ಮುಟ್ಟಬೇಡಿ ಮುಟ್ಟಬೇಡಿ /Muttabedi muttabedi muraharana

ಮುಟ್ಟಬೇಡಿ ಮುಟ್ಟಬೇಡಿ ||
ಮುರಹರನ ದಾಸರನು||ಮುಟ್ಟಬೇಡಿ||
ಕಟ್ಟು ಮಾಡಿದನಂತೆ ಯಮ ತನ್ನ ದೂತರಿಗೆ||ಕಟ್ಟು||
||ಮುಟ್ಟಬೇಡಿ||

ತಿರುಮಣ್ಣು ,ಶ್ರೀಚೂರ್ಣ ಪೂರ್ಣ ದ್ವಾದಶ ನಾಮ
ಸಿರಿತುಳಸಿ ವನಮಾಲೆ ಕೊರಳಿನೊಳಗೆ ಇಪ್ಪವರ
||ತಿರುಮಣ್ಣು||
ತಿರುಮಂತ್ರ ತೀರ್ಥ ಪ್ರಸಾದಕ್ಕೊಳಗಾದವರ||2||
ತಿರುಪತಿಯ ಯಾತ್ರೆಯನು ಮಾಡಿದ ಮಹಾತ್ಮರನು
||ಮುಟ್ಟಬೇಡಿ||

ಬಡವನಾಗಲಿ ,ಅವನು ಬಲ್ಲಿದನು ಆಗಲಿ
ಕಡುಮೂರ್ಖ, ಘೋರ ಪಾತಕಿಯಾಗಲಿ
||ಬಡವನಾಗಲಿ||
ನುಡಿ ನುಡಿಯೆ ಮಾಧವನ
ಬಿಡದೆ ಕೊಂಡಾಡುವರ||ನುಡಿ||
ಗೊಡವೆ ಬೇಡೆಂದ ಯಮ ತನ್ನ ದೂತರಿಗೆ
||ಮುಟ್ಟಬೇಡಿ||

ವಾಸುದೇವ ಎಂಬ ವಾಕ್ಯವನ್ನು ಪಠಿಸುವರ
ಬೇಸರದೆ ಶ್ರೀಹರಿಯ ಧ್ಯಾನದೊಳಗಿಪ್ಪವರ
||ವಾಸುದೇವ||
ವಾಸುಕಿ ಶಯನ ಕಾಗಿನೆಲೆಯಾದಿ ಕೇಶವನ||2||
ದಾಸರ ,ದಾಸರ ದಾಸನಂತೆಂಬವರ
||ಮುಟ್ಟಬೇಡಿ||

Lyrics in English

Muttabedi muttabedi muraharana dasaranu ||muttabedi|| kattu maadidanante yama tanna dutarige ||muttabedi||

Tirumannu srichurna | purna dwadashanaama | siritulasi vanamaale | koralinolage eppavara || tiru tomantra teerthaprasadakkolagaadavara ||2 times|| tirupatiya yatreyanu maadida mahaatmaranu ||muttabedi||

Badavanaagali avanu ballidanu agali, kadumurkha ghora paatakiyagali ||2 times||nudi nudiye madhavana bidade kondaaduvara ||nudi||godave bedenda yama tanna dutarige||muttabedi||

Vasudevayemba vaakyavannu pathisuvara besarade srihariya dhyaanadolagippavara||vasudeva||vasuki shayana kaagineleyaadi keshavana||2|| dasara, dasara dasanantembavara||muttabedi||


ಎಲ್ಲಿ ಮರೆಯಾದೆ ವಿಠ್ಠಲಾ /Elli Mareyade Vittalaa

ರಂಗಾ…..ವಿಠ್ಠಲಾ….
ರಂಗಾ….ಪಾಂಡುರಂಗ ಎಲ್ಲಿ ಮರೆಯಾದೇ….
ಪಾಂಡುರಂಗಾ…ಆ…ಏಕೆ ದೂರಾದೆ

ಎಲ್ಲಿ ಮರೆಯಾದೆ ವಿಠ್ಠಲಾ, ಏಕೆ ದೂರಾದೆ
ರಂಗ ಏಕೆ ದೂರಾದೆ ಎಲ್ಲಿ ಮರೆಯಾದೆ. …

ದೇವರ ದೇವ ಎಂಬುದ ಮರೆತೆ ಸೇವಕನಂತೆ ನನ್ನೆಡೆ ನಿಂತೆ ||2||
ಮಾಧವ ನಿನ್ನ ಮಾಯಾಜಾಲ ||2||
ಮಾನವ ನಾನು ತಿಳಿಯಲಿಲ್ಲ ವಿಠ್ಠಲಾ….ರಂಗಾ…
||ಎಲ್ಲಿ ಮರೆಯಾದೆ||

ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರು ನೀವು ||2||
ಬಲ್ಲಿರಿ ಅವನ ಅಂತರಂಗ ||2||
ಎಲ್ಲಿಹ ಹೇಳಿ ಪಾಂಡುರಂಗ ವಿಠ್ಠಲಾ. …ರಂಗಾ…
||ಎಲ್ಲಿ ಮರೆಯಾದೆ||

ಎತ್ತೆತ್ತಲೀಗ ಕಗ್ಗತ್ತಲಾಯಿತು ಗೊತ್ತಾಗದಾಯಿತೆ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ

ಮುತ್ತಂತ ನಿನ್ನ ಕೈ ತುತ್ತ ತಿನ್ನೊ ಹೊತ್ತಾಯಿತು ಬಾರೊ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ

ಬತ್ತಿರೊ ಬದುಕ , ಎತ್ತಿಸಿ ನಿ ಬೆಳಕ ,ಹತ್ತಿಸಿ ನೀ ಕಾಯೊ ವಿಠ್ಠಲಾ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ

ಹೆತ್ತವಳಂತೆ ನೀನೆತ್ತಿಕೊಂಡು, ನನ್ನತ್ತ ನೋಡೊ ವಿಠ್ಠಲಾ. ..
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ

ನೀ ಎನ್ನ ಧನ, ನೀ ಎನ್ನ ಮನ , ನೀ ಪ್ರಾಣ ವಿಠ್ಠಲ
ಎನ್ನಾತ್ಮ ನಿಧಿಯೇ ಮುಖ ತೋರೊ ದೊರೆಯೆ||2||
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ………..

ರಂಗಾ….ವಿಠ್ಠಲಾ. …..ರಂಗಾ….

Lyrics in English

Ranga.. Vittalaa.. Ranga..
Paanduranga..
Elli Mareyade Paanduranga..a..
Eke Dooraade

Elli Mareyade Vittalaa
Yeke Dooraade
Ranga Yeke Dooraade
Elli Mareyade ||

Devara deva embuda marethe
sevakananthe nannede ninthe ||2||
Maadhava ninna maayaajaala ||2||
Maanava naanu thiliyalilla
Vittalaa.. Ranga.. ||Elli Mareyade||

Saadisi hariya preethiya ilavu
poojisidantha poojyaru neevu||2||
Balliri avana antharanga ||2||
Elliha heli paanduranga
Vittala.. Ranga.. ||Elli Mareyade||

Ettettaleega kaggatthalaaytu gottaagadaayte vittalaa
Vittalaa Vittalaajai Jai Vittalaa

Muttantha ninnakaitutta thinno
hotaaytu baaro vittalaa
Vittalaa Vittalaajai Jai Vittalaa

Battiro badukaetti nee belaka
hattisi kaayo vittalaa
Vittalaa Vittalaa Jai Jai Vittalaa

Hettavalante neenettikondu
nannattanodo vittalaa
Vittalaa Vittalaajai Jai Vittalaa

Nee enna dhana nee enna mana nee praana vittalaa
ennatma nidhiye mukha thoro doreye
ennatma nidhiye mukha thoro doreye
Vittalaa Vittalaajai Jai Vittalaa |3|
Vittalaa Vittalaajai Jai Vittalaa |3|
Vittalaa Vittalaajai Jai Vittalaa…

Ranga.. Vittala.. Ranga..
Vittalaa Vittalaajai Jai Vittalaa..


