ಕಂಡೆ ನಾ ತಂಡತಂಡದ ಹಿಂಡುದೈವ / Kande naa tandatandada

ಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪು
ಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ll ಪ ll

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನ ll 1 ll

ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುವು ಸರ
ನರವನು ತೆಗೆದು ನಿರ್ಗಳಿತ ಶೋಣಿತ ಸುರಿಯೆ
ಹರಿಹರಿದು ಕರುಳ ಕೊರಳೊಳಿಟ್ಟವನ ll 2 ll

ಪುರಜನರು ಹಾಯೆನಲು ಸುರರು ಹೂಮಳೆಗರೆಯೆ
ತರತರದ ವಾದ್ಯ ಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು ಕಾಗಿನೆಲೆಯಾದಿಕೇಶವ ll 3 ll

Lyrics in English

Kande naa tandatandada hindu daiva prachanda ripu | ganda uddanda narasimhana kandenayya ||pa||

Ghudughudisi kambadali dhadadhada sidilu sidiye | kidikidise nudiyadagalodane mudivididu | ghadaghadane nadunaduge ghudughudisi sabhe bedare | hidihididu hiranyakana todeyolide kedahidana ||1||

Ooradolappalisi ari basira sarasarane seeli | paripariyali charma eledeledu eluvu sara | naravanu tegedu nirgalita shonita suriye | hariharidu karula koralolittavana || 2 ||

Purajanaru hayenalu suraru hoomalegareye | taratarada vadya sambhramagalinda | harihari sharanendu stutisi shishu moreyiduva | karunalu kagineleyadikeshava || 3 ||


ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ / Ettire kempaarati nityege satyege

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ ||ಎತ್ತಿರೇ||

ಖಡ್ಗ ಶೂಲದ ಅಭಯಹಸ್ತೆಗೆ ಶಂಕರನರಸಿ ದುರ್ಗೆಗೆ |
ಅನ್ನವನಿಕ್ಕುತ ಆರ್ತರ ಕಾಯುವ ಅನ್ನಪೂರ್ಣೆಗೆ ಆನನ್ಯೆಗೆ |
ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ ||

ಕುಂದಪುಷ್ಪ ಮಣಿ ಮುತ್ತಿನ ಹಾರ ಅಂದದಿ ಧರಿಸಿಹ ಶಾರದೆಗೆ |
ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ಚೆಂದದ ವೀಣೆಯ ಕರದಲಿ ಪಿಡಿದಿಹ |
ಇಂದಿರಾಸನನ ಅರಸಿಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ ||

ಶಂಖಚಕ್ರವರಪದ್ಮಪಾಣಿಗೆ ಚಾಮುಂಡಿ ಮೂಕಾಂಬಿಕೆಗೆ |
ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ಐಸಿರಿ ನೀಡುವ ಶ್ರೀ ಧನಲಕ್ಷ್ಮಿಗೆ |
ಹರಿ ಅರಸಿ ನಾರಾಯಣಿಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ ||

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ
ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ

Lyrics in English

Ettire kempaarati nityege satyege tannire tampaarati idege muttaidege || ettire ||

Khadga shulada abhaya hastege shankaranarasi durgege | annavanikkuva aartara kaayuva annapurnege aananyage | Ettire kempaarati nityege satyege tannire tampaarati idege muttaidege || ettire ||

Kundapushpa mani muttina haara andadi dharisiha sharadege | ettire kempaarati nityege satyege chendada veeneya karadali pididiha | indiraasanana arasige tannire tampaarati idege muttaidege ||

Shankhachakravara padmapaanige chamundi mukaambikege | ettire kempaarati nityege satyege isiri needuva sri dhanalakshmige | hari arasi narayanige tannire tampaarati idege muttaidege ||

Ettire kempaarati nityege satyege tannire tampaarati idege muttaidege || ettire ||


