala ||4||


ಜಯ ಜಯ ವೈಷ್ಣವ ಪಯೊನಿಧಿ /Jaya jaya vaishnava payonidhi

ಜಯ ಜಯ ವೈಷ್ಣವ ಪಯೊನಿಧಿ ಚಂದ್ರಗೆ | ಜಯ ಜಯ ವ್ಯಾಸ ಯತೀಂದ್ರರಿಗೆ ||pa||

ಜಯ ಜಯ ವರ ಕರ್ನಾಟಕ ಪತಿಗೆ | ಜಯ ಸಿಂಹಾಸನ ವೇರಿದಗೆ ||apa||

ನಾಲ್ಕು ಶಾಸ್ತ್ರಂಗಳ ಪಾರಂಗತರಿಗೆ | ಕಾಕು ಮತಗಳನು ತುಳಿದವಗೆ | ಆ ಕಮಲಾಪತಿ ಭಕುತ ವರೇಣ್ಯಗೆ | ಶ್ರೀಕರ ಚಂದ್ರಿಕಾಚಾರ್ಯರಿಗೆ ||1||

ಹನುಮನ ಭಾಷ್ಯವ ಅಣಿ ಮಾಡಿದಗೆ | ಹನುಮಗೆ ಭವನಗಳ್ ಕಟ್ಟಿದಗೆ | ಹನುಮನ ಯಂತ್ರದಿ ಬಿಗಿದಪ್ಪಿದಗೆ ಮುನಿತ್ರಯದಲಿ ಸೇರಿದ ದೊರೆಗೆ ||2||

ಮಾಯ ವಾದಿಗಳನು ಗೆಲಿದವಗೆ | ಸ್ವೀಯ ಮಥವ ಸ್ಥಾಪಿಸಿದವಗೆ | ನ್ಯಾಯಾಮೃತ ಧಾರೆಯ ಅಭಿಷೇಕದಿ |ಆ ಯದುಪತಿಯನು ಕುಣಿಸಿದಗೆ ||3||

ಚಕ್ರ ಧರನ ಸುಳುಗಳ ತಿಲಿದವಗೆ | ಮಿಕ್ಕ ಮತಗಳನು ಅಳಿದವಗೆ | ವಕ್ರ ಯುಕುತಿಗಳ ತುಕ್ಕುಡ ಗೈಯುವ |ತರ್ಕ ತಾಂಡವದಿ ನಲಿದವಗೆ ||4||

ಕೃಷ್ಣ ದೇವ ರಾಯನ ಕುಲ ಪತಿಗೆ | ಕಷ್ಟದ ಕುಹ ಯೋಗವ ಕೊಂದವಗೆ | ಶಿಷ್ಟ ಜನಗಳಿಗೆ ಇಷ್ಟಾರ್ಥಗಳನು |ವೃಷ್ಟಿಯ ಗೈವ ಪ್ರಸನ್ನರಿಗೆ ||5||

Lyrics in English

Jaya jaya vaishnava payonidhi chandrage| jaya jaya vyaasa yateendrarige ||a||

Jaya jaya vara karnataka patige | jaya simhaasana veridage ||pa||

Naalku shastrangala paarangatarige | kaaku matagalanu tulidavage |aa kamalapati bhakuta varenyage | shrikara chandrikachaaryarige ||1||

Hanumana bhaashyava animaadidage |hanumage bhavanagal kattidage |hanumana yantradi bigidappidage |munitrayadali serida dorege ||2||

Maaya vaadigalanu gelidavage |sveeya mathava sthaapisidavage |nyayamruta dhaareya abhishekadi | aa yadupatiyanu kunisidage ||3||

Chakra dharana sulugaLa tilidavage |mikka matagalanu alidavage | vakra yukutigala tukkuda gaiyuva |tarka taandavadi nalidavage ||4||

Krishna deva raayana kula patige | kashtada kuha yogava kondavage |shishta janagalige ishtaarthagalanu |vrushtiya gaiva prasannarige ||5||


ಏನು ಮಾಡಲೊ ಮಗನೆ ಯಾ/Enu madalo magane

ಏನು ಮಾಡಲೊ ಮಗನೆ ಯಾಕೆ ಬೆಳಗಾಯಿತೊ
ಏನು ಮಾಡಲೊ ಕೃಷ್ಣಯ್ಯ ||ಪ.||
ಏನು ಮಾಡಲಿ ಇನ್ನು ಮಾನಿನಿಯರು ಎನ್ನ
ಮಾನವ ಕಳೆಯುವರೊ ರಂಗಯ್ಯ ||ಅ.ಪ.||

ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ
ಮೇಲಿನ ಕೆನೆಗಳ ಮೆದ್ದನೆಂಬುವರೊ
ಬಾಲಕರೆಲ್ಲರ ಬಡಿದನೆಂಬರೊ ಎಂಥ
ಕಾಳ ಹೆಂಗಸು ಇವನ ಹಡೆದಳೆಂಬುವರೊ ||೧||

ಕಟ್ಟಿದ್ದ ಕರುಗಳ ಬಿಟ್ಟನೆಂತೆಂಬರೊ
ಮೆಟ್ಟಿ ಸರ್ಪನ ಮೇಲೆ ಕುಣಿದನೆಂಬುವರೊ
ಪುಟ್ಟ ಬಾಲೆಯರ ಮೋಹಿಸಿದನೆಂಬರೊ ಎಂಥ
ದುಷ್ಟ ಹೆಂಗಸು ಇವನ ಹಡೆದಳೆಂಬುವರೊ ||೨||

ಗಂಗಾಜನಕ ನಿನ್ನ ಜಾರನೆಂತೆಂಬರೊ
ಶೃಂಗಾರಮುಖ ನಿನ್ನ ಬರಿದೆ ದೂರುವರೊ
ಮಂಗಳಮಹಿಮ ಶ್ರೀ ಪುರಂದರವಿಠ್ಠಲ
ಹಿಂಗದೆ ಎಮ್ಮನು ಸಲಹೆಂತೆಂಬರೊ ||೩||

Lyrics in English

Enu madalo magane yake belagayito
Enu madalo krishnayya ||pa.||
Enu madali innu maniniyaru enna
manava kaleyuvaro rangayya ||a.pa.||

Halu mosaru benne kaddanembuvaro
melina kenegala meddanembuvaro
balakarellara badidanembaro entha
kala hengasu ivana hadedalembuvaro ||1||

Kattidda karugala bittanentembaro
metti sarpana mele kunidanembuvaro|
putta baleyara mohisidanembaro entha
dushta hengasu ivana hadedalembuvaro ||2||

Gangajanaka ninna jaranentembaro
shrungaramukha ninna baride duruvaro|
mangaoamahima shri purandaravitthala
hingade emmanu salahentembaro ||3||