ಮಂದಗಮನೆ ಇವನಾರೆ /Mandagamane ivanyare

ಮಂದಗಮನೆ ಇವನಾರೆ ಪೇಳಮ್ಮ
ಮಂದರಧರೆ ಗೋವಿಂದ ಕಾಣಮ್ಮ

ಕೆಂದಳಿರು ನಖ ಶಶಿಬಿಂಬ ಪದಪದ್ಮ
ಅಂದುಗೆ ಇಟ್ಟವನಾರೆ ಪೇಳಮ್ಮ
ಅಂದು ಕಾಳಿಂಗನ ಹೆಡೆಯ ತುಳಿದ ದಿಟ್ಟ
ನಂದನ ಕಂದ ಮುಕುಂದ ಕಾಣಮ್ಮ

ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ
ಕಡಗ ಕಂಕಣವಿಟ್ಟವನಾರಮ್ಮ
ಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-
ಳೊಡನೆ ತೋರಿದ ಜಗದೊಡೆಯ ಕಾಣಮ್ಮ

ನೀರದ ನೀಲದಂತೆಸೆವ ವಕ್ಷದಿ ಕೇ-
ಯೂರ ಹಾರನಿಟ್ಟವನಾರಮ್ಮ
ನೀರೆ ಕೇಳು ನಿರ್ಜರರಾದವರಿಗೆ
ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ

ಶಂಖ ಚಕ್ರವು ಗದೆ ಪದ್ಮ ಕೈಯೊಳಗಿಟ್ಟ
ಲಂಕರಿಸುವನೀತನಾರಮ್ಮ
ಪಂಕಜಮುಖಿ ಶ್ರೀ ಭೂದೇವಿಯರಸನು
ಶಂಕೆಯಿಲ್ಲದೆ ಗೋಪಿತನಯ ಕಾಣಮ್ಮ

ಕಂಬುಕಂಧರ ಕರ್ಣಾಲಂಬಿತಕುಂಡಲ
ಅಂಬುಜ ಮುಖದವನಾರೆ ಪೇಳಮ್ಮ
ರಂಭೆ ಕೇಳೀತ ಪುರಂದರವಿಟ್ಠಲ
ನಂಬಿದ ಭಕ್ತಕುಟುಂಬಿ ಕಾಣಮ್ಮ

Lyrics in English

Mandagamane ivanyare pelamma mandaradhara govinda kanamma||

Kendaliru nakha shashibimba pada padma anduge ittavanyare pelamma|
andu kalingana peeeya tulida ditta nandana kanda mukunda kanamma||1||


Uduge pitambara naduge honnududara kadaga kankana vittavanyaramma
madadi kel sakala lokangala kuksiyolodane torida jagadodeya kanamma||2||


Nirada niladantesava vaksadi keyurava haravanittavan yaramma
nire kelu nirjararadavarige presiri balavittudari kanamma||3||


Shankha chakravu gade padma kaiyolagittalankarisuvanitanyarama
pankaja mukhi shri bhudeviyara rasanu shankeyillade gopi tanaya kanamma||4||


Kambu kandhara karnalambida kundala ambuja mukhadavan yare helamma|
rambhe kelita purandara vittala nambida bhaktara kutumbi kanamma||5||


ಅಮ್ಮ ನಿಮ್ಮ ಮನೆಗಳಲ್ಲಿ  /Amma nimma manegalalli

ಅಮ್ಮ ನಿಮ್ಮ ಮನೆಗಳಲ್ಲಿ 
ನಮ್ಮ ರಂಗನ ಕಂಡಿರೇನೆನಮ್ಮ | ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೋಳಿಲ್ಲವೇನಮ್ಮ||

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು 
ಪೂಸಿದ ಶ್ರೀಗಂಧ ಮೈಯೊಳಗಮ್ಮ
ಲೇಸಾಗಿ ತುಲಸಿಯ ಮಾಲೆಯ ಹಾಕಿದ 
ವಾಸುದೇವನು ಬಂದ ಕಂಡಿರೇನೆ 

ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ 
ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ 
ಅರಳೆಲೆ ಕನಕದ ಕುಂಡಲ ಕಾಲಂದಿಗೆ 
ಉರಗಶಯನ ಬಂದ ಕಂಡಿರೇನೆ 

ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ
ನೀಲವರ್ಣನು ನಾಟ್ಯವಾಡುತಲಿ
ಮೇಲಾಗಿ ಬಾಯಲ್ಲಿ ಜಗವನು ತೋರಿದ 
ಮೂರ್ಲೋಕದೊಡೆಯನ ಕಂಡಿರೇನೆ