ಕಾಯೋ ಎನ್ನ ಶುಭಕಾಯ ಭಜಿಸುವೆನೋ / Kaayo enna shubhakaya bhajisuveno

ಕಾಯೋ ಎನ್ನ ಶುಭಕಾಯ ಭಜಿಸುವೆನೋ..
ರಾಘವೇಂದ್ರಾ…ಯತಿರಾಜಾ…
ಗುರುಾಜಾ…ಯತಿರಾಜಾ…

ಕಾಯೋ ಎನ್ನ ಶುಭಕಾಯ ಭಜಿಸುವೆನು ||2||
ಮಾಯ ತನಕೆ ಚಂದ್ರಾ ಶ್ರೀ ಗುರು ರಾಯ ರಾಘವೇಂದ್ರ
ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||ಭೋ||

ಕಂಡ ಕಂಡ ಕಡೆಗೇ ,ತಿರುಗಿ ಬೆಂಡಾದೆನು ಕೊನೆಗೇ… ||
ಕಂಡ ಕಂಡವರನು ಕೊಂಡಾಡುತ ನಿಮ್ಮ || 2 ||
ಕಂಡೆ ಕಟ್ಟ ಕಡೆಗೇ ಶ್ರೀ ಗುರು ರಾಯ ರಾಘವೇಂದ್ರ ||
ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||

ನಿಯಮವು ಎನಗೆಲ್ಲೀ ಇರುವುದು ಆ ಕಾಮಾಧಮನಲ್ಲಿ |
ಭೋ ಮಹಾಮಹಿಮನೆ ಪಾಮರ ನಾ ನಿಮ್ಮ |
ನಾಮ ಒಂದೇ ಬಲ್ಲೆ ಶ್ರೀ ಗುರು ರಾಯ ರಾಘವೇಂದ್ರ |
ಭೋ ಮಹಾ ಮಹಿಮನೆ ಪಾಮರ ನಾ ನಿಮ್ಮ |
ನಾಮ ಒಂದೇ ಬಲ್ಲೇ ಶ್ರೀ ಗುರು ರಾಯ ರಾಘವೇಂದ್ರ ||

ಭೋ ಯತಿ ವರದೇಂದ್ರ
ಶ್ರೀ ಗುರು ರಾಯ ರಾಘವೇಂದ್ರ ||ಭೋ||

ಮಂತ್ರವ ನಾನರಿಯೇ ಶ್ರೀ ಮನ್ ಮಂತ್ರಾಲಯ ದೊರೆಯೇ |
ಅಂತರಂಗದೊಳು ನಿಂತು ಪ್ರೇರಿಸುವ |
ಅನಂತ್ರಾಧೀಶನರಿಯೆ ಶ್ರೀ ಗುರು ರಾಯ ರಾಘವೇಂದ್ರ
ಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||
||ಕಾಯೋ||

Lyrics in English

Kaayo enna shubhakaya bhajisuveno …. raghavendra …. yatiraja …. gururaja …. yatiraja ……

Kaayo enna shubhakaya bhajisuvenu | maya tanake chandra sri guru raghavendra | bho yati varadendra sri guru raaya raghavendra || bho ||

Kanda kanda kadege tirugi bendadenu konege … | kanda kandavaranu kondaduta nimma | kande katta kadege sri guru raya raghavendra | bho yati varadendra sri guru raaya raghavendra || bho ||

Niyamavu enagelli a kamadhamanalli | bho mahamahimane pamara naa nimma | naama onde balle sri gururaya raghavendra | bho maha mahimane pamara naa nimma | naama onde balle sri gururaya raghavendra || bho yati varadendra sri guru raaya raghavendra || bho ||

Mantrava nanariye sri man mantralaya doreye | antarangadolu nintu prerisuva | anantraadheeshanariye sri gururaya raghavendra | bho yati varadendra sri guru raaya raghavendra || bho || kaayo ||


