ಉಡುಪಿಯಿದು ಉಡುಪಿಯಿದು /Udupiyidu udupiyidu

ಅಧರಂ ಮಧುರಂ ಮಧುರಂ ನಯನಂ ಮಧುರಂ| ಅಸಿತಂ ಮಧುರಂ ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೆ ಅಖಿಲಂ ಮಧುರಂ||

ಉಡುಪಿಯಿದು ಉಡುಪಿಯಿದು ಗೀತಾಚಾರ್ಯರ ಕ್ಷೇತ್ರವಿದು | ಭಕ್ತಿಯಿಂದ ಈ ಚೆಲುವ ಚನ್ನಿಗನ | ಸೇವಿಸಿ ಫಲವಿದೆ ಕ್ಷಣದಲ್ಲಿ ||

ಪುಟ್ಟ ಬಾಲಕನಿವ ನೋಡಿ ಆಹಾ ಮಾಡಿದನೆಂತಹ ಮೋಡಿ | ಗೋಪಿಯರಂತೆಯೇ ತೋರುವರೆಲ್ಲಾ | ಭಕ್ತಿಯ ಕಂಬನಿ ಕೋಡಿ ||

ಸ್ವರ್ಗವ ಭೂಮಿಯ ಮೇಲೆಯೇ ಕಾಣಲು ಬನ್ನಿರಿ ಕೃಷ್ಣನ ಸನ್ನಿಧಿಗೆ | ಮಾಡಿದ ಪಾಪದ ಬೇಡಿಯ ಹರಿಯಲು | ನೀಡಿರಿ ಸುಮ್ಮನೆ ಶ್ರೀಹರಿಗೆ ||

Lyrics in English

Adharam madhuram madhuram nayanam madhuram | asitam madhuram hrudayam madhuram gamanam madhuram madhuraadhipate akhilam madhuram ||

Udupiyidu udupiyidu geetaacharyara kshetravidu |bhaktiyinda e cheluva chennigana | sevisi phalavide kshanadalli ||

Putta baalakaniva nodi aha maadidanentaha modi | gipiyaranteye toruvarellaa |bhaktiya kambani kodi ||

Swargava bhoomiya meleye kaanalu banniri krishnana sannidhige | maadida paapada bediya hariyalu | neediri summane sri harige ||


ಸಾವಿತ್ರಿ ಗಾಯಿತ್ರಿ ಸರಸ್ವತಿ ಎಂದರೆ/ Savitri gayatri saraswati

ರುದ್ರಲೋಕ ಗತತ್ವಾಂಹೀ | ವಿಷ್ಣು ಲೋಕ ನಿವಾಸಿನಿ ತ್ವಮೇವ ಬ್ರಹ್ಮಣೇ ಲೋಕೇ | ಮರ್ತ್ಯಾನುಗ್ರಹಕಾರಿಣಿ ||

ಸಾವಿತ್ರಿ ಗಾಯಿತ್ರಿ ಸರಸ್ವತಿ ಎಂದರೆ ಎಲ್ಲವೂ ನೀನಮ್ಮ | ಬ್ರಾಹ್ಮಿ ವೈಷ್ಣವಿ ರೌದ್ರಿ ಎಂದರೆ ಮೂವರು ನೀನಮ್ಮ ||

ಇಚ್ಛಾಶಕ್ತಿ ಕ್ರಿಯಾಶಕ್ತಿ ಜೊತೆಗೆ ಜ್ಞಾನಶಕ್ತಿ | ಮೂರನು ನೀಡುವ ಶಕ್ತಿ ಸ್ವರೂಪಿಣಿ ನೀನೇ ಪರಾಶಕ್ತಿ | ಋಗ್ವೇದದಲ್ಲೂ ಸಾಮವೇದದಿ ಯಜುರ್ವೇದದಲ್ಲೂ | ವಿರಾಜಿತಳು ನೀನೇ ತಾಯೆ ವೇದರೂಪಿಣಿಯೇ ||೧||

