ಮೂಕಾಂಬಿಕೆ ಮಲಗಮ್ಮಾ /Mookambike malagammaa

ಮೂಕಾಂಬಿಕೆ ಮಲಗಮ್ಮಾ ಕಣ್ಣ ಮುಚ್ಚಿ ಮಲಗಮ್ಮಾ ।।ಪ।। [೨]
ಮೂ ಜಗದ ಚಿಂತೆಯನು ನೀ ಮರೆತು ಮಲಗಮ್ಮಾ ।। [೨] [ಪ]

ಮೂಕನ ಗರ್ವವ ಮುರಿದವಳೇ ಅಸುರನ ಕೊಂದು ನಿಂತವಳೇ । [೨]
ಭಕ್ತರ ಬೇಡಿಕೆ ನೀಡುತಲಿ ನೀನು ದಣಿದಿಹೇ ಸಾಕು ಮಲಗಮ್ಮಾ ।।೧।। [ಪ]

ಮಕ್ಕಳ ಪಾಲಿಸಿ ಹಗಲಿರಳು ಸೂಸುವೆ ಮಮತೆಯ ನಗೆಮುಗುಳು ।
ನಿನ್ನಯ ದಣಿವನು ಅರಿಯುವರ್ಯಾರು ಇನ್ನು ಅರೆಕ್ಷಣವಾದರು ಮಲಗಮ್ಮಾ ।।೨।। [ಪ]

Lyrics in English

Mookambike malagammaa kanna mucchi malagamma ||2 times moo jagada chinteyanu nee maretu malagammaa ||pa||

Mookana garvava muridavale asurana kondu nintavale |2 times| bhaktara bedike needutali neenu danidihe saaku malagamma ||1||

Makkala paalisi hagalirulu soosuve mamateya nagemugulu | ninnaya danivanu ariyuvaryaaru ennu arekshanavaadaru malagammaa ||2||


The audio or video link is not available at present. I will post it as soon as I get it.

ಶ್ರೀ ಮಹಾಲಕುಮಿ ದೇವಿಯೇ /Shri maha lakumi deviye

ಶ್ರೀ ಮಹಾಲಕುಮಿ ದೇವಿಯೇ ಕೋಮಲಾಂಗಿಯೇ ಸಾಮಗಾಯನ ಪ್ರೀಯಳೇ ।ಪ।
ಹೇಮಗರ್ಭ ಕಾಮಾರಿ ಶಕ್ರಸ್ತುರ ಸ್ತೋಮವಂದಿತಳೇ ಸೋಮಸೋದರಿಯೇ ।।ಅ ಪ ।।

ಬಟ್ಟಕುಂಕುಮ ನೊಸಲೊಳೆ ಮುತ್ತಿನ ಹೊಸ ಕಠ್ಠಾಣಿ ತ್ರಿವಳಿ ಕೊರಳೋಲೆ
ಇಟ್ಟ ಪೊನ್ನೋಲೆ ಕಿವಿಯೋಲೆ ಪವಳದ ಕಯ್ಯ ಕಟ್ಟು ಕಂಕಣ ಕೈ ಬಳೆ ।
ಕೊಟ್ಟ ಕುಬುಸ ಬಿಗಿದುಟ್ಟ ಪೀತಾಂಬರ ಘಟ್ಟಿ ವಡ್ಯಾಣ ಕಾಲಂದುಗೆ ರುಳಿಗೆಜ್ಜೆ
ಬೆಟ್ಟಲ್ಲಿ ಪೊಳೆವುದು ಮೇಂಟಕೆ ಕುರುಪಿಲ್ಲಿ ಇಟ್ಟು ಶೋಭಿಸುವ ಅಷ್ಟ ಸಂಪನ್ನೇ ।।೧।।

