ನಾ ಮಾಡಿದ ಕರ್ಮ ಬಲವಂತವಾದರೆ / Na madida karma balavantavadare

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವದೇನೊ ದೇವ

ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣಿಯಲ್ಲಿ ಬರೆದುದಕೆ

ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಸಂಧ್ಯಾನ ಜಪತಪ ನೀಗಿ
ದಾನವಂತಕ ನಿನ್ನ ಧ್ಯಾನವ ಮಾಡದೆ
ಶ್ವಾನನಂತೆ ಮನೆಮನೆಯ ತಿರುಗುತಲಿದ್ದೆ

ಅತಿಥಿಗಲಿಗೆ ಅನ್ನ ಕೊಟ್ಟವನಲ್ಲ ಪರ-
ಸತಿಯರ ಸಂಗ ಅರಘಳಿಗೆ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿ ಯಾವುದೆನಗಿನ್ನು ಗರುಡುಗಮನ ಕೃಷ್ಣ

ಇನ್ನಾದರು ನಿನ್ನ ದಾಸರ ಸಂಗವಿತ್ತು
ಮನ್ನಿಸಿ ಸಲಹಯ್ಯ ಮನ್ಮಥಜನಕ
ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ
ಪನ್ನಂಗಶಯನ ಶ್ರೀ ಪ್ರುರಂದರವಿಠಲ

Lyrics in English

Na madida karma balavantavadare
Ni maduvudeno deva ||pa||

Samanyavallavidu brahma bareda baraha
Nemadindali enna haneyalli baredudake ||a.pa||

Atithigalige anna kottavanalla, para-
Satiyara sangagala bittavanalla
Matihina nanagi marulagiddeno deva
Gatiyavudinnu garuda gamana krishna ||

Annapanangalige agraganyanagi
Snana japa sandhyana tapava nigi
Danavantaka ninna dhyanava madade
Shvanadante mane mane tirugutalidde ||

Innadaru ninna dasara sangavittu
Mannisi salahayya manmatha janaka
Anyarobbara kane Adarisuvarilla
Pannaga Shayana sri purandara vithala ||

Listen to the song here : https://youtu.be/ZGY8wvoRNvo

ಎನ್ನ ಪಾಲಿಸೋ ಕರುಣಾಕರ /Enna Paliso Karunakara

ಎನ್ನ ಪಾಲಿಸೋ ಕರುಣಾಕರ ।
ಪನ್ನಗಶಯನ ಗದಾಧರ ॥

ದೇವಕಿನಂದನ ಹರಿಮಧುಸೂದನ ।
ಅಸುರಾಂತಕ ಮುರಳೀಧರ ।
ಬಿಸರುಹನಾಭ ಸರ್ವೇಶನೆ ಮುನಿ-
-ಮಾನಸಸಂಚಾರ ಮಾಧವ ॥೧॥

ಪರಮಪುರುಷ ಉರಗಾಶನವಾಹನ ।
ಕರುಣಾರ್ಣವ ವಡವಾನಲ ।
ಸರಸಿಜೋದ್ಭವ ಗಿರಿಜಾವಲ್ಲಭನುತ ।
ವರಸುಜನಾವಳಿಪಾಲನ ॥೨॥

ಕಾವನಪಿತ ಮುಚಕುಂದವರದ ರಾ-
-ಜೀವನಯನ ನಾರಯಣ ।
ಶ್ರೀವತ್ಸಲಾಂಛನ ಗುರುಮಹೀಪತಿ ।
ಜೀವನಸಖ ಶ್ರೀಕೃಷ್ಣನ ॥೩॥

Lyrics in English

Enna Paliso Karunakara ||pa||

Punnaga Shayana GadhaaDhara ||a.pa||

Devaki Nandana Harimadhusudhana,
Asuranthaka Muralidhara
Bisaruvanaabha, sarvashane munimaanasa sanchare maanava||

Parama purusha uragashana vaahana
Karunaarnava vadavaanala
Sarasijodbhava girija vallabhanutha,
Varasujanaavali paavana ||

Kaavanapitha muchakunda varadana
Jeevanayana Naarayana
Srivathsalochana Gurumayipathisutha
Jeevanasakha shree krishnana||