ಹಂಸಗಮನೆ ಗರುಡಾರೂಢಳು ವೃಷಭವಾಹಿನಿಯು | ನೀನೇ ಗಂಗೆ ನೀನೇ ಯಮುನೆ ನೀನೇ ಸರಸ್ವತಿಯು| ಕುಂಡಲೀಶಕ್ತಿ ವ್ಯಾಪಿನಿ ನೀನೇ ಹೃದಯದ ಪ್ರಾಣವಾಹಿನಿ ನೀನೇ | ಪಾಪ ಕೋಟಿಯ ಕಳೆವಳು ನೀನೇ ಯಜ್ಞ ಯಾಗ ಫಲ ತರುವಳು ನೀನೇ ||೨||

Lyrics in English

Rudraloka gatatvaamhee vishnuloka nivaasini tvameva brahmane loke | martyaanugrahakaarini ||

Savitri gayatri saraswati endare ellavu neenamma | braahmi vaishnavi roudri endare moovaru neenamma ||

Icchaashakti kriyaashakti jotege jnaanashakti | mooranu needuva shakti swaroopini neene parashakti | rugvedadallu saamavedadi yajurvedadallu | viraajitalu neene taaye vedaroopiniye ||1||

Hamsagamane garudaaroodhalu vrushabhavaahiniyu | neene gange neene yamune neene saraswatiyu | kundalishakti vyaapini neene hrudayada praanavaahini neene | paapakotiya kalevalu neene yajnayaaga phala taruvalu neene ||2||


ಸಾಗಿಬಾರೈಯ ಭವರೋಗದ ವೈದ್ಯನೆ / Sagi barayya bavarogada vaidyane

ಸಾಗಿಬಾರೈಯ ಭವರೋಗದ ವೈದ್ಯನೆ
ಬಾಗಿ ನಿನಗೆ ಚೆನ್ನಾಗಿ ಸ್ತುತಿಪೆ ನಿಂದು
ಭಾಗೀರಥಿ ಪಿತ ಭಾಗವತರ ಸಂಯೋಗ ರಂಗ ಉರಗಗಿರಿ ವೆಂಕಟ ||pa||

ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ
ರಥಾಂಗಪಾಣಿಯೆ ದಶರಥ ನೃಪಬಾಲ
ಪಾರ್ಥಗೆ ಒಲಿದವನ ರಥವ ನಡಿಸಿ ಅತಿರಥ ಮಹರಥರ ವಿರಥರ ಮಾಡಿ ಗೆಲಿಸಿದೆ
ಪ್ರಥಮ ದೈವವೆ ಮನ್ಮಥಪಿತ ದೈತ್ಯರ-
ಮಥನ ಭಕ್ತರ ಮನೋರಥನೆ ತಾರಾ-
ಪಥವರ್ಣನೆ ತವ ಕಥಾಶ್ರವಣದಲಿ ಸುಪಥವನು ತೋರಿಸು ಪ್ರಥಮಾಂಗದೊಡೆಯ ||1||

ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ
ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ-
ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿಯಿಲ್ಲವೊ ನೋಡಲು ಸಲ್ಲುವುದೋ ಬಿರುದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು
ನೆಲ್ಲಕಟ್ಟು ಕೊನೆಯಲ್ಲಿಪ್ಪ ವಿಶ್ವ ||2||

ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ
ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ-
ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ-
ತ್ತುಮ್ಮಾನೇಕ ಗುಣಮಹಿಮ ವಿಭೂಷಿತ
ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ
ಸಮುಖನಾಗುತ ಸುಮ್ಮನೆ ಬಾ ಬಾ
ಹಿಮ್ಮೆಟ್ಟಿದೆ ಸಿರಿ ವಿಜಯವಿಠ್ಠಲ ಅನು-
ಪಮ್ಮಚರಿತ ಪರಬೊಮ್ಮ ತಿರುಮಲೇಶ ||3||

Lyrics in English

Sagi barayya bavarogada vaidyane
Baguve ninage chennagi stutisi indu |
Bagiratipita bagavatara samyoga
Ranga uragagiri venkata |

Rathada madhyadallippane rathaganujavahana
Rathangapaniye dasarathanrupati pala |
Parthage sarathiyagi rathava nadesi |
Athirathamaharathara virathara madi geliside |
Prathamadaivave manmathapitadaityara
Mathana Baktara manoratha paripurnane
Pathamanivarnane kathasravanadali
Supathava torisutippa prathamanganodeya | 1 |

