ಮಂಜುಳ ಭಾಷಿಣಿ ಶಾರದೆ ನಮೋ ನಮೋ | ರಜನೀ ಕರುಣಾ ಬೆಳಕ ಚೆಲ್ಲುವ ದೇವಿ ನಮೋ ನಮೋ | ನೈಜ ಭಕ್ತಿಗೆ ಒಲಿವ ಶಾರದೆ ನಮೋ ನಮೋ | ರಕ್ಷಿಸುವ ಶ್ರೀ ಶಾರದೆ ನಮೋ ನಮೋ || ||ಶ್ರಂಗೇರಿ||
Lyrics in English
Shringeri sharade namo namo | shrungara sharade namo namo | bangara sharade namo namo | sangeeta sharade namo namo || shringeri sharade ||
Adishankarararchisida sharade namo namo | veda viharini sharade namo namo | modasoumya roopini mateye namo namo | nada vaibhavadi mereva deviye namo namo || shringeri ||
Manjula bhashini sharade namo namo | rajani karuna belaka chelluva devi namo namo | naija bhaktige oliva sharade namo namo | rakshisuva sri sharade namo namo || Shringeri ||
ಸಂದಿತಯ್ಯಾ ಪ್ರಾಯವು ಸಂದಿತಯ್ಯಾ ಕೃಷ್ಣಾ….| ಒಂದು ದಿನವು ಸುಖವು ಇಲ್ಲ ಕುಂದಿ ಹೋದೆ ಕಷ್ಟದಿಂದ | ಬಂಧನವನು ಬಿಡಿಸುದೆನ್ನ ತಂದೆ ನೀನೆ ರಕ್ಷಿಸಯ್ಯ || ||ಸಂದಿತಯ್ಯಾ||
ತಂದೆ ಉದರದಿ ಮೂರು ತಿಂಗಳು ಸಂದು ಹೋಯಿತು ತಿಳಿಯದೆ | ಬೆಂದೆ ನವಮಾಸದೊಳು ಗರ್ಭದಿ ನಿಂದು ತಾಯಿಯ ಗರ್ಭದಿ | ಕುಂದಿತಾಯುವು ಒಂದು ವರ್ಷ ಇಂದಿರೇಶನೆ ಕೇಳು ದುಃಖವ | ಬಂಧನದೊಳಗೆ ನಿಂದೆನನುದಿನ ಮುಂದೆ ಮೋಕ್ಷದ ಮಾರ್ಗ ಕಾಣದೆ || ||ಸಂದಿತಯ್ಯಾ||
ಕತ್ತಲೆಯೊಳಿರಲಾರೆ ಎನುತಲಿ ಹೊತ್ತೆ ಹರಕೆಯ ನಿನ್ನೊಳು| ನಿತ್ಯದಲಿ ಮಲಮೂತ್ರ ಬಾಲ್ಯದಿ ಹೊತ್ತು ಕಳೆದೆನು ಎನ್ನೊಳು | ಮತ್ತೆ ಹದಿನಾರರ ಪ್ರಾಯದಿ ಉಕ್ಕಿ ನಡೆದೆನು ಧರೆಯೊಲು | ಹತ್ತಿ ಸಂಸಾರದ ಮಾಯೆಯು ಸಿಕ್ಕಿದೆನು ಭವ ಬಲೆಯೊಳು || ||ಸಂದಿತಯ್ಯಾ||