ಏನ ಪೇಳಲಿ ಗೋಪಿ ನಿನ್ನ ಮಗನ / Ena pelalu gopi Ninna magana

ಏನ ಪೇಳಲಿ ಗೋಪಿ ನಿನ್ನ ಮಗನ ಜಾಲ
ಮಾನ ತಪ್ಪಿ ಬಂದ ಮನೆಯೊಳಗೆ ಗೋಪಿ  ||ಏನ ಪೇಳಲಿ||

ಕೊಡ ಹಾಲು ಕುಡಿದನೆ
ಗಡಿಗೆಯನೊಡೆದನೆ    ||ಕೊಡ||
ಅಡಗಿದ್ದನೆ ದೊಡ್ಡ ಕೊಡದೊಳಗೇ||೨||
ಹುಡುಗ ಸಿಕ್ಕಿದನೆಂದು
ಹೊಡೆಯಲು ಹೋದರೆ ||ಹುಡುಗ||
ಬಡವರ ಮಗನೇನೆ
ಹೊಡೆಯಲಿಕ್ಕೆ ಗೋಪಿ ||ಬಡವರ||  ||ಏನ ಪೇಳಲಿ||

ಅಳಿಯನ ವೇಷದಿ
ಮಗಳ ಕರೆಯ ಬಂದ.  ||ಅಳಿಯ||
ಕಲಹವ ಮಾಡಿದ ತಾ ಕಳಿಸೆಂದ||೨||
ಒಲುಮೆಯಿಂದಲಿ ತಿಂಗಳೆರಡಿಟ್ಟುಕೊಂಡರೆ||೨||
ಗಿಳಿಯಂಥ ಹೆಣ್ಣಿನ ಕೆಡಿಸಿದನೆ  ||೨||  ||ಏನ ಪೇಳಲಿ||

ಇಷ್ಟೊಂದು ಸಿಟ್ಟೇಕೆ ಪುಟ್ಟ ಕೃಷ್ಣನ ಮೇಲೆ||೨||
ಪುಟ್ಟಿಸಬೇಡಿರೆ ಅನ್ಯಾಯವ ॥೨||
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ||೨||
ದೃಷ್ಟಿಸಿ ನೋಡಿದರೆ ತೊಟ್ಟಿಲಿನೊಳಗೆ ||೨||
                                ||ಏನ ಪೇಳಲಿ||

Ena pelalu gopi Ninna magana jala
mana tappi Banda maneyolage gopi || Ena pelalu ||

Koda halu kudidane
gadigeyanodedane ||
adagiddane dodda kodadolage ||
huduga sikkidanendu
hodeyalu hodare ||
badavara manegene
hodeyalikke gopi || Ena pelalu ||

Aliyana veshadi
magala kareya Banda ||
kalahava maḍida taa kalisenda ||
olumeyindali tingaleradittukondare ||
giliyantha hennina kedisidane ||

Ishtondu sitteke putta Krishnana mele
puttisabedire anyayava ||
srushtigodeya namma purandaravittalana
drishtisi nodidare tottilinolage ||

Leave a Reply