ನಂದ ತನಯ ಗೋವಿಂದನ / Nanda tanayage govindana

ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ ||ಪ||

ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ ||ಅ.ಪ||

ದಧಿ ಘೃತ ಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ
ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ ||೧||

ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ
ಕಂಚೀಶನೆ ರಕ್ಷಿಸು ಎಂದುಸಿರುವರ ಅಂಜಿಕೆ ಬಿಡಿಪ ಮಿಠಾಯಿ ||೨||

ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ
ಜಿಪುಣ ಮತಿಗಳಿಗೆ ಸಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ ||೩||

Lyrics in English

Nanda tanaya govindana Bajipudu anandavada mithayi ||pa||

Bandhagalanu Bhava rogagalellanu nindipudu I mithayi ||a.pa||

Dadhi gruta kshirangaligimtalu bahu adhikavada mithayi
Kadali drakshi karjura rasagalanu miruvudu I mithayi ||1||

Pancha bakshyamgala shadrasannagala minchidantha mithayi
Kanchisane rakshisu emdusiruvara anjike bidipa mithayi ||2||

Japa tapa sadhanagaligimtalu bahu aparupada mithayi
Jipuna matigalige sadhyavalladiha purandara vithala mithayi ||3||

ಕುಸುಮ ಮಾಲೆಯ ತನ್ನಿರೇ ಶ್ರೀ ದೇವಿ / Kusuma maleya tannire Shree devi

ಕುಸುಮ ಮಾಲೆಯ ತನ್ನಿರೇ ಶ್ರೀ ದೇವಿ ವಿಜಯಲಕ್ಷ್ಮೀಗೆ ।ಪ।
ಕುಂಕುಮಾರ್ಚನೆ ಮಾಡಿರೇ ಶ್ರೀ ಕ್ಷೀರಸಾಗರ ತನಯಗೆ ।।ಅ . ಪ।।

ಆರಂಗ ರಂಜನಿ ವಿಷ್ಣು ಮೋಹಿನಿ ಚಕ್ರಿಣಿ ಶುಭದಾಯಿನಿ …
ಗರುಡವಾಹನ ಹರಿಯರಾಣಿಯೇ ಮಂದಗಾಮಿನಿ ಮಾನಿನಿ।
ಕಲ್ಪವೃಕ್ಷದ ಜೊತೆಗೆ ಹುಟ್ಟಿದ ಕಮಲಿನಿ ಕಮಲಾಸಿನಿ
ಚಂದ್ರವದನೇ ಚಂದ್ರಕಾಂತಿಯ ಚಂದಿರನ ನಿಜ ಸೋದರಿ ।।೧।। ।।ಕುಸುಮ।।

ನದಿಯ ಆಡಿ ಬರುವ ಮಂದಮಾರುತ ಹೂನಗೆ ….
ಕಮಲನಾಭನ ಕೈಯ ಹಿಡಿದ ಕರುಣೆ ಕಾಮಾಲೆ ಕೋಮಲೆ ।
ಮಿಂಚುಬಳ್ಳಿಯ ವೇಗದಿಂದಲಿ ನೋಟ ಬದಲಿಸೋ ಚಂಚಲೆ
ಎಂದು ನಮ್ಮನು ಮಕ್ಕಳಂದದಿ ಪೊರೆಯೆ ಮಾತೆಯೇ ಮಂಗಳೇ ।।೨।। ।।ಕುಸುಮ।।

ಮನದೇ ಧೈರ್ಯವ ತುಂಬಿಸಿ ಮುನ್ನಡೆವಲು ನೀ ಕರುಣಿಸೇ
ಬಿಡದೆ ಸಾಹಸ ಹಿಡಿದ ಕಾರ್ಯಾವ ಸಾಧಿಸೋ ಛಲ ತುಂಬಿಸೇ ।
ಜಯದ ಮಾಲೆಯ ಕೊರಳಿಗೆಂದು ನೀಡಿ ನೀ ಪರಿಪಾಲಿಸೇ
ವಿಜಯಲಕ್ಷ್ಮಿಯೇ ನಿನ್ನ ಪಾದದೇ ಬೇಡುವೆ ಪಥ ತೋರಿಸೇ ।।೩।।