Nillade baruvudu pullalochana siri-
vallaba sarvarige ballidane aprati-
malla muravirodhiye mella mellane
pada pallava torisutta illa kaladi namma
Nella uddharisuvudu elli ninage sari-
yillavo nodalu salluvudo birudalli
gallige guna ballavararinnu –
nella koti koneyalippa vishva || 2 ||

Bomma modalu manujottamaru kadeyagi
nimma dasaru avara sambandhigala pada
nammikondippa adhama na sarvottamane
aneka mahima sarvabushita iremme
mahishare gudi sammoga-
vaguta gammane ba ba |
himmettide sirivijayavithala anupamma-
charita parabomma tirumalesa ||3||


ಒಲಿದೆ ಯಾತಕಮ್ಮಾ ಲಕುಮಿ / Olide yaatakammaa lakumi

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ,
ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! ||

ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು
ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು
ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ ||

ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು
ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು
ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ ||

ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು
ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು
ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು
ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||

Lyrics in English

Olide yaatakammaa lakumi vaasudevage || pa ||

Halavangadavana havane tilidu tilidu tiliyada haage || a.pa ||

Kamalagandhi komalaangi sundaraabjavadane neenu |
Ramana matsya kathina kaaya sookaraasyanu ||
Ramaneeya swaroopi neenu amita gora roopanavanu |
Namiparishtadaani neenu daanava beduvavanige || 1 ||

Lalita chaaru sheele neenu kalki kalaha preeyanavanu |
Kulada kuruhu illaa gunada neleya kandillaa |
Halavu kaaladavanu avana balaga bandhu nishkinchananu|
Jaladhi aaladeleya mele malagi berala cheepuvavanige || 2 ||

Swarataana pekshakaami nidraaheena anashaniyu |
Sparsharoopa vaachya shabda amita bhoktanu ||
Guru gopaalaviththalanu niruta tanna vakshadolu |
Aramaneya maadi kottu maralu maadida maayaavige || 3||


ಏನು ಇಲ್ಲದ  ಎರಡು ದಿನದ /Enu illada eradu dinada

ಏನು ಇಲ್ಲದ  ಎರಡು ದಿನದ ಸಂಸಾರ
ಜ್ಞಾನದಲಿ ದಾನಧರ್ಮವ ಮಾಡಿರಯ್ಯ ||ಪ||

ಹಸಿದು ಬಂದವರಿಂಗೆ ಅಶನವೀಯಲುಬೇಕು
ಶಿಶುವಿಂಗೆ ಪಾಲ್ಬೆಣ್ಣೆಯನು ನಡೆಸಬೇಕು
ಹಸನಾದ ಭೂಮಿಯನು ಧಾರೆಯೆರೆಯಲುಬೇಕು
ಭಾಷೆ ಕೊಟ್ಟ್ ಬಳಿಕ ನಿಜವಿರಲು ಬೇಕು ||೧||

ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ
ಕುಳ್ಳಿರ್ದ ಸಭೆಯೊಳಗೆ ಕುಟಿಲ ನಡೆಸಬೇಡ
ಒಳ್ಳೆಯವನೆಂಬ ಬಲು ಹೆಮ್ಮೆಯಲ್ಲಿರಬೇಡ ಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ||೨||

ದೊರೆತನವು ಬಂದಾಗ ಕೆಟ್ಟು ನುಡಿಯಲು ಬೇಡ
ಸಿರಿ ಬಂದ ಕಾಲಕ್ಕೆ ಮೆರೆಯಬೇಡ
ಸಿರಿವಂತನಾದರೇ ನೆಲೆಯಾದಿಕೇಶವನ
ಚರಣ ಕಮಲವ ಸೇರಿ ಸುಖಿಯಾಗು ಮನುಜ ||೩||

Lyrics in English

Enu illada eradu dinada samsara,
Jnanadali dana-dharmava madiraiyya||pa||

Hasidu bandavarige ashanaviyalu beku,
shishuvige palpenne unisa beku,
hasanada bumiyanu dhareyereyali beku,
Bhashe kotta balika nijaviralu beku||1||

