ಪಾಂಚಜನ್ಯದ ಜೊತೆಗೆ ಕೈಯಲ್ಲಿ/Paanchajanyada jotege

ಪಾಂಚಜನ್ಯದ ಜೊತೆಗೆ ಕೈಯಲ್ಲಿ ಸುದರ್ಶನಂ |ಗಧೆಯ ಕಮಲವ ಶಾಜ್ಞ ನಂದಕಗಳ0 ಧರಿಸಿ| ಸತತವು ಜಗವನ್ನು ಪಾಲಿಸುವ ತಂದೆಯನು| ಶ್ರೀವಾಸುದೇವನನ್ನು ಸರ್ವದಾ ನಮಿಪೇಂ|1|

ಜಗದೆಲ್ಲೆಡೆನಿಂತಿರುವ, ಎಲ್ಲೆಡೆಯು ತುಂಬಿರುವ | ಸಚ್ಚಿದಾನಂದಗಳೇ ಮೈವೆತ್ತಾ ಮೂರುತಿಯಾ| ತನ್ನೊಳಂತರವಿರದ ದೋಷಗಳ ದೂರನಾದ | ಒಬ್ಬನೇ ಒಬ್ಬನನ್ನು ನಾನು ನಪಿಪೇಂ||2||

ಬಹು ರೂಪಗಳ ಧರಿಸಿ ಎಲ್ಲ ರೂಪಗಳನ್ನು| ಏಕರೂಪದಿಂದ ಮೆರೆವಂತ ರೂಪಂ | ತಿಳಿಯಾದ ಬಗೆಯಾಳದ ಅರಿವಿಗೆಟಗುವ ತತ್ವಂ | ಮೊದಲಿರದ ತುದಿಯಿರದ ನಿತ್ಯನಮ್ ನಮಿಪೇಂ ||3||

ಕುಂದದೊಳು ಸುಂದರಂ, ಚೆಂದದಲಿ ಚಂದಿರಮ್| ಅಮೃತ ದದ್ಯವದಂತೆ, ತಂಪು ಮೈ ಬಣ್ಣ | ಜ್ಞಾನಪುಸ್ತಕ ಚಕ್ರ ಶಂಖ ಜಪ ಸರವಂತೆ| ಆಯುಧಗಳಂ ಹಿಡಿವ ರಿಪುವನು ನಮಿಪೇಂ||4||

ಎಣೆಯಿರದ ಕಾಂತಿಯವನ, ಎಲ್ಲರಂತರ್ಯಾಮಿ, ಸಾವಿರದ ಮುಪ್ಪಿರದ ಸುಖ ರೂಪನ ಸ್ವಾಮಿ| ವಾಯುದೇವನ ತಂದೆ ಎಲ್ಲೆಡೆಯು ತುಂಬಿರುವ | ಜಗದೊಡೆಯನನು ಸದಾ ನಮಿಸುತ್ತಿರುವೆಂ ||5||

ತಾನು ತಾನೇ ಆಗಿ ತುಂಬಿ ತುಳುಕಾಡುತಿರುವ |ಸಂತಸದ ಸೆಲೆಯಿಂದ ಮೂಜಗಕೆ ಸುಖಕರಮ್|ಅಣುವಿಗಿಂತನುತರಂ ನೀರಲಿ ಪವಡಿಸಿದ |ನಿತ್ಯ ಮೂರುತಿಯಾದ ದೇವನಂ ನಮಿಪೇಂ||6||

ಸೂರ್ಯಮಂಡಲದಲ್ಲಿ ನಡುವೆ ನೆಲೆ ನಿಂತವಗೆ| ವರವನು ಅಭಯವನು ಕೈಗಳಿಂದೀವಗೆ| ಸೂರ್ಯದೇವನ ಬಗೆಗೂ ನಿಲುಕದದಿ ತೇಜನಿಗೆ| ಪಾಪ ಪರಿಹಾರ ನಾರಾಯಣಗೆ ನಮಿಪೇಂ||7||

ಎಲ್ಲೆಡೆಯು ತುಂಬಿಹನ ಎಲ್ಲದರ ಕಾರಣನ | ಈ ಎಲ್ಲಾ ಲೋಕಗಳ ಅಜ್ಜ, ಮುತ್ತಜ್ಜನ | ಬಹುರೂಪವುಳ್ಳವನ, ಹುಟ್ಟು ಸಾವಿರದವನ|  ವಿಶ್ವರೂಪನ ಜಗದ ನಾಯಕನ ನಮಿಪೇಂ||8||