ಗುಬ್ಬಿಯಾಳೊ ಗೋವಿಂದ ಗೋವಿಂದಾ / Gubbiyalo govinda govinda

ಗುಬ್ಬಿಯಾಳೊ ಗೋವಿಂದ ಗೋವಿಂದಾ |
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ||ಪ||

ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ||೧||

ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ||೨||

ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ||೩||

ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ||೪||

ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ||೫||

ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ||೬||

ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ||೭||

ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||೮||

ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ||೯||

ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ||೧೦||

ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ||೧೧||

ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ||೧೨||

ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ||೧೩||

ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ
ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ||೧೪ ||

Lyrics in English

Gubbiyalo govinda govinda |
Govinda govindanemdu neneyiro gubbiyalo ||pa||

Kesavanna nenedare klesa pariharavu gubbiyalo
Narayanana dhyanadinda narakabayavillavo gubbiyalo ||1||

Madhavanna nenedare manobishta koduvonu gubbiyalo
Govindanna dayadinda goradurita nasanavu gubbiyalo ||2||

Vishnubajaneyilladavage vaishnavara janmavunte gubbiyalo
Madhusudanana dhyanadinda atisayavu ihudo gubbiyalo ||3||

Trivikramana nenedare savitriyagiharo gubbiyalo
Vamanadevaru namage varagala koduvoru gubbiyalo ||4||

Sridharanna nenedare siri namage olivalo gubbiyalo
Hrushikesana dhyanadinda hrudaya parisuddhavo gubbiyalo ||5||

Padmanaba nammellara palisi rakshipano gubbiyalo
Damodarana nenedare pamaratva bidisuvano gubbiyalo ||6||

Sankarshanana dhyanadinda santana abivruddhiyu gubbiyalo
Vasudevana dayadinda vamsa uddharavo gubbiyalo ||7||

Pradyumnana nenedare bupradakshine Palavu gubbiyalo
Aniruddhana sevise punitarahevo gubbiyalo ||8||

Purushottamanna puranapurushanemdu tiliyiro gubbiyalo
Adhokshaja nammellarigadharavagihano gubbiyalo ||9||

Narasimhadevaru namma kuladaivavo gubbiyalo
Acyuta lakshmiya kudi saccidanamdano gubbiyalo ||10||

Janardanadevaru jagakella sreshtharo gubbiyalo
Upendranu namma aparadhava kshamisuvano gubbiyalo ||11||

Harinamamrutake sari dhareyolage illavo gubbiyalo
Srikrushna rangesayembo siddhakriya ballare gubbiyalo ||12||

I gubbi paduvarige iha paravu santatavu gubbiyalo
Dharaniyolu acandrarka tarakavagiharu gubbiyalo ||13||

Hayavadananna padadhyana nitya mareyade ni nene manave
Namma hayavadananna padave nitya manave gubbiyalo ||14 ||


ಮುತ್ತೈದೆಯಾಗಿರಬೇಕು ಮುದದಿಂದಲಿ / Muttaideyaagirabeku mudadindali

ಮುತ್ತೈದೆಯಾಗಿರಬೇಕು ಮುದದಿಂದಲಿ | ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು ||ಪ||

ಗುರುಮಧ್ವಶಾಸ್ತ್ರವನು ಓದುವುದೆ ಮಾಂಗಲ್ಯ |ವರವೈರಾಗ್ಯವೆಂಬ ಒಪ್ಪುವ ಮೂಗುತಿ || ತಾರತಮ್ಯದರಿಮೆ ತಾಯಿತಿ ಮುತ್ತುಸರ |ಕರುಣರಸಗಳೆ ಉಳ್ಳ ಕಟ್ಟಾಣಿ ಕಟ್ಟಿಕೊಂಡು ||1||

ಹರಿಕಥೆಯ ಕೇಳುವುದೆ ಕಿವಿಗೆ ಮುತ್ತಿನ ಓಲೆ |ನಿರುತ ಸತ್ಕರ್ಮವೇ ನಿಜಕಾಂತಿಯು ||ಪರಮ ಭಕ್ತರ ಪಾದರಜ ಹರಳು ಬಂಗಾರ |ಗುರುಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ ||2||

ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು |ಕೊಡುವ ಧರ್ಮವೆಂಬ ಕುಪ್ಪಸವ ತೊಟ್ಟು ||ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ |ಧೃಡ ಭಕ್ತಿಯೆಂಬಂಥ ಕಡಗ – ಬಳೆ ಇಟ್ಟುಕೊಂಡು ||3||

Lyrics in English

Muttaideyagirabeku mudadindali | hattunooru namadodeya hari namma patiyendu ||pa||

Gurumadhwashastravanu oduvude mangalya | varavairagyavemba oppuva mooguti || taratamyadariye tayiti muttusara| karunarasagale ulla kattaani kattikondu ||1||

