ಜಯ ವಾಯು ಹನುಮಂತ ಜಯ / Jaya vayu hanumantha jaya

ಜಯ ವಾಯು ಹನುಮಂತ ಜಯ ಭೀಮ ಬಲವಂತ
ಜಯ ಪೂರ್ಣ ಮತಿವಂತ ಜಯ ಸಲಹೋ ಸಂತ

ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ
ನಂದದಲಿ ಮಾಡಿ ಕಪಿ ಬಲವ ಕೂಡಿ
ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ
ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ

ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀ ಪಾರ್ಥಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕರ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂರ್ಜಗದಿ ಮೆರೆದೆ

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವನು ಕುಟ್ಟಿ
ಉರಗ ಬಂಧದಿಂದ ಕಪಿವರ್ಯಾರು ಮೈ ಮರಿಯೆ
ಗಿರಿಯ ಸಂಜೀವನವ ತಂದು ಬದುಕಿಸಿದ

ಧುರದಲಿ ದುರ್ಯೋಧನನ ಬಲವನು ತಿಳಿದೆ
ಅರಿತು ದುಷ್ಯಾಸನನ ಒಡಲನು ಬಗಿದೆ
ಉರವ ತಪ್ಪಿಸಿ ಕೌರವನ ತೊಡೆಗಳ ಮುರಿದೆ
ಹರಿಯ ಕಿಂಕರ ದುರಂಧರಗಾರು ಸರಿಯೆ

ಕಲಿಯುಗದ ಬಲು ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀ ಹರಿಯ ಗುಣಗಳನು ಮರೆಸಿ
ಕಲಿಯನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀ ಕೃಷ್ಣ ಪರನೆಂದೆ


Lyrics in English

Jaya vayu hanumantha jaya bheema balavantha
jaya purna mativantha jaya salaho santha  ||pa||

Anjaneyali hutti andu ramana seve
nandadindali maadi kapi balava kudi
sindhu langisi kalara vana bhangisi seete-
dungurava kotti lankapurava sutti  || 1||

Harige chudamani yanitthu harigala kudi
sharadiyanu katti aribalavanu kutti
uraga bandandinda kapivararu maimareye
giriya sanjivanava thandhu badukisida || 2||

Dwaparanthyadalli paandu bhupanatmanendenisi
sripartha sarathiya bajaka neenade
paapi baka keechaka hidimbakara
kopadindali taride murjjagadi merede  || 3||

Dhuradali duryodhanana bhalavanu thilide
aritu dushaasanana odalanu bagede
urava tappisi kauravanna thodegala muride
hariya kinkara durandharagaaru sariye  || 4||

Kali yugadali kallarudisi durmatigalanu balisi
sri hariya gunagala maresi
kaliyabbu sarisalu guruvaagi avatarisi
kalara durmata muride srikrishna paranende || 5||


ಅರುಣೋದಯದಂತೆ ನೀನಾಗಿ / Arunodayadante neenaagi

ಅರುಣೋದಯದಂತೆ ನೀನಾಗಿ ||2||
ನಿರ್ಮಲ ದರ್ಶನ ಕರುಣಿಸು ಶ್ರೀವದನ ||2||
ಹರಿಹರ ತನಯ ನಿನ್ನ ಸುಪ್ರಭಾತವ ಹಾಡಿ ||2||
ದಾಸನು ಕರುಣೆಗೆ ಕಾದಿಹೆನು ||2||
||ಅರುಣೋದಯದಂತೆ||

ಆದಿತ್ಯ ಕಿರಣಗಳು ನಿರಂತರವಾಗಿರೆ ||2||
ಆನಂದ ಮೂರ್ತಿ ನಿನ್ನ ಸನ್ನಿಧಿಯೋಳ್ ||2||
ನಿನ್ನ ರಾಗಮಾಲಿಕೆ ಹಾಡುವ ದಾಸನಿಗೆ ||2||
ಚಿರದರ್ಶನ ನೀಡು ಭಗವಂತ ||2||
||ಅರುಣೋದಯದಂತೆ||

