ಅಚ್ಯುತಾನಂತ ಗೋವಿಂದ ಹರಿ / Achyutananta govinda hari

ಅಚ್ಯುತಾನಂತ ಗೋವಿಂದ ಹರಿ
ಸಚ್ಚಿದಾನಂದ ಸ್ವರೂಪ ಮುಕುಂದ ॥ ಪ ॥

ಕೇಶವ ಕೃಷ್ಣ ಮುಕುಂದ ಹರಿ
ವಾಸುದೇವ ಗುರು ಜಗದಾದಿವಂದ್ಯ
ಯಶೋದೆಯ ಸುಕೃತದ ಕಂದ ಸ್ವಾಮಿ
ಶೇಷಶಯನ ಭಕ್ತ ಹೃದಯಾನಂದ ॥ 1 ॥

ನಾರಾಯಣ ನಿಮ್ಮ ನಾಮ ಎನ್ನ
ನಾಲಿಗೆ ಮೇಲಿರಬೇಕೆಂಬ ನೇಮ
ನಾನು ಬೇಡುವೆ ನಿಮ್ಮ ನಾಮ ಪ್ರಾಣಪ –
ಯಣದ ಸಮಯಕೊದಗಲಿ ಗುಣಧಾಮ ॥ 2 ॥

ಮಾಧವ ಮಂಗಳಗಾತ್ರ ಸ್ವಾಮಿ
ಯಾದವ ಕೈಲಾಸವಾಸನ ಮಿತ್ರ
ಮಹಿಮೆ ಕೇಳಿದರೆ ವಿಚಿತ್ರ ನಿನ್ನ
ಮನಮೆಚ್ಚಲಿ ಸತ್ಯಭಾಮಾಕಳತ್ರ ॥ 3 ॥

ಗೋವಿಂದ ಗೋಪಾಲ ಬಾಲ ಸೋಳ –
ಸಾಸಿರ ಗೋಪೇರ ಆನಂದಲೀಲ
ನೀಲಮಣಿ ಮುಕ್ತಮಾಲಾ ನಿಮ್ಮ
ನೇನೆಂದು ಕರೆಯಲಿ ಸುಗ್ರೀವಪಾಲ ॥ 4 ॥

ವಿಷ್ಣು ಚಕ್ರವು ಬಂದು ಸುತ್ತಿ ಮೂರು
ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ
ಕೃಷ್ಣ ಸಲಹೆಂದು ಮೊರೆಯಿಟ್ಟ ಮುನಿ
ಶ್ರೇಷ್ಠಗಿಷ್ಟರ ಮೇಲೆ ಅಭಯವ ಕೊಟ್ಟೆ ॥ 5 ॥

ಮಧುಸೂದನ ಮಾರಜನಕ ಮದ –
ಗಜ ಸೀಳಿ ಮಲ್ಲರ ಗೆಲಿದೆ ತವಕ
ಒದಗಿ ಕಂಸನ ಕೊಂದ ಬಳಿಕ ನೀ
ಮುದಕಗೆ ಪಟ್ಟವ ಕಟ್ಟಿದ್ಯೋ ಧನಿಕ ॥ 6 ॥

ತ್ರಿವಿಕ್ರಮ ತ್ರೈಲೋಕ್ಯನಾಥ ದೇವ
ತ್ರಿಪುರದ ಸತಿಯರ ವ್ರತಕೆ ವಿಘಾತ
ಯದುವಂಶ ಪಾಂಡವ ಪ್ರೀತ ಎನ್ನ
ಹೃದಯದೊಳಡಗಿರೋ ಶ್ರೀಜಗನ್ನಾಥ ॥ 7 ॥

ವಾಮನ ರೂಪಿಲಿ ಬಂದು ಬಲಿಯ
ದಾನವ ಬೇಡಲು ಉಚಿತವು ಎಂದು
ಧಾರೆಯನೆರೆಯಲು ಅಂದು ಬೆಳೆದು
ಧಾರಿಣಿಯೆಲ್ಲವನಳಿದ್ಯೋ ನೀನಂದು ॥ 8 ॥

