ಮಂತ್ರಾಲಯ ಮಂದಿರ /Mantralaya mandira

ಮಂತ್ರಾಲಯ ಮಂದಿರ ಮಾಂಪಾಹಿ      || ಪ ||

ಮಧ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವೀತಿಹೋತ್ರ               || ೧ ||

ಸುಧೀ೦ದ್ರಯತಿಕರಪದುಮೋದ್ಭವ
ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ       || ೨ ||

ದಂಡಧರ ಕೋದಂಡಪಾಣಿಪದ
ಪುಂಡರೀಕಧ್ಯಾನ ತಂಡಮತೇ ಹೇ         || ೩ ||

ಸುರಧೇನು ಕಲ್ಪತರು ವರಚಿಂತಾಮಣಿ
ಶರಣಾಗತಜನ ಪರಿಪಾಲ ತ್ವಮ್           || ೪ ||

ಅಭಿನವ ಜನಾರ್ಧನ ವಿಠ್ಠಲ ಪದಯುಗಳ
ಧ್ಯಾನಿಪ ಮುನಿಕುಲೋತ್ತಂಸಾ              || ೫ ||

Lyrics in English

Mantralaya mandira mampahi || pa ||

Madhvabidha munisadvamshodbava
Advaitaranya sadvitihotra || 1 ||

Sudhindrayatikara padumodbava
Sudhi gururagavendra kovida kulavarya || 2 ||

Dandadhara kodandapanipada
Pundarikadhyana tanda mate he || 3 ||

Suradhenu kalpataru varachintamani
Saranagatajana paripala tvam || 4 ||

Abinava janardhanaviththala padayugala
Dhyanipa munikulottamsa || 5 ||


ಲಾಲಿಸಿದಳು ಮಗನ ಯಶೋದೆ /Lalisidhalu Magana

ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ                                        ||ಪ||

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ              ||೧||

ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು     ||೨||

ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನೇ ಶ್ರೀಪುರಂದರವಿಠಲನ               ||೩||

Lyrics in English

Lalisidhalu Magana yashoda lalisidhalu magana ||

Aralele magayi beraligunguravittu
Taralana maisiri taruni noduta higgi |1|

Balakage kene halu mosara nidi
Lileyindali tola mele malagendu |2|

Mugulu nageyinda mudduta tarendu
Jagadodeyana shri Purandara vitthalana |3|


ಕ೦ಡು ಧನ್ಯನಾದೆ ಗುರುಗಳ /Kandu dhanyanade

ಕಂಡು ಧನ್ಯನಾದೆ ಗುರುಗಳ – ಕಣ್ಣಾರೆ ನಾ
ಕಂಡು ಧನ್ಯನಾದೆ ಈ ಗುರುಗಳ            || ಪ ||

ತುಂಗಾತಟದಿ ಬಂದು ನಿಂತ
ಪಂಗು ಬಧಿರಾದ್ಯ೦ಗ ಹೀನರ
ಆಂಗಗೈಸಿ ಸಲಹುವಾ – ನರ
ಸಿಂಗನಂಘ್ರಿ ಭಜಕರಿವರ        || ೧ ||

ಗುರುವರ ಸುಗುನೆಂದ್ರರಿಂದ
ಪರಿಪರಿಯಲಿ ಸೇವೆಗೊಳುತ
ವರಮಂತ್ರಾಲಯಪುರದಿ ಮೆರೆವ
ಪರಿಮಳಾಖ್ಯ ಗ್ರ೦ಥಕರ್ತರ            || ೨ ||

ಸೋ‍ಹಂ ಎನ್ನದೆ ಹರಿಯ ದಾ
ಸೋಹಂ ಎನ್ನಲು ಒಲಿದು ವಿಜಯ
ಮೋಹನ ವಿಠ್ಠಲನ್ನ ಪರಮ
ಸ್ನೇಹದಿಂದ ತೋರುವವರ            || ೩ ||

Lyrics in English

Kandu dhanyanade gurugala kannare na
Kandu dhanyanade namma I gurugala ||

Tungatatadi bandu ninta
Pangu badhiradyangahinara
Angagaisi salahuva narasinganangri
Bajakarivara || 1 ||

Guruvara sugunendrarinda
Paripariyali sevegoluta
Varamantralayapuradi mereva
Parimalakya granthakartara || 2 ||

Soham ennade hariya dasoham ennalu olidu
Vijaya mohanavithalana parama snehadinda toruvavara || 3 ||