Lyrics in English

Kusuma maleya tannire Shree Devi vijayalakshmige ||pa||

Kunkumarchane madise Shree kheerasagara tanayage ||a.pa||

Aaranga ranjani Vishnu mohini chakrini shubhadayini
garudavahana hariya ranige mandagamini manini |
kalpavrukshada jotege huttida kamalini kamalasini
chandravadane chandrakantiya chandirana ninja sodari ||1||

Nadiya aadi baruva mandamaruta hoo nage
kamalanabhana kaiyya hirida karuṇeya kamaleye komale |
minchuballiya vegadindali nota badaliso chanchale
endu nammanu makkalandadi poreye mateye mangalye ||2||

Manade dhairyava tumbisi munnadevalu nee karunisu |
bidade sahasa hirida karyava sadhiso Chala tumbisi |
jayada maleya kraligendu needing nee Paripalisa
vijayalakshmiye Ninna padade beduve patha torise ||3||

ನೀನುಪೇಕ್ಷೆಯ ಮಾಡೆ ಬೇರೆ ಗತಿ / Neenupeksheya made bere gati

ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ ನಿಗಮಗೋಚರ ಮುಕುಂದ
ಗಾನ ರಸಲೋಲ ಆಗಮಶೀಲ ಭಕ್ತ ಪರಿಪಾಲ ಗೋಪಾಲ ಬಾಲಲೀಲ ||ಪ||

ಜಪತಪಾನುಷ್ಠಾನ ಜಪಿತನೆಂದೆನಿಸುವರೆ ಜಾಣತನವದರೊಳಗಿಲ್ಲ
ಅಪರಿಮಿತ ಕರ್ಮವನು ಅನುಸರಿಸಿ ನಡೆವುದಕೆ ನಿಪುಣತ್ವ ಮೊದಲೇ ಇಲ್ಲ
ಗುಪಿತದಲಿ ದಾನ ಧರ್ಮವ ಮಾಳ್ಪೆನೆಂದರೆ ಘನವಾದ ಧನವು ಇಲ್ಲ
ಚಪಲ ನಿಪುಣತ್ವ ಜಾಣತ್ವವಿಲ್ಲದಿಹ ಸುಪವಿತ್ರ ನೀನೆ ಅಲ್ಲದಿಲ್ಲ ||೧||

ಆನೆ ಮೊಸಳೆಗೆ ಸಿಲ್ಕಿ ಅರೆಬಾಯಿ ಬಿಡುತಿರಲು ಮೌನದಲಿ ಬಂದು ಕಾಯ್ದೆ
ಏ ನಾರಣ ಎಂದಡೆ ಅಜಮಿಳಗೆ ಮುಕ್ತಿಯನು ನೀನೊಲಿದು ಕರುಣಿಸಿತ್ತೆ
ದಾನವೇಂದ್ರನ ಕೈಯ ಕಡುನೊಂದ ಪ್ರಹ್ಲಾದಗೆ ನೀನೊಲಿದು ಪದವನಿತ್ತೆ
ದಾನವಾಂತಕ ದಿವಿಜಮುನಿ ವಂದಿತನೆ ನೀನು ಎನ್ನನು ಸಲಹದೇ ಬರಿದೆ ||೨||

ಈಷಣತ್ರಯದ ಬಯಲಾಸೆಯಲಿ ಮನಸೋತು ಬೇಸರಿದೆ ಮನದಿ ನೊಂದು
ಹೇಸಿಕೆಯ ಸಂಸಾರಸಾಗರದೊಳಗೆ ಬಿದ್ದು ಘಾಸಿಯಾದೆ ನಾನಿಂದು
ಆಸೆಯನು ಬಿಡದೆ ಕಡುಮೋಸದಲಿ ಸಿಲುಕಿರುವ ವಾಸಿಲ್ಲದವನ ಇಂದು
ದಾಸನೆನಿಸಿಯೆ ಡಂಗುರವ ಹೊಯ್ಯಲು ಆದಿಕೇಶವನು ನೀನೆ ಹರಿಯೆ ದೊರೆಯೆ ||೩||

Lyrics in English

Ninupeksheya made bere gati yarenage nigamagocara
Mukunaganarasalola agamasila baktaparipala gopala balalila ||pa||