Video link : https://youtu.be/cyN8I2QTPEk by Sri Vidyabhushana Theertha Swamiji

https://youtu.be/503TYWHf_Tc by Pandit Bhimsen Joshi

ದಾಸನ ಮಾಡಿಕೋ ಎನ್ನ /Dasanna madiko enna

ದಾಸನ ಮಾಡಿಕೊ ಎನ್ನ
ಸ್ವಾಮಿ ಸಾಸಿರನಾಮದ ವೆಂಕಟರಮಣ || ಪ ||

ದುರ್ಬುದ್ಧಿಗಳನೆಲ್ಲ ಬಿಡಿಸೊ
ನಿನ್ನ ಕರುಣಕವಚವ ಎನ್ನ ಹಣೆಗೆ ತೊಡಿಸೊ |
ಚರಣಸೆವೆ ಎನಗೆ ಕೊಡಿಸೊ
ಕರಪುಷ್ಪವ ಎನ್ನ ಶಿರದಲ್ಲಿ ಮೂಡಿಸೊ || ೧ || ದಾಸನ ||

ದೃಢಭಕ್ತಿ ನಿನ್ನಲ್ಲಿ ಬೇಡಿ
ನಾ ಅಡಿಗೆರುಗವೆನಯ್ಯ ಅನುದಿನ ಪಾಡಿ |
ಕೆಡಗಣ್ಣಿಲೆನ್ನ ನೊಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ || ೨ || ದಾಸನ ||

ಮೊರೆಹೊಕ್ಕಾವರ ಕಾವ್ಯ ಬಿರೆದು
ಎನ್ನ ಮರೆಯದೆ ರಕ್ಷಣ ಮಾಡಯ್ಯ ಪೊರೆದು |
ದುರಿತಗಳನ್ನು ತರಿದು
ಸಿರಿ ಪುರಂದರವಿಠ್ಠಲ ಎನ್ನನು ಪೊರೆದು || ೩ || ದಾಸನ ||

Lyrics in English

Dasanna madiko enna swami sasira namada venkataramana ||pa||

Durubuddhigalanella bidiso ninna karuna kavachavenna haramakke todiso|
charana seve enage kodiso abhaya kara pushpavenna shiradalli mudiso|


Drudha bhakti ninnalli bedi ninnadigeraguvenayya anudina padi
kadegannilekenna nodi biduve kodu ninna dhyanava mana shuchi madi|


Mare hokkarava kava birudu enna mareyade rakshane madayya poredu
duritagalellava taridu siri purandara vittala ennanu poredu |

Video link here : https://youtu.be/GMb20LHefYc by M.S.Subbalakshmi

By Putturu Narasimha Nayak : https://youtu.be/Q4ukueEzDbE

ಪೂಜಿಸಲೆಂದೇ ಹೂಗಳ ತಂದೆ /Poojisalende hoogala

ಪೂಜಿಸಲೆಂದೇ ಹೂಗಳ ತಂದೆ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ…
ತೆರೆಯೋ ಬಾಗಿಲನು ರಾಮ…
ತೆರೆಯೋ ಬಾಗಿಲನು ರಾಮ…

ಪೂಜಿಸಲೆಂದೇ ಹೂಗಳ ತಂದೆ

ಮೋಡದಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ…..ಆ…..ಅ…..
ಮಾಣಿಕ್ಯದಾರತಿ ಉಷೆತಂದಿಹಳು
ತಾಮಸವೇಕಿನ್ನು ಸ್ವಾಮಿ….
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ…
ಪೂಜಿಸಲೆಂದೇ ಹೂಗಳ ತಂದೆ

ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ – 2
ಸ್ವೀಕರಿಸು ನನ್ನಾ…ಸ್ವಾಮಿ
ತೆರೆಯೋ ಬಾಗಿಲನು ರಾಮ…..

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ…
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ….