ಪಂಡರಾಪುರವೆಂಬ ದೊಡ್ಡ ನಗರ / Pandharapuravemba dodda nagara

ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ
ವಿಠೋಬನಿರುವದು ನದಿ ತೀರ ಅಲ್ಲಿ ಪಂಢರಿ ಭಜನೆ ವ್ಯಾಪಾರ ||ಪ.||

ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ ||೧||

ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||

ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||

Lyrics in English

Pandharapuravemba dodda nagara alli vithobanemba sahukara |
vithobaniruvadu naditeera alli pandharibhajane vyapara ||pa.||

Tande neene tayi neene panduranga namma bandhu neene balaga neene panduranga |
bhaktara poshaka panduranga namma muktidayaka panduranga ||1||

Vithobanige priya tulasihara alli bhakta janara vyapara |
vithobanige priya bukkiya gandha alli chandrabhaga snana balu anda ||2||

Shrihari vitthala panduranga jaya hari vitthala panduranga |
vitthala vitthala panduranga namma purandara vitthala panduranga ||3||


ಶ್ರೀಶ ಕೊಳಲನೂದಿದನಿಂದು /Sreesha kolalanoodidanindu

ಶ್ರೀಶ ಕೊಳಲನೂದಿದನಿಂದು  ಶ್ರೀಧರನಿಂದು 
ಶ್ರೀಶ ಕೊಳಲನೂದಿದನಿಂದು  
ವಾಸವ ವಂದಿತ ವಾಸಜ ಸೇವಿತ
ವಾಸುಕಿ ಶಯನನು ವಾರೆ ಸುನೋಟದಿ  
ಶ್ರೀಶ ಕೊಳಲನೂದಿದನಿಂದು 
ಶ್ರೀಧರನಿಂದು ಶ್ರೀಶ ಕೊಳಲನೂದಿದನಿಂದು   || ೧ || 

ಬೆರಳ ಸಂದಿಲಿ ಮುರಳಿ ಪಿಡಿದು 
ಮುರಾರಿ ತಾನು ಹರುಷದಿಂದಲಿ ಸ್ವರಗಳ ನುಡಿದು 
ವಾರಿಜ  ನೇತ್ರ ಅರಳು ಮಲ್ಲಿಗೆ ಸ್ವರಗಳ ಮುಡಿದು 
ಕೊರಳ ಪದಕ ಹಾರ ಕೌಸ್ತುಭ ಶೋಭಿತ 
ಮರಳು ಮಾಡುತ ಮಡದಿಯರೆಲ್ಲರ
ಶ್ರೀಶ  ಕೊಳಲನೂದಿದನಿಂದು ಶ್ರೀಧರನಿಂದು 
ಶ್ರೀಶ  ಕೊಳಲನೂದಿದನಿಂದು   || ೨ ||

ಗೌರಿ ಗಾಂಧಾರಿ ಗೌಳಿ ಪಂತು ಗೌರೀಶ ಭೂಷಣ 
ಚೌರಿ ಸಾರಂಗ ಮೋಹನನಿಂತು ಕಾವೇರಿ ಶೃತಿ 
ಭೈರವಿ ವ್ಯಾಗಡೆ ಊದುತ ನಿಂತು  
ಮಾರಜನಕ ತಾನಾನಂದದಿಂದಲಿ  
ವೀರ ಶ್ರೀ ಕೃಷ್ಣನು ವಿಧ ವಿಧ ರಾಗದಿ 
ಶ್ರೀಶ  ಕೊಳಲನೂದಿದನಿಂದು ಶ್ರೀಧರನಿಂದು 
ಶ್ರೀಶ ಕೊಳಲನೂದಿದನಿಂದು  || ೩ || 

ನಾರದ ತುಂಬುರು ನಾಟ್ಯವನಾಡಿ ನಳಿನ ನಾಭನ
ಗಿರಿಜಾ ಪತಿಯು ವಂದಿಸಿ ಬೇಡಿ 
ಗೋಪಾಲ ಕೃಷ್ಣನ ಭಾರತಿ ಪತಿ ತಾ ಕೊಂಡಾಡಿ 
ವರಗುರು ವಂದಿತ ವಿಜಯವಿಠಲರೇಯ  
ಹರುಷವ ಪಡಿಸುತ ವನಿತೆಯರೆಲ್ಲರ  
ಶ್ರೀಶ  ಕೊಳಲನೂದಿದನಿಂದು ಶ್ರೀಧರನಿಂದು   
ಶ್ರೀಶ ಕೊಳಲನೂದಿದನಿಂದು 
ವಾಸವ ವಂದಿತ ವಾಸಜ ಸೇವಿತ
ವಾಸುಕಿ ಶಯನನು ವಾರೆ ಸುನೋಟದಿ   
ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು  
ಶ್ರೀಶ ಕೊಳಲನೂದಿದನಿಂದು  ಕೊಳಲನೂದಿದನಿಂದು ಕೊಳಲನೂದಿದನಿಂದು || ೪ ||

