ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||pa||
ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||a.pa||
ದೇವಕೀ ಜಠರೋ ದಯಾಂಬುಧಿ ಚಂದ್ರನ – ಗುಣ ಸಾಂದ್ರನ ಗೋವಜ್ರಕೆ ಘನ ಯಮುನೆ ದಾಟಿ ಬಂದನ – ಅಲ್ಲಿ ನಿಂದನ ಮಾವ ಕಳುಹಿದ ಮಾಯಾ ಶಟವಿಯ ಕೊಂದನ – ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ – ಶ್ರುತಿ ಸಿದ್ಧನ||1||
ಗೋಕುಲದ ಗೋಪಿಯರ ವಂಚಕ ಚೋರನ – ಬಹು ಧೀರನ ಅನೇಕ ನಾರಿಯರ್ವಸನವನು ಕದ್ದೊಯ್ದನ – ತುರುಗಾಯ್ದನ ನಾಕಿಯರಿಗರಿ ಧೇನುಕ ವತ್ಸವಿ ಘಾತನ – ವಿಖ್ಯಾತನ ಕಾಕುಮತಿ ಕಾಳಿಂಗನ ಫಣ ತುಳಿದನ – ಅವಗೊಲಿದನ||2||
ಶೈಲವನು ಅಹಿ ಶಯನ ಬೆರಳಲಿ ಆಂತನ – ಬಲವಂತನ ಸೋಳ ಸಾಸಿರ ಬಾಲೆಯರ ಕರ ಪಿಡಿದನ – ಸುಧೆಗುಡಿದನ ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ – ಅಲ್ಲಿ ನಲಿದನ ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ – ಸಂತುಷ್ಟನ||3||
ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ – ಸುರರಾಳ್ವನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ – ಸುರವಂದ್ಯನ ನಾರಿ ಕಬುಜೆಗೆ ಭೂರಿ ಸಂತಸವಿತ್ತನ – ಅತಿಶಕ್ತನ ವಾರಣವನು ಕೆಡಹಿದ ಪ್ರತಿಮಲ್ಲನ – ಅತಿ ಚೆಲ್ವನ||4||
ಸುಲಭದಿಂದಲಿ ಶಿವನ ಧನುವನು ಮುರಿದನ – ನೆರೆ ಮೆರೆದನ ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ – ಜಯವಂತನ ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ – ಹುಡಿಗೆಡೆದನ ಬಲದಿ ತಾಯಿ ತಂದೆ ಬಂಧನ ಕಡಿದನ – ಯಶ ಪಡೆದನ||5||
ಭುವನ ಪಟ್ಟವನುಗ್ರಸೇನಗೆ ಕೊಟ್ಟನ – ಅತಿ ಶ್ರೇಷ್ಠನ ಯುವತಿಯರಿಗುದ್ಧವನ ಕಳುಹಿದ ಜಾಣನ – ಸುಪ್ರವೀಣನ ವಿವಿಧ ವಿದ್ಯಾಕಲೆಗಳೆಲ್ಲವ ನರಿತನ – ಶುಭ ಚರಿತನ ಜನವ ಶಿಕ್ಷಿಸಿ ದ್ವಿಜನ ಕಂದನ ತಂದನ – ಆನಂದನ||6||
ಸುಮತಿ ಖಳಮಾಗಧನ ಯುದ್ಧದಿ ಗೆದ್ದನ – ಅನವದ್ಯನ ದುಮಣಿ ಸಮ ದ್ವಾರಕಿಯ ರಚಿಸಿದು ದಾರನ – ಗಂಭೀರನ ಸುಮತಿ ಮುಚುಕುಂದನೊದ್ದ ಯವನನ ಸುಟ್ಟನ – ಅತಿ ದಿಟ್ಟನ ವಿಮಲ ಸುಚರಿತ್ರಾಷ್ಟ ಮಹಿಷಿಯ ರಾಳ್ದನ – ನೆರೆ ಬಾಳ್ದನ||7||
ಮುರನರಕ ಮುಖ್ಯರನು ಚಕ್ರದಿ ತಂದನ – ಕರಿವರದನ ಸುರತರುವ ಸತಿಗಾಗಿ ತಂದ ಸಮರ್ಥನ – ಜಗತ್ಕರ್ತನ ದುರುಳ ಶಿಶುಪಾಲಾದಿ ದೈತ್ಯ ಸಂಹಾರನ – ಬಹುಶೂರನ ಕುರುಕುಲಕೆ ಲಯವಿತ್ತ ಪಾಂಡವಪ್ರೀಯನ – ಕವಿಗೇಯನ||8||
ಇಂತು ಇಳೆಯ ಸುಜನರ ಸಲಹುವ ಕಾಂತನ – ಸಿರಿವಂತನ ಪಂಥವುಳ್ಳ ಪ್ರಸನ್ನ ಹಯವದನನ – ಮುನಿಮಾನ್ಯನ ಸಂತತವೀ ಸಾರಕಥೆಯನು ಕೇಳ್ವರ – ನೆರೆಬಾಳ್ವರ ಕಂತುಷಿತ ಕಾರುಣ್ಯದಿಂದಲಿ ಪೊರೆವನು – ಸುಖಗರೆವನು||9||
Lyrics in English
Nenevenanudina nilaneerada varnana guna rannana ||pa||
Munijanpriya muddu udupina rangana dayabharitana ||a.pa||
devaki jatharo dayambudhi chandrana – guna sandrana | govajrake ghana yamune daati bandana – alli nindana ||maava kaluhida maaya shataviya kondana – chidaanandana | devaripu daityendra shakatana oddana – shruti siddana||1||
Gokulada gopiyara vanchaka chorana – bahu dhirana aneka naariyarvasanavanu kaddoydana – turugaaydana naakiyarigari dhenuka vatsavi ghatana – vikhyatana kaakumati kalingana phana tulidana – avagolidana ||2||
Shailavanu ahi shayana beralali aantana – balavantana | solasaasira baaleyara kara pididana – sudhegudidana | baale bhameyayarodane jalakreedegilidana – alli nalidana | leeleyali lalaneyarigishtava kottana – santushtana ||3||
Kroora baka keshigalannella akroora kareyalu harushadindali | bandana – suravanyana naari kabujege bhuri santasa vittana atishaktana vaaranavanu kedahida prati mallana – ati chelvana ||4||
Sulbhadindali shivana dhanuvanu muridana – nere meredana | nintana – jayavantana khala kulagrani kamsanembana hodedana – hudigededana | baladi taayi tande bandhana kadidana – yasha padedana ||5||
Bhuva pattavanugrasenage kottana – ati shreshta | yuvatiyariguddavana kaluhida janana – supravinana || vividha vidyakalegalellava naritana – shubha charitana janava shikshisi dvijana kandana tandana – anandana ||6||
Sumati khalamaagadhana yuddadi geddana – anavadyana | dumani sama dwarakiya rachisidu daarana – gambhirana | sumati muchukundanodda yavanana suttana – ati dittana | vimala sucharitraashta mahishiyaraaldana – nere baldana||7||
Muranaraka mukhyaranu chakradi tandana – karivaradana | surataruva satigaagi tanda samarthana – jagatkartana durula shishupaaladi daitya samhaarana – bahushurana kurukulake layavitta paandavapriyana – kavigeyana ||8||
Intu ileya sujanara salahuva kaantana – sirivantana | panthavulla prasanna hayavadanana- munimaanyana | santatavee saarakatheyanu kelvara – nerebaalvara kantushita kaarunyadindali porevanu – sukhagarevanu ||9||
VIDEO