ಬೆಳಗು ಜಾವದಿ ಬಾರೋ ಹರಿಯೇ/ Belagu javadi baro

ಬೆಳಗು ಜಾವದಿ ಬಾರೋ ಹರಿಯೇ ನಿನ್ನ
ಚರಣ ತೊಳೆದು ಜಲವ ಪಾನ ಮಾಡುವೆ ನಾ||

ನೀರ ಒಳಗೆ ನಿಂತುಕೊಂಬೆ, ಬೆನ್ನ
ಭಾರ ಪೊತ್ತರೆ ನಗುವಳು ನಿನ್ನ ರಂಭೆ|
ಮೋರೆ ತಗ್ಗಿಸದರೇನೆಂಬೆ ಜಗದಿ
ನಾರಸಿಂಹನಾಗಿ ಪೂಜೆಯ ಕೊಂಬೆ||

ಬಲಿಯ ದಾನವ ಬೇಡಿದ್ಯಲ್ಲೋ, ಕ್ಷತ್ರಿ
ಕುಲವ ಸವರೆ ಕೊಡಲಿಯ ಪಿಡಿದ್ಯಲ್ಲೋ|
ಬಲವಂತ ನಿನಗಿದಿರಲ್ಲೋ, ನಿನ್ನ
ಲಲನೆಯ ತಂದು ರಾಜ್ಯವನಾಳಿದ್ಯಲ್ಲೋ||

ಗೋಕುಲದಳು ಇದ್ದೀಯಲ್ಲೋ, ಲೋಕ
ಪಾಕುಮಾಡಲು ಬುದ್ಧ ರೂಪನಾದ್ಯಲ್ಲೋ|
ಯಾಕೆ ಹಯವನೇರಿದ್ಯಲ್ಲೋ ನಮ್ಮ
ಸಾಕುವ ಹಯವದನ ನೀನೆ ಬಂದ್ಯಲ್ಲೋ||

Lyrics in English

Belagu javadi baro | hariye ninna |
Charana toledu jalapana maduve na || pa ||

Nirolage nintukonbe |
Benna bara pottare naguvalu ninna ranbe |
More taggisirenenbe | jagadi |
Narasinhanagi pujeya gombe| | 1 ||

Baliya danava bedidyallo |
Kshatra kula savari kodaliya pididyallo |
Balavanta ninagedurillo | ninna |
Rajyava tandu rajya palisidyallo || 2 ||

Gokuladolu iddeyallo | loka |
Paku madalu buddha nadyallo |
Eke hayavaneridyallo | namma |
Sakuva hayavadana nine bandyallo || 3 ||


ಏಕೆ ಬೃಂದಾವನದಿ ನೆಲೆಸಿರುವೆ /Eke brundavanadi

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ
ನಾಕವಿಲಸಿತಗೀತೆ ಲಾವಣ್ಯಮೂರ್ತೆ |
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ ||

ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ
ಮುಂದೆ ನ೦ದನ ಕಂದ ನಿನ್ನೆದುರು ಕುಣಿದ
ಒಂದು ಕ್ಷಣ ಬಿಟ್ಟಿರದೆ ಹರಿಯು ನಲಿಯುತಿರೆ
ಇನ್ಯಾರ ಒಲಿಸಲೆಂದು ತಪಗೈಯುತಿರುವೆ ||೧||

ಇಷ್ಟವಿಲ್ಲದ ರಾಜ್ಯವಾಳಿ ಬಹು ವರ್ಷಗಳು
ಶ್ರೇಷ್ಠ ನೀ ಬಹು ಆಯಾಸಗೊಂಡೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠ ಗ್ರಂಥವ ಬರೆದು ಬರೆದು ಸಾಕಾಯ್ತೆ ||೨||

ಪರಿ ಪರಿ ಅಭಿಷ್ಟಗಳ ನೀಡೆಂದು ಜನ ಕಾಡೆ
ವರವಿತ್ತು ಸಾಕಾಯ್ತೆ ಕಮಲೇಶ ದಾಸ
ಧರೆಗೆ ಮರೆಯಾಗಿ ಬೃಂದಾವನ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯಾ ||೩||

Lyrics in English

Eke brundavanadi nelesiruve guruve
nakavilasitagite lavanyamurte |
srikantanolisidudu sakagalillendu
ekanta bayasideya sri raghavendra||