Lyrics in English

Sreesha kolalanoodidanindu sridharanindu Sreesha kolalanoodidanindu | vaasava vandita vaasaja sevita vasuki shayananu vaare sunotadi Sreesha kolalanoodidanindu sridharanindu Sreesha kolalanoodidanindu ||

Berala sandili murali pididu murari taanu harushadindali swaragala nudidu | varija netra aralu mallige swaragala mudidu | korala padaka haara koustubha shobhita | maralu maduta madadiyarellara |Sreesha kolalanoodidanindu sridharanindu   Sreesha kolalanoodidanindu ||

Gowri gandhari gowli pantu gowreesha bhushana |chouri saranga mohana nintu kaveri shruti | bhairavi vyagade uduta nintu | marajanaka taanaanandadindali | veera sri krishnanu vidha vidha raagadi |Sreesha kolalanoodidanindu sridharanindu   Sreesha kolalanoodidanindu ||

Narada tumburu natyavanadi nalinanaabhana girija patiyu vandhisi bedi | gopalakrishnana bharati pati taa kondadi varaguru vandita vijayavittalaraaya | harushava padisuta vaniteyarellara| Sreesha kolalanoodidanindu sridharanindu   Sreesha kolalanoodidanindu ||


ರೋಗಹರನೆ ಕೃಪಾಸಾಗರ /Rogaharane krupaasagara

ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇಂದ್ರ ಪರಿಪಾಲಿಸೋ || ಪ ||

ಸಂತತ ದುರ್ವಾದಿದ್ವಾನ್ತ ದಿವಾಕರ
ಸಂತವಿನುತ ಮಾತ ಲಾಲಿಸೊ || ೧ ||

ಪಾವನಗಾತ್ರ ಭೂದೇವವರನೆ ತವ
ಸೇವಕಜನರೊಳಗಾಡಿಸೋ || ೨ ||

ಘನ್ನಮಹಿಮ ಜಗನ್ನಾಥವಿಠ್ಠಲ ಪ್ರಿಯ
ನಿನ್ನಾರಾಧನೆ ಮಾಡಿಸೋ || ೩ ||

Lyrics in English

Rogaharane krupaasagara sriguru raghavendra paripaaliso ||pa||

Santata durvaadidwaanta diwakara santavinuta maata laaliso ||

Pavanagatra bhoodevavarane sevakajanarolagaadiso ||

Ghannamahima jagannathavittala priya ninnaaradhane madiso ||


ದಿನಕರನುದಿಸಿದನು ಧರೆಯೊಳಗೆ / Dinakaranudisidanu dhareyolage

ದಿನಕರನುದಿಸಿದನು ಧರೆಯೊಳಗೆ ದಿನಕರನುದಿಸಿದನು
ದಾನವ ಕುಲದಲಿ ಕ್ಷೋಣಿಯೊಳಗೆ ||ಪ||

ಪ್ರಥಮ ಪ್ರಲ್ಹಾದನಾಗಿ ಅವತಾರ ಮಾಡಿ ಸತತ ಹರಿಯ ನುತಿಸಿ ಮತಿಹೀನನಾದ ತಂದೆಗೆ ನರಹರಿ ರೂಪರತಿಯಿಂದ ತೋರಿದ ಪ್ರಲ್ಹಾದರಾಯರೆಂಬ|| 1||

ವ್ಯಾಸಮುನಿಯ ಎನಿಸಿ ಸೋಸಿಲಿಂಗವಾಸವನುತನ ಭಜಿಸಿ ದಾಸನೆಂದು ಮೆರೆದಿ ನವ ವೃಂದಾವನದಿ ಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ ||2||

ತುಂಗಭದ್ರೆಯ ತೀರದಿ ಮಂಗಳಮರ ಮಂತ್ರಾಲಯ ಸ್ಥಳದಿ ಅಂಗಜ ಪಿತ ನಮ್ಮ ಐಹೊಳೆ ವೆಂಕಟನ ಕಂಗಳಿಂದ ಕಂಡೆ ಗುರು ರಾಘವೇಂದ್ರನೆಂಬ|| 3||