Lyrics in English

Poojisalende hoogala tande
Poojisalende hoogala tande
Darushana kori na ninde
Tereyo Bagilanu Rama
Tereyo Bagilanu Rama
Poojisalende hoogala tande

Moodada mele chinada Neeru , chelutha sagide honnina theru
Moodada mele chinada Neeru , chelutha sagide honnina theru
Manikyadarathi aaaaa..
Manikyadarathi Ushe tandihalu
tamasvekinu swami
Tereyo Bagilanu Rama
Poojisalende hoogala tande
Darushana kori na ninde
Poojisalende hoogala tande

Oolidaru chenna ,Munidaru chenna ,ninna asareye balige chenna
Oolidaru chenna ,Munidaru chenna ,ninna asareye balige chenna
na ninna padada dhooladaru chenna
na ninna padada dhooladaru chenna
swikarisu nannaa swami
Tereyo Bagilanu Rama
Poojisalende hoogala tande
Darushana kori na ninde
Tereyo Bagilanu Rama
Poojisalende hoogala tande

Video link : sung by S.Janaki from the film Eradu Kanasu https://youtu.be/aG–PhHEy6Y

ಹರಿ ಭಜನೆ ಮಾಡೋ / Hari bhajane mado

ಹರಿ ಭಜನೆ ಮಾಡೋ ನಿರಂತರ |ಪ|
ಪರಗತಿಗಿದು ನಿರ್ಧಾರ ನೋಡೊ |ಅ.ಪ|

ಮೊದಲೆ ತೋರತದೆ ಮಧುರ ವಿಷಯ ಸುಖ
ಕಡೆಯಲ್ಲಿ ದುಃಖ ಅನೇಕ|

ವೇದಶಾಸ್ತ್ರಗಳನೋದಿದರೇನು
ಸಾಧನೆಗಿದು ನಿರ್ಧಾರ|

ಸಾರವೋ ಬಹು ಸಂಸಾರ ವಿಮೋಚಕ
ಸೇರೋ ಹಯವದನನ್ನ|

Lyrics in English

Hari bhajane mado nirantara paragatigidu nirdhara nodo ||pa||

Modalu torutide madhura vishaya sukha kadeyali duhkha anrkha nodo|

Veda shastragala odidarenu sadhanakidu nirdhara nodo |

Saravu bahu samsara vimochaka shri hari helo hayavadananna nodo |

You can listen to the song here : by Sri Vidyabhushana Theertha Swamiji https://youtu.be/E4O1aqOQtyA

By Sri Upendra Bhat : https://youtu.be/lS8qyGWJz50

By Pandit Bhimsen Joshi : https://youtu.be/Ug9V8M7a7zs

ಅಂತರಂಗದಲಿ ಹರಿಯ ಕಾಣದವ/Antarangadali hariya kaanadava

ರಚನೆ : ವ್ಯಾಸರಾಯರು

ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟು ಕುರುಡನೋ                               ||ಪ||

ಸಂತತ ಶ್ರೀ ಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೋ ಎಂದೆಂದಿಗೂ         ||ಅ.ಪ||

ಹರುಷದಿಂದಲಿ ನರಹರಿಯ ಪೂಜೆ ಮಾಡದವನೆ ಕೈ ಮುರಿದವನೊ
ಕುರುವರಸೂತನ ಮುಂದೆ ಕೃಷ್ಣಾಯೆಂದು ಕುಣಿಯದವನೆ ಕುಂಟನೊ ||

ನರಹರಿ ಚರಣೋದಕವ ಧರಿಸದ ಶಿರ ನಾಯುಂಡ ಹೆಂಚು ಕಾಣೊ
ಸುರವರ ಕೃಷ್ಣ ಪ್ರಸಾದವಿಲ್ಲದ ಊಟ ಸೂಕರ ಭೋಜನವೊ ಎಂದೆಂದಿಗೂ       ||

ಅಮರೇಶ ಕೃಷ್ಣಗರ್ಪಿತವಲ್ಲದ ಕರ್ಮ ಆಸತಿಯ ವ್ರತನೇಮವೊ
ರಮಯರಸಗೆ ಪ್ರೀತಿಯಿಲ್ಲದ ವಿತರಣೆ ರಂಡೆಕೊರಳ ಸೂತ್ರವೊ ||

ಕಮಲನಾಭನ ಪಾಡಿ ಪೊಗಳದ ಸಂಗೀತ ಗಾರ್ಧಭರೋಧನವೋ
ಮಮತೆ ಇಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ ಎಂದೆಂದಿಗೂ ||

ಜರೆ ಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟು ಸುರೆಯ ಸೇವಿಸಬೇಡವೊ
ಸುರಧೇನುವಿರಲಾಗಿ ಸೂಕರ ಮೊಲೆಹಾಲು ಕರೆದು ಕುಡಿಯಬೇಡವೊ||