ಫಾಲದೇಶಕಾಶ ಪವಮಾನ ಮುಂತಾದ | ನಿತ್ಯ ತತ್ವಗಳನ್ನು ಸಂಹರಿಪ ಶಕ್ತಿ | ಪೃಕೃತಿ ದೇವಿಯೊಳಿದ್ದು ಜಗವ ನಡೆಸುವ ಪುರುಷ | ಬೃಹ್ಮ ದೇವಗೂ ತಂದೆ ಆದವಗೆ ನಮಿಪೇಂ ||9||

ಜಗವನು ಸೃಷ್ಟಿಸಿದ ಬ್ರಹ್ಮದೇವಗೂ ತಂದೆ | ಜಗವನು ಸಂಹರಿಪ ಶಂಕರನಿಗೂ ಅಜ್ಜ, | ಅಮರರಿಗೆ ಮುತ್ತಜ್ಜ, ರಮೆಯ ಕೈ ಹಿಡಿದಾತ | ಹುಟ್ಟು ಸಾವುಗಳಿರದ ದೇವನಿಗೆ ನಮಿಪೇಂ||10||

ಈ ಜಗದ ಒಂದೊಂದೂ ಕಣದಲ್ಲೂ ತುಂಬಿರುವ| ದೋಷದೂರಂ ನಿತ್ಯಂ ಅಮೃತಸ್ವರೂಪಮ್ | ಶಂಖ ಚಕ್ರಗಳನ್ನು ಅಭಯವರ ಮುದ್ರೆಗಳ | ಕೈಗಳಲಿ ಒತ್ತಿರುವ ಹರಿಯ ನಮಿಪೇಂ||11||

ತನ್ನೊಳವಿತಿರುವಂಥ ಅಮಿತ ಪ್ರತಾಪದಿಂ | ಎಲ್ಲಾ ದೋಷಗಳನ್ನು ಪರಿಹರಿಸಿ ಕೊಂಡವಗೆ | ಅರಿಗಳನು ತರಿದವಗೆ ಭಕ್ತರನು ಕರುಣಿಸುವ |  ಪರಮ ಪ್ರಸನ್ನನಿಗೆ ನಾನು ನಮಿಪೇಂ||12||

ಹುಟ್ಟು ಸಾವುಗಳಿರದ ತಿಳಿವಿಗೆ ಎಟುಕದ ತತ್ವ| ಎಲ್ಲೆಡೆಯು ತುಂಬಿರುವ ಪರಮನಮೃತಾತ್ಮ| ಎಲ್ಲ ಲೋಕಗಳಲ್ಲೂ ಅನವರತ ನೆಲೆಸಿರುವ | ಜಗದ ಅಧಿನಾಯಕಗೆ ನಾನು ನಮಿಪೇಂ ||13||

ತುಂಬು ಸಂತಸದವಗೆ ನಾಶವೇ ಇರದಂತ | ಶುದ್ಧನಿಗೆ ಶಾಂತನಿಗೆ ದೋಷದೂರನಿಗೆ| ಲೋಕ ಆಲೋಕಗಳ ಹಿತವ ಬಯಸುವಗೆ | ರಮೆಯ ಕೈಹಿಡಿದವಗೆ ನಾನು ನಮಿಪೇಂ ||14||

ತಟ್ಟೈಸಿಕೊಂಡಿರುವ ಸಂತಸದ ಸೆಲೆಯಿಂದ | ತುಂಬಿರುವ ಪರದೈವಂ ಇಂದ್ರಾನುಜಾತಂ | ನಿತ್ಯನಿರ್ಮಲರೂಪಮ್ ಎಲ್ಲರಿಂದುತ್ತಮಮ್| ವಾದ ಭೂಮಿಗೆ ಸಿಗದ ನಿತ್ಯತತ್ವಂ | ಲೋಕಬಲ ಲೋಕವನು ಕಾಪಾಡುತಿರುವಂತ | ನೀಲಾಮಯಂ ರಮೆಯ ರಮಣನಮ್ ನಮಿಪೇಂ ||15||

Lyrics in English

Paanchajanyada jotege kaiyalli sudarshanam| gadheya kamalava shanjna nandakagalam dharisi| satatavu jagavannu paalisuva tandeyanu | sri vasudevanannu sarvadaa namipem||1||

