ಆವನಾವನು ಕಾಯ್ದ ಅವನಿಯೊಳಗೆ / Aavanavanu kayda avaniyolage

ಆವನಾವನು ಕಾಯ್ದ ಅವನಿಯೊಳಗೆ
ದೇವ ದೇವೇಶ ಶ್ರೀ ಹರಿಯಲ್ಲದೆ                    ||ಪ||

ಆವ ತಂದೆಯು ಸಲಹಿದನು ಪ್ರಹ್ಲಾದನ
ಆವ ತಾಯಿ ಕಾಯ್ದಳು ಧ್ರುವರಾಯನ||
ಆವ ಮಗ ಸಲಹಿದನು ಆ ಉಗ್ರ ಸೇನನ
ಜೀವಂಗೆ ಪೋಷಕನು ಶ್ರೀ ಹರಿಯಲ್ಲದೆ          ||೧||

ಆವ ಬಾಂಧವರು ಸಲಹಿದರು ಆ ಗಜರಾಜನ
ಆವ ಪತಿ ಕಾಯ್ದ ದ್ರೌಪದಿಯ ಮಾನ
ಆವ ಸೋದರ ಸಲಹಿದನು ಆ ವಿಭೀಷಣನ
ಜೀವರಿಗೆ ದಾತೃ ಶ್ರೀ ಹರಿಯಲ್ಲದೇ               ||೨||

ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ
ಆವ ರಕ್ಷಕನು ಪಶು ಜಾತಿಗಳಿಗೆ
ಆವ ಪೋಷಕನು ಗರ್ಭದಲ್ಲಿಪ್ಪ ಶಿಶುವಿಗೆ
ದೇವ ಸಿರಿ ಪುರಂದರವಿಠಲನಲ್ಲದಲೆ             ||೩||

Lyrics in English

Aavanavanu kayda avaniyolage
deva devesha Shree hariyallade || pa ||

Ava tandeya salahidanu prahladana
aava tayi kaydalu dhruvarayanu ||
aava maga salahidanu aa ugra senana
jeevange poshakanu Shree hariyallade || 1 ||

Aava bandhavaru salahidanu aa gajarajana
aava Pati kayda droupadiya maana
aava sodari salahidanu aa vibhishanana
jeevarige daatra Shree hariyallade || 2 ||

Aavanadhara adaviyolippa mrugagalige
aava rakshakanu pashu jatigalige
aava poshakanu garbhadallippa shishuvige
deva siri purandara vittalanalladale || 3 ||

ಕಾಣದೆ ನಿಲ್ಲಲಾರೆ ಕಮನೀಯ / Kaanade nillalare kamaneeya

ಶ್ರೀ ವ್ಯಾಸರಾಯರ ಕೃತಿ

ಕಾಣದೆ ನಿಲ್ಲಲಾರೆ ಕಮನೀಯ
ಮೂರುತಿಯ ಪ್ರಾಣೇಶನ ತೋರೆ ಗಿಣಿಯೆ ||ಪ||

ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆ
ಜಾಣೆ ಕೃಷ್ಣನ ತೋರೆ ಗಿಣಿಯೆ ||ಅ.ಪ.||

ಮಕರ ಕುಂಡಲಧರನ ಮಕರಧ್ವಜನ ಪಿತನ
ಮಕುಟ ಭೂಷಣನ ತೋರೆ ಗಿಣಿಯೆ ಮಕರಾಕ್ಷ
ಸಂಹರನ ಮಕರಾರಿ ರಕ್ಷಕನ
ಮಕರ ಶಿಕ್ಷಕನ ತೋರೆ ಗಿಣಿಯೆ ||1||

ಇಂದು ರವಿಲೋಚನನ ಇಂದು ನೀ
ಕರೆತಾರೆ ಗಿಣಿಯೆ ಇಂದುಶೇಖರನು
ತನ ಇಂದಿರೆಯರಸನ ತಂದು
ತೋರೆ ಮುದ್ದುಗಿಣಿಯೆ ||2||

ಒಂದು ನಿಮಿಷವೊಂದು ಯುಗವಾಗಿ |
ತೋರಿತೆ ಸೌಂದರ್ಯನ ತೋರೆ ಗಿಣಿಯೆ
ಮಂದಮಾರುತ ಸೋಕೆ ಮರುಳುಗೊಂಡೆನೆ
ಎನ್ನಮಂದಿರಕೆ ಕರೆತಾರೆ ಗಿಣಿಯೆ ||3||