ಶ್ರೀಧರ ಶೃಂಗಾರ ಹಾರ ದಿವ್ಯ
ಶ್ರೀವತ್ಸಲಾಂಛನ ಶ್ರೀರಘುವೀರ
ವಾರಿಧಿಸಮಗಂಭೀರ ಧೀರ
ಕ್ರೂರ ರಕ್ಕಸರನೆಲ್ಲರ ಸಂಹಾರಾ ॥ 9 ॥

ಹೃಷಿಕೇಶ ವೃಂದಾವನದಲಿ ನೀ
ಹರುಷದಿ ಕೊಳಲನೂದುತ ಯಮುನೆಯಲಿ
ಸತಿಯರ ಸಮ್ಮೇಳದಲಿ ನೀ
ಧರಿಸಿದ್ಯೊ ಮಂದಾರಮಾಲೆ ಕೊರಳಲ್ಲಿ ॥ 10 ॥

ಪದ್ಮನಾಭ ಕೇಳೊ ಘನ್ನ ಪಾದ –
ಪದ್ಮವ ತೋರಿಸೋ ಬೇಗನೆ ನಿನ್ನ
ಮುದ್ದುಮುಖವ ತೋರಿ ಎನ್ನ ಬೇಗ
ಉದ್ಧಾರ ಮಾಡೆಂದು ಬೇಡುವೆ ನಿನ್ನ ॥ 11 ॥

ದಾಮೋದರ ಗುಣಧಾಮ ಸ್ವಾಮಿ
ದಾನವಾಂತಕ ಯದುಕುಲಸಾರ್ವಭೌಮ
ನೀಲಮೇಘನಿಭಶ್ಯಾಮ ಕೃಷ್ಣ
ನೀಲಾಪತಿಯೆಂಬ ಬಹುಪುಣ್ಯನಾಮ ॥ 12 ॥

ಸಂಕರ್ಷಣ ದನುಜಹರಣ ದೇವ
ಪಂಕಜಮುಖಿ ದ್ರೌಪದಿ ಮೇಲೆ ಕರುಣ
ಕುಂಕುಮಾಂಕಿತರೇಖಾಚರಣ ನಿಜ
ಕಂಕಣ ಕೇಯೂರ ಕೌಸ್ತುಭಾಭರಣ ॥ 13 ॥

ವಾಸುದೇವ ಕೇಳೋ ನಿನ್ನ ದಿವ್ಯ
ಸಾಸಿರನಾಮವ ನೆನೆವನೆ ಧನ್ಯ
ಬೇಸರದೆ ಸಲಹಬೇಕೆನ್ನ ತುಸು
ಘಾಸಿಯ ಮಾಡದೆ ಕರುಣಾಸಂಪನ್ನ ॥ 14 ॥

ಪ್ರದ್ಯುಮ್ನ ನೆಂದು ನಾ ಕರೆದೆ ಎನ್ನ
ಬದ್ಧವಾದ ದುಷ್ಕರ್ಮವ ಕಳೆದೆ
ದುರ್ಬುದ್ಧಿ ದುರ್ವಾಕ್ಯ ಮೆರೆದೆ
ಸಾಧು ಸಜ್ಜನರ ಸಂಗ ನಿನ್ನಿಂದ ಬೆರೆದೆ ॥ 15 ॥

ಅನಿರುದ್ಧ ಅನುದಿನದಲ್ಲಿ ನೀ
ವಿನಯದಿಂದಿದ್ದು ಗೋಪಿಯರ ಮನೆಯಲ್ಲಿ
ಸನಕಾದಿವಂದ್ಯ ನಿನ್ನಗಲಿ ಒಂದು
ಕ್ಷಣ ಬಿಟ್ಟಿರಲಾರೆ ನಿಲ್ಲೋ ಮನದಲ್ಲಿ ॥ 16 ॥

ಪುರುಷೋತ್ತಮ ಗಾರು ಸಾಟಿ ಪರಬ್ರಹ್ಮ
ಸ್ವರೂಪಿಯೆ ನಿನಗಾರೊ ಪೋಟಿ
ಮಹಿಮೆ ಕೇಳಿದರೊಂದು ಕೋಟಿ ನಿನ್ನ
ಹೃದಯದಿ ಬ್ರಹ್ಮಾಂಡ ಕಂಡ ಕಿರೀಟಿ ॥ 17 ॥

