ಕನಕನಿಗೊಲಿದ ಶ್ರೀ ಗೋವಿಂದ / Kanakanigolida sri govinda

ಕನಕನಿಗೊಲಿದ ಶ್ರೀ ಗೋವಿಂದ ನಮ್ಮನು ಕಾಯೋ | ಮುಕುಂದಾ | ಸಂಸಾರವೆಂಬ ಸಾಗರ ಮಥಿಸಲು ಕಡಗೋಲು ಪಿಡಿದಿಹೆಯಾ | ಹಗ್ಗವ ಹಿಡಿದು ಭಕ್ತರನ್ನೆಲ್ಲ ಮುಕ್ತಿಯ ತೀರಕೆ ಒಯ್ಯುವೆಯಾ ||೧||

ಉಡುಪಿ ಕ್ಷೇತ್ರದಿ ನೆಲೆಸುತ ನಿಂದು ಮಧ್ವವ್ಯಾಸ ವಾದಿರಾಜರಿಗೊಲಿದು ಪುರಂದರದಾಸರ ಹಾಡಿಗೆ ಕುಣಿದು ಮೆರೆವ ಮಾಧವ | ಭಕ್ತರ ಬಂಧು ಪಲಿಮಾರು ಅದಮಾರು ಕೃಷ್ಣಾಪುರ ಪುತ್ತಿಗೆ ಶಿರೂರು ಸೋದೆ ಪೇಜಾವರ ಕಾಣಿಯೂರಿನ ಯತಿಗಳ ಪೂಜೆಯ ಕೈಗೊಂಡ ಶ್ರೀ ವಿಠ್ಠಲ …..||೨||

Lyrics in English

Kanakanigolida sri govinda nammanu kaayo | mukundaa |Samsaaravemba sagara mathisalu kadagolu pididiheya | haggava hididu bhaktaranella muktiya teerake oyyuveyaa ||1||

Udupi kshetradi nelesuta nindu madhwavyaasa vadirajarigolidu purandara daasara haadige kunidu mereva madhava | bhaktara bandhu palimaru adhamaru kriishnapura puttige shiruru sode pejavara kaniyurina yatigala poojeya kaigonda sri vittala ||2||


ಚಂದ್ರ ಗುಣಸಾಂದ್ರ ರಾಘವೇಂದ್ರ / Chandra gunasaandra raghavendra

ಚ೦ದ್ರಾ ಗುಣಸಾ೦ದ್ರ – ರಾಘ
ವೇ೦ದ್ರಗುರು ಸದ್ವೈಷ್ಣವ ಕುಮುದಕೆ            || ಪ ||

ಶ್ರೀ ರಘುರಾಮ ಪದಾ೦ಬುಜ ಭೃ೦ಗ
ಮಾರುತಮತ ಶುಭವಾರಿನಿಧಿಗೆ ಪೂರ್ಣ    || ೧ ||

ಶ್ರೀಕರ ಹರಿಯ ನಿರಾಕರಿಸುವ ದುಷ್ಟ
ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ        || ೨ ||

ವರದ ಗೋಪಾಲವಿಠ್ಠಲನ ವಾರುತೆಗೆ
ಹರುಷ ಬಡುವ ಹರಿಭಕುತ ಚಕೋರಕೆ    || ೩ ||

Lyrics in English

Chandra gunasaandra raghavendra guru sadvaishnava kumudake || pa ||

Sri raghurama padaambuja brunga marutamata shubhavaarinidhige poorna ||1||

Srikara hariya nirakarisuva dushta bhikara maaygala mukhakamalake poorna ||2||

Varada gopaalavittalana vaarutege harusha paduva haribhakuta chakorage ||3||


ನಿನ್ನನೆ ನಂಬಿದೆ ನೀರಜ ನಯನ / Ninnane nambide nirajanayana

ನಿನ್ನನೆ ನಂಬಿದೆ ನೀರಜ ನಯನ ಎನ್ನ ಪಾಲಿಸೋ ಇಂದಿರಾ ರಮಣ ||

ಗೌತಮ ಮುನಿಯ ಶಾಪದಲಿ ಅಹಲ್ಯೆಯು ಪಥದೋಳು ಶಿಲೆಯಾಗಿ ಮಲಗಿರಲು ಪತಿತ ಪಾವನ ನಿನ್ನ ಪಾದ ಸೋಕೆ ಸತಿಯಾಗೆ ಅತಿಶಯದಿ ಭಕುತರನು ಕಾಯ್ದೆನೆಂಬುದ ಕೇಳಿ ||