Jagadellede nintiruva, elledeyu tumbiruva | sacchidaanandagale maivetta moorutiya| tannolantaravirada doshagala dooranaada | obbane obbanannu naanu namipem||2||

Bahu roopagala dharisi ella roopagalannu | ekaroopadinda merevanta roopam| tiliyaada bageyaalada arivigetaguva tatvam| modalirada tudiyirada nityanam namipem||3||

Kundadolu sundaram, chendadali chandiram| amruta dadyavadante tampu mai banna| jnaana pustaka chakra shankha japa saravante| ayudhagalam hidiva ripuvanu namipem||4||

Eneyirada kaantiyavana, ellarantaryaami, saavirada muppirada sukharoopana swami| vaayudevana tande elledeyu tumbiruva| jagadodeyana sadaa namisutiruvem||5||

Taanu taane aagi tumbi tulukaadutiruva| santasada seleyinda moojagake sukhakaram| anuvigintanutaram neerali pavadisida | nitya moorutiyada devanam namipem||6||

Sooryamandaladalli naduve nele nintavage| varavanu abhayavanu kaigalindeevage | sooryadevana bagegu nilukadadi tejanige| paapa parihara narayanage namipem||7||

Elledeyu tumbihana elladara kaaranana| e lokagala ajja, muttajjana| bahuroopavullavana huttu saaviradavana| vishwaroopana jagada nayakana namipem||8||

Phaladeshakasha pavamaana muntaada| nitya tatvagalannu samharipa shakti| prukruti deviyoliddu jagava nadesuva purusha| brahmadevagu aadava tandege namipem||9||

Jagavanu srushtisida brahmadevagu tande| jagavanu samharipa shankaranigu ajja, amararige muttajja, rameya kai hididaata| huttu savugalirada devanige naMipem||10||

E jagada ondondu kanadallu tumbiruva| doshadooram nityam amrutaswaroopam| shankha chakragalannu abhayavara mudregala | kaigalali ottiruva hariya namipem||11||

Tannolavitiruvantha amita prataapadim | ellaa doshagalannu pariharisi kondavage| arigalanu taridavage bhaktaranu karunisuva | parama prasannanige naanu namipem||12||

Huttu saavugalirada tilivige etukada tatva| elledeyu tumbiruva paramanamrutaatma| ella lokagallu anavarata nelesiruva | jagada adhinayakage naanu namipem||13||

Tumbu santasadavage naashave eradanta| shuddhanige shantanige doshadooranige| loka aalokagala hitava bayasuvage| rameya kaihididavage naanu namipem||14||

Tattaisikondiruva santasada seleyinda tumbiruva paradaivam indranujatam|nityanirmalaroopam ellarinduttamam| vaada bhumige sigada nityatatvam| lokabala lokavanu kaapaadutiruvanta| neelaamayam rameya ramananam namipem||15||


ಗೋವಿಂದ ಹರಿ ಗೋವಿಂದ /Govinda hari govinda

ಗೋವಿಂದ ಹರಿ ಗೋವಿಂದ
ಕೇಶವ ಕೃಷ್ಣ  ಜನಾರ್ಧನ।।          ।। ಪ ।।

ಮತ್ಸ್ಯಾವತಾರದೊಳಾಡಿದನೇ
ಮಂದರಾಚಲ  ಬೆನ್ನೊಳು ತಾಳಿದನೆ
ಅಚ್ಚಾಸುಕಾರನಾಗಿ  ಬಾಳಿದನೆ
ಮದಹೆಜ್ಜೆ  ಹಿರಣ್ಯನ  ಸೀಳಿದನೆ ।। ೧।।  

ಕುಂಬಿನಿ  ದಾನವ ಬೇಡಿದನೆ
ಕ್ಷಾತ್ರರೆಂಬುವನು  ಹತ  ಮಾಡಿದನೆ
ಅಂಬುದಿಗೆ  ಶರ  ಹೂಡಿದನೆ
ಕಮಲಾಂಬಕ  ಗೊಲ್ಲರೊಲಾಡಿದನೇ ।।೨।।

ವಸುದೇವನುದರದಿ  ಪುಟ್ಟಿದನೆ
ಪೊಲ್ಮೆಸೆವ  ಧನುಜರೊಡಗುಟ್ಟಿದನೆ
ಎಸವ  ಕಾಳಿಂಗನ  ಮೆಟ್ಟಿದನೆ
ಭಾದಿಸುವರ  ಯಮಪುರ  ಕಟ್ಟಿದನೆ।। ೩।। 