ಕಾಯಜನ ಬಾಣದಲಿ ಕಾಯವೆಲ್ಲವು
ಬಹಳ ಘಾಯವಾಯಿತು ನೋಡೆ
ಗಿಣಿಯೆ ಮಾಯೆಗಳ ಮಾಡದೆ ಮಮತೆಯಿಂದಲಿ
ಎನ್ನನಾಯಕನ ಕರೆತಾರೆ ಗಿಣಿಯೆ ||4||

ಪಂಕಜೋದ್ಭವ ಪಿತನ ಪಂಕಜನಯನನ
ಪಂಕಜನಾಭನ ತೋರೆ ಗಿಣಿಯೆ
ಪಂಕಜಾಕ್ಷ ಸಿರಿಕೃಷ್ಣನ ಪದಪದ್ಮ
ಶಂಕೆಯಿಲ್ಲದೆ ತೋರೆ ಗಿಣಿಯೆ ||5||

lyrics in english

Kaanade nillalare kamaneeya
moorutiya praneshana tore giniye || pa ||

Manikya padakava mannisi ninagive
Jane Krishna tore giniye ||a.pa||

Makara kundaladhara makaradhwajana pitana
makuta bhushanana tore giniye makaraksha
samharana makarari rakshakana
makara shikshakana tore giniye || 1 ||

Indu ravilochanana indu nee
karedare giniye indushekharanu
tana indireyarasana tandu
tore mudduginiye || 2 ||

Ondu nimishavondu yugavagi
torise soundaryana tore giniye
mandamaruta soke marulugondene
Enna mandirake karedare giniye || 3 ||

Kayajana banadali kayavellavu
bahala ghayavayitu node giniye
mayegala māḍade mamateyindali
Enna nayakana karedare giniye || 4 ||

Pankajodhbhava pitana pankajanayanana
pankajanabhana tore giniye
pankajaksh siri Krishnana padapadma
shankeyillade tore giniye || 5 ||


ನೀನುಪೇಕ್ಷೆಯ ಮಾಡೆ ಬೇರೆ ಗತಿ / Neenupeksheya made bere gati

ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ ನಿಗಮಗೋಚರ ಮುಕುಂದ
ಗಾನ ರಸಲೋಲ ಆಗಮಶೀಲ ಭಕ್ತ ಪರಿಪಾಲ ಗೋಪಾಲ ಬಾಲಲೀಲ ||ಪ||

ಜಪತಪಾನುಷ್ಠಾನ ಜಪಿತನೆಂದೆನಿಸುವರೆ ಜಾಣತನವದರೊಳಗಿಲ್ಲ
ಅಪರಿಮಿತ ಕರ್ಮವನು ಅನುಸರಿಸಿ ನಡೆವುದಕೆ ನಿಪುಣತ್ವ ಮೊದಲೇ ಇಲ್ಲ
ಗುಪಿತದಲಿ ದಾನ ಧರ್ಮವ ಮಾಳ್ಪೆನೆಂದರೆ ಘನವಾದ ಧನವು ಇಲ್ಲ
ಚಪಲ ನಿಪುಣತ್ವ ಜಾಣತ್ವವಿಲ್ಲದಿಹ ಸುಪವಿತ್ರ ನೀನೆ ಅಲ್ಲದಿಲ್ಲ ||೧||

ಆನೆ ಮೊಸಳೆಗೆ ಸಿಲ್ಕಿ ಅರೆಬಾಯಿ ಬಿಡುತಿರಲು ಮೌನದಲಿ ಬಂದು ಕಾಯ್ದೆ
ಏ ನಾರಣ ಎಂದಡೆ ಅಜಮಿಳಗೆ ಮುಕ್ತಿಯನು ನೀನೊಲಿದು ಕರುಣಿಸಿತ್ತೆ
ದಾನವೇಂದ್ರನ ಕೈಯ ಕಡುನೊಂದ ಪ್ರಹ್ಲಾದಗೆ ನೀನೊಲಿದು ಪದವನಿತ್ತೆ
ದಾನವಾಂತಕ ದಿವಿಜಮುನಿ ವಂದಿತನೆ ನೀನು ಎನ್ನನು ಸಲಹದೇ ಬರಿದೆ ||೨||