Hinde ninagagi narahariyu kambadi banda
munde nandana kanda ninneduru kunida
ondu kshana bittirade hariyu naliyutire
inyara olisalendu tapagaiyutiruve ||1||

Ishtavillada rajyadali bahu varshagalu
sreshtha ni bahu ayasagondeya
dushtavadigala vagyuddhadali jayisutali
sreshtha granthava baredu baredu sakayte ||2||

Pari pari abishtagala nidendu jana kade
varavittu sakayte kamalesha dasa
dharege mareyagi brundavana seridode
charana dasaru ninna biduvarenayya ||3||


ಮಂತ್ರಾಲಯದೊಳು ಪ್ರಾಜಿಪನಾರೇ / Mantralayadolu prajipanare

ಮಂತ್ರಾಲಯದೊಳು ಪ್ರಾಜಿಪನಾರೇ ಸಂತರ ಒಡೆಯನ ನೋಡುವ ಬಾರೇ ।

ಇಂದ್ರ ನೀಲ ಮಣಿ ಕಾಂತಿಯಂತೆಸೆಯುವ ಬೃಂದಾವನ ಸನ್ ಮಂದಿರನಾರೇ ।। ಎಂದಿಗೂ ಕುಂದದ ಮಹಿಮ ಮುನೀಂದ್ರನು ವಂದಿತ ಶ್ರೀ ರಾಘವೇಂದ್ರ ತಾಳಮ್ಮ।

ಚಂದದಿ ಮಣಿಮಯ ಮಕುಟವ ಧರಿಸಿದ ಸುಂದರ ಬಾಲಕ ಇವನ್ಯಾರೆ । ತಂದೆಯ ಅಸಿ ಇರಿದು ಕಮಲೇಶನ ತೋರಿದ ಮುಕುಂದನ ತೋರಿದ ಬಾಲ ಪ್ರಹ್ಲಾದನೇ ।।
(ಮಂತ್ರಾಲಯದೊಳು )

Lyrics in English

Mantralayadolu prajipanare santara odeyana noduva bare ||

Indra nila mani kantiyanteseyuva brndavan san mandiranare || endigu kundada mahima munindranu vandita shri raghavenrdra talamma||

chandadi manimaya makutava dharisida sundara balaka ivanyare|
tandeya asi iridu kamalesha torida mukundana torida bala prahladane||


ಕುರುಡು ನಾಯಿ ಸಂತೆಗೆ /Kurudu nayi santege

ಕುರುಡು ನಾಯಿ ಸಂತೆಗೆ ಬಂತಂತೆ||2||
ಅದು ಯಾಕೆ ಬಂತೋ ||ಕುರುಡು||

ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ||ಖಂಡ||
ಹೆಂಡಿರ ಮಕ್ಕಳ ನೆಚ್ಚಿತಂತೆ||2||
ಕೊಂಡು ಹೋಗುವಾಗ ಯಾರಿಲ್ಲವಂತೆ
||ಕುರುಡು||

ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ||ಭರದಿ||
ಮರೆತರಿನ್ನು ವ್ಯರ್ಥವಂತೆ||2||
ನರಕದೊಳಗೆ ಬಿದ್ದಿತಂತೆ ||ಕುರುಡು||

ವೇದಶಾಸ್ತ್ರವನೋದಿತಂತೆ
ಗಾದೆಯ ಮಾಡಿ ಬಿಟ್ಟಿತಂತೆ||ವೇದ||
ಹಾದಿ ತಪ್ಪಿ ನಡೆದು ಯಮನ||2||
ಬಾಧೆಗೆ ತಾ ಗುರಿಯಾಯಿತಂತೆ ||ಕುರುಡು||

ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ||ನಾನಾ||
ಕಾನನಕಾನನ ತಿರುಗಿತಂತೆ||2||
ತಾನು ತನ್ನನೆ ಮರೆಯಿತಂತೆ ||ಕುರುಡು||

ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ||ಮಂಗನ||
ರಂಗ ಪುರಂದರವಿಠಲನ ಮರೆತು||2||
ಭಂಗ ಬಹಳ ಪಟ್ಟಿತಂತೆ ||ಕುರುಡು||

Lyrics in English

Kurudu nayi santege bantante adu ake banto||

Kanda sakkare hitavillavante khanda elubu kadiditante
hendira makkala necchitante kondu hoguvaga yarillavante ||

Bharadi angadi hokkitante tiruvi donneyali ikkidarante
maretarinnu vyarttavante narakadolage bidditante ||