ಪೂತನಿಯ  ಮೈಯ  ಸೋಕಿದನೆ
ಮಹಾ  ಘಾತದ  ಮೊಲೆಯುಂಡು ತೇಗಿದನೆ
ಘಾತಕಿಯನತ್ತಾ   ನೂಕಿದನೆ
ಗೋಪವ್ರಾತ  ಗೋಗಳನೆಲ್ಲಾ  ಸಾಕಿದನೆ  ।।೪।।   

ಸಾಧಿಸಿ  ತ್ರಿಪುರರ  ಗೆಲಿದವನೇ
ಲೇಚರ  ಭೇದಿಸಿ  ಹಯವೇರಿ  ಮೆರೆದವನೇ
ಸಾಧಿಸಿ  ಸಕಲವ   ತಿಳಿದವನೇ
ಬಾಡದಾದಿ ಕೇಶವ  ಭಕ್ತಿಗೊಲಿದವನೇ  ।।೫।।

Lyrics in English 

Govinda hari govinda keshava krishna janaardhana ||pa||

Matsyaavataaradolaadidane mandaraachala bennolu taalidane acchaasukaaranaagi baalidane madahejje hiranyana seelidane||1||

Kumbini daanava bedidane | kshaatrarembuvanu hata maadidane| ambudige shara hoodidane| kamalaambaka gollarolaadidane||2||

Vasudevanudaradi puttidane polmeseva dhanujarodaguttidane esava kaalingana mettidane | bhadisuvara yamapura kattidane||3||

Pootaniya maiya sokidane | maha ghataka moleyundu tegidane | ghaatakiyanatta nookidane | gopavrata gogalanella sakidane ||4||

Sadhisi tripurara geludavane | lechara bhedisi hayaveri meredavane| sadhisi sakalava tilidavane| baadadaadi keshava bhaktigolidavane||5||


ಗೋಪಿಯ ಭಾಗ್ಯವಿದು /Gopiya bhagyavidu

ಗೋಪಿಯ ಭಾಗ್ಯವಿದು ಶ್ರೀಪತಿ
ತಾ  ಶಿಶು ರೂಪಿನಲಿರುವುದು ||ಪ||

ಎನ್ನನೇ ಚಿನ್ನನೆ ಸುಮ್ಮನಿರು ದೊಡ್ಡ
ಗುಮ್ಮನು ಬರುವನು ಅಳದಿರು ಕಂದ
ಗುಮ್ಮನು ಬರುವನು ಗೊಂಬೆಯ ಕೊಡುವೆನು
ಬಾ… ಆತುರದಿಂದಲಿ ತಾ ಕೂಗಿದಳಾಗ |೧|
|ಗೋಪಿಯ|

ಕಡುಮುದ್ದು ರಂಗನ ತೊಡೆಯ ಮೇಲೆತ್ತುತ
ಜಡೆಯ ಹಣೆದು ಹೂವನೆ ಮುಡಿಸುತಲಿ
ಬಿಗಿದು ಸುತ್ತಿನ ಜಡೆ ಹಾರಗಳಂದಡಿತ
ಬ್ರಹ್ಮನ ಪಿತನೆಂದು ತಾ ಕೂಗಿದಳಾಗ |೨|
|ಗೋಪಿಯ|

ದೃಷ್ಟಿತಾಕಿತೆಂದು ಇಟ್ಟಲೇ ವಿಭೂತಿ
ತಟ್ಟೆಯೋಲಾರಥಿಗಳ ಬೆಳಗುತಲಿ
ಆದಿ ಮೂರುತಿ ನಮ್ಮ ಪುರಂದರ ವಿಠಲನ
ಆತುರದಿಂದಲಿ ತಾ ಕೂಗಿದಳಾಗ |3|ಗೋಪಿಯ|

Lyrics in English

Gopiya bhagyavidu sripati |ta shishu roopinaliruvudu ||pa||

Ennane chinnane summaniru dodda gummanu baruvanu aladiru kanda gummanu baruvanu gombeya koduvenu | ba .. aturadinda taa koogidalaaga … ||1||gopiya||

Kadumuddu rangana todeya melettuta | jadeya hanedu hoovane mudisutali |bigidu suttina jade haaragalandadita | brahmana pitanendu taa koogidalaaga ||2|| gopiya||

Drushtitaakitendu ettale vibhooti|tatteyolaarathigala belagutali adi mooruti namma purandara vittalana aaturadindali taa koogidalaaga||3||gopiya||