Harikatheya keluvude kivige muttina ole | niruta satkarmave nijakaantiyu | parama bhaktara paadaraja haralu bangaara | gurubhakutiyembanttha gandha kumkuma dharisi ||2||

podaviyolu parahitada pattavaaliyanuttu | koduva dharmavemba kuppasava tottu | bidade ennodeya sri purandara vithalana | dhruda bhaktiyembantha kadaga-bale ettukondu ||3||


ಮಕ್ಕಳ ಮಾಣಿಕ ಮನೋಹರ / Makkala manika manohara

ಮಕ್ಕಳ ಮಾಣಿಕ ಮನೋಹರ ನಿಧಿ-ವೈರಿ-|
ರಕ್ಕಸ ಶಕಟನ ತುಳಿದು ದೀಪಾದವೆ ||ಪ ||

ಬಲಿಯ ದಾನವ ಬೇಡಿ ನೆಲವ ಈರಡಿ ಮಾಡಿ |
ಜಲಧಿಯ ಪಡೆದದ್ದು ಈ ಪಾದವೆ ||                                                                                                                                  ಹಲವು ಕಾಲಗಳಿಂದ ಶಿಲೆ ಶಾಪವಡೆದಿರಲು |
ಫಲಕಾಲಕ್ಕೊದಗಿದುದೀ ಪಾದವೆ || 1 ||

ಕಡುಕೋಪದಿ ಕಾಳಿಂಗನ ಮಡುವ ಕಲಕಿ |
ಹೆಡೆಯನು ತುಳಿದುದು ಈ ಪಾದವೆ ||
ಸಡಗರದಿಂದ ಕೌರವನ ಸಿಂಹಾಸನವ |
ಹೊಡೆಮಗುಚಿ ಕೆಡಹಿದುದೀ ಪಾದವೆ ||2||

ಶೃಂಗಾರದಿಂದ ಹೆಂಗಳು ಲಕ್ಷುಮಿಯ ಸಹಿತ |
ಅಂಗನೆಯರೊತ್ತುವುದೀ ಪಾದವೆ ||
ಸಂಗಸುಖದಿಂದ ಶ್ರೀ ಪುರಂದರವಿಠಲನ |
ಅಂಗದೊಳಡಗಿದ್ದುದೀ ಪಾದವೆ ||3||

Lyrics in English

Makkala maanika manohara nidhi-vairi | rakkasa shakatana tulidu deepadave ||pa||


Baliya daanava bedi nelava eradi maadi | jaladhiya padedaddu ee padave | halavu kaalagalinda shile shaapava padediralu | phalakaalakkodagidudee paadave ||1||


Kadukopadi kaalingana maduva kalaki | hedeyanu tulidudu e paadave | sadagaradinda kouravana simhaasanava |hode maguchi kedahidudee paadave ||2||


Shrungaaradinda hengalu lakshumiya sahita | anganeyarottuvudee paadave | sangasukhadinda sri purandaravithalana | angadoladagiddudee paadave ||3||


ರಾಮದೂತನ ಪಾದ ತಾಮರಸವ / Ramadootana pada taamarasava kanda

ರಾಮದೂತನ ಪಾದ ತಾಮರಸವ ಕಂಡ||2||
ಆ ಮನುಜನೆ ಧನ್ಯನೂ||2||

ಶ್ರೀ ಮನೋಹರನಂಘ್ರಿ ಭಜಕ ಸ್ತೋಮ ಕುಮುದಕೆ ಸೋಮನೆನಿಸುವ ಭೂಮಿಯೊಳು ಯದುಗಿರಿಯ ಸೀಮೆಯ ಕಾಮವರದೊಳು ಪ್ರೇಮದಿಂದಿಹ ||ರಾಮ||

ಕೋತಿ ರೂಪದಿ ರಘುನಾಥನಾಜ್ಞೆಯ ತಾಳಿ ಪಾದೋದಿಯ ಲಂಘಿಸಿ ||ಕೋತಿ ರೂಪದಿ||
ಖ್ಯಾತ ಲಂಕೆಯ ಪೊಕ್ಕು ಶೋಧಿಸಿ ಮಾತೆಯನ್ನು ಕಂಡೆರಗಿ ದಶಮುಖ ಹೋತ ಖಳಕುಲ ವ್ಯಾತ ಘಾತಿಸಿ ಸೀತೆವಾರ್ತೆಯ ನಾಥಗರುಹಿದ ||ರಾಮ||