ಸಕಲ ಶುಭ ಗುಣ ಭರಿತಳೆ ಏಕೋ ದೇವಿಯೇ ವಾಕು ಲಾಲಿಸಿ ನೀ ಕೇಳೇ
ನೋಕನಿಯನ್ನ ಮಹಲೀಲೆ ಕೊಂಡಾಡುವಂತ ಏಕ ಮಾನವ ಕೊಡು ಶೀಲೆ ।
ಬೇಕುಬೇಕು ನಿನ್ನ ಪತಿ ಪಾದಾಬ್ಜವ ಏಕಾಂತದಿ ಪೂಜಿಪರ ಸಂಘ ಕೊಡು
ಲೋಕದ ಜನರಿಗೆ ನಾ ಕೈಯೊಡ್ಡದಂತೆ ನೀ ಕರುಣಿಸು ತಾಯೇ ರಾಕೇಂದುವದನೇ ।।೨।।

ಮಂದರಧರನರಸಿಯೇ ಇಂದಿರೆ ಎನ್ನ ಕುಂದುದೋಷಗಳಳಿಯೇ
ಅಂದ ಸೌಭಾಗ್ಯದ ಸಿರಿಯೇ ತಾಯೇ ನಾ ನಿನ್ನ ಕಂದ ಮುಂದಕ್ಕೆ ಕರೆಯೇ ।
ಸಿಂಧು ಶಯನ ಸಿರಿ ವಿಜಯವಿಠಲರಾಯ ಎಂದೆಂದಿಗೂ ಮನದಿಂದಗಲದೆ
ಆನಂದದಿಂದಲಿ ಬಂದು ಮುಂದೆ ಕುಣಿಯುವಂತೆ ವಂದಿಸಿ ಪೇಳಮ್ಮ ಸಿಂಧು ಸುತೆಯಳೆ ।।೩।।

Lyrics in English

Shree mahaalakumi deviye komalaangiye |
Saamagaayana priyale || pa ||

Hemagarbha kaamaari shakra sura stoma |
Vanditale soma sodariye || a. Pa. ||

Batta kunkuma nosalole muttina hosa |
Kattaani trivali koralole |
Itta ponnole kiviyole pavalada kaiya |
Kattu kankana kai bale ||
Totta kubusa bigidutta peetaambara |
Ghatti odyaana kaalandige ruligejje |
Battili polevudu mentike kirupille |
Ittu shobhisuva ashta sampanne || 1 ||

Sakala shubhaguna bharitale ekodevi |
Vaaku laalisi nee kele |
Lokadi ninna maha leele kondaaduvantha |
Eka manava kodu sheele |
Beku beku ninna pati paadaabjava |
Ekaantadi poojipara sangava kodu |
Lokada janarige naa kara vaddadante |
Nee karunisu taay raakendu vadane || 2 ||

Mandaradharana arasiye indire enna |
Kundu doshagalaliye |
Anda soubhaagyada siriye taaye naa ninna |
Kandanu mundake kareye |
Sindhu shayana siri vijayaviththalareya |
Endendigoo manadindagalade |
Aanandadi bamdu munde kuniyuvante |
vandisi pelammaa Sindhu suteyale ||3 ||


ರಮಾ ಸಮುದ್ರನ ಕುಮಾರಿ /Ramaa samudrana kumari

ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ ।।ಪ ।।

ಉಮೇಶ ಮೊದಲಾದ ಅಮರನಿಖರವೋ ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।।

ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಡಲೇ ಜಗವ ।
ಕೋಪಾರಹಿತಳಾಗಿ ಶ್ರೀಪತಿಯೊಳು ನಮ್ಮ ತಾಪತ್ರಯವ ಪೇಳಿ ಪೋಷಿಸಬೇಕೆಂದು ।।೧।। ।।ರಮಾ।।

ಕರುಣಾ ವಾರಿಧಿಯೆಂದು ಶರಣಜನರು ನಿಮ್ಮ ಸ್ಮರಣೆಯ ಮಾಡುತಿಹರೆ ।
ಮರಣ ಕಾಲದಿ ಅಘಹರಣಗೊಳಿಸಿ ನಮ್ಮ ಕರುಣದಿಂದಲಿ ನಿಮ್ಮ ಚರಣದೊಳಿರಿಸಮ್ಮ ।।೨।। ।।ರಮಾ।।