ಈಷಣತ್ರಯದ ಬಯಲಾಸೆಯಲಿ ಮನಸೋತು ಬೇಸರಿದೆ ಮನದಿ ನೊಂದು
ಹೇಸಿಕೆಯ ಸಂಸಾರಸಾಗರದೊಳಗೆ ಬಿದ್ದು ಘಾಸಿಯಾದೆ ನಾನಿಂದು
ಆಸೆಯನು ಬಿಡದೆ ಕಡುಮೋಸದಲಿ ಸಿಲುಕಿರುವ ವಾಸಿಲ್ಲದವನ ಇಂದು
ದಾಸನೆನಿಸಿಯೆ ಡಂಗುರವ ಹೊಯ್ಯಲು ಆದಿಕೇಶವನು ನೀನೆ ಹರಿಯೆ ದೊರೆಯೆ ||೩||

Lyrics in English

Ninupeksheya made bere gati yarenage nigamagocara
Mukunaganarasalola agamasila baktaparipala gopala balalila ||pa||

Japatapanushthana japitanendenisuvare janatanavadarolagilla
Aparimitakarmavanu anusarisi nadevudake nipunatva modale illa
Gupitadali danadharmava malpenendare ganavada dhanavu illa
Chapala nipunatva janatvavilladiha supavitra nine alladilla ||1||

Ane mosalege silki arebayi bidutiralu maunadali bandu kayde
E narayana endade ajamilage muktiyanu ninolidu karunisitte
Danavendrana kaiya kadunonda prahladage ninolidu padavanitte
Danavantaka divijamunivanditane ninu ennanu salahade baride ||2||

Ishanatrayada bayalaseyali manasotu besaride manadi nondu
Hesikeya samsarasagaradolage biddu gasiyade nanindu
Aseyanu bidade kadumosadali silukiruva vasilladavana indu
Dasanenisiye Dangurava hoyyalu adikesavanu nine hariye doreye ||3||


ಸಕಲ ಗ್ರಹಬಲ ನೀನೆ / Sakala grahabala neene

Composer : Purandara dasa

ಸಕಲ ಗ್ರಹಬಲ ನೀನೆ ಸರಸಿಜಾಕ್ಷ
ನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೆ

ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆ
ಕವಿ ಗುರು ಶನಿಯು ಮಂಗಳನು ನೀನೆ
ದಿವರಾತ್ರಿಯು ನೀನೆ ನವ ವಿಧಾನವು ನೀನೆ
ಭವರೋಗಹರ ನೀನೆ ಭೇಷಜನು ನೀನೆ

ಪಕ್ಷಮಾಸವು ನೀನೆ ಪರ್ವಕಾಲವು ನೀನೆ
ನಕ್ಷತ್ರ ಯೋಗ ತಿಥಿಕರಣ ನೀನೆ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ

ಋತು ವತ್ಸರವು ನೀನೆ ಪೃಥಿವಿಗಾದಿಯು ನೀನೆ
ಕ್ರತು ಹೋಮ ಯಜ್ಞ ಸದ್ಗತಿಯು ನೀನೆ
ಜಿತವಾಗಿ ಎನ್ನೊಡೆಯ ಪುರಂದರವಿಟ್ಠಲನೆ 
ಶ್ರುತಿಗೆ ಸಿಲುಕದ ಅಪ್ರತಿಮ ಮಹಿಮ ನೀನೆ

lyrics in English

Sakala graha bala neene sarasijaksha ||
nikhila rakshaka neene vishwavyapakane |p|

Ravi chandra budha neene rahu krtuvu neene
kavi guru shaniyu mangalanu neene
divaratriyu neene nava vidhanavu neene
bhavarogahara neene bheshajanu neene ||1||

Pakshamasavu neenr parva kalavu neenr
nakshatra yoga tithi karanagalu neene
akshayavendu draupadiya manava kayda
pakshivahana deena rakshakanu neene ||2||

Rutu vatsaravu neene vrata yugadiyu neenr
kratu homa yaj~jna sadgatiyu neene
jitavagi yennodeya purandara vithalane
stutige silukada mahsmahimanu neene ||3||


