ನೋಡಿದೆ ಗಿರಿಯ ತಿರ್ಮಲನ ನಿತ್ಯ / Nodide giriyamma tirmalana nitya

ಶ್ರೀ ವಿಜಯದಾಸರ ಕೃತಿ 
ರಾಗ : ಹಿಂದೊಳ  ತಾಳ : ಆದಿ 

ನೋಡಿದೆ ಗಿರಿಯ ತಿರ್ಮಲನ ನಿತ್ಯ
ಮೂಡಲ ದಿಕ್ಕಿನಲಿಪ್ಪ ನಿರ್ಮಲನಾ ||ಪ||

ನೀರೇರ ಕೂಡಾಡಿದವನಾ ದೇವ
ನೀರೊಳಗೆ ಸದನವ ಬಿಗಿದವನಾ
ನೀರದ ಶ್ಯಾಮ ವರ್ಣನನಾ ಭವ
ನೀರಜ ಭವವಂದ್ಯಾ ದಯಾಸಾಗರನಾ ||1||

ನೀರು ಪಾದದಲಿ ಪೆತ್ತವನಾ ಮಹಾ
ನೀರು ದಾಟಿ ಮಕ್ಕಳ ತೋರಿದವನಾ
ನೀರಧಿ ಬಿಗಿದ ಪ್ರಬಲನಾ ಅಂದು
ನೀರುಪತಿಯ ಭಂಗವ ಮಾಡಿದವನಾ ||2||

ನೀರು ಕಟದ ನಿಃಸಂಗನಾ ಸರ್ವ
ನೀರು ಸೇದುವನಾಗಿ ಜಗವ ಸುತ್ತುವನ
ನೀರೊಳಗಾಡುವ ನೀರಜನಾ
ಓರ್ವ ನೀರೇಳ ನಾರಿಯ ಮಾಡಿದ ಗುಣನಾ ||3||

ನೀರಜೋದರ ನಿರ್ಮೋಹನನಾ ಏಳು
ನೀರಜ ದಳದಲ್ಲಿ ಪೊಳೆವ ಚನ್ನಿಗನಾ
ನೀರು ಬಯಲು ಮಾಡಿದವನಾ ಅನ್ನ
ನೀರೊಳಗಿದ್ದು ಜಗವ ಪೊತ್ತವನಾ ||4||

ನೀರಜಪಾಣಿ ವಲ್ಲಭನಾ ತೇಜ
ನೀರನ್ನ ತತ್ವ ವ್ಯಾಪಿಸಿಕೊಂಡವನಾ
ನೀರೆ ಗತಿಯ ಮಾಡಿದವನಾ ನಮ್ಮ
ನೀರಜಾದ್ರಿ ತಿಮ್ಮ ವಿಜಯವಿಠ್ಠಲನಾ ||5||

Lyrics in English

Nodidare giriyamma tirmalana nitya
moodala dikkinalippa nirmalyava ||pa||

Neerera koodidavana deva
neerolage sadanava bigidavana
neerada shyama varnana bhava
neeraja bhavavandya dayasagarana || 1 ||

Neeru padmadala pettavana maha
neeru dating makkala toridavana
neeradha bigida prabalana andu
neerupatiya bhangava madidavage || 2 ||

neeru katada nihsangana sarva
neeru seduvanagi jagavanu suttuvana
neerolagaduva neerajana
orva neerela nariyara maḍida gunana || 3 ||

Neerajodara nirmohanana elu
neeraja daladalli poleva channnigana
neeru bayalu madidavana anna
neerolagiddu jagavanu pottavana || 4 ||

Neerajapani vallabhana teja
neeranna tatva vyapisikondavana
neere gatiya madidavana namma
neerajadri timma vijayavittalana || 5 ||


Leave a Reply