Lyrics in English

Dinakaranudisidanu dhareyolage dinakaranudisidanu daanava kuladali kshoniyolage ||pa||

Prathama prahlaadanagi avatara madi satata hariya nutisi matihinanaada tandege narahari rooparatiyinda torida prahlaadaraayaremba ||1||

Vyasamuniya enisi sosilingavaasavanutana bhajisi daasanendu meredi nava vrundaavanadi sosili karedare vaasa maaduvudakke ||2||

Tungabhadreya teeradi mangalapura mantraalaya staladi angaja pita namma ihole venkatana kangalinda kande guru raaghavendranemba ||3||


ಮುದ್ದುಮುಖದಾತ ನಮ್ಮ ಮುಖ್ಯ/ Muddu mukhadaata namma

ಮುದ್ದುಮುಖದಾತ ನಮ್ಮ ಮುಖ್ಯಪ್ರಾಣನಾಥನೊ ಸದ್ಗುಣ ವಂದಿತ ವಾಯುಜಾತನೊ ರಾಮದೂತನೊ ||ಪ||

ಜಾನಕೀಶನ ವೈರಿ ಶೂಲನೊ ಬಹು ಧೀರನೊ ಮಾನಿನಿ ಸೀತೆಯ ಕಂಡು ಬಂದನೊ ಮುಂದೆ ನಿಂದನೊ ||1||

ವಾನರ ರೂಪಿಲಿ ಮುದ್ರೆಯಿತ್ತನೊ ವನ ಕಿತ್ತನೊ ಆ ನಗರವನೆಲ್ಲ ಸುಟ್ಟನೊ ಬಹು ದಿಟ್ಟನೊ|| 2||

ಸಾಗರವನು ದಾಟಿದ ಧೀರನೊ ಕಂಠೀರವನೊ ರಾಗ ತಾಳ ಮೇಳದಲ್ಲಿ ಜಾಣನೊ ಪ್ರವೀಣನೊ ||3||

ನಂಬಿದ ಭಕ್ತರ ಕಾಯ್ವ ದಾತನೊ ಪ್ರಖ್ಯಾತನೊ ಅಂಬುಜಾಸನಪದಕೆ ಬಂದು ನಿಂತನೊ ಹನುಮಂತನೊ|| 4||

ಹಯವದನನ ಭಕ್ತ ಚೆಲ್ವ ತೇಜನೊ ಯತಿರಾಜನೊ ದಾನವಕುಲಕೆ ಬಹು ಭೀಮನೊ ಸಾರ್ವಭೌಮನೊ ||5||

Lyrics in English

Muddu mukhadaata namma mukhyapraananaathanu
sadgunavandita vaayujaatanu raamadootanu ||pa||

Jaanakeeshana vairishuranu shurano bahudheerano
maanini seeteya kandu bandanu munde nintanu ||1||

Vaanara roopili mudreyittano ittano vana kittano
aa nagaravanella suttano suttano bahu dittano ||2||

Saagaravannu daatida dheerano dheerano kanthiravano
raaga taala meladalli jaanano praveenano ||3||

Nambida baktara kaayva daatano daatano prakhyaatano
ambujaasana padake bandu nintano hanumantano ||4||

Hayavadana bakta chelva tejano tejano yati raajano
daanava kulake mukutiyivano bheemano saarvabhamano ||5||


ಏನು ಬೇಡಲಿ ನಿನ್ನ ಬಳಿಗೆ /Ena bedali ninna balige

ಏನು ಬೇಡಲಿ ನಿನ್ನ ಬಳಿಗೆ ಬಂದು
ನೀನಿಟ್ಟ ಸೌಭಾಗ್ಯ ನಿಬಿಡವಾಗಿದೆ ಎನಗೆ || ಪ ||

ಜನನಿಯ ಕೊಡು ಎಂದು ಜಯವಂತ ಬೇಡುವೆನೆ
ಜನನಿ ಏನಿತ್ತಳಾ ಧ್ರುವರಾಜಗೆ
ಜನಕನ ಕೊಡು ಎಂದು ಜಗದೀಶ ಬೇಡುವೆನೆ
ಜನಕನೇನಿತ್ತನಾ ಪ್ರಹ್ಲಾದಗೆ || ೧ ||

ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ
ಅನುಜನೇನಿತ್ತನಾ ವಾಲಿಗೆ
ಧನವನೇ ಕೊಡು ಎಂದು ದೈನ್ಯದಲಿ ಬೇಡುವೆನೆ
ಧನ ಗಳಿಸಿದ ಸುಯೋಧನನೇನಾದ ಕೊನೆಗೆ || ೨ ||

ಸತಿಯಳ ಕೊಡು ಎಂದು ಮತಿವಂತ ಬೇಡುವೆನೆ
ಸತಿಯಿಂದ ದುನ್ಯಾಮಕನೇನಾದ ಕೊನೆಗೆ
ಸುತರುಗಳ ಕೊಡು ಎಂದು ಸತತದಲಿ ಬೇಡುವೆನೆ
ಸುತರಿಂದ ಧೃತರಾಷ್ಟ್ರ ಗತಿಯೇನು ಕಂಡ || ೩ ||

ಬೇಡುವೆನು ನಾನಿಂದು ಬೇಡತಕ್ಕುದೆ ದೇವಾ
ನೀಡೆನೆಂಬುದು ನಿನ್ನ ಮನದೊಳಿತ್ತೆ
ಮೂಡಲಗಿರಿವಾಸ ಗೋಪಾಲವಿಠಲ ಪರರ
ಬೇಡದಂತೆ ಎನ್ನ ಮಾಡಯ್ಯ ಹರಿಯೆ || ೪ ||

Lyrics in English

Ena bedali ninna balige bandu
Ninitta saubhagya nibidavagide enage ||P||

Jananiya kodu endu jayavanta beduvene
Janani enittala dhruvarayage
Janakana kodu endu jagadisha beduvene
Janakanenittana prahladage ||1||

Anujana kodu endu atishayadi beduvene
Anujanenittanai A valige dhanavanne
Kodu endu dainyadali beduvene
Dhanava galisida suyodhananenadanu ||2||

Satiyala kodu endu mativannta beduvene
Satiyinda dyunamakanenadanayya
Sutarugala kodu endu satatadali beduvene
Sutarinda dhrutarashtra gatiyeshtu padeda ||3||

Beduvenu na onda beda takkuda deva
Nide nenbudu ninna manadicchaye
Mudala girivasa sri gopala vithala
Bedadante parara madenna dhoraiye ||4||


ನಂದ ಕಿಶೋರ ನವನೀತ ಚೋರ / Nandakishora navanita

ನಂದ ಕಿಶೋರ ನವನೀತ ಚೋರ ಉಡುಪಿ ನಾಥ ಶ್ರೀ ಹರಿ | ಶ್ಯಾಮಲ ಕೋಮಲ ಕೃಷ್ಣ ಮುರಾರಿ ಮೋಹನ ಮುರಳಿಧಾರಿ ||

ನಗೆ ಬೆಳದಿಂಗಳ ಚೆಲ್ಲುತನಿಂದ ಭಕುತರ ಕಾಯುವ ಗೋವಿಂದ | ನಲಿಯುತ ಗೋಪಿಯರೆಲ್ಲರ ಕೂಡಿ ಆಡುತ ನೀಡುವ ಆನಂದ | ಹಸುಕರು ಕೂಗಲು ತವಕದಿ ಓಡುವ ಹಸುಳೆಯ ತೆರದಿ ಮುಕುಂದಾ ||

ಕಂಸನ ಕಂಡು ಕಿಡಿಮಿಡಿಗೊಂಡು ಧ್ವ0ಸವ ಮಾಡಿದ ಅಸುರಾರಿ | ಕನಕನ ಕಂಡು ಬಲು ಮುದಗೊಂಡು ಕಿಂಡಿಯಲಿಣಿಕಿದ ದಯೆ ತೋರಿ | ಕನ್ನಡ ನೆಲದಲ್ಲಿ ನಲೆಸಿದ ನಮ್ಮ ಕರುಣಾಸಾಗರ ಶ್ರೀಹರಿ ||

Lyrics in English

Nandakishora navanita chora udupi naatha sri hari | shyamala komala krishna murari mohana muralidhari ||

Nage beladingala chellutaninta bhakutara kaayuva govinda | naliyuta gopiyarellara koodi aduta needuva ananda | hasukaru koogalu tavakadi oduva hasuleya teradi mukundaa ||

Kamsana kandu kidimidigondu dhwamsava maadida asuraari | kanakana kandu balu mudagondu kandiyalinikida daye tori | kannada neladalli nelasida namma karunasaagara srihari ||