ಇಕ್ಕೋ ನೋಡಿರೆ ಚಿಕ್ಕ / Ekko nodire chikka

ಇಕ್ಕೋ ನೋಡಿರೆ ಚಿಕ್ಕ ಹನುಮಂತಾ. …ಆಆ… ‌ ‌ ||ಇಕ್ಕೋ||

ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾ
ಭಕ್ತಿ ಕೊಡುವಂತ ಭಾರತಿಕಾಂತ
|| ಇಕ್ಕೋ ನೋಡಿರೆ||

ರಾಮ ದೂತನೆ ಬಹು ಶೂರನೀತ || 2 ||
ರಾಮಚಂದ್ರಗಾಗಿ ಜಲಧಿದಾಟಿ ಪೋಗಿ || 2 ||
ಸೀತೆಗೆ ಉಂಗುರವನ್ನಿತ್ತ ಮಹಾನುಭಾವ || 2 ||
||ಇಕ್ಕೋ ನೋಡಿರೆ||

ಎಲ್ಲಾ ಕೇಳಿರೆ ವಲ್ಲಭನ ಮಹಿಮೆ || 2 ||
ತಲ್ಲನಯನ ಪಾಲ ನಿಲ್ಲಿಸಿದ ಲೋಲ || 2 ||
ಒಳ್ಳೆ ಗುಣಶೀಲ ಇಲ್ಲಿ ಬಹಳ ಪ್ರಭಲ || 2 ||
||ಇಕ್ಕೋ ನೋಡಿರೆ||

ಅಪಾರ ಮಹಿಮ ಬಹು ಶೂರನೀತ || 2 ||
ಅಂಜನಿಯ ಕಂದಾ ಸಂಜೀವಿನಿಯ ತಂದ || 2 ||
ನರಸಿಂಹ ದೂತ ನಮ್ಮ ಪೊರೆವಧಾತ || 2 ||
||ಇಕ್ಕೋ ನೋಡಿರೆ||

Lyrics in English

Ekko nodire chikka hanumantha …. aa ….. || Ekko ||

Ekko nodirinta chikka hanumantha, bhakti koduvantha bhaaratikantha || ekko nodire ||

Rama dootane bahu shooranita | raamachandragagi jaladhi daati pogi | seetege unguravannitta mahanubhava || ekko nodire ||

Ellaa kelire vallabhana mahime | tallanayana paala nillisida lola | olle gunasheela elli bahala prabala ||ekko nodire ||

Apaara mahima bahu shooranitha | anjaniya kanda sanjeeviniya tanda | narasimha doota namma porevadhata ||ekko nodire ||


ಸುಳ್ಳು ನಮ್ಮಲ್ಲಿಲ್ಲವಯ್ಯ / Sullu nammallillavayya sullu

ಸುಳ್ಳು ನಮ್ಮಲ್ಲಿಲ್ಲವಯ್ಯ
ಸುಳ್ಳು ನಮ್ಮಲ್ಲಿಲ್ಲ ( / ಸುಳ್ಳೇ ನಮ್ಮನಿ ದೇವರು) ||ಪ||

ಇಲಿಯು ಒಲೆಯ ಚಾಚ್ವದ ಕಂಡೆ
ಬೆಕ್ಕು ಭಕ್ಕರಿ ಮಾಡ್ವುದಕಂಡೆ
ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಡತರ ||೧||

ಕಪ್ಪೆ ಪಾತರ ಕುಣಿವುದ ಕಂಡೆ
ಏಡಿ ಮದ್ದಳೆ ಬಡೆವುದ ಕಂಡೆ
ಮೆಕ್ಕಿ ತೆನೆಯ ಕಂಡೇನಪ್ಪ ಕೆಕ್ಕಿ ಗಡತರ ||೨||

