ಅತಿ ಶೋಭಿಸುತಿದೆ ಶ್ರೀಪತಿಯ / Ati shobhisutide sripatiya

ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ||

ಚತುರ್ದಶ ಲೋಕದಲಿ ಅಪ್ರತಿವಾಹನ ||ಅ.ಪ||

ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಆಢ್ಯವಾಹನ ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ ಜನಕನಾಜ್ಞದಿ ಕೂರ್ಮಗಜರ ನುಂಗಿದ ವಾಹನ ||೧||

ಕುಲಿಶ ಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ಬಲಿರಾಯ ಒಯ್ದ ಮಕುಟವ ತಂದ ವಾಹನ ||೨||

ಕಾಲನಾಮಕನಾಗೆ ಕಮಲಭವನಲಿ ಜನಿಸಿ ಕಾಲಾತ್ಮ ಹರಿಯ ಸೇವಿಪ ವಾಹನ ಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನ ಸೌಪರ್ಣಿಪತಿಯೆಂಬ ಹೊಂಬಣ್ಣ ವಾಹನ ||೩||

ಕುಪರದೆಡೆಗೆ ಮಂದರ ಒಯ್ದ ವಾಹನ ನಿಜರೂಪದಿ ಹರಿಯ ಸೇವೆಗೈದ ವಾಹನ | ಸಪತ್ನಿಯರಿಗೆ ಅಮೃತವ ಪ್ರಾಪ್ತ ಮಾಡಿದ ವಾಹನ ಸೌಪರ್ನಿ ಪತಿಯೆಂಬ ಪೊಂಬಣ್ಣ ವಾಹನ ||೪||

ಪನ್ನಗಶನ ವಾಹನ ಪತಿತಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ್ರಿನಿವಾಸ ಜಗನ್ನಾಥವಿಠಲಗೆ ಉನ್ನತ ಪ್ರಿಯವಾದ ಗರುಡವಾಹನ ||೫||

Lyrics in English

Ati shobhisutide sripatiya vahana ||pa||

Chaturdasha lokadali aprativahana ||a.pa||

Vinate kashyapa munige tanayanenisida vahana, anujaranu kaddoyda adhyavahana, vanadi madhyadi navikara bhakshisida vahana, janakanaajnadi koormagajara nungida vahana nungida vahana ||1||

Kulisha paaniya koode kalaha maadida vahana, olahokku peeyusha tanda vahana, malataayi makkalnu marulugolisida vahana, baliraaya oyda makutava tanda vahana ||2||

Kaalanamakanaage kamalabhavanali janisi kaalaatma hariya sevipa vahana, kaalagadi kapivarara kattu bidisida souparnipatiyemba hombanna vahana ||3||

kuparadedege mandar oyda vahana nijarupadi hariya sevegaiyda vahana |
sapatniyarige amrutava prapta madida vahana sauparni patiyenba ponbanna vahana ||4||

Pannagashayana vahana patita pavana vahana, sannutipa bhaktaranu salahuva vahana, pannagaadrinivasa jagannaathavittalage unnata priyavada garuda vahana ||5||

**************

ಬಾರೋ ಮನೆಗೆ ಬಾರೋ ವೆಂಕಟರಮಣಾ / Baro manege baro venkataraman

ಬಾರೋ ಮನೆಗೆ ಬಾರೋ ವೆಂಕಟರಮಣಾ

ಕಂಸಾಸುರಮರ್ದನನೆ ಬಾರೊ |
ಕೌಶಿಕಯಜ್ಞಪ ಬಾರೊ |
ಹಂಸಡಿಬಿಕನಂತಕ ಬಾರೊ |
ಹಂಸವಾಹನನ ಪಿತನೆ ಬಾರೊ ||1||

ಸಾಸಿರ ಮುಖನ ಪೆತ್ತವನೆ ಬಾರೊ |
ಸಾಸಿರ ಗಣ್ಣಿನ ಅನುಜ ಬಾರೊ |
ಸಾಸಿರ ವದನ ಶಯನ ಬಾರೊ |
ಭೂಸುರರಿಗೆ ಪ್ರಿಯನೆ ಬಾರೊ ||2||

ವಾರಿಧಿಯೊಳು ಪೊಕ್ಕವನೆ ಬಾರೊ |
ವಾರಿಧಿಯ ಮಾನಭಂಗನೆ ಬಾರೊ |
ವಾರಿಧಿಸುತೆಯ ಪಡೆದ ಕರುಣಾ – |
ವಾರಿಧಿ ಸಿರಿ ವಿಜಯವಿಠ್ಠಲ ಬಾರೊ ||3||