Kallatanagala madi odala horeyalu beda,
kullirta sabeyolage kutila nadesalu beda,
Olleyava nanendu balu hemmelira beda,
Balve sthiravendu ni nambi keda beda||2||

Doretanavu bandaga ketta nudiyalu beda,
Sirivanta kalakke mereya beda,
Sirivantanadare nele adi keshavana,
Charana kamalava seri sukhiyagu manuja||3||


ಜಯತು ಕೋದಂಡರಾಮ /Jayatu kodanda rama

ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು|ಪ|

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ |1|

ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾದಿ ಮೆರೆದ ರಘುರಾಮ|2|

ವಸುದೇವಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷಯೋಧ್ಯಪುರವಾಸ ರಘುರಾಮ |3|

Lyrics in English

Jayatu kodanda rama jayatu dasharatha rama jayatu sitarama jayatu raghurama jayatu jayatu ||

Tamadaityananu maduhi mandarachala negahi |pritiyindale tandu sakala bhutalava |
kshetradindudbhavisi moreyiduva balakana bhitiyanu bidisi nere kaida raghurama ||

Baliyoldqnava bedi nelana iradi madi chaladinda kshatriyarkulava hogadi
lalanegosuga banda nevadinda ravanana |talegalanu chendadi mereda raghurama ||

Vasudeva sutanenisi vaniteyara vrata gedisi |eseva turagavaneri mallaranu savari |
vasudheyolu purandara ni palisai bishajakshayodhyapura vaasa raghurama ||


ಬಂದನೇನೇ ಸುಂದರ ಶ್ರೀರಾಮಚಂದಿರ / Bandanene sundara sri ramachandira

ಬಂದನೇನೇ ಸುಂದರ ಶ್ರೀರಾಮಚಂದಿರ ಬಂದನೇನೇ.

ಸಿರಿವತ್ಸಧಾರನು ಶ್ರಿತಜನೋದ್ಧಾರನು, ಮಾರಸುಂದರನು ಮಾಮನೋಹರನು

ಕೋಮಲ ಗಾತ್ರನು ಕಮಲ ಕಳತ್ರನು      ಕಮಲಾಪ್ತ ತೇಜನು ವಿಮಲ ಸತ್ಪಾತ್ರನು.

ಸಾಸಿರನಾಮನು ಭಾಸುರ ವದನನು,                ಈಶ ವಂದಿತನು ಶೇಷ ವಿಠಲನು ||

Lyrics in English

Bandanene sundara sri ramachandira bandanene ||

Sirivatsadharanu sritajanodhaaranu maarasundaranu maamanoharanu ||

Komalagaatranu kamala kalatranu kamalaapta tejanu vimala satpaatranu ||

Saasiranaamanu bhasura vadananu esha vanditanu shesha vittalanu ||


ಮಾ ಮಝೆ ಭಾಪುರೇ ಭಳಿರೇ /Ma maje bapure balire

ಮಾ ಮಝೆ ಭಾಪುರೇ ಭಳಿರೇ ಹನುಮಂತ ||ಪ||

ರಾಮಪದ ಸೇವಿಪ ವೀರ ಹನುಮಂತ ||ಅ.ಪ||

ಹುಟ್ಟುತಲೇ ಹೊನ್ನ ಕಚ್ಚುಟವ ಕುಂಡಲವೆರಿಸಿ
ನಿಷ್ಠೆಯಲಿ ರಘುಪತಿಯ ಪಾದವನೇ ಕಂಡು
ಧಿಟ್ಟ ಹರಿದಾಡಿ ಮನಮುಟ್ಟಿ ಪೂಜಿಸಲಜನ
ಪಟ್ಟಕನುವಾದ ಸಿರಿವಂತ ಹನುಮಂತ || ೧||

ಅಂಬರಕೆ ಪುಟಿನೆಗೆದು ಅಂಬುಧಿಯ ನೆರೆ ದಾಟಿ
ಕುಂಭಿಣಿಯ ಮಗಳಿಗುಂಗುರವಿತ್ತೆ
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾದಿವೀರ ಹನುಮಂತ ||೨||

