ರಾಮ ರಾಮ ಎಂಬೆರಡಕ್ಷರ /Raama raama emberadakshra

ರಾಮ ರಾಮ ಎಂಬೆರಡಕ್ಷರ|
ಪ್ರೇಮದಿ ಸಲಹಿತು ಸುಜನರನು||ಪ||

ಹಾಲಹಲವನು ಪಾನವ ಮಾಡಿದ
ಪಾಲಲೊಚನನೆ ಬಲ್ಲವನು|
ಆಲಾಪಿಸುತಾ ಶಿಲೆಯಾಗಿದ್ದ
ಬಾಲೆ ಅಹಲ್ಯೆಯ ಕೇಳೆನು||೧||ಪ||

ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ
ಕುಂಜರ ರವಿಸುತ ಬಲ್ಲವನು|
ಎಂಜಲ ಫಲಗಳ ಹರಿಗರ್ಪಿಸಿದ
ಕಂಜಲೋಚನೆಯ ಕೇಳೆನು||೨||ಪ||

ಕಾಲವನರಿತು ಸೇವೆಯಮಾಡಿದ
ಲೋಲ ಲಕ್ಷ್ಮಣನೆ ಬಲ್ಲವನು|
ವ್ಯಾಳಶ್ಯನ ಶ್ರೀ ವಿಜಯವಿಟ್ಟಲನ
ಲೀಲೆಶರದಿಯ ಕೇಳೆನು||೩||ಪ||

Lyrics in English

Raama raama emberadakshra|
premadi salahitu sujanaranu||pa||

Haalahalavanu paanava maadida
paalalochanane ballavanu|
aalapisuta shileyaagidda
baala ahalyeya kelenu||1|

Anjike illade girisaarida kapi
kunjara ravisuta ballavanu|
yenjala phalagala harigarpisida
kanjalochaneya kelenu||2||

Kaalavanaritu seveyamaadida
lolalakshmanane ballavanu|
vyaalashayana shree vijayavitthalana
leelesharadiya kelenu||3||


ಒಂಭತ್ತು ಬಾಗಿಲೊಳು ಒಂದೇ /Ombattu bagilolu onde

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ॥ಪ॥ 

ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದೆನೆ  ॥೧॥

ಅಷ್ಟಕರ್ತೃಗಳೆಂಬೋ ಅಷ್ಟನವಧಾನ್ಯವ ತಂದು
ಕುಟ್ಟಿತಟ್ಟಿ ಕಜ್ಜಾಯ ಕರಿದೆನೆ  ॥೨॥

ಅಷ್ಟಕರ್ಮಗಳೆಂಬೋ ಕಾಷ್ಠವನ್ನುರುಹಿ ನಾನು
ನಿಷ್ಥೆಯಿಂದಲಿ ಅನ್ನವ ಬಾಗಿದೆನೆ  ॥೩॥

ಅಷ್ಟರೊಳಗೆನ್ನ ಗಂಡ ಬಂದು ಅಡುಗೆಯ ಮಡಿಕೆ ಒಡೆದು ಮುಟ್ಟಿಮುರಿದು ಮೂಲೆಗೆ ಹಾಕಿದನೆ  ॥೪॥

ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ಹಾಂಗೆ ಮಾಡಿದನೆ  ॥೫॥

ಮಾಡಿದೆ ಒಗೆತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪುರಂದರವಿಠಲನ್ನ ದಾಸರ  ॥ ೬॥

Lyrics in English

Ombattu bagilolu onde deevige hacchi | nambikillada samsara madidane sooviya beebi ||pa||

Tanuvemba kallinolu manavemba dhyanava tumbi| vanavanadu navabele beesidene ||1||

Ashtakartragalembo ashta navadhanyava tandu |kuttitatti kajjaya karidene||2||

Ashtakarmagalembo kashtavannuruhi nanu | nishteyindali annava bagidene||3||

Ashtarolagenna ganda bandu adugeya madike odedu muttimuridu moolege hakidane ||4||