ಅಧೋಕ್ಷಜ ಅಸುರ ಸಂಹಾರಿ ಕೃಷ್ಣ
ಅದ್ಭುತರೂಪ ಶಿಶುಪಾಲನ ವೈರಿ
ಭಕ್ತರ ಪಾಲಿಪ ಶೌರಿ ಅಜಾ –
ಮಿಳ ನಾರಗನೆನ್ನೆ ಕಾಯ್ದೆ ಮುರಾರಿ ॥ 18 ॥

ನರಸಿಂಹ ರೂಪವ ತಾಳ್ದೆ ಕಂದ
ಕರೆಯೆ ಕಂಭದಿ ಬಂದು ಕರುಣದಿ ಕಾಯ್ದೆ
ದುರುಳ ಹಿರಣ್ಯಕನ ಸೀಳ್ದೆ ಅವನ
ಕರುಳ ಬಗೆದು ವನಮಾಲೆ ಹಾಕಿದೆ ॥ 19 ॥

ಅಚ್ಯುತ ನೀನತಿ ಮುದ್ದು ಗೋಪಿ
ಬಚ್ಚಿಟ್ಟ ಹಾಲು ಮೊಸರು ಬೆಣ್ಣೆ ಮೆದ್ದು
ತುಚ್ಚಶಕಟನ ಕಾಲಿಲೊದ್ದು ಕಾಡು
ಕಿಚ್ಚು ನುಂಗಿ ಪಾಲಿಸಿದೆಯೊ ಗೆದ್ದು ॥ 20 ॥

ಜನಾರ್ದನ ರೂಪ ನೀನಾಗಿ ಎನ್ನ
ಮನದ ಕರ್ಮವ ತೊಲಗಿಸೊ ಮುಂದಾಗಿ
ಮುನಿಗಳೆಲ್ಲರು ಒಂದಾಗಿ ಈ
ತನು ನಿನ್ನದೆಂಬರೋ ಕೇಳೋ ನಿಜವಾಗಿ ॥ 21 ॥

ಉಪೇಂದ್ರ ರೂಪದಿ ಬಂದಿ ಅಪ್ರ –
ಮೇಯ ಕಾಳಿಂಗನ ಮಡುವ ಧುಮುಕಿದಿ
ನಾಗನ ಹೆಡೆಗಳ ತುಳಿದಿ ನಾಗ –
ಪತ್ನಿಯರು ಬೇಡೆ ಪತಿಯ ಪಾಲಿಸಿದಿ ॥ 22 ॥

ಹರಿ ಹರಿಯೆಂದರೆ ಪಾಪರಾಶಿ
ಹರಿದು ಹೋಯಿತು ಎನ್ನ ಮನದ ಸಂತಾಪ
ಸರ್ವರೊಳಗೆ ವಿಶ್ವರೂಪ ನಿನ್ನ
ನೆರೆ ನಂಬಿದವರನ್ನು ಸಲಹುವ ಭೂಪ ॥ 23 ॥

ಕೃಷ್ಣ ಕೃಷ್ಣನೆಂಬ ಸೊಲ್ಲ ಕೇಳಿ
ನಷ್ಟವಾಯಿತು ಎನ್ನ ಪಾಪಗಳೆಲ್ಲ
ಮುಟ್ಟಿ ಭಜಿಸಿರೊ ನೀವೆಲ್ಲ ಪುರಂದರ –
ವಿಠ್ಠಲ
ನಲ್ಲದೆ ಮತ್ತೆ ಬೇರಿಲ್ಲ ॥ 24 ॥


Lyrics in English

Composer : Sri Purandara dasaru

Achyutananta govinda hari
sacchidananda svarupa mukunda ||pa||

Keshava krishna mukunda hari
vasudeva guru jagadadivandya
yashodeya sukrtada kanda svami
shesha shayana bhakta hrdayananda ||1||

Narayana ninna namavenna
nalige melira bekemba nema
nanu beduve ninna nama prana
payana samayakodagali gunadhama ||2||

Madhava mangalagatra svami
yadava kailasa vasana mitra
mahime kelidare vichitra ninna
mana meccahli satyabhamA kalatra ||3||