Lyrics in English

Baro manege baro venkataraman ||

Kamsasuramardanane baro | koushikayajnapa baro | hamsadibikanantaka baro | hamsavahanana pitane baro ||

Sasira mukhana pettavane baro | sasira gannina Anuja baro | sasira vadana shayana baro | bhusurarige priyane baro ||

Varidhiyolu pokkavane baro | varidhiya manabhangane baro | varidhisuteya padeda karunaavaridhi Siri vijayavittala baro ||


ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ / Ninaginta kundeno nammamma jayalakshmi

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ನಿನಗಿಂತ ಕುಂದೇನೊ || ಪ ||

ಮತ್ಸ್ಯಾವತಾರ ನೀನಾದರೆ ಆಕೆ ಮತ್ಸ್ಯಗಂಗಳೆ ತಾನಾದಳೊ | ಹೆಚ್ಚಿನ ಶಂಖವ ಹಿಡಿದರೆ ಆಕೆ ನಿಚ್ಚ ಶಂಖದ ಕಂಠಳಾದಳಯ್ಯ ||

ನೀಲವರ್ಣ ನೀನಾದರೆ ಆಕೆ ನೀಲಕುಂತಳೆ ತಾನಾದಳೊ | ಲೋಲ ಕಮಲನಾಭನಾದರೆ ಆಕೆ ಬಾಲ ಕಮಲಮುಖಿಯಾದಳಯ್ಯ ||

ಬೆಟ್ಟವ ನೀನೊಂದು ಪೊತ್ತರೆ ಕುಚದ ಬೆಟ್ಟಗಳೆರಡುನು ತಾ ಪೊತ್ತಳೊ | ದಿಟ್ಟ ಶೇಷನ ನೀ ತುಳಿದರೆ ಆಕಿ ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ ||

ಗಜರಾಜ ವರದ ನೀನಾದರೆ ಆಕೆ ಗಜಗಮನೆಯು ತಾನಾದಳಯ್ಯ | ನಿಜವಾದ ಸಿಂಹ ನೀನಾದರೆ ಆಕೆ ಭಜಿಸಿ ಸಿಂಹ ಮಧ್ಯೆಯಾಗಿಪ್ಪಳಯ್ಯ ||

ಈ ಪರಿಯಲಿ ಬಹು ಜನಿಸಿದೆ ಭಲೆ ಭಾಪುರೆ ಬಾಡದೊಳ್‌ | ನೆಲೆಸಿದೆ ಗೋಪಿಯರ ಮೋಹ ಸಲಿಸಿದೆ ಚೆಲುವ ಶ್ರೀಪತಿ ಆದಿಕೇಶವರಾಯ ಮೆರೆದೆ ||

Lyrics in English

Ninaginta kundeno nammamma jayalakshmi ninaginta kundeno ||pa||

Matsyavatara neenadare aake matsyagangale tanadalo | hecchina shankhava hididare aake niccha shankhada kantalaadalayya ||

Neelavarna neenadare aake neelakuntale tanadalo | Lola Kamalanabhanadare aake Bala Kamalamukhiyadalayya ||

Bettava neenondu pottare kuchada bettagaleradunu taa pottalo | ditta sheshana nee tulidare aaki katti baasege Shesha a nilisihalayya ||

Gajaraja varada neenadare àake gaja gamaneyu tanadalayya | nijavada simha neenadare aake bhajisi simha madhyeyagippalayya||

Ee pariyali Bahu janiside bhale bhapure badadol | neleside gopiyara moha saliside cheluva sripati aadikeshavaraya merede||



ನೆರೆನಂಬು ಮನವೆ ಹರಿಯಾ / Nerenambu manave hariya

ನೆರೆನಂಬು ಮನವೆ ಹರಿಯಾ
ಸಿರಿಯನಾಳುವ ದೊರೆಯಾ ||

ಸ್ಮರಿಸಿದಾಕ್ಷಣ ಕರಿಯಾ ಸೆರೆಯ
ಬಿಡಿಸಿದವನರಿಯಾ ಮರೆಯದೆ
ಜಗದೊಳು ಹರಿಯಾ ಚರಣ
ಕಮಲಯುಗ ಮರಿಯಾ ||

ಧರೆಯೊಳು ದ್ರೌಪದಿ ಮೊರೆಯಾ
ಹರಿ ಕೇಳಿದ ನೀನರಿಯಾ ಅರಿತು
ನಡೆವ ನೀ ಪರಿಯಾ ಸಾರುತಿದೆ
ಕೃತಿ ಖರೆಯಾ ||