ವಾಸವಂದಿತ ಸಿರಿ ಶೇಷವಿಠಲನೊಳು ವಾಸವ ಮಾಡುತಿಹರೆ ।
ಘಾಸಿಪಡಿಪನಮ್ಮ ಈ ಸಮದಲಿ ವಾಸವಾತ್ಮಗೆ ಪೇಳಿ ಪೋಷಿಸಬೇಕೆಂದು ।।೩।। ।।ರಮಾ।।

Lyrics in English

Ramaa samudrana kumaari ninna sarisamaanaraaramma ||pa ||

Umesha modalaada amaranikaravu |
Bhramisi ninna paada kamala bhajiparu || a. Pa. ||

Apaara mahimana vyaapaaragala tilidu |
Kaapaaduve jagava ||
Koparahitalaagi shreepatiyolu namma |
Taapatrayava peli poshisa bekamma || 1 ||

Karunavaaridhi endu sharana janaru ninna |
Smaraneya maaduvare ||
Harinaakshi kelele | harushadindali hari |
Charanava tori agha haranava maadise || 2 ||

Vaasavanuta sheshaviththalanolu |
Vaasava maaduvale ||
Ghaasigolisadale ee samayadali |
Vaasudevage peli poshisabekammaa || 3 ||


ಧಣಿಯಾ ನೋಡಿದೆನೋ /Daniya nodideno venkatana

ಧಣಿಯಾ ನೋಡಿದೆನೋ ವೆಂಕಟನ
ಮನಧಣಿಯಾ ನೋಡಿದೆನೋ ಶಿಖಾಮಣಿ ತಿರುಮಲನಾ

ಚರಣ ದಂದುಗೆ ಗೆಜ್ಜೆಯವನ ಪಿತಾಂಬರ ಉಡಿಗೆ ವೊಡ್ಯಾನವಿಟ್ಟಿಹನ
ಮೆರೆಯುವ ಮಾಣಿಕ್ಯ ವದನಾ ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿಹನಾ
ಧ |

ಕೊರಳೊಳು ವೈಜಯಂತಿ ಧರಿಸಿಹನ ಕಿರು ಬೆರಳ ಮುದ್ರಿಕೆ ಭುಜ ಕೀರ್ತಿ ಒಪ್ಪುವನ
ಅರಳು ಕಣ್ಗಳ ನೋಟದವನ ಸುಳಿ ಗುರುಳು ನೊಸಲಾಪಟ್ಟಿ ನಾಮ ಇಟ್ಟಹನ
ಧ |

ಶಂಖ ಚಕ್ರವ ಪಿಡಿದಿಹನಾ ಕೈ ಕಂಕಣ ತೊಳ್ಬಂದಿ ಬಾಪುರಿಯವನಾ
ಶಂಖನೂದುವ ಸರ್ವೋತ್ತಮನ ಭುವೈಕುಂಠವಿದೆಂದು ಹಸ್ತದಿ ತೋರಿಸುವನ
ಧ |

ಕೆಸಕ್ಕಿ ಅನ್ನ ಉಂಬುವನ ಬಡ್ಡಿ ಕಾಸು ಬಿಡದಹಾಗೆ ಕೂಡಿ ಹಾಕುವನಾ
ಘೊಷನಾದಕ್ಕೆ ವೊಲಿದಿಹನ ಮೈಯೊಳು ಸುಸುವ ಗಂಧ ಕಸ್ತುರಿಲೆಪಿತನಾ
ಧ |

ನೀಟಾದ ವಲ್ಲಿ ಹೊದ್ದಿಹನ ಹೊರ ಬೇಟೆಯಾಡಿ ಅಂದದಿಂದ ಬರುವನ
ನೋಟದಿ ಬಂದು ನಿಂತಿಹನ ಈ ಶ್ರಿಷ್ಟಿ ಒಡೆಯ ಪುರಂದರ ವಿಠಲನ್ನ
ಧ |

Lyrics in English

Daniya nodideno venkatana mana daniya nodide shikhamani tirumalana ||

Charanadanduge gejjeyavana pitambara udige odyana vittihana
mereyuva manikyadavana chenna sara hara padaka kaustubha darisidana ||1||