ಹೊಣ್ಣಿನ ಬಣ್ಣವ ,ಸೂಸುವ ಸಂಜೆಗಳು
ಹೊಣ್ಣಿನ ಬಣ್ಣವ ,ಸೂಸುವ ಸಂಗ್ರಮ
ಸಂಜೆಗಳೆನಿತೊ ನಿನ್ನ ಆಲಯದಿ||2||
ಕಾದಿಹೆನೊ ಪ್ರಭು ಅಭಯಾಶ್ರಯಕಾಗಿ||2||
ಏನಿದ್ದರು ನೀನೆ ಚಿನ್ಮಯನೆ||2||
||ಅರುಣೋದಯದಂತೆ||

Lyrics in English

Arunodayadante neenaagi | nirmala darshana karunisu srivadana | harihara tanaya ninna suprabhaatava haadi, daasanu karunege kaadihenu || Arunodayadante ||

Aditya kiranagalu nirantaravaagire | anandamurthi ninna sannidhiyol | ninna raagamaalike haaduva daasanige | chiradarshana needu bhagavanta || Arunodayadante ||

Honnina bannava soosuva sangrama | sanjegalenito ninna alayadi | kaadiheno prabhu abhayaashrayakaagi | eniddaru neene chinmayane || Arunodayadante||


ಸ್ವಾಮಿ ಸಂಗೀತದಿಂದೊಲಿಸೆ / Swami sangeetadindolise

ಸ್ವಾಮಿ ಸಂಗೀತದಿಂದೊಲಿಸೆ ಗಾನ ಗಂಧರ್ವನಲ್ಲವು ನಾನು|
ಜಪಮಾಲೆಯಂತೆ ಕೈಯಲಿ ಮಂತ್ರ ಶ್ರತಿಮಾಡೊ ತಂಬುರನಂತೆ…. |ಸ್ವಾಮಿ|
ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ…

ಬ್ರಹ್ಮಯಾಮದಲಿ ಪೂಜ ಕ್ಷೇತ್ರದಲಿ ಸನ್ನಿಧಿಯಲ್ಲಿ ನಾನಿರುವೇ
ರತ್ನಗಿರಿನಾಥ ಅಯ್ಯಪ್ಪ ನಿನ್ನ ಪುಣ್ಯಾಕ್ಷರ ಮಂತ್ರ ಹಾಡಿ |
ಏನೋ ಸಂತಸದ ಮೋಡೀ….. ||ಸ್ವಾಮಿ||
ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ…

ಮನುಷ್ಯನು ಆದ ನನ್ನಕಾಯೋ ಮಣಿಕಂಠ ಸ್ವಾಮಿ ದಯೆ ತೋರಿ | ಮದ ಮಾತ್ಸರ್ಯಗಳ, ದೂರ ಮಾಡುವ ಮಹದೋಪದೇಶವ ನಿ ಸಾರಿ ||ಮದ||
ಮಹದೋಪದೇಶವ ನಿ ಸಾರಿ…|ಸ್ವಾಮಿ|
ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ…

ಸಾರೋಪದೇಶಗಳ ನಿನ್ನಯ ನಾಮದ ಮೊದಲಕ್ಷರವಾಗಿ ಹಾಡುವೆ | ಈ ವಿಶ್ವದಾದ್ಯಂತ ಹಾಡಿ ಭಗವಂತ ನಿನ್ನ ತೇಜಸ್ವರೂಪವ ಸಾರುವೆ | ಮನದಂತರಾಳದಿ ನಾ ಪೂಜಿಸುವೆ
||ಸ್ವಾಮಿ|| ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ…

Lyrics in English

Swami sangeetadindolise gaanagandharvanallavu naanu |swami| japamaaleyante kaiyali mantra shruti maado tamburanante…. |swami| swami ayyappa swami, shabarimale swami …..