ಬಲವಂತ ಉತ್ತಾನಪಾದರಾಯನುಗನ ಮಲತಾಯಿ ನುಕಲದವಿಯೊಳಗೆ | ಜಲಜಾಕ್ಷ ನಿನ್ನನು ಕುರಿತು ತಪವಿ- ರಲಾಗೆ ನೀನವಗೆ ಧ್ರುವಪಟ್ಟ ಕಟ್ಟಿದ್ದು ಕೇಳಿ ||

ಸುರನರಲೋಕದಿ ಪುಣ್ಯದ ಜನರನ್ನು ಪೊರೆಯಬೇಕೆಂದು ವೈಕುಂಠದಿಂದ | ಸಿರಿಸಹಿತದಿ ಬಂದು ಶೇಷಾಚಲದಿ ನಿಂದು ಕರುಣಿ ಶ್ರೀಪುರಂದರವಿಠಲನೆಂಬುದ ಕೇಳಿ ||

Lyrics in English

Ninnane nambide nirajanayana enna paliso indira ramana ||

Gautama muniya shapadali ahalyeyu | pathadolu shileyagi malagiralu patita |
pavana ninna pada soke satiyage atishayadi | bhakutaranu kayidanembodu keli ||

Balavanta uttanapadarayanugana malatayi nukaladaviyolage |
jalajaksha ninnanu kuritu tapaviralage ninavage dhruvapatta kattiddu keli ||

Sura naralokadi punyada janarannu poreya bekendu vaikunthadinda |
sirisahitadi bandu sheshachaladi nindu karuni shri purandara vittalanembuda keli ||


ಭಳೀರೆ ಭಳೀರೆ ನರಸಿಂಹ / Bhalire bhalire narasimha mahasimha

ಭಳೀರೆ ಭಳೀರೆ ನರಸಿಂಹ ಮಹಾಸಿಂಹ ಮಲ ಮಲ ಮಲೆತವರ
ವೈರಿ ಉರಿ ಮಾರಿ | ಭಳೀರೆ ಭಳೀರೆ ನರಸಿಂಹ. … ||2||

ನಗ ನಗ ನಗಗಳೆಲ್ಲಾಡೆ ಚತುರ್ದಶ ಜಗ ಜಗ ಜಗವೆಲ್ಲ ಕಂಪಿಸಿ ಕಂಬಾಗೆ |
ಹಗೆ ಹೊಗೆ ಹಗೆಬಲವ ದೆಶೆ ಕೆಡಿಸಿ ರೋಷಕಿಡಿ |
ಉಗು ಉಗು ಉಗುಳುತ್ತ ಬಂದ ನರಸಿಂಹ | ಬಂದ ನರಸಿಂಹ. …. ||ಭಳೀರೆ||

ಬಿಗಿ ಬಿಗಿ ಬಿಗಿ ಬಿಗಿದು ಉಬ್ಬುಗಂಟನೆ ಹಾಕಿ ಹೊಗೆ ಹೊಗೆ , ಹೊಗೆಸುತ್ತ ಸರ್ವರಂಜೆ |‌
ನೆಗೆ ನೆಗೆ ನೆಗೆ ನೆಗೆದು ಕುಪ್ಪಳಿಸೆ ಅಸುರನ್ನ | ಮಗು ಮಗು ಮಗು ಬೇಡಿಕೊಂಡ ನರಸಿಂಹ |
ನನರಸಿಂಹಾ….. ||ಭಳೀರೆ||

