ಏನೆಂದು ಕೊಂಡಾಡಿ ಸ್ತುತಿಸಲೋ/ Enendu kondadi stutisalo

ಏನೆಂದು ಕೊಂಡಾಡಿ ಸ್ತುತಿಸಲೋ ದೇವ ನಾನೇನು
ಬಲ್ಲೆ ನಿನ್ನ ಮಹಿಮೆಗಳ ಮಾಧವ ||pa||

ಹರಿಮುಕುಂದನು ನೀನು ನರಜನ್ಮ ಹುಳು ನಾನು ಪರಮಾತ್ಮನು ನೀನು ಪಾಮರನು ನಾನು
ಗರುಡ ಗಮನನು ನೀನು ಮರುಳು ಪಾಪಿಯು ನಾನು ಪರಂಜ್ಯೋತಿಯು ನೀನು ದುರುಳ ತಿರುಕನು ನಾನು ||1||

ವಾರಿಧಿಶಯನನಾದ ಕಾರುಣ್ಯನಿಧಿ ನೀನು ಘೋರದಿಂದಿಹ ಕಾಮಿಕ್ರೋಧಿ ನಾನು
ಈರೇಳು ಭುವನದೊಳು ಇರುವ ಮೂರುತಿ ನೀನು ದೂರಿ ನಿನ್ನನು ಬೈವ ದುಷ್ಟ ನಾನು||2||

ಅಣುರೇಣು ತೃಣಗಳಲಿ ಪರಿಪೂರ್ಣನು ನೀನು ಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನು ಕ್ಷಣಭಂಗುರ ತನುವಿನ ಗೊಂಬೆ ನಾನು ||3||

ಕಂಬದಲಿ ಬಂದ ಆನಂದ ಮೂರುತಿ ನೀನು ನಂಬಿಕೆಯಿಲ್ಲದ ಪ್ರಪಂಚಕನು ನಾನು
ಅಂಬರೀಷಗೆ ಒಲಿದ ಅಕ್ರೂರಸಖ ನೀನು ಡಂಬ ಕರ್ಮಿಯು ನಾನು ನಿರ್ಜಿತನು ನೀನು||4||

ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನ ಚರಣಸೇವಕರ ಸೇವಕನು ನಾನು
ಬಿರುದುಳ್ಳವನು ನೀನು ಮೊರೆಹೊಕ್ಕವನು ನಾನು ಸಿರಿ ಕಾಗಿನೆಲೆಯಾದಿಕೇಶವನು ನೀನು||5||

Lyrics in English

Enendu kondadi stutisalo deva nanenu balle nimma mahimegala madhava || pa ||

Hari mukundanu ninu narajanma
hulunanu paramatma ninu pamaranu nanu |
garudagamananu ninu marulu papiyu nanu
parama jyotiyu ninu tirupeyava nanu || 1 ||

Varidhishayananaada karunyanidhi neenu | ghoradindiha kamikrodhi nanu | erelu bhuvanadolu eruva mooruti neenu | doori ninnanu baiva dushta nanu ||2||

Anurenu trunagali paripoornanu neenu | kshanakshnake avagunada kukarmi nanu | vaniyarasana petta vaikuntapati neenu | kshanabhangura tanuvina gombe naanu ||3||

Kambadali banda ananda muruti ninu
nambike yillada prapanchiganu nanu
ambarishage olida akrura sakha ninu
danbakarmiyu nanu nirjitanu ninu|| 4||

Tirupati vasa sri venkateshanu ninu
smarisi ninnaya padava bakutanu nanu
birudullavanu ninu morehokkenai nanu
siri kagi neleyadi keshavanu ninu||5||


ನೇಮವಿಲ್ಲದ ಹೋಮವೇತಕಯ್ಯ/ Nemavillada homa

ನೇಮವಿಲ್ಲದ ಹೋಮವೇತಕಯ್ಯ
ರಾಮನಾಮವಲ್ಲದೆ ಮತ್ತೆ ನಮಗೊಂದೆ

ನೀರ ಮುಳುಗಲೇಕೆ ನಾರಿಯ ಬಿಡಲೇಕೆ
ವಾರಕೊಂದುಪವಾಸ ಇರಲೇತಕೆ
ನಾರಸಿಂಹನ ದಿವ್ಯನಾಮವನು ನೆನೆದರೆ
ಘೋರ ಪಾತಕವೆಲ್ಲ ತೊಲಗಿ ಹೋಗುವುದು