ಪ್ರೇಣಯಾಮೋ ವಾಸುದೇವಂ / Prenayamo vasudevam

ವಂದಿತಾ ಶೇಷ ವಂದ್ಯೋರು ವ್ರಂದಾರಕಂ
ಚಂದನಾ ಚರ್ಚಿತೋದ್ಧಾರ ಪೀನಾಂಶಕಂ
ಇಂದಿರಾ ಚಂಚಲ ಪಾಂಡಗನೀರಾಜಿತಂ
ಮಂದರೋದ್ಧಾರಿ ವ್ರತೋಧ್ಭುಜ ಭೋಗಿನಂ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ ,ಪ್ರೀಣಯಾಮೊ ವಾಸುದೇವಂ

ಸ್ರಷ್ಠಿಸಂಹಾರ ಲೀಲಾವಿಲಾಸಾತತಂ
ಪುಷ್ಠ ಷಾಡ್ಗುನ್ಯ ಷದ್ವಿಗ್ರಹೋಲ್ಲಾಸಿನಂ
ದುಷ್ಟನಿಶ್ಯೇಷ ಸಂಹಾರ ಕರ್ಮೋದ್ಯತಂ
ಹ್ರಷ್ಟಪುಷ್ಟಾತಿಶಿಷ್ಟ ಪ್ರಜಾಸಂಶ್ರಯಂ
ಪ್ರೀಣಯಾಮೊ ವಾಸುದೇವಂ , ದೇವತಾ ಮಂಡಲ
ಖಂಡಮಂಡನಂ ,ಪ್ರೀಣಯಾಮೊ ವಾಸುದೇವಂ

ಉನ್ನತ ಪ್ರಾರ್ಥಿತ ಶೇಷ ಸಂಸಾಧಕಂ
ಸನ್ನತ ಲೌಕಿಕಾನಂದದ ಶ್ರೀಪದಂ
ಭಿನ್ನ ಕರ್ಮಾಶ್ರಯ ಪ್ರಾಣಿ ಸಂಪ್ರೇರಕಂ
ತನ್ನ ಕಿಂ ನೇತಿ ವಿದ್ವಸ್ತು ಮೀಮಾಂಸಿತಂ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ವಿಪ್ರಮುಖ್ಯೈ ಸದಾ ವೇದವದೋನ್ಮುಖೈ
ಸುಪ್ರತಾಪೈ ಕ್ಷಿತಿಶೇಷ್ವರೈ ಸ್ಚರ್ಚಿತಂ
ಅಪ್ರತಕ್ಯೋರುಸಂವಿದ್ಗುಣಂ ನಿರ್ಮಲಂ
ಸಪ್ರಕಾಶಾಜರಾನಂದರೂಪಂ ಪರಂ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಅತ್ಯಯೋ ಯಸ್ಯ ಕೇನಪಿ ನ ಕ್ವಾಪಿ ಹಿ
ಪ್ರತ್ಯಯೋ ಯದ್ಗುಣೋಸುತ್ತಮನಂ ಪರಃ
ಸತ್ಯಸಂಕಲ್ಪ ಏಕೋವರೇಣ್ಯೊ ವಷಿ
ಮತ್ಯನೂನೈ ಸದಾ ವೇದವಧೋದಿತಃ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಪಶ್ಯತಾಂ ದುಃಖಸಂತಾನನಿರ್ಮೂಲನಂ
ದ್ರಶ್ಯತಾಂ ದ್ರಶ್ಯತಾಮಿತ್ಯಜೇಶಾರ್ಚಿತಂ
ನಶ್ಯತಾಂ ದೂರಗಂ ಸರ್ವದಾಪ್ಯಸ್ತಮಗಂ
ವಸ್ಯತಾಂ ಸ್ವೇಚ್ಛಯ ಸಜ್ಜನೇಸ್ವಾಗತಂ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಅಗ್ರಜಂ ಯಃ ಸಸರ್ಜಾಜಮಗ್ರಯಕ್ರತಿಂ
ವಿಗ್ರಹೋ ಯಸ್ಯ ಸರ್ವೇ ಗುಣ ಯೇವಹೀ
ಉಗ್ರ ಅಧ್ಯೋಪಿ ಯಸ್ಯಾತ್ಮಜಾಗ್ರಯತ್ಮಾಜಃ
ಸದ್ ಗ್ರಹಿತಃ ಸದಾ ಯಃ ಪರಂ ದೈವತಂ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಅಚ್ಯುತೋ ಯೋ ಗುಣೈರ್ನಿತ್ಯಮೇವಾಕಿಲೈ
ಪ್ರಚ್ಯುತೋ ಶೇಷದೋಷೈ ಸದಾ ಪೂರ್ತಿತಃ
ಉಚ್ಯತೆ ಸರ್ವವೇದೋರುವಾದೈರಜಃ
ಸ್ವರ್ಚಿತೋ ಬ್ರಹ್ಮರುದ್ರೇಂದ್ರಪೂರ್ವೈಃ ಸದಾ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಧಾರ್ಯತೇ ಯೇನ ವಿಶ್ವಂ ಸದಾಜಾದಿಕಂ
ವಾರ್ಯತೇಶೇಷದುಃಖಂ ನಿಜಧ್ಯಾಯಿನಂ
ಪಾರ್ಯತೇ ಸರ್ವಮನ್ಯೈರ್ನಯತ್ಪಾರ್ಯತೆ
ಕಾರ್ಯತೆ ಚಾಖಿಲಂ ಸರ್ವಭೂತೈ ಸದಾ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಸರ್ವಪಾಪಾನಿಯತ್ಸಂಸ್ಮ್ರತೆ ಸಂಕ್ಷಯಂ
ಸರ್ವದಾ ಯಾಂತಿ ಭಕ್ತ್ಯಾ ವಿಶುಧ್ಧಾತ್ಮನಾಂ
ಶಾರ್ವಗುರ್ವಾದೀರ್ವಾಣ ಸಂಸ್ಥಾನದಃ
ಕುರ್ವತೆ ಕರ್ಮ ಯತ್ಪ್ರೀತಯೆ ಸಜ್ಜನಾಃ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ಅಕ್ಷಯಂ ಕರ್ಮ ಯಸ್ಮೀನ ಪರೆ ಸಂಪ್ರೀತಂ
ಪ್ರಕ್ಷಯಂ ಯಾಂತಿ ದುಃಖಾನಿ ಯನ್ನಾಮತಃ
ಅಕ್ಷರೊ ಯೋಜ್ಸರಃ ಸರ್ವದೈವಾಮ್ರತಃ
ಕುಕ್ಷಿಗಂ ಯಸ್ಯ ವಿಶ್ವಂ ಸದಾಜ್ಸಾದಿಕಂ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ, ಪ್ರೀಣಯಾಮೊ ವಾಸುದೇವಂ