ಉಗು ಉಗು , ಉಗುರಿಂದ ಕ್ರೂರನ ಹೇರೊಡಲ ಬಗೆ ಬಗೆ, ಬಗೆ ಬಗೆದು ರಕುತವನ್ನು |
ಉಗಿ ಉಗಿ ಉಗಿ ಉಗಿದು ಚೆಲ್ಲಿ ಕೊರಳಿಗೆ ಕರುಳ | ತೆಗೆ ತೆಗೆ, ತೆಗೆ ತೆಗೆದು ಇಟ್ಟ ನರಸಿಂಹ |
ಇಟ್ಟ ನರಸಿಂಹಾ….. ||ಭಳೀರೆ||

ಜಗ ಜಗ, ಜಗದೊಳಗೆ ಪ್ರಣತಾರ್ಥಿಹರನೆಂದು ಝಗ ಝಗ ,ಝಗ ಝಗಿಪ ಮುಕುಟ ತೂಗೆ ‌‌‌‌‌‌‌‌‌‌‌‌‌‌‌‌ನಗು ನಗು ನಗು ನಗುತ
ಸುರರು ಗಗನದಿ ಮೆರೆದು | ಮಿಗಿ ಮಿಗಿ, ಮಿಗಿ ಮಿಗಿಲೆನೆ ನರಸಿಂಹ | ನರಸಿಂಹ. ||ಭಳೀರೆ||

ಒಂದು ಒಂದು, ಒಂದೊಂದು ಒಂದೊಂದು ಮುನಿಗಳಿಗೆ ಅಂದಂದ್ ಅಂದಂದಿಗೆ ಆಯ ತಾ ಒಲಿದು ‌‌‌‌‌‌‌ ‌‌‌‌‌|
ಅಂದಂದ ಅಂದವರ ಕಾವ ಚೋಳಂಗಿರಿ ಮಂದಿರನೆ ವಿಜಯ ವಿಠ್ಠಲ ನರಸಿಂಹ |
ನರಸಿಂಹಾ…. ||ಭಳೀರೆ||

Lyrics in English

Bhalire bhalire narasimha nahasimha | mala mala maletavara vairi uri maari | bhalire bhalire narasimha ||2||

Naga naga nagagalellaade chaturdash jaga jaga jagavella kampisi kambaage | hage hoge hagebalava deshe kedisi roshakidi | ugu ugu ugulutta banda narasimha | banda narasimha ……. ||bhalire ||

Bigi bigi bigi bigidu ubbugantane haaki hoge hoge hogesutta sarvaranje | nege nege nnege negedu kuppalise asuranna | magu magu magu bedikonda narasimha …… ||bhalire||

Ugu ugu ugurinda kroorana herodala bage bage bage bagedu rakutavannu | ugi ugi ugi ugidu chelli koralige karula | tege tege tege tegedu itta narasimha | itta narasimha …… || bhalire ||

Jaga jaga jagadolage pranataarthiharanendu jaga jaga jaga jagipa mukuta tooge nagu nagu nagu naguta suraru gaganadi meredu | migi migi migi migilene narasimha | narasimha || bhalire ||

Ondu ondu ondondu ondondu munigalige andand andandige aaya taa olidu | andanda andavara kaava cholangiri mandirane vijaya vittala narasimha | narasimha …. || bhalire ||


