ಹಣ್ಣು ಕೊಂಬುವ ಬನ್ನಿರಿ /Hannu kombuva banniri

ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಹಣ್ಣು ಕೊಂಬುವ ಬನ್ನಿರಿ         ।।ಪ।।

ಚೆನ್ನ ಬಾಲಕೃಷ್ಣನೆಂಬ
ಕನ್ನೆಗೊನೆಬಾಳೆಹಣ್ಣು           ।।ಅ.ಪ।।

ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು   ।।೧।।

ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣು
ಸುಜನಭಕ್ತರೆಲ್ಲ ಕೊಳ್ಳಬನ್ನಿರಿ ಹಣ್ಣು          ।।೨।।

ತುರುವ ಕಾಯ್ದ ಹಣ್ಣು ತುರಗನ ತುಳಿದಾ ಹಣ್ಣು
ಕರೆದರೆ ಕಂಬದೊಳು ಓಯೆಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು   ।।೩।।

Lyrics in English

Hannu kombuva banniri haridasaru
Hannu kombuva banniri ||pa||

Chenna balakrishnanemba
kannegonebalehannu ||a.pa||

Suttelu lokadi suraru bittida hannu
Baktara bayolu neneva hannu
Artiyullavarella kolli bekadare
Nitya madhavanemba accamavina hannu ||1||

Ajana padeda hannu gajava kayda hannu
Nijamunigalige torisida hannu
Trijagavandita palgadalodeyane hannu
Sujanabaktarella kollabanniri hannu ||2||

Turuva kayda hannu turagana tulida hannu
Karedare kambadolu oyemba hannu
Maruguva dhruvanige pattagattida hannu
Karunalu kagineleyadikesava hannu ||3||


ಕದಳಿ ವನದಲಿ ಶ್ರೀ ಮಂಜುನಾಥ / Kadali vanadali sri manjunatha

ಕದಳಿ ವನದಲಿ ಶ್ರೀ ಮಂಜುನಾಥ ಪರಶುರಾಮನ ಸೃಷ್ಟಿಯ ಕ್ಷೇತ್ರ । ಜಪತಪ ಹೋಮ ನೇಮ ಪಡೆದಿರುವ ಮೂರ್ತಿ ।।ಕದಳಿ||

ವೇದಶಾಸ್ತ್ರದ ಅವತಾರ ಮೂರ್ತಿ । ಮಾನವ ಧರ್ಮವ ಕಾಯೋ ಸಂಸ್ಕೃತಿ । ಭಕ್ತರ ನಿಷ್ಠೆಗೆ ನೀ ಪರಮಾತ್ಮ ।।ಕದಳಿ||

ಯೋಗಿ ತಪಸ್ವಿಗಳು ನೆಲೆಸಿದ ಈ ಭೂಮಿ । ಏಳುಕೋಳೆಗಳು ಎತ್ತರದಲ್ಲಿದ್ದರೆ ಮಹಿಮೆ । ಶಿವಪುಷ್ಕರಿಣಿಯೇ ಪ್ರಸಿದ್ಧ ತೀರ್ಥ ।।ಕದಳಿ||

ಪರಮ ಪಾವನ ಚರಣ ಪವಿತ್ರ ಪಂಚ ಪಾಂಡವರು ಕೊರೆದಿಹ ಈ ಗುಹೆ ।ನಾಥ ಪಂತರ ಗುಡ್ಡದ ತರೆಮಠ ।।ಕದಳಿ||

ಜೋಗಿ ಅರಸರು ಮೆರೆಯುವ ಈ ಸ್ಥಳ ಭಕ್ತಿ ಸೇವೆಗೆ ಪುಣ್ಯದ ದೇಗುಲ ।।ಕದಳಿ||

Lyrics in English

Kadali vanadali sri manjunatha | parashuraamana srushtiya kshetra | japatapa homa nema padediruva moorti ||kadali||

Vedashaastra avataara moorti | maanava dharmava kaayo samskruti | bhaktara nishtege nee paramatma ||kadali||

Yogi tapasvigala nelesida e bhumi | elu kotegalu ettaradalliddare mahime| shiva pushkariniye prasiddha theertha ||kadali||

Parama pavaana charana pancha paandavaru korediha e guhe | naatha pantara guddada taremata ||kadali||

jogi arasaru mereyuva e stahala bhakti sevege punyada degula ||kadali|


ತ್ರಿಮೂರ್ತಿರೂಪ ದತ್ತಾತ್ರೇಯ / Trimurthi roopa dattaatreya

ತ್ರಿಮೂರ್ತಿರೂಪ ದತ್ತಾತ್ರೇಯ । ತ್ರಿಗುಣಾತೀತ ದತ್ತಾತ್ರೇಯ । ಅನಸೂಯ ತನಯ ದತ್ತಾತ್ರೇಯ । ಆಶ್ರಿತ ರಕ್ಷಕ ದತ್ತಾತ್ರೇಯ ।।

