ಆಡುವ ಮಕ್ಕಳು ಮನೆಯ / Aaduva makkalu maneya

ಆಡುವ ಮಕ್ಕಳು ಮನೆಯ ಕಟ್ಟಿದರು | ಆಟ ಸಾಕೆಂದು ಮುರಿದು ಓಡಿದರು | ಹೀಗಿರಬೇಕು ಸಂಸಾರಾ….. | ಹೀಗೆ ಬರೆದಿರಳು ಪ್ರಾಚೀನ |
||ಆಡುವ ||

ಸಂತೆಯು ಮೆರೆಯಿತು ನಾನಾ ಪರಿ| ಸಂಜೆಯಲ್ಲಿ ಹಿಡಿದರು ತಮ ತಮ್ಮ ದಾರಿ| ಹಕ್ಕಿಯು ಬಂದಿತು ಅಂಗಳದಲ್ಲಿ | ಹಾರಿ ಹೋಯಿತು ಆ ಕ್ಷಣದಲ್ಲಿ… | ಹೀಗಿರಬೇಕು ಸಂಸಾರಾ….. |
ಹೀಗೆ ಬರೆದಿರಳು ಪ್ರಾಚೀನ|
||ಆಡುವ ||

ವಸತಿಕಾರನು ವಸತಿಗೆ ಬಂದಾ| ಹೊತ್ತಾರೆ ಎದ್ದು ಹೊರಟೆ ಹೋದ | ಸಂಸಾರ ಎಂಬ ಪಾಶವ ಬಿಡಿಸಲು | ಕಂಸಾರಿ ಪುರಂದರವಿಠ್ಠಲನ ಸ್ಮರಿಸಿರೊ| ಹೀಗಿರಬೇಕು ಸಂಸಾರಾ… |
ಹೀಗೆ ಬರೆದಿರಳು ಪ್ರಾಚೀನ|
||ಆಡುವ ||

Lyrics in English

Aaduva makkalu maneya kattidaru | ata sakendu muridu odidaru | heegirabeku samsaara | heege barediralu prachina ||aduva||

Santeyu mereyitu naana pari | sanjeyali hididaru tamma tamma daari |hakkiyu banditu angaladalli | haari hoyitu a kshanadalli …. | heegirabeku samsara ….| Heege barediralu prachina ||aduva||

Vasatikaaranu vasatige banda | hottare eddu horate hoda | samsara emba pashava bidisalu | kamsari purandara vittalana smarisiro | heegirabeku samsara …. | heege barediralu prachina ||aduva||


ಪ್ರಾಣದೇವ ನೀನಲ್ಲದೆ ಕಾಯ್ವರ / Pranadeva neenallade kayvara

ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೇ
||ಪ್ರಾಣದೇವ||

ವಾಸವ ಕುಲಿಶದಿ ಘಾಶಿಸೆ ಜೀವರ ಶ್ವಾಸ ನಿರೋದಿಸಿದೆ |
ಅ ಸಮಯದಿ ಕಮಲಾಸನ ಪೇಳಲು | ನೀ ಸಲಹಿದೆ ಜಗವಾ…. ಮುಖ್ಯ
||ಪ್ರಾಣದೇವ||

ಪರಿಸರ ನೀನಿರೆ ಹರಿ ತಾನಿಪ್ಪ ನೀ ಇರದಿರೆ ಹರಿ ಇರನೂ | ಕರಣ ನಿಯಾಮಕ ಸುರರ ಗುರುವೆ ನೀ ||
ಕರುಣಿಸೆ ಕರುಣಿಸುವಾ…. ಮುಖ್ಯ
||ಪ್ರಾಣದೇವ||

ಅಂಗಧ ಪ್ರಮುಖ ಪ್ಲಭಂಗರು ರಾಮನ ಅಂಗನೆಯಳ ಹುಡುಕೇ |
ತಿಂಗಳು ಮೀರಲು ಕೆಂಗೆಡೆ ಕಪಿಗಳ | ಜಂಗುಳಿ ಪಾಲಿಸಿದೇ……ಮುಖ್ಯ
||ಪ್ರಾಣದೇವ||