Veda vedashastragalanoditante gaadeya madi bittitante
hadi tappi nadedu yamana badhege ta guriyayitante ||

Nana janmavanettitante manavanagi huttitante
kanana kanana tirugitante tanu tannane mareyitante ||

Mangala kaiya manikyavante hango hingo kaleditante
ranga purandara vittalana maretu bhanga bahala pattitante||


ಯಾರಿಗೆ ಯಾರುಂಟು ಎರವಿನ /Yarige yaruntu

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ

ಬಾಯಾರಿತು ಎಂದು ಬಾವಿನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ

ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ

ಅಡವಿಯೊಳ್ಮನೆಮಾಡಿ ಗಿಡಕೆ ತೊಟ್ಟಿಲು ಕಟ್ಟಿ
ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ

ತಂದೆ ಶ್ರೀ ಪುರಂದರವಿಠಲ ನಾರಾಯಣ
ನಾ ಸಾಯೊ ಹೊತ್ತಿಗೆ ನೀ ಕಾಯೊ ಹರಿಯೆ

Lyrics in English

Yarige yaruntu eravina samsara nira melana gulle nijavalla hariye ||

Bayaritu endu bavi nirige pode bavili jalabatti baridsidu hariye ||

Bisilu galigagi marada neralige pode mara baggi shirada meloragidu hariye ||
Adaviyol mane madi gidake tottilu katti tottilina shishu mayavayitu hariye ||

Tande shri purandara vittala narayana na sayo hottige ni kayo hariye ||

Video link here :

ಇಷ್ಟು ಪಾಪಗಳ ಮಾಡಿದ್ದೆ ಸಾಕು /Eshtu paapagala maadidde

ಇಷ್ಟು ಪಾಪಗಳ ಮಾಡಿದ್ದೆ ಸಾಕು
ಸೃಷ್ಟೀಶನೆ ಎನ್ನನುದ್ಧರಿಸಬೇಕು

ಒಡಲ ಕಿಚ್ಚಿಗೆ ಪರರ ಕಡು ನೋಯಿಸಿದೆ
ಕೊಡದೆ ಅನ್ಯರ ಋಣವನಪಹರಿಸಿದೆ
ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ
ಹಡೆದ ತಾಯಿಯ ಕೂಡೆ ಹಗೆ ಮಾಡಿದೆ

ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆ
ಜ್ಞಾನ ಮಾರ್ಗವನಂತು ಮೊದಲೆ ಬಿಟ್ಟೆ
ಏನು ಪೇಳಲಿ ಪರರ ಮಾನಿನಿಗೆ ಮನಸಿಟ್ಟೆ
ಶ್ವಾನ ಸೂಕರರಂತೆ ಹೊರೆದೆ ಹೊಟ್ಟೆ

ವ್ರತ ನೇಮ ಉಪವಾಸ ಮಾಡಲಿಲ್ಲ
ಅತಿಥಿಗಳಿಗನ್ನವನು ನೀಡಲಿಲ್ಲ
ಶ್ರುತಿ ಶಾಸ್ತ್ರ ಪೌರಾಣ ಕಥೆಗಳನು ಕೇಳಲಿಲ್ಲ
ವೃಥವಾಗಿ ಬಹುಕಾಲ ಗತವಾಯಿತಲ್ಲ

ಶುದ್ಧ ವೈಷ್ಣವ ಕುಲದಲುದ್ಭವಿಸಿದೆ ನಾನು
ಮಧ್ವಮತ ಸಿದ್ದಾಂತ ಪದ್ದತಿಗಳ
ಬುದ್ಧಿಪೂರ್ವಕ ತಿಳಿಯದುದ್ದಂಡ ಕಾಯವನು
ವೃದ್ಧಿ ಮಾಡಿದೆನಯ್ಯ ಉದ್ಧರಿಸು ಹರಿಯೆ

ತಂದೆ ತಾಯ್ಗಳ ಸೇವೆಯೊಂದುದಿನ ಮಾಡಲಿಲ್ಲ
ಮಂದಭಾಗ್ಯಗೆ ಭವಣೆ ತಪ್ಪಲಿಲ್ಲ
ಹಿಂದೆ ಮಾಡಿದ ದೋಷ ಒಂದುಳಿಯದರುಹಿದೆನೊ
ತಂದೆ ಪುರಂದರವಿಠಲ ಬಂದೆನ್ನ ಸಲಹೊ