ಅರಿವಿನೊಳು ಮನ ಹರಿಯಾ
ತೋರುವ ಘನ ಆಶ್ಚರಿಯಾ
ತರಳ ಮಹಿಪತಿ ದೊರೆಯಾ
ನಂಬಿರು ಈ ಪರಿಯಾ ||

Lyrics in English

Nerenambu manave hariya | siriyanaaluva doreya ||


Smarisidakshana kariya sereya | bidisidavanariya mareyade || jagadolu hariya charana | kamalyuga mariya ||1||


Dhareyolu droupadi moreya |hari kelida neenariya aritu || nadeva nee pariya sarutide kruti Khareya ||2||


Arivinolu mana hariya | toruva ghana ashwariya || tarala mahipati doreya | nambiru e pariya ||3||


ಶೇಷ ದೇವಾ ವಾರುಣಿ ಪತಿ / Shesha Deva varuni

ಶೇಷ ದೇವಾ ವಾರುಣಿ ಪತಿ ಪಾಹಿ || ಪ ||

ಶೇಷದೇವ ತ್ರೈಘೋಷಣ ಮುಖ ಪರಿ-
ಪೋಷಿಸು ಎಮ್ಮಭಿಲಾಷೆಯ ಸಲಿಸಿ ||ಅ.ಪ. ||

ಭಜಿಸುವೆ ಸರ್ವದಾ ಸುಜನರಭೀಷ್ಟವ ಸುಜನಾರಾಧಕ ಭುಜಗೋತ್ತಂಸ ||1 ||

ಪುಣ್ಯ ಚರಿತ ಸುಶರಣ್ಯಗೆ ಸುಬ್ರಹ್ಮಣ್ಯದೇವ ಕಾರುಣ್ಯ ಮೂರುತಿ ||2 ||

ವಾರುಣಿ ಸುಮುಖ ಸರೋರುಹ ದಿನಕರ ತೋರು ತವಾಂಘ್ರಿ ಮಹೋರಗ ರಾಜ ||3 ||

ಅಸಿತವಸನ ಹಲಮುಸಲಾಯುಧಧರ ದ್ವಿಸಹ ಸ್ರೇಕ್ಷಣ ಸುಶರಣ ಪಾಲ ||4 ||

ಪಾತಾಳಪ ಪುರುಹೂತನುತ ಜಗನ್ನಾಥ ವಿಠಲನ ಪ್ರೀತಿ ವಿಷಯನೆ ||5||

Lyrics in English

Shesha Deva varuni pati pahi ||pa||


Sheshadeva traighoshana mukha pari | poshisu emmabhilasheya salisi ||a.pa||


Bhajisuve sarvada sujanarabhishtava | sujanaradhaka bhujagotamsa ||1||


Punya charita susharanyage | subrahmanyadeva karunya muruti ||2||


Varuni sumukha saroruha | dinakara toru tavanghri mahoraga Raja ||3||


Asitavasana halamusalayudhadhara | dwisaharekshana susharanapala ||4||


Patalapa puruhutanuta jagannatha vittalana Preeti vishayane ||5||


ಮಾತಾಡೇ ಎನ್ನ ಮೌನದ ಗೌರೀ / Maataade gouri maataade

ಮಾತಾಡೇ ಎನ್ನ ಮೌನದ ಗೌರೀ
ಯಾತಕಚಲಮನ ಸೋತವನೊಡನೆ
ಮಾತಾಡೇ ಗೌರಿ ಮಾತಾಡೇ||

ನಸುನಗೆ ಮುಖವಿದು ಬಾಡಿ ಕೆಂದುಟಿಯು
ಎಸೆದಿರಲು ನಾನೋಡಿ
ವಸುಧೆಯೊಳಗೆ ನಾ ಜೀವಿಸಲಾರೆ
ಗಸಗಸವ್ಯಾತಕೆ ಎನ್ನೊಳು ತಾಯೇ ||

ಕ್ಷಣ ಬಿಟ್ಟಿರಲಾರೆ ಅಮ್ಮ
ಷಣ್ಮುಖ ಗಣಪರ ತಾಯೆ ನೀ ಬಾರೇ
ಎನ್ನುವ ಗುಣಗಳ ಎಣಿಸಲಪಾರೆ
ನಿನ್ನನ್ನು ಬಿಟ್ಟರೆ ಗತಿ ಇನ್ಯಾರೆ ||

ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ-
ರಾಧವು ಇದ್ದರು ಕಾಣೆ |
ಶ್ರೀದವಿಠಲನ ಪಾದ ಕಿಂಕಿಣಿಯೇ
ಆದರಿಸುವೆ ನಾ ಆದರಿಸುವೆನೇ ||