Govinda gopala bala sola
sasira gopira ananda leela
neela mani muktamala nimmanenendu
kareyali sugriva pala ||4||

Vishnu chakravu bandu sutti
mooru shrishiyanella tirugi bennatti
krishna salahendu moreyitta muni
shreshtagishtara mele abhayava kotte||5||

Madhusudana marajanaka
madagaja seeli mallara gelida tanaka
odagi kamsana konda bhaliga ni
mudukage pattava kattidyo dhanika ||6||

Trivikrama trailokyanatha deva
tripurara satiyara vratake vikhata
yaduvamsha pandava prita enna
hrdayadoladagiro shri jagannatha ||7||

Vamana rupili bandu baliya
danava bedalu uchitavu endu
dhareyaneyalu andu beledu
dhariniyellavanaledyo ninandu ||8||

Shridhara shrngara hara divya
shrivatsalanjana shri raghuvira
varidhi sama gambhira dhira
krura rakkasaranellara samhara ||9||

Hrishikesha vrindavanadali ni
harushadi kolalnuduta yamuneyali
stiyara sammeladali ni
dharisidyo mandara male koralali ||10||

Padmanabha kelo ghanna pada
padmava toriso begane ninna
muddu mukhava toriyenna bega
uddhara madendu beduve ninna ||11||

Damodara gunadhama svami
danavantaka yadukula sarva bhauma
nila megha nibha shyama krishna
nilapatiyemba bahu punya nama ||12||

Shankarana danujaharana deva
pankajamukhi draupadi mele karuna
kumkumankata rekha charana nija
kankana keyura kaustubha bharana||13||

Vasudeva kelo ninna divya
sasira namava nenevane dhanya
besarade salaha bekenna tusa
ghasiya madade karuna sampanna ||14||

Pradyumnanendu na karade enna
baddhavada dushkarmava kalede
durbuddhi dur vakya marede sadhu
sajjanara sanga ninninda berede ||15||

Aniruddha anudinadalli ni
vinayadindidde gopiyara maneyalli
sanakadi vandya ninnagali ondu
kshana bittiralare nillo manadali ||16||

Purushottamagaru sati para brahma
svarupiye ninagaro poti
mahime kelidarondu koti ninna
hrdayadi kanda brahmanda kiriti ||17||

Adhokshaja asura samhari krishna
adbhuta rupa shishupalana vairi
bhaktara paliya shauri ajamila
naraganenne kaide murari ||18||

Narasimha rupava talede kanda
kareya kambhadi bandu karunadi kaide
durula hiranyakana silde avana
karulu bagidu vanamaleya hakde ||19||

Achyuta ninati muddu gopi bacchitta
halu mosaru benne meddu
tuccha shakatana kaliloddu kadu
gicchanu nungi palisideyo geddu ||20||

Janardana rupa ninagi enna manada
karmava tolagiso mundagi
munigalellaru ondagi i tanu
ninnedembaro kelo nijavagi ||21||

Upendra rupadi bande aprameya
kalingana maduva dhumukide
nagana hedegala tulide naga
patniyaru bede patiya paliside ||22||

Hari hariyendare papa rashi
haridu hoyitu enna manada santapa
sarvarolage vishvarupa ninna nere
nambidavaranu salahuva bhupa ||23||

Krishna krisnanemba solla keli
nashtavayitu enna papagalella
mutti bhajisiro nivella
purandara vittalannade matte berilla ||24||


ನೀಲಲೋಹಿತ ಡಮರುಗ ತ್ರಿಶೂಲ/ Nila lohita damaruga

ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ||ಪ||

ಫಾಲನಯನ ಶುಂಡಾಲ ಚರ್ಮ ಸುದು
ಕೂಲ ಮೃಡ ಸತತ ಪಾಲಿಸು ಕರುಣದಿ ||ಆ.ಪ||

ನಂದಿವಾಹನ ನಮಿಪೆ ಖಳ
ವೃಂದ ಮೋಹನ
ಅಂಧಕರಿಪು ಶಿಖಿ ಸ್ಯಂದನ ಜನಕ ಭೂಷಣ
ಸನಂದನಾದಿ ಮುನಿ ವಂದಿತ ಪದಯುಗ ||1||