ಆದಿದೇವನ ಅಂಶನೇ ಆದಿ ಬ್ರಹ್ಮನ ರೂಪನೆ । ೨ ಸಲ । ಆದಿ ಮೂಲನ ಅತ್ರಿ ಮುನೀಂದ್ರನ । ಅತಿಶಯ ಪ್ರೀತಿಯ ಅವತಾರನೇ||

ಸತಿಯ ಪುಣ್ಯನ ಕೀರ್ತಿಯೇ । ಸರ್ವ ವೇದಗಳ ಮೂರ್ತಿಯೇ । ದಿಗಂಬರನಾಥ ಔದುಂಬರವಾಸ| ಜ್ಞಾನದಾತ ಗುರುದೇವನೇ||

Lyrics in English

Trimurthi roopa dattaatreya | trigunaateeta dattaatreya | anasuya tanaya dattaareya | ashrita rakshaka dattaatreya ||

adidevana amshane | adi brahmana roopane | 2 times | adi moolana atri muneendrana | atishaya preetiya avataarane||

Satiya punyana keertiye | sarva vedagala murthiye | digambaranatha oudumbaravaasa | jnaanadaata gurudevane ||trimurti||


ದುರ್ಗಾಪರಮೇಶ್ವರಿ ದೇವಿ ಒಲಿದು / parameshwari devi olidu

ದುರ್ಗಾಪರಮೇಶ್ವರಿ ದೇವಿ ಒಲಿದು ಬಾರಮ್ಮ । ಭ್ರಮರಾಂಬಿಕೆ ದೇವಿಯೇ ವರವ ನೀಡಮ್ಮ । ನಂದಿನಿಯ ಕಟಿಯಲ್ಲಿ ನೆಲೆಸಿದ ನಮ್ಮಮ್ಮ । ಶ್ರೀಗಂಧ ಪ್ರಸಾದ ನೀಡಿ ಆನಂದ ನೀಡಮ್ಮ ।।೧।।

ಪುಣ್ಯವಾಹಿನಿ ನಂದಿನಿಯಲ್ಲಿ ಮಿಂದು ಬಂದಿರುವೆ । ಕಟೀಲೇಶ್ವರಿ ಪೂಜೆಗೆಂದು ಮಲ್ಲಿಗೆ ತಂದಿರುವೆ । ಬಡವರ ಭಾಗ್ಯದ ನಿಧಿಯೇ ದೇವಿ ಭ್ರಮರಾಂಬೆ ತಾಯೆ । ಬದುಕಿನ ಕಷ್ಟವ ಕಳೆದು ಇಷ್ಟವ ನೀಡಮ್ಮ ತಾಯೆ ।।೨।।

ಬಂಗಾರದ ಪೀಠವನೇರಿದ ಭುವನೇಶ್ವರಿ ತಾಯೆ । ಶ್ರೀ ಗಂಧ ಹೂವಿನ ಪೂಜೆಯ ಪಡೆವ ಮಹಾಮಾಯೆ । ಶಕ್ತಿ ರೂಪಿಣಿ ಸಿಂಹವಾಹಿನಿ ಪರಮೇಶ್ವರಿ ತಾಯೆ । ತ್ರಿಭುವನ ಜನನಿ ಕರುಣ ಭರಣಿ ವರದಾಯಿನಿಯೇ ।।೩।।

Lyrics in English

Durgaparameshwari devi olidu baaramma | bhramaraambike deviye varava needamma | nandiniya katiyalli nelesida nammamma | srigandha prasada needi ananda needamma ||1||

Punyavaahini nandiniyalli mindu bandiruve| katileshwari poojegendu mallige tandiruve | badavara bhaagyada nidhiye devi bhramaraambe taaye | badukina kashtava kaledu eshtava needamma taaye ||2||

Bangaarada peetavanerida bhuvaneshwari taaye | srigandha hoovina poojeya padeva mahamaaye | shakti roopini simhavaahini parameshwari taaye | tribhuvana janani karuna bharani varadaayini ||3||