Japatapanushthana japitanendenisuvare janatanavadarolagilla
Aparimitakarmavanu anusarisi nadevudake nipunatva modale illa
Gupitadali danadharmava malpenendare ganavada dhanavu illa
Chapala nipunatva janatvavilladiha supavitra nine alladilla ||1||

Ane mosalege silki arebayi bidutiralu maunadali bandu kayde
E narayana endade ajamilage muktiyanu ninolidu karunisitte
Danavendrana kaiya kadunonda prahladage ninolidu padavanitte
Danavantaka divijamunivanditane ninu ennanu salahade baride ||2||

Ishanatrayada bayalaseyali manasotu besaride manadi nondu
Hesikeya samsarasagaradolage biddu gasiyade nanindu
Aseyanu bidade kadumosadali silukiruva vasilladavana indu
Dasanenisiye Dangurava hoyyalu adikesavanu nine hariye doreye ||3||


ಹಣ್ಣು ಕೊಂಬುವ ಬನ್ನಿರಿ / Hannu kombuva banniri haridasaru

ಹಣ್ಣು ಕೊಂಬುವ ಬನ್ನಿರಿ – ಹರಿದಾಸರು
ಹಣ್ಣು ಕೊಂಬುವ ಬನ್ನಿರಿ ll ಪ ll

ಚಿಣ್ಣ ಬಾಲಕೃಷ್ಣನೆಂಬ
ಕನ್ನೆಗೊನೆ ಬಾಳೆಹಣ್ಣು ll ಅ ಪ ll

ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು ll 1 ll

ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣು
ಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು ll 2 ll

ತುರುವ ಕಾಯ್ದ ಹಣ್ಣು ಉರಗನ ತುಳಿದ ಹಣ್ಣು
ಕರೆದರೆ ಕಂಬದೊಳು ಓಯೆಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲಯಾದಿಕೇಶವ ಹಣ್ಣು ll 3 ll

Lyrics in English

Hannu kombuva banniri haridasaru
hannu kombuva banniri ||pa||

hinna balakrishnanemba
kannegone balehannu ||a.pa||

Suttelu lokadi suraru bittidda hannu
bhaktara bayolu neneva hannu
artiyullavarella kolli bekadare
Nitya madhavana accha mavina hannu ||1||

Ajana padeda hannu gajava kayda hannu
nijamunigalige torisida hannu
trijagavandita palgadalodeyana hannu
sumana bhaktarella kollalu banniri hannu ||2||

Turuva kayda hannu uragana tulida hannu
karedare kambadolu oyemba hannu |
maruguva dhruvanige pattagattida hannu
karunavu kagineleyadikeshava hannu ||3||

ಹೊಡಿ ನಗಾರಿ ಮೇಲೆ ಕೈಯ್ಯ / Hodi nagari mele kaiyya

ರಚನೆ : ಶ್ರೀ ಪುರಂದರ ದಾಸರು

ಹೊಡಿ ನಗಾರಿ ಮೇಲೆ ಕೈಯ್ಯ
ಗಡಗಡ ಹೊಡಿ ನಗಾರಿ ಮೇಲೆ ಕೈಯ್ಯ ||


ಧೃಡ ಮದ್ಯನ ಪಾದ ಬಿಡದೆ ಭಾಜಿಪರಾಗ
ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||

ವೇದ ಗಮ್ಯ ಸಕಲಾರ್ಧಿನಿ ವಾರಕ
ಮೊದವೀವ ಮಧುಸೂದನ ಪರನೆಂದು||

ಗಾನಲೋಲ ತನ್ನ ಧ್ಯಾನಿಸುವರನೆಲ್ಲ
ಮಾನದಿಂದಲೆ ಕಾಯ್ವ ಶ್ರೀ ನಿಧಿ ಪರನೆಂದು ||

ಈ ಪ್ರಕೃತಿಯೊಳು ವ್ಯಾಪಕವಾಗಿಹೆ
ಶ್ರೀಪತಿ ಪುರಂದರ ವಿಠ್ಠಲನೇ ಪರನೆಂದು||

Lyrics in English

Composer : Sri Purandara dasaru

Hodi nagari mele kaiyya
gadagada hodi nagari mele kaiyya ||


Dhrada madyana paada bidade bhajiparaga
Bidisi poreva jagadodeyane paranendu ||

Veda gamya sakalaardhinivaaraka
modaveeva madhusudana paranendu ||

Gaanalola tanna dhyanisuvaranella
maanadindale kayva sri nidhi paranendu ||

Ee prakrutiyolu vyaapakavagihe
sripati purandara vittalane paranendu ||


ಎತ್ತಿರೇ ನವರತ್ನದಾರುತಿ ಕರ್ತೃರಂಗನ / Ettire navaratnadaruti kartrurangana

ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ ||ಪ||
ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ ||ಅ.ಪ||

ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ಕುಳಿಸಿರೇ |
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳಗೌರಿಗೆ ||1||

ಎರೆದು ಪೀತಾಂಬರವನುಡಿಸಿ ಸರ್ವಾಭರಣವನಿಡಿಸಿರೇ |
ಹರಳಿನೋಲೆ ಮೂಗುತಿ ಇಟ್ಟ ಮುದ್ದು ಮಹಾಲಕ್ಷ್ಮೀ ದೇವಿಗೆ ||2||

ಅಚ್ಚಮಲ್ಲಿಗೆ ಲಕ್ಷ ಸಂಪಿಗೆ ಎತ್ತಿರೇ ನಿಮ್ಮ ಪಾದಕೆ |
ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ ||3||

ಹರಿಯ ವಂಚಿಸಿ ಕರವೀರದೊಳು ಭರದಿ ಸ್ಥಿರವಾಗಿರುವೊಳೇ |
ಪರಮಭಕ್ತರಿಗೆ ವರವ ಕೊಡುವ ನಿಗರ್ವಿಗೊಲಿಯುವ ದೇವಿಗೆ ||4||

ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು |
ಹೆತ್ತಕುವರನ ತೋರಿದಂಥ ಶುಕ್ರವಾರದ ಗೌರಿಗೆ ||5||

ನಿಗಮವೇದ್ಯಳೇ ನಿನ್ನ ಮಹಿಮೆಯ ಬಗೆಬಗೆಯಿಂದಲಿ ಪೊಗಳುವೆ |
ತೆರೆದು ಭಾಗ್ಯವ ನೀಡುವಂಥ ಭೀಮೇಶಕೃಷ್ಣನ ಮಡದಿಗೆ ||6||

Lyrics in English

Composer : Harapanahalli Bhimavva

Ettire navaratnadaruti kartrurangana ranige||pa||
uttamottamalolanada vishnuvina kalyanige ||a.pa||

Shuddha snanava madi nadiyali vajrapithadi kulisire|
tiddi tilakava teedidantha muddu mangalagaurige ||1||

Eredu pitambaravanudisi sarvabharanavanidisire|
haralinole muguti itta muddu mahalakshmi devige ||2||

Acchamallige laksha sampige ettire nimma padake |
uttamottamalolanada vishnuvina kalyanige ||3||

Hariya vanchisi karaviradolu baradi sthiravagiruvole |
paramabaktarige varava koduva nigarvigoliyuva devige ||4||

Huttu badaviya kashta kaledu kottalarasana siriyanu|
hettakuvarana toridantha shukravarada gaurige ||5||

Nigamavedyale ninna mahimeya bagebageyindali pogaluve |
teredu bagyava niduvanha bimeshakrishnana madadige ||6||


ನಿಜದ ನಿಜ ನೀನಂತೆ ನಿಜವೆನಗೆ / Nijada nija neenante nijavenage

ನಿಜದ ನಿಜ ನೀನಂತೆ ನಿಜವೆನಗೆ ತೋರಬಾರದೇ |
ಅಜಜನಕ ವಿಜಿತಮಾಯ ||

ಕಿವಿಯ ಕಿವಿ ನೀನಂತೆ ಕಂಡಿಲ್ಲ ಮೊರೆ ಕೇಳಿದಂತೆ
ಕವಿವಿನುತ, ಗಗನಸದೃಶ |
ಕಣ್ಣಿನಾ ಕಣ್ಣಂತೆ ಕಂಡಿಲ್ಲ ಪರಿ ಕಂಡ ಭಾವ
ಕಂಜಾಕ್ಷ, ಲೋಕಸಾಕ್ಷಿ ||

