ಐದು ಕಾಲಿನ ಮಂಚ / Idu kaalina mancha

ಐದು ಕಾಲಿನ ಮಂಚ ಕುಂಟಮಲಗಿದ್ದ
ಮೂರು ದಂಟೆಗಳನ್ನು ಬಗಲಿಗಿಳಿಸಿದ್ದ
||ಐದು||

ಇದ್ದೈದು ಕಾಲಿಗು ಕೈಕಾಲು ಬಂತು |
ಕುಂಟ ಮಲಗಿದ್ದಂತೆ ಮಂಚ ಧಾವಿಸಿತು || ಐದು ||

ಆರು ಜನ ದಾಂಡಿಗರು ಕೈ ಹಿಡಿದರೆಳುದು |
ಜಾರಿ ಬಿದ್ದನು ಕುಂಟ ಪಕ್ಕೆಲುಬು ಮುರಿದು ||ಐದು||

ಏಳಯ್ಯ ಕುಂಟಯ್ಯ ದಂಟೆ ಹಿಡಿದೇಳು |
ಕೋಳಿ ಹಾಡುವ ಸುಪ್ರಭಾತವನು ಕೇಳಿ ||ಐದು||

ಇ ಐದು ,ಇ ಮೂರು, ಇ ಆರು ಸಾಕು |
ಹದಿನೆಂಟು ಬೇಕು ಬಿಡಬೇಕು ಹದಿನಾಲ್ಕು ||ಐದು||

Lyrics in English

Idu kaalina mancha kunta malagidda | mooru dantegalannu bagaligilisidda || Idu laalina ||

Eddaidu kaaligu kaikaalu bantu | kunta malagiddante mancha dhaavisitu || Idu kaalina ||

Aaru jana daandigaru kai hididareledu | jaari biddanu kunta pakkelubu muridu || Idu kaalina ||

Elayya kuntayya dante hididelu | koli haaduva suprabhaatavanu keli || Idu kaalina ||

E idu, e mooru, e aaru saaku | hadinentu beku bidabeku hadinaalku | Idu kaalina ||


ರಂಗನಾಥನೆ ನಿಮ್ಮ ಕಾಣದೆ / Ranganaathane nimma kaanade

ರಂಗನಾಥನೆ ನಿಮ್ಮ ಕಾಣದೆ ಭಂಗ ಪಟ್ಟೆನು ಬಹುದಿನಾ…||ರಂಗ||
ಮಂಗಳಾಂಗ ನಿಮ್ಮ ಪಾದವ ಎನ್ನ ಕಂಗಳಿಗೇ ತೋರೋ…||ಮಂಗಳಾಂಗ||
||ರಂಗನಾಥನೆ||

ಕರಿಯ ಮೊರೆ ಲಾಲಿಸಿದಿ ಬೇಗನೆ ನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತೇ |
ಅಡವಿಯಲಿ ಅಹಲ್ಯೆಯ ಸಲಹಿದಿ ಮುಚುಕುಂದನ ರಕ್ಷಿಸಿದೀ ||
ಮುಚುಕುಂದನ ರಕ್ಷಿಸಿದೀ…. ||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. ….

ಪುಟ್ಟ ಪ್ರಹ್ಲಾದನ ಸಲಹಿದಿ ಪಟ್ಟವನು ವಿಭೀಷಣನಿಗೆ ಸಲ್ಲಿಸಿದಿ|
ದಟ್ಟ ಅಡವಿಲಿ ಬಂದ ಧ್ರುವನ ಆದರಿಸಿ ಕಾಯ್ದ ರಂಗನಾಥ |
ಆದರಿಸಿ ಕಾಯ್ದ ರಂಗನಾಥ…. ||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. …

ಎಷ್ಟು ಹೇಳಲಿ ನಿಮ್ಮ ಮಹಿಮೆಯ ಸ್ರಿಷ್ಠಿ ಸ್ಥಿತಿ ಲಯವನ್ನು ಅಳೆದೆ, ರಂಗನಾಥಾ |
ಈ ಪುಟ್ಟ ಪಾದವ ಎನ್ನ ಮನದಲಿ ಇಟ್ಟು ದಯಮಾಡೊ ಕ್ರಷ್ಣಾ. …|
ಇಟ್ಟು ದಯಮಾಡೊ ಕ್ರಷ್ಣಾ. …. ||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. …

