
ಬಂಧು ತ್ರಿಜಗಕೆ ಶ್ರೀ ಹರಿಯಲ್ಲದೆ ಮಿಕ್ಕ
ಬಂಧುಗಳದಾರಿಗಾರಿದ್ದರೇನು ।।ಪ।।
ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ ಆ
ನೆಗಳೇನ ಮಾಡುತಿರ್ದವಡವಿಯಲ್ಲಿ
ನಗಜೆಯಾಳ್ದನ ಬ್ರಹ್ಮೇತಿ ಬಂದು ಕಡಲಾಗಿ ರುದ್ರಾ
ದಿಗಳೇನ ಮಾಡುತಿರ್ದರಾ ಶೈಲದೊಳಗೆ ।।೧।।
ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲು
ಮಂಡಲಪತಿ ಏನ ಮಾಡುತಿರ್ದನು
ಮಿಂಡಿ ಪೆಣ್ಣನು ಸಭೆಯಲಿ ಸೀರೆ ಸುಲಿಯಲು
ಗಂಡರೈವರು ನೋಡಿ ಏನು ಮಾಡುತಿರ್ದರಯ್ಯ ।।೨।।
ಮೃಗ ಚಕ್ರವರ್ತಿ ಬಹುವರನಾಗಿ ಪೋಗುತ್ತಿರೆ
ಮಿಗೆ ಸತಿಸುತರೇನ ಮಾಡುತಿರ್ದರು
ಮೃಗ ಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆ
ಮಿಗು ಬಂಧುಗಳದಾರಿಗಾರಿದ್ದರೇನು ।।೩।।
Lyrics in English
Bandhu trijagake Sri hariyallade mikka
bandhugaladarigariddarenu || pa ||
Negala kaiyalli maatangavu sikki odaralaagi aa
Negalena maadutirda vadaviyalli
Nagajeyaldana Brahmeti bandu kadalaagi Rudra
Digalena maadutirdara shailadolage || 1 ||
Dindeya margadi malataayi magan hodeyalu
Mandalapati ena maadutirdanu
Mindi pennanu sabheyalli seere suliyalu
Gandarivaru nodi enu maadutirdarayya || 2 ||
Mruga chakravarti bahuvaranaagi poguttire
Miga satisutarenna maadutirdaru
Mruga maanavaakaara kaaginileyadikeshavanallade
Migu bandhugaladaarigaariddarenu || 3 ||
Video is not available at this moment.