ಪಾಂಡುಸುತನೆ ಪ್ರಚಂಡ ಗದೆಯನ್ನು ದೋರ್ದಂಡದಿ ಧರಿಸುತಲೀ||ಪಾಂಡುಸುತ||
ಮಂಡಲದೊಳು ಭಂಡ ಕೌರವ ಚಂಡ ರಿಪುಗಳ ಖಂಡಿಸಿ ಶಿರ ಚೆಂಡನಾಡಿ ಸತಿಗೆ ಕರುಳಿನ
ದಂಡೆ ಮುಡಿಸಿದ ಉಧ್ಧಂಡ ವಿಕ್ರಮ ||ರಾಮ||

ಧಾರುಣಿಯೊಳು ದ್ವಿಜನಾರಿ ಗರ್ಭದಿ ಬಂದು ಮೂರೊಂದಾಶ್ರಮ ಧರಿಸಿ||ಧಾರುಣಿ||
ಧೀರನೀನೆರದಿಕತ್ರಿದಶ ಸಾರಗ್ರಂಥಗಳವಿರಚಿಸುತ ಮಹಾಶೂರ ಶ್ರೀಗೋಪಾಲವಿಠ್ಠಲನ
ಚಾರು ಚರಣಕೆ ಅರ್ಪಿಸಿದ ಗುರು ||ರಾಮ||

Lyrics in English

Ramadootana pada taamarasava kanda||2||a manujane dhanyanoo||2||

Sri manoharananghri bhajakastoma kumudake somanenisuva bhumiyolu yadugiriya seemeya kamavaradolu premadindiha||rama||

Koti roopadi raghunaatha-naajneya taali paadodiya langhisi ||2 times|| khyata lankeya pokku shodhisi maateyannu kanderagi dashamukha hota khalakula vyaata ghaatisi seetevarteya naathagaruhida ||rama||

Paandusutane prachanda gadheyanu dordandadi dharisutali ||2 times || mandaladolu bhanda kourava chanda ripugala khandisi shira chandanaadi satige karulina dande mudisida uddhanda vikrama ||rama ||

Dhaaruniyolu dwijanaari garbhadi bandu moorondaashrama dharisi ||2 times|| dheeraneeneradikatridasha saaragranthagala virachisuta mahashura sri gopaalavithalana charu charanake arpisida guru ||rama||


ಹಣ್ಣು ಬಂದಿದೆ ಕೊಳ್ಳಿರಿ /Hannu bandide kolliri

ಹಣ್ಣು ಬಂದಿದೆ ಕೊಳ್ಳಿರಿ ನೀವೀಗ ಚೆನ್ನ ಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯ ಹಣ್ಣು|ಪ||

ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು |
ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು
ಅವನಿಯೊಳು ಶ್ರೀರಾಮನೆಂಬೊ ಹಣ್ಣು  ||೧||

ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ
ಕಳೆದು ಬಿಸಾಡಿಸಿ ಕೊಳ್ಳುವುದಲ್ಲ |
ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ
ಒಳಿತಾದ ಹರಿಯೆಂಬೊ ಮಾವಿನಹಣ್ಣು ||೨||

ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ |
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ
ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು ||೩||

Lyrics in English

Hannu bandide kolliri niviga
chenna balakrishnanembo chennada baleyahannu ||pa||

Havyakavyada hannu saviva sakkarehannu |
Bavarogagalanella kaleva hannu |
Navanita choranemba yamana anjipa hannu |
Avaniyolu sriramanembo hannu ||1||

Koletu hoguvudalla hulitu hoguvudalla |
Kaledu bisadisi kolluvudalla |
Aledu kombuvudalla gili kacchi timbodalla |
Olitada hariyembo mavinahannu ||2||

Kettu naruvudalla bitti beleyodalla |
Kashtadi hanakottu kombuvudalla |
Srushtiyolage namma purandaravithala |
Krishnarayanembo sreshthavada hannu ||3||


ಹರಿದಿನದಲಿ ಉಂಡ ನರರಿಗೆ / Haridinadali unda nararige

ಹರಿದಿನದಲಿ ಉಂಡ ನರರಿಗೆ -ಘೋರ | ನರಕ ತಪ್ಪದು ಎಂದು ಶ್ರುತಿ ಸಾರುತಲಿದೆ||

ಗೋವ ಕೊಂದ ಪಾಪ, ಸಾವಿರ ವಿಪ್ರರ | ಜೀವ ಹತ್ಯದ ಮಾಡಿದ ಪಾಪವು ||
ಭಾವಜನಯ್ಯನ ದಿನದಲುಂಡವರಿಗೆ | ಕೀವಿನೊಳಗೆ ಹಾಕಿ ಕುದಿಸುವ ಯಮನು ||1||

ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು | ಅಂದಿನ ಅನ್ನವು ನಾಯ ಮಾಂಸ ||
ಮಂದರಧರನ ದಿನದಲುಂಡವರನು | ಹಂದಿಯ ಸುಡುವಂತೆ ಸುಡುವನು ಯಮನು||2||

ಅನ್ನ -ಉದಕ ತಾಂಬೂಲ – ದರ್ಪಣಗಳು | ಚೆನ್ನವಸ್ತ್ರಗಳೆಲ್ಲ ವರ್ಜಿತವು ||
ತನ್ನ ಸತಿಯ ಸಂಗ ಮಾಡುವ ಮನುಜನ | ಬೆನ್ನಲಿ ಕರುಳ ಉಚ್ಚಿಸುವನು ಯಮನು||3||

ಜಾವದಜಾಗರಕ್ರತು ನಾಲ್ಕು ಸಾವಿರ | ಜಾವ ನಾಲ್ಕರ ಫಲಕೆ ಮಿತಿಯಿಲ್ಲವು ||
ದೇವದೇವನ ದಿನದಿ ನಿದ್ರೆಗೈದರೆ ಹುರಿ – | ಗಾವಿಲಿಯೊಳು ಹಾಕಿ ಹುರಿಯುವ ಯಮನು ||4||

ಇಂತು ಏಕಾದಶಿ ಉಪವಾಸ ಜಾಗರ | ಸಂತತ ಕ್ಷೀರಾಬ್ಧಿಶಯನನ ಪೂಜೆ ||
ಸಂತೋಷದಿಂದಲಿ ಮಾಡಿದ ಜನರಿಗ – | ನಂತ ಫಲವನೀವ ಪುರಂದರವಿಠಲ ||5||

Lyrics in English

Haridinadali unda nararige gora naraka tappadendu shruti saarutalide | pa |

Govu konda paapa viprara saavira | jivahatyava maadida paapavu |
bhaavajanayyana dinadi undaravanu | kivinolage haaki kudisuva yamanu || 1 ||

Ondondu agulige koti koti krimigalu | andina annavu naayi maamsavu | mandaroddhaarana dinadi undavarannu | handiya suduvante sudisuva yamanu || 2 ||

Anna paana taambula darpanagalu | chenna vastragalella varjitavu |
tanna satiyara sanga maadida nararige | bennali karula tegeva kandya yamanu || 3 ||

Jaavadi jaagara kratu naalku saavira | jaava naalkara phalake mitiyillavu |
deva devana dinadi nidregaivana | kaavaliyolu haaki hurisuva yamanu || 4 ||

Intu ekaadashi upavaasa jaagara | santata kshiraabdhishayanana puje |
santushtiyindali maadida janarige | ananta phalaviva purandaravithala || 5 |


ಶಂಭೋ ಪಾಲಿಸು ನೀ /Shambho paaliso nee

ಶಂಭೋ ಪಾಲಿಸು ನೀ ಎನ್ನಾ||2||
ಜಗದಂಬಾ ರಮಣ ಮುಕ್ಕಣ್ಣಾ ||ಶಂಭೋ||
ಕುಂಭಿನಿಕ್ರತ ರಥ, ಜಂಭಾರಿನುತ ಪಾದ
ಅಂಬುಜ ಮನ್ಮನೋ,ಅಂಬುಜದಲಿ ತೋರೋ||ಕುಂಭಿನಿಕ್ರತ|| ||ಶಂಭೋ||

ನಂದಿವಾಹನ ತ್ರಿಶೂಲಿ ಶತಾನಂದಾನಂದನ ಕಪಾಲಿ
ವಂದಿಪಜನರಘ ಚಿಂದಿಸಿ | ಸುಜ್ಞಾನಾನಂದಸಲಿಸುವ ಎಂದು ನಿನ್ನನು ಭಜಿಪೆ ಸಿಂಧೂಜಾತಾರ್ಥಮೌರಿಯೆ ಕಂದು ಕಂದರ ನಿನ್ನ ಪಾದ ದ್ವಂದ್ವದಲ್ಲಿ ಮನಸ್ಸು ನಿಲ್ಲಿಸಿ ಇಂದಿರೇಶನ ತೋರಿಸಯ್ಯ ||ಸಿಂಧು|| ||ಶಂಭೋ||