ಸಾವಿನ ಪಾಶದಿ ರಾವಣ ನೀಲ ಸುಗ್ರೀವನು ಕರ ಬಿಗಿಯೇ |
ಸಾವಿರ ದೈವಕ್ಕು ಗಾವದದಲ್ಲಿಹ | ಸಂಜೀವನ ಜವದಿ ತಂದಿತ್ತೇ……ಮುಖ್ಯ
||ಪ್ರಾಣದೇವ||

ಭೂತೇಂದ್ರಿಯಂಗಳಿಗಧಿನಾಥ ನಿಯಾಮಕ ಆ ತೈಜಸ ಹರನಾ….. |
ತಾತನೆನಿಪ ಜಗನ್ನಾಥ ವಿಠ್ಠಲನಾ | ಪ್ರೀತಿಪಾತ್ರನಾದೇ…… ಮುಖ್ಯ
||ಪ್ರಾಣದೇವ||

ಶ್ರೀ ಹನುಮಂತಂ ಏಕಾಂತಭಾಜಂ ರಾಘವ ಶ್ರೀಪಾದಂ ಭೋಜಭ್ರಂಗಂ |
ಮಾರುತೀಂ ಪ್ರಾಣಿನಾಂ ಪ್ರಾಣಭೂತಂ ನಂದಯಾಮೋ ವಯಂ ನಂದಿತೀರ್ಥಂ ||

Lyrics in English

Pranadeva neenallade kayvara kaneno jagadolage || pranadeva ||

Vasava kulishadi ghashise jeevara shwasa nirodhiside | a samayadi kamalasana pelalu | nee salahide jagavaa … mukhya ||pranadeva ||

Parisara neenire hari taa nippa nee eradire hari eranoo | karana niyamaka surara guruve nee | karunise karunisuvaa … mukhya ||pranadeva||

Angadha pramukha plabhangaru ramana anganeyala huduke | tingalu meeralu kengede kapigala | janguli paliside …. mukhya ||pranadeva||

Savina pashadi ravana neela sugreevanu kara bigiye | saavira daivakku gaavadadalliha | sanjeevana javadi tanditte ….. mukhya ||pranadeva ||

Bhutendriyangaligadhinaatha niyamak a taijasa harna …. | taatanenipa jagannaatha vittalanaa | preetipaatranade …. mukhya || pranadeva ||

Sri hanumantam ekaantabhaajam raghava sripaadambhojabhrangam | marutim praninam pranabhutam nandayamo vayam nanditeertham ||


ನಿನ್ಹೊರತು ಪೊರೆವವರ / Ninhoratu porevavara

ನಿನ್ಹೊರತು ಪೊರೆವವರ ನಾನರಿಯೆ ಹರಿಯೆ |
ಆದಿಯ ಮೊದಲು ನಿನ್ನ ಪಾದವ ನಂಬಿದೆ |
ಭೇದವೆನಿಸದೆ ಮೋದದಾಯಕ | ಆದರದಿಂದಲಿ ಕಾಯೋ
ಸೋದರ ಮಾವನ ವೈರಿ |ಮೇಧಿನಿ ಪತಿಯೇ ನಿನ್ನಾರಾಧನೆ
ಮಾಡಿಸೋ ಹರಿಯೇ…
||ನಿನ್ ಹೊರತು||

ದಾನವಾಂತಕ ನೀನೆ ಗತಿ ಎಂದು ಸ್ವಾನುರಾಗದಿಂ ಧ್ಯಾನ ಮಾಡುವೆ |‌‌‌‌
ಮಾನ ಅಭಿಮಾನ ನಿನ್ನದು ವೇಣುಗೋಪಾಲ ಕ್ರಷ್ಣ |
ಬಾನು ಕೋಟಿತೇಜ ಎನ್ನ ದೀನನಾಗಿ ಮಡೋ ಹರಿಯೇ….
||ನಿನ್ ಹೊರತು||

ಪಂಕಜಾಕ್ಷ ಮುಕುಂದ ಮಾಧವ ಕಿಂಕರಾಮರ ವಂದ್ಯ ಶ್ರೀಹರಿ |
ಸಂಕಟಗಳನು ನೀ ಬಿಂಕದಿಂ ಪರಿಪಾಲಿಪ |
ಕಂಕಣ ಧರಿಸಿದ ಶ್ರೀ ವೆಂಕಟ ವಿಠ್ಠಲ ಹರಿಯೇ….
||ನಿನ್ ಹೊರತು||