ಕರಿ ರಥ ತುರಗವಿರಲು ಬಿಟ್ಟು ಕೆಡಹುವ ಕತ್ತೆಯೇರಲು ಬೇಡವೊ
ಪರಮಪದವನೀವ ಸಿರಿಕೃಷ್ಣನಿರಲಾಗಿ ನರರ ಸೇವಿಸಬೇಡವೊ ಎಂದೆಂದಿಗೂ   ||

Lyrics in English

Antarangadali hariya kanadava huttu kurudano||pa||

Santata shri krishna charita keledava jadamati kirudano endendigu||a.pa|

Harushadindali narahariya pujeya madadava kai muridavano
kuruvara sutana munde krishna endu kuniyadava kuntano endendigu ||

Narahari charanodhakava dharisada shura naayunda henchu kaano |suravara krishna prasadavillada ota sookara bhojanavo endendigu ||

Amaresha krishnagarpitavallada karma asatiya vrata nemavo | ramayarasage preetiyillada vitarane randekorala sootravo ||

Kamalanabhana padi pogalada sangita gardhabha rodhanavo|
mamate indali keshavage namaskara madadava mragav9, endendigu||

Jare puttu maranava todeva sudheya bittu sureya sevisabedavo | suradhenuviralaagi sookara molehaalu karedu kudiyabedavo ||

Kari ratha turagaviralu bittu kedahuva katte erali bedavo
parama padava niva siri krishaniralagi sevisa bedavo endendigu ||

Youtube link: The song by Sri Ananth kulakarni https://youtu.be/jl0f_4pD_5U

ಅಚಾರವಿಲ್ಲದ ನಾಲಿಗೆ /Acharavillada naalige

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ                    || ಪ ||
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಹ ನಾಲಿಗೆ   || ಅ.ಪ || 

ಪ್ರಾತಃ ಕಾಲದೊಳೆದ್ದು ನಾಲಿಗೆ 
ಶ್ರೀಪತಿ ಎನ್ನಬಾರದೆ ನಾಲಿಗೆ
ಪತಿತಪಾವನ ನಮ್ಮ ರತಿಪತಿ ಜನಕನ 
ಸತತವು ನುಡಿ ಕಂಡ್ಯ ನಾಲಿಗೆ                || ೧ ||

ಚಾಡಿಯ ಹೇಳಲು ಬೇಡ ನಾಲಿಗೆ 
ನಿನ್ನ ಬೇಡಿ ಕೊಂಬೆನು ನಾಲಿಗೆ
ರೂಢಿಗೊಡೆಯ ಶ್ರೀ ರಾಮನ ನಾಮವ 
ಪಾಡುತಲಿರು ಕಂಡ್ಯ ನಾಲಿಗೆ                 || ೨ ||

ಹರಿಯ ಸ್ಮರಣೆ ಮಾಡು ನಾಲಿಗೆ 
ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠ್ಠಲರಾಯನ 
ಚರಣ ಕಮಲ ನೆನೆ ನಾಲಿಗೆ                 || ೩ ||

Lyrics in English

Acharavillada naalige
ninna neecha buddhiya bidu nalige

vicharavillade parara dooshipudakke,
chaachi kondiruvantha naalige.. ll Achara ll

Pratahkaladoleddu naalige,
siri pathiyennabarade naalige
pathita pavana namma ratipatijanakana
sathathavu nudi kandya naalige ll1||

Chadi helalu beda nalige, ninna
bedikombuvenu nalige
roodhigodeya sriramana namava
paduthaliru kandya naalige ll 2 ll

Hariya smarane madu naalige
Narahariya bhajise kandya nalige
varada purandara vittalarayana
charana kamala nene naalige ||3 ||

Video link : This song from film Upasane, sung by S.Janaki & The song is composed by Purandara Dasaru https://youtu.be/VhSeotVnR08

By Sri Vidyabhushana Theertha Swamiji : https://youtu.be/EUJUbJvt4Lg

ಊರಿಗೆ ಬಂದರೆ ದಾಸಯ್ಯ /Urige bandare dasayya

ಊರಿಗೆ ಬಂದರೆ ದಾಸಯ್ಯ ನಮ್ಮ
ಕೇರಿಗೆ ಬಾ ಕಂಡ್ಯ ದಾಸಯ್ಯ

ಕೇರಿಗೆ ಬಂದರೆ ದಾಸಯ್ಯ ಗೊಲ್ಲ
ಕೇರಿಗೆ ಬಾ ಕಂಡ್ಯ ದಾಸಯ್ಯ

ಕೊರಳೊಳು ವನಮಾಲೆ ಧರಿಸಿದವನೆ ಕಿರು
ಬೆರಳಲಿ ಬೆಟ್ಟವನೆತ್ತಿದನೆ
ಇರುಳು ಹಗಲು ನಿನ್ನ ಕಾಣದೆ ಇರಲಾರೆ
ಮರುಳು ಮಾಡಿದಂಥ ದಾಸಯ್ಯ