ಮನೋ ಮಾನಿಯೆ ಮಾರಾರಿ ದುರ್ಮನಸ್ಸು ಬಿಡಿಸು ತ್ರಿಪುರಾರಿ |ಕನಕಗರ್ಭನ ಬ್ರುಗುಟ
ಜನುಮ ನಿನ್ನಯ ಪಾದ ವನಜಯುಗ್ಮದಿ ಎನ್ನ ತನುವು ನೀಡುವೆ ದೇವ ||

ಇನ ಶಶಾಂಕಾಗ್ನಿ ನಯನನೆ ಕನಕಗಿರಿಕ್ರತ‌ ಅಂಬುಪಾಣಿಯೆ ಜನುಮ ಜನುಮಕೆ ಹರಿಯ ಭಜಿಸುವ ಮನಸ್ಸು ಪಾಲಿಸು ಪವನ ತನಯನೆ ||ಇನಶಶಾಂಕ||. ||ಶಂಭೋ||

ನಿಟಿಲಾಕ್ಷ ಸುರ ಗಂಗಾಧರನೆ ಪಂಪಾತಟ ನಿಲಯನೆ ನಿಸ್ಸಂಘ |ಕಟುಜನ ಅವಿಕುಲ ಕಟಸಮ ಹರಿಪಾದ
ಭಟಜನರೊಲು ನೀನು ತುಂಟನೆನೆಸಿದೆ ದೇವ ||

ದಿಟನೆ ಎನಭವ ಹಠ ದವಾನಲ ಕುಟಿಲ ಕಟುಮತಿ ತಟನೆ ನೀಗುವ | ನಿಜಗುರು ಜಗನ್ನಾಥವಿಠಲನ
ಬಡಜನಾಗ್ರನಿ ತಟನೆ ಪಾಲಿಸೋ ||ಶಂಭೋ||

Lyrics in English

Shambho paalisu nee ennaa ||2||jagadambaa ramana mukkanna ||shambho|| kumbhinikrata ratha, jambharinuta paada ambuja manmano, ambujadali toro|2times| shambho||

Nandivahana trishuli shatananda nandana kapali vandipa janaragha chindisi sujnanaanandasalisuva endu ninnanu bhajipe ||

Sindhujaartamouriye kandu kandara ninna paada dwandadalli manassu nillisi indireshana toriseyya|2times||shambho||

Mano maniye marari durmanassu bidisu tripuraari| kanakagarbhana bruguta | januma ninnaya paada vanajayugmadi enna tanuvu needuve deva ||

Ena shashaankaagni nayanane kanakagirikrata ambupaaniye januma janumake hariya bhajisuva manassu paalisu pavana tanayane||2times||. Shambho||

Nitilaaksha sura gangaadharane pampa tata nilayane nissangha| katujana avikula katasama haripaada bhata janarolu neenu tuntaneneside deva ||

Ditane enabhava hata davaanala kutila katumati tatane neeguve| nijaguru janannaatha vithalana badajanaagrani tatane paaliso||shambho||


ಸುಂದರಿ ರಂಗನ ತಂದು ತೋರ / Sundari rangana tandu tora

ಸುಂದರಿ ರಂಗನ ತಂದು ತೋರ | ಒಂದರಘಳಿಗ್ಯಾಗೆ || ಪ ||

ಮತ್ಸ್ಯನಾಗಿ ಮೊದಲಿನಲ್ಲಿ | ಕೂರ್ಮನಾಗಿ ಕೊರೆನು ಕಾಯ್ದ |
ದೈತ್ಯರ ಕೊಂದ ಬಹು ಕ್ರೋಧದಿಂದ ದುರುಳ ಹಿರಣ್ಯಕನ ಕರುಳು ಬಗೆದು ತೋಡಿ
ಕೊರಳೊಳಗೆ ಧರಿಸಿದನು ಸರಗಳನ್ನೇ ಮಾಡಿ |
ಕೊರಳು ಕೊಯ್ದ ಎಲ್ಲಮ್ಮನ ಪುತ್ರನಾಗಿ ಕಾಯ್ದಿ ಸರಳ ಬಾಣವನ್ನೇ ಹೂಡಿ
ಲಂಕಾದ್ರಿ ಮಥನ ಮಾಡಿ ಎರಳ ಗಂಗೆಯರ ಪತಿವೃತೆಯರ ಕೆಡಿಸಿದನು ಕೂಡಿ |
ಮರಳು ತನದಿಂದ ಸೆಗೆದ ಹಯವನೇರಿ ಓಡಿ ||೧||