ಏಕದಂತಂ ಮಹಾಕಾಯಂ /Ekadantam mahakaayam

ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಮ್ ।
ಲಂಬೋದರಂ ವಿಶಾಲಾಕ್ಷಮ್   ವಂದೇಹಂ   ಗಣನಾಯಕಮ್  ।।೧।।

ಮೌಂಜೀಕೃಷ್ಣಾಜಿನಧರಂ ನಾಗಯಜ್ಞೋಪವೀತಿನಮ್ ।
ಬಾಲೇಂದುವಿಲಸನ್ಮೌಲೀಂ ವಂದೇಹಂ ಗಣನಾಯಕಮ್।।೨।।

ಅಂಬಿಕಾಹೃದಯಾನಂದಮ್ ಮಾತೃಭಿಃ ಪರಿಪಾಲಿತಮ್ ।
ಭಕ್ತಪ್ರಿಯಂ  ಮದೋನ್ಮತ್ತಮ್   ವಂದೇಹಂ ಗಣನಾಯಕಮ್ ।।೩।।

ಚಿತ್ರರತ್ನವಿಚಿತ್ರಾಂಗಮ್  ಚಿತ್ರಮಾಲಾವಿಭೂಷಿತಮ್ ।
ಚಿತ್ರರೂಪಧರಮ್ ದೇವಂ ವಂದೇಹಂ ಗಣನಾಯಕಮ್ ।।೪।।

ಗಜವಕ್ತ್ರಂ  ಸುರಶ್ರೇಷ್ಠಂ ಕರ್ಣಚಾಮರಭೂಷಿತಮ್ ।
ಪಾಶಾಂಕುಶಧರಮ್ ದೇವಂ ವಂದೇಹಂ ಗಣನಾಯಕಮ್ ।।೫।।

ಮೂಷೀಕೋತ್ತಮಮಾರುಹ್ಯ  ದೇವಾಸುರಮಹಾಹವೇ ।
ಯೋದ್ಧುಕಾಮಂ  ಮಹಾವೀರ್ಯಮ್ ವಂದೇಹಂ ಗಣನಾಯಕಮ್ ।।೬।।

ಯಕ್ಷಕಿನ್ನರಗಂಧರ್ವ ಸಿದ್ಧವಿದ್ಯಾಧರೈಸ್ಸದಾ ।
ಸ್ತೂಯಮಾನಂ ಮಹಾತ್ಮಾನಂ ವಂದೇಹಂ ಗಣನಾಯಕಮ್ ।।೭।।

ಸರ್ವವಿಘ್ನಕರಂ  ದೇವಂ ಸರ್ವವಿಘ್ನವಿವರ್ಜಿತಮ್ ।
ಸರ್ವಸಿದ್ಧಿಪ್ರದಾತಾರಂ  ವಂದೇಹಂ ಗಣನಾಯಕಮ್ ।।೮।।

ಗಣಾಷ್ಟಕಮಿದಂ ಪುಣ್ಯಂ  ಭಕ್ತಿತೋ ಯಃ ಪಠೇನ್ನರ: ।
ವಿಮುಕ್ತಸ್ಸರ್ವಪಾಪೇಭ್ಯೋ ರುದ್ರಲೋಕಂ  ಸ ಗಚ್ಛತಿ  ।।೯।।

Lyrics In English

Ekadantam mahaakaayam taptakaanchanasannibham |
Lambodaram vishaalaaksham vandeham gananaayakam ||1||

Maunjikrishnaajinadharam naagayagnopaveetinam |
baalenduvilasanmouleem vandeham gananaayakam ||2||

Ambikahrudayaanandam maatrubhih paripaalitam |
bhaktapriyam madonmattam vandeham gananaayakam ||3||

Chitraratnavichitraangam chitramaalavibhooshitam |
chitraroopadharam devam vandeham gananaayakam ||4||

Gajavaktram surashreshtam karnachaamarabhooshitam |
paashankushadharam devam vandeham gananaayakam| |5||

Mooshikottamamaaruhya devaasuramahaahave |
yoddhakaamam mahaaveeryam vandeham gananaayakam ||6||

Yakshakinnaragandharva siddhavidyaadharaissadaa |
stooyamaanam mahaatmaanam vandeham gananaayakam ||7||

Sarvavighnakaram devam sarvavighnavivarjitam |
sarvasiddhipradaataaram vandeham gananaayakam ||8||