ಅಂಬರದೊಳಿರಲೇಕೆ ತಾಂಬೂಲವ ಬಿಡಲೇಕೆ
ಡಂಬಕತನದಲಿ ಇರಲೇತಕೆ
ಅಂಬುಜನಾಭನನು ಭಾವದಲಿ ನೆನೆದರೆ
ಇಂಬುಂಟು ವೈಕುಂಠಪುರದ ಒಳಗಯ್ಯ

ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ
ಬೆಂದು ಹೋಗುವುದು ದುರಿತಂಗಳೆಲ್ಲ
ಬಂದ ಪಾಪಗಳೆಲ್ಲ ನಿಲ್ಲದೆ ಕಳೆದಾವು
ಚಂದಾಗಿ ನೆಲೆಯಾದಿ ಕೇಶವನ ನೆನೆಯೊ

Lyrics in English

Nemavillada homa innetake
ramanamavirada mantraveke ||pa||

Nira mulugalu eke nariyala bidaleke
varakonduupavasa madaleke
narasimhana divya namava nenedare
ghora patakavella tolagi hoguvudu ||1||

Ambarava toreyaleke tambula bidaleke
dambhakada vruttiyali iraletake
ambujanabhananu bhavadali nenedare
imbuntu vaikumthavemba puradolage ||2||

bandhadolage biddu hariyanu neneyutire
bendu hoguvuvu duritangalella
banda duhkagalella nilladale kaleyuvuvu
chendagi neleyadikeshavana neneye ||3||


ನೆರೆನಂಬಿದೆ ಮದ ಹೃದಯ /Nere Nambidhe mad hrudaya

ನೆರೆನಂಬಿದೆ ಮದ ಹೃದಯ ಮಂಟಪದೊಳು
ಪರಿಶೋಭಿಸುತಿರು ಪಾಂಡುರಂಗ                 ||ಪ||

ಶರಣು ಜನರ ಸಂಸಾರ ಮಹಾ ಭಯ 
ಹರಣ ಕರುಣ ಸಿರಿ ಪಾಂಡುರಂಗ                 ||ಅ.ಪ||

ನೆರೆದಿಹ ಬಹುಜನರೋಳಿದ್ದರು ಮನ
ಸ್ಥಿರ ವಿಡು ನಿನ್ನಲಿ ಪಾಂಡುರಂಗ
ಪರಿ ಪರಿ ಕೆಲಸವು ನಿನ್ನ ಮಹಾಪೂಜೆ
ನಿರುತ ಎನಗೆ ಕೊಡು ಪಾಂಡುರಂಗ        ||೧||

ಪರದೇವನೆ ನಿನ್ನಾ ಲೀಲಾ ಸ್ಮೃತಿಯನು
ನಿರುತ ಎನಗೆ ಕೊಡು ಪಾಂಡುರಂಗ
ಪರರಾಪೇಕ್ಷೆಯ ಬಿಡಿಸಿ ನಿರಂತರ
ಪರಗತಿ ಪಥ ತೋರೋ ಪಾಂಡುರಂಗ     ||೨||

ಸುಖವಾಗಲಿ ಬಹು ದುಃಖವಾಗಲಿ
ಸಖನೀನಾಗಿರು ಪಾಂಡುರಂಗ
ನಿಖಿಲಾಂತರ್ಗತ ವ್ಯಾಸ ವಿಠಲ ತವ
ಮುಖ ಪಂಕಜ ತೋರೋ ಪಾಂಡುರಂಗ  ||೩||

Lyrics in English

Nere Nambidhe madh hrudhaya mantapadholu
parishobisuthiru Panduranga ||
sharana janara samsara mahabaya
charana karuna siri Panduranga ||

paradhevane ninna lilla stuthiyanu
nirutha enage kodu Panduranga
parara peksheya thoresi niranthara
paragathi patha thoro Panduranga || 1 ||

neredhiha bahu janarolidhdharu
manasthiravidu ninnali Panduranga
paripari kelasavu ninna mahapuje
nirutha enage kodu Panduranga || 2 ||

sukavagali bahu dhuhkavagali
saka ninagiru Panduranga
nikilanthargatha vyasa vitala thava
pankaja mukha thoro Panduranga || 3 ||


ಇಕ್ಕಲಾರೆ ಕೈ ಎಂಜಲು /Ikkalare kai enjalu

ಇಕ್ಕಲಾರೆ ಕೈ ಎಂಜಲು , ಚಿಕ್ಕ
ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ||

ಮನೆಯ ಸಾರಿಸುತೇನೆ , ಮಡಕೆ ತೊಳೆಯುತೇನೆ
ಮನೆಯ ತೊಳೆಯೊಳಗಾರಿಲ್ಲ , ಹೋಗೋ ದಾಸಯ್ಯ
ತನಯರು ಅಳುತಾರೆ , ನಿನದೇನು ಕಾಟವು
ಕ್ಷಣ ಹೊತ್ತು ನಿಲ್ಲದೆ, ಹೋಗೋ ದಾಸಯ್ಯ ||