Koralolu vaijayanti dharisihana kiru berala mudrike bhuja kirtiloppuvana
aralu kangala nodadavana suli guluru nosala patti nama hacchihana||2||

Shankha chakrava pididihana kai kankana tolbandi bapuriyavana
shankhanuduva sarvottamana buvaikuntavidendu hastadi torisuvana ||3||

Nitada valli hoddihana hora beteyadi andadinda baruvana
notadi bandu nintihana i shrasti odeya purandara vittalana ||4||


By Sri Mysore Ramachandrachar

ನಿನ್ನ ಮಗನ ಲೂಟಿ /Ninna magana looti

ನಿನ್ನ ಮಗನ ಲೂಟಿ ಘನವಮ್ಮ
ಕರೆದು ರಂಗಗೆ ಬುದ್ಧಿಯ ಪೇಳೇ ಗೋಪೆಮ್ಮ ||ಪ||

ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ |
ಕಾಲು ತಂದು ಕೇಲಿನೊಳಗೆ ಅತ್ತಿ ಪೋದನಮ್ಮ ||
ಕೋಲ ತಂದು ಹೊಡಿಯ ಹೋದರೆ ಓಡಿ ಪೋದನಮ್ಮ ||೧||

ಮೊಸರು ಮಾರುವಲ್ಲಿ ಇವನ ಗಾಳಿ ಘನವಮ್ಮ |
ಮೊಸರು ಮಾರುವವರು ಮೊರೆಯಿಡುವಾರಮ್ಮ ||
ಶಿಶುವಿನ ಕೈಯಲ್ಲಿ ಬೆಣ್ಣೆ ಉಳಿಗೊಡನಮ್ಮ |
ಶಶಿಮುಖಿಯರು ಹೀಗೆ ದೂರುವರಮ್ಮ ||೨||

ಊರೊಳು ಬರಲೀಸ ಕೇರಿಯೊಳು ಸುಳಿಯಲೀಸ
ಈರೇಳು ಲೋಕಕ್ಕೆ ಒಡೆಯ ತಾನಂತೆ ||
ಧೀರಶ್ರಿ ಪುರಂದರ ವಿಠಲ ರಾಯನ |
ಕೇರಿ ಬಸವನ ಮಾಡಿಬಿಟ್ಟೆ ಗೋಪೆಮ್ಮ ||೩||

Lyrics in English

Ninna magana looti ghanavamma
Karedu rangage buddhiya pele gopemma ||pa||

Halu kayuvalli ivana gali ghanavamma |
kalu tandu kelinolage athi podanamma |
kola tandu hodiya hodare odipodanamma ||1||

Mosaru maaruvalli ivana gali ghanavamma |
Mosaru maruvavaru more iduvaramma |
Shishuvina kaiyalli benne ooligodanamma |
Shashimukhiyaru heege peluvaramma ||2||

Oorolu baraleesa keriyolu suliyaleesa
Eerelu lokakke odeya taanante
Dheerasri purandara vithala rayana
keri basavana maadibitte gopemma ||3||


ಗಾನಕೆ ಸುಲಭವು ರಾಮ /Gaanake sulabhavu rama

ಗಾನಕೆ ಸುಲಭವು ರಾಮ ನಾಮವು
ಗಾನಕೆ ಅತಿಸುಲಭ ನಾಮವು

ರಾಮ್ ರಾಮ್ ಜೈಜೈರಾಮ್
ರಾಮ್ ರಾಮ್ ಶ್ರೀರಾಮ್ ಶ್ರೀರಾಮ್

ದೀನಜನಕೆ ಬಲು ಸಾನುರಾಗನಾದ
ಜಾನಕಿನಾಥನ ದಿವ್ಯ ನಾಮವು

ತಾಳ ತಂಬೂರಿ ಮೃದಂಗಗಳಿಂದಲಿ
ಕೇಳುವರಿಗೆ ಅದು ಮೌಳಿಯ ನಾಮವು
ಘೋರಕಲುಷಗಳ ಪಾರುಗಾಣಿಸಿ
ಮನಕೋರಿಕೆಗಳನೀವ ತಾರಕ ನಾಮವು