ಸೋಮಶೇಖರ ಗಿರಿಜಾಸು
ತಾಮ್ರ ಲೇಖರಾ
ಸ್ತೋಮವಿನುತ ಭವ ಭೀಮ ಭಯಾಂತಕ
ಕಾಮರಹಿತ ಗುಣಧಾಮ ದಯಾನಿಧೆ ||2||

ನಾಗಭೂಷಣ ವಿಮಲ ಸುರಾಗ ಭಾಷಣ
ಭೋಗಿಶಯನ ಜಗನ್ನಾಥ ವಿಠಲನ
ಯೋಗದಿ ಒಲಿಸುವ ಭಾಗವತರೊಳಿಡೊ ||3||

Lyrics in English

Nila lohita damaruga trisula shobita||pa||

Palanayana shundala charma sudukula mruda satata palisu karunadi ||apa||

Nandivahana namipe kala vrunda mohana |andhakaripu shikhi skandana janaka bushana
Sanandanandanadi muni vandita padayuga ||

Somashekara girijasu taamralekara somavinuta |bavabima bayantaka kamarahita gunadhama dayanidhe ||

Nagabushana vimala suraga bashana bogishayana jagannatha vithalana yogadi olisuva bagavatarulidu ||


ಅಂಬಾತನಯ ಹೇರಂಬ /Amba tanaya heramba

ಅಂಬ ತನಯ ಹೇರಂಬ ಪೂರ್ಣ
ಕರುಣಾಂಬುಧೆ ತವ ಚರಣಕೆ ಎರಗುವೆ

ದಶನ ಮೋದಕ ಪಾಶಾಂಕುಶ ಪಾಣಿ
ಅಸಮಚಾರುದೇಷ್ಣ ಕುಸುಮನಾಭನ ಪುತ್ರ

ಬೃಂದಾರಕ ವೃಂದ ವಂದಿತ ಚರಣ
ಅರವಿಂದಯುಗಳ ದಯದಿಂದ ನೋಡೆನ್ನ

ಯೂಥಪ ವದನ ಪ್ರದ್ಯೋತ ಸನ್ನಿಭ
ಜಗನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ

Lyrics in English

Amba tanaya heramba poorna karunaambudhe tava charanake eraguve ||

Dashana modaka paashankusha paani asamachaarudeshna kusumanaabhana putra ||

Brundaaraka vrunda vandita charana aravinda yugala dayadinda nodenna |

Yuthapa vadana pradyota sannibha jagannatha vithalana sampreeti vishaya jaya ||


ಆದದ್ದೆಲ್ಲ ಒಳಿತೇ ಆಯಿತು /Adaddella olite Ayitu

ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು   ||ಪ||

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮುಂದೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರ ವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ                 ||೧||

ಗೋಪಾಲ ಬುಟ್ಟಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಲ ಬುಟ್ಟಿ ಹಿಡಿಸಿದಳಯ್ಯ          ||೨||

ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಶ್ರೀ ಪುರಂದರ ವಿಠಲನು
ತುಳಸಿಮಾಲೆ ಹಾಕಿದನಯ್ಯ                ||೩||

Lyrics in English

Adaddella olite Ayitu namma
Sridharana sevege sadhana sampattayitu ||pa||

Dandige betta hidiyuvudakke
Munde bagi nachutalidde
Hendati santati savira vagali
Dandige betta hidisidalayya ||1||

Gopala butti hidiyuvudakke
Bupati endu garvisuttidde
A patnikula saviravagali
Gopala butti hidisidalayya ||2||

Tulasi male hakuvudakke
Arasanendu tirugutalidde
Sarasijaksha sri purandara vithalanu
Tulasimale hakidanayya ||3||