ಅಟ್ಟದ ಮೇಲಣ ಅಕ್ಕಿ ತೆಗೆಯಬೇಕು
ಹೊಟ್ಟೆ ನೋಯುತಲಿದೆ, ಹೋಗೋ ದಾಸಯ್ಯ
ಮುಟ್ಟಾಗಿ ಇದ್ದೇನೆ , ಮನೆಯೊಳಗಾರಿಲ್ಲ
ನಿಷ್ಠುರ ಮಾಡದೆ ಹೋಗೋ ದಾಸಯ್ಯ ||

ವೀಸದ ಕಾಸಿಗೆ ದವಸವ ನಾ ತಂದೆ
ಕೂಸಿಗೆ ಸಾಲದು , ಹೋಗೋ ದಾಸಯ್ಯ
ಆಸೆಕಾರ ನೀನು , ದೋಷಕಾರಿ ನೀನು
ಶೇಷಾಚಲವಾಸ ಪುರಂದರವಿಠಲ ||

Lyrics in English

Ikkalare kai enjalu , chikka
Makkalu alutare hogo dasayya ||pa||

Maneya sarisutene , madake toleyutene
Maneya toleyolagarilla , hogo dasayya
Tanayaru alutare , ninadenu katavu
Kshana hottu nillade, hogo dasayya ||

Attada melana akki tegeyabeku
Hotte noyutalide, hogo dasayya
Muttagi iddene , maneyolagarilla
Nishthura madade hogo dasayya ||

Visada kasige davasava na tande
Kusige saladu , hogo dasayya
Asekara ninu , doshakari ninu
Sheshachalavasa purandaravithala ||


ಮಕರದ ಮಂಜಿನಲಿ ಶಬರಿಮಲೈ/Makarada manjinali

ಮಕರದ ಮಂಜಿನಲಿ ಶಬರಿಮಲೈ
ಮೈಮನ ತುಂಬಿಸುವ ಶಬರಿಮಲೈ
||ಮಕರದ||
ನಿನ್ನ ಮುಖ ಬಿಂಬವದು
ಕಣ್ಣ್ ತುಂಬ ನೆಲೆಸಿಹುದು
ಕಾಂತಿಮಲೆ ಜ್ಞಾನಜ್ಯೋತಿ ಅಯ್ಯಪ್ಪ ಸ್ವಾಮಿ
||ಮಕರದ||

ಜ್ಯೋತಿಯ ರೂಪದಲಿ ಭಕ್ತಿಗೆ ಬೆಳಕಾದೆ
ನಂದಾದೀಪದೊಳು ಮನದಲಿ ಬೆರೆದೆ
||ಜ್ಯೋತಿಯ||
ಭಕ್ತರ ಕೋರಿಕೆಯ ಅಯ್ಯಪ್ಪ ತೀರಿಸುವ
ಪದಗಳ ಹಾಡುತ ಸೇರೋಣ ಶಬರಿಮಲೈ
|| ಮಕರದ||

ಭಕ್ತ ಸಮೂಹದ ನಾಯಕನ
ನಂಬಿದ ಜನಕೆಲ್ಲಾ ಭಾಗ್ಯ ತರುವವನ
||ಭಕ್ತ||
ಇರುಮುಡಿ ಬುತ್ತಿಯಲಿ ಸಿರಿಸುಖ ತುಂಬುವನ
ಅವನೆ ನೆನೆಯುತ ಸೇರೋಣ ಶಬರಿಮಲೈ
||ಮಕರ||

Lyrics in English

Makarada manjinali shabarimalai maimana tumbisuva shabarimalai || ninna mukha bimbavadu kan tumba nelesihudu | kantimale jnanajyoti ayyappa swami ||makarada ||

Jyotiya roopadali bhaktige belakade nandadeepadolu manadali berede ||jyotiy|| bhaktara korikeya ayyappa teerisuva |padagala haduta serona shabarimalai ||makarada||

Bhakta samoohada nayakana nambida janakella bhagya taruvavana ||bhakta|| erumudi buttiyali sirisukha tumbuvana |avane neneyuta serona shabarimalai ||makara||