Uduva seereya seledu gidada toppala sutti |tirugi baradaange madidane ||5||

Madide ogetanava nambikillada samsarava necchi | koodide purandaravittalanna dasara||6||


ತುಂಗಾತೀರ ವಿರಾಜಂ /Tungateera virajam

ತುಂಗಾತೀರ ವಿರಾಜಂ ಶ್ರೀಗುರು
ರಾಘವೇಂದ್ರ ಯತಿರಾಜಂ ಭಜಮನ               ||ಪ||

ಮಂಗಲಕರ ಮಂತ್ರಾಲಯವಾಸಂ
ಶೃಂಗಾರಾನನ ವಿಲಸಿತಹಹಾಸಂ
ರಾಘವೇಂದ್ರ ಯತಿರಾಜಂ ಭಜಮನ               ||೧||

ಕರಧೃತ ದಂಡ ಕಮಂಡಲು ಮಾಲಂ
ಸುರುಚಿರ ಚೇಲಮ್ ಧೃತ ಮಣಿ ಮಾಲಂ
ನಿರುಪಮ ಸುಂದರ ಕಾಯಂ ಸುಶೀಲಂ
ವರಕಮಲೇಶಾರ್ಪಿತ ನಿಜ ಸಕಲಂ
ರಾಘವೇಂದ್ರ ಯತಿರಾಜಂ ಭಜಮನ               ||೨||

Lyrics in English

Tungateera virajam sriguru|| raghavendra yatirajam bhajamana ||

Mangalakara mantraalayavaasam shrungaararana vilasitahahaasam raghavendra bhajamana ||

Karadhruta dandakamandalu malam suruchira chelam dhrutamani malam nirupama sundara kayam susheelam varakamalesharpita nija sakalam raghavendra ratirajam bhajamana||


ಸತತ ಮಾರ್ಗದಿ  ಸಂತತ /Satata margadi santata

ಸತತ ಮಾರ್ಗದಿ  ಸಂತತ ಸೇವಿಪರಿಗೆ । ಅತಿ
ಹಿತದಲಿ ಮನೋರಥವ ಕೊಡುವೆನೆಂದು ।।ಪ ।।

ರಥವಾನೇರಿದ  ರಾಘವೇಂದ್ರ । ಸದ್ಗುಣಗಳ ಸಾಂದ್ರ  ।।ಅ.ಪ ।।

ಚತುರ ದಿಕ್ಕು ವಿದಿಕ್ಕುಗಳಲ್ಲಿ । ಹರಿವೋ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ । ವರವಾ  ಬೇಡುತಲಿ |ನುತಿಸುತ ಪರಿಪರಿ ನತರಾಗಿ ಹರಿಗೆ
ಗತಿ ಪೇಳದೆ  ಸರ್ವಥಾ  ನಾ ಬಿಡೆನೆಂದು  ।।೧।।

ಅತುಳ  ಮಹಿಮಾನಾ ದಿನದಲ್ಲಿ ।ದಿತಿಜಾ ವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ । ಉತ್ತಮ ರೀತಿಯಲ್ಲಿ
ಅತಿಶಯವಿರುತಿರೆ  ಪಿತನ ಬಾಧೆಗಳು
ಮನ್ಮಥ  ಪಿತನೊಲಿಸಿದ  ಜಿತ ಕರುಣದಲಿ ।।೨।।

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ । ಯತಿರಾಘವೇಂದ್ರ ….  ಗುರುರಾಘವೇಂದ್ರ
ಪತೀತರೋದ್ಧಾರಿಯೇ  ಪಾವನಕಾರಿಯೇ ।ಕರಮುಗಿವೆನು  ದೊರೆಯೆ
ಕ್ಷಿತಿಯೊಳು  ಗೋಪಾಲವಿಠಲನ  ಸ್ಮರಿಸುತ ……. ವಿಠಲ …. ಗೋಪಾಲವಿಠಲ
ಪ್ರತಿ  ಮಂತ್ರಾಲಯದೊಳು   ಅತಿ  ಮೆರೆವ   ।।೩।।