Lyrics in English

Ninhoratu porevavara nanariye hariye | adiya modalu ninna padava nambide | bhedavenisade modadayaka | adaradindali kayo sodara mavana vairi | medhini patiye ninnaaradhane madiso hariye ……….. || nin horatu ||

Daanavantaka neene gati endu swanuragadim dhyana maduve | maana abhimana ninnadu venugopala krishna | bhanu koti teja enna deenanagi maado hariye || nin horatu||

Pankajaksha mukunda madhava kinkaramara vandya srihari | sankatagalanu nee binkadim paripalipa | kankana dharisida sri venkata vittala hariye … ||nin horatu ||


ಬಾ ಮಾಧವ ಯದುನಂದನಾ / Baa madhva yadunandana

ಬಾ ಮಾಧವ ಯದುನಂದನಾ | ಪೊರೆಯೋ ಘನಾ….ಆ…
ರಮಾರಮಣ ವೆಂಕಟರಮಣಾ…ಆ…

ಬಾ ಮಾಧವ ಯದುನಂದನ| ಪೊರೆಯೋ ಘನಾ ರಮಾರಮಣ | ಪೊರೆಯೋ ಘನಾ ವೆಂಕಟರಮಣಾ…
||ಬಾ ಮಾಧವ||

ಭವಭಯಹಾರಿ ಗೋವಿಂದಾಹರಿ| ಶಂಖಚಕ್ರಧಾರಿ ವಿಭಾಶಿ ಹರಿ ||ಬಾ ಮಾಧವ||

ಕರುಣಾಕರ ಶಿವಾಭಯಂಕರ| ವೆಂಕಟೇಶ್ವರ ತುಳಸಿ ಮಾಲಾಧರ||ಬಾ ಮಾಧವ||

ನೀ ಕರುಣಿಸೋ ನಿನ್ನ ಧ್ಯಾನಂಗಳ | ನೀ ತೋರಿಸೋ ನಿನ್ನ ಪಾದಂಗಳಾ…ಆ… | ಹೇ ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ | ವಿಠ್ಠಲಾ ವಿಠ್ಠಲಾ ವಿಠ್ಠಲಾ…
ನೀ ಕರುಣಿಸೋ ನಿನ್ನ ಧ್ಯಾನಂಗಳ | ನೀ ತೋರಿಸೋ ನಿನ್ನ ಪಾದಂಗಳಾ…||ಬಾ ಮಾಧವ||

Lyrics in English

Baa madhava yadunandana | poreyo ghana a … ramaaramana venkataramanaa …a ………|

Baa madhava yadunandana | poreyo ghana a … ramaaramana venkataramanaa …a ………|| baa madhava||

Bhavabhayahari govindaahari | shankhachakradhari vibhashi hari || baa madhava ||

Karunakara shivabhayankara | venkateshwara tulasi maladhara || baa madhava ||

Nee karuniso ninna dhyaanangala | nee toriso ninna paadangala … a … | he vittalaa … vittalaa …. vittalaa … vittalaa ….vittalaa … vittalaa | vittalaa … vittalaa vittala …|| nee karuniso ninna dhyaanangala | nee toriso ninna padangala || baa madhava ||


ಏನು ಶಕ್ತಿ ಅಡಗಿದೆಯೊ ನಿನ್ನ / Enu shakti adagideyo ninna

ಏನು ಶಕ್ತಿ ಅಡಗಿದೆಯೊ ನಿನ್ನ ಹೆಸರಲಿ ಏನು ಮಹಿಮೆ ತುಂಬಿದೆಯೊ ಸ್ವಾಮಿ ನಿನ್ನಲಿ
||ಏನು ಶಕ್ತಿ||

ಮುಳ್ಳ ಮೇಲೆ ಕಾಲಿಡಲಿ ಕಲ್ಲ ಮೇಲೆ ನಡೆದಿರಲಿ | ಅಯ್ಯೋ ನೋವು ಎನುತಿರಲಿ ತಾಳಲಾರೆ ಎನಿಸಿರಲೀ…
ಅಯ್ಯಪ್ಪ ಎಂದಾಗ ಏನೋ ಆನಂದ | ನಮ್ಮಪ್ಪ ನಾ ಕಾಣೆ ಏನೀ ಅನುಬಂಧ|
||ಏನು ಶಕ್ತಿ||