ಒಂದೇ ಓಂಕಾರ ಚಾಮರ ಕರ್ಣನೇ / Onde omkaara chamara karnane

ಒಂದೇ ಓಂಕಾರ ಚಾಮರ ಕರ್ಣನೇ ಶಂಕರ ಸುತ ಶರಣು ವಿನಾಯಕ । ಮಂಗಳ ವರ ಶರಣು ವಿನಾಯಕ ।।

ಮಧೂರ ಗಣಪತಿ ಶರವು ಗಣಪತಿ । ಕುಂಭಾಶಿ ಗಣಪತಿ ಶರಣು । ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ । ಗೋಕರ್ಣ ಗಣಪತಿ ಶರಣು ।।

ವಿಕಟನೆ ವಿಮಲನೆ ಏಕದಂತನೆ । ಶುಭವರ್ಣ ಗೌರಿ ಸುತನೆ । ನೀನಲ್ಲದೆ ನನಗಾರು ಸಖರಿಲ್ಲವೋ । ಬಾಂಧವರಿಲ್ಲವೋ ಕಾಯುವರಿಲ್ಲವೋ ।।

ಸುಮುಖನೆ ಕಪಿಲನೆ ಧೂಮ್ರವರ್ಣನೆ । ಗಣನಾಥ ನಿನಗೆ ವಂದನೆ । ಎಂದೆಂದೂ ನಿನ್ನನು ಸ್ತುತಿ ಮಾಡುವೆ । ಹಾದಿ ಕೊಂಡಾಡುವೆ ಪೂಜೆ ವ್ರತ ಮಾಡುವೆ ।।

Lyrics in English

Onde omkaara chamara karnane shankara suta sharanu vinayaaka | mangala vara sharanu vinaayaka||

Madhura ganapati sharavu ganapati | kumbhaashi ganapati sharanu | hattiyangadi ganapati idagunji ganapati | gokarna ganapati sharanu ||

Vikatane vimalane ekadantane | shubhavarna gowri sutane | neenallade nanagaaru sakharillavo | baandhavarillavo kayuvarillavo ||

Sumukhane kapilane dhumravarnane gananatha ninage vandane | endendu ninnanu stuti maaduve | haadi kondaaduve pooje vrata maaduve ||


ಬೃಂದಾವನದಲಿ ಯೋಗ ನಿದ್ರೆಯಲಿ / Brundaavanadali yoga nidreyali

ಬೃಂದಾವನದಲಿ ಯೋಗ ನಿದ್ರೆಯಲಿ ಇರುವ ಗುರುರಾಯ । ಬೆಳ್ಳಿ ಮಿನುಗುತಿದೆ ಬಾನು ಹೊಳೆಯುತಿದೆ ಏನು ಮಹನೀಯ । ಕಣ್ತೆರೆದು ನೋಡು ಗುರುರಾಯ ।।೧।।

ಹೊನ್ನ ತೇರಿನಲ್ಲಿ ಕುಳಿತು ಬಾನಿನಲಿ ಸೂರ್ಯನು ಬರುತ್ತಿರುವ । ಕೋಟಿ ಸೂರ್ಯರ ಕಾಂತಿ ತುಂಬಿರುವ ನಿನ್ನ ಕಾಣಲಿರುವಾ ಗುರುವೇ ತೋರೋ ನಿನ್ನ ಮೊಗವ ।।೨।।

ತುಂಗೆ ಬಂದಿಹಳು ಗಂಗೆ ಬಂದಿಹಳು । ಪಾದವ ತೊಳೆಯುವಳು ನಿನ್ನ ಪೂಜಿಸಲು ಚರಣ ಸೇವಿಸಲು । ಅರಳಿವೆ ಕಮಲಗಳು ಮಂತ್ರಗಳ ಹೇಳಿವೆ ಭ್ರಮರಗಳು । ಉದಯರಾಗವನು ಉಷೆಯು ಹಾಡುತಿಹಳು ಆರತಿ ಬೆಳಗುವಳು ನಿನ್ನ ಕಣ್ಣುಗಳ ಬೆಳಕು । ಬೀಳದೆ ಬೆಳಗಿದೆಯಮ್ಮ ಬಾಳು ಏಳು ಗುರುವೇ ರಾಘವೇಂದ್ರ ನೀನು ।।3।।

Lyrics in English

Brundaavanadali yoga nidreyali eruva gururaya | belli minugutide baanu holeyutide enu mahaneeya | kanteredu nodu gururaya ||1||

Honna terinali kulitu baaninali sooryanu barutiruva | koti sooryara kaanti tumbiruva ninna kanaliruva guruve toro ninna mogave ||2||

Tunge bandihalu gange bandihalu | padava toleyuvalu ninna poojisalu charana sevisalu | aralive kamalagalu mantragala helive bhramaragalu | udayaragavanu usheyu hadutihalu arati belaguvalu ninna kannugala belaku | beelade belagideyamma baalu elu guruve raaghavendra neenu ||3||