Lyrics in English

Satata margadi santata seviparige |ati hitadali manoratava koduvenendu||pa||

Rathavanerida raghavendra| sadgunagala sandra||a.pa||

Chatura dikku vidikkugallai| charipajanaralli mitiyillade bandu olaisutali | varava bedutali | nutisuta paripari nataragi harige gati pelade sarvatha na bidanendu ||1||

Atula mahimana dinadalli |ditija vamshadali |utpattiyagi uchitadalli | uttama reetiyalli atishayavirutire pitana baadhegalu manmata pitanolisida jita karunadali ||2||

Pratama prahlada vyasamuniye | yatiraghavendra …. Gururaghavendra patitarodhariye pavanakariye | karamugivenu doreye kshitiyolu gopalavittalana smarisuta … Vittala gopalavittala prati mantralayadolu ati mereva ||3||


ಶರಣು ಬೆನಕನೆ ಕನಕರೂಪನೆ /Sharanu benakane kanakaroopane

ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ||ಪ||

ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ ||೧||

ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ  ||೨||

ಚತುರ್ಬಾಹು ಚರಣ ತೊಡಲನೆ ಚತುರ ಆಯುಧಧಾರನೇ
ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ||೩||

ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮ ಪೂಜಿತ ರಕ್ತ ವಸ್ತ್ರಾಧಾರನೇ  ||೪||

ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಠ್ಠಲೇಶನ ಈಶ ಗುಣಗಳ ಪೊಗಳುವೆ  ||೫||

Lyrics in English

Sharanu benakane kanakaroopane kamini sangadoorane |||pa||

Ekadantane lokakhyatane ekavakya pravinane| ekavimshati patrapoojitaneka vjghna vinayaka ||1||

Lambakarnane nasikadharane gaambhiryayuta gunasarane || kambukandhara indumoulija chandanacharchitaangane ||2||

Chaturbahu charana todalane chatura ayudhadharane | matiyavantane malina jalitane atiya madhuraharane ||3||

Vakratundane mahaakaayane arkakoti pradeepane| chakradhara harabramha poojita rakta vastraadharane ||4||

Mooshikasana sheshabhushana ashesha vighnavinayaka | dasa purandaravitthaleshana esha gunagala pogaluve ||5||


ಬಂದನೋ ಗೋವಿಂದ ಚಂದದಿ /Bandano govinda chandadi

ಬಂದನೋ ಗೋವಿಂದ ಚಂದದಿ ಆನಂದಸುಂದರಿಯ ಮಂದಿರಕ್ಕೆ ನಂದನಕಂದಾ ನಂದನಕಂದಾ ||

ಸುಂದರಕಾರ ನಂದ ಕಂಡ ಗಂಭೀರಾ ಇಂದು ವದನೆಯರ ಮುಖಗಳಿಂದ  ನೋಡಿದ ತಂದ ಕುಸುಮ ಕರದಿಂದ ಮೂಡಿಸಿದ ಬಂದನೋ ಗೋವಿಂದನೋ  ಅರವಿಂದ ನಯನ ||

ಕಾನನಾದಲ್ಲಿ ಬಲು ದೀನನಾಗಲಿ ವೇಣುನಾದವೋ ತಾಕೂಡಿ ಮೊದಲು ಜಾಣನಿವನು ಸುಮ ಬಾಣ ಪಿತನು ಮಾನಿನಿ ಮನಗಳೊಳಿಯುವ ಗಣ ಮಾಡುತ್ತಲಿ ||

ಓಡಿ ಬಂದರೋ  ಬಲು ಬೇಡಿಕೊಂಡರೋ  ಗಾರುಡಿಕಾರನು ಅವರ ನೋಡಿ ಮೆರೆದರೋ ಮಾಡಿದ ಜಾಲ ವಾಸುದೇವ ವಿಠಲ ಮಾಡಿದ ಮನ ಮಾಡಿದ ತಾ ಕೂಡಿದ ನಾಗ ||