ತಾಪಸ ಸತಿಯಳ ಶಾಪವ ಬಿಡಿಸಿದ
ಭೋಪದಾಷರಥಿಯ ದಿವ್ಯ ನಾಮವು

ಲಂಕೆಯ ಪೊಕ್ಕು ನಿಷಾಚರರನೆ ಕೊಂದು
ಪಂಕಜಾಕ್ಷಿಯ ಆತಂಕ ಕಳೆದ ನಾಮ

ಎನ್ನವರೆಲ್ಲರು ಬನ್ನಿರಿ ಎನ್ನುತ
ತನ್ನೊಡನೊಯ್ದ ಪ್ರಸನ್ನ ರಾಮನ ನಾಮ

Lyrics in English

Gaanake sulabhavu rama naamavu gaanake ati sulabha naamavu ||

Ram ram jai jai ram | ram ram sri ram sri ram ||

Deena janake balu saanuraaganaada jaanakinaathana divya naamavu ||

Taala tamburi mrudangagalinda keluvarige adu mouliya naamavu ghorakalushagala paarugaanisi manakorikegalaneeva taraka naamavu ||

Taapasa satiyala shapava bidisida bhopadaasharathiya divya naamav ||

Lankeya pokku nishacharane kondu pankajakshiya atanka kaleda nama ||

Ennavarellaru banniri ennuta tannodanoyda prasanna ramana naama ||


ಏಕೆ ಕಕುಲಾತಿಪಡುವೆ /Eke kakulaati paduve

ಏಕೆ ಕಕುಲಾತಿಪಡುವೆ ಎಲೆ ಮನವೆ ||ಪ||

ಲೋಕವನೆ ಸಲಹುವ ಶ್ರೀನಿವಾಸನು ನಮ್ಮ |ಸಾಕಲಾರದೆ ಬಿಡುವನೇ – ಮನವೆ ಅಪ

ಆನೆಗಳಿಗೆಯ್ದಾರು ಮಣವಿನಾಹಾರವನು ಅಲ್ಲಿ ತಂದಿತ್ತವರದಾರೊ |ಜೇನುನೊಣ ಮೊದಲಾದ ಕ್ರಿಮಿ – ಕೀಟಗಳಿಗೆಲ್ಲ |ತಾನುಣಿಸದಲೆ ಬಿಡುವನೇ – ಮರುಳೆ 1

ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನು ಅಲ್ಲಿ ತಂದಿತ್ತವರದಾರೊ |ಎಲ್ಲವನು ತೊರೆದು ಅರಣ್ಯ ಸೇರಿದ್ರ್ದವರ |ಅಲ್ಲಿ ನಡಸದೆ ಬಿಡುವನೇ – ಮರುಳೆ 2

ಅಡವಿಯೊಳಗೇ ಪುಟ್ಟುವಾ ಮೃಗ ಕುಲಕ್ಕೆಲ್ಲ ಒಡೆಯನಾರುಂಟು ಪೇಳೊ |ಗಿಡದಿಂದ ಗಿಡಕೆ ಹಾರುವ ಪಕ್ಷಿಗಳಿಗಲ್ಲಿ |ಪಡಿಯ ನಡೆಸದೆ ಬಿಡುವನೇ – ಮರುಳೆ 3

ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆಮಂಡೆ ದಡ್ಡಾಯಿತಲ್ಲ |ಭಂಡ ಮನವೇ ನೀನು ಕಂಡವರಿಗೆರಗದಿರು ಕೊಂಡಾಡಿ ಹರಿಯ ಭಜಿಸೋ – ಮರುಳೆ 4

ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನು ಬೆಂಬಿಡದೆ ಸಲುಹುತಿಹನು |ನಂಬು ಶ್ರೀ ಪುರಂದರವಿಠಲನ ಪಾದವನು ನಂಬಿದರೆ ಸಲಹದಲೆ ಬಿಡುವನೇ – ಮರುಳೆ 5