ಅತಿ ದುರುಳ ರಕ್ಕಸನು ರಥದ ಮೇಲಿರಲು
ರಘುಪತಿಯು ಪದಚರಿಯಾಗಿ ನಿಂತಿರಲು
ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ಯವಂತ ಹನುಮಂತ ||೩||

ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು
ದೃಡ ಭಕುತಿಯಿಂದ ಮೌನದಲಿ ಕುಳಿತು
ಎಡೆಯ ಕೊಂಡೊದ್ದೋಡಿ ಗಗನದಲಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ ||೪||

ಪ್ರಥಮದಲಿ ಹನುಮಂತ ದ್ವಿತಿಯದಲಿ ಕಲಿಭೀಮ
ತೃತಿಯದಲಿ ಗುರು ಮಧ್ವಮುನಿಯು ಎನಿಸಿ
ಪ್ರತಿಯಿಲ್ಲದಲೆ ಮೆರೆದೆ ಪುರಂದರ ವಿಠಲನ
ಭಕ್ತ ನಿನಗಾರು ಸರಿ ವಿಜಯ ಹನುಮಂತ || ೫||

Lyrics in English

Ma maje bapure balire hanumanta ||pa||

Ramapada sevipa vira hanumanta ||a.pa||

Huttutale honna kacchutava kundalaverisi
Nishteyali ragupatiya padavane kandu
Dhitta haridadi manamutti pujisalajana
Pattakanuvada sirivanta hanumanta|| 1||

Ambarake putinegedu ambudhiya nere dati
Kumbiniya magaligunguravitte
Bembidade lankeyanu sambramadi sakagitte
Gambira viradivira hanumanta ||2||

Ati durula rakkasanu rathada meliralu
Ragupatiyu padachariyagi nintiralu
Pruthivi gaganake beledu rathavade odeyanige
Ati Bayankara satyavanta hanumanta ||3||

Odeya unakareyalandadigadige kai mugidu
Druda Bakutiyinda maunadali kulitu
Edeya kondoddodi gaganadali surarige
Koduta savidunda gunavanta hanumanta ||4||

Prathamadali hanumanta dvitiyadali kalibima
Trutiyadali guru madhvamuniyu enisi
Pratiyilladale merede purandara vithalana
Bakta ninagaru sari vijaya hanumanta


ಓಂ ಶಿವೋಹಂ..ಓಂ  ಶಿವೋಹಂ/ Om shivoham …. Om shivoham …….

ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್
ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್ ||

ಓಂ  ಭೈರವ ರುದ್ರಾಯ ಮಹಾ ರುದ್ರಾಯ
ಕಾಲ ರುದ್ರಾಯ ಕಲ್ಪಾಂತ ರುದ್ರಾಯ
ವೀರ ರುದ್ರಾಯ ರುದ್ರ ರುದ್ರಾಯ
ಘೋರ ರುದ್ರಾಯ ಅಘೋರ ರುದ್ರಾಯ
ಮಾರ್ತಾಂಡ ರುದ್ರಾಯ, ಅಂಡ ರುದ್ರಾಯ
ಬ್ರಹ್ಮಾಂಡ ರುದ್ರಾಯ ಚಂಡ ರುದ್ರಾಯ
ಪ್ರಚಂಡ ರುದ್ರಾಯ ದಂಡ ರುದ್ರಾಯ
ಶೂಲ ರುದ್ರಾಯ ವೀರ ರುದ್ರಾಯ
ಭವ ರುದ್ರಾಯ, ಭೀಮ ರುದ್ರಾಯ
ಅತಳ ರುದ್ರಾಯ, ವಿತಳ ರುದ್ರಾಯ
ಸುತಳ ರುದ್ರಾಯ , ಮಹಾತಳ ರುದ್ರಾಯ
ರಸಾತಳ ರುದ್ರಾಯ, ತಳಾತಳ ರುದ್ರಾಯ
ಪಾತಾಳ ರುದ್ರಾಯ, ನಮೋ ನಮಃ ||

ಓಂ  ಶಿವೋಹಂ…..ಓಂ ಶಿವೋಹಂ…
ರುದ್ರ ನಾಮಂ ಭಜೇಹಂ||ಓಂ||

ವೀರ ಭದ್ರಾಯ ಅಗ್ನಿ ನೇತ್ರಾಯ
ಘೋರ ಸಂಹಾರಕಾ
ಸಕಲ ಲೋಕಾಯ , ಸರ್ವ ಭೂತಾಯ
ಸತ್ಯ ಸಾಕ್ಷಾತ್ಕಾರಾ
ಶಂಭೋ ಶಂಭೋ ಶಂಕರಾ…..