Lyrics in English

Eshtu paapagala maadidde saaku srashteeshane enna uddarisabeku ||

Odala kicchige parara kadu noyiside kodade anyara runavanapahariside madadiya nudi keli oda huttidavarodane | hadeda tayiya koode hage maadide ||

Snana sandhyadigala madadale maigette |jnana margavanantu modale bitte | enu pelali parara maaninige manasitte | shwaana sookararante horede hotte ||

Vrata nema upavasa maadalilla | atithigaligannavanu needalilla | shruti shastra puraana kathegalanu kelalilla | vruthavagi bahukala gatavaayitalla ||

Shudda vaishnava kuladaludbhaviside naanu | madhvamata sidhaanta paddatigala budhipoorvaka tiliyaduddanda kayavanu | vruddi maadidenayya uddarisu hariye ||

Tande taygala seveyondu dina madalilla | mandabhagyage bhavane tappalilla | hinde madida dosha onduliyadaruhideno tande purandara vittala bandenna dalaho ||


ಬಂದದ್ದೆಲ್ಲ ಬರಲಿ ಗೋವಿಂದನ/Bandadella barali govindana

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ

ಇಂದಿರೆ ರಮಣನ ಧ್ಯಾನವ ಮಾಡಲು
ಬಂದ ದುರಿತ ಬಯಲಾದುದಿಲ್ಲವೆ

ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ
ಘೋರ ದುರಿತ ಬಯಲಾದುದಿಲ್ಲವೆ ||

ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ
ಶ್ರೀರಮಣನ ಸಿರಿ ಚರಣ ಶರಣರಿಗೆ
ಕ್ರೂರ ಯಮನು ಶರಣಾಗಲಿಲ್ಲವೆ||

ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ
ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ
ಮಂಗಳ ಮಹಿಮ ಪುರಂದರವಿಠಲ ಶು-
ಭಾಂಗನ ದಯವೊಂದಿದ್ದರೆ ಸಾಲದೆ ||

Lyrics in English

Bandadella barali govindana daya namagirali ||banda||

Indire ramanana dhyanava maadalu banda durita bayaladudillave ||

Aragina maneyolagandu pandavaranu |kolabekendu durula kourava bandu |ati harushadalirutiralandu hari krupe avaralidda |kaarana banda ghora durita bayalaadudillave ||

Aru oliyadiralenna murari enage prasanna |horuva duritada banna nivaripa karuna sampanna| sri ramanana siri charana| sharanarige kroora yamanu sharanaagalillave ||

Singana hegaleridavage kari bhangaveke mattavage |rangana krupeyullavage bhava bhangagale takkavage |mangala mahima purandara vittala |shubhaangana dayavondiddare saalade ||


By Sri Vidyabhushana Theertha Swamiji

ನಂಬಿದೆ ನಿನ್ನ ಪಾದವ ವೆಂಕಟರಮಣ /Nambide ninna padava

ನಂಬಿದೆ ನಿನ್ನ ಪಾದವ, ವೆಂಕಟರಮಣ
ನಂಬಿದೆ ನಿನ್ನ ಪಾದವ ||ಪ||
ನಂಬಿದೆ ನಿನ್ನ ಪಾದಾಂಬುಜಯುಗಳವ
ಚಂದದಿ ಸಲಹೋ ಮಂದರಧರನೆ ||ಅ||

ತಂದೆಯು ನೀನೇ ತಾಯಿಯು ನೀನೇ
ಬಂಧುಬಳಗವು ನೀನೆ
ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ
ಬಂದೆನ್ನ ಸಲಹೋ ಮುಕುಂದಮುರಾರಿ ||

ಚಿಕ್ಕಂದು ಮೊದಲು ನಾನು ನಿನ್ನಯ ಪಾದ
ಹೊಕ್ಕು ಜೀವಿಸುತಿಹೆನು
ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ||

ಮರೆತು ಮಾಯದೊಳು ಮುಳುಗಿದೆ ಮಾಯ-
ವರಿತು ಅರಿಯದಾದೆ
ಮರೆಯದೆ ಎನ್ನನು ಸಲಹೊ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರವಿಠಲ ||

Lyrics in English

Nambide ninna padava venkataramana nambide ninna padava ||

Nambide ninna padambuja yugalava chandadi salaho mandaradharane ||

Tandeyu nine tayiyu nine bandhu balagavu neene |
Banda duritagalella hondikolladante bandenna salaho mukunda murari ||