Ganashtakamidam punyam bhaktito yah pathennarah |
vimuktassarvapaapebhyo rudralokam sa gachchati ||9||


ಧರ್ಮಕ್ಕೆ ಕೈ ಬಾರದಿ ಕಾಲ /Dharmakke kai baradi

ಧರ್ಮಕ್ಕೆ ಕೈ ಬಾರದೀ ಕಾಲ , ಪಾಪ – ಕರ್ಮಕ್ಕೆ ಮನಸೋಲೋದೀ ಕಲಿಕಾಲ ||ಪ||

ದಂಡ ದ್ರೋಹಕೆ ಉಂಟು ಪುಂಡು ಪೋಕರಿಗುಂಟು ಹೆಂಡತಿ ಮಕ್ಕಳಿಗಿಲ್ಲೀ ಕಾಲ ದಿಂಡೇರಿಗುಂಟು ಜಗ ಭಂಡರಿಗುಂಟು ಅಂಡಲೆವರಿಗಿಲ್ಲವೀ ಕಾಲ ||1||

ಮತ್ತೆ ಸುಳ್ಳರಿಗುಂಟು ನಿತ್ಯ ಹಾದರಕುಂಟು ಉತ್ತಮರಿಗಿಲ್ಲವೀ ಕಾಲ ತೊತ್ತೇರಿಗುಂಟು ತಾಟಕಿಗುಂಟು ಹೆತ್ತ ತಾಯಿಗಿಲ್ಲವೀ ಕಾಲ ||2||

ಹುಸಿ ದಿಟವಾಯಿತು ರಸಕಸವಾಯಿತು ಸೊಸೆ ಅತ್ತೆ ದಂಡಿಸೋದೀ ಕಾಲ ಬಿಸಜಾಕ್ಶ ಪುರಂದರ ವಿಠಲನ ಮನದಲ್ಲಿ ಸ್ತುತಿಸುವವರಿಗಿಲ್ಲವೀ ಕಾಲ||3||

Lyrics in English

Dharmakke kai baradi kala papa
karmakke manasoluvudI kaligala ||pa||

Danda drohakke untu pundu pokariguntu |
hendati makkaligilli kala
dinderiguntu jagabhandariguntu
andalevarigillavi kala ||1||

Matte sullariguntu nitya hadarakuntu
uttamarigillavi kala
totteriguntu tatakiguntu
hetta tayigillavi kala ||2/||

Husi ditavayitu rasa kasavayitu
sose atteya dandisodi kala
bisajakaha purandaravithalana manadalli
stutisuvavarigillavi kala||3||


ದಾರಿ ಕಾಣದಾಗಿದೆ ರಾಘವೇಂದ್ರ/Daari kaanadaagide

ದಾರಿ ಕಾಣದಾಗಿದೆ ರಾಘವೇಂದ್ರನೆ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ ||2ಸಲ||

ಮನದ ಆಸೆ ತಿಳಿಸುವಾಸೆ ಹೇಗೆ ಹೇಳಲಿ
ನಾಳೆ ಹೇಗೆ ಎಂಬ ಚಿಂತೆ ಇಂದು ಎದೆಯಲಿ
ಕಲ್ಲು ಮುಳ್ಳು ಏನೆ ಇರಲಿ ಬಾಳ ಹಾದಿಲಿ
ನಿನ್ನ ಕರುಣೆ ಇಂದ ಎಲ್ಲ ಸುಮಗಳಾಗಲಿ

ಯಾರ ಯಾರ ಸೇರಿಸುವೆಯೊ ಯಾರೂ ಅರಿಯರು
ಯಾರ ನಗಿಸಿ ಅಳಿಸುವೆಯೋ ಯಾರು ಬಲ್ಲರು
ನೀನು ಕುಣಿಸಿದಂತೆ ತಾನೆ ಎಲ್ಲ ಕುಣಿವರು
ಜ್ಯೋತಿ ನೀನು ಬರಿಯ ಮಣ್ಣ ಹಣತೆ ಎಲ್ಲರು

Lyrics in English

Daari kaanadaagide raghavendrane |belaka tori nadesu baa yogivaryana||2times||

Manada aase tilisuvaase hege helali| naale hege emba chinte indu edeyali | kallumullu ene irali baala haadili| ninna karune inda ella sumagalaagali ||1||

Yaara yaara serisuveyo yaaru ariyaru| yaara nagisi alisuveyo yaaru ballaru| neenu kunisidante taane ella kunivaru| jyoti neenu bariya manna hanate ellaru||2||