ಓಂ ಶಿವೋಹಂ…..ಓಂ ಶಿವೋಹಂ…
ರುದ್ರ ನಾಮಂ ಭಜೇಹಂ ಭಜೇಹಂ||ಓಂ||

ಹರ ಹರ ಹರ ಹರ ಹರ ಹರ
ಹರ ಹರ ಮಹಾದೇವ್

ಓಂ ನಮಃ ಸೋಮಾಯಚ, ರುದ್ರಾಯಚ
ನಮಸ್ತಾಮ್ರಾಯಚ , ಅರುಣಾಯಚ
ನಮಃ ಶಾಂಗಾಯಚ, ಪಶುಪತಯೇಚ
ನಮಃ ಉಗ್ರಾಯಚ , ಭೀಮಾಯಚ
ನಮೋ ಅಗ್ರೇ ವದಾಯಚ ದೂರೇ
ವದಾಯಚ ನಮೋ ಹಂತ್ರೇಚ
ಸಹಾನಿಯಾಚೆ ,ಸಹಮೋ ವ್ರಕ್ಷೇ
ಭ್ಯೋ ಹರಿಕೇಶೇ ,ಭ್ಯೋ ನಮಃ ಸ್ಕರಾಯ,
ನಮಸ್ ಸಂಭವೇಚಮಯೋ ಭವೇಚ
ನಮಃ ಶಂಕರಾಯಚ ಮಯಸ್ಕರಾಯಚ
ನಮಃ ಶಿವಾಯಚ, ಶಿವಕರಾಯಚಾ….

ಅಂಡ ಬ್ರಹ್ಮಾಂಡ ಕೋಟಿ ಅಖಿಲ ಪರಿಪಾಲನ
ಪೂರಣ ಜಗತ್ ಕಾರಣ ಸತ್ಯ ದೇವ ದೇವ ಪ್ರಿಯ

ವೇದ ವೇದಾರ್ಥ ಸಾರ ಯಘ್ನ ಯಘ್ನೋಮಯ
ನಿಶ್ಚಲ ದುಷ್ಟ ನಿಗ್ರಹ , ಸಪ್ತ ಲೋಕ ಸಂರಕ್ಷಣಾ

ಸೋಮ ಸೂರ್ಯ ಅಗ್ನಿ ಲೋಚನ
ಶ್ವೇತ ವ್ರಷಭ ವಾಹನ
ಶೂಲಪಾಣಿ ಭುಜಂಗ ಭೂಷಣ
ತ್ರಿಪುರ ನಾಶ ನರ್ತನ

ವ್ಯೋಮಕೇಶ ಮಹಾಸೇನ ಜನಕ
ಪಂಚವಕ್ರ ಪರಶು ಹಸ್ತ ನಮಃ

ಓಂ ಶಿವೋಹಂ…ಓಂ ಶಿವೋಹಂ…
ರುದ್ರ ನಾಮಂ ಭಜೇಹಂ….ಭಜೇಹಂ…||ಓಂ||

ಕಾಲ ತ್ರಿಕಾಲ ,ನೇತ್ರ ತ್ರಿನೇತ್ರ
ಶೂಲ ತ್ರಿಶೂಲ ಧಾತ್ರಂ…
ಸತ್ಯ ಪ್ರಭಾವ ದಿವ್ಯ ಪ್ರಕಾಶ
ಮಂತ್ರ ಸ್ವರೂಪ ಮಾತ್ರಂ…