Lyrics in English

Eke kakulaati paduve ele manave ||

Lokavane salahuva srinivasanu namma |saakalarade biduvane – manave ||a.pa||

Anegalige manavinaahaaravanu allu tandittavaraaro | jenu nona modalaada krimi keetagaligella | taanunisadale biduvane – marule ||

Kallinolagiruva kappegaligaahaaravanu alli tandittavaradaaro | ellavanu toredu aranya seriddavara | alli nadasade biduvane ||

Adaviyolage puttuvaa mruga kulakkella odeyanaaruntu pelo | gidadinda gidake haaruva pakshigaligalli | padiya nadesade biduvane ||

Kandakandavara kaalige eragi ele marulemande daddaayitalla | bhanda manave neenu kandavarigeragadiru kondaadi hariya bhajiso ||

Embattunalku laksha jeevarashigalannu bembidade salahutihanu | nambu sri purandaravittalana paadavanu nambidare salahadale biduvane ||


https://youtu.be/iMzy-OtsuWE

ಮುಳ್ಳು ಕೊನೆಯ ಮೇಲೆ /Mullu koneya mele

ಮುಳ್ಳು ಕೊನೆಯ ಮೇಲೆ
ಮೂರು ಕೆರೆಯ ಕಟ್ಟಿ ,ಎರಡು ತುಂಬಲು
ಒಂದು ತುಂಬಲೇ ಇಲ್ಲ
||ಮುಳ್ಳು|| ತುಂಬಲಿಲ್ಲದ ಕೆರೆಗೆ
ಬಂದರು ಮೂವರು ಒಡ್ಡರು
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
||ಮುಳ್ಳು||

ಕಾಲಿಲ್ಲದ ಒಡ್ಡಗೆ ಕೊಟ್ಟರು
ಮೂರು ಎಮ್ಮೆಗಳ ಎರಡು ಬರಡು
ಒಂದಕ್ಕೆ ಕರುವೇ ಇಲ್ಲ
||ಕಾಲಿಲ್ಲದ||
ಕರುವಿಲ್ಲದ ಎಮ್ಮೆಗೆ ಕೊಟ್ಟರು
ಮೂರು ಹೊನ್ನುಗಳ
ಎರಡು ಸವಕಲು ,ಒಂದು ಸಲ್ಲಲೇ ಇಲ್ಲ||2||
||ಮುಳ್ಳು||

ಸಲ್ಲದಿದ್ದ ಹೊಣ್ಣಿಗೆ ಬಂದರು
ಮೂವರು ನೋಟಗಾರರು ,ಇಬ್ಬರು ಕುರುಡರು
ಒಬ್ಬಗೆ ಕಣ್ಣೇ ಇಲ್ಲ
||ಸಲ್ಲದಿದ್ದ||
ಕಣ್ಣಿಲ್ಲದ ನೋಟಗಾರಗೆ ಕೊಟ್ಟರು
ಮೂರು ಊರುಗಳ
ಎರಡು ಹಾಳು ,ಒಂದಕ್ಕೆ ಒಕ್ಕಲೇ ಇಲ್ಲ||3||
||ಮುಳ್ಳು||

ಒಕ್ಕಲಿಲ್ಲದ ಊರಿಗೆ
ಬಂದರು ಮೂವರು ಕುಂಬಾರರು
ಇಬ್ಬರು ಚೊಂಚರು ,ಒಬ್ಬಗೆ ಕೈಯೇ ಇಲ್ಲ
||ಒಕ್ಕಲಿಲ್ಲದ||
ಕೈಯಿಲ್ಲದ ಕುಂಬಾರನು
ಮಾಡಿದನು ಮೂರು ಮಡಕೆಗಳ
ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ||4||
||ಮುಳ್ಳು||