ಷಷ್ಠಿ ಬಂತಮ್ಮ ಕುಕ್ಕೆ /Shashti bantamna kukke

ಷಷ್ಠಿ ಬಂತಮ್ಮ ಕುಕ್ಕೆ ಷಷ್ಠಿ ಬಂತಮ್ಮ||ಷಷ್ಠಿ||
ಇಷ್ಟ ದೇವನಮ್ಮ ಮನಸಂತುಷ್ಟಿ ಕೊಡುವನಮ್ಮ
ನಿಷ್ಠೆಯಿಂದ ಜನರೊಟ್ಟುಗೂಡುವರು
ಎಷ್ಟು ಚೆಂದವಮ್ಮ ||ಷಷ್ಠಿ ಬಂತಮ್ಮ||

ರಥವನೆಳೆವರಮ್ಮ ಮಹಾವ್ರತವ ಮಾಳ್ಪರಮ್ಮ||ರಥ||
ಅತಿ ಮನೋಜ್ಞನು ಸತಿ ಕುಮಾರನು
ರಥದಿ ಮೆರೆವನಮ್ಮ ||ಅತಿ||
||ಷಷ್ಠಿ ಬಂತಮ್ಮ||

ಹರಕೆ ಕೊಡುವರಮ್ಮಪುಣ್ಯದ ಸರಕನೊಯ್ಯುವರಮ್ಮ ||ಹರಕೆ||
ಕರವ ಜೋಡಿಸುತ ಚರಣ ಧೂಳಿಯಲಿ
ಹೊರಳಿ ನಳಿವರಮ್ಮ||ಕರವ||
||ಷಷ್ಠಿ ಬಂತಮ್ಮ||

ಉತ್ಸವ ನೋಡಮ್ಮ ಚಿತ್ತದ ಮತ್ಸರ ತೊಳೆಯಿರಮ್ಮ||ಉತ್ಸವ||
ಹತ್ತು ಜನ್ಮದಲಿ ಹೊತ್ತ ಪಾಪಗಳ
ಕಿತ್ತು ಬಿಸಾಡಮ್ಮ||ಹತ್ತು||
||ಷಷ್ಠಿ ಬಂತಮ್ಮ||

ಆದಿಸುಬ್ರಹ್ಮಣ್ಯ , ತ್ರೈಜಗದಾಧಿ ವ್ಯಾಧಿ ಹರಣ||ಆದಿ||
ಪಾದ ಮ್ರತ್ತಿಕೆ ಪ್ರಸಾದ ನೀಡಿ ಬಾಧೆ ಕಳೆವನಮ್ಮ||ಪಾದ||
||ಷಷ್ಠಿ ಬಂತಮ್ಮ||

Lyrics in English

Shashti bantamna kukke shashti bantamma ||shashti|| ishta devanamma manasantushti koduvanamma |nishteyinda janarottugooduvaru eshtu chendavamma ||shashti bantamma||

Rathavanelevaramma mahaavrutava maalparamma ||ratha||ati manojnanu sati kumaranu rathadi merevanamm ||ati||shashti bantamma||

Harake koduvaramma punyada sarakanoyyuvaramma ||harake||karava jodisuta charana dhooliyali horali nalivaramma ||karava||shashti bantamma||

Utsava nodamma chittada matsara toleyiramma ||utsava|| hattu janmadali hotta papagala kittu bisaadamma ||hattu||shashti bantamma||

Adi subrahmanya, trijagadadhi vyaadhi harana ||adi|| paada mruttike prasada needi baadhe kalevanamma ||pada||shashti bantamma||


ವಾರಿಜನಯಪತೆ ವಾರಿಜನಾಭನೆ/Varijalayapate varijanabhane

ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರ ಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||

ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ||

ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ
ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕನ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||

ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ
ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ
ಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯು ಮಹೋ ಉರಗಗಿರಿವಾಸ ||೨||

ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ
ಗೋಪಾಲ ವಿಠ್ಠಲ ದೇವ ಪರಾಖು
ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆ
ಮಡದಿಗೆ ಹೇಳದೆ ದುಡುದುಡುನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||

Lyrics in English

Varijalayapati varijanabhane
varijabhavapita varijanetrane
varijamitra aparaprabhavane
varija jhandada karana doreye ||pa||

Baraiyya ba ba bakutara priya Srinivasa raya |
mara janaka mukutharodeya devaiyya jiya baraiyya ba ba ba ba ba||

Syandana veribappa ranga devotunga
nandanadanarimada bhanga karuna panga |
sindhu shayana sundaranga he Narasingha|
kanda virinchiyu nandivahana amarendra|
sanakana sanandanadi munivrindanidu|
bandu nindu dim dim dimikendu
nindadalu Anadadi manake||

Baraiyya ba ba ba ba ba ba ba ba ba bakutara priya Srinivasa raya ||

Jagat janmmadi karta govinda udaradi lokava|
laguvagi darisida mukunda bhaktara manake|
jaga jagaisuta polevananda nigamavaliyinda||