ನಿಶ್ ಪ್ರಪಂಚಾಧಿ ನಿಷ್ಕಳಂಕೋಹಂ
ನಿಜ ಪೂರ್ಣ ಭೋಧ ಹಂ ಹಂ
ಸತ್ಯ ಗಾತ್ಮಾಗಂ , ನಿತ್ಯ ಬ್ರಹ್ಮೋಹಂ
ಸ್ವಪ್ರಕಾಶೋಹಂ ಹಂ ಹಂ

ಸಚ್ಛಿತ್ ಪ್ರಮಾಣಂ ಓಂ ಓಂ
ಮೂಲ ಪ್ರಮೇಯಂ ಓಂ ಓಂ
ಅಯಂ ಬ್ರಹ್ಮಾಸ್ಮಿ ಓಂ ಓಂ
ಅಹಂ ಬ್ರಹ್ಮಾಸ್ಮಿ ಓಂ ಓಂ

ಗಣ ಗಣ ಗಣ ಗಣ ಗಣ ಗಣ
ಗಣ ಗಣ ಸಹಸ್ರ ಕಂಠ ಸಪ್ತ ವಿಹರಕಿ
ಡಮ ಡಮ ಡಮ ಡಮ
ಡುಮ ಡುಮ ಡುಮ ಡುಮ
ಶಿವಡಮರುಗನಾದ ವಿಹರಕಿ

ಓ೦ ಶಿವೋಹಂ…..ಓ೦ ಶಿವೋಹಂ…
ರುದ್ರ ನಾಮಂ ಭಜೇಹಂ ಭಜೇಹಂ

ವೀರ ಭದ್ರಾಯ ಅಗ್ನಿ ನೇತ್ರಾಯ
ಘೋರ ಸಂಹಾರಕಾ
ಸಕಲ ಲೋಕಾಯ , ಸರ್ವ ಭೂತಾಯ
ಸತ್ಯ ಸಾಕ್ಷಾತ್ಕಾರಾ
ಶಂಭೋ ಶಂಭೋ ಶಂಕರಾ…..

ಓ೦ ಶಿವೋಹಂ…ಓ೦ ಶಿವೋಹಂ…
ರುದ್ರ ನಾಮಂ ಭಜೇಹಂ….ಭಜೇಹಂ…||ಓಂ||

Lyrics in English

Om shivoham … Om shivoham …….. Rudra naamam bhajeham ||om||

Hara hara hara hara hara hara  | hara hara mahadev | Hara hara hara hara hara hara  | hara hara mahadev ||

Om bhairava rudraya, maha rudraya, kaala rudraya, kalpaanta rudraya, veera rudraya, rudra rudraya, ghora rudraya, aghora rudraya, martanda rudraya, anda rudraya, brahmanda rudraya, chanda rudraya, prachanda rudraya,  danda rudraya, shoola rudraya, veera rudraya, bhava rudraya, bheema rudraya, atala rudraya, vitala rudraya, sutala rudraya, mahatala rudraya, rasatala rudraya, talaatala rudraya, patala rudraya, namo namah ||

Om shivoham … Om shivoham …….. Rudra naamam bhajeham ||om||

Veera bhadraya agni netraya ghora samharaka, sakala lokaya, sarva bhutaya satya saakshatkara | shambho shambho shankara …..

Om shivoham … Om shivoham …….. Rudra naamam bhajeham ||om||

Hara hara hara hara hara hara  hara hara mahadev ||

Om somayacha, rudrayacha, namastamrayacha, arunayacha, namah shaangayacha, pashupatayecha, namah ugrayacha, bhimayacha, namo agrevadayacha doore vadayacha namo hantrecha, sahaaniyache, sahamo vrukshebhyo harikesgebhyo, namaskaraya, namas sambhavecha mayo bhavecha, namah shankarayacha, mayaskarayacha, namah shivayacha, shivakarayacha…….

Anda brahmanda koti akhila paripalana |poorana jagat kaarana satya deva deva priya

Veda vedaarta saara yajna yajnomaya nishchala dushta nigraha, sapta loka samrakshanaa ..