ನೀರೊಳು ಮೀನನಾಗಿ ಅಲೆವ | ಧರೆ ಭಾರವನ್ನು ಹೊರುವ |
ವರಹನಾಗಿ ನರಕಾಸುರನನು ತರೆವ ಕೋರೇಲಿ ಮಣ್ಣು ಬಗೆವ |
ಒಡೆ ಮುಡಿ ಕಂಬದಿಂದ ಘುಡಘುಡಿಸುತ ಬಂದ ಧೃಢವುಳ್ಳ ಬಲಿಚಕ್ರವರ್ತಿ
ಪಾಲಿಸಿದ ವರವಾ | ಕೊಡಲಿ ಪಿಡಿದು ಹಡೆದ ತಾಯಿ ಶಿರವಾ ಕಡಿದಾ |
ಮಡದಿ ಒಯ್ದ ರಾವಣನ ಕಡೆದು ಶಿರವಾ ದಾಡಿ ಬಿಟ್ಟು ತಿರುಗುವಂಥ
ತ್ರಿಪುರರರಂಥಪುರವಾ ಏರಿಸಿದ ಅಶ್ವಮೇಧ ಅರ್ಥಿಯಿಂದ ಮೆರೆವಾ ||೨||

ಬ್ರಹ್ಮಗೆ ಒಲಿದು ವೇದವ ತರುವ ಬ್ರಹ್ಮಾಂಡವನ್ಹೊರುವ |
ಗಮ್ಮೀಲಿ ಕಾಯ್ದವ- ನಾಗಿರುವ ಸುಮ್ಮನೆ ಹೋಗಿ ಬರುವಾ |
ಸಿಟ್ಟಿನಿಂದ ನಾರಸಿಂಹ ರೂಪನಾಗಿ ಬಂದ |
ಸೃಷ್ಟಿಯೊಳು ಪರಶುರಾಮ ರೇಣುಕೆಯ ಕಂದ |
ಕಷ್ಟವನ್ನಾಚರಿಸಿದನು ರಾಮ ವನವಾಸದಿಂದ |
ಕೃಷ್ಣಾವತಾರ ಬೌದ್ಧ ಕಲ್ಕಿ ರೂಪ ಒಂದೊಂದಾ |
ಇಷ್ಟುಪರಿ ವರ್ಣಿಸುತ ಹತ್ತಾವತಾರ ಚೆಂದ |
ಸೃಷ್ಠಿಯೋಳು ಕಾಗಿನೆಲೆ ಆದಿಕೇಶವನಿಂದಾ ||

Lyrics in English

Sundari rangana tandu tora | ondaraghaligyaage ||pa||

Matsyanaagi modalinalli | koormanaagi korenu kaayda |daityara konda bahu krodhadinda durula hiranyakana karulu bagedu todi koralolage dharisidanu saragalanne maadi|koralu koyda ellammana putranaagi kaydi sarala baanavanne hoodi lankaadri mathana maadi erala gangeyara pativruteyara kedisidanu koodi | maralu tanadinda segeda hayavaneri odi||1||

Neerolu meenanaagi aleva | dhare bhaaravannu horuva | varahanaagi narakaasurananu tareva koreli mannu bageva | ode mudi kambadinda ghudaghudisuta banda dhrudhavulla bali chakravarti| paalisida varavaa | kodali pididu hadeda tayi shirava kadidaa | madadi oyda raavanana kadedu shiravaa daadi bittu tiruguvanta | tripurara antapuravaa arisida ashwamedha arthiyinda merevaa ||2||

Brahmage olidu vedava taruva brahmaandavanohruva |gammeeli kaaydavanaagiruva summane hogi baruvaa | sittininda naarasimha roopanaagi banda | srushtiyolu parashuraama renukeya kanda| kashtavannaacharisidanu raama vanavaasadinda | krishnaavataara boudha kalki roopa ondondaa | eshtu pari varnisuta hattaavataara chanda| srushtiyolu kaaginele adikeshavanindaa||3||