ಕಾಡಿನಲ್ಲಿ ನಾನಿರಲಿ ಇರುಳು ಸುತ್ತ ತುಂಬಿರಲಿ | ದಾರಿ ಕಾಣದಾಗಿರಲಿ ಮೃಘದ ಕೂಗೆ ಕೇಳಿರಲೀ….
ಅಯ್ಯಪ್ಪ ಎಂದಾಗ ಭಯದ ಮಾತಿಲ್ಲ | ನಮ್ಮಪ್ಪ ಎಂದಾಗ ಮಿಂಚು ಮೈಲೆಲ್ಲಾ|
||ಏನು ಶಕ್ತಿ||

ಕರೆಸಿ ಕೊಳುವವನು ನೀನೇ ಕಳಿಸಿ ಕೊಡುವನು ನೀನೆ | ನಾನು ಎಂಬ ಮಾತೆಲ್ಲಿ ನನ್ನ ಹುಸಿರು ನಿ ತಾನೆ…
ಅಯ್ಯಪ್ಪ ಎಂದಾಗ ಏನೋ ಉಲ್ಲಾಸ | ನಮ್ಮಪ್ಪ ಎಂದಾಗ ಅಲ್ಲೆ ಕೈಲಾಸ |
||ಏನು ಶಕ್ತಿ ||

Lyrics in English

Enu shakti adagideyo ninna hesarali enu mahime tumbideyo swami ninnali || enu shakti||

Mulla mele kaalidali kalla mele nadedirali | ayyo novu enutirali talalaare enisirali ….. ayyappa endaga eno ananda | nammappa naa kane eni anubandha || enu shakti||

Kaadinalli nanirali erulu sutta tumbirali | dari kanadaagirali, mrughada kooge kelirali ……. ayyappa endaga bhayada matilla | nammappa endaga minchu maiyella || enu shakti ||

Karesi koluvavanu neene, kalisi koduvanu neene | nanu emba matelli, nanna usiru nee tane …… ayyappa endaga eno ullasa | nammappa endaga alle kailasa || enu shakti||


ಅನ್ಯರಿಂದಲಿ ಸುಖವಾಯಿತು / Anyarindali sukhavaayitu

ಅನ್ಯರಿಂದಲಿ ಸುಖವಾಯಿತು ಎಂಬುವುದಕಿಂತ ನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
||ಅನ್ಯರಿಂದಲಿ||

ನಿನ್ನನರಿಯದೆ ಅನ್ಯರ ಬಲ್ಲೆನೆಂಬುದಕಿಂತ ಕಣ್ಣಿಲ್ಲದಿರುವ ಕುರುಡ ಮೇಲಯ್ಯಾ…ಆ…
||ನಿನ್ನನರಿಯದೆ||

ಪುಣ್ಯ ಪಾಪವರಿಯದೆ ಬದುಕುವ ಮನುಜನಿಗಿಂತ | ನಾಯಿ ಕುನ್ನಿ ಲೇಸಯ್ಯಾ….ಆ… |
ಗುಣ ಹೀನನಾದರು ಗುಣಹೀನನಾದರು ಸುಖ ದುಃಖಗಳು ನಿನ್ನಿಂದಾಯಿತೆಂಬ ಮತಿ |
ಚೆನ್ನಾಗಿ ತಿಳಿಸಯ್ಯ ಗೋಪಾಲ ವಿಠ್ಠಲ ||
ಗೋಪಾಲ ವಿಠ್ಠಲ, ಗೋಪಾಲ ವಿಠ್ಠಲಾ…ಆ…

ನಿನ್ನಾ ಒಲುಮೆಯಿಂದ ನಿಖಿಲಾ ಜನರು ಬಂದು ಮನ್ನಿಸುವರು ಮಹರಾಯ | ಎನ್ನ ಪುಣ್ಯಗಳಿಂದ, ಈ ಪರಿ ಉಂಟೇನೊ ನಿನ್ನದೆ ಸಕಲ ಸಂಪತ್ತು ದೇವ |ನಿನ್ನದೆ ಸಕಲ ಸಂಪತ್ತು