ಅರಸಿನ ಬಿತ್ತುವುದ ಕಂಡೆ
ಕಸಕಸೆ ನೆನೆಸೋದು ಕಂಡೆ
ಪುರಂದರವಿಠಲನ ಪಾದವ ಕಂಡೆ ಪರ್ವತ ಗಡತರ ||೩||

Lyrics in English

Sullu nammallillavayya sullu nammallilla (sulle nammani devaru) ||pa||

Iliyu oleya chaachvada kande
bekku bhakkari madvudakande
menasinakai kandenappa oanake gadatara ||1||

Kappe paatara kunivuda kande
edi maddale odevuda kande
mekki teneya kandenappa kekki gadatara ||2||

Arasina bittuvuda kande
kasakase nenesodu kande
purandara vittalana padava kande parvata gadatara ||3||


ಹದಿನಾಲ್ಕು ಲೋಕವನಾಳುವ ತಂದೆಗೆ / Hadinalku lokavanaluva tandege

ಹದಿನಾಲ್ಕು ಲೋಕವನಾಳುವ ತಂದೆಗೆ |
ಮುದದಿಂದ ನಾನೊಬ್ಬ ಭಾರವಾದೆನೆ ||pa||

ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||
ಭರದಿಂದ ಪೋಗಿ ಚೆನ್ನಾಂತು ಪೊತ್ತೆ ||
ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು |
ಭೂ ತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ||1||

ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ |
ಬೆರಳಲಿ ಧರಿಸಿ ಕಾಯ್ದು ನಿಜದೆ ||
ವರಮುನಿ ಪಸವನು ಬೇಡಲಾಗಿ ಬೆದರಿ ನರ- |
ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ ||2||

ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ |
ಸಲಹಬೇಕೆಂದು ಬೇಸರಿಸಲಿಲ್ಲಾ ||
ಸುಲಭದಲಿ ಶೇಷಾಚಲನಾಗಿಪ್ಪ |
ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ ||3||

Lyrics in English

Hadinalku lokavanaluva tandege |
Mudadinda nanobba bharavadene | pa |

Suragiriyu sharadhiyolu kadevaga mulugala |
Bharadinda pogi bennattu potte |
Dharaniyu moreyide turadalli bandu |
Bhu taruniya serebidisi uluhikollalillave | 1 |

Surapatimunidelu hagalirulu malegareye |
Beralalli dharisi turugala kaydu nijave |
Varamuni pasavanu bedalu bedari |
Narahari ninna kareye karunadali paliside | 2 |

Jalajaksha bettavanu pottu balalidaga |
Salahabekendu besarisalilla |
Sulabadali sheshachalanagippa |
Olidenna samrakshiso vijayavithala | 3||


ಬಂದಾನೋ ರಾಘವೇಂದ್ರ / Bandaano raaghavendra indillige

ಬಂದಾನೋ ರಾಘವೇಂದ್ರ ಇಂದಿಲ್ಲಿಗೆ || ಪ ||
ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ. ಪ. ||

ಗಜವೇರಿ ಬಂದಾ ಜಗದಿ ತಾ ನಿಂದಾ |
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || 1 ||

ಹರಿಯ ಕುಣಿಸುತ ಬಂದಾ ನರಹರಿ ಪ್ರಿಯ ಬಂದಾ
ಶರಣಾಗತರನು ಕರವ ಪಿಡಿವೆನೆಂದು || 2 ||

ಪ್ರಲ್ಹಾದ ವ್ಯಾಸ ಮುನೀಂದ್ರ ರಾಘವೇಂದ್ರ
ನಿಲಿಸುತ ಮನವ ಮಧ್ವೇಶವಿಠ್ಠಲನಲಿ ||3||

Lyrics in English

Bandaano raaghavendra indillige || pa ||
Kanndana more keli jananiyu baruvante || a. pa. ||

Gajaveri bandaa jagadi taa nindaa |
ajapita raamana padaabja smarisutali || 1 ||

Hariya kunisuta bandaa narahari priya bandaa
sharanaagataranu karava pidivenendu || 2 ||

Pralhaada vyaasa muneendra raaghavendra
nilisuta manava madhveshaviththalanali ||3||