Lyrics in English

Bandano govinda chandadi Ananda
sundariya mandirakke nandanakanda nandanakandall

sundarakara nanda kanda ganbeera
indu vadaneyara mukagalinda nodida
tanda kusuma karadinda mudisida
bandano govindano aravinda nayana ll1||

kananadalli baludeenanagali
venunadavo tanudi modalu
jananivanu suma bana pitanu
manini mana galoliyuva gana maduttalli ||2||

odi bandaro balu bedikondaro
garudikaranu avara nodi meredaro
madida jala vasudeva vittala
madida mana madida ta kudida naga||3||


ನಡೆದು ಬಾಮ್ಮ ಲಕ್ಷ್ಮೀ /Nadedu baamma lakshmi

ನಡೆದು ಬಾಮ್ಮ ಲಕ್ಷ್ಮೀ  ನಿನಗೆ
ನಡೆಮುಡಿಯ ಹಾಸುವೆ|
ನಡೆಮುಡಿಯ ಹಾಸಿ ನಾ
ಚರಣ ಕಮಲಕ್ಕೆರಗುವೆ||ನಡೆದು||

ಮರುಗ, ಮಲ್ಲಿಗೆ, ಧವನ, ಸಂಪಿಗೆ
ಸರಗಳನೇ ಪೂಜಿಪೆ|
ಸರಗಳನೇ ಪೂಜಿಸಿ
ನಾ ವರಗಳನ್ನೇ ಬೇಡುವೆ||ನಡೆದು||

ಹೀರೆ, ಕುಂಬಳ ಕಾಯಿ, ಪಡವಳ
ಶಾಖ ಪಾಕವ ಮಾಡುವೆ|
ಘನ್ನ ಶಾವಿಗೆ ಭಕ್ಷವು
ನೈವೇದ್ಯವು ಪರಮಾನ್ನವು||ನಡೆದು||

ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ
ಲಕ್ಷ್ಮೀ  ನಿನಗೆ|
ದಿಟ್ಟ ಪ್ರಸ್ಸನ್ನ ವೆಂಕಟ ವಿಠ್ಠಲನ
ಪಟ್ಟದರಾಣಿಯೆ||ನಡೆದು||

Lyrics in English

Nadedu baamma lakshmi ninage
nademudiya haasuve|
nademudiya haasi naa
charana kamalakkeraguve |nadedu||

Maruga, mallige, dhavana, sampige
saragallane pujipe|
saragallane pujisi
naa varagallanne beduve||nadedu||

Heere, kumbala kaayi, padavala
shaakha paakava maaduve|
ghanna shaavige bhakshavu
naivedyavu paramaannavu||
||nadedu||

Eshtu bedidaru daya eke baralilla
lakshmi ninage|
ditta prassanna venkata vittalanapattadaraaniye||nadedu||


ಈ ದಿವ್ಯ ಶ್ರೀ ಕ್ಷೇತ್ರ ಕೊಲ್ಲೂರ /E divya sri kshetra kollura ambe

ಈ ದಿವ್ಯ ಶ್ರೀ ಕ್ಷೇತ್ರ ಕೊಲ್ಲೂರ ಅಂಬೆ | ಎಂದೆಂದು ಶ್ರೀ ಚರಣ ರಕ್ಷೇ ನೀಡಂಬೆ || ಜಗದಂಬೆ ಶ್ರೀ ಮಾತೇ ಶ್ರೀ ಲಕ್ಷ್ಮಿ ನೀನೇ | ಸದಾನಂದ ಸೌಭಾಗ್ಯ ತರುವಂಥ ಮಾನ್ಯೆ ||೧||