ನಾ ಡೊಂಕಾದರೇನು ನಿನ್ನ ನಾಮ / Naa donkaadarenu ninna naama

ನಾ ಡೊಂಕಾದರೇನು ನಿನ್ನ ನಾಮ ಡೊಂಕೆ ವಿಠಲ ||

ನದಿಯು ಡೊಂಕಾದರೇನು ಉದಕ ಡೊಂಕೆ ವಿಠಲ
ಕಬ್ಬು ಡೊಂಕಾದರೇನು ಸಿಹಿಯು ಡೊಂಕ ವಿಠಲ ||

ಪುಷ್ಪ ಡೊಂಕಾದರೇನು ಗಂಧ ಡೊಂಕೆ ವಿಠಲ
ಆಕಳು ಡೊಂಕಾದರೇನು ಹಾಲು ಡೊಂಕೆ ವಿಠಲ ||

ಬಿಲ್ಲು ಡೊಂಕಾದರೇನು ಬಾಣ ಡೊಂಕೆ ವಿಠಲ
ನಾನು ಹೊಲೆಯನಾದರೇನು ನಿನ್ನ ನಾಮ ಹೊಲೆಯೆ ವಿಠಲ ||

ಅಜ್ಯನಾದರೇನು ಕಾಯೋ ಸುಜ್ಯ ಪುರಂದರ ವಿಠಲ ||

Lyrics in English

Naa donkaadarenu ninna naama donke vittala ||

Nadiyu donkaadarenu udaka donke vittala | kabbu donkaadarenu sihiyu donke vittala ||

Pushpa donkaadarenu gandha donke vittala | aakalu donkaadarenu haalu donke vittala ||

Billu donkaadarenu baana donke vittala | naanu holeyanaadarenu ninna naama holeye vittala ||

Ajyanaadarenu kaayo sujya purandara vittala ||

……………………………………………………………………………………………………………………………………………………………………………………………..

ನರನಾದ ಮೇಲೆ ಹರಿ ನಾಮ / Naranada mele hari nama

ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕು

ಭೂತ ದಯಾಪರನಾಗಿರ ಬೇಕು
ಪಾತಕವೆಲ್ಲವ ಕಳೆಯಲು ಬೇಕು
ಮಾತು ಮಾತಿಗೆ ಹರಿಯೆನ್ನ ಬೇಕು

ಆರು ವರ್ಗವನಳಿಯಲು ಬೇಕು
ಮೂರು ಗುಣಂಗಳ ಮೀರಲು ಬೇಕು
ಸೇರಿ ಬ್ರಹ್ಮನೊಳಿರಬೇಕು

ಅಷ್ಟ ಮದಂಗಳ ತುಳಿಯಲು ಬೇಕು
ದುಷ್ಟರ ಸಂಗವ ಬಿಡಲು ಬೇಕು
ಕೃಷ್ಣ ಕೇಶವ ಎನ್ನಬೇಕು

ವೇದ ಶಾಸ್ತ್ರವನೋದಲು ಬೇಕು
ಭೇದಹಂಕಾರವ ನೀಗಲು ಬೇಕು
ಮಾಧವ ಸ್ಮರಣೆಯೊಳಿರಬೇಕು

ಶಾಂತಿ ಕ್ಷಮೆ ದಮೆ ಪಿಡಿಯಲು ಬೇಕು
ಭ್ರಾಂತಿ ಕ್ರೋಧವ ಕಳೆಯಲು ಬೇಕು
ಸಂತರ ಸಂಗದಿ ರತಿಯಿರಬೇಕು

ಗುರುವಿನ ಚರಣಕ್ಕೆರಗಲು ಬೇಕು
ತರಣೋಪಾಯವನರಿಯಲು ಬೇಕು
ವಿರಕ್ತಿ ಮಾರ್ಗದಲಿರಬೇಕು

ಬಂದದ್ದುಂಡು ಸುಖಿಸಲು ಬೇಕು
ನಿಂದಾ ಸ್ತುತಿಗಳ ತಾಳಲು ಬೇಕು
ತಂದೆ ಪುರಂದರವಿಟ್ಠಲನೆನಬೇಕು

Lyrics in English

Naranada mele hari nama jihveyolirabeku ||

Bhoota dayaaparanagirabeku | paatakavellava kaleyalu beku | maatu maatige hariyenna beku ||

Aaru vargavanaliyalu beku | mooru gunangala meeralu beku | seri brahmanolirabeku ||

Ashta madangala tuliyalu beku | dushtara sangava bidalu beku | krishna keshava ennabeku ||