ಬುಡವಿಲ್ಲದ ಮಡಕೆಗೆ ಹಾಕಿದರು
ಮೂರು ಅಕ್ಕಿಕಾಳ
ಎರಡು ಬೇಯಲು ,ಒಂದು ಬೇಯಲೇ ಇಲ್ಲ
||ಬುಡವಿಲ್ಲದ||
ಬೇಯಲಿಲ್ಲದ ಅಕ್ಕಿಗೆ
ಬಂದರು ಮೂವರು ನೆಂಟರು
ಇಬ್ಬರು ಉಣ್ಣರು ,ಒಬ್ಬಗೆ ಹಸಿವೇ ಇಲ್ಲ||5||
||ಮುಳ್ಳು||

ಹಸಿವಿಲ್ಲದ ನೆಂಟಗೆ ಕೊಟ್ಟರು
ಮೂರು ಟೊಣೆಪೆಗಳ
ಎರಡು ತಾಕದು ,ಒಂದು ತಾಕಲೇ ಇಲ್ಲ
||ಹಸಿವಿಲ್ಲದ||
ತಾಕಲಿಲ್ಲದ ಟೊಣೆಪೆಯ
ತಾಕಿಸಿ ಸದ್ಗತಿಯನು
ಈಯಬೇಕು ಪುರಂದರ ವಿಠ್ಠಲರಾಯ
||ತಾಕಲಿಲ್ಲದ||
||ಮುಳ್ಳು||

Lyrics in English

Mullu koneya mele muru kereya katti
eradu tumbadu ondu tumbale illa |1|

Tumbalillada kerege bandaru muvaru oddaru
ibbaru kuntaru obbage kale illa |2|

Kalillada oddage kottaru muru emmegala
eradu baradu ondakke karuve illa |3|

Karuvillada emmege kottaru muru honnugala
eradu savakalu ondu sallale illa |4|

Salladidda honnige bandaru muvaru notagararu
ibaru kurudaru obbage kanne illa|5|

Kannillada notagarage kottaru muru urugala
eradu halu ondakke okkale illa |6|

Okkalillada urige bandaru muvaru kumbararu
ibbaru choncharu obbage kaiye illa |7|

Kai illada kumbaranu madida muru madikegala
eradu odaku ondakke budave illa |8|

Budavillada madikege hakidaru muru akkikala
eradu beyadu ondu beyale illa |9|

Beyalillada akkige bandaru muvaru nentaru
ibbaru unnaru obbage hasive illa |10|

hasive illada nentage kottaru muru tonapegala
eradu takadu ondu takale illa |11|

Takalillada tonapeya takisi sadgatiya
niyabeku purandaravithala ninu |12|


By Sri Vidyabhushana Theertha Swamiji

ಏನ ಬೇಡಲಿ ನಿನ್ನ ಬಳಿಗೆ /Ena bedali ninna balige

ಏನ ಬೇಡಲಿ ನಿನ್ನ ಬಳಿಗೆ ಬಂದು
ನೀನಿಟ್ಟ ಸೌಭಾಗ್ಯ ನಿಬಿಡವಾಗಿದೆ ಎನಗೆ ।।ಪ।।

ಜನನಿಯ ಕೊಡು ಎಂದು ಜಯವಂತ ಬೇಡುವೆನೇ
ಜನನಿ ಏನಿಟ್ಟಳ ಧೃವರಾಯಗೆ
ಜನಕನ ಕೊಡು ಎಂದು ಜಗದೀಶ ಬೇಡುವೆನೇ
ಜನಕನೇನಿಟ್ಟನ ಪ್ರಹ್ಲಾದಗೇ ।।೧।।

ಅನುಜನ ಕೊಡು ಎಂದು ಅತಿಶಯದಿ ಬೇಡುವೆನೇ
ಅನುಜನೇನಿಟ್ಟನೈ ಆ ವಾಲಿಗೆ
ಧನವನ್ನೇ ಕೊಡು ಎಂದು ದೈನ್ಯದಲಿ ಬೇಡುವೆನೇ
ಧನವ ಗಳಿಸಿ ಸುಯೋಧನನೇನಾದನು ।।೨।।