ಸೌಪರ್ಣಿಕಾ ನದಿಯ ಶ್ರೀ ತೀರ್ಥದಿಂದ| ನಿತ್ಯ ನಿರ್ಮಲೆ ನಿನ್ನ ಅಭಿಷೇಕ ಚೆಂದ | ಕೊಡಚಾದ್ರಿ ಬುಡ ನಿನ್ನ ಗುಡಿಯಂತೆ ಮಾಯೆ | ಅಮೃತಧಾರೆಯ ನೋಟ ನೀ ತೋರು ತಾಯೆ ||೨||

ಶ್ರೀ ಕಾಳಿ ಶ್ರೀ ಲಕ್ಷ್ಮಿ ಶ್ರೀ ವಾಣಿ ರೂಪ | ಏಕೈಕ ಶಕ್ತಿಯೇ ನಿನ್ನ ಪ್ರತಿರೂಪ | ಮೂಲೋಕ ವಂದಿಸುವ ಮಂಗಲ ದೀಪ | ಕಲ್ಯಾಣಿ ನೀಡೆಮಗೆ ಶೌರ್ಯ ಪ್ರತಾಪ ||೩||

ನೀ ಧನ್ಯ ನೀ ಮಾನ್ಯ ಕಾರುಣ್ಯ ಪೂರ್ಣೆ | ನಿನ್ನಿಂದ ರವಿಚಂದ್ರ ಉದಯಾಸ್ತ ತಾನೇ | ನೀ ಮುನಿಯೇ ಪ್ರಳಯವೇ ಬಳಿ ಬಂದ ಹಾಗೆ | ಈ ಜೀವ ಕೋಟಿಗೆ ತಾರದಿರು ಬೇಗೆ ||||೪||

Lyrics in English

E divya sri kshetra kollura ambe | endendu sri charana rakshe needambe | jagadambe sri mate sri lakshmi neene | sadananda soubhagya taruvanta manye ||1||

Souparnika nadiya sri teerthadinda nitya nirmale ninna abhisheka chenda | kodachadri buda ninna gudiyante maye | amrutadhareya nota nee toru taaye ||2||

Sri kali sri lakshmi sri vani roopa | ekaika shaktiye ninna pratiroopa| mooloka vandisuva mangala deepa| kalyani needemage shourya pratapa ||3||

Nee dhanya nee manya karunya poorne| ninninda ravichandra udayasta taane | nee muniye pralayave bali banda haage| e jeeva kotige taaradiru bege||4||


This beautiful song by Dr.Rajkunar on Sri Mookambike “E divya sri kshetra kollura ambe” is third song in the album.

ಇಲ್ಲಿರುವ ದೇವತೆಯು ಮೂಕಾಂಬಿಕಾ /Elliruva devateyu mookambika

ಇಲ್ಲಿರುವ ದೇವತೆಯು ಮೂಕಾಂಬಿಕಾ | ಇಲ್ಲಿ ಹರಿಯುವ ನದಿಯು ಸೌಪರ್ಣಿಕಾ || ಇಲ್ಲಿ ನಡೆಯುವ ಘಟನೆ ಎಲ್ಲವೂ ದೈವಿಕ | ಕೊಲ್ಲೂರು ಭೂಮಿಯಲ್ಲಿ ದೇವಲೋಕ ||

ಈ ದೇವಿ ಆಭರಣ ಇತಿಹಾಸ ತುಂಬುತಿರೆ | ಈ ದೇವಿ ಮುಖಭಾವ ನವ ಜೀವನ ಹೇಳುತಿರೆ | ಸ್ವರ್ಣರೇಖೆಯ ಕಂಡು ರೋಮಾಂಚನ ಮೂಡಿದೆ| ಸ್ವರ್ಗವೇ ಆಯಿತು ಈ ದೇವಿ ಆಸರೆ ||

ನವರಾತ್ರಿಯಲಿ ಮೈತಾಳಿ ನಿಂತು | ಭಕುತರನು ಹರಸುವಳು ಕೋರಿಕೆಯನ್ನಿತ್ತು | ಶರಣಾಗಿ ನಮಿಸಿದರೆ ಹರಕೆ ಹೊತ್ತಲ್ಲಿ | ನಗುನಗುತ್ತಾ ಹರಸುವಳು ಶುಭ ಮಸ್ತು ಶುಭ ಮಸ್ತು ||