Brahmayaamadali pooja kshetradali sannidhiyali naaniruve ……||brahma|| ratnagirinaatha ayyappa ninna punyakshara mantra haadi ||ratna|| eno santasada modi…… ||swami|| swami ayyappa swami, shabarimale swami …….

Manushyanu aada nanna kaayo manikanta swaami daya tori | mada maatsaryagala doora maaduva mahadopadeshava nee saari ||mada|| mahadopadeshava nee saari…. ||swami|| swami ayyappa swami, shabarimale swami …….

Saaropadeshagala ninnaya naamada modalaksharavaagi haaduve ||saaropa|| e vishvadaadyanta haadi bhagavanta ninna teja swaroopava saaruve ||e vishwa|| manadantaraaladi naa poojisuve ||swami|| swami ayyappa swami, shabarimale swami …..


ಮಕರಸಂಕ್ರಮ ದೀಪವ ನೋಡಲು / Makarasankrama deepava nodalu

ಮಕರಸಂಕ್ರಮ ದೀಪವ ನೋಡಲು ಮನಸ್ಸುಗಳ ಆಸೆ |
ಮಲೆಯಲಿ ಮಂಜುಮಾರುತ ಸಹಿಸಿ ನಡೆದಿದೆ ಪರೀಕ್ಷೆ |
|| ಮಕರಸಂಕ್ರಮ||

ಅಭಯನಾಶ್ರಯ ಬೇಡುವುದೊಂದೆ ನಮಗೆ ಸಂತೋಷ |
ಜಗದ ಮಾನವರೆಲ್ಲ ನಿನಗೆ ಶರಣು ಸರ್ವೇಶಾ….|
ಹರಿಹರಾತ್ಮಜ ಅಯ್ಯಪ್ಪ ನಿನ್ನ ಶಬರಿಗಿರಿಶ್ರಂಗ |
ಸನ್ಮತಿ ತರುವ ಮೋಕ್ಷದ ದಾರಿ ನಮಗೆ ಧನ್ಯದ ರಂಗ |
||ಮಕರಸಂಕ್ರಮ||

ಹಸಿರು ವರ್ಣ ತಪೋವನ ನಮಗೆ ಅಭಯ ಸಂಕೇತಾ…|
ಅಖಿಲ ಮಾನವ ಜನ್ಮಗಳಿಗೆ ಶರಣು ಇ ಸಂದೇಶಾ…|
ಹರಿಹರಾತ್ಮಜ ಅಯ್ಯಪ್ಪನಿರುವ ಶಬರಿ ಗಿರಿಶ್ರಂಗ |
ಸುಕ್ರತ ಪಡೆಯೆ ಬಂದವರೆಲ್ಲ ಪರಮ ಧನ್ಯರು |
||ಮಕರಸಂಕ್ರಮ||

Lyrics in English

Makarasankrama deepava nodalu manasugala aase | maleyali manjumaaruta sahisi nadedidie pareekshe ||makarasankrama||

Abhayanaashraya beduvudonde namage santhosha | jagada maanavarella ninage sharanu sarvesha….| hariharaatmaja ayyappa ninna shabarigiri shrunga ||2|| sanmati taruva mokshada daari namage dhanyada ranga ||makara sankrama||

Hasiruvarna tapovana namage abhaya sanketha ..| akhila maanava janmagalige sharanu e sandesha…| hariharaatmaja ayyappaniruva shabari girishrunga |sukruta padeye bandavarella parama dhanyaru ||makarasankrama||


ಬಾಲಕನಿವನು ಅಲ್ಲಪ್ಪ /Baalakanivanu allappa

ಬಾಲಕನಿವನು ಅಲ್ಲಪ್ಪ | ಹುಲಿಯೇರಿದ ವೀರ ಅಯ್ಯಪ್ಪ
ಕರುಣಾಸಾಗರ ಇವನಪ್ಪ | ಇವನೊಲಿದರೆ ಭಯವೆ ಇಲ್ಲಪ್ಪ
||ಬಾಲಕನಿವನು||
ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಅಯ್ಯಪ್ಪ||ಶರಣಂ||