ಸತಿಯಳ ಕೊಡು ಎಂದು ಮತಿವಂತ ಬೇಡುವೆನೇ
ಸತಿಯಿಂದ ದ್ಯುನಾಮಕನೇನಾದನಯ್ಯ
ಸುತರುಗಳ ಕೊಡು ಸತತದಲಿ ಬೇಡುವೆನೇ
ಸುತರಿಂದ ಧೃತರಾಷ್ಟ್ರ ಗತಿಯೆಷ್ಟು ಪಡೆದ ।।೩।।

ಬಂಧುಗಳ ಕೊಡು ಎಂದು ಚೆಂದದಲಿ ಬೇಡುವೆನೇ
ಬಂಧುಗಳು ಸಲಹಿದರೆ ಗಜರಾಜನ
ಅಂಡನವ ಕೊಡು ಎಂದು ಅತಿಶಯದಿ ಬೇಡುವೆನೇ
ಅಂಡನವನೇರಿದ ನಹುಷನೇನಾದನಯ್ ।।೪।।

ಬೇಡುವೆನು ನಾ ನೊಂದ ಬೇಡತಕ್ಕುದ ದೇವ
ನೀಡೆನೆಂಬುವದು ನಿನ್ನ ಮನದಿಚ್ಛಯೈ
ಮೂಡಲಾದ್ರೀಶ ಶ್ರೀ ಗೋಪಾಲವಿಠಲ
ಬೇಡದಂತೆ ಪರರ ಮಾಡೆನ್ನ ದೊರೆಯೇ ।।೫।।

Lyrics In English

Ena bedali ninna balige bandu
ninitta saubhagya nibidavagide enage | ||pa||

Jananiya kodu endu jayavanta beduvene |
janani enittala dhruvarayage |
janakana kodu endu jagadisha beduvene |
janakanenittana prahladage ||1||

Anujana kodu endu atishayadi beduvene |
anujanenittanai a vaalige |
dhanavanne kodu endu dainyadali beduvene | dhanava galisi suyodhananenadanu ||2||

Satiyala kodu endu mativanta beduvene |satiyinda dyunamakanenadanayya |
sutarugala kodu satatadali beduvene
sutarinda dhrutarashtra gatiyeshtu padeda ||3||

Bandhugala kodu endu chendadali beduvene |bandhugalu salahidare gajarajana |andanava kodu endu atishayadi beduvene |
andanavanerida nahushanenadanayya ||4||

Beduvenu nanonda bedatakkuda deva |nidenembuvadu ninna manadichchayai |mudaladreesha sri gopalavithala |bedadante parara madenna doreye ||5||


By Sri Vidyabhushana Theertha Swamiji

ಜಯ ಜನಾರ್ಧನ ಕೃಷ್ಣ /Jaya janardhana krishna

ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ

ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ

ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ

ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ

ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ

ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ

ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

Lyrics in English

Jaya janardhana krishna radhika pathe |Jana vimochana krishna janma mochana |Garuda vahana krishna gopika pathe |Nayana mohana krishna neerajekshana ||

Sujana bandhava krishna sundarakruthe |Madana komala krishna madhava hare | Vasumati pathe krishna vasavanuja Varagunakara krishna vaishnavakruthe |Suruchiranana krishna shouryavaridhe |Murahara vibho krishna mukthidayaka | Vimalapalaka krishna vallabhipathe |
Kamalalochana krishna kamyadayaka ||

Vimalagatrane krishna bhaktavatsala| Charana pallavam krishna karuna komalam | kuvalaikshana krishna komalakruthe tava padambujam krishna sharanamashraye | bhuvana nayaka krishna pavanakruthe |
Gunaganojwala krishna nalinalochana |pranayavaridhe krishna gunaganakara damasodara krishna deena vatsala ||

Kamasundara krishna pahi sarvadan narakanashana krishna narasahayaka | Devaki sutha krishna karunyambhude |kamsanashana krishna dwaraksthitha pavanatmaka krishna dehi mangalam |
Tvatpadambujam krishna shyama komalam |
Bhaktavatsala krishna kamyadayaka palisennanu krishna srihari namo ||

Bhaktadasa naa krishna harasu nee sada |kadu ninthena krishna salaheya vibho | Garuda vahana krishna gopika pathe |Nayana mohana Krishna neerajekshana ||