ದೇವಕಿ ಕಂದಾ ಮುಕುಂದ /Devaki kanda mukunda

ದೇವಕಿ ಕಂದಾ ಮುಕುಂದ ಕೃಷ್ಣ||2||
||ದೇವಕಿ||

ನಿಗಮೋದ್ಧಾರ ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ
||ದೇವಕಿ||

ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ
||ದೇವಕಿ||

ವರ ವೇಲಾಪುರ ಚೆನ್ನಪ್ರಸನ್ನ
ಪುರಂದರವಿಠಲನ ಗುಣಪೂರ್ಣ
||ದೇವಕಿ||

Lyrics in English

Devaki kanda mukunda ||

Nigamoddhara navanita chora khagapati vahana jagadoddhara ||

Shankha chakradhara shri govinda pankaja lochana paramananda||

Makara kundaladhara mohana vesha rukmini vallabha pandava posha||

Kamsa mardana kaustubha bharana hamsa vahana pujita charana||

Vara velapura chenna prasanna puranda vittala sakala guna purna||


ಬಂದನೇನೆ ರಂಗ ಬಂದನೇನೆ /Bandanene ranga banda

ಬಂದನೇನೆ ರಂಗ ಬಂದನೇನೆ, ಎನ್ನ ||ಪ||
ತಂದೆ ಬಾಲಕೃಷ್ಣ ನವನೀತ ಚೋರ ||ಅ||

ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆ
ಹೊಳೆ ಹೊಳೆಯುವ ಪಾದವನೂರುತ
ನಲಿನಲಿದಾಡುವ ಉಂಗುರ ಅರಳೆಲೆ
ಥಳಥಳಥಳ ಹೊಳೆಯುತ ಶ್ರೀ ಕೃಷ್ಣ ||

ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆ
ಝಣಝಣಝಣರೆಂಬ ನಡುವಿನ ಗಂಟೆ
ಧಣಧಣಧಣರೆಂಬ ಪಾದದ ತೊಡವಿನ
ಮಿಣಿಮಿಣಿ ಕುಣಿದಾಡುತ ಶ್ರೀ ಕೃಷ್ಣ ||

ಹಿಡಿಹಿಡಿಹಿಡಿಯೆಂದು ಪುರಂದರವಿಠಲನ
ದುಡುದುಡುದುಡುದುಡನೆ ಓಡುತ
ನಡೆನಡೆನಡೆಯೆಂದು ಮೆಲ್ಲನೆ ಪಿಡಿಯಲು
ಬಿಡಿಬಿಡಿಬಿಡಿ ದಮ್ಮಯ್ಯ ಎನ್ನುತ ||

Lyrics in English

Bandanene ranga bandanene ||pa||

Tande balakrishna navanita chora||a.pa||

Ghilu ghilu ghiluremba ponnanduge gejje | hole holeyuva padavanuruta
nalinalidaduva ungura aralele | thala thala thala holeyuta shri krishna ||

Kini kini kinirembakarada kankana bale | jhana jhana jhanaremba naduvina gante |
Dhana dhana dhanaremba padada todavina |mini mini kunidaduta shri krishna ||

Hidi hidi hidiyendu purandara vittalana dudu dudu dudu dudane oduta |nade nade nadeyendu mellana pidiyalu pidi pidi pidi dammayya ennuta ||


ಸಿಟ್ಟು ಮಾಡಿದರುಂಟೆ /Sittu maadidarunte

ಸಿಟ್ಟು ಮಾಡಿದರುಂಟೆ ಶ್ರೀ ಕೃಷ್ಣನಲ್ಲಿ ||ಪ||
ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ ||ಅ||

ನೆಲವ ತೋಡಿದರಿಲ್ಲ ಛಲದಿ ಹೋರಿದರಿಲ್ಲ
ಕುಲಗೆಟ್ಟರಿಲ್ಲ ಕುಪ್ಪರಿಸಿದರು ಇಲ್ಲ
ಬಲವ ತೋರಿದರಿಲ್ಲ ಕೆಲಕೆ ಸಾರಿದರಿಲ್ಲ
ತಲೆಯ ಕಲ್ಲಿಗೆ ಹಾಯ್ದು ಒಡಕೊಂಡರಿಲ್ಲ ||

ಧರಣಿಯಾಳುವ ದೊರೆಯ ಓಲೈಸಿದರು ಇಲ್ಲ
ಉರಗನ ಬಿಲದೊಳಗೆ ಹೋದರು ಇಲ್ಲ
ಗಿರಿಗಹ್ವರಂಗಳಲಿ ತೊಳಲಿ ಬಳಲಿದರಿಲ್ಲ
ಬರಿದೆ ಹಲವರಿಗೆ ಬಾಯ್ದೆರೆದರಿಲ್ಲ ||