ಭಕುತರ ಬೇಡಿಕೆ ಸಲ್ಲಿಸಲು, ಹರಿಹರರಿಬ್ಬರು ಶಕ್ತಿಗಳು
ಒಂದೆಡೆ ಸೇರುತ ಶಿಶುವಾಯಿತು
ಅ ಶಿಶುವೆ ಲೋಕದ ಬೆಳಕಾಯಿತು ||

ಗಣಪನು ಇವನಿಗೆ ಅಣ್ಣಯ್ಯ | ಇವ ಪಳನಿ ಸುಬ್ಬನಿಗೆ ತಮ್ಮಯ್ಯ | ಸುಲಭದಲಿ ಇವ ಸಿಗನಯ್ಯ
ಶರಣಾದ ಮೇಲೆ ಕೈ ಬಿಡನಯ್ಯ ||ಬಾಲಕನಿವನು||

ಪಂದಳರಾಜನು ಕಾಡಿನಲಿ, ಬರುತಿರೆ ಪಂಪಾ ತೀರದಲಿ
ಕಂಡ ಕಂದನೆ ಇವನಯ್ಯ ಈ ಭಾಗ್ಯವು ಯಾರಿಗೆ ಉಂಟಯ್ಯ

ಹಾಲನು ಕುಡಿಸದ ಅಮ್ಮನಿಗೆ | ಹುಲಿ ಹಾಲಿನ ಬಯಕೆಯ ತೀರಿಸಿದ | ಸಿರಿಯನು ಕಂಡು ತೃಣ ಎಂದ
ವೈರಾಗ್ಯವ ವರಿಸಿದ ಮುದದಿಂದ ||ಬಾಲಕನಿವನು||

ರಾಜ್ಯವ ಬಿಟ್ಟು ದೂರಾದ | ಬಲು ಭೀಕರ ಕಾಡಲಿ ಮುನ್ನಡೆದ
ಶಬರಿಯ ಗಿರಿಯ ಮನೆಮಾಡಿ ಅಯ್ಯಪ್ಪನು ಅಲ್ಲೆ ಸ್ಥಿರನಾದ||
||ಶರಣಂ||

Lyrics in English

Baalakanivanu allappa | huliyerida veera ayyappa | karunaasagara evanappa | evanolidare bhayave ellappa ||baalakanivanu|| sharanam sharanam ayyappa |swami sharanam ayyappa||sharanam||

Bhakutara bedike sallisalu, harihararibbara shaktigalu | ondede seruta shishuvaayitu | a shishuve lokada belakaayitu ||

Ganapanu evanige annayya | eva palani subbanige tammayya | sulabhadali eva siganayya| sharanaada mele kai bidanayya||balakanivanu||

Pandalaraajanu kadinali, barutire pampaa teeradali| kanda kandane evanayya e bhagyavu yaarige untayya||

Haalanu kudisada ammanige | huli haalina bayakeya teerisida| siriyanu kandu truna enda vairaagyava varisida mudadinda||baalakanivanu||

Raajyava bittu doorada| balu bhikara kaadali munnadeda| shabariya giriya manemaadi ayyappanu alle stiranaada||sharanam||


https://youtu.be/U0ON0kWtiCU

ಒಟ್ಟುಗೂಡಿ ಬಂದೆವು ಪಂಪೆ /Ottugoodi bandevu, pampe

ಸ್ವಾಮಿಯೇ ಅಯ್ಯಪ್ಪೋ, ಅಯ್ಯಪ್ಪೋ ಸ್ವಾಮಿಯೇ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಕಲ್ಲುಂ ಮುಳ್ಳುಂ ಕಾಲಿಗೆ ಮೆತ್ತೇ, ಸ್ವಾಮಿಯ ಕಂಡಾಲ್ ಮೋಕ್ಷಂ ಗಿಟ್ಟು, ಸ್ವಾಮಿಯೇ ಅಯ್ಯಪ್ಪೋ
ಅಯ್ಯಪ್ಪೋ ಸ್ವಾಮಿಯೇ