ವಂದಿಸುವದಾದಿಯಲಿ ಗಣನಾಥ/Vandiauvudadiyali gananathana

ವಂದಿಸುವದಾದಿಯಲಿ ಗಣನಾಥನ         ||ಪ||

ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು         ||ಅ.ಪ||

ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಕೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು       ||೧||

ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು   ||೨||

ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ||೩||

Lyrics in English

Vandiauvudadiyali gananathana ||pa||

Sandehasalla sri hariyajneyidakuntu||a.pa||

Hinde ravana taanu vandisade gajamukhana|| nindu tapavanu kaidu vara padeyalu| ondu nimishadi bandu vighnavanu acharisi tanda varagalanella dharege elisidanu ||1||

Andina bageyaritu bandu hari dharmajage | munde ganapana poojisendu pele | onde manadali bandu poojisalu gananaatha hondisida nirvighnadinda raajyavanu||2||

Indu jagavella umenandanana poojisalu |chendadindali sakala siddhigalannittu | tande siripurandaravittalana seveyolu | banda vighnava kaledaanandavanu koduva ||3||


ಕರುಣದಿ ಕಣ್ಣು ತೆರೆಯೇ /Karunadi kannu tereye

ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII

ಕೊಲ್ಹಾಪುರ ಸಿಂಹಾಸನದಿ ಮೆರೆಯುವ ಸಿರಿಯೆ IIಅಪII 

ವಿಧಿಭವಾದಿಗಳ ಸದನಗಳಿಗೆ ಅಭ್ಯು ದಯ ಕಟಾಕ್ಷದಿ ಸುದಯವಸುರಿಸೆ II೧II 

ಕಡು ಬೆಡಗಿನ ನಿನ್ನಡಿದಾವರೆಗಳ ಬಿಡದೆ ಭಜಿಪವರ ಕೊಡು ಸುಂದರಿಯೆ II೨II 

ಸುಂದರಾನ ಅರವಿಂದ ಮಲ್ಲಿಗೆ ಮಂದಹಾಸ ಮಕರಂದವ ಸುರಿಯೆ II೩II 

ಬಡವರಭಿಷ್ಟೆಯ ಕೊಡುವಳೆಂದು ಬಡಬಡಿಸಿ ಬಂದೆ ನಿನ್ನೊ ಡಲಿನ ಮರಿಯೆ II೪II 

ಕೊಟ್ಟರೆ ಕಮಲೇಶ ವಿಠಲರಾಯನ  ಪಟ್ಟದರಸಿಯೆಂಬೊ ಕಟ್ಟಲೆ ಕರೆಯೆ II೫II

Lyrics in English

Karunadi kannu tereye baramma siriye ||pa||

Kollahpura simhasanadi mereyuva siriye ||a.pa||

Vidhibhavadigala sadanagalige abhyudaya katakshadi sudayavasurise ||1||

Kadu bedagina ninnadidavaregala bidade bhagipavara kodu sundariye ||2||

Sundaraana aravinda mallige mandahaasa makarandava suriye||3||

Badavarabhushteya koduvalendu badabadisi bande ninnodalina mariye ||4||

Kottare kamalesha vittalarayana pattadarasiyembo kattale kareye ||5||


ಹನುಮಯ್ಯ ಹನುಮಯ್ಯ /Hanumayya hanumayya

ಹನುಮಯ್ಯ ಹನುಮಯ್ಯ||2|
ಘನಮಹಿಮನೆ ಖದರುಂಡನಿ ನಿಲಯನೆ||3||
||ಹನುಮಯ್ಯ||

ತತ್ವಾಧಿಪಮ ಚಿತ್ತದಿ ನೆಲೆಸಿ ನೀ ಹ್ರತ್ಕಮ ಕಲೆಯೋ
ಜೀವೋತ್ತಮನೆ ನಿತ್ಯ ||ತತ್ವಾಧಿಪ||
ಬಪ್ಪ ಕ್ಲೇಶೌಭವ ಕ್ಷಿಪ್ರಧಿ ತಪ್ಪಿಸಿ ಬಪ್ಪದಿ ಕಾಯೋ ಕಂದರ್ಪಜನಕಪ್ರಿ||ಬಪ್ಪ||
||ಹನುಮಯ್ಯ||