ದೊಂಬಲಾಗವ ಹಾಕಿ ಡಿಂಬ(/ದಿಂಡು) ತಿರುಗಿದರಿಲ್ಲ
ತುಂಬಿರುವ ಊರೊಳಗೆ ತಿರಿತಿಂದರಿಲ್ಲ
ಅಂಬುಜಾಕ್ಷ ಪುರಂದರವಿಠಲನ್ನ ಪಾ-
ದಾಂಬುಜವ ನೆನೆನೆನೆದು ಸುಖಿಯಾಗು ಮನವೆ ||

Lyrics in English

Sittu maadidarunte sri krishnanalli ||pa|| kottu huttade munna ee srushtiyalli ||a||

Nelava todidarilla chaladi horidarilla kulagettarilla kupparisidaru illa balava toridarilla kelake saaridarilla taleya kallige haaydu odakondarilla||

Dharaniyaaluva doreya olaisidaru illa uragana biladolage hodaroo illa girigahvaramgalali tolali balalidarilla baride halavaruge baayderedarilla ||

Dombalaagava haaki dimbatirugidarilla | tumbiruva orolage tiritindarilla |ambujaaksha purandara vittalanna paadambujava nenenenedu sukhiyaagu manave ||


ಆಡ ಹೋಗುಣು ಬಾರೋ ರಂಗ /Ada hogona baro ranga

ಆಡ ಪೊಗೊಣ ಬಾರೊ ರಂಗ ಕೂಡಿ ಯಮುನಾ ತೀರದಲ್ಲಿ ||ಪ||

ಚಿಣ್ಣಿಕೋಲು ಚೆಂಡು ಬುಗರಿ ಸಣ್ಣ ಸಣ್ಣ ಆಟಗಳನು ಕಣ್ಣಮುಚ್ಚಲಿಕೆ ಕುಂಟಲಿಪಿಬಣ್ಣ ಬಣ್ಣದ ಆಟಗಳನು ||1||

ಜಾಹ್ನವಿಯ ತೀರವಂತೆ ಜನಕರಾಜನ ಕುವರಿಯಂತೆ ಜಾನಕಿಯ ವಿವಾಹವಂತೆ ಜಾಣ ನೀನು ಬರಬೇಕಂತೆ ||2||

ಪುಂಡರೀಯ ನಗರವಂತೆ ಭೀಷ್ಮಕರಾಜನ ಕುವರಿಯಂತೆ ಶಿಶುಪಾಲನ್ನ ಒಲ್ಲಳಂತೆ ನಿಮಗೆ ಓಲೆ ಬರೆದಳಂತೆ ||3||

ಕೌರವರು ಪಾಂಡವರು ಲೆತ್ತವಾಡಿ ಸೋತರಂತೆ ರಾಜ್ಯವನ್ನು ಬಿಟ್ಟರಂತೆ ರಂಗವಿಠಲ ಬರಬೇಕಂತೆ ||4||

Lyrics in English

Ada hogona baro ranga koodi yamuna teeradalli ||

Chinnikolu chendu buguri sanna sanna aatagalannu kannu mucchalikke kuntalipibanna bannada aatagalannu ||

Jaahnaviya teeravante janakaraajana kuvariyante jaanakiya vivaahavante jaana neenu barabekante ||

Pundariya nagaravante bhishmaka raajana kuvariyante shishupaalanna ollalante nimage ole baredalante ||

Kouravaru paandavaru lettavaadi sotarante raajyavannu bittarante rangavittala barabekante ||


ವೃಂದಾವನದೊಳು ಆಡುವನ್ಯಾರೇ /Brindavanadolu aduvanyaare

ವೃಂದಾವನದೊಳು  ಆಡುವನ್ಯಾರೇ  ಗೋಪಿ
ಚಂದಿರವದನೇ  ನೋಡುವ ಬಾರೇ ।

ಅರುಣಪಲ್ಲವ  ಪಾದಯುಗಳಲಿ ,  ದಿವ್ಯ
ಮರಕತ  ಮಂಜುಳಭರಣನೇ
ಸಿರಿವರ  ಯಧುಕುಲ  ಸೋಮನೇ  ,ಇಂಥಾ
ಪರಿಪೂರ್ಣ ಕಾಮ  ನಿಸ್ಸಿಮನೇ ।।೧।।