ಜೀರ್ಣಾ ಮಲಿನ ವಸ್ತ್ರ ಕಾಣದ ಮನುಜಗೆ ಪೂರ್ಣ ವಿಚಿತ್ರ ಸುವಸನ |ವರ್ಣ ವರ್ಣದಿಂದ ಬಾಹೋದೇನೊ | ಸಂಪೂರ್ಣ ಗುಣಾರ್ಣವ ದೇವ ||ನಿನ್ನ ಒಲುಮೆಯಿಂದ||

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವದಕಿನ್ನು ತಬ್ಬಿಬ್ಬುಗೊಂಡೆನೊ ಹಿಂದೆ |ನಿಬ್ಬರದಿಂದಲಿ ಸರ್ವರ ಕೂಡುಂಬೊ || ಹಬ್ಬದೂಟವ ಉಣಿಸುವೆಯೊ || ನಿನ್ನ ಒಲುಮೆಯಿಂದ||

ಸಂಜೆ ತನಕ ಇದ್ದು ಸಣ್ಣ ಸೌಟಿನ ತುಂಬಾ ಗಂಜಿ ಕಾಣದೆ ಬಳಲಿದೆನೊ |ವ್ಯಂಜನ ಮೊದಲಾದ ನಾನಾ ರಸಂಗಳ | ಭುಂಜಿಸುವುದು ಮತ್ತೇನೋ || ನಿನ್ನ ಒಲುಮೆಯಿಂದ||

ಮನೆ ಮನೆ ತಿರುಗಿದರು ಕಾಸು ಪುಟ್ಟದೆ ಸುಮ್ಮನೆ ಶಾಲ್ವರಿದು ಬಳಲಿದೆನೊ|
ಹಣ ಹೊಣ್ಣು ದ್ರವ್ಯಗಳು ಇದ್ದಲ್ಲಿಗೆ ತನಗೆ ||
ಪ್ರಾಪ್ತಿ ನೋಡೋ ಜೀಯಾ…..ಆ… ||ನಿನ್ನ ಒಲುಮೆಯಿಂದ ||

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾವೆ |
ಈ ಧರೆಯೊಳಗೆ ಸತ್ಪಾತ್ರರ ಜೊತೆಗುಂಬೊ ||2||
ಪಧ್ಧತಿ ನೋಡೋ ಪುಣ್ಯಾತ್ಮ…..ಆ…. ||ನಿನ್ನ ಒಲುಮೆಯಿಂದ||

ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೊಸಲ ಹಸ್ತಗಳ |
ಯೋಚಿಸಿ ನೋಡಲು ಸೋಜಿಗವಾಗಿದೆ || ವಾಚಕ್ಕೆ ನಿಲುಕದು ಹರಿಯೇ….ಏ… ||ನಿನ್ನ ಒಲುಮೆಯಿಂದ||

ವೈದಿಕ ಪದವೀವಗೀ ಬಗೆ ಲೌಕಿಕ ವಿಧಿಸುವುದು ಬಲು ಖ್ಯಾತೆ |
ಮೈದುನಗೊಲಿದ ಶ್ರೀ ವಿಜಯವಿಠ್ಠಲ ನಿನ್ನ || ಪಾದಸಾಕ್ಷಿಯ ಅನುಭವವೋ…ಓ… ||ನಿನ್ನ ಒಲುಮೆಯಿಂದ||

Lyrics in English

Anyarindali sukhavaayitu embuvudakinta ninnindaayitemba klesha melayya || anyarindali ||


Ninnariyade anyara ballenemudakinta kannilladiruva kuruda melayya .. aa…. ||ninnanariyade||


Punya paapavariyade badukuva manujaniginta ||punya|| naayi kunni lesayyaa ….. aa…………………………. gunaheenanaadaru, gunaheenanaadaru sukha dukhagalu ninnindaayitemba mati chennaagi tilisayya gopaala vittala ||guna|| gopaala vittala, gopaala vittala … aa…….