Veda shaastravanodalu beku | bhedahankaarava neegalu beku | madhava smaraneyolirabeku ||

Shanti kshame dame pidiyalu beku | bhraanti krodhava kaleyalu beku | santara sangadi ratiyirabeku ||

Guruvina charanakkeragalu beku | taranopaayavanariyalu beku | virakti maargadalirabeku ||

Bandaddundu sukhisalu beku | nindaa stutigala taalalu beku | tande purandaravittalanenabeku ||


ನಾಚಿಕೆ ಪಡಬೇಡ ಮನದೊಳು / Naachike padabeda manadolu

ನಾಚಿಕೆ ಪಡಬೇಡ ಮನದೊಳು ಯೋಚಿಸಿ ಕೆಡಬೇಡ ||ಪ||

ನಿಚ್ಚ ನೆನೆಯೊ ನಮ್ಮಚ್ಯುತನಾಮವ |ಮೆಚ್ಚಿ ಕೊಟ್ಟರೆ ಅಚ್ಯುತಪದವೀವ ||ಅಪ ||

ಹರಿಹರಿಯೆಂದೊದರೋ – ಹತ್ತಿದ – |ದುರಿತಗಳಿಗೆ ಬೆದರೋ || ವಾರಿಜಾಕ್ಷನ – ವೈಕುಂಠಪುರವ |ಸೇರಿಸೇರಿ ನೀ ಕುಣಿಕುಣಿದಾಡೊ || 1||

ಆರಗೊಡವೆ ಏನೋ – ನರಕದ | ದಾರಿ ತಪ್ಪಿಸುವರೆ ||ನೀರಜಾಕ್ಷ ನಮ್ಮನಿರ್ಜರ ಪತಿಯಲಿ | ಸೇರಿ – ಸೇರಿಸಿ ಮನ ನಲಿನಲಿದಾಡೊ || 2||

ಭಕ್ತಜನರ ಕೂಡೊ – ಭವಭಯ | ಬತ್ತಿಪೋಪುದು ನೋಡೊ || ಮುಕ್ತಿದಾಯಕ ಶ್ರೀ ಪುರಂದರವಿಠಲನ | ಭಕ್ತಿಯಿಂದ ನೀ ಹಾಡಿ ಕೊಂಡಾಡೊ ||3||

Lyrics in English

Naachike padabeda manadolu yochisi kedabeda || pa ||

Niccha neneyo nammacchyutanaamava | mecchi kottare acchyutapadaveeva ||a.pa||

Hari hariyendodaro hattida | duritagalige bedaro |vaarijaakshana vaikuntapurava | seri seri nee kunikunidaado ||1||

Aaragodave eno – narakada | daari tappisuvare | neerajaaksha nammanirjara patiyali | seri serisi mana nalinalidaado ||2||

Bhakta janara koodo bhavabhaya | battipopudu nodo | muktidaayaka sri purandara vittalana | bhaktiyinda nee haadi kondaado ||3||


ಪಾಲಿಸೆ ವರ ಮಾಲೆಯ ಭ್ರಾಮರಿ / Paalise vara maleya

ಪಾಲಿಸೆ ವರ ಮಾಲೆಯ ಭ್ರಾಮರಿ| ಚರಣ ಪಲ್ಲವ ಕುಸುಮವ
ವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆ
ವರ ಪ್ರಸಾದದ ಮಾಲೆಯ ||ಪಾಲಿಸೆ||

ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|
ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾ
ಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ||

ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|
ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವ
ಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆ
ವರ ಪ್ರಸಾದದ ಮಾಲೆಯ||ಪಾಲಿಸೆ||

ಧರೆಯ ಭಾರವ ಇಳುಹಳೆಂದೆ ದುಂಬಿ ರೂಪದಿ ಬಂದೆಯಾ|
ಕಟೀಲ ಕಣ್ಮಣಿ ಮಧುಮನೋನ್ಮಣಿ| ನಿನ್ನ ಅಡಿಗಳ ಹೂಗಳ
ಘನ್ನ ಮಹಿಮನ ಪ್ರಸಾದವ| ಮುಡಿಯ ಸೇವಂತಿ ಕರದ ನಂದಿನಿ ವರ ಪ್ರಸಾದದ ಮಾಲೆಯ ||ಪಾಲಿಸೆ||

