ನೋಡೆಲೆ ಮನವೆ ಕೊಂಡಾಡು ಗುರುಗಳ / Nodele manave kondaduva gurugala

ರಚನೆ: ಗುರು ಶ್ರೀಶ ವಿಠ್ಠಲ….

ನೋಡೆಲೆ ಮನವೆ ಕೊಂಡಾಡು ಗುರುಗಳ ಪಾದ-ಈಡು ಇಲ್ಲವೊ ಪುಣ್ಯಕೆ || ಪ ||
ನಾಡೊಳಗೆ ಗುರುರಾಘವೇಂದ್ರ ರಾಯರ ಸೇವೆ-ಮಾಡಿದವ ಪರಮ ಧನ್ಯ – ಮಾನ್ಯ || ಅ ||

ನಿಷ್ಠೆಯಿಂದಲಿ ಸ್ಮರಿಸೆ ಕಷ್ಟಗಳು ದೂರ ಮನೋ-ಭೀಷ್ಟಗಳ ಪೂರೈಪರೋ
ಅಷ್ಟಸೌಭಾಗ್ಯವನೆ ಕೊಟ್ಟು ಸುಜನರಿಗೆ ಶ್ರೀ-ವಿಷ್ಣುದಾಸ್ಯವ ತೋರ್ಪರೋ
ದೃಷ್ಟಿಯಿಂದಲಿ ನೋಡಲನೇಕ ಜನ್ಮದ ಪಾಪ-ಬಿಟ್ಟು ಪೋಪವೊ ಕ್ಷಣದಲಿ
ಎಷ್ಟು ಹೇಳಲಿ ಇವರ ನಿಷ್ಠ ಮಹಾತ್ಮ್ಯೆಯನು-ದುಷ್ಟರಿಗೆ ದೊರೆಯದಿವರ ಸೇವಾ || ೧ ||

ಹಲವು ಕ್ಷೇತ್ರಗಳೇಕೆ ಹಲವು ತೀರ್ಥಗಳೇಕೆ-ಫಲ ಸುಲಭದಲ್ಲಿರಲು
ಬಲವು ಇದ್ದದ್ದರೊಳು ಪ್ರದಕ್ಷಿಣೆ ಸುಪದಜಲ-ತಲೆಯಲ್ಲಿ ಧರಿಸಿ ನಿತ್ಯ
ಮಲರಹಿತನು ಆಗಿ ದಂಡಪ್ರಣಾಮವ ಮಾಡೆ-ಒಲಿವರು ಕರುಣದಲಿ ಬೇಗ
ಜಲಜನಾಭನು ನಾಲ್ಕುರೂಪದಿಂದಿವರಲ್ಲಿ-ಸಿಲುಕಿ ಪೂಜೆಯಗೊಂಬ ಸತತ – ಮೋಕ್ಷದಾತಾ || ೨ ||

ಹರಿದಾಸರಿದ್ದ ಸ್ಥಳ ವರಕಾಶಿ ಮೊದಲಾದ-ಕುರುಕ್ಷೇತ್ರಕಿಂತಧಿಕವೋ
ಸುರ ಋಷಿ ಮುನಿಗಳು ಇಲ್ಲಿಹರು ವೈಕುಂಠ-ಸರಿಮಿಗಿಲು ಎಂದೆನಿಪುದೋ
ಪರಮ ಸುಜ್ಞಾನಿಗಳಿಗೀ ಫಲವು ದೊರಕುವುದು-ತರತಮದಿ ಇತರ ಜನಕೆ
ಗುರು ಶ್ರೀಶವಿಠ್ಠಲನು ಇವರ ರೂಪನಾಮದಲಿ-ಪರಿಪರಿಯ ವರವಗರೆವಾ – ಪೊರೆವಾ || ೩ ||

Lyrics in English

Nodale Manave kondadu gurugaLa paada eedu illavo punyake ||pa||
nadolage gururaghavendra rayara seve madidavage parama dhanya – manyalo ||a.pa||

Nishteyindali smarisi kashtagala doors manobhishtagala pooraiparo
ashta soubhagyavane kottu sujanarige sri vishnudasyava torparo
drishtiyindali nodalaneka janmada papa bittu popavo kshnadali
Eshtu helali ivara nishta mahatmyeyanu dushtarige doreyadivara seva ||1||

Halavu kshetragaleke halavu teerthagaleke phalasulabhadalliralu
balavu iddaddarolu pradakshine supadajala taleyalli dharisida Nitya
malarahitanu aagi dandapranamava maade olivaru karunadali bega
jalajnabhanu nalku roopadindivaralli siluki poojeyagomba Satata mokshadata ||2||

Haridasaridda stala varakashi modalada kurukshetrakintadhikavo
sura rushi munigalu illiharu vaikunta sarimigilu endenipudo
parama sujnanigaligi phalavu dorakuvudu taramadi tiara janaka
guru sreesha vittalanu ivara roopanamadali paripaiya varavagareva poreva ||3||

ಇಂದು ಎನಗೆ ಗೋವಿಂದ / Indu enage govinda

ಶ್ರೀ ರಾಘವೇಂದ್ರ ಸ್ವಾಮಿಗಳು ಉಡುಪಿ ಕೃಷ್ಣನನ್ನು ಕಂಡಾಗ ಸಂಪೂರ್ಣ ಶರಣಾಗತಿ ಹಾಗೂ ಭಕ್ತಿ ಭಾವದಿಂದ ರಚಿಸಿದ ಕೃತಿ……. “ಇಂದು ಎನಗೆ ಗೋವಿಂದ|ನಿನ್ನಯ ಪಾದಾರವಿಂದವ ತೋರೋ ಮುಕುಂದನೆ……” ರಾಯರು ರಚಿಸಿದ ಏಕೈಕ ಕನ್ನಡ ಕೀರ್ತನೆ ಇದು ಎನ್ನಲಾಗಿದೆ. “ಧೀರ ವೇಣುಗೋಪಾಲ” ಎಂಬದು ಅವರ ಅಂಕಿತ.

ಇಂದು ಎನಗೆ ಗೋವಿಂದ ನಿನ್ನಯ
ಪಾದಾರವಿಂದವ ತೋರೋ ಮುಕುಂದನೆ ||ಪ||

ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ ||ಅಪ||

ನೊಂದೆನಯ್ಯ ಭವಬಂಧನದೊಳು ಸಿಲುಕಿ|
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು|
ಕಂದನಂತೆಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧||

ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ|
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ|
ಗಾಡಿಕಾರ ಕೃಷ್ಣ ಬೇಡಿ ಕೊಂಬೆನೊ ನಿನ್ನ ||೨||

ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ|
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ |೩|

Lyrics in English

Indu enage govinda ninna padaara
Vindava toro mukundane

Sundara vadanane nandagopana kanda
mandarodhara aananda indiara ramana

Nondenayya naa bhavabandhanadolu siluki |
munde daari kaanade kundide jagadolu |
kandanamtendenna kundugalenisade |
tande kayo krishna kandarpa janakane ||1||

mudhatanadi balu hefijIvananaagi
drudhabhakutiyanu maadalillavo hariye |
nodalillavo ninna paadalillavo mahime |
gaadikaara krishna bedikombeno ninna ||2||

dhaaruniyolu bhubhaara jivananaagi
daari tappi nadede srride kujanara
aaru kaayuvavarilla seride ninagayya
dhira venugopala paarugaaniso hariye ||3||

Click The link to listen the song