ಕುಂಕುಮ ಕಸ್ತೂರಿ ಕುಡಿಕುಡಿ ನಾಮವು 
ಶಂಕಚಕ್ರಂಗಳ ಧರಿಸಿಹನಮ್ಮ 
ಬಿಂಕದಿಂದಲಿ ಕೊಳಲೂದುತ ಪಾಡುತ 
ಪಂಕಜಾಕ್ಷನು ಬಂದ ಕಂಡಿರೇನೆ 

ಹದಿನಾರು ಸಾವಿರ ಗೋಪಿಯರೊಡಗೂಡಿ
ಚದುರಂಗ ಪಗಡೆಯನಾಡುವನಮ್ಮ
ಮದನ ಮೋಹನರೂಪ ಎದೆಯಲಿ 
ಪದುಮನಾಭಾನು  ಬಂದ ಕಂಡಿರೇನೆ 

ನೊಸಲ ಸುತ್ತಿದ ಪಟ್ಟಿ ನಡುವಿನ ವಡ್ಯಾಣ
ಎಸೆವ ಕಸ್ತೂರಿ ಬಟ್ಟು ಮೈಯವನಮ್ಮ 
ಪಸರಿಸಿ ಪಟ್ಟಿಯ ಹಾವಿಗೆ ಮೆಟ್ಟಿದ 
ಅಸುರಾಂತಕ ಬಂದ ಕಂಡಿರೇನೆ 

ತೆತ್ತೀಸಕೋಟಿ ದೇವರ್ಕಳ ಒಡಗೂಡಿ 
ಹತ್ತವತಾರವನೆತ್ತಿದನೆ
ಭಕ್ತವತ್ಸಲ ನಮ್ಮ ಪುರಂದರವಿಠಲ
ನಿತ್ಯೋತ್ಸವ ಬಂದ ಕಂಡಿರೇನೆ 

Lyrics in English

Amma nimma manegalalli namma rangana kandirenamma ||
Brahma muruti namma krishnanu nimma keryolillavenamma ||

Kashi pitambara kaiyalli kolalu pusida shrigandha maiyolagamma|
lesagi tulasiya maleya dharisida vasudevanu banda kanirene||

Karadalli kankana beralalli ungura koralalli hakida huliyuguramma|
aralele kanaka kundala kalalanuge uraga shayana banda kandirrne||

Kumkuma kasturi kari nama tiddi shankhachakragala dharisihanamma|
binkadindali kolaludutta padutta pankajakaanu banda kanirene||

Mavana maduhida shakatana kedahida govardhana
giri ettidanamma|
Ava tayige irelu jaga torida kavanayya banda kanirene ||

Kalali kiru gejje nilada bavuli nila varnanu natyavadutali |
melagi bayalli jagavannu torida mukokadodeyana kandirene||

Hadinaru savira gopiyara kudi chaturanga pagadeyanaduvanamma|
madana mohana rupa edeyalli kaustubha madhusudana banda kanirene ||

Tettesa koti devargala oda gudi
hattavataravanettittadamma|
satyabhama priya purandara vittala nityotsava banda kanirene||

By Dr.M Balamurali Krishna https://youtu.be/veTbp7B_Jo0

ಬುದ್ಧಿ ಮಾತು ಹೇಳಿದರೆ/Buddhi maatu helidare

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮಗಳೆ ಮನ|ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ||

ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ ಮಗಳೆ|
ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ|
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ ಮಗಳೆ|
ಹತ್ತುಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ||

ಕೊಟ್ಟು ಕೊಂಬುವ ನಂಟರೊಡನೆ ದ್ವೇಷ ಬೇಡಮ್ಮ ಮಗಳೆ|
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ|
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ ಮಗಳೆ|
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ||

ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ ಮಗಳೆ|
ಗರುವ ಕೋಪ ಮತ್ಸರವನ್ನು ಮಾಡಬೇಡಮ್ಮ|
ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ ಮಗಳೆ|
ವರಪುರಂದರವಿಠಲನ ಸ್ಮರಣೆ ಮರೆಯಬೇಡಮ್ಮ||

Lyrics in English

Buddhi maatu helidare kela bekamma magale mana shuddanagi gandanodane bala bekamma ||

Atte mavaganji kondu nadeya bekamma magale| chittadollabhanakkareyanu padeya bekamma |
hottu hottige maneya kelasa mada bekamma magale hattu mandi oppuva hage nudiya bekamma||


Kottu kombuva nentarodane dvesha bedamma| magale attu umbuva kaladalli ata bedamma |
hatti bagilalli bandu nilla bedamma| magale katti haluva gandanodane sittu bedamma||


Nerehoreyavarige nyayavannu hela bedamma| magale garuva kopa matsaravannu mada bedamma |
parara nindipa hengalodane sera bedamma |magale guru purandara vittlana smaraneya mareya bedamma||

You can listen to the song here : https://youtu.be/uXldv83qwds by Dr.Raj kumar