ನಂದಿತೀರ್ಥೋರುಸನ್ನಾಮಿನೊ ನಂದಿನಃ
ಸಂದಧಾನಃ ಸದಾನಂದದೇವೆ ಮತಿಂ
ಮಂದಹಾಸಾರುಣಂ ಪಾಂಡಗದತ್ತೊನ್ನತಿ
ವಂದಿತಶೇಷದೇವಾದಿವ್ರಂದಂ ಸದಾ
ಪ್ರೀಣಯಾಮೊ ವಾಸುದೇವಂ, ದೇವತಾ ಮಂಡಲ
ಖಂಡಮಂಡನಂ ,ಪ್ರೀಣಯಾಮೊ ವಾಸುದೇವಂ

Lyrics in English

This is a part of Dwadasha stotra (8th chapter} written by sri Madhwacharyaru

Vandita shesha vandyoru vrundaarakam
Chandana charchito daara peenaamsakam
Indira chanchala paangda neerajitam
Mandarodhari vruttodhbhuja bhoginam
Preenayamo vasudevam devatha mandala khanda mandanam, preenayamo vasudevam||

Srushti samhara leelavila saatatam 
Pushta shadgunya sad-vigrahollasinam
Dushta nih shesha samhara kar modhyatam
Hrushta pushtathi shishta praja samshrayam
Preeaayamo vasudevam devata mandala khanda mandanam , preenayamo vasudevam||

Unnata prarthitha shesha samsadhakam
Sannata loukika nandada sreepadam
Bhinna karmashaya prani samprerakam
Tanna kim neti vidvatsu meemaamsitam
Preenayamo vasudevam devata mandala khanda mandanam , preenayamo vasudevam||

