
ಕೃತಿಕಾರರು : ಶ್ರೀ ವಿಜಯದಾಸರು
ಕಂಡೆ ಕಮಲನಾಭನ ಕಣ್ಣಾರೆ ಪುಂಡರೀಕನ ಪಾಲಿನ |
ಪಂಡರಿವಾಸನ ಸಕಲ ಬೊಮ್ಮಾಂಡವ ಧರಿಸಿದನ ||೧||
ಸುಲಭ ದೇವರ ದೇವ ನಾನಾ ಪರಿಮಳ ತುಲಸಿಗೆ ವಲಿವನ |
ಕಲಿಕಾಲ ಸಲಹುವನ ಭವದ ಸಂಕಲೆ ಪರಿಹರಿಸುವನ ||೨||
ಲಿಂಗ ಸಂಗವನೀವನ ಜಗದಂತ ರಂಗ ಮೋಹನರಾಯನ |
ಮಂಗಳ ದೇವೇಶನ ಸಿರಿಪಾಂಡು ರಂಗ ನೆನಸಿಕೊಂಬನ ||೩||
ಜಗದ ಸದ್ಭರಿತ ನಾನಾ ವನದಿ ಬಿಗಿದ ಪರಾಕ್ರಮನ |
ನಗವನೆತ್ತಿದ ಧೀರನ ತನ್ನನು ಪೊಗಳಲು ಹಿಗ್ಗುವನ ||೪||
ಯಾದವ ಶಿರೋರನ್ನನ ಕೊಳಲು ಊದುವ ಚೆನ್ನಿಗನ |
ಆದಿ ಪರಮ ಪುಂಸನ ಸರ್ವ ವೇದ ನಿಕರಮಯನಾ ||೫||
ಇಟ್ಟಿಗೆಯಲಿ ನಿಂದನ ವರಂಗಳ ಕೊಟ್ಟರೆ ತಪ್ಪದವನ |
ಅಟ್ಟಿ ಖಳನ ಕೊಂದನ ವಿಜಯವಿಟ್ಠಲ ಜಗದೀಶನ ||೬||
Lyrics in English
Kande kamalanabhana kannare pundarikana palina |
pandivasana sakala bommadava dharisidane || 1 ||
Sulabha devara deva nana parimala tulasige olivana |
kalikala salahuvana bhavada sankale pariharisuvana || 2 ||
Linga sangavanevana jagadanta Ranga mohanarayana |
Mangala deveshana siripandu Ranga nenesikombana || 3 ||
Jagadambe sadbharita nana vanadi bigida parakramana |
nagavanettida dhirana tannanu pogalalu higguvana || 4 ||
Yadava shirorannana kollalu ooduva chennigana |
aadi parama pumsana sarva veda nikaramayana || 5 ||
Ittigeyali nindana varagala kottare tappadavana |
atti khalana kondana vijayavittala jagadhishana || 6 ||