Chikkandu modalu naanu ninnaya paada hokku jeevisutihenu ||ghakkane jnanava akkaradindale kodu makkala manikya rukminiyarasa ||

Maretu mayadolu mulugide maya varitu ariyadade | mareyade
ennanu salaho kripanidhi varada shri venkata purandara vittala ||


ರಂಗ ಪುರವಿಹಾರ /Rangapura vihara jaya

ರಂಗಪುರ ವಿಹಾರ ಜಯ ಕೋದಂಡ ರಾಮಾವತಾರ ರಘುವರ ಶ್ರೀ ||

ಅಂಗಜ ಜನಕದೇವ ಬೃಂದಾವನ ಸಾರಂಗೇಂದ್ರ ವರದ ರಮಾಂತ ರಂಗ | ಶ್ಯಾಮಲಾಂಗ ವಿಹಂಗ ತುರಂಗ ಸದಯಪಾಂಗ ಸತ್ಸಂಗ ||

ಪಂಕಜಾಪ್ತಕುಲ ಜಲನಿಧಿ ಸೋಮ ವರ ಪಂಕಜ ಮುಖ ಪಟ್ಟಾಭಿರಾಮ ಪಂಕಜ ಜಿತಕಾಮಾ | ರಘುರಾಮ ವಾಮಾಂಕ ಗತ ಸೀತಾವರ ವೇಷ ಶಾಂಕ ಶಯನ ಭಕ್ತ ಸಂತೋಷ ಏನಾಂಕರವಿನಯ| ಮೃದುತರ ಭಾಷಾ ಕಳಂಕ ದರ್ಪಣ ಕಪೋಲ ವಿಶೇಷ ಮುನಿ ಸಂಕಟ ಹರಣ | ಗೋವಿಂದ ವೇಂಕಟರಮಣ ಮುಕುಂದ ಸಂಕರ್ಷಣ ಮೂಲಕಂದ ಶಂಕರ ಗುರುಗುಹಾನಂದ ||


Lyrics in English

Composer: Muttuswaami Dikshitar

Rangapura vihara jaya kodandaramavatara raghuvira shri||

Angaja janaka deva brndavana sarangendra varada ramantaranga shyamalanga vihanga turanga sadayapanga satsanga ||a.pa||

Pankajaptakula jalanidhi soma vara pankaja mukha pattabhirama|
padapankaja jitakama raghurama vamanka gata sitavara Vesha | sheshanka shayana bhakta santosha enankaravi nayana mrudutarabhashakalanka darpana kapola vishesha munisankata
harana govinda venkata ramana mukunda sankarshana moola kanda shankaraguruguhananda ||


Video link :

by Smt.M.S.Subbalakshmi

by Sooryagayathri

ಲೋಕ ಭರಿತನೋ ರಂಗಾನೇಕ /Lokabaritano ranganeka

ಲೋಕ ಭರಿತನೋ ರಂಗಾನೇಕ ಚರಿತನೊ ||ಪ||
ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು-
ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ||1||

ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ||

ಜ್ಞಾನಶೂನ್ಯನಾಗಿ ಸೊಕ್ಕಿ ನಾನೇ ವಾಸುದೇವನೆಂದ
ದೀನ ಪೌಂಡ್ರಕನ ಶಿರವ ಜಾಣರಾಯ ಖಂಡಿಸಿ ಮೆರೆದ||

ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತಿದ ಅಸ್ತ್ರವನ್ನು
ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ||

ತನ್ನ ಸೇವಕಜನರ ಪೊರೆದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನನ ಕೃಷ್ಣ||

Lyrics in English

Lokabaritano ranganeka charitano ||pa||
Kakujanara taridu tanna ekanta Baktara poreva krishna ||a.pa||

Rajasuya yagadalli rajarajariralu
Vasudevasutanu itane sabha pujegarhanenisidata ||1||

Mikka nrupara jaridu amita vikrama yaduvarane tanage takka ramananendu rukmini ukki maleyikkidalaga ||2||

Jnanashunyanagi sokki tane vasudevanenalu
deena paundrakana shirava janaraya taridanaga ||3||

Uttareya garbadalli sutti muttidastravannu
Otti chakradinda nija bhakta parikshitana kayda ||4||

Tanna sevaka janarigolidu unnata udupiyalli nintu
Ganna mahimeyinda poreva prasanna hayavadana krishna ||5||


https://youtu.be/9Vh9aIbzEdM