Vipra mukhyai sada vedava donmukhai
Supratha paikshiti shaikshvarai-schachitam
Apra tharkaryorusam vidgunam nirmalam
Sapraka shajara nandaro pamparam
Preenayamo vasudevam devata mandala khanda mandanam , preenayamo vasudevam||

Attyayo yesya kenapi na kwapihi
Pratyayo yadgune shuthamaa nam parah
Satya sadkalpa yekovaren yovashi
Matya noonai sada vedava doditah Preenayamo vasudevam devata mandala khanda mandanam , preenayamo vasudevam||

Pashyatam dukha santana nirmoolanam
Drushyatam drushyata Mityaje-sharshitam
Nashyatam dooragam sarvada-pyathmagam
Vashyatam svecchaya sajjane-swagatam 
Preenayamo vasudevam devata mandala khanda mandanam , preenayamo vasudevam||

Agrajam yah sasar jajamagya kruti
Vigraho yesya sarve guna yevahi
Ugra aadhyopi yesyatmaja gyathmajah
Sadgruhi tah sada yah param daivatam
Preenayamo vasudevam devatq mandala khanda mandanam , preenayamo vasudevam||

Achyuto yogunai nirthya mevakhilai
prachyuto shesha doshai sada purthitah
Uchyate sarva vedoruva dairajah
Svarchite bramha rundraindra purvaih sada
Preenayamo vasudevam devata mandala khanda mandanam , preenayamo vasudevam||

Dhaaryate yenah vishvam sada jaadikam
Vaaryate shesha dukham nijah dhyayinaam
Paaryate sarva manyainayath paryathe
Kaaryathe chakilam sarva bhuthai sada preemayamo vasudevam devata mandala khanda mandanam , preenayamo vasudevam||

Sarva papaniyath samsmruthe samshayam
Sarvada yanthi bhakthya vishuddatamanaam
Sarva gurvadi girvana samsthanadah
Kurvate karma yat preetaye sajjanahpreenayamo vasudevam devata mandala khanda mandanam , preenayamo vasudevam||

Akshayam karma yasmin pare swarpitham
Prakshayam yanthi dukkhani yennamatah
Aksharo yojarahah sarva daivaamrutah
Kukshigam yesya vikshwam sada jadikam
Preenayamo vasudevam devata mandala khanda mandanam , preenayamo vasudevam||

Nandi thirthoru sannamino nandinah
Sanda danahao sadananda devemateem
Manda haasaruna paagdadha thonnati
Vandita sheha devaadi vrindam sada
Preenayamo vasudevam devata mandala khanda mandanam , preenayamo vssudevam||

Click here to listen the song by Vidyabhushana theertha swamiji

ತೊರೆದು ಜೀವಿಸ ಬಹುದೆ ಹರಿ ನಿನ್ನ / Toredu jeevisa bahude hari ninna

ರಚನೆ : ಕನಕದಾಸರು
ಗಾಯನ : ವೆಂಕಟೇಶ್ ಕುಮಾರ್

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!….

ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದು
ದಾಯಾದಿ ಬಂದುಗಳ ಬಿಡಲು ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನಡಿಯ ಬಿಡಲಾಗದು !! ೧ ||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!……

ಒಡಲು ಹಸಿಯಲು ಅನ್ನವಿಲ್ಲದೆ ಇರಬಹುದು
ಪಡೆದ ಕ್ಷೇತ್ರಗಳ ಬಿಟ್ಟು ಹೊರಡಬಹುದು!
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು || ೨ ||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!….

ಪ್ರಾಣವನ್ನು ಪರರು ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲೂ ಬಹುದು
ಪ್ರಾಣಧಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು! ||೩||

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ

Lyrics in English

Composer : Sri Kanakadasaru

Toredu jIvisabahude hari ninna charanagala
baride matekinnu aritu peluvenayya

tayi tandeya bittu tapava madalu bahudu
dayadi bandhugala bidalu bahudu
raya munidare rajyava bidabahudu
kayajapita ninnadiya bidalagadu

odalu hasidare annava bidabahudu
padeda kshetrava bittu horadalubahudu
madadi makkala kadege tolagisi bidalubahudu
kadalodeya nimmadiya galige bidalagadu

pranava pararige bedidare kodabahudu
manabhimanava taggisabahudu
pranadayakanada adikeshavaraya
jana shrIkrushna ninnadiya bidalagadu