ಒಟ್ಟುಗೂಡಿ ಬಂದೆವು, ಪಂಪೆ ಮಡಿಲಲಿ ಮಿಂದೆವು
ಹಾಡು ಹಾಡುತ ಸ್ವಾಮಿ ಮಹಿಮೆ ಹೊಗಳುತಾ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ ||2||
ಬಂದೆವೂ…ಅಯ್ಯಪ್ಪಾ.. ಸ್ವಾಮಿ ಅಯ್ಯಪ್ಪಾ….ಸ್ವಾಮಿಯೇ…..
||ಒಟ್ಟುಗೂಡಿ||

ಶರವಣ ಶಾಸ್ತನೆ ನಮೋ ನಮೋ…
ಧರ್ಮಕೆ ಮುಡಿಪಾಗಿ ಬಂದೆವು
ಸ್ವಾಮಿಯೇ…. ಶರಣಂ ಅಯ್ಯಪ್ಪ |
ಧರೆ ಮೇಲೆ ಅವನ ಕೀರ್ತಿ ಹಾಡುವ
ಭೂಲೋಕದಲ್ಲು ಅವನ ಕೊಂಡಾಡುವ
ಅಂದದ ಚೆಂದದ ಮಂಗಳಮೂರುತಿ ಶಾಸ್ತನ ಸ್ತುತಿಸುವ
ಆನಂದ ತುಂಬಿದ ಇ ಭಕ್ತವೃಂದದ ವಂದನೆ ಸಲ್ಲಿಸುವ
||ಒಟ್ಟುಗೂಡಿ||

ತಂಪಾದ ತೆಂಕಣದ ಗಾಳಿ ಬೀಸಲು
ಬಾನೆಲ್ಲ ಕೆಂಪಾಗಿ ರಂಗೇರಲು |
ಸ್ವಾಮಿಯೇ ಶರಣಂ ಅಯ್ಯಪ್ಪ ||
ನೆನೆದಾಗ ಧರ್ಮಶಾಸ್ತ ಬಂದಿರಲು
ಸಂತಸವೆ ಉಕ್ಕಿ ಉಕ್ಕಿ ಬಂದಿರಲು
ಪಂದಳರಾಜನ ಮುದ್ದಿನ ಕಂದನ
ಎಂದೆಂದು ಭಜಿಸುವ ಕಾಂತಿ ಚೆಲ್ಲುವ ಚೆಲುವನಿವನ‌
ಕೀರ್ತಿ ಹೊಗಳುವ ||ಒಟ್ಟುಗೂಡಿ||

Lyrics in English

Swamiye ayyappo, ayyappo swamiye |swami sharanam ayyappa sharanam | ayyappa sharanam swami sharanam | kallum mullum kaalige mette, swamiya kandaal moksham gittu, swamiye ayyappo, ayyappo swamiye ||

Ottugoodi bandevu, pampe madilali mindevu, haadu haduta swami mahime hogaluta| swami sharanam ayyappa sharanam ||2|| bandevoo …. Ayyappa … Swami ayyappaa ….. Swamiye …… ||Ottugoodi||

Sharavana shaastane namo namo ….. Dharmake mudipaagi bandevu| swamiye …… Sharanam ayyappa | dhare mele avana keerti haaduva | bhulokadallu avana kondaaduva andada chendada mangalamooruti shaastana stutisuva | ananda tumbida e bhaktavrundada vandane sallisuva ||ottugoodi||

Tampaada tenkanada gaali beesalu | baanella kempaagi rangeralu | swamiye sharanam ayyappa|| nenedaaga dharmashaasta bandiralu, santasave ukki ukki bandiralu, pandalaraajana muddina kandana, endendu bhajisuva kaanti chelluva cheluvanivana keerti hogaluva||ottugoodi||