Lyrics in English

Maataade gouri maataade || pa ||

Maataade enna mounada gouri |
Yaatake Chala mana sotavanodane || a. pa ||

Nasunage mukhavidu baadi kendutiyu |
Esediralu naa nodi |
Vasudheyolage naa jeevisalaare |
Gasagasavyaatake ennolu taaye || 1 ||

Kshana bittiralaare amma |
Shanmukha ganapara taaye nee baare |
Ennava gunagala enisalapaare |
Ninnanu bittare gati inyaare || 2 ||

Krodhavyaatake ennolu gouri |
Enaparaadhava iddadu kaane |
Shreedaviththalanaa paada kimkiniye|
Aadarisuve naa aadarisuvene || 3 ||


ಗಣಪತಿ ಎನ್ನ ಪಾಲಿಸೋ ಗ೦ಭೀರ / Ganapathi yenna paliso

ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ ||

ಪಾರ್ವತಿ ನ೦ದನ ಸು೦ದರ ವದನ
ಸರ್ವಾದಿ ಸುರಪ್ರಿಯ ಶಿರಭಾಗುವೆನಾ ||1||

ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನ ಸದಾ ನಿಲಿಸುವದೋ ||2||

ಪ೦ಕಜ ನಯನ ಶ್ರೀ ವೆ೦ಕಟ ವಿಠಲನೆ
ಕಿ೦ಕರನೆನಿಸೆನ್ನ ಶ೦ಕರ ತನಯನೆ ||3||

Lyrics in English

Ganapathi yenna paliso – gambheera
ganapathi yenna paliso ||

Parvathi nandana sundara vadana
sarvasura vandhya shirabaghuveno||1||

Aadi poojitha neenu moda baktharigithu
madhavanalli manasu saada nilisu nee||2||

Pankaja nayana sri venkata vittalanna
kinkara nenisenna shankara thanayane ||3||


ತ್ಯಾಗರಾಜ‌ ಸಂಗೀತ ಶ್ರೀರಾಮನು / Tyagaraja sangeeta sri ramanu

ತ್ಯಾಗರಾಜ‌ ಸಂಗೀತ ಶ್ರೀರಾಮನು
ಪುರಂದರ ಸಂಗೀತ ಶ್ರೀಕ್ರಷ್ಣನು|
ಸ್ವಾತಿಗೆ ಸಂಗೀತ ಪದ್ಮನಾಭನೂ…|
ಅಖಿಲರ ಸಂಗೀತ ಅಯ್ಯಪ್ಪನೂ…
ಶ್ರೀ ಅಯ್ಯಪ್ಪನೂ….

ಸ್ವಾಮಿ ಸಂಗೀತದೊಳ್ ಸಾಮ ಸಂಗೀತದೊಳ್
ಆರೋಹಣ ಶಬರೀಶ್ರಂಗ|
ಆ ಶ್ರಂಗದ ಉತ್ತುಂಗದೊಳ್ ದಾಸನ ಸಪ್ತ ಸ್ವರವಿಹಂಗ
ಸ್ವರರಾಗ ಶ್ರೀ ವಿಹಂಗಾ ||ತ್ಯಾಗರಾಜ||

ಸುರಸುತ ಗೀತೆಯೊಳ್ ಸುಗಮ ಸಂಗೀತದೊಳ್
ಅವರೋಹಣ ಪಂಪಾತೀರ್ಥ |
ಅ ತೀರ್ಥದೊಳ್,ಜಲಸಾಗರೆಯೊಳ್
ಅಲೆಯಾಗಿ‌ ಮುಳುಗೆ‌ ಹ್ರದಯಾನಂದ
ಶುಧ್ಧ ಶ್ರತಿಯೊಳು ಆನಂದ ||ತ್ಯಾಗರಾಜ||

Lyrics in English

Tyaagaraaja sangeetha sriramanu| purandara sangeeta srikrishnanu| swatige Sangeeta padmanabhanu ….. | Akhilara Sangeeta ayyappanu ….. Sri ayyappanu ……


Swami sangeetadol saama sangeetadol |arohana shabari shrunga | a shrungada uttungadol dasana sapta swaravihanga | swara raga sri vihangaa || tyagaraja ||


Surasuta geeteyol sugama sangeetadol | avarohana pampateertha | a teerthadol jalasagardol | aleyaagi muluge hrudayaananda | shuddha shrutiyol ananda || tyagaraja ||


ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ / Hindilla swamy mundilla

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ-
ವಿಂದ ನೀನಲ್ಲದೆ ಇಹಪರವಿಲ್ಲ ||

ಪರರ ಬೇಡಿಪ್ಪಂತೆ ಗತಿಯಾಯಿತಲ್ಲ
ನರರ ತುತಿಸಿ ನಾಲಿಗೆ ಬರಡಾಯಿತಲ್ಲ |
ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ
ನರಗೆ ಪಾಮರಗೆ ಪಾಪದ ಪಂಜರಗೆ || 1 ||

ತನುವು ತನ್ನದಲ್ಲ ತನ್ನವರು ತನಗಿಲ್ಲ
ಅನುಕೂಲವಿರುವಾಗ ಸತಿಸುತರೆಲ್ಲ
ಅನುವು ತಪ್ಪಿ ಮನವು ತಲ್ಲಣಿಸುತಿರುವಾಗ
ವನಜನಾಭ ನೀನಲ್ಲದೆ ಯಾರಿಲ್ಲ || 2 ||

ಮಾತಾಪಿತೃ ಬಂಧುಗಳು ಮುಂತಾಗಿ ಸಂ-
ಪ್ರೀತಿಯೊಳಿರಲು ಮನ್ನಿಪರೈ ಎಲ್ಲ
ಕಾತರನಾಗ್ಯಮ ಕೊಂಡೊಯ್ಯುತಿರುವಾಗ ಸಂ-
ಗಾತ ಇನ್ನ್ಯಾರಯ್ಯ ಪುರಂದರವಿಠಲ || 3 ||

Lyrics in English

Hindilla swamy mundilla, govinda neenallade ihaparavilla ||


Parara bedippante gatiyaayitalla, narara tutisi naalige baradayitalla | paravilla ihavilla narajanma stiravalla, narage paamarage papada panjarage || hindilla ||


Tanuvu tannadalla tannavaru tanagilla, anukoolaviruvaaga satisutarella | anuvu tappi manavu tallanisutiruvaaga, vanajanaabha neenallade yaarilla || hindilla ||


Matapitra bandhugalu muntaagi, sampreetiyoliralu manniparai ella | kaataranagyama kondoyyutiruvaga sangaata ennyaarayya purandaravittala || hindilla ||


ಉಂಡುಟ್ಟು ಉಣುವಾಗ ಊರೆಲ್ಲ / Unduttu unuvaaga oorella

ಉಂಡುಟ್ಟು ಉಣುವಾಗ ಊರೆಲ್ಲ ನೆಂಟರು

ಉಂಡುಟ್ಟು ಉಣುವಾಗ ಊರೆಲ್ಲ ನೆಂಟರು
ಕಂಗೆಟ್ಟು ಅಳುವಾಗ ಯಾರೂ ನಮ್ಮವರಲ್ಲ
ಸಿರಿಸಂಪದ ಭಾಗ್ಯ ತುಂಬಿ ತುಳುಕಿರುವಾಗ
ಎಲ್ಲರೂ ನಮ್ಮವರು ಎಂಬಂಥ ಹಿರಿಮೆ
ಅಂದಣವು ಬಿದ್ದಾಗ ನಾವೆ ಮುಳುಗಿರುವಾಗ
ನಾವ್ಯಾರೋ ನೀವ್ಯಾರೋ ನಮಗೆ ಗೊತ್ತಿಲ್ಲ ||

ಎಲ್ಲಾ ಚಂದಿರುವಾಗ ಎಲ್ಲರಿಗೂ ಮುದ್ದು
ಅಲ್ಲಿಂದ ಬಿದ್ದಾಗ ಎಲ್ಲರಿಗೂ ಪೆದ್ದು
ಪರಮಾತ್ಮ ಪರತತ್ವ ಹೀಗೆ ನುಣುಚುವವನಲ್ಲ
ಪರದೈವ ಪಾರ್ಥಸಾರಥಿವಿಠಲ ಚಿರಕಾಲ ಕಾಯ್ವ ||

Lyrics in English

Unduttu unuvaaga oorella nentaru ||


Unduttu unuvaaga oorella nentaru | kangettu aluvvaga yaaru nammavaralla

Sirisampada bhagya tumbi tulukiruvaaga | ellaru nammavaru embantha hirime

Andanavu biddaga naave mulugiruvaaga | naavyaaro neevyaaro namage gottilla ||


Ella chandiruvaaga ellarigu muddu | allinda biddaga ellarigu peddu

Paramatma paratatva heege nunuchuvavanalla | paradaiva parthasarathi vittala chirakaala kayva ||