ಮನದ ಮನ ನೀನಂತೆ ಅನಿಸಿಲ್ಲ ಮನಕೆ ನಾ ಬಂದಂತೆ
ಮನದಿನಿಯ, ಅಮಿತಮಹಿಮ |
ಪ್ರಾಣದೊಳಗಣ ಪ್ರಾಣ ಪ್ರಿಯದೊಳಗೆ ಪ್ರಿಯವಲ್ತೆ |
ಪ್ರೇಮದಾ ಕುರುಹೆಲ್ಲಿ ಪ್ರಾಣನಾಥ |
ಕಿವಿಗೊಟ್ಟು ಕಣ್ಣಿಟ್ಟು ಮನಗಂಡು ಮಮಕರಿಸಿ |
ಕನಿಕರಿಸು ಸಿರಿದೇವನನು ಕೇಶವ ||

Lyrics in English

Nijada nija neenante nijavenage torabaarade |
ajajanaka vijitamaaya ||

Kiviya kivi neenante kandilla more kelidante
kavivinuta, gaganasadrusha |
kanninaa kannante kandilla pari kanda bhaava
kanjaaksha, lokasaakshi ||

Manada mana neenante anisilla manake naa bandante
manadiniya, amitamahima |
praanadolagana prana priyadolage priyavante
premadaa kuruhelli prananaatha |
kivigottu kannittu managandu mamakarisi
kanikarisu siridevanu keshava ||


ಕಷ್ಟಪಟ್ಟರು ಇಲ್ಲ ಕಳವಳಿಸಿದರು / Kashtapattaru ella kalavalisidaru

ಕಷ್ಟಪಟ್ಟರು ಇಲ್ಲ ಕಳವಳಿಸಿದರು ಇಲ್ಲ
ಭ್ರಷ್ಟ ಮಾನವ ನಿನ್ನ ಹಣೆಬರೆಹವಲ್ಲದೆ ಇಲ್ಲ ||ಪ||

ಸಿರಿವಂತನ ಸ್ನೇಹವ ಮಾಡಿ ನಡೆದರು ಇಲ್ಲ
ಪರಿಪರಿಯಲಿ ವಿದ್ಯೆಯ ಕಲಿತರಿಲ್ಲ
ನರಿಯ ಬುದ್ಧಿಯಿಂದಲಿ ನಡೆದುಕೊಂಡರು ಇಲ್ಲ
ಅರಿಯದೆ ಹಲವ ಹಂಬಲಿಸಿದರು ಇಲ್ಲ ||1||

ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ
ಕಂಡ ಕಂಡವರಿಗೆ ಕೈ ಮುಗಿದರಿಲ್ಲ
ಗಂಡುಗತ್ತರಿಯನು ಕೊರಳಿಗಿಟ್ಟರು ಇಲ್ಲ
ಪ್ರಚಂಡನಾದರು ಇಲ್ಲ, ಪರಿಹಾಸ್ಯವೆಲ್ಲ ||2||

ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ
ಬೆಟ್ಟವನು ಕಿತ್ತು ತಂದಿಟ್ಟರಿಲ್ಲ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ
ಕೊಟ್ಟವರಿಗುಂಟು ಕೊಡದವರಿಗಿಲ್ಲ ||3||

Lyrics in English

Composer : Sri Kanakadasaru

Kashtapattaru ella kalavalisidaru ella
bhrashta manava ninna hanebarehavallade ella ||pa||

Sirivantana snehava maadi nadedaru ella
paripariyali vidyeya kalitarilla
nariya buddhiyindali nadedukondaru ella
ariyade halava hambalisidaru ella ||1||

Kondadi kaadi nee bedikondaru ella
kanda kandavarige kai mugidarilla
gandugattariyanu koraligittaru ella
prachandanaadaru ella, parihaasyavella ||2||

Kattaalu kadujananaagi puttidarilla
bettavanu kittu tandittarilla
srushtiyolu kaagineleyaadikeshavaraaya
kottavariguntu kodadavarigilla ||3||