Due to copyright issue the video cannot be displayed here. You can watch it in Youtube in the link below https://youtu.be/FS14aBYC3I0

ಒಂದು ಬಾರಿ ಬಂದು ನೋಡಿ /Ondu baari bandu nodi

ಒಂದು ಬಾರಿ ಬಂದು ನೋಡಿ ಮರೆಯದು ಜೀವಾ
ಮಂತ್ರಾಲಯ ದರುಶನವೇ ದಿವ್ಯ ಅನುಭವ…
||ಒಂದು ಬಾರಿ||

ಭೂಮಿಯೊಳಗೆ ನಾದವೇ ಮಂತ್ರಾಲಯ ತಾಣವೇ
ಇಹಕು ಪರಕು ಸೇತುವೆ ಶ್ರೀ ರಾಘವೇಂದ್ರ ನಾಮವೇ
||ಒಂದು ಬಾರಿ||

ಪಾಪ ಕಳೆವ ಸುರಗಂಗೆ ಇಲ್ಲಿ ಹರಿವ ತುಂಗೆ
ಪ್ರೇಮ ಬರಿತ ಹೂಬನ ರಾಯರ ಬ್ರಂದಾವನ
||ಒಂದು ಬಾರಿ||

ಏಳು ನೂರು ವರುಷಗಳು ಗುರುಗಳು ಇಲ್ಲಿಹರು
ಭಕ್ತ ಕೋಟಿ ಬೇಡಿಕೆಯ ಪ್ರೀತಿಯಿಂದ ತರುವರು
||ಒಂದು ಬಾರಿ|| 

Lyrics in English

Ondu baari bandu nodi mareyadu jeeva | mantralaya darushanave divya anubhava ||ondu baari||

Bhumiyolage naadave mantralaya taanave | ehaku paraku setuve sri raghavendra naamave ||ondu baari||

paapa kaleva suragange elli hariva tunge | prema barita hoobana raayara brundaavana || ondu baari||

elu nooru varushagalu gurugalu elliharu | bhakta koti bedikeya preetiyinda taruvaru ||ondu baari||


ಗಜಮುಖ ವಂದಿಸುವೆ ಕರುಣದಿ/Gajamukha vandisuve karunadi

ಗಜಮುಖ ವಂದಿಸುವೆ ಕರುಣದಿ ಕಾಯೋ । ಗಜಮುಖ ವಂದಿಸುವೆ ಗಜಗೌರಿಯ ಪುತ್ರ । ಅಜನ ಪಿತನ ಮೊಮ್ಮಗನ ಮೋಹದ ಬಾಲ ।।ಗಜಮುಖ||

ಪರ್ವತನ ಪುತ್ರಿ ಪಾರ್ವತಿಯ ಸುಕುಮಾರ । ಗರ್ವಿಯ ಚಂದ್ರಗೆ ಸ್ಥಿರ ಶಾಪ ಕೊಟ್ಟನೇ । ಹರಿಹರರು ನಿನ್ನ ಚರಣ ಪೂಜೆಯ ಮಾಡಿ। ದುರುಳ ಕಂಟಕರನು ತರಿದು ಬಿಸುಡಿದರಯ್ಯ ।।ಗಜಮುಖ||

ನೀಲಕಂಠನ ಸುತ ಬಾಲ ಗಣೇಶನೇ । ಬಾರಿ ಬಾರಿಗೂ ನಿನ್ನ ಭಜನೆ ಮಾಡುವೆನು| ವಾರಿಜನಾಭ ಶ್ರೀ ಹಯವದನನ ಪಾದ। ಸೇರುವ ಮಾರ್ಗದ ದಾರಿಯ ತೋರಿಸೋ|| ಗಜಮುಖ||

Lyrics in English

Gajamukha vandisuve karunadi kaayo | gajamukha vandisuve gajagowriya putra | ajana pitana mommagana mohada baala || gaja||

Parvatana putri parvatiya sukumaara | garviya chandrage sthira shaapa kottane | harihararu ninna charana poojeya maadi | durula kantakaranu taridu bisudidarayya ||gaja||

Neelakantana suta baala ganeshane | baari baarigu ninna bhajane maaduvenu | vaarijanaabha sri hayavadanana paada | seruva maargada daariya toriso || gaja||