Lyrics in English

Paalise vara maleya bhramari | charana pallava kusumava varada hastada pushpava | udiya mallige karada taavare vara prasadada maleya ||palise ||

Sharanarannu poreyalende dharege bandu ninteya | kateela rani kusumaveni | ninna paadada pankaja gandha ghama ghama hoo dandeya | mudiya sampige karada kedage vara prasadada maleya || palise ||

Bedidavarige needalende bhuvige odi bandeya | kateela ambe sundarambe | parama charanada pushpava gandha sambhrama dandeya | mudiya naidile karada ranje vara prasadada maleya ||palise ||

Dhareya bharava eluhalende dumbi roopadi bandeya | kateela kanmani madhumanonmani | ninna adigala hoogala ghanna mahimana prasadava | mudiya sevanti karada nandini vara prasadada maleya ||palise ||


ಜೊ ಜೊ ಜೊ ಜೋ ರಂಗಧಾಮ /Jo jo jo jo rangadhama

ಜೊ ಜೊ ಜೊ ಜೋ ರಂಗಧಾಮ, ಜೊ ಜೊ ಜೊ ಜೋ ರಣಭೀಮ|ಜೊ ಜೋ ಭಕ್ತರ ಕಷ್ಟ ನಿರ್ಧೂಮ, ಜೊ ಜೋ ದಶರಥ ರಾಮ ನಿಸ್ಸೀಮ ||ಜೊ ಜೊ||

ಭೂಮಿಯನೆ ಚಿನ್ನದ ತೊಟ್ಟಿಲ ಮಾಡಿ, ಸೋಮ ಸೂರ್ಯರೆಂಬ ಕಳಸವ ಹೂಡಿ| ನೇಮದಿ ವೇದಗಳ ಸರಪಣಿ ಮಾಡಿ|ಆ ಮಹಾಕಾಶಕ್ಕೆ ಕೊಂಡಿಗಳ ಹಾಕೀ ||ಜೊ ಜೊ||

ವಸುದೇವ ಸುತನಾದ ಮುದ್ದು ಮುರಾರಿ, ಅಸುರೆ ಪೂತನಿಯ ಪ್ರಾಣಪಹಾರಿ|ಅಸಮ ಸಾಹಸನೊಲ್ಲ ದೈತ್ಯರ ವೈರಿ|
ಶಿಶುವಾಗಿ ದೇವಕಿಗೆ ಆನಂದ ತೋರಿ…. ಆನಂದ ತೋರಿ
||ಜೊ ಜೊ||

ಬುಧ್ಧನಾಗಿ ಪತಿವ್ರತೆಯರ ಆಳಿದೆಯಲ್ಲ
ಮುದ್ದು ತುರಗವನೇರಿ ಕಲ್ಕಿಯನಾದೆಯಲ್ಲ |
ಪದ್ಮನಾಭ ಶ್ರೀಭಕ್ತ ವತ್ಸಲ ನೀನು|
ನಿದ್ದೆಯ ಮಾಡಯ್ಯ ಶ್ರೀರಂಗ ವಿಠ್ಠಲ…..
ಶ್ರೀರಂಗ ವಿಠ್ಠಲಾ…. ||ಜೊ ಜೊ||

Lyrics in English

Jo jo jo jo rangadhama, jo jo jo jo ranabhema | jo jo bhaktara kashta nirdhuma, jo jo dasharatha rama nisseema || jo jo ||

Bhumiyane chinnada tottila maadi, soma suryaremba kalasava hoodi | nemadi vedagala sarapani maadi | aa mahakashakke kondigala haaki || jo jo ||

Vasudeva sutanaada muddu murari asure putaniya pranapahari | asama sahasanolla daityara vairi |shishuvagi devakige ananda tori …. || Jo jo ||

Buddhanagi pativrateyara aalideyalla, muddu turagavaneri kalkiyanadeyalla |padmanabha sri bhakta vatsala neenu |niddeya maadayya sri ranga vittala …. Sri ranga vittala … ||Jo jo ||

……………………………..