ಕಪ್ಪು ವರ್ಣದ ದಾಸಯ್ಯ ಕಂ-
ದರ್ಪನ ಪಿತನೆಂಬೊ ದಾಸಯ್ಯ
ಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆ
ಅಪ್ಪನ ಕೊಡುವೆನು ದಾಸಯ್ಯ

ಮುಂಗೈ ಮುರಾರಿ ದಾಸಯ್ಯ ಚೆಲ್ವ
ಪೊಂಗೊಳಲೂದುವ ದಾಸಯ್ಯ
ಹಾಂಗೇ ಪೋಗದಿರು ದಾಸಯ್ಯ ಹೊ-
ನ್ನುಂಗುರ ಕೊಡುವೆನು ದಾಸಯ್ಯ

ಸಣ್ನ ನಾಮದ ದಾಸಯ್ಯ ನಮ್ಮ
ಸದನಕ್ಕೆ ಬಾ ಕಂಡ್ಯ ದಾಸಯ್ಯ
ಸದನಕೆ ಬಂದರೆ ದಾಸಯ್ಯ ಮಣೀ-
ಸರವನು ಕೊಡುವೆನು ದಾಸಯ್ಯ

ಸಿಟ್ಟು ಮಾಡದಿರು ದಾಸಯ್ಯ ಸಿರಿ
ಪುರಂದರವಿಟ್ಠಲ ದಾಸಯ್ಯ
ರಟ್ಟು ಮಾಡದಿರು ದಾಸಯ್ಯ ತಂ-
ಬಿಟ್ಟು ಕೊಡೂವೆನು ದಾಸಯ್ಯ

Lyrics in English

Urige bandare dasayya namma kerige ba kandya dasayya||pa||

Kerige bandare dasayya golla kerige ba kandya dasayya||a.pa||

Koralolu vanamale dharisidane kiri beralali bettavanentidane
irulu hagalu ninna kanade iralare marulu madidantha dasayya||1||

Kappu varnada dasayya kandarpana pitanembo dasayya
appikondu namma manasige bandare appava koduvenu dasayya ||2||

Mundenu dari dasayya chelva pongolaluduva dasayya
hange pogadiru dasayya honnangura koduvenu dasayya

Sanna namada dasayya namma sadanake ba kandya dasayya
sadanake bandare dasayya mani saravanu koduvanu dasayya||4||

Sittu madadiru dasayya siri purandara vittala dasayya
rattu madadiru dasayya tambittu koduvanu dasayya ||5||

Video link : by Shashidhara Kote https://youtu.be/t6Bb2zO2IN4

By Dr.Balamurali Krishna https://youtu.be/WOrWtQmWw2s

ಆರಿಗೆ ವಧುವಾದೆ /Arige vadhuvade

ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ

ಶರಧಿಬಂಧನ ರಾಮಚಂದ್ರ ಮೂರುತಿಗೋ
ಪರಮಾತ್ಮ ಸಿರಿಯನಂತಪದ್ಮನಾಭನಿಗೋ
ಸರಸಿಜನಾಭ ಜನಾರ್ದನ ಮೂರುತಿಗೋ
ಎರಡು ಹೊಳೆಯ ರಂಗಪಟ್ಟಣವಾಸಗೋ

ಚೆಲುವ ಬೇಲೂರ  ಚೆನ್ನಿಗರಾಯನಿಗೋ
ಕೆಳದಿ ಹೇಳುಡುಪಿನ ಕೃಷ್ಣರಾಯನಿಗೋ
ಇಳೆಯೊಳು ಪಂಡರಪುರನಿಲಯ ವಿಠಲೇಶಗೋ
ನಳಿನಾಕ್ಷಿ ಹೇಳು ಬದರಿ ನಾರಯಣಗೋ