ಬಂಟನಾಗಿ ಬಾಗಿಲ ಕಾಯುವೆ / Bantanaagi baagila kayuve

ರಚನೆ : ಶ್ರೀ ಕನಕದಾಸರು

ಬಂಟನಾಗಿ ಬಾಗಿಲ ಕಾಯುವೆ, ಶ್ರೀಹರಿಯ || ಪ ||
ವೈಕುಂಠದ ಸೋಂಪಿನ ದಾಸರ ಮನೆಯ ||ಅ.ಪ||

ಹೊರಸುತ್ತು ಪ್ರಾಕಾರ ಸುತ್ತಿ ನಾ ಬರುವೆ
ಬರುವ ಹೋಗುವರ ವಿಚಾರಿಸಿ ಬಿಡುವೆ
ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ
ಶ್ರೀಹರಿಯ ಸಮುದ ಓಲಗದೊಳಿರುವೆ || ೧ ||

ತೊತ್ತು ತೊಂಡನಾಗಿ ಬಾಗಿಲ ಕಾಯ್ವೆ
ಚಿತ್ರದ ಚಾವಡಿ ರಜವನು ಬಳಿವೆ
ಮುತ್ತಿನ ರಂಗವಲ್ಲಿಯನಿಟ್ಟು ಬರೆವೆ
ರತ್ನಗಂಬಳಿ ಹೊತ್ತು ಹಾಸುವೆನು ||೨||

ವೇಳವೇಳೆಗೆ ನಾನೂಳಿಗವ ಮಾಡುವೆ
ಆಲವಟ್ಟಿಗೆ ಚಾಮರವ ಬೀಸುವೆ
ತಾಳದಂಡಿಗೆ ಭೃಂಗಿ ಮೇಳಗಳ ಕೂಡಿ
ಶ್ರೀಲೋಲನ ಕೊಂಡಾಡಿ ಪಾಡುವೆನು || ೩ ||

ಎಂಜಲ ಹರಿವಾಣಂಗಳ ಬೆಳಗುವೆ
ಕಂಜನಾಭನ ಪಾದಕಮಲವ ತೊಳೆವೆ
ರಂಜಿಪ ಕುಸುಮದ ಮಾಲೆ ತಂದಿಡುವೆ
ಸಂಜೆಗೆ ಪಂಜಿನ ದಾಸನಾಗಿರುವೆ ||೪||

ಮೀಸಲೂಳಿಗವ ನಾ ಮಾಡಿಕೊಂಡಿರುವೆ
ಶೇಷ ಪ್ರಸಾದವ ಉಂಡುಕೊಂಡಿರುವೆ
ಶೇಷಗಿರಿ ಕಾಗಿನೆಲೆಯಾದಿಕೇಶವನ
ದಾಸರ ದಾಸರ ದಾಸರ ಮನೆಯ ||೫||

Lyrics in English

Composer : Sri Kanakadasaru

Bantanagi bagila kayuve, srihariya ||pa||
vaikuntada sompina dasara maneya || a.pa ||

Horasuttu praakara sutti naa baruve
baruva hoguvara vicharisi biduve
karadi kambiya pottu alli nindiruve
srihariya samuda olagadoliruve ||1||

Tottu tondanaagi bagila kayve
chitrada chavadi rajavannu balive
muttina rangavalliyanittu bareve
ratnagambali hottu hasuvenu ||2||

Velevelege naanooligava maduve
aalavattige chamarava beesuve
taaladandige bhrungi melagala koodi
srilolana kondaadi paaduvenu ||3||

Enjala harivaangala belaguve
kanjanabhana padakamalava toleve
ranjipa kusumada maale tandiduve
sanjege panjina daasanagiruve ||4||

Meesalooligava naa maadikondiruve
shesha prasadava undukondiruve
sheshagiri kagineleyaadikeshavana
daasara daasara daasara maneya ||5||


ಆವ ಜನ್ಮದ ಪುಣ್ಯ ಫಲಿಸಿತೆನಗೆ / Ava janmada punya phalisitenage

ರಚನೆ : ಶ್ರೀ ವಿಜಯದಾಸರು

ಆವ ಜನ್ಮದ ಪುಣ್ಯ ಫಲಿಸಿತೆನಗೆ |
ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ||pa||