ಹಿಮಾದ್ರಿಸುತೆ ಓ ಹೇಮಲತೇ / Himaadrisute O hemalate

ವಂದೇ ಮಾತರಂ ಅಂಬಿಕಾಂ ಭಗವತಿ |ವಾಣಿ ರಮಾ ಸೇವಿತಾ | ಕಲ್ಯಾಣಿ ಕಮನೀಯ ಕಲ್ಪನಪಿತಾಂ |

ವೇದಾಂತ ಪ್ರತಿಪಾದ್ಯಮಾನ್ಯವಿಭವನ್ ವಿದ್ಯಾಂ ಮನೋರಂಜನಿ ………                  ಶ್ರೀಚಕ್ರಾ0ಕಿತ ರತ್ನಪೀಠ ನಿಲಯಾಂ ಶ್ರೀರಾಜರಾಜೇಶ್ವರಿ ||

ಹಿಮಾದ್ರಿಸುತೆ ಓ ಹೇಮಲತೇ ಮಾತೇ ಶ್ರೀಲಲಿತೆ |ಜಗಜನನಿ ಕಾತ್ಯಾಯಿನಿ ಶ್ರೀ ರಾಜರಾಜೇಶ್ವರಿ ನಮೋಸ್ತುತೆ ||

ನಿರ್ಮಲ ಚಿತ್ತೆ ಆನಂದ ರೂಪಿಣಿ |ಆನಂದ ತಾಂಡವ ನಾಟ್ಯ ಮಯೂರಿ | ಸಹಸ್ರಕೋಟಿ ರವಿ ತೇಜಸ್ವಿನಿ | ಸಹನ ಶೀಲೆ ನೀ ರಾಜೇಶ್ವರಿ ||ಹಿಮಾದ್ರಿಸುತೆ||

ಮೋಹನ ಕಲ್ಯಾಣಿ ರಾಗ ವಿಹಾರಿ | ಸೌಂದರ್ಯಾಲಹರಿ ಭುವನೇಶ್ವರಿ |ಚಂದ್ರಚೂಡಾ ವಿಜಯದ ರಾಣಿ| ಪಾಲಿಸು ಶ್ರೀಗೌರಿ ಪರಮೇಶ್ವರಿ ||ಹಿಮಾದ್ರಿಸುತೆ||

ನವರಾತ್ರಿಯಲಿ ನಿತ್ಯವೂ ಉತ್ಸವ |ನವನವ ಅಲಂಕಾರ ನಿನ್ನಯ ವೈಭವ | ನವರತ್ನ ಖಚಿತ ಸಿಂಹಾಸನೆಯೇ ದೇವಿ |ನಯನ ಮನೋಹರಿ ಗಾಯತ್ರಿಯೇ ||ಹಿಮಾದ್ರಿಸುತೆ||

Lyrics in English

Vande maataram ambikam bhagavati | vani rama sevitaa | kalyaani kamaniya kalpanapitam |

Vedanta pratipaadyamaanyavibhavan vidyam manoranjani | srichakraankita ratnapeetha nilayam sri rajarajeshwari ||

Himaadrisute o hemalate maate srilalite | jagajanani kaatyayani sri rajarajeshwari namostute ||

Nirmala chitte ananda rupini | ananda taandava naatya mayuri | sahasrakoti ravi tejaswini | sahana sheele ni raajarajeshwari ||himaadrisute||

Mohana kalyaani raaga vihaari | soundaryalahari bhuvaneshwari | chandrachuda vijayada raani | paalisu sri gowri parameshwari || himaadrisute||

Navaraatriyali nityavu utsava | navanava alankaara ninnaya vaibhava | navaratna khachita simhaasaneye devi| nayana manohari gayatriye ||himaadrisute||


7th song in album sung by smt.B.K.Sumitra

ಬಲಿಯ ಮನೆಗೆ ವಾಮನ / Baliya manege vaamana

ಬಲಿಯ ಮನೆಗೆ ವಾಮನ ಬಂದಂತೆ | ಭಾಗಿರಥಗೆ ಶ್ರೀಗಂಗೆ ಬಂದಂತೆ | ವಿಭೀಷಣಗೆ ಶ್ರೀರಾಮ ಬಂದಂತೆ | ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ | ನಿನ್ನ ನಾಮವು ಎನ್ನ ನಾಲಿಗೆಯಲ್ಲಿ ನಿಂದು ಸಲಹಲಿ ಶ್ರೀ ಪುರಂದರ ವಿಠ್ಠಲ ||

Lyrics in English

Baliya manege vamana bandante |
Bhagirathage Srigange bandante |
Vibhishanage srirama bandante |
Vidurana manege srikrishna bandante |Ninna namavu Enna
Naligeyalli nindu salahali sri purandara vithala ||