Ninnaa olumeyinda nikhila janaru bandu mannisuvaru maharaaya | enna punyagalinda, e pari unteno, ninnade sakala sampattu deva ninnade sakala sampattu ||

Jeerna malina vastra, kaanada manujage poorna vichitra, suvasana |varna varnadinda baahodeno ||2|| sampoorna gunaarnava deva || ninna olumeyinda||

Obba hengasina hottege haakuvadakinnu, tabbibbugondeno hinde | nibbaradindali sarvara koodumbo ||2|| habbadootava unisuveyo ||ninna olumeyinda||

Sanje tanaka iddu sanna soutina tumbaa ganji kaanade balalideno | vyanjana modalaada naanaa rasangala | bhunjisuvudu matteno || ninna olumeyinda||

Mane mane tirugidaru, kaasu puttade summane shaalvaridu balalideno | hana honnu dravyagalu, iddalige tanage ||2|| praapti nodo jeeyaa … aa……. || ninna olumeyinda||

Madhyaanna kaalakke atithigalige anna meddenendare eyagaave | e dhareyolage satpaatrara jotegumbo||2|| paddati nodo punyaatma …. aa ….. ||ninna olumeyinda||

Neechoccha tiliyade sarvara charanakke chaachide nosala hastagala | yochisi nodalu sojigavaagide ||2|| vaachakke nilukadu hariye ….. a ….. ||ninna olumeyinda||

Vaidika padaveevagi bage loukika vidhisuvudu balu khyaate | maidunagolida sri vijayavittala ninna ||2|| paadasaakshiya anubhavavo …. o……||ninna olumeyinda||


ವಾಮದೇವ ವಿರಂಚಿತನಯ /Vasudeva viranchintanayaVasudeva

ವಾಮದೇವ ವಿರಂಚಿತನಯ ಉಮಾಮನೋಹರ ಉಘ್ರದುರ್ಜಟಿ | ಸಾಮಜಾಜಿನ ವಸನ ಭೂಷಣ
ಸುಮನ ಸೂಪ್ತಂಸಾ |ಕಾಮಹರ ಕೈಲಾಸ ಮಂದಿರ ಸೋಮಸೂರ್ಯ ನಳ ವಿಲೋಚನ |
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ….ಆಆ.. | ಸದಾ ಸುಮಂಗಳವಾ. … ಸದಾ ಸುಮಂಗಳವಾ. …

ಅಂಭರಪುರ ಹರ ಶಂಭ ತ್ರಿಯಂಬಕ ಶಂಭಾರಾರಿ ರಿಪು ಗಂಭೀರ ಕರುಣೆ | ಶಂಭೋ ಸ್ವಯಂಭೋ ಸಂಭವಾ ಆ…ಆ…| ನಂಬಿದೆ ಕಾಯೋ ಜಂಭಾರಿನುತ ಭವಾ |

ಹಸಿತ ಭೂಷಿತ ಶರೀರ ಭಕ್ತರುಧ್ಧಾರ ವಿಷಕಂಠ ದುರಿತ ಹರ |
ಪಶುಪತಿ ಫಣಿಪಹಾರ ಪಾವನಕಾರ ತ್ರಿಶೂಲ ಢಮರುಗಧರ |
ವಸನಲಯನ ವಿಕಸಿತಾಂಭುಜಮುಖ ಶಶಿಧರ ಮಕರಕ್ಕಸ ಮದಮರ್ದನ | ಗಸನೆಗೊಳಿಪ ತಾಮಸವ ಕಳೆದು ಮಾನಸದಲಿ ರಂಗನ ಬಿಸಜ ಪದವ ತೋರೊ ||
ಶಂಭೋ ಸ್ವಯಂಭೋ ಸಂಭವಾ ನಂಬಿದ ಕಾಯೊ ಜಂಭಾರಿನುತ ಭವಾ. .. ಜಂಭಾರಿನುತ ಭವಾ. …

ರಜತ ಪರ್ವತ ನಿವಾಸ …ಆಆಆ..… ರಜತ ಪರ್ವತ ನಿವಾಸ ನಿರ್ಮಲ ಭಾಸ | ಗಜದೈತ ನಾಶ ಗಿರೀಶ | ಸುಜನರ ಮನೋವಿಲಾಸ ವ್ಯೋಮಕೇಶ | ತ್ರಿಜಗ ತಲ್ಲಣ ಗೌರೀಶ ಅಜಸುತನದ್ವಾರ ಭಜನೆಯ ಕೆಡಿಸಿದೆ | ಅಜಗರ ಮಂದಿರ ಗಜಮುಖ ಜನಕನೆ | ಗಜಗಮನೆ ಮುನಿ ತನುಜನ ಕಾಯ್ದನೆ ಸ್ರಜಮುನಿ ವಂದಿತ ಭಜಿಸುವೆ ನಿನ್ನನು ||
ಶಂಭೋ ಸ್ವಯಂಭೋ ಸಂಭವಾ ನಂಬಿದೆ ಕಾಯೋ ಜಂಭಾರಿನುತ ಭವಾ…. ಜಂಭಾರಿನುತ ಭವಾ. …