Lyrics in English

Elliruva devateyu mookambike | elli hariyuva nadiyu souparnika | elli nadeyuva ghatane ellavu daivika| kolluru bhumiyalli devaloka ||

E devi abharana etihasa tumbutire| e devi mukhabhava nava jeevana helutire| swarnarekheya kandu romaanchana moodide|swargave ayitu e devi asare ||

Navaratriyali maitali nintu |bhakutaranu harasuvalu korikeyannittu| sharanagi namisidare harake hottalli | nagunagutta harusuvalu shubhamastu shubhamastu ||


The song is rendered by Dr.Rajkumar. “Elliruva devateyu mookambika” is fourth song in the album.

ನೀಲ ಘನ ನೀಲ ಜೋ /Nila ghana nila jo jo

ನೀಲ ಘನ ನೀಲ ಜೋ ಜೋ, ಕುರುಣಾಲವಾಲ ಶ್ರೀ ಕೃಷ್ಣ ಜೋ ಜೋ | ಲೀಲಾವತಾರ ಜೋ ಜೋ, ಪರಮಾತ್ಮ ಬಾಲ ಗೋಪಾಲ ಜೋ ಜೋ ||ಪ||

ಇಂದುಧರ ಮಿತ್ರ ಜೋ ಜೋ, ಪರಮಾತ್ಮ, ಇಂದುರವಿ ನೇತ್ರ ಜೋ ಜೋ | ಇಂದುಕುಲ ರತ್ನ ಜೋ ಜೋ, ಪರಮಾತ್ಮ, ಇಂದಿರಾರಮಣ ಜೋ ಜೋ ||

ಆಶ್ಚರ್ಯ ಜನಕವಾಗಿ, ನಿರ್ಮಿಸಿದ, ಪಚ್ಚೆಯಾ ತೊಟ್ಟಿಲಲ್ಲಿ | ಅಚ್ಯುತಾನಂತನಿರಲು, ತೂಗಿದರು, ಮತ್ಸ್ಯಾವತಾರ ಹರಿಯ ||

ಧರ್ಮ ಸಂಸ್ಥಾಪನೆಂದು, ನಿರವಧಿಕ, ನಿರ್ಮಲಚರಿತನೆಂದು | ವರ್ಮ ಕರ್ಮಗಳ ತಿಳಿದು, ತೂಗಿದರು, ಕೂರ್ಮಾವತಾರ ಹರಿಯ ||

ಸರಸಿಜಾಕ್ಷಿಯರು ಎಲ್ಲ, ಜನವಶ್ಯಕರ ದಿವ್ಯ ರೂಪನೆಂದು | ಪರಮ ಹರ್ಷದಿ ಪಾಡುತ, ತೂಗಿದರು ವರಹಾವತಾರ ಹರಿಯ ||

ಕರಕುಂಭಗಳು ಪೋಲುವ ಕುಚದಮೇಲ್ ಹಾರ ಪದಕವು ಹೊಳೆಯಲು |ವರ ವರ್ಣಿನಿಯರು ಕೂಡಿ ತೂಗಿದರು, ನರಸಿಂಹ ರೂಪ ಹರಿಯ ||

ಭಾಮಾ ಮಣಿಯರೆಲ್ಲ, ಜಗದೊಳಗೆ ಸೋಮನಿವನೆಂದು ಹೊಗಳಿ |ನೇಮದಿಂದಲಿ ಪಾಡುತ ತೂಗಿದರು, ವಾಮನ ರೂಪ ಹರಿಯ ||

ಸಾಮಜವರದನೆಂದು ಅತುಳ ಭೃಗು ರಾಮಾವತಾರನೆಂದು |ಪ್ರೇಮದಿಂದಲಿ ಪಾಡುತ ತೂಗಿದರು, ಭಾರ್ಗವ ರೂಪ ಹರಿಯ ||