ಮಲಯಜಗಂಧಿ ಬಿಂದುಮಾಧವ ರಾಯಗೋ
ಸುಲಭದ ವರ ಪುರುಷೋತ್ತಮನಿಗೋ
ಫಲದಾಯಕ ನಿತ್ಯಮಂಗಳನಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ

ವಾಸವಾರ್ಚಿತ ಕಂಚಿ ವರದರಾಜ ಮೂರುತಿಗೋ
ಅಸುರಾರಿ ಶ್ರೀಮುಷ್ಣದಾದಿ  ವರಹನಿಗೋ
ಶೇಷಶಾಯಿಯಾದ ಶ್ರಿರಂಗನಾಯಕಗೋ
ಸಾಸಿರನಾಮದೊಡೆಯ ಅಳಗಿರಿಯೀಶಗೋ

ಶರಣಾಗತರ ಪೊರೆವ ಶಾರಂಗಪಾಣಿಗೋ
ವರಗಳನೀವ ಶ್ರೀನಿವಾಸಮೂರುತಿಗೋ
ಕುರುಕುಲಾಂತಕ ರಾಜಗೊಪಾಲ ಮೂರುತಿಗೋ
ಸ್ಥಿರವಾದ ಪುರಂದರವಿಠಲರಾಯನಿಗೋ

Lyrics in English

Arige vadhuvade ambujakshi
ksheerabdhi kannike shri mahalakumi ||

Sharadhi bandhana ramachandra murutigo
paramatma ananta padmanabhanigo
sarasijanabha janardhana  murutigo
eradu holeya ranga pattana vasanigo

Cheluva beluru chennigarayanigo
gelati  helu  udupiya krishnarayanigo
ileyalu pandarapura vitaleshago
nalinakshi pelu badari narayaaago ||

Malaya jagandhi bindhu madhavarayago
sulabha devara deva purushotamago
phaladayaka nitya mangala nayakago
cheluve nachade pelu shri venkateshago ||

Vasavarchita kanchi varadarajanigo
asuradi shri mushna varahanigo
sheshashayiyada shriman narayanago
sasira namadodeya alagireeshago||

Sharanagata poreva saranga panigo
varagala neeva shrinivasago
kurukulantaka namma raja gopalago
sthiravagi pelu purandara vittala rayanigo||


by Smt.Sangeetha Katti

By Sri Raj Kumar Bharathi

ಇದು ಭಾಗ್ಯ ಇದು ಭಾಗ್ಯ /Idu bhagya idu bhagya

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಪದುಮನಾಭನ ಪಾದಭಜನೆ ಸುಖವಯ್ಯ

ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳು

ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧುಜನರೊಳಗೆ

ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕು
ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ
ಮಧ್ವ ಮತಾಬ್ಧಿಯಲಿ ಮೀನಾಗಿ ಇರಬೇಕು
ಶುದ್ಧನಾಗಿರಬೇಕು ಕರಣತ್ರಯಂಗಳಲಿ

ವಿಷಯಭೋಗದ ತೃಣಕೆ ಉರಿಯಾಗಿ ಇರಬೇಕು
ನಿಶಿ ಹಗಲು ಶ್ರೀಹರಿಯ ಭಜಿಸಬೇಕು
ವಸುಧೆಯೊಳು ಪುರಂದರವಿಠಲನ ನಾಮವ
ಹಸನಾಗಿ ನೆನೆನೆನೆದು ಸುಖಿಯಾಗಬೇಕು

Lyrics in English

Idu bhagya idu bhagya idu bhagyavayya |
padumanabhana pada bhajane sukhavayya ||

Kallagi irabeku kathiNa bhava toreyolage |
billagi irabeku ballavarolage |
mellane madhavana manadi mechchisabeku |
bellavagirabeku bandhu janarolage |

Buddhiyali tanumanava tiddikolutirabeku |
muddagi irabeku muniyogigalige |
madhva matabdhiyali minagi irabeku
shuddhanagirabeku karana trayangalali ||

Vishhaya bhogada trinake uriyagi irabeku |
nishihagalu shrihariya dhyanisalubeku |
vasudheyolu purandara vittalana namava |
hasanagi nenenenedu sukhiyagabeku |

Listen to the song here by Sri Upendra Bhat https://youtu.be/ON_w3DheEQo

By Vidyabhushana Theertha Swamiji https://youtu.be/vjwur4r-eU4