ಮಧುರಾಪುರಿ ನಿಲಯ….ಆ….ಆ…ಆ… ಮಧುರಾಪುರಿ ನಿಲಯ ಮ್ರತ್ಯುಂಜಯ | ಸದಮಲ ಸುಮನಗೆಯ | ಸದಾನಮಿಪರ ಹ್ರದಯ ದೊಳಗುಲ್ಲ | ಭಯ ಸದೆಯುತ್ತ ಕೊಡು ಅಭಯ ಸದಾಶಿವ ಜಾಹ್ನವಿ ಧರಕ್ರತ ಮಾಲ
ನದಿತೀರದಿ ವಾಸವಾಗಿರ್ಪ ಸೌಂದರ್ಯ | ಮಧುರಿಪು ವಿಜಯವಿಠ್ಠಲನ ಪಾದಾಭ್ಜಕೆ ಮಧುಪನೆಂಬ ಪಂಚ ವದನ ಕೈಲಾಸದ ||
ಶಂಭೋ ಸ್ವಯಂಭೋ ಸಂಭವಾ ನಂಬಿದೆ ಕಾಯೋ ಜಂಭಾರಿನುತ ಭವಾ. …. ಜಂಭಾರಿನುತ ಭವಾ. .. |

ಶಂಭೋ ಸ್ವಯಂಭೋ ಸಂಭವಾ. .. ಶಂಭೋ ಸ್ವಯಂಭೋ ಸಂಭವಾ… ಶಂಭೋ ಸ್ವಯಂಭೋ ಸಂಭವಾ….

Lyrics in English

Shambho swayambho sambhava nambide kayo jambharinuta bhava ….. Jambharinuta ….

Vasudeva viranchintanaya umamanohara ughradurjati | samajaajina vasanabhushana sumana suptansaa |kamahara kailasa mandira somasurya nala vilochana | kamitaprada karunisemage sada sumangalava … sada sumangalava …… sada sumangalava …..

Ambharapura hara shambha triyambaka shambharari ripu gambhira karune | shambho swayambho sambhava ..a… a…. | nambide kayo jambharinuta bhava ||

Hasita bhushita sharira bhaktaruddhara vishakanta durita hara |pashupati phanipahara pavanakara trishula dhamarugadhara | vasanalayana vikasitaambhujamukha shashidhara makarakkasa madamardhana | gasanegolipa tamasava kaledu manasadali rangana bisaja padava toro | shambho swayambho sambhava nambida kayo jambharinuta bhava …. jambharinuta bhava ….

Rajata parvata nivasa … a…. a ….. rajata parvata nivasa, nirmalabhasa, gajadaita nasha girisha | sujanara manovilasa vyomakesha trijaga tallana gowrisha, ajasutanadwara bhajaneya kediside ajagara mandira gajamukha janakane | gajagamane muni tanujana kaydane srujamuni vandita bhajisuve ninnanu | shambho swayambho sambhava nambide kayo jambharinuta bhava ….. Jambharinuta ….

Madhurapuri nilaya ….. A….. A…….a…… madhurapuri nilaya mrutyunjaya sadamala sumanageya | sadanamipara hrudayadolagulla | bhaya sadeyutta kodu abhaya sadashiva jahnavi dharakrutamala | naditeeradi vasavagirpa soundarya | madhuripu vijayavittalana padabjake madhupanemba pancha vadana kailasada | shambho swayambho sambhava nambide kayo jambharinuta bhava ….. Jambharinuta ….