Soma soorya agni lochana | shwetha vrushabha vaahana | shoolapaani bhujanga bhushana |tripura naasha nartana ||

Vyomakesha mahaasena janaka panchavaka parashu hasta namah

Om shivoham … Om shivoham …….. Rudra naamam bhajeham ||om||

Kaala trikaala, netra trinetra, shoola trishoola dhaatram………satya prabhava divya prakash mantra swaroopa matram ||

Nish prapanchadi nishkalamkoham | nija poorna bhodha ham ham | gatya gaatmaagam, nitya brahmoham, swaprakaashoham ham ham ||

Sacchit pramaanam om om | moola prameyam om om | ayam brahmaasmi om om | aham brahmaasmi om om ||

Gana gana gana gana gana gana gana gana gana sahasra kanta sapta viharaki | dama dama dama dama duma duma duma duma | shiva damaruganaada viharaki ||

Om shivoham … Om shivoham …….. Rudra naamam bhajeham ||om||

Veera bhadraya agni netraya ghora samharaka, sakala lokaya, sarva bhutaya satya saakshatkara | shambho shambho shankara …..

Om shivoham … Om shivoham …….. Rudra naamam bhajeham ||om||


ಶ್ರೀಕಂಠಾ…. ವಿಷಕಂಠಾ…… /Srikanta …… Vishakanta

ಶ್ರೀಕಂಠಾ…. ವಿಷಕಂಠಾ…… ||2||
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ||2||
ಗತಿನೀನೆಂದರೆ ಓಡುತ ಬರುವ
ಕರುಣಾಸಾಗರನೆ||2||ಶ್ರೀಕಂಠಾ||

ಹರಿಯುವ ನದಿಯಲಿ ಕಲರವ ನಾದ ಕೂಡ
ಶಿವಶಿವ ಎನ್ನುತ್ತಿದೆ…ಏ…
ಅರಳಿದ ಸುಮದಲಿ ನಲಿಯುವ ಭ್ರಮರವು
ಶಿವನಾಮ ಹಾಡುತಿದೆ…
ಬೀಸುವ ಗಾಳಿಯು ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತಿದೆ||ಬೀಸುವ||
||ಶ್ರೀಕಂಠಾ||

ಓಂ….ನಮಸ್ತೇ ಮಹಾದೇವಾಯ , ತ್ರೈಂಭಕಾಯ
ತ್ರಿಪುರಾಂತಕಾಯ
ತ್ರಿಕಾಲಾಗ್ನಿ ಕಾಲಾಯ , ಕಾಲಾಗ್ನಿ ರುದ್ರಾಯ
ನೀಲಕಂಠಾಯ, ಮ್ರತ್ಯುಂಜಯಾಯ
ಸರ್ವೇಶ್ವರಾಯ, ಸದಾಶಿವಾಯ
ಶ್ರೀಮನ್ ಮಹಾದೇವಾಯ ನಮಃ

ಸಾವಿರ ಜನುಮವು ಬಂದರು ಹೀಗೆ
ನಿನ್ನ ಸನ್ನಿಧಿಯಲಿ ಇರಿಸು…….
ಉಸಿರಿನ ಉಸಿರಲು ತಂದೆ ಎಂದು
ನಿನ್ನ ನಾಮವನು ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ
ಕೈಹಿಡಿದು ನಡೆಸು||ಕತ್ತಲಲಿರುವ||
||ಶ್ರೀಕಂಠಾ||

Lyrics in English

Srikanta …… Vishakanta. Lokavanulisalu vishavanu kudida nanjundeshwarane ||2|| gati neenendare oduta baruva karunaasaagarane ||2||srikanta||

Hariyuva nadiyali kalarava naada kooda shiva shiva ennutide ……. Aralida sumadali naliyuva bhramaravu shivanama hadutide …. beesuva gaaliyu parimala chelluta ninnane smarisutide ||2||Srikanta||

Om .. namaste mahadevaaya, traimbakaaya, tripuraantakaaya, trikaalagni kaalaya, kalaagni rudraya, nilakantaya, mrutyunjayaya, sarveshwaraya, sadashivaya, sriman mahadevaya namah ||

Savira janumavu bandaru heege ninna sannidhiyali erisu ………… Usirina usiralu tande endu ninna naamavanu beresu | kattalaliruve nemmadi tumbi kaihididu nedesu ||2|| srikanta||