ಪಾಪಿ ಬಲ್ಲನೆ ಪರರ ಸುಖ ದುಃಖವ / Paapi ballane parara sukha dukhava

ಪಾಪಿ ಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತ ಸುಗುಣದ ಘನವ || ಪಾಪಿ ||

ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ
ಮೃತ್ಯು ಬಲ್ಲುದೆ ವೇಳೆ ಹೊತ್ತೆಂಬುದ ||
ತೊತ್ತ ಬಲ್ಲಳೆ ಮಾನಾಪಮಾನವೆಂಬುದನು ||
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲನ್ನ ||ಪಾಪಿ||

ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ ||
ಮೀನು ಬಲ್ಲುದೆ ನೀರು ಸೌಳು ಸೌಳೆಂಬುದನು ||
ಹೀನ ಬಲ್ಲನೆ ಸುಗುಣ ದುರ್ಗುಣವನು || ಪಾಪಿ ||

ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು
ಕೋಡಗವು ಬಲ್ಲುದೆ ರತ್ನದ ಬೆಲೆಯ ||
ಬೇಡಿದುದನು ಕೊಡಲು ಪುರಂದರ ವಿಠಲನು ||
ನಾಡದೈವಗಳೇನು ಕೊಡಬಲ್ಲವೋ || ಪಾಪಿ ||

Lyrics in English

Paapi ballane parara sukha dukhava | kopi ballane shanta sugunada ghanava || paapi ||

Katte ballude hotta kasturiya parimalava | mrutyu ballude vele hottembuda | totta ballale maanaapamaanavembudana | matte ballude bekku hariya meesalanna || paapi ||

Henu ballude mudida hoovina parimalava | shwaana ballude raaga bhedangala | meenu ballude neeru soulu soulembudanu | heena ballane suguna durgunavanu || paapi ||

Hedi ballane ranada saahasada shouryavanu kodagavu ballude ratnada beleya | bedidudanu kodalu purandara vittalanu | naada daivagalenu kodaballavo ||paapi||


ಹೂವ ಕೊಡೆ ನೀ ವರವ / Hoova kode taayi varava

ಹೂವ ಕೊಡೆ ನೀ ವರವ ಕೊಡೆ
ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ||

ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳು
ಮುತ್ತೈದೆತನವ ಮುದದಿಂದ
ಮುತ್ತೈದೆತನವ ಮುದದಿ ಬೇಡುವೆ
ಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ ||

ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳು
ಬಂಧುಗಳಿಗೆಲ್ಲ ಬಲುಕ್ಷೇಮ
ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ
ಇಂದಿರಾದೇವಿ ದಯಮಾಡೆ ||

ದಂಪತಿ ನಲಿಸುತ ಸಂಪತ್ತು ಸೌಭಾಗ್ಯ
ಇಂಥ ಮಂದಿರಕೆ ಬಹುಮಾನ
ಇಂಥ ಮಂದಿರಕೆ ಬಹುಮಾನಯಿರುವಂತೆ
ಸಂತೋಷದಿ ವರವ ದಯಮಾಡೆ ||

ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನಹಿ-
ರಣ್ಯದಾನಗಳ ಹಿತದಿಂದ ಹಿ-
ರಣ್ಯದಾನಗಳ ಹಿತದಿಂದ ಮಾಡುವಂತೆ ಸಂ-
ಪನ್ನ ನೀ ವರವ ದಯಮಾಡೆ ||

ಇಂದಿಗೆ ಮನೋಭೀಷ್ಟ ಎಂದೆಂದಿಗೆ ನಿನಪಾದ
ಹೊಂದಿರಲೆಂದೂ ಮರೆಯದೆ
ಹೊಂದಿರಲೆಂದೂ ಮರೆಯದೆ ಭೀಮೇಶಕೃಷ್ಣನ-
ರ್ಧಾಂಗಿ ನೀ ವÀರವ ದಯಮಾಡೆ ||