ವೈಕುಂಠ ನಾರಾಯಣ ವಿಠ್ಠಲಾ / Vaikunta narayana vittala

ಸಮಚರಣ ಸರೋಜಂ ಸಾಂದ್ರ ನೀಲಾಂಭುಧಾಹಂ
ಜಗನ ನಿಹಿತ ಪಾಣಿಂ ಮಂಡನಂ ಮಂಡನಾನ
ತರುಣ ತುಳಸಿಮಾಲಾ ಕಂಧರಂ ಕಂಜನೇತ್ರಂ ಸದಯ ಧವಳಹಾಸಂ ವಿಠ್ಠಲಂ ಚಿಂತಯಾಮಿ||2||

ವೈಕುಂಠ ನಾರಾಯಣ ವಿಠ್ಠಲಾ| ಭೂಮಿಯ ವೈಕುಂಠವಾಗಿಸೆ ಶ್ರೀಹರಿ|ಪ್ರೇಮದಿಂದಲಿ ಬಂದ ಭಕ್ತಿಗೆ ಒಲಿದು || ವೈಕುಂಠ||

ವಕ್ಷಸ್ಥಳದಲ್ಲಿ ಲಕ್ಷ್ಮಿಯ ಧರಿಸಿ ಲಕ್ಷ್ಮಣಾಗ್ರಜ ಬಂದ ಲಕ್ಷಣದಿಂದ| ಕುಕ್ಷಿಯೊಳೀರೇಳು ಲೋಕ ಧರಿಸಿ ಎಮ್ಮ |
ರಕ್ಷಿಸಲೋಸುಗ ಧಾವಿಸಿ ಬಂದನು ||ವೈಕುಂಠ||

ನಾರದ ತುಂಬುರರೊಡಗೂಡಿ ಬಂದ ಮಾರುತಿಯೊಡಗೂಡಿ ಸಂಭ್ರಮದಿಂದ |ಮೂರುತಿ ರೂಪದಿ ವಿಶ್ವ ವಿಠ್ಠಲಹರಿ|ಕೀರುತಿ ಮೆರೆಯಲು ಓಡೋಡಿ ಬಂದ||ವೈಕುಂಠ||

ದಾಸವರದ ಬಂದ ವಾಸುದೇವನು ಬಂದ ಶೇಷಾಚಲ ವಾಸ ವೆಂಕಟರಮಣ |ದಾಸಾಶ್ರಮವಾಸಿ ದಾಸಕೇಶವನುತ| ದಾಸರ ಸಲಹಳು ಬಂದಾ ಮುಕುಂದಾ ||ವೈಕುಂಠ||

Lyrics in Engish

Sama charana sarojam saandra neelambhudhaham jagana nihita paanim mandanam mandanaana taruna tulasimala kandharam kanjanetram sadaya dhavalahaasam vittalam chintayaami ||

Vaikunta narayana vittalaa | bhumiya vaikuntavaagise sri hari | premadindali banda bhaktige olidu || vaikunta ||

Vakshastaladali lakshmiya dharisi lakshmanaagraja banda lakshanadinda | kukshiyoleerelu loka dharisi emma | rakshisalosuga dhaavisi bandanu || vaikunta ||

Naarada tumburarodagoodi banda maarutiyodagoodi sambhramadinda | mooruti roopadi vishwa vittala hari | keeruti mereyalu ododi banda || vaikunta ||

Daasavarada banda vaasudevanu banda sheshachala vaasa venkataramana | dasashramavasi dasakeshvanuta | dasara salahalu banda mukundaa || vaikunta ||