ಅಂಜನೆಸುತ ಮತ ಭಂಗಿಸು ಹರಿಪದ
ಕಂಜಮಧುಪ ಮ್ರತ್ಯುಂಜಯ ಪಿತನೆ ||ಅಂಜನೆಸುತ||
ಕಾಳಿ ರಮಣ ಸಿರಿಲೋಲನ ಭಕ್ತರ
ಓಲಗ ಕರುಣಿಸು ಶೀಲ ಸ್ವರೂಪ ||ಕಾಳಿರಮಣ||
||ಹನುಮಯ್ಯ||

ಕಾಂತೇಶನೆ ರಮಾಕಾಂತ ವಿಠ್ಠಲನ
ಚಿಂತನೆ ಸಂತತ ನೀಡೋ ಯತೀಂದ್ರ ||ಕಾಂತೇಶನೆ|| ||ಹನುಮಯ್ಯ||

Lyrics in English

Hanumayya hanumayya ||2||ghanamahimane khadarundani nilayane ||3|| hanumayya||

Tatvaadhipama chittadi nelesi nee hrutkama kaleyo jeevottamane nitya ||tatvaadipa|| bappa kleshoubhava kshipradi tappisi bappadi kaayo kandarpajanakapri||bappa|| ||hanumayya||

Anjanesuta mata bhangisu haripada kanjamadhupa mrutyunjaya pitane ||anjanesuta|| kali ramana sirilolana bhaktara |olaga karunisu sheela swaroopa ||kaliramana|| ||hanumayya||

Kaanteshane ramakanta vittalana chintane santata needo yateendra ||kanteshana|| ||Hanumayya||


ಶ್ರೀದೇವಿ ನೀನಮ್ಮ ಮೂಕಾಂಬಿಕೆ /Sridevi neenamma

ಶ್ರೀದೇವಿ ನೀನಮ್ಮ ಮೂಕಾಂಬಿಕೆ | ನೂರಾರು ನಮಸ್ಕಾರ ಸಿರಿ ಪಾದಕೆ |ಶರಣೆಂದ ಭಕ್ತರಿಗೆ ನೀ ಕಲ್ಪವಲ್ಲಿ | ನಿನಗಾರು ಸರಿಸಾಟಿ ಭೂಲೋಕದಲ್ಲಿ||ಪ||

ಜಯದೇವಿ ಜಯಜನನಿ ಜನನಾಯಕಿ |ಜಯ ವಿಜಯ ನೀ ನೀಡು ಜಗದ್ರಕ್ಷಕಿ | ಕೊಡಚಾದ್ರಿಯಿಂದಿಳಿದ ಕರುಣಾಮಯಿ | ಕೊಲ್ಲೂರಿನಲ್ಲಿ ಇರುವ ಮಮತಾಮಯಿ ||೧||

ಚಾಮುಂಡಿ ನೀನೇ ಮಹಾಲಕ್ಷ್ಮಿ ನೀನೇ | ಶೃಂಗೇರಿಯಲ್ಲಿರುವ ಶಾರದೆಯು ನೀನೇ | ಶ್ರೀ ಶಂಕರಾಚಾರ್ಯರ ಆರಾಧ್ಯ ದೇವಿ | ಶ್ರೀ ಶಕ್ತಿ ನೀನೇ ಹೇ ದೇವಿ ಮಹಾದೇವಿ ||೨||

ಆನಂದ ಸುಧೆಯಲ್ಲಿ ಮೀಸುತ ಜಗವ | ನೀ ತರುವೆ ಅಂಬೆ ಪರ ಪರಿವಿಭವ | ಮಣಿದ್ವೀಪದಲ್ಲಿರುವ ಮಹಾದೇವಿ ಶರಣು | ಮನದ ಮಂದಾರದ ಮಹಾದೇವಿ ಶರಣು ||೩||

Lyrics in English

Sridevi neenamma mookambike | nooraaru namaskara siri paadake| sharanenda bhaktarige nee kalpavalli ninagaaru sarisati bhulikadalli||pa||

Jayadevi jayajanani jananayaki| jaya vijaya nee needu jagadrakshaki |kodachadriyindilida karunamayi |kolloorinalliruva mamataamayi||

Chamundi neene mahalakshmi neene| shrungeriyalliruva sharadeyu neene| sri shankaraacharyara aradhya devi |sri shakti neene he devi mahadevi||

Ananda sudheyalli meesuta jagava| nee taruve ambe para parivibhava| manidweepadalliruva mahadevi sharanu| manada mandaarada mahadevi sharanu||


Second song in the album