ಹಾರ ಹೀರ ಗುಣಧಾಮನೇ  ಸರ್ವ
ಸಾರ ಶರೀರ  ಶೃಂಗಾರನೇ
ಆರಿಗಾದರೂ  ಮನ ತೋರನೇ , ತನ್ನ
ಸೇರಿದವರ ಮಾತಮೀರನೇ ।।೨।।

ಮಕರಕುಂಡಲ ಕಾಂತಿ  ಭರಿತನು, ದೇವ
ಅಕಳಂಕ  ರೂಪ ಲಾವಣ್ಯನೇ  ,ದಿವ್ಯ
ಸಕಲರೊಳಗೆ ದೇವನೀತನೇ  ನಮ್ಮ
ಮುಕುಟೀಶ  ಪುರಂದರ ವಿಠಲನೇ ।।

Lyrics in English

Brindavanadolu aduvanyaare gopi chandiravadane noduva baare ||

Arunapallava paadayugalali, divya marakata manjulabharanane sirivara yadukula somane, intha paripoorna kaama nissimane ||

Haara heera gunadhamane sarva saara sharira shrungaarane arigaadaru mana torane, tanna seridavara maatameerane ||

Makarakundala kaantibharitanu, deva akalanka roopa laavanyane, divya sakalarolage devaneetane namma mukuteesha purandara vithalane ||


ಇವನಾರೋ ಏನೋ  ಎಂದು /Ivanaaro eno endu

ಇವನಾರೋ ಏನೋ  ಎಂದು ಉದಾಸೀನ ಮಾಡದಲೆನ್ನಾ
ಪವನ ಸಂಭೂತ ಒಲಿದು ತವಕದಿ ಕಾಯಬೇಕು ।।

ಕಪಿಪಕಪಿ  ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು  ಕಾಯ್ದೆಯಾಗಲು ।।ಪವನ।।

ಹರಿವೇಷಧರನೇ  ನರಹರಿ ಭಕುತರ ಪೊರೆವುದಕ್ಕೆ
ಹರಿಯಂತೆ ಒದೆಗುವೆಯೋ  ನೀನು ಹರಿ ದಾಸನು ನಾನು ।।ಪವನ ।।

ಅಜಸುತನ ಶಾಪದಿಂದ ಅಜಗರನಾದವನ ಪಾದ
ರಜದಿ  ಪುನೀತನ ಮಾಡಿದನೇ  ಅಜ ಪದವಿಗೆ ಬಹನೇ ।।ಪವನ।।

ಕಲಿಯುಗದಿ ಕವಿಗಳೆಲ್ಲಾ  ಕಲಿಬಾಧೆಯಿಂದ  ಬಳಲಿ
ಕಲಿವೈರಿಮುನಿಯೆಂದೆನಿಸಿದಿ  ಕಲಿಮಲವ ಕಳೆದಿ ।।ಪವನ।।

ಗುರುಪ್ರಾಣೇಶವಿಠಲ  ಹರಿಪದನೆಂಬೋ  ಜ್ಞಾನ
ಗುರುಮಧ್ವರಾಯ ಕರುಣಿಸೋ ದುರ್ಮತಿಗಳ  ಬಿಡಿಸೋ ।।ಪವನ।।

Lyrics in English

Ivanaaro eno endu udaaseena maadalennaa
pavana sambhuta olidu tavakadi kaayabeku ||

Kapipakapi aagneyante kapilana patniyannu
kapigalu huduki midukalu kaaydeyaagalu ||pavana||

Hariveshadharane narahari bhakutara porevudakke
hariyante odeguveyo neenu hari daasanu naanu ||pavana||

Ajasutana shaapadinda ajagaranaadavana paada
rajadi puneetane maadidane aja padavige bahane ||pavana||

Kaliyugadi kavigalella kalibaadheyinda balali
kalivairimuniyendenisidi kalimalava kaledi ||pavana||

Gurupraneshavithala  haripadanembo  jnana
gurumadhwaraya karuniso durmatigala bidiso ||pavana||