ಕಾಯ ಬೇಕೆನ್ನ ಗೋಪಾಲ / Kaayabekenna gopaala

ಕಾಯ ಬೇಕೆನ್ನ ಗೋಪಾಲ | ಒಂದು ಉಪಾಯವನರಿಯೆನು
ಭಕುತರ ಪಾಲ ||ಕಾಯ ಬೇಕೆನ್ನ||

ಹಲವು ಜನ್ಮಗಳೆತ್ತಿ ಬಂದೆ ಮಾಯಾ ಭಲವೆಂಬುದರಿಯದೆ
ಭವದೊಳು ನೊಂದೆ | ಬಲು ಭಯವಾಯಿತು ಮುಂದೆ||2||
ನೀನು ಸುಲಭನೆಂದು ಕೇಳಿ ಶರಣೆಂದೆ ತಂದೆ‌
||ಕಾಯ ಬೇಕೆನ್ನ||

ವಿತ್ತದೊಳಗೆ ಮನವಿಟ್ಟು ನಿನ್ನ ಉತ್ತಮ ನಾಮದ ಸ್ಮರಣೆಯ ಬಿಟ್ಟು |
ಮತ್ತನಾದೆ ಮತಿಗೆಟ್ಟೂ ||2|| ಇದ ಚಿತ್ತದಲಿ ತಿಳಿದು ಬಲು ದಯವಿಟ್ಟು
||ಕಾಯ ಬೇಕೆನ್ನ||

ಗುರುತರ ಪಾಪಂಗಳೆಲ್ಲ ಅನ್ಯ ನರರೇನ ಬಲ್ಲರು ಯಮಧರ್ಮ ಬಲ್ಲ |
ನರಕಕೆ ಒಳಗಾದೆನಲ್ಲ ಸಿರಿ ವರನಾರಾಯಣಾ… ನಾರಾಯಣಾ…..ನಾರಾಯಣಾ…
ಸಿರಿ ವರ ನಾರಾಯಣ ಪುರಂದರವಿಠ್ಠಲಾ
||ಕಾಯ ಬೇಕೆನ್ನ||

Lyrics in English

Kaayabekenna bekenna gopaala | ondu upaayavanariyenu bhakutara paala ||kaayabekenna||

Halavu janmagaletti bande maaya bhalavembudariyade bhavadolu nonde | balu bhayavaayitu munde ||2|| neenu sulabhanendu kelisharanende tande ||kaayabekenna||

Vittadolage manavittu ninna uttama naamada smaraneya bittu| mattanaade matigettu||2|| ida chittadali tilidu balu dayavittu ||kaayabekenna||

Gurutara paapangalella anya nararenu ballaru yamadharma balla | narakake olagaadenalla siri vara naarayanaa …. narayana …. rarayana …. siri vara narayana purandaravittala ||kaayabekenna||


ಸಾರಿ ಬಂದನೆ ಪ್ರಾಣೇಶ / Saari bandane pranesha

ಸಾರಿ ಬಂದನೆ ಪ್ರಾಣೇಶ ಬಂದನೆ | ಸಾರಿ ಬಂದು ಲಂಕಾಪುರವ
ಮೀರಿದ ರಾವಣನ ಕಂಡು | ಧೀರನು ವೈಯಾರದಿಂದ |
||ಸಾರಿ ಬಂದನೆ||

ವಾಯುಪುತ್ರನೆ ಶ್ರೀರಾಮನ ದೂತನೆ | ಪ್ರೀತಿಯಿಂದ ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ ||2||
||ಸಾರಿ ಬಂದನೆ||

ಭೀಮಸೇನನೆ ಕುಂತಿತನಯನೆ | ವಿರಾಟನ ಮನೆಯೊಲು ನಿಂತು ತಾ ಕೀಚಕನ ಸಂಹರಿಸಿದವನೆ ||2||
||ಸಾರಿ ಬಂದನೆ||

ಮಧ್ವರಾಯನೆ ,ಸರ್ವಜ್ಞ ಶ್ರೇಷ್ಠನೆ | ಅದ್ವ್ಯೆತವ ಗೆದ್ದು ಪುರಂದರವಿಠ್ಠಲನ ಮುಂದೆ ನಿಂದವನೆ||2||
||ಸಾರಿ ಬಂದನೆ||

Lyrics in English

Saari bandane pranesha bandane |saari bandu lankaapurava meerida raavanana kandu | dheeranu vaiyaaradinda ||saari bandane||

Vaayuputrane sriraamana dutane |preetiyinda seetanganege mudrikeya tandittavane||2||. ||saari bandane||

Bhimasenane kuntitanayane | viraatana maneyolu nintu taa keechakana samharisidavane ||2|| ||saaribandane||

Madhwaraayane sarvajna shreshtane | adwaitava geddu purandaravittalana munde nindavane ||2||saari bandane ||