Lyrics in English

Hoova kode taayi varava kode |
Devi ninnaya mudimyaalidda mallige || pa ||

Kattuvo tottilhuttuvo gandu makkalu |
Muttaide tanava mudadinda |
Muttaide tanava mudadinda beduve |
Shreemahaalakshmiye namage daya maade || 1 ||

Andanaratha bandhoguva hennumakkalu |
Bandhugaligella balu kshema |
Bandhugaligella balu kshema iruvante |
Indiraadevi dayamaade || 2 ||

Dampati nalisuta sampattu soubhaagya |
Intha mandirake bahumaana |
Intha mandirake bahumaana iruvante |
Santoshadinda varava dayamaade || 3 ||

Anna govgalu divya kanyaa bhoodaana |
Hiranya daanagala hitadinda |
Hiranya daanagala hitadinda maaduvante |
Sampanne nee varava daya maade || 4 ||

Indire manobhishta endendige ninna paada |
Hondiralendoo | endendige ninna paada hondiralendoo |
Mareyade bheemeshakrushnanardhaangi
Nee varava daya maade || 5 ||


ಮುದದಿ ಮುಕುಂದ ಸದನಕ ಬಂದ / Mudadi mukunda sadanaka banda

ಮುದದಿ ಮುಕುಂದ ಸದನಕಬಂದ |
ದದಿಯ ಮೀಸಲು ಬೆಣ್ಣೆ ತಿಂದ ನಿನ್ನ ಕಂದ…ಆನಂದಾ…

ಗೋಪಿಕೇಳ್ ನಿನ್ನ ಮಗ ಜಾರ,
ಇವ ಚೋರ , ಸುಕುಮಾರ ||

ಮಾರನ ಪಿತ ತಾ ಮನೆಯೊಳು ಪೊಕ್ಕ |
ಹಿಡಿಯ ಹೋದರೆ ಕೈಗೆ ಸಿಕ್ಕ |
ನೋಡಿ ನಕ್ಕ..ಬಾರಿ ಠಕ್ಕ…|| ಗೋಪಿ ||

ಹರೆಯದ ಪೋರಿ ಜಗದ ಕಂಗೋರಿ |
ಬರದಿಂದ ಸೀರೆಯ ಸೆಳೆದ |
ಕರವ ಪಿಡಿದಾ..ಮಾನ ಕಳೆದಾ..|| ಗೋಪಿ ||

ಬಹಳ ದಿನವಾಯಿತು ಪೇಳುವುದು ಹೇಂಗೆ |
ಗೋಪಾಲನ ಮನಸ್ಸೊಮ್ಮೆ ಹಂಗೆ |
ಒಮ್ಮೆ ಹಿಂಗೆ..ಪೇಳುವುದು ಹೇಂಗೆ || ಗೋಪಿ ||

ರಾಧೆಯ ಮನದ ಮೋದ ಮುಕುಂದ |
ಶ್ರೀದವಿಠ್ಠಲನಾಟ ಚಂದ
ನಮ್ಮ ಶ್ರೀದವಿಠ್ಠಲನಾಟ ಚಂದ |
ನಯನಾನಂದ..ಆನಂದ…|| ಗೋಪಿ ||

Lyrics in English

Mudadi mukunda sadanaka banda || dadiya meesalu benne tinda | ninna kanda …. anandaa ……

Gopikel ninna maga jaara | eva chora, sukumara ||gopi ||

Maarana pita taa maneyolu pokku | hidiya hodare kaige sikka | nodi nakka … baari takka …. || gopi ||

Hareyada pori jagada kangori | baradinda seeriye seleda | karava pididaa …. maana kaledaa……||gopi||

Bahala dinavaayitu peluvudu henge | gopaalana manasomme hange | omme hinge …. peluvudu henge || gopi ||

Radheya manada moda mukunda | srida vittalanaata chanda | nayanaananda ….. anada …. ||gopi ||