ಕಾಮಿನಿಯ ಕಾಮನೆಂದು, ಸುರಸಾರ್ವಭೌಮ ಗುಣಧಾಮನೆಂದು |ವಾಮ ನೇತ್ರಿಯರು ಪಾಡಿ ತೂಗಿದರು, ರಾಮಾವತಾರ ಹರಿಯ ||

ಸೃಷ್ಟಿಯಾ ಕರ್ತನೆಂದು ಜಗದೊಳಗೆ ದುಷ್ಟ ಸಂಹಾರನೆಂದು |ದೃಷ್ಟಾಂತರಹಿತನೆಂದು ತೂಗಿದರು, ಕೃಷ್ಣಾವತಾರ ಹರಿಯ ||

ವೃದ್ಧ ನಾರಿಯರು ಯೆಲ್ಲ ಜಗದೊಳ್ ಪ್ರಸಿದ್ಧನಿವನೆಂದು ಹೊಗಳಿ |ಬದ್ಧಾನುರಾಗದಿಂದ ತೂಗಿದರು, ಬೌದ್ಧಾವತಾರ ಹರಿಯ ||

ಝಣ ಝಣತ್ಕಾರದಿಂದ ರಂಜಿಸುವ ಮಲಯಜಾಲೇಪದಿಂದು |ಕುಸುಮ ಗಂಧಿಯರು ಕೂಡಿ ತೂಗಿದರು, ಕಲ್ಕ್ಯಾವತಾರ ಹರಿಯ ||

ತುಂಗ ಭವ ಭಂಗ ಜೋ ಜೋ, ಶ್ರೀ ಕೃಷ್ಣ, ಮಂಗಳಾಪಾಂಗ ಜೋ ಜೋ, |ರಂಗ ಶ್ರೀ ಪಾಂಗ ಜೋ ಜೋ, ಪರಮಾತ್ಮ ರಂಗ-ವಿಠ್ಠಲನೆ ಜೋ ಜೋ ||

Lyrics in English

Nila ghana nila jo jo, kurunaalavaala shri krishna jo jo |
lilaavataara jo jo, paramaatma baala gopaala jo jo ||

Indudhara mitra jo jo, paramaatma, induravi netra jo jo |
indukula ratna jo jo, paramaatma, indiraaramana jo jo ||

Aascharya janakavaagi, nirmisida, paccheyaa tottilalli
achyutaanantaniralu, tugidaru, matsyaavataara hariya ||

Dharma samsthaapanendu, niravadhika, nirmalacharitanendu
varma karmagala tilidu, tugidaru, kurmaavataara hariya ||

sarasijaakshiyaru ella, janavashyakara divya rupanendu
parama harshadi paaduta, tugidaru varahaavataara hariya ||

Karakumbhagalu poluva kuchadamel haara padakavu holeyalu
vara varniniyaru kudi tugidaru, narasimha rupa hariya ||

Bhaamaa maniyarella, jagadolage somanivanendu hogali
nemadindali paaduta tugidaru, vaamana rupa hariya ||

Saamajavaradanendu atula bhrugu raamaavataaranendu
premadindali paaduta tugidaru, bhaargava rupa hariya ||

Kaaminiya kaamanendu, surasaarvabhouma gunadhaamanendu
vaama netriyaru paadi tugidaru, raamaavataara hariya ||

Srushtiyaa kartanendu jagadolage dushta samhaaranendu
drushtaantarahitanendu tygidaru, krishnaavataara hariya ||

Vruddha naariyaru yella jagadol prasiddhanivanendu hogali
baddhaanuraagadinda tugidaru, bouddhaavataara hariya ||

Jhana jhanatkaaradinda ramjisuva malayajaalepadindu
kusuma gandhiyaru kudi tugidaru, kalkyaavataara hariya ||

Tunga bhava bhanga jo jo, shri krishna, mangalaapaanga jo jo,
ranga shri paanga jo jo, paramaatma ranga-vithalane jo jo ||