ಲವಣವನು ಸವಿದುಣಲು | ಬಲುಜನ್ಮದಲಿಯಿದ್ದ
ಭವರಾಸಿಗಳು ಹಾರಿ ಬಯಲಾದವು |
ನವವಿಧ ಭಕುತಿಯಾ ಮಾರ್ಗವನೆ ತಿಳಿದು |
ಮಾನವರೊಳಗೆ ಪರಿ ಶುದ್ಧನಾದೆ ಗುರು ಕರುಣದಲೀ ||1||

ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ |
ಶೋಕವನೆ ಬಂದಿರಲು ಬೆನ್ನು ಬಟ್ಟು |
ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು |
ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ ||2||

ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ |
ಆಪತ್ತು ಕಳವಳಿಸಿ ಹಿಂದಾದವು |
ಭಾಪುರೆ ಮೋಕ್ಷಮಾರ್ಗಕ್ಕೆ
ಸೋಪಾನ ದೊರಕಿದವು ಏನೆಂಬೆ
ಸೋಜಿಗವು ಬಲು ತೀವ್ರದಲಿ ||3||

ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ |
ಅಕ್ಷಯವಾಗುವದು ಇದ್ದ ಪುಣ್ಯ |
ಅಕ್ಷರ ವಂಚನಾಗಿ ಸರ್ವದಾ ಮೋಕ್ಷಸಾಧನ
ಮಾಳ್ಪ ಮನಸು ಪುಟ್ಟಿತು ನೋಡಾ||4||

ಓದನವು ಉದರದಲಿ ತುಂಬಲಾಕ್ಷಣದಲ್ಲಿ |
ಸಾಧುಗಳ ಸಂಗತಿ ಘಟಿಸುವದು | ಭೇದಾರ್ಥ
ಜ್ಞಾನ ಬಂದೊದಗುವದು ಗುರು ಪೂರ್ಣ |
ಬೋಧರಾ ಮತದಲ್ಲಿ ಲೋಲಾಡುವಾನಂದಾ ||5||

ಘೃತ ದಧಿ ತಕ್ರ ಮೊದಲಾದ ವ್ಯಂಜನ ಉಣಲು |
ಹಿತವಾಗಿ ಸಕಲ ಇಂದ್ರಿಯಂಗಳು |
ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ |
ರತಿಪತಿಪಿತನ ಪದಸೇವೆಯೊಳಗಿಪ್ಪವೊ ||6||

ಕೃಷ್ಣ ಸಂದರುಶನ ಮೃಷ್ಟಾನ ಭೋಜನ |
ಕಷ್ಟನಾಶನ ಸರ್ವ ಕರ್ಮಕಧಿಕಾ |
ಇಷ್ಟ ಸುಖ ಸೌಖ್ಯಕರ ಮತ್ತಾವÀಲ್ಲಿ ಕಾಣೆ |
ಸೃಷ್ಟಿಗೊಡೆಯ ವಿಜಯವಿಠ್ಠಲನು ದಯವಾಗೆ ||7||

Lyrics in English

Ava janmada punya phalisitenage |
ee udupi krishnana prasada bunjiside |pa|

Lavanavanu savidunalu | balujanmadali yidda
bavarasigalu hari bayaladavu|
navavidha bakutiya margavane tilidu |
manavarolage pari suddhanade guru karunadali ||1||

Sakapala kaikolalu arishadvargagalinda |
sokavane bandiralu bennu battu |
kakettu poguvavu enembe sojigavu |
lokadolage namma kulagotrajare dhanya ||2||

Supavanu undare mundatti baruttippa |
aapattu kalavalisi hindadavu |
bapure mokshamargakke sopana dorakidavu
enembe sojigavu balu tivradali ||3||

Bakshyagalu melalagi bhakti puttuvadayya |
akshayavaguvadu idda punya |
akshara vanchanagi sarvada mokshasadhana
malpa manasu puttitu noda ||4||

Odanavu udaradali tumbalakshanadalli |
sadhugala sangati gatisuvadu | bedartha
Jnana bandodaguvadu guru purna |
bodhara matadalli loladuvananda||5||

Gruta dadhi takra modalada vyanjana unalu |
hitavagi sakala indriyangalu |
satata durvishayakke pogadale avaga |
ratipatipitana padaseveyolagippavo ||6||

Krishna sandarushana mrushtana bhojana |
kashtanashana sarva karmakadhika |
ishta suka saukyakara mattavalli kane |
srushtigodeya vijayaviththalanu dayavage ||7||