ದಕ್ಷಿಣ ಮುಖವಾಗಿ ಪವಡಿಸಿದಿ ನೀ ದೇವಶಿಖಾಮಣೀ ಏಳೈ… ದೇವಶಿಖಾಮಣೀ ಏಳೈ…|
ಬಂದ ಭಕ್ತರಿಗೆಲ್ಲಾ ಅಭಯ ಹಸ್ತವ ಕೊಡುವಿ ರಾಜೀವನೇತ್ರ ಹಯವದನ||ಅಭಯ||
ರಾಜೀವನೇತ್ರ ಹಯವದನಾ…. ||ರಂಗನಾಥನೆ||

Lyrics in English

Ranganaathane nimma kaanade bhanga pattenu bahudinaa …. ||

Mangalaanga nimma paadava enna kangalige toro …. || ranganaathane ||

Kariya more laalisida begane | nereda sabheyali droupadige abhayavanitte || adaviyali ahalyeya salahida muchukundana rakshiside | muchukundana rakshisidi …. || ranganaathane ||

Putta prahladana salahidi pattavanu vibhishananige sallisidi | datta adavili banda dhruvana adarisis kaayda ranganaatha | adarisi kaayda ranganaatha ….. || ranganaathane ||

Eshtu helali nimma mahimeya srishti stiti layavannu alede ranganaatha | e putta paadava enna manadali ittu dayamaado krishna …. | ittu dayamado krishna …… || ranganaathane ||

Dakshina mukhavaagi pavadisidi nee deva shikhaamani alai … || banda bhaktarigella abhaya hastava koduvi raajivanetra hayavadana || raajivanetra hayavadana ….. || ranganaathane ||


ದೇವ ನರಹರಿ ಎಂದು ನಂಬಿದ / Deva narahari endu nambida

ದೇವ ನರಹರಿ ಎಂದು ನಂಬಿದ ಬಳಿಕಿನ್ನು| ಅವನಲ್ಲದನ್ಯತ್ರ ದೈವಗಳು ಬೇರುಂಟೆ
||ದೇವ||

ಕನಸ್ಸಿನಲಿ ಮನಸ್ಸಿನಲಿ ಸರ್ವತ್ರ ವ್ಯಾಪ್ತನಿರೆ
ಅನುಮಾನ ಬೇಕಿನ್ನು ವೇದಗಳೆ ಸಾಕ್ಷಿ ||ದೇವ||

ಹಿಂದೆ ಧ್ರುವರಾಯ , ಪ್ರಹ್ಲಾದನನು ಭವಕೇಳು
ಸಂದೇಹವೇಕೆ ಕಂಭದಿ ಬಂದುದೆ ಸಾಕ್ಷಿ ||ದೇವ||

ಅಂದು ದ್ರೌಪದಿ ಮಾನ ಕಾಯ್ದ ಪ್ರಸನ್ವೆಂಕಟನ
ಕಾರುಣ್ಯವನೆ ಪಡೆದ ಅಜಮಿಲನೆ ಸಾಕ್ಷಿ ||ದೇವ||

Lyrics in English

Deva narahari endu nambida balika innu || avanalladanyatra daivagalu berunte || deva ||

Kanassinali manassinali sarvartra vyaptanire | anumana bekinnu vedagale sakshi || deva ||

Hinde dhruvaraya, prahladananu bhavakelu sandehaveke kambhadi bandude sakshi ||deva||

Andu drupadi maana kaayda prasanvenkatana kaarunyavane padeda ajamilane saakshi ||deva||


ಶಿವ ಲಿಂಗಾಷ್ಟಕಮ್/ Shiva Lingaashtakam

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ, ನಿರ್ಮಲಭಾಷಿತ ಶೋಭಿತ ಲಿಂಗಂ | ಜನ್ಮಜದುಃಖ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾಶಿವಲಿಂಗಂ || ೧ ||

ದೇವಮುನಿ ಪ್ರವರಾರ್ಚಿತ ಲಿಂಗಂ, ಕಾಮದಹನ ಕರುಣಾಕರ ಲಿಂಗಂ | ರಾವಣದರ್ಪ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾಶಿವಲಿಂಗಂ || ೨ ||

ಸರ್ವಸುಗಂಧ ಸುಲೇಪಿತ ಲಿಂಗಂ, ಬುದ್ಧಿವಿವರ್ಧನ ಕಾರಣ ಲಿಂಗಂ | ಸಿದ್ಧಸುರಾಸುರ ವಂದಿತ ಲಿಂಗಂ, ತತ್ಪ್ರಣಮಾಮಿ ಸದಾಶಿವಲಿಂಗಂ || ೩ ||