Aganita munigalu naga kaga mriga shashi|
gagana manyAdyaru sogasagi bhage bhage|
pogalutali bega chigichigidadalu|
mugulunageyu maha uragagirivasa||

Baraiyya ba ba ba ba ba bakutara priya Srinivasa raya||

Tadamada byadavo he nalla vaku lalisuennodeya|
Gopala vittalaa deva paraku
adi idu bhaktavatsala shri lakuminalla|
maduvinolage gaja moreyidalakshane
madadige hellade dudududune bandu
hididu nakrana baya kadidu bidisidane|
sadagaradali ramepodaveyodagude||

Baraiyya ba ba ba ba ba bakutara priya Srinivasa raya||


ಜಾರತ್ವವನು ಮಾಡಿದ /Jaaratwavanu madida

ಜಾರತ್ವವನು ಮಾಡಿದ ಪಾಪಗಳಿಗೆಲ್ಲ
ಗೋಪಿಜನ ಜಾರನೆಂದರೆ ಸಾಲದೆ?

ಚೋರತ್ವವನು ಮಾಡಿದ ಪಾಪಗಳಿಗೆಲ್ಲ
ನವನೀತ ಚೋರನೆಂದರೆ ಸಾಲದೆ?

ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ
ಮಾವನ್ನ ಕೊಂದವನೆಂದರೆ ಸಾಲದೇ?

ಪ್ರತಿದಿವಸ ಮಾಡಿದ ಪಾಪಗಳಿಗೆಲ್ಲಾ
ಪತಿತ ಪಾವನನೆಂದು ಕರೆದರೆ ಸಾಲದೇ?

ಇಂತಿಪ್ಪ ಮಹಿಮೆಗಳೊಳೊಂದನ್ನಾದರೂ ಒಮ್ಮೆ
ಸಂತಸದ ನೆನೆಯೆ ಸಲಹುವ ನಮ್ಮ ಶ್ರೀ ಕೃಷ್ಣ ||

Lyrics in English

Jaaratwavanu madida papagaligella gopijana jaranendare salade ?

Choratvavanu madida papagaligella navanita choranendare salade ||

Krooratwavanu madida papagaligella mavanna kondanendare salade ?

Pratidiwasa madida papagaligella patita pavananendu karedare salade ?

Intippa mahimegalolondannaadaroo omme santasada neneye salahuva namma shri krishna||


ಗೌರಿ ನಂದನ ಗಜಾನನ /Gowri nandana gajaanana

ಗೌರಿ ನಂದನ ಗಜಾನನ |ಗಿರಿಜಾ ನಂದನ ನಿರಂಜನ ||

ಪಾರ್ವತಿ ನಂದನ ಶುಭಾನನಾ | ಶುಭಾನನಾ ಶುಭಾನನಾ ||

ಪಾಹಿ ಪ್ರಭೋಮ್ಮಾ0 ಪಾಹಿ ಪ್ರಸನ್ನ || ಗಿರಿಜಾ ನಂದನ ನಿರಂಜನ ||

Lyrics in English

Gowri nandana gajaanana | girijaa nandana niranjana ||

Paarvati nandana shubhanana |shubhanana | shubhanana||

Paahi prabhommaam paahi prasanna | girija nandana niranjana ||


ಮರೆತೆಯೇನೋ ರಂಗಾ /Mareteyeno ranga mangalanga

ಮರೆತೆಯೇನೋ ರಂಗಾ ಮಂಗಳಾಂಗ
ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ||ಪ||

ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ
ಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿ
ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ||೧||

ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ ||೨||

ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ
ಸಿರಿ ಅರಸನೆಂದು ಸೇವಕರರಿವರೋ
ಶರಣಾಗತರ ಪೊರೆವ ಶ್ರೀರಂಗವಿಠಲಯ್ಯ
ನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು||೩||

Lyrics in English

Mareteyeno ranga mangalanga turukara kayvalli tondanagiddenna ||pa||

Kolu kaiyali kolalu jolugambali hegala
Myale kallicili konkalalli
Kalagadagavanittu kadoliha pasuhinda
Lalisuva balakara myaladolagiddenna ||1||

Kallu mani kavadeyanu kadoliha gulaganji
Salladodaveya ninu sarvangake
Allalleseye dharisi navilugarigala gonde
Alli gollara kuda callata madutali ||2||

Siridevi bandu serida balika lokadali
Siri arasanendu sevakararivaro
Saranagatara poreva sri rangavithalayya
Narasinga niniruva pariya mundina siriyu ||3||