ಕನಕಮಹಾಮಣಿ ಭೂಷಿತ ಲಿಂಗಂ, ಫಣಿಪತಿವೇಷ್ಟಿತ ಶೋಭಿತ ಲಿಂಗಂ | ದಕ್ಷಸುಯಜ್ಞ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾಶಿವಲಿಂಗಂ || ೪ || 

ಕುಂಕುಮ ಚಂದನಲೇಪಿತ ಲಿಂಗಂ, ಪಂಕಜಹಾರ ಸುಶೋಭಿತ ಲಿಂಗಂ | ಸಂಚಿತಪಾಪ ವಿನಾಶನ ಲಿಂಗಂ | ತತ್ಪ್ರಣಮಾಮಿ ಸದಾಶಿವಲಿಂಗಂ || ೫ || 

ದೇವಗಣಾರ್ಚಿತ ಸೇವಿತ ಲಿಂಗಂ,  ಭಾವೈರ್ಭಕ್ತಿ ಭಿರೇವ ಚ ಲಿಂಗಂ | ದಿನಕರಕೋಟಿ ಪ್ರಭಾಕರ ಲಿಂಗಂ, ತತ್ಪ್ರಣಮಾಮಿ ಸದಾಶಿವಲಿಂಗಂ || ೬ ||

ಅಷ್ಟದಳೋ ಪರಿವೇಷ್ಟಿತ ಲಿಂಗಂ, ಸರ್ವಸಮುದ್ಭವ ಕಾರಣ ಲಿಂಗಂ | ಅಷ್ಟದರಿದ್ರ ವಿನಾಶಕ ಲಿಂಗಂ |ತತ್ಪ್ರಣಮಾಮಿ ಸದಾಶಿವಲಿಂಗಂ |೭ ||

ಸುರವರ ಸುರಗುರು ಪೂಜಿತ ಲಿಂಗಂ | ಸುರವನಪುಷ್ಪ ಸದಾರ್ಚಿತ ಲಿಂಗಂ | ಪರಾತ್ಪರಂ ಪರಮಾತ್ಮಕ ಲಿಂಗಂ |ತತ್ಪ್ರಣಮಾಮಿ ಸದಾ ಶಿವಲಿಂಗಂ || ೮ ||

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೆಚ್ಚಿವಸನ್ನಿಧೌ | ಶಿವಲೋಕ ಮವಾಪ್ನೋತಿ ಶಿವೇನ ಸಹ ಮೋದತೆ ||

Lyrics in English

Brahma muraari surarchita lingam
Nirmala bhaashita shobhitha lingam
Janmaja dhukha vinaashaka lingam
Tatpranamaami sadaashiva lingam ||1||

Devamuni pravaraarchita lingam
Kaama dahana karunaakara lingam
Ravana darpa vinaashka lingam
Tatpranamaami sadaashiva lingam ||2||

Sarva sugandha sulepitha lingam
Buddhi vivaardhana kaarana lingam
Siddha suraasura vandhitha lingam
Tatpranamaami sadaashiva lingam ||3||

Kanaka mahaamani bhooshitha lingam
Panipati veshthitha shobitha lingam
Daksha suyajna vinaashana lingam
Tatpranamaami sadaashiva lingam ||4||

Kunkuma chandhana lehpitha lingam
Pankaja haara sushobhitha lingam
Sanchitha paapa vinaashana lingam
Tatpranamaami sadaashiva lingam ||5||

Deva ganaarchita sevitha lingam
Bhavair bhakhi bhirevacha lingam
Dinakara koti prabhaakara lingam
Tatpranamaami Sadaashiva Lingam ||6||

Ahshta dalopari veshthitha lingam
Sarva samudbhava kaarana lingam
Ahshta daridra vinaashana lingam
Tatpranamaami sadaashiva lingam ||7||

Suraguru suravara poojitha lingam
Suravana pushpa sadarchitha lingam
Paraath param paramatmaka lingam
Tatpranamaami sadaashiva lingam ||8||

Lingashtaka midam punyam
Yah pathet shivasannidhau
Sivaloka mavaapnoti
Sivehna saha modatheh ||


ನಂಬಿ ನೆಚ್ಚದಿರು ನರಲೋಕ /Nambi necchadiru naraloka

ನಂಬಿ ನೆಚ್ಚದಿರು ನರಲೋಕ ಸುಖವೆಂಬೊ ಅಂಬಲಿ ಪರಮಾನ್ನ |
ಹಂಬಲಿಸುತಲಿರು ಹರಿಲೋಕಾನಂದವೆಂಬ ಪೀಯೂಷಪಾನ ||
||ನಂಬಿ ನೆಚ್ಚದಿರು||

ದುರುಳಾಜನರ ಸಂಗವೆಂಬುದು ಎಂದಿಗೂ ನೊಣ ಬೆರಸಿದ ಊಟ
ಪರಮಭಾಗವತರ ಪದಸಂಗವೆಂಬುದು ಮಸ್ತಕ ಮಣಿ ಮುಕುಟಾ |
ಮರೆ ಮೋಸಗೊಳಿಸುವ ಸತಿಸುತರೆಂಬೋದೆ ಕೇವಲ ಯಮಕಾಟ |
ಪರತತ್ವನಾದ ಶ್ರೀಹರಿಯನ್ನು ಭಜಿಸುವುದೆ ವೈಕುಂಠಕೆ ಓಟಾ….
||ನಂಬಿ ನೆಚ್ಚದಿರು||

ಬಿದ್ದ ಕಾಳಿಗೆ ಕಾಳು ಕೂಡಿ ಹಾಕುವುದೆಲ್ಲ ಹಾರಿ ಹೋಗುವ ಹೊಟ್ಟು
ಇದ್ದಾಗ ದಾನ ಧರ್ಮಂಗಳ ಮಾಡೋದು ಕೈವಲ್ಯಕೆ ಮೆಟ್ಟು ||
ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು |
ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟೂ….
||ನಂಬಿ ನೆಚ್ಚದಿರು||

ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ
ಅಲ್ಪ ಸಂತೋಷನಾಗು ಅದು ನಿನಗೆ ನೋಡು ,ಹಾಲುಸಕ್ಕರೆ ತುಪ್ಪ |
ಬಲ್ಪಂಥ ಮಾಡದಿರು ಜನುಮಜನ್ಮದಲಿ ಬಿಡದೆಲೊ ಸಂತಾಪ |
ಸ್ವಲ್ಪಕಾಲಾದರೂ ಮಧ್ವಮತವಪೊಂದು ಭವವೇ ನಿರ್ಲೇಪಾ….
||ನಂಬಿ ನೆಚ್ಚದಿರು||

ಹರಿಗರ್ಪಿಸದ ಕರ್ಮ ಆವುದಾದರು ಸೂಳೆಗಿಕ್ಕಿದ ವಿತ್ತ
ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ |
ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ |
ಅರೆ ಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯಾ….
||ನಂಬಿ ನೆಚ್ಚದಿರು||

ಭಾವ ವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ
ಸಾವಿರಕೊಂದೆ ಮಾತು ಹರಿದಾಸನೆನಿಸೋದು ಪರಿಪರಿಯಾಸ್ವಾದ |
ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರ್ಥ ಪ್ರಾಸಾದ |
ಸೇವಿಸದಾ ನರ ನಿತ್ಯ ನರಕವಾಸ ಎನ್ನುತಲಿದೆ ವೇದಾ….
||ನಂಬಿ ನೆಚ್ಚದಿರು||

Lyrics in English

Nambi necchadiru naraloka sukhavembo ambali paramaanna | hambalisutaliru harilokaanandavemba peeyushapaana || nambi necchadiru ||

Durulaajanara sangavembudu endigoo nona beresida oota | parama bhagavatara padasangavembudu mastaka mani mukutaa || mare mosagolisuva sati sutarembode kevala yamakaata | paratatvanaada srihariyannu bhajisuvude vaikuntake otaa …. || nambi necchadiru ||

Bidda kaalige koodi hakuvudella haari hoguva hottu | eddaaga daana dharmangala maadodu kaivalyake mettu || hoddiruvara kandaaseya pattare hoguvi nee kettu | buddhiheenarige peladirelo tatvasaara sundara guttu … || nambi necchadiru ||

Alpavakaashavu ee shareeravu gaaligoddida deepa | alpa santoshanaagu adu ninage nodu halusakkare tuppa | balpantha maadadiru januma janmadali bidadelo santaapa | swalpa kaaladaru madhwamatavapondu bhavave nirlepaa …. ||nambi necchadiru ||

Harigarpisada karma aavudaadaru soolegikkida vitta | harige vishwaasadi anumaatra arpise avane nirmala chitta || nirutagrasake chinte maadalu odagadu punyavu ninagetta | are manavillade drudamanadippude sampaadane bhatyaa…. ||nambi necchadiru ||

Bhaava viraktiya vahisadiddare ninagaaguvudu kheda | saavirakonde maatu haridaasanenisodu paripariyaa swaada | devakisuta namma vijayavittalananghri teertha prasaada | sevisadaa nara nitya narakavaasa